Roopa Gururaj Column: ಗುರು ತೋರಿದ ಬೆಳಕು
ಯಾವ ಮತದಲ್ಲಿ ಆತನು ಹುಟ್ಟಿರುತ್ತಾನೋ, ಆ ಮತದ ಸಂಸ್ಕಾರಗಳು ಆತನಲ್ಲಿ ಬಲವತ್ತರ ವಾಗಿದ್ದು, ಹೊಸ ಮತಕ್ಕೆ ಪ್ರವೇಶ ಮಾಡಿದಾಗ, ಆ ಮತದ ಸಂಸ್ಕಾರಗಳನ್ನು ರೂಢಿ ಮಾಡಿಕೊಳ್ಳುವ ಯತ್ನದಲ್ಲಿ ಘರ್ಷಣೆಯುಂಟಾಗಿ ಮಾನಸಿಕವಾದ ಅಶಾಂತಿ ಯುಂಟಾಗುವುದೆಂದೂ ತಿಳಿಸಿದರು

ಶ್ರೀಚಂದ್ರಶೇಖರ ಭಾರತೀ ಸ್ವಾಮಿ

ಒಂದೊಳ್ಳೆ ಮಾತು
ರೂಪಾ ಗುರುರಾಜ್
ಪಾಶ್ಚಾತ್ಯರೊಬ್ಬರು ಶ್ರೀಚಂದ್ರಶೇಖರ ಭಾರತೀ ಸ್ವಾಮಿಯವರ ಹತ್ತಿರ ತಾನು ಹಿಂದುವಾಗ ಬೇಕೆಂದೂ, ತನ್ನನ್ನು ಗುರುಗಳೇ ಸ್ವತಃ ಮತ ಪರಿವರ್ತನೆ ಮಾಡಿ, ನೂತನ ಧರ್ಮದ ನಾಮಕರಣ ವನ್ನೂ ಮಾಡಬೇಕೆಂದು ಕೋರಿಕೊಂಡಿದ್ದನು. ಆತನಿಗೆ ಶ್ರೀಗುರುಗಳು ಮತ ಪರಿವರ್ತನೆ ಎಂದರೆ ಬಟ್ಟೆಯನ್ನು ಬದಲಾಯಿಸಿದಂತಲ್ಲವೆಂದೂ, ಮತ ಪರಿವರ್ತನೆಯಿಂದ ಆತನ ಜನ್ಮಸಿದ್ಧವಾದ ಸಂಸ್ಕಾರಗಳು ಬದಲಾಗುವುದಿಲ್ಲವೆಂದೂ ಹೇಳಿದ್ದರು.
ಯಾವ ಮತದಲ್ಲಿ ಆತನು ಹುಟ್ಟಿರುತ್ತಾನೋ, ಆ ಮತದ ಸಂಸ್ಕಾರಗಳು ಆತನಲ್ಲಿ ಬಲವತ್ತರ ವಾಗಿದ್ದು, ಹೊಸ ಮತಕ್ಕೆ ಪ್ರವೇಶ ಮಾಡಿದಾಗ, ಆ ಮತದ ಸಂಸ್ಕಾರಗಳನ್ನು ರೂಢಿ ಮಾಡಿ ಕೊಳ್ಳುವ ಯತ್ನದಲ್ಲಿ ಘರ್ಷಣೆಯುಂಟಾಗಿ ಮಾನಸಿಕವಾದ ಅಶಾಂತಿ ಯುಂಟಾಗುವುದೆಂದೂ ತಿಳಿಸಿದರು.
ಇದನ್ನೂ ಓದಿ: Roopa Gururaj Column: ಮನುಷ್ಯರಾಗಿ ನಾವು ಪಾಲಿಸಬೇಕಾದ ಧರ್ಮ
ಯಾರು ಹೇಗೆ ತನಗೆ ಜನ್ಮವಿತ್ತ ಜನನಿಯನ್ನು ಬದಲಾಯಿಸಲು ಸಾಧ್ಯವಾಗದೋ, ಹಾಗೆಯೇ ಮತವನ್ನು ಬದಲಾಯಿಸುವುದೂ ಸಾಧ್ಯವಾಗದು. ತಾಯಿ ಬಡವೆಯಾಗಿರಬಹುದು, ರೂಪವಂತಳ ಲ್ಲದಿರಬಹುದು, ಆಕೆ ಹೇಗಿದ್ದರೂ ತಾಯಿಯೇ. ನಮ್ಮ ತಾಯಿಯನ್ನು ಆಕೆ ಬಡವೆ ಎಂದು ತಿರಸ್ಕ ರಿಸಿ ಮತ್ತೊಬ್ಬ ಶ್ರೀಮಂತೆಯನ್ನು ನಮ್ಮ ತಾಯಿಯೆಂದು ಸ್ವೀಕರಿಸಲಾದೀತೇ? ಆಗುವುದಿಲ್ಲ. ಹಾಗೆಯೇ ನಾವು ಜನ್ಮ ತಳೆದ ಮತವನ್ನೂ ಸಹ ಬದಲಾಯಿಸಲು ಸಾಧ್ಯವಿಲ್ಲ.
ನಮ್ಮ ಶಾಸ್ತ್ರಗಳೇ ಅದನ್ನು ಸ್ಪಷ್ಟವಾಗಿ ಸಾರುತ್ತದೆ. ‘ಸ್ವಧರ್ಮೇ ನಿಧನಂ ಶ್ರೇಯ, ಪರಧರ್ಮೋ ಭಯಾವಾಹಃ’. ನಾವು ನಮ್ಮ ಸ್ವಧರ್ಮದಲ್ಲಿಯೇ ದಾರಿಯನ್ನು ಅರಸಬೇಕು, ಗುರಿಯನ್ನು ಕಾಣ ಬೇಕು’ ಎಂದು ಗುರುಗಳು ಸ್ಪಷ್ಟ ಪಡಿಸಿದರು. ಗುರುದೇವರ ಈ ವಾಣಿಯನ್ನು ಕೇಳಿ ಆ ಪಾಶ್ಚಾತ್ಯ ಪ್ರವಾಸಿಯು ಮೂಕವಿಸ್ಮಿತನಾದ.
ನಮ್ಮಲ್ಲಿ ಅನೇಕರು ಮದುವೆಗಾಗಿ ಅಥವಾ ಮತ್ತಾವುದೋ ಕಾರಣಕ್ಕಾಗಿ ಮತಾಂತರಗೊಳ್ಳು ವುದನ್ನು ನಾವು ನೋಡಿರುತ್ತೇವೆ. ಮತಾಂತರಗೊಳ್ಳುವುದು ಒಂದು ದಿನದ, ಒಂದು ಕ್ಷಣದ ಕೆಲಸ ವಲ್ಲ. ಅಕಸ್ಮಾತ್ತಾಗಿ ನಾವು ಯಾರನ್ನು ಇಷ್ಟಪಟ್ಟು ಅವರಿಗಾಗಿ ನಮ್ಮ ಮತವನ್ನು ಬದಲಾ ಯಿಸಲು ಒಪ್ಪಿಕೊಂಡರೂ ಸಹ, ಆ ವ್ಯಕ್ತಿಯನ್ನು ಒಪ್ಪಿಕೊಂಡಷ್ಟು ಸರಳವಾಗಿ ಅವರ ಆಚರಣೆ ಗಳನ್ನು, ಮತವನ್ನು ಸ್ವೀಕರಿಸಿ ಜೀವನದುದ್ದಕ್ಕೂ ಅದನ್ನು ಪಾಲಿಸುವುದು ಸುಲಭವಲ್ಲ.
ಯಾವುದೋ ಒಂದು ಹುಮ್ಮಸ್ಸಿಗೆ ಬಿದ್ದು ಈ ರೀತಿಯ ಮತಾಂತರಕ್ಕೆ ಒಳಗಾಗಿ ನಂತರ ಜೀವನ ಪೂರ್ತಿ ತ್ರಿಶಂಕು ಸ್ಥಿತಿಯಲ್ಲಿ ಬಳಲುವವರನ್ನು ಹತ್ತಿರದಿಂದ ನೋಡಿದವರಿದ್ದಾರೆ. ಕೆಲ ರಾಜ್ಯ ಗಳಲ್ಲಿ ಒಂದು ಸಮುದಾಯದ ಜನರನ್ನೇ ಮತ್ತೊಂದು ಮತಕ್ಕೆ ಮತಾಂತರಿಸಿ ಅವರ ಇತಿಹಾಸ, ಅವರ ಸನಾತನ ಧರ್ಮವನ್ನೇ ಅಳಿಸಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ.
ಮತಾಂತರಗೊಳ್ಳುವುದು ಬಾಹ್ಯ ರೂಪದಲ್ಲಿ ಭಾರತೀಯರಾಗಿ ನಾವು ಬಳಸುವ ಸಿಂಧೂರ, ಬಳೆ, ಪೂಜಾ ವಿಧಾನಗಳು ಇವುಗಳನ್ನು ಬದಲಾಯಿಸುವುದಷ್ಟೇ ಅಲ್ಲ, ಆಂತರ್ಯದಲ್ಲಿ ನಮ್ಮ ನಂಬಿಕೆ ಗಳನ್ನೇ ಅದು ಬುಡ ಮೇಲಾಗಿಸುತ್ತದೆ. ಮನುಷ್ಯರ ಮನಸ್ಸು ಬಹಳ ಸೂಕ್ಷ್ಮ, ಹುಟ್ಟಿದಾಗಿ ನಿಂದ ಮೆಚ್ಚಿಕೊಂಡು ಬಂದ ದೈವಗಳು, ಆಚರಣೆ, ನಂಬಿಕೆಗಳು ಆಳವಾಗಿ ನಮ್ಮ ಮನಸ್ಸಿನಲ್ಲಿ ಬೇರೂರಿ ರುತ್ತವೆ. ಅದನ್ನು ಅದೆಷ್ಟೇ ಗಟ್ಟಿ ಮನಸ್ಸು ಮಾಡಿದರೂ ಸಂಪೂರ್ಣವಾಗಿ ಬಿಡಲು ಸಾಧ್ಯವಿಲ್ಲ.
ಕೆಲವು ಮತಗಳಿಗೆ ಮತಾಂತರಗೊಂಡ ಮೇಲೆ ಬರೀ ದೇವರುಗಳನ್ನು ಬದಲಾಯಿಸುವುದಷ್ಟೇ ಅಲ್ಲ ಆಹಾರ ಪದ್ಧತಿ, ಆಚರಣೆಗಳು ನಂಬಿಕೆಗಳು ಇವೆಲ್ಲವನ್ನೂ ಹೊಸದಾಗಿ ಅಳವಡಿಸಿಕೊಳ್ಳ ಬೇಕಾಗು ತ್ತದೆ. ಬಾಲ್ಯದಿಂದ ಹಂತ ಹಂತವಾಗಿ ತಂದೆ-ತಾಯಿಗಳ ಮೂಲಕ ನಾವು ಬೆಳೆಯುವ ಪರಿಸರದ ಮೂಲಕ ನಮ್ಮಲ್ಲಿ ರಕ್ತಗತವಾಗುತ್ತಾ ಬಂದಿರುವ ಅನೇಕ ನಂಬಿಕೆಗಳನ್ನು ಅಳಿಸಿಹಾಕಿ, ಹೊಸ ವಿಷಯಗಳನ್ನು ಒಂದೇ ರಾತ್ರಿಯಲಿ ಅಳವಡಿಸಿಕೊಂಡು ನಂಬಲು ಸಾಧ್ಯವೇ? ಯಾವುದೋ ಒಂದು ಆಮಿಷಕ್ಕೆ ಒಳಗಾಗಿ ತೀರ ಬಡವರನ್ನ ಒಂದಿಷ್ಟು ಹಣ ಅನುಕೂಲಗಳ ಆಸೆಗೆ ಒಲಿಸಿ ಮತಾಂತರ ಮಾಡುವುದನ್ನು ನಾವು ನೋಡಿದ್ದೇವೆ.
ಅವರ ಹೆಸರುಗಳನ್ನು ಬದಲಾಯಿಸಿ, ಅವರ ಪೂರ್ವಜರ ಹೆಸರೆತ್ತದಂತೆ ಸಂಪೂರ್ಣವಾಗಿ ಹೊಸ ಗುರುತಿನಲ್ಲಿ ಅವರು ಬದುಕಬೇಕು. ಇದೊಂದು ರೀತಿಯ ಅನಾಥಪ್ರeಯನ್ನು ಅವರಲ್ಲಿ ಮೂಡಿಸು ವಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕಿಂತ ಹೆಚ್ಚಾಗಿ ಅವರ ಮಕ್ಕಳು ತಮ್ಮ ಅಸ್ತಿತ್ವಕ್ಕೆ ಪರದಾಡು ವುದನ್ನು ನಾವು ಗಮನಿಸಬಹುದು. ಇಂತಹ ನಿರ್ಧಾರಗಳನ್ನು ಮಾಡುವ ಮೊದಲು ಒಂದಲ್ಲ, ಸಾವಿರ ಬಾರಿ ಯೋಚಿಸಿ. ನಮ್ಮ ಸಂಸ್ಕೃತಿ, ಧರ್ಮ, ತಂದೆ-ತಾಯಿ, ದೇಶ ಇವೆಲ್ಲವೂ ರಕ್ತದಲ್ಲಿ ಬೆರೆತು ಹೋದದ್ದು. ಅದನ್ನು ಕಳೆದುಕೊಂಡರೆ ನಮ್ಮ ಅಸ್ತಿತ್ವವನ್ನೇ ಅಳಿಸಿ ಹಾಕಿದಂತೆ.