ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Murli Mohan Chuntaru Column: ಶಿಕ್ಷಣ ಸೊರಗದಿರಲಿ ಶಿಕ್ಷಕ ಬಲಿಷ್ಠನಾಗಲಿ

ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದು ಹೋಗಿದೆ. ಮತ್ತದೇ ಹಾರ, ತುರಾಯಿ, ಬಿರುದು ಬಾವಲಿ ಗಳು, ಒಂದಷ್ಟು ಶಿಕ್ಷಕರನ್ನು ವೇದಿಕೆಗೆ ಕರೆ ತಂದು ಹೊಗಳಿ ಹೊನ್ನಶೂಲಕ್ಕೆ ಏರಿಸಿ ಸನ್ಮಾನ. ಮರುದಿನದಿಂದ ಮತ್ತದೇ ರಾಗ, ಮತ್ತದೇ ಹಾಡು. ಶಿಕ್ಷಕರನ್ನು ಕೈ ಕಾಲು ಬಾಯಿ ಕಟ್ಟಿ ಹಾಕಿ ಪಾಠ ಮಾಡುವಂತೆ ಮಾಡುವುದು. ಶಿಕ್ಷಕರಿಗೆ ಶಾಲೆ ಯಲ್ಲಿ ಪಾಠಮಾಡುವುದೊಂದು ಬಿಟ್ಟು ಉಳಿದೆ ಜವಾಬ್ದಾರಿ ಹಂಚಿ ಕೈ ತೊಳೆದುಕೊಳ್ಳುವುದು.

ಪ್ರಸ್ತುತ

ಡಾ.ಮುರಲೀ ಮೋಹನ್‌ ಚೂಂತಾರು

ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದು ಹೋಗಿದೆ. ಮತ್ತದೇ ಹಾರ, ತುರಾಯಿ, ಬಿರುದು ಬಾವಲಿ ಗಳು, ಒಂದಷ್ಟು ಶಿಕ್ಷಕರನ್ನು ವೇದಿಕೆಗೆ ಕರೆ ತಂದು ಹೊಗಳಿ ಹೊನ್ನಶೂಲಕ್ಕೆ ಏರಿಸಿ ಸನ್ಮಾನ. ಮರುದಿನದಿಂದ ಮತ್ತದೇ ರಾಗ, ಮತ್ತದೇ ಹಾಡು. ಶಿಕ್ಷಕರನ್ನು ಕೈ ಕಾಲು ಬಾಯಿ ಕಟ್ಟಿ ಹಾಕಿ ಪಾಠ ಮಾಡುವಂತೆ ಮಾಡುವುದು. ಶಿಕ್ಷಕರಿಗೆ ಶಾಲೆ ಯಲ್ಲಿ ಪಾಠಮಾಡುವುದೊಂದು ಬಿಟ್ಟು ಉಳಿದೆ ಜವಾಬ್ದಾರಿ ಹಂಚಿ ಕೈ ತೊಳೆದುಕೊಳ್ಳುವುದು.

ಜನಗಣತಿಯಿಂದ ಹಿಡಿದು ಚುನಾವಣಾ ಕರ್ತವ್ಯದ ವರೆಗೆ ಯಾವುದೇ ಸರಕಾರಿ ಕಾರ್ಯಕ್ರಮಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದು. ಯಾಕೆಂದರೆ ಅತೀ ಸುಲಭವಾಗಿ ಎಲ್ಲದಕ್ಕೂ ಸಿಗುವ ವ್ಯಕ್ತಿ ಗಳೆಂದರೆ ಅವರೇ ನಮ್ಮ ಶಿಕ್ಷಕರು. ಶಿಕ್ಷಣ ಸೊರಗದಿರಲು, ಶಿಕ್ಷಕ ಬಲಿಷ್ಠನಾಗಲು ಈ ಕೆಳಗಿನ ಅಂಶಗಳನ್ನು ಪಾಲಿಸಬೇಕಿದೆ.

ಇದನ್ನೂ ಓದಿ: Dr Murali Mohan Choontaru Column: ಸತ್ತ ಬಳಿಕವೂ ಬದುಕುವ ಆಸೆ ಇದೆಯಾ ?

1. ಶಿಕ್ಷಕರಿಗೆ ಸಂಪೂರ್ಣ ಅಧಿಕಾರ ಮತ್ತು ಸ್ವಾತಂತ್ರ್ಯ ನೀಡಬೇಕು. ಶಿಕ್ಷಕರಿಗೆ ಶಿಕ್ಷಿಸುವ ಅಧಿಕಾರ ಕೊಡಬೇಕು. ಒಬ್ಬ ಹುಡುಗ ಹುಡುಗಿಯನ್ನು ಚುಡಾಯಿಸಿದ ತಕ್ಷಣವೇ ಶಿಕ್ಷಕನಿಗೆ ಶಿಕ್ಷಿಸುವ ಅಧಿಕಾರ ನೀಡದಿದ್ದಲ್ಲಿ ನಾಳೆ ಅದೇ ಹುಡುಗ ಮುಂದೆ ಯುವಕನಾಗಿ ಸಮಾಜದಲ್ಲಿ ರೇಪ್, ಕೊಲೆ, ಸುಲಿಗೆ ಮಾಡುತ್ತಾನೆ.

2. ಶಿಕ್ಷಕರನ್ನು ಶಾಲೆಯ ಮೀಟಿಂಗ್‌ಳಿಗೆ, ಇತರ ಸರಕಾರಿ ಕರ್ತವ್ಯಗಳಾದ ಚುನಾವಣೆ, ಜನಗಣತಿ, ಬಿಸಿಯೂಟ ಹಾಗೂ ಆರೋಗ್ಯ ಜಾಗೃತಿ ಹಾಗೂ ಇನ್ನಿತರ ಕೆಲಸಗಳಿಗೆ ಬಳಸಬಾರದು ಅದಕ್ಕಾಗಿ ಬೇರೆಯೇ ಜನರನ್ನು ನೇಮಿಸಬೇಕು. ಶಿಕ್ಷಕರನ್ನು ಆದಷ್ಟು ಮಕ್ಕಳ ಜೊತೆ ಇರುವಂತೆ ಮಾಡಬೇಕು.

3. ಪಾಠ ಮತ್ತು ಇನ್ನಿತರ ಮೌಲ್ಯವರ್ಧಿಕ ಶಿಕ್ಷಣಗಳ ಪದ್ಧತಿಯಲ್ಲಿ ಶಿಕ್ಷಕರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಶಿಕ್ಷಕರ ಕೆಲಸದ ನಡುವೆ ಇತರರು ಮೂಗು ತೂರಿಸಬಾರದು. ಹೆತ್ತವರು, ಶಾಲಾ ಆಡಳಿತ ಮಂಡಳಿ ಮತ್ತು ಹೆತ್ತವರು, ಶಿಕ್ಷಕರ ಸಂಘದವರು ಯಾವುದೇ ಹಸ್ತಕ್ಷೇಪ ಮಾಡಲೇ ಬಾರದು.

4. ರಿಸಲ್ಟ್ ಆಧಾರಿತ ಶಿಕ್ಷಣಕ್ಕೆ ತಿಲಾಂಜಲಿ ಇಡಬೇಕು. ಮೌಲ್ಯ ಆಧಾರಿತ ನೈತಿಕ ಶಿಕ್ಷಣ ಮತ್ತು ಜೀವನ ಶಿಕ್ಷಣ, ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಇದನ್ನು ಬೋಧಿಸುವ ಶಿಕ್ಷಕರನ್ನು ನೇಮಕಮಾಡಬೇಕು.

5. ಶಾಲೆಗಳು ಚಂದ್ರಲೋಕಕ್ಕೆ ಅಥವಾ ಮಂಗಳ ಗ್ರಹಕ್ಕೆ ಹೋಗುವ ಇಂಜಿನಿಯರ್‌ಗಳನ್ನು ಸೃಷ್ಟಿಸ ಬೇಕಾಗಿಲ್ಲ. ಜಾತಿ, ಮತ, ಕುಲ, ಗೋತ್ರ ಮತ್ತು ಧರ್ಮದ ಗೋಡೆಗಳನ್ನು ದಾಟಿ ಮಾನವೀಯತೆಯ ಬದುಕನ್ನು ಬದುಕುವ ಸತ್ಪ್ರಜೆಗಳನ್ನು ಸೃಷ್ಟಿಸುವ ದೇವ ಮಂದಿರಗಳಾಗಬೇಕು.

6.ವಿದ್ಯಾರ್ಥಿಗಳ ಸಾಮಥ್ಯ ಮತ್ತು ದೌರ್ಬಲ್ಯಗಳು, ಆಸಕ್ತಿಗಳು ಮತ್ತು ನಿರಾಸಕ್ತಿಗಳನ್ನು ಗುರುತಿ ಸುವ ಸ್ಮಾರ್ಟ್ ಶಿಕ್ಷಕರ ಅವಶ್ಯಕತೆ ಇಂದು ಇದೆ. ಸ್ಮಾರ್ಟ್ ಕ್ಲಾಸ್ ಮಾತ್ರ ಇದ್ದರೆ ಸಾಲದು.

7.ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿ, ಸಾಮಥ್ಯ ಮತ್ತು ದೌರ್ಬಲ್ಯಗಳನ್ನು ಗಣನೆಗೆ ತೆಗೆದುಕೊಂಡು ಶಿಕ್ಷಕರು ಆ ಮಗುವಿನ ಆಸಕ್ತಿಯನ್ನು ಕೆರಳಿಸಿ, ಅರಳಿಸಿ ಆತನ ಅಭಿರುಚಿಯನ್ನು ಪೋಷಿಸಿ, ಬೆಳೆಸಿ, ಪ್ರೋತ್ಸಾಹಿಸಿ ದೇಶದ ಸತ್ಪ್ರಜೆಯನ್ನಾಗಿಸಬೇಕು. ಅಂತಹಾ ಶಿಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡ ಬೇಕು.

8.ಒಬ್ಬ ಉತ್ತಮ ಶಿಕ್ಷಕ ಹೃದಯದಿಂದ ಬೋಧಿಸುತ್ತಾನೆ, ಪುಸ್ತಕದಿಂದಲ್ಲ ಎಂಬ ಮಾತಿನಂತೆ ಶಿಕ್ಷಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಸಿಲೆಬಸ್‌ನಲ್ಲಿರುವುದನ್ನು ಬೋಧಿಸಬೇಕು, ರ್ಯಾಂಕ್'ಗೆ ಸೀಮಿತವಾದ ವಿಚಾರಗಳನ್ನು ಬೋಧಿಸಲಿ ಎಂಬ ಒತ್ತಡ ಶಿಕ್ಷಕರಿಗೆ ವಿಧಿಸಬಾರದು.

9.ಶಾಲಾ ಶಿಕ್ಷಕರಿಗೆ ಸಕಾಲದಲ್ಲಿ ವೇತನ ನೀಡಬೇಕು. ಅವರಿಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಬೇಕು ಆಗ ಮಾತ್ರ ಶಿಕ್ಷಕರಿಂದ ಪೂರ್ಣ ಪ್ರಮಾಣದ ಕಾರ್ಯಕ್ಷಮತೆ ನಿರೀಕ್ಷಿಸ ಬಹುದು. ಶಾಲಾ ಶಿಕ್ಷಕರನ್ನು ಹೆತ್ತವರು, ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ಪೋಷಕ ಸಂಘದ ಕಾಟದಿಂದ ಮುಕ್ತವಾಗಿಸಬೇಕು.

10.ಶಿಕ್ಷಕರಿಗೆ ಬರೀ ಕಲಿಸುವುದಷ್ಟೇ ಆಗಿರಲಿ, ಬೇರೆ ಯಾವ ಜವಾಬ್ದಾರಿ ಬೇಡವೇ ಬೇಡ. ಶಿಕ್ಷಕರನ್ನು ಬರೀ ಬೋಧನೆಗೆ ಮಾತ್ರ ಬಳಸುವಂತಾಗಬೇಕು.