Roopa Gururaj Column: ಗೋಕುಲದ ಕೃಷ್ಣ ಮತ್ತು ದ್ವಾರಕಾಧೀಶ
ನಾನು ಕಣ್ಣೀರು ಹಾಕಿದರೆ ಆ ಹನಿಯಲ್ಲೂ ನೀನು ಹೊರಟು ಹೋಗುವೆ ಎಂದು ಕಣ್ಣೀರು ಹಾಕಲೇ ಇಲ್ಲ. ನನ್ನ ಪ್ರೀತಿಯಷ್ಟೇ ಅಲ್ಲ ಬೇರೆ ಯವರನ್ನು ಕಾಪಾಡುವುದರಲ್ಲಿ ನಿನ್ನನ್ನು ನೀನೇ ಕಳೆದುಕೊಂಡಿ ದ್ದನ್ನು ಹೇಳಲೇ? ನೀನು ಯಮು ನೆಯ ನೀರಿನೊಂದಿಗೆ ಜೀವನ ಆರಂಭಿಸಿ, ಲೋಕ ಉದ್ಧಾರಕ್ಕಾಗಿ ಸಮುದ್ರದ ಉಪ್ಪು ನೀರಿನ ಜೊತೆ ಬಂದ ಬೆಸೆದುಕೊಂಡೆ


ಒಂದೊಳ್ಳೆ ಮಾತು
ರೂಪ ಗುರುರಾಜ್
ಭೂಲೋಕದ ಅವತಾರ ಮುಗಿಸಿದ ರಾಧ, ಕೃಷ್ಣ ಒಮ್ಮೆ ದೇವಲೋಕದಲ್ಲಿ ವಿಹರಿಸುತ್ತಿದ್ದ ಸಮ ಯದಲ್ಲಿ ಒಬ್ಬರಿಗೊಬ್ಬರು ಎದುರಾದರು. ಕೃಷ್ಣನದು ಅದೇ ಮುಗುಳ್ನಗು, ಸಮಚಿತ್ತ ಹೊಂದಿದ ಭಾವ. ಕೃಷ್ಣ ಮಾತಾಡುವ ಮೊದಲೇ, ದ್ವಾರಕಾಧೀಶ ಹೇಗಿದ್ದೀಯಾ? ಎಂದು ಕೇಳಿದಳು ರಾಧೆ. ರಾಧೆ ಯಿಂದ ದ್ವಾರಕಾಧೀಶ ಎಂದು ಕೇಳಿ, ಕೃಷ್ಣನಿಗೆ ನಿಂತ ನೆಲವೇ ಬಾಯ್ದೆರೆದಂತಾಯ್ತು. ಆದರೂ ಸುಧಾರಿಸಿಕೊಂಡು, ‘ರಾಧಾ ಇಂದಿಗೂ ಆ ನಿನ್ನ ಪ್ರೀತಿಯ ಕೃಷ್ಣನೇ ನಾನು, ಸದಾ ನಿನ್ನ ನೆನಪಿನಲ್ಲಿ ಕಣ್ಣೀರು ಹಾಕಿದ್ದೇನೆ’ ಎಂದು ಅತ್ಯಂತ ನೋವಿನಿಂದ ಹೇಳಿದ. ಆಗ ರಾಧೆ, ‘ನಿನ್ನನ್ನು ನೆನೆಸಿಕೊಳ್ಳಲು ನಾನು ನಿನ್ನ ಮರೆಯಲಾಗಲೇ ಇಲ್ಲ ಕೃಷ್ಣ. ನನ್ನ ಪ್ರತಿ ಕಣ್ಣೀರಿನ ಹನಿ ಹನಿ ಯಲ್ಲೂ ನೀನೇ ತುಂಬಿರುವೆ.
ನಾನು ಕಣ್ಣೀರು ಹಾಕಿದರೆ ಆ ಹನಿಯಲ್ಲೂ ನೀನು ಹೊರಟು ಹೋಗುವೆ ಎಂದು ಕಣ್ಣೀರು ಹಾಕಲೇ ಇಲ್ಲ. ನನ್ನ ಪ್ರೀತಿಯಷ್ಟೇ ಅಲ್ಲ ಬೇರೆ ಯವರನ್ನು ಕಾಪಾಡುವುದರಲ್ಲಿ ನಿನ್ನನ್ನು ನೀನೇ ಕಳೆದುಕೊಂಡಿದ್ದನ್ನು ಹೇಳಲೇ? ನೀನು ಯಮು ನೆಯ ನೀರಿನೊಂದಿಗೆ ಜೀವನ ಆರಂಭಿಸಿ, ಲೋಕ ಉದ್ಧಾರಕ್ಕಾಗಿ ಸಮುದ್ರದ ಉಪ್ಪು ನೀರಿನ ಜೊತೆ ಬಂದ ಬೆಸೆದುಕೊಂಡೆ.
ಇದನ್ನೂ ಓದಿ: Roopa Gururaj Column: ಗುರು ತೋರಿದ ಬೆಳಕು
ಕಿರು ಬೆರಳಿನಲ್ಲಿ ತಿರುಗುವ ಸುದರ್ಶನ ಚಕ್ರದ ಮೇಲೆ ಭರವಸೆ ಇಟ್ಟೆ. ಹತ್ತು ಬೆರಳಿಂದ ನುಡಿಸುವ ಕೊಳಲನ್ನು ಮರೆತೇ ಬಿಟ್ಟೆ. ನೀನು ಪ್ರೀತಿಯಲ್ಲಿ ಮುಳುಗಿದ್ದಾಗ ಸಣ್ಣ ಕಿರುಬೆರಳಿಂದ ಗೋವರ್ಧನ ಗಿರಿಯನ್ನು ಎತ್ತಿ ಎಲ್ಲರನ್ನೂ ರಕ್ಷಿಸಿದೆ. ಪ್ರೀತಿಯಿಂದ ದೂರ ಹೋದ ನೀನು ಅದೇ ಕಿರುಬೆ ಏರ ಳಿಂದ ಸುದರ್ಶನ ಚಕ್ರ ಎತ್ತಿ ವಿನಾಶಕ್ಕೆ ನಾಂದಿ ಹಾಡಿದೆ.
ಕೃಷ್ಣನಿಗೂ, ದ್ವಾರಕಾಧೀಶನಿಗೂ ಇರುವ ವ್ಯತ್ಯಾಸ ಹೇಳಲೇ? ನೀನು ಗೋಕುಲದ ಕೃಷ್ಣನೆ ಆಗಿ ದ್ದರೆ, ನೀನೇ ಸುಧಾಮನ ಮನೆಗೆ ಹೋಗುತ್ತಿದ್ದೆ. ಸುಧಾಮ ನಿನ್ನ ಮನೆಗೆ ಬರುತ್ತಿರಲಿಲ್ಲ. ಇದೇ ಯುದ್ಧಕ್ಕೂ ಮತ್ತು ಪ್ರೀತಿಗೂ ಇರುವ ವ್ಯತ್ಯಾಸ. ಯುದ್ಧದಲ್ಲಿ ಎಲ್ಲಾ ನಾಶ ಮಾಡಿ ಗೆದ್ದೆ ಎಂದು ಬೀಗುತ್ತಿದ್ದೀರಿ. ಪ್ರೀತಿಯಲ್ಲಿ ಎಲ್ಲಾ ತ್ಯಾಗ ಮಾಡಿ ಸಾರ್ಥಕ ಭಾವ ಮೂಡುತ್ತದೆ.
ಭಗವದ್ಗೀತೆಯನ್ನು ಬೋಽಸಿದವನು ನೀನು, ಆದರೆ ನೀನು ತೆಗೆದು ಕೊಂಡ ನಿರ್ಣಯವಾದರೂ ಎಂತದ್ದು? ರಾಜ, ಪ್ರಜೆಗಳ ಪಾಲಕನಾಗಿರಬೇಕು. ಆದರೆ ನೀನು ನಿನ್ನ ಪ್ರಜೆಗಳಾದ ನಾರಾಯಣಿ ಸೈನ್ಯವನ್ನು ಕೌರವರಿಗೆ ಕೊಟ್ಟೆ, ನಿನ್ನನ್ನು ನೀನೇ ಪಾಂಡವರಿಗೆ ಕೊಟ್ಟೆ. ನಿನ್ನಂತಹ ಮಹಾಜ್ಞಾನಿ ರಥದಲ್ಲಿ ಕುಳಿತು ಸಾರಥಿಯಾದೆ. ಅರ್ಜುನ ನಿನ್ನ ಪ್ರಜೆಗಳನ್ನು ಕೊಲ್ಲುತ್ತಿದ್ದ.
ನಿನ್ನ ಪ್ರಜೆಗಳು ಸಾಯುವುದನ್ನು ನೋಡಿ ನಿನಗೆ ಕರುಣೆ ಬರಲಿಲ್ಲವೇ? ನೀನು ಪ್ರೀತಿಸುವುದನ್ನು ಆಗಲೇ ನಿಲ್ಲಿಸಿಬಿಟ್ಟಿದ್ದೆ. ಈಗ ಭೂಲೋಕಕ್ಕೆ ಒಮ್ಮೆ ಹೋಗಿನೋಡು. ದ್ವಾರಕಾಧೀಶ ಎಂಬ ಪಟ್ಟದ ಹೆಸರು ಯಾರ ಮನೆಯಲ್ಲಾದರೂ ಸಿಗುತ್ತದೆಯಾ? ಎಲ್ಲರ ಮನೆಮನಗಳಲ್ಲೂ ರಾಧೆಯ ಜೊತೆ ಇರುವ ಕೃಷ್ಣನನ್ನು ಮಾತ್ರ ನೋಡಬಹುದು. ಎಲ್ಲರೂ ರಾಧಾಕೃಷ್ಣ ಅಂತಲೇ ಭಜಿಸುತ್ತಾರೆ.
ನೀನು ಬೋಧಿಸಿದ ಭಗವದ್ಗೀತೆಯಲ್ಲಿ ಎಲ್ಲಿ ಹುಡುಕಿದರೂ ರಾಧಾ ಎಂಬ ಹೆಸರಿಲ್ಲ. ಆದರೂ, ಭಗವದ್ಗೀತೆ ಓದಿ ಮುಗಿಸಿದಾಗ ರಾಧಾಕೃಷ್ಣಗೆ ಜೈ ಎನ್ನುತ್ತಾರೆ. ರಣರಂಗದದ್ವಾರಕಾಧೀಶನ ಬಗ್ಗೆ ಯಾರೂ ಮಾತಾಡುವುದಿಲ್ಲ. ಪ್ರೀತಿ ತುಂಬಿದ ಕೃಷ್ಣನ ಬಗ್ಗೆ ಎಲ್ಲರೂ ವರ್ಣರಂಜಿತವಾಗಿ ಕೊಂಡಾ ಡುತ್ತಾರೆ, ಹಾಡುತ್ತಾರೆ, ಕುಣಿಯುತ್ತಾರೆ, ಕಥೆಗಳನ್ನು ಹೇಳುತ್ತಾರೆ.
ಕೃಷ್ಣಾ , ಪ್ರೀತಿಯಲ್ಲಿ ಸಮರ್ಪಣಾ ಭಾವವಿರುತ್ತದೆ, ಆದರೆ ಪರಾಕ್ರಮ ತೋರಿಸುವಾಗ ಎಲ್ಲರನ್ನೂ ಸೋಲಿಸುತ್ತಾ ಗೆದ್ದು, ಸೋಲುತ್ತಾರೆ..’ ರಾಧೆ ಇನ್ನೂ ಹೇಳುತ್ತಿದ್ದಳು. ಆದರೆ ಕೃಷ್ಣನ ಬಳಿ ಯಾವು ದಕ್ಕೂ ಉತ್ತರವಿರಲಿಲ್ಲ. ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕೊಡುವನು, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹೇಳುವನು. ರಾಧೆಯ ಮಾತುಗಳಿಗೆ ಮೌನವಾಗಿದ್ದ ಕಣ್ಣಂಚಿನಲ್ಲಿ ನೀರು ತುಂಬಿತ್ತು.
ಕಥೆ ಕಾಲ್ಪನಿಕ ವಿರಬಹುದು ಆದರೆ ಅದರ ನೀತಿ ಮಾತ್ರ ಏಳು ಜನ್ಮಕ್ಕಾಗುವಷ್ಟು. ಎಲ್ಲವನ್ನೂ ಗಳಿಸಿ ಬೀಗುವ ಯುದ್ಧದಿಂದ ಯಾರೂ ಸುಖವಾಗಿಲ್ಲ, ಆದರೆ ಎಲ್ಲರನ್ನೂ ಪ್ರೀತಿಸಿ ಬದುಕುವ ಪರಿಯಿಂದ ಪ್ರಪಂಚವನ್ನೇ ಗೆಲ್ಲಬಹುದು.