Gururaj Gantihole Column: ಕಾಂತಾರ- ನಂಬಿಕೆಗಳ ನಡುವೆ ಕ್ರಾಂತಿಯಲ್ಲವೇ ?
ಕಾಂತಾರ ಎಂದರೆ, ದಟ್ಟ ಕಾನನ, ಕಾಡು, Mysterious Forrest ಎಂದು ಸಂಸ್ಕೃತ, ಒಡಿಶಾ ಭಾಷೆ ಯಲ್ಲಿಯೂ ಅದೇ ಅರ್ಥ ಕೊಡುತ್ತದೆ. 13ನೇ ಶತಮಾನದಲ್ಲಿ ರಚಿತವಾದ ಆಯುರ್ವೇದಿಕ್ ಎನ್ ಸೈಕ್ಲೋಪಿಡಿಯಾ ಎಂದೇ ಖ್ಯಾತವಾದ ರಾಜ ನಿಘಂಟು ಎಂಬ ಗ್ರಂಥದಲ್ಲೂ ದಟ್ಟ ಕಾಡು ಎಂದು ನಮೂದಾಗಿದೆ.

-

ಗಂಟಾಘೋಷ
ಸಿನಿಮಾ ವಾಣಿಜ್ಯವಾಗಿ ಗೆಲ್ಲಲೇಬೇಕೆಂಬ ಹಠದಿಂದ ಸಿನಿಮಾದ ಕಥಾವಸ್ತು, ಅದರ ನಿರೂಪಣೆ ಯನ್ನು ನಮ್ಮ ನಂಬಿಕೆಯ ಬುಡಗಳನ್ನು ಕತ್ತರಿಸುತ್ತ ಎಡೆ ಪ್ರಶಂಸೆಗೊಳಪಡಿಸಿ, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂಬ ಮಾತುಗಳನ್ನು ಹುಟ್ಟುಹಾಕುವುದು ಒಂದು ವಿಧ. ನಮ್ಮ ಪರಂಪರೆ, ನಂಬಿಕೆ, ಸ್ಥಳೀಯ ಆಚರಣೆಗಳ ಬೇರುಗಳನ್ನು ಗೊತ್ತಿಲ್ಲದಂತೆಯೇ ಗಟ್ಟಿಮಾಡುತ್ತ, ಜನಮೆಚ್ಚುಗೆ ಯನ್ನೂ ಪಡೆಯುತ್ತ ಎಲ್ಲಕಡೆಗೂ ಪ್ರಶಂಸೆಗೊಳಗಾಗುವುದು ಮತ್ತೊಂದು ವಿಧದ ಸಿನಿಮಾ. ಕಾಂತಾರ ಸಿನಿಮಾ ಇದರಲ್ಲಿ ಎರಡನೇ ವಿಧಕ್ಕೆ ಸೇರುತ್ತದೆ.
ಬಿಡುಗಡೆಗೆ ಸಿದ್ಧವಾಗಿರುವ ಕಾಂತಾರ-1 ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಈ ಮುನ್ನ ಬಿಡುಗಡೆ ಯಾದ ಕಾಂತಾರ ನಾಡುನುಡಿ, ದೈವ ಪರಂಪರೆಯ ಜೊತೆಗೆ, ಕಾಡಿನ ಅವಿಸ್ಮರಣೀಯ ಕೊಡುಗೆ ಯನ್ನು ಎತ್ತಿ ಹಿಡಿಯುವ ಮೂಲಕ ಸಾರ್ವಕಾಲಿಕ ದಾಖಲೆಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿ ನಿಂತುಬಿಟ್ಟಿತು.
ಕಾಂತಾರ ಎಂದರೆ, ದಟ್ಟ ಕಾನನ, ಕಾಡು, Mysterious Forrest ಎಂದು ಸಂಸ್ಕೃತ, ಒಡಿಶಾ ಭಾಷೆ ಯಲ್ಲಿಯೂ ಅದೇ ಅರ್ಥ ಕೊಡುತ್ತದೆ. 13ನೇ ಶತಮಾನದಲ್ಲಿ ರಚಿತವಾದ ಆಯುರ್ವೇದಿಕ್ ಎನ್‌ಸೈಕ್ಲೋಪಿಡಿಯಾ ಎಂದೇ ಖ್ಯಾತವಾದ ರಾಜ ನಿಘಂಟು ಎಂಬ ಗ್ರಂಥದಲ್ಲೂ ದಟ್ಟ ಕಾಡು ಎಂದು ನಮೂದಾಗಿದೆ.
ಕಾಡು, ಕೇವಲ ಕಾಡಾಗಿರದೆ ಪ್ರಕೃತಿಯ ಕೇಂದ್ರಬಿಂದುವಾಗಿ, ನಿಸರ್ಗ ವ್ಯವಸ್ಥೆಯಲ್ಲಿ ಬದುಕು ತ್ತಿರುವ ಸಕಲ ಜೀವಿಗಳಿಗೂ ಮನುಷ್ಯನಿಗೂ ಕಾಡಿನ ಮೂಲದ ನಂಟಿದೆ. ಇವೆಲ್ಲವನ್ನು ಸಮತೋಲನದಲ್ಲಿ ಕಾಪಾಡುತ್ತ ಹೋಗಲು ನಾವು ನಂಬಿದ ದೇವ-ದೈವಗಳ ಆಶೀರ್ವಾದ, ಬಲ ಮತ್ತು ರಕ್ಷಣೆ ಇರುವುದರಿಂದ ಭೂಮಿಯ ಮೇಲೆ ಸಮಸ್ತವು ಸಮಚಿತ್ತದಿಂದ ನಡೆಯುತ್ತಿದೆ ಎನ್ನಬಹುದು.
ಇದನ್ನೂ ಓದಿ: Gururaj Gantihole Column: ಕರಾವಳಿಯ ಬೇಲೂರು-ಬೈಂದೂರಿನ ಸೇನೇಶ್ವರ ದೇಗುಲ !
ಶಿವ ಎಂಬ ಕಾಡಿನ ಯುವಕನ ಪಾತ್ರದಲ್ಲಿ ಅಭಿನಯಿಸಿರುವ ರಿಷಬ್, ತನ್ನ ಅಭಿನಯದ ಮೂಲಕ ಇಡೀ ಚಿತ್ರದ ತುಂಬಾ ಆವರಿಸಿಕೊಂಡುಬಿಡುವ ಬಗೆ ಮಾತ್ರ ವಿನೂತನವಾದದ್ದು. ಕರಾವಳಿ ಜಿಯ ವ್ಯಾಪ್ತಿಯಲ್ಲಿ ಜೀವನ ಮಾಡುತ್ತಿರುವ ಯುವಕ ಶಿವನಿಗೆ ಕಂಬಳದ ಮೇಲೆ ಆಸಕ್ತಿ.
ರಿಷಬ್ ಒಬ್ಬ ಕಲಾವಿದನಾಗಿ, ಗ್ರಾಮೀಣ ಜನರ ಧೈರ್ಯ, ವೀರತ್ವ ಮತ್ತು ಪ್ರಕೃತಿಯ ಮೇಲಿನ ಭಕ್ತಿ-ಭಯಗಳ ಸಂಕಲನದಂತಿದ್ದು, ಕರಾವಳಿ ಗ್ರಾಮೀಣ ಜನಜೀವನದ ಪ್ರತಿನಿಧಿಯಂತೆ ಕಾಣು ತ್ತಾರೆ. ದೈವ ಯಾವ ರೀತಿ ಪರಿಣಾಮ ಬೀರುತ್ತೆ, ಸುತ್ತಮುತ್ತಲಿನ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯೆ ಕೊಡ್ತಾನೆ ಎಂಬುದು ಇದರಲ್ಲಿ ಮುಖ್ಯವಾಗುತ್ತದೆ. ಉಳ್ಳವರ-ಇಲ್ಲದವರ ನಡುವಿನ ಹೋರಾಟ, ಕಾಡು ಮತ್ತು ಅಧಿಕಾರಿಗಳ ಒತ್ತಡಗಳನ್ನು ಎದುರಿಸುತ್ತ ಹೋರಾಟದ ಬಳಿಕ, ದೈವ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಒಂದು ತಿರುವು ಬಹಳ ಪ್ರಮುಖವಾಗಿದೆ.
ಕೆಲವರು, ದೈವದ ವಿಚಾರವು ರಿಷಬ್ ಮುಖಾಂತರ ವ್ಯತ್ಯಾಸವಾಯಿತು ಎಂದೆಲ್ಲ ಹೇಳಿದರೂ, ದೈವದ ಬಲವಿಟ್ಟುಕೊಂಡೇ ಮುಂದುವರಿದಿರುವ ಕರಾವಳಿಯ ಯುವಕನಿಂದ ದೈವದ ಮಹಿಮೆ ವಿಶ್ವಕ್ಕೆ ಪರಿಚಯವಾಯಿತು ಎಂಬುದೂ ಅಷ್ಟೆ ಸತ್ಯ. ಕರಾವಳಿಗರ ಹಬ್ಬ, ಭೂಮಿ-ಕಾಡಿನ ಸಂಬಂಧ, ದೇವರು-ದೈವ ಪರ್ವಗಳು ಮತ್ತು ಭೂತಕೋಲ, ಕಂಬಳದಂತಹ ಆಚರಣೆಗಳು ( Karavali folk traditions) ಚಿತ್ರದಲ್ಲಿ ದಟ್ಟವಾಗಿ ಪ್ರತಿಬಿಂಬಿತವಾಗಿವೆ.
ಜಾನಪದ ಶಬ್ದಗಳ ಜೊತೆಗೆ ಸಾಂಪ್ರದಾಯಿಕ ಸಂಗೀತ ವಾದ್ಯಗಳಂತೂ ಮತ್ತೊಂದು ವಿಶೇಷತೆ ಎಂದರೂ ತಪ್ಪಾಗಲಾರದು. ಕಾಂತಾರ ಚಿತ್ರವು ಕರಾವಳಿ ನಾಡಿನ ಸಾಂಪ್ರದಾಯಿಕ ಜೀವನಶೈಲಿ, ಕಾಡಿನೊಂದಿಗೆ ನಂಟಿರುವ ಜನಸಾಮಾನ್ಯರ ಬದುಕು, ಇಂದಿನ ಆಧುನಿಕ ಕಾನೂನು ಕಟ್ಟಲೆಗಳ ಜಂಝಾಟ ಮತ್ತು ಅವುಗಳನ್ನು ಬಳಸಿ ಒಕ್ಕಲೆಬ್ಬಿಸುವ ಒತ್ತಡದ ವಿಚಾರಗಳನ್ನು ಸೂಕ್ಷ್ಮ ಮತ್ತು ಸಮರ್ಪಕವಾಗಿ ಹೇಳುವ ಮೂಲಕ ಬಹು ಆಯಾಮದ ಚಿತ್ರವಾಗಿ ಭಾರತೀಯ ಚಿತ್ರರಂಗದಲ್ಲಿ ಯಾವತ್ತೂ ಒಂದು ವಿಶಿಷ್ಟ ಸ್ಥಾನದಲ್ಲಿ ನಿಲ್ಲಬಲ್ಲದು.
ಸಿನಿಮಾ ಪ್ರೀತಿ ಇರುವವರು, ಕಾಂತಾರವನ್ನು ನೋಡಿದಾಗ, ನಮ್ಮೂರಲ್ಲೂ ಇಂತಹ ಬೆಟ್ಟಗುಡ್ಡ ಗಳ, ಕಾಡುಗಳ ಜಾಗವಿದ್ದು, ಇಲ್ಲಿ ಶೂಟಿಂಗ್ ಮಾಡಿದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ ಎಂಬ ಆಸೆ ಮನದಲ್ಲಿ ಬಂದು ಹೋಗುತ್ತದೆ. ಆದರೆ ತಾನು ಹುಟ್ಟಿ ಬೆಳೆದ ಊರು, ಪ್ರದೇಶವನ್ನು, ಕುಂದಾಪ್ರ ಕನ್ನಡ ಸಂಸ್ಕೃತಿಯನ್ನು, ಕರಾವಳಿಯ ದೇವ ದೈವ ಪರಂಪರೆಯನ್ನು, ಭೂತ ಕೋಲದಂತಹ ಸಾಂಪ್ರದಾಯಿಕ ಆಚರಣೆಗಳನ್ನು ಅತ್ಯಂತ ಪ್ರಖರವಾಗಿ ತೋರಿಸಿ, ಸಿನಿಮಾದಲ್ಲಿ ಕಟ್ಟಿಕೊಡುವುದಿದೆಯಲ್ಲ, ಇಲ್ಲಿಯವರೆಗೆ ಕರಾವಳಿ ಭಾಗವನ್ನು ಇಷ್ಟು Solid ಆಗಿ ತೋರಿಸಿರುವ ಚಿತ್ರಗಳಲ್ಲಿ ಕಾಂತಾರ ಯಾವತ್ತೂ ಅಗ್ರಪಂಕ್ತಿಯಲ್ಲಿರುತ್ತದೆ.
ಜೊತೆಗೆ, ಇಡೀ ಕಾಂತಾರ ಸಿನಿಮಾವನ್ನು ಕರಾವಳಿಯ ಚಿತ್ರೀಕರಣ ಮಾಡಿ ಮುಗಿಸಿರುವುದು ನಂಬಲಿಕ್ಕೆ ಅಸಾಧ್ಯ ಸಾಧನೆಯಾಗಿದೆ. ಎಲ್ಲರೂ ಹೈದರಾಬಾದ್, ಚೆನ್ನೈನಂತಹ ಬೃಹತ್ ಸೆಟ್ ಹಾಕಿರುವ ಚಿತ್ರೀಕರಣ ಜಾಗವನ್ನು ಆಯ್ದುಕೊಂಡು, ತಲೆಬಿಸಿ ಬೇಡವೆಂದು ಅಲ್ಲೇ ಶೂಟಿಂಗ್ ಮುಗಿಸುತ್ತಾರೆ. ಆದರೆ ರಿಷಬ್ ತೆಗೆದುಕೊಂಡ ರಿಸ್ಕ್ ಟಾಸ್ಕ್ ಇದೆಯಲ್ಲ, ಅದು ಎಲ್ಲರಿಂದ ಆಗು ವಂಥಾದ್ದಲ್ಲ ಎಂಬುದಕ್ಕೆ ಸರಿಯಾಗಿ ನೆಟ್ವರ್ಕ್ ಸಿಗದಿರುವಂತಹ ಜಾಗಗಳಲ್ಲಿ ಚಿತ್ರೀಕರಣಕ್ಕೆ ಮಾಡಿದ್ದೂ ಉದಾಹರಣೆ.
ಕಾಂತಾರ ಶೂಟಿಂಗ್ ನಡೆಯುತ್ತಿದ್ದಾಗ ಸ್ಥಳೀಯರಿಗೆ, ಸುತ್ತಮುತ್ತಲಿನ ಊರಿಗೆ ಒಳ್ಳೆಯದಾಗಿರುವು ದನ್ನೂ ನಾವು ಗಮನಿಸಬೇಕು. ಕೊಲ್ಲೂರು, ಜಡ್ಕಲ, ಮರವಂತೆ, ಕುಂದಾಪುರ, ಕೋಟೇಶ್ವರ ಸೇರಿದಂತೆ ಈ ಭಾಗದಲ್ಲಿ ದುಡಿಮೆ ನಂಬಿಕೊಂಡ ಸಾವಿರಾರು ಜನರು ಈ ಚಿತ್ರೀಕರಣದ ಭಾಗವಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದರು. ಸುತ್ತಮುತ್ತಲಿನ ಹೊಟೆಲ್ ಗಳೂ ಸಹ ಖಾಲಿಯಿರಲಿಲ್ಲ.
ಕೊಲ್ಲೂರಿನಿಂದ ದೂರದ ಭಟ್ಕಳದವರೆಗೂ ಬುಕಿಂಗ್ ಆಗಿ ಬಿಟ್ಟಿದ್ದವು. ಇಲ್ಲಿಗೆ ತರಲಾಗದ ತಂತ್ರಜ್ಞಾನದ ವಿಚಾರಕ್ಕಾಗಿ, ದೂರದ ಬೆಂಗಳೂರು, ಚೆನ್ನೈಗೆ ಹೋಗುವ ವಿಚಾರವೊಂದು ಬಿಟ್ಟರೆ, ಉಳಿದಿದ್ದೆಲ್ಲವನ್ನೂ ಇಲ್ಲಿಯೇ ಮಾಡಿ ಪೂರ್ಣಗೊಳಿಸಲಾಗಿತ್ತು. ತನ್ನೂರ ಚಿತ್ತೀಕರಣ ಮಾಡಿ ಮುಗಿಸಿದ ರಿಷಬ್ ಶೆಟ್ಟಿಯದ್ದು ಗಟ್ಟಿಗುಂಡಿಗೆ.
ಒಂದು ರೀತಿಯ ಸಿನಿಮಾ ತಪಸ್ಸು. ಕಾಂತಾರ ಒಂದು ಸಿನಿಮಾವಾಗಿ, ತನ್ನ ಚಿತ್ರೀಕರಣಕ್ಕೆ ಇಲ್ಲಿಗೆ ಬಂದಿತ್ತು ಎನ್ನುವುದರ ಬದಲಾಗಿ, ಇಲ್ಲಿನ ವ್ಯಾಪಾರ, ಉದ್ಯೋಗ, ಸ್ಥಳೀಯ ಪ್ರತಿಭೆಗಳ ಗುರುತಿಸು ವಿಕೆ, ಕಲಾಲೋಕಕ್ಕೆ ಅನಾವರಣದ ಜೊತೆಗೆ ಕರಾವಳಿಯ ಪ್ರವಾಸೋದ್ಯಮವನ್ನು ದೇಶವಿದೇಶಕ್ಕೆ ಪರಿಚಯಿಸುವ ದೃಷ್ಟಿಯಿಂದ ಇಲ್ಲಿಗೆ ಬಂದಿತ್ತು ಅಂದುಕೊಳ್ಳುವುದೇ ಉತ್ತಮ.
ಒಂದು ಸಭೆಯಲ್ಲಿ ನಮ್ಮ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು, ಕಾಂತಾರ ದಿಂದಾಗಿ ಕರಾವಳಿಯ ಪ್ರವಾಸೋದ್ಯಮವು ಶೇ.90ರಷ್ಟು ಹೆಚ್ಚಾಗಿದೆ. ನಮ್ಮ ಜನರು, ಸಹಜವಾಗಿ ಯೇ ಧರ್ಮಸ್ಥಳ, ಕೊಲ್ಲೂರು, ಕುಕ್ಕೆ, ಕರಾವಳಿಯ ಸಮುದ್ರ ತೀರಕ್ಕೆ ಬೇಟಿಯ ಜೊತೆಗೆ ಕೆಲ ಅಪರೂಪದ ಫಾಲ್ಸ್‌ಗಳಿಗೂ ಭೇಟಿ ಕೊಡಲು ಇಲ್ಲಿಯ ಪ್ರವಾಸೋದ್ಯಮ ಅನುಕೂಲವಾಗಿತ್ತು.
ಈಗ, ಕೊರಗಜ್ಜನ ದೇವಸ್ಥಾನ ಎಲ್ಲಿದೆ? ಭೂತಕೋಲ ಆಗ್ತದಲ್ಲ ಅದು ಎಲ್ಲಿ? ಕಾಂತಾರ ಶೂಟಿಂಗ್ ಆಗಿದ್ದ ಜಾಗ ಇಲ್ಲೇ ಹತ್ತಿರವಿದೆಯಂತಲ್ಲ, ಅದೆಲ್ಲಿ? ಎಂದೆಲ್ಲ ಪ್ರವಾಸಿಗರು ಕೇಳಿ, ತಿಳಿದುಕೊಂಡು ಭೇಟಿ ಕೊಡಲು ಆರಂಭಿಸಿದ್ದಾರೆ. ಇದು ಒಂದು ವಿಶೇಷ ಬೆಳವಣಿಗೆ ಎಂದಿದ್ದಾರೆ. ಸಿನಿಮಾ ಬಂದ ಮೇಲೆ, ಕರಾವಳಿ ಬಗ್ಗೆ ಚರ್ಚೆಯಾಯಿತು, ಭೂತಕೋಲದ ಬಗ್ಗೆ ನಾಡಿನಾದ್ಯಂತ ಚರ್ಚೆಗಳಾದವು, ನಮ್ಮ ಲ್ಲಿಯ ಸ್ಥಳಮಹಿಮೆಯ ಪರಿಚಯವಾಗತೊಡಗಿತು. ಇಷ್ಟು ದೊಡ್ಡ ಪ್ರಮಾಣದಲ್ಲಿ ತುಳು ಭಾಷೆಯಲ್ಲಿ ದೈವದ ಸಂಭಾಷಣೆಗಳನ್ನು ಹಾಗೆಯೇ ಇಟ್ಟುಕೊಂಡಿದ್ದರು, Subtitle ಯಾವುದೇ ಭಾಷೆ ಬಂದರೂ, ಮೂಲ ತುಳು ಭಾಷೆಯನ್ನು ಹಾಗೇ ಬಳಸಿದ್ದನ್ನು ಪ್ರತಿಯೊಬ್ಬರೂ ಕೇಳಿಯೇ ಕೇಳುತ್ತಿದ್ದರು.
ಈ ಮೂಲಕ, ಭಾಷೆಯ ಪರಿಚಯವ್ಯಾಪ್ತಿ ಸಹ ಈ ಸಿನಿಮಾ ಮೂಲಕ ಒಂದು ಹಂತದವೆರೆಗೆ ವಿಸ್ತರಿಸಿತೆನ್ನಬಹುದು. ಕರಾವಳಿ, ದೇವದೈವ, ಸ್ಥಳಗಳು, ಪರಂಪರೆಯ ಆಚರಣೆಗಳನ್ನು ಇಡೀ ಪ್ರಪಂಚಕ್ಕೆ ಕಾಂತಾರ ಪರಿಚಯಿಸಿಕೊಟ್ಟತೆನ್ನ ಬಹುದು. ರಿಷಬ್ ತನ್ನ ಸ್ಥಳೀಯತನವನ್ನು ವಿಶ್ವಮಟ್ಟಕ್ಕೆ ಪಸರಿಸುವ ಬಹುದೊಡ್ಡ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ದ್ದಾರೆನ್ನಬಹುದು. ಕಾಂತಾರ ಗಳಿಸಿದ ಪ್ರಶಸ್ತಿ, ಗೌರವ, ಮಾನ್ಯತೆಗಳು ಕೂಡ ವಿಶಿಷ್ಟವಾಗಿವೆ.
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ- 2024ರಲ್ಲಿ ಕಾಂತಾರಕ್ಕೆ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ (Best Popular Film Providing Wholesome Entertainment) ಪ್ರಶಸ್ತಿ ದೊರೆಯಿತು. ನಿರ್ದೇಶಕ ಮತ್ತು ನಾಯಕ ರಿಷಬ್ ಶೆಟ್ಟಿಗೆ Best Actor ಪ್ರಶಸ್ತಿ ದೊರೆಯಿತು. Indian Panorama ವಿಭಾಗದಲ್ಲಿ ಅಂತಾರಾಷ್ಟ್ರೀಯ ಚಿತ್ರಮೇಳಕ್ಕೆ ವಿಶೇಷ ಮಾನ್ಯತೆ ಪಡೆದು ಆಯ್ಕೆ ಯಾಯಿತು. ಇದರೊಂದಿಗೆ, ರಾಜ್ಯಮಟ್ಟದಲ್ಲಿ ಅಪರೂಪ ಕಲಾವಿದರಿಗೆ ನೀಡುವ ರಾಜ್ಯೋ ತ್ಸವ ಪ್ರಶಸ್ತಿಯೂ ದೊರೆಯಿತು. ಇಂತಹ ಗುರುತಿಸುವಿಕೆಗಳು ಚಿತ್ರ ಹಾಗೂ ಚಿತ್ರ ದಿಗ್ದರ್ಶಕನ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿವೆ ಎನ್ನಬಹುದು.
ಎರಡನೇ ವಿಶ್ವಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ, ಹಾಲಿವುಡ್‌ನಲ್ಲಿ ತಯಾರಾಗುತ್ತಿದ್ದ ಸಿನಿಮಾಗಳೆಲ್ಲವೂ ರಾಷ್ಟ್ರೀಯತೆ, ದೇಶದ ಪರವಾಗಿ, ಐಕ್ಯತೆಯ ಸಂದೇಶವನ್ನು ಇಟ್ಟುಕೊಂಡು ನಿರ್ಮಿಸಲ್ಪಡುತ್ತಿದ್ದವು. ಇದಕ್ಕೆಂದೇ ನಿರ್ಮಾಣ ಸಂಸ್ಥೆಗಳು, ಹಣ ಹೂಡುತ್ತಿದ್ದವರು ಲಾಭಾಂಶ ವನ್ನು ಗಮನ ದಲ್ಲಿಟ್ಟುಕೊಳ್ಳದೆ ನಿರ್ಮಾಣಕ್ಕೆ ಮುಂದೆ ಬರುತ್ತಿದ್ದರು.
ಕೆಲ ಸಂದರ್ಭಗಳಲ್ಲಿ, ನಟರು ಹಣ ಪಡೆಯದೆ ನಟಿಸುತ್ತಿದ್ದರು. ನಿರ್ದೇಶಕರು, ಬರಹಗಾರರು ಬಹುತೇಕ ನಿಶುಲ್ಕ ಕೆಲಸ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಇಂದಿನ ಹೊಸ ತಲೆಮಾರು ( Gen-Z), ಸಿನಿಮಾ ಮತ್ತು ವೆಬ್ ಸೀರೀಸ್, ಇನ್ಸ್ಟಾಗ್ರಾಂ, ಫೇಸ್ಬುಕ್ ಸೇರಿದಂತೆ ಹಲವು ಜಾಲತಾಣ ಗಳ ಜೊತೆಗೆ ಅಭೇದ ಸಂಬಂಧ ಕಟ್ಟಿಕೊಂಡು ಬಿಟ್ಟಿದೆ.
ಆಧುನಿಕ ಮನರಂಜನೆಯ ಮಾಧ್ಯಮಗಳಾದ Netflix, Prime, ಒಜಿಟಿಯಂತಹ ಆಪ್‌ಗಳ ಮೂಲಕ ಅಗಾಧ ವ್ಯಾಪ್ತಿಗೆ ತೆರೆದುಕೊಳ್ಳುವುದರಿಂದ, ಪ್ರಸ್ತುತ ಬದುಕಿನ ಸೀರಿಯೆಸ್‌ನೆಸ್ ಹೊರಟುಹೋಗಿ, ಎಲ್ಲವನ್ನು ರಂಜನೆಯ ಭಾಗವನ್ನಾಗಿಯೇ ತೆಗೆದುಕೊಳ್ಳುತ್ತಿರುತ್ತಾರೆ. ಈ ವಿಚಾರದಲ್ಲಿ, ಕಾಂತಾರ ಚಿತ್ರ, ಇಂದಿನ ಜೆನ್ ಝೀ ಕೂಡ ನಮ್ಮ ಹಿಂದಿನ ಆಚಾರ ವಿಚಾರಗಳನ್ನು ಗಂಭೀರವಾಗಿ ಅರ್ಥೈಸಿ ಕೊಳ್ಳುವಲ್ಲಿ ಪ್ರಯತ್ನಿಸುವಂತೆ ಮಾಡಿದ್ದು ಸಹ ಒಂದು ಸಾಧನೆ.
ಪ್ರಸ್ತುತ, ಸನ್ನಿವೇಶದಲ್ಲಿ ನಮ್ಮಲ್ಲೂ ಇಂತಹ ಒಂದು ಆದರ್ಶಪ್ರಾಯ ನಿಲುವನ್ನು ಹೊಂದುವ ಮೂಲಕ, ನಮ್ಮ ನಂಬಿಕೆ, ಪ್ರಜ್ಞೆಯ ಜೊತೆಗೆ ಸ್ಥಳೀಯ ವಿಷಯ-ವಿಚಾರಗಳನ್ನು ಇಟ್ಟುಕೊಂಡು, ಪಾರಂಪರಿಕ ಹಾದಿಯನ್ನು ಪ್ರೇರಣಾದಾಯಕವಾಗಿ ತೋರ್ಪಡಿಸಬೇಕಿದೆ. ದೇಶದ ಬಗ್ಗೆ ಗೌರವ, ಸಾಮಾಜಿಕ ಶಿಸ್ತು, ರಾಷ್ಟ್ರೀಯತೆಯನ್ನು ಮುನ್ನಲೆಗೆ ತರುವ ಪ್ರಯತ್ನಕ್ಕೆ ನಮ್ಮಲ್ಲಿನ ನಿರ್ಮಾತೃ ಗಳು, ಬರಹಗಾರರು ಆಳವಾಗಿ ಯೋಚಿಸಬೇಕಿದೆ. ಸಿನಿಮಾ ಒಂದು ದೇಶದ ವಾತಾವರಣವನ್ನು ಹೇಗೆ ಬದಲಾಯಿಸಬಲ್ಲದು ಎಂಬುದನ್ನು ನಾವೆಲ್ಲ ನೋಡಿದ್ದೇವೆ.
ಮುಂದಿನ ತಲೆಮಾರಿಗೆ ಸಿನಿಮಾ ಎಂಬುದು ಬಹುದೊಡ್ಡ ಪ್ರಭಾವ ಬೀರುವ ಮಾಧ್ಯಮ ವಾಗುತ್ತಿರುವುದರಿಂದ, ಹೇಳಬೇಕಾದ ವಿಚಾರವನ್ನು ಸಿನಿಮಾ ಹೇಳತೊಡಗಿದರೆ, ಬದಲಾವಣೆ ಮಾಡತೊಡಗಿದರೆ ನಮ್ಮತನ, ನಮ್ಮ ಪರಂಪರೆ ಉಳಿಯುತ್ತ ಮುಂದುವರಿಸಿಕೊಂಡು ಹೋಗುವು ದರಲ್ಲಿ ಗೆಲುವು ಕಾಣಬಹುದು. ನಮ್ಮ ಸಂಸ್ಕೃತಿ ಬಿಂಬಿಸುವಂತಹ ಹತ್ತಾರು ಸಿನಿಮಾಗಳು ಇನ್ನಷ್ಟು ಬರಲಿ, ಅವುಗಳು ಯಶಸ್ಸಾಗಲಿ. ನಮ್ಮತನ ಎಂಬ ಸಂಸ್ಕೃತಿ ನಿರಂತರ ಉಳಿಯಲಿ ಎಂದು ಆಶಿಸೋಣ.