BBK 12 House: ಬಿಗ್ ಬಾಸ್ ಕನ್ನಡ 12ರ ಮನೆಯ ಫೋಟೋ ಲೀಕ್: ಹೇಗಿದೆ ನೋಡಿ
ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗಾಗಿ ಹೊಸ ಮನೆಯನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಇಲ್ಲಿನ ಫೋಟೋ ವೈರಲ್ ಆಗುತ್ತಿದೆ. ಈ ಮೊದಲು ಬಿಗ್ ಬಾಸ್ ಕನ್ನಡಕ್ಕೆ ಬಂದಾಗ ಪುಣೆಯ ಲೋನಾವಾಲಾದಲ್ಲಿ ಮೊದಲು ಚಿತ್ರೀಕರಣವನ್ನು ಶುರು ಮಾಡಲಾಗಿತ್ತು.

Bigg Boss Kannada 12 House -

ಕನ್ನಡದ ಜನಪ್ರಿಯ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 (Bigg Boss Kannada) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 28 ರಿಂದ ದೊಡ್ಮನೆ ಆಟ ಶುರುವಾಗಿದೆ. ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿತು. ಬಳಿಕ ಕಳೆದ ಶನಿವಾರ ಎರಡನೇ ಪ್ರೋಮೋ ರಿಲೀಸ್ ಮಾಡಿದ್ದು, ಇದನ್ನು ನೋಡಿದ ಬಳಿಕ ಶೋ ಮೇಲಿನ ಕುತೂಹಲ ದುಪ್ಪಟ್ಟಾಗಿದೆ. ಇದರ ಮಧ್ಯೆ ಈಗ ಈ ಬಾರಿಯ ಮನೆ ಹೇಗಿರಲಿದೆ ಎಂಬ ಫೋಟೋ ಲೀಕ್ ಆಗಿದೆ.
ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗಾಗಿ ಹೊಸ ಮನೆಯನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಇಲ್ಲಿನ ಫೋಟೋ ವೈರಲ್ ಆಗುತ್ತಿದೆ. ಈ ಮೊದಲು ಬಿಗ್ ಬಾಸ್ ಕನ್ನಡಕ್ಕೆ ಬಂದಾಗ ಪುಣೆಯ ಲೋನಾವಾಲಾದಲ್ಲಿ ಮೊದಲು ಚಿತ್ರೀಕರಣವನ್ನು ಶುರು ಮಾಡಲಾಗಿತ್ತು. ಮೊದಲ ಎರಡು ಸೀಸನ್ ನಡೆದಿದ್ದು ಇಲ್ಲಿಯೇ. ಆ ನಂತರ ಬಿಗ್ ಬಾಸ್ ಮನೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಯಿತು.
BIGG BOSS KANNADA SEASON 12 HOUSE 💥 #bbk12 #KicchaSudeep #MarkTheFlim #HappyWillAshleyDay pic.twitter.com/GqWfoftsmI
— South Indian Fan (@moves_fan) September 17, 2025
ಬೆಂಗಳೂರಿನ ಹೊರ ವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಬಿಗ್ ಬಾಸ್‌ಗೆ ಆತಿಥ್ಯ ನೀಡಿತ್ತು. ಅಲ್ಲಿಂದ ಒಂಬತ್ತನೇ ಸೀಸನ್‌ವರೆಗೆ ಇನ್ನೋವೇಟಿವ್ ಫಿಲ್ಮ್ ಸಿಟಿನೇ ಬಿಗ್ ಬಾಸ್ ಮನೆಯಾಗಿತ್ತು. ಆ ನಂತರ ಬಿಗ್ ಬಾಸ್ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ನಂತರ ಲೊಕೇಶನ್ ಶಿಫ್ಟ್ ಮಾಡಲಾಗಿತ್ತು. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಿಸಲಾಗಿತ್ತು, ಮನೆಯ ಇಂಟೀರಿಯರ್ಸ್ ಹಾಗೂ ಡೆಕೋರೇಷನ್‌ನಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ಅಲ್ಲಿಯೂ ಒಂದಷ್ಟು ಸೀಸನ್‌ಗಳನ್ನು ನಡೆಸಲಾಗಿದೆ.
ಇದೀಗ ಈ ಬಾರಿ ಮತ್ತೊಮ್ಮೆ ಮನೆ ಬದಲಾವಣೆ ಮಾಡಲಾಗಿದ್ದು ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಮರಳಿದೆ. ಸದ್ಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ದೊಡ್ಮನೆ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಹಿಂದೆಂದಿಗಿಂತಲೂ ಈ ಬಾರಿ ಬಿಗ್ ಬಾಸ್ ಮನೆ ಹೆಚ್ಚು ಕಲರ್ ಫುಲ್ ಆಗಿ, ಹೆಚ್ಚು ರಿಚ್ ಆಗಿ ಇರಲಿದ್ಯಂತೆ. ಈ ನಿಟ್ಟಿನಲ್ಲಿ ವಿಭಿನ್ನವಾಗಿ, ವಿಶೇಷವಾಗಿ ಇಂಟೀರಿಯರ್ ಡಿಸೈನ್ ಮಾಡಲಾಗುತ್ತಿದೆ. ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ತಲೆಯೆತ್ತುತ್ತಿರುವ ಬಿಗ್ ಬಾಸ್ ಮನೆಯ ಫೋಟೋವೊಂದು ಲೀಕ್ ಆಗಿದೆ. ಇದನ್ನ ಕಂಡು ಅಭಿಮಾನಿಗಳಿಗೆ ಬಿಬಿಕೆ 12 ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
BBK 12: ಬಿಗ್ ಬಾಸ್ಗೋಸ್ಕರ ಕಲರ್ಸ್ನಲ್ಲಿ ಮುಕ್ತಾಯವಾಗುತ್ತಿದೆ ಒಂದಲ್ಲ.. ಎರಡಲ್ಲ 3 ಧಾರಾವಾಹಿಗಳು