ಜನಪಥ
2029ರ ಲೋಕಸಭೆ ಚುನಾವಣೆ ಗೆಲ್ಲಬೇಕೆಂದರೆ ಉತ್ತರಪ್ರದೇಶದಲ್ಲಿ ಬಿಜೆಪಿ ತನ್ನ ನೆಲೆಯನ್ನು ಮತ್ತೆ ಗಟ್ಟಿ ಮಾಡಿಕೊಳ್ಳಬೇಕು. 2024ರ ಲೋಕಸಭೆ ಚುನಾವಣೆ ಹಿನ್ನಡೆಯಿಂದಾಗಿ 2027ರ ಆರಂಭ ದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಕೇಸರಿಪಡೆಗೆ ನಿರ್ಣಾಯಕವಾಗಿದ್ದು, ಅಲ್ಲಿನ ಫಲಿತಾಂಶ ಭವಿಷ್ಯದ ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಿರಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ನೂತನ ತಂಡದಲ್ಲಿ ಉತ್ತರ ಪ್ರದೇಶ ಮೂಲದ 8 ಮಂದಿಗೆ ಪ್ರಮುಖ ಹುದ್ದೆಗಳು ಲಭಿಸಿದ್ದು, ಚುನಾವಣೆ ದೃಷ್ಟಿಯಿಂದಲೂ ಮಹತ್ವವೆನಿಸಿಕೊಳ್ಳಲಿದೆ.
ಬ್ರಾಹ್ಮಣ, ಒಬಿಸಿ, ದಲಿತ ಸಮುದಾಯಕ್ಕೆ ವಿಶೇಷ ಪ್ರಾಧಾನ್ಯತೆ ಸಿಕ್ಕಿದೆ. ಮಾಜಿ ಕೇಂದ್ರ ಸಚಿವೆ, ಅಮೇಥಿ ಲೋಕಸಭೆ ಕ್ಷೇತ್ರದ ಸ್ಮೃತಿ ಇರಾನಿ ಅವರೂ ಸಂಘಟನೆಗೆ ವಾಪಸಾಗಿದ್ದಾರೆ. ಮೂಲತಃ ದೆಹಲಿಯವರಾಗಿದ್ದರೂ, ಉ.ಪ್ರ.ದಲ್ಲಿ ರಾಜಕಾರಣದ ಭಾಗವಾಗಿರುವುದರಿಂದ ಇರಾನಿ ಮರು ಸೇರ್ಪಡೆ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.
ಯುಜಿಸಿಯ ಸಮಾನತೆ ನಿಯಮಾವಳಿಗಳು ಮೇಲ್ಜಾತಿಗಳ ಆಕ್ರೋಶಕ್ಕೆ ಕಾರಣವಾಗಿ, ಇದು ಉತ್ತರಪ್ರದೇಶ ಚುನಾವಣೆಯಲ್ಲೂ ಸದ್ದು ಮಾಡುವ ಸೂಚನೆಗಳಿವೆ. ಪೂರ್ವ ಉತ್ತರಪ್ರದೇಶದಲ್ಲಿ ಬ್ರಾಹ್ಮಣರು ಸೇರಿ ಮೇಲ್ಜಾತಿ ಸಮುದಾಯದ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು, ಈ ಭಾಗದ ಬಸ್ತಿ ಲೋಕಸಭೆಯ ಮಾಜಿ ಸಂಸದ, ಬ್ರಾಹ್ಮಣ ಸಮುದಾದಯದ ಹರೀಶ್ ದ್ವಿವೇದಿಯವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ಉಲ್ಲೇಖಾರ್ಹ.
ಮೇಲ್ಜಾತಿಗಳನ್ನು ಸಮಾಧಾನಪಡಿಸುವ ಜವಾಬ್ದಾರಿ ಇವರದ್ದಾಗಲಿದೆ. ಅದೇ ರೀತಿ, ಸಮಾಜವಾದಿ ಪಕ್ಷದ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ-ಪಿಡಿಎ) ರಾಜಕೀಯ ತಂತ್ರವನ್ನು ಎದುರಿಸಲು, ಬಿಜೆಪಿ ರಾಜ್ಯಸಭಾ ಸದಸ್ಯ ಅಮರಪಾಲ್ ಮೌರ್ಯ ಅವರನ್ನು ರಾಷ್ಟ್ರೀಯ ಒಬಿಸಿ ಮೋರ್ಚಾದ ಅಧ್ಯಕ್ಷ ರನ್ನಾಗಿ ನೇಮಕ ಮಾಡಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟದಿಂದ ಎದುರಾದ ಹಿನ್ನಡೆಯ ನಂತರ, ಒಬಿಸಿ ಸಮುದಾಯಗಳನ್ನು ಮತ್ತೆ ಸೆಳೆಯುವುದು ಬಿಜೆಪಿಯ ಉದ್ದೇಶ.
ಇದನ್ನೂ ಓದಿ: Raghava Sharma Nidle Column: ಉ.ಪ್ರ.ಚುನಾವಣೆ: ಕೇಸರಿಗೆ ಮೇಲ್ಜಾತಿ ಮುನಿಸಿನ ಚಿಂತೆ
ಎಲ್ಲಕ್ಕಿಂತ ಮುಖ್ಯವಾಗಿ, ಉತ್ತರಪ್ರದೇಶ ಚುನಾವಣೆ ಹೊಸ್ತಿಲಲ್ಲಿ ಗೃಹಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ತಮ್ಮ ಪರಮಾಪ್ತರನ್ನು ರಾಜ್ಯಕ್ಕೆ ಅಧಿಕೃತವಾಗಿ ಕಳುಹಿಸಿ ಕೊಟ್ಟಿದ್ದಾರೆ. ರಾಜ್ಯಕ್ಕೆ ಸಿಎಂ ಆಗಿ ಯೋಗಿ ಆದಿತ್ಯನಾಥ್ ಮುಂದಾಳತ್ವವಿದ್ದರೂ, ಮೋದಿ-ಶಾ ಇಬ್ಬರೂ ತಮ್ಮ ಆಪ್ತರ ಮೂಲಕ ದೆಹಲಿಯ ಕಣ್ಗಾವಲಿನ ರಾಜ್ಯ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ.
ಜೂನ್ ತಿಂಗಳಲ್ಲಿ ಉ.ಪ್ರ. ಬಿಜೆಪಿ ಘಟಕದ ಅಧ್ಯಕ್ಷ ಪಂಕಜ್ ಚೌಧುರಿ ಅವರ ತಂಡಕ್ಕೆ ಅಮಿತ್ ಶಾ ಆಪ್ತ ಹಾಗೂ ದೆಹಲಿಯಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಅಂಕುರ್ ಶರ್ಮರನ್ನು ಪಕ್ಷದ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯ್ತು. ಅಂಕುರ್ ಶರ್ಮ ದೆಹಲಿಗೆ ತಾಗಿಕೊಂಡಿರುವ ಪಶ್ಚಿಮ ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಪೂಠಾ ಗ್ರಾಮದವರು. ಶಾ ಜತೆಗಿದ್ದುದರಿಂದ ಪಕ್ಷದ ಪೊಲಿಟಿಕಲ್ ಕಾರಿಡಾರ್‌ನಲ್ಲಿ ಪ್ರಭಾವಿಯಾಗಿದ್ದರು. ಈಗ ಉ.ಪ್ರ. ರಾಜಕಾರಣಕ್ಕೆ ಪ್ರವೇಶಿಸುತ್ತಲೇ ರಾಜ್ಯ ಕಾರ್ಯದರ್ಶಿಯಂತಹ (ಪ್ರದೇಶ ಮಂತ್ರಿ) ಪ್ರಮುಖ ಹುದ್ದೆ ಲಭಿಸಿದ್ದು, ಅನೇಕರ ಹುಬ್ಬೇರಿಸಿದ್ದು ಸುಳ್ಳಲ್ಲ.
ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಕ್ಕರೂ ಅಚ್ಚರಿ ಇಲ್ಲ. ಅಂಕುರ್ ಶರ್ಮ ಬಳಿಕ ಇದೀಗ ಪ್ರಧಾನಿ ಮೋದಿ ಅವರ ಆಪ್ತ, 2024ರ ವಾರಾಣಸಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಚುನಾವಣೆ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಗುಜರಾತ್ ಮೂಲದ ಜಗದೀಶ್ ಈಶ್ವರಭಾಯ್ ಪಟೇಲ್‌ರನ್ನು ಉತ್ತರಪ್ರದೇಶದ ಸಹ-ಉಸ್ತುವಾರಿಯನ್ನಾಗಿ ನೇಮಿಸ ಲಾಗಿದೆ.
ಕಳೆದ 3 ವರ್ಷಗಳಿಂದ ಉತ್ತರಪ್ರದೇಶದಲ್ಲಿ ಓಡಾಡುತ್ತಿದ್ದ ಜಗದೀಶ್ ಪಟೇಲ್‌ಗೆ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಮಾರನೇ ದಿನವೇ ಉತ್ತರಪ್ರದೇಶದಲ್ಲಿ ಮಹತ್ತರ ಜವಾಬ್ದಾರಿ ನೀಡಲಾಗಿದೆ. ಮಹಾರಾಷ್ಟ್ರ ಮೂಲದ ಹಿರಿಯ ನಾಯಕ, ರಾಜ್ಯಸಭೆ ಸದಸ್ಯ ವಿನೋದ್ ತಾವಡೆ ಉ.ಪ್ರ. ಉಸ್ತುವಾರಿಯಾಗಿದ್ದಾರೆ.
ಒಟ್ಟಿನಲ್ಲಿ, ಮೋದಿ-ಶಾ ಇಬ್ಬರೂ ತಮ್ಮ ಆಪ್ತರನ್ನು ಉ.ಪ್ರ.ಕ್ಕೆ ಅಧಿಕೃತವಾಗಿ ಕಳುಹಿಸಿಕೊಟ್ಟಿರು ವುದು ಸಿಎಂ ಯೋಗಿಗೆ ಎಷ್ಟರಮಟ್ಟಿಗೆ ಸಹಕಾರಿಯಾಗಲಿದೆ ಎನ್ನುವುದು ಕುತೂಹಲ. 2024ರ ಲೋಕಸಭೆ ಚುನಾವಣೆ ಹಿನ್ನಡೆಗೆ ಉತ್ತರಪ್ರದೇಶದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಗೃಹಸಚಿವ ಅಮಿತ್ ಶಾ ನಡುವಿನ ಭಿನ್ನಾಭಿಪ್ರಾಯಗಳೂ ಕಾರಣವಾಗಿತ್ತೆನ್ನು ವುದು ಗುಟ್ಟಾಗಿ ಉಳಿದಿಲ್ಲ.
ವಿಧಾನಸಭೆ ಹೊಸ್ತಿಲಲ್ಲಿ ಅವರಿಬ್ಬರ ನಡುವೆ ಹೊಂದಾಣಿಕೆ ಮೂಡಿದೆಯೇ ಇಲ್ಲವೇ ಎಂಬ ಖಚಿತತೆ ಇಲ್ಲ. ಕೆಲ ದಿನಗಳ ಹಿಂದೆ ಯೋಗಿ ಆದಿತ್ಯನಾಥ್ ಅವರು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಮುಂದಿನ ಚುನಾವಣೆ ಗೆಲುವಿನ ದೃಷ್ಟಿಯಿಂದ ಯೋಗಿ-ಶಾ ನಡುವಿನ ಒಮ್ಮತ ಪಕ್ಷಕ್ಕೆ ಮುಖ್ಯವಾಗಿದ್ದು, ಮೋದಿ-ಯೋಗಿ ಭೇಟಿ ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ.
ಸಂಚಲನ ಸೃಷ್ಟಿಸಲಿಲ್ಲವೇ?
ಸಿಜೆಪಿಯ ಜಂತರ್ ಮಂತರ್ ಹೋರಾಟ, ಜೆನ್-ಝೀ ಚಿಂತನೆಗಳು, ಬಾಂಕಿಪುರ ಉಪಚುನಾವಣೆ ಸೋಲಿನ ನಂತರ ಬಿಜೆಪಿಯ ತನ್ನ ಸಂಘಟನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆ ಹಲವರಲ್ಲಿತ್ತು. ಆದರೆ, ಕಾರ್ಯಕರ್ತ ವರ್ಗದಲ್ಲಿ ಸಂಚಲನ ಸೃಷ್ಟಿಸಬಲ್ಲ ಮುಖ ಗಳು ಹೊಸ ತಂಡದಲ್ಲಿ ಕಾಣುತ್ತಿಲ್ಲ ಎಂದು ಬಿಜೆಪಿಯ ಹಲವರಿಗೆ ಅನ್ನಿಸತೊಡಗಿದೆ. ಆದರೂ, ಹೈಕಮಾಂಡ್ ನಿರ್ಧಾರ ಒಪ್ಪುವುದು ಅನಿವಾರ್ಯ.
ಕರ್ನಾಟಕದಿಂದ ಯಾರಾದರೂ ಯುವಕರು ರಾಷ್ಟ್ರೀಯ ತಂಡಕ್ಕೆ ಸೇರಬಹುದು ಎಂಬ ಸಹಜ ನಿರೀಕ್ಷೆಗಳೂ ಇದ್ದವು. ಆದರೆ, ರಾಜ್ಯಸಭೆ ಸಂಸದ ಪ್ರೊ. ನಾಗರಾಜ್ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ನಿರ್ಧಾರದ ಹಿಂದಿನ ಉದ್ದೇಶ ರಾಜ್ಯದ ಹಲವು ನಾಯಕರಿಗೆ ಇನ್ನೂ ಅರ್ಥವಾಗಿಲ್ಲ. ನಾಗರಾಜ್ ಅವರು ಕುರುಬ ಸಮುದಾಯಕ್ಕೆ ಸೇರಿದ್ದು, ಸಂಘಟನೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿರಬಹುದು.
ಆದರೆ, ಸಮುದಾಯದ ಜನಪ್ರಿಯ ನಾಯಕರೇನೂ ಅಲ್ಲ. ಬಿಜೆಪಿಯಲ್ಲಿ ಹತ್ತಾರು ವರ್ಷಗಳಿದ್ದು, ಮಾಜಿ ಸಚಿವ, ಕೆ.ಎಸ್.ಈಶ್ವರಪ್ಪರಿಗೆ ಕಾಂಗ್ರೆಸ್ನ ಸಿದ್ದರಾಮಯ್ಯರಂತೆ ಕುರುಬ ಸಮುದಾಯದ ಜನಪ್ರಿಯ ನಾಯಕ ಆಗಲು ಸಾಧ್ಯವಾಗಲಿಲ್ಲ. ಹೀಗಿದ್ದಾಗ, ನಾಗರಾಜ್ ನೇಮಕದ ಲೆಕ್ಕಾಚಾರ ಏನು ಎನ್ನುವುದು ಅನೇಕರ ಪ್ರಶ್ನೆ. ಬಿಜೆಪಿ ಸಂಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹೆಚ್ಚು ಮಹತ್ವ ಮತ್ತು ಜವಾಬ್ದಾರಿಯಿರುತ್ತದೆ. ಆದರೂ, perception ಮತ್ತು ನರೇಟಿವ್‌ಗಳನ್ನು ರೂಪಿಸಲು ರಾಷ್ಟ್ರೀಯ ಉಪಾಧ್ಯಕ್ಷರಂತಹ ಹುದ್ದೆಗಳಿಗೆ ರಾಜಕೀಯ ಪಕ್ಷಗಳು ಯಾರನ್ನು ಆಯ್ಕೆ ಮಾಡುತ್ತವೆ ಎನ್ನುವು ದೂ ಮುಖ್ಯವಾಗುತ್ತದೆ.
ಪ್ರಧಾನ್ ರಾಜೀನಾಮೆಯ ಅಸಲಿಯತ್ತು
ಗುಜರಾತಿನಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಹತ್ತಾರು ಸವಾಲುಗಳ ಏಣಿ ಏರಿ ಬಂದ ಮೋದಿ-ಶಾ ಜೋಡಿಗೆ ಜಂತರ್ ಮಂತರ್‌ನಲ್ಲಿ ಯುವಕರ ಬೆವರಿಳಿಸಿದ್ದು ಈಗ ಇತಿಹಾಸವಾಗಿದ್ದರೂ, ದೇಶದ ಯುವವರ್ಗ ಇಡೀ ಸರ್ಕಾರದ ಬಾಡಿ ಲ್ಯಾಂಗ್ವೇಜ್ ಬದಲಾಯಿಸಿದ್ದು ಸುಳ್ಳಲ್ಲ.
ನೀಟ್ ಸೋರಿಕೆ ವಿಚಾರದಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದುಕೊಳ್ಳುವ ಉದ್ದೇಶ ಮೋದಿ-ಶಾ ಇಬ್ಬರಿಗೂ ಇರಲಿಲ್ಲ. ಆದರೆ ಜಂತರ್ ಮಂತರ್ ಹೋರಾಟಕ್ಕೆ ತಮ್ಮದೇ ಪಕ್ಷದ ನಾಯಕರು, ಶಾಸಕರು, ಸಂಸದರು, ವಿಪಕ್ಷಗಳ ಸಂಸದರು, ಅಽಕಾರಿ ವರ್ಗ, ಸೇನಾಧಿಕಾರಿಗಳ ಮಕ್ಕಳು ಬೆಂಬಲ ನೀಡುತ್ತಿzರೆ ಮತ್ತು ಜಂತರ್ ಮಂತರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭ್ಯವಾದಾಗ ಪರಿಸ್ಥಿತಿ ಕೈಮೀರುತ್ತಿದೆ ಎನ್ನುವುದು ಮೋದಿ-ಶಾ ಅರಿವಿಗೆ ಬಂತು.
ಇನ್ನು ಪ್ರಧಾನ್ ತಲೆದಂಡ ಮಾಡುವ ನಿರ್ಣಾಯಕ ಕ್ರಮ ಕೈಗೊಳ್ಳದಿದ್ದರೆ ದೇಶಾದ್ಯಂತ ಯುವಕರ ಆಕ್ರೋಶ ಹೆಚ್ಚಾಗಲಿದೆ ಎಂದೇ ಪ್ರಧಾನ್ ಜತೆ ಚರ್ಚಿಸಿ ರಾಜೀನಾಮೆ ಪಡೆದುಕೊಳ್ಳಲಾಯಿತಂತೆ. ಒಡಿಶಾ ಮೂಲದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಪುತ್ರಿ ಅರ್ಚಿತಾ ಸಾರಂಗಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಜಂತರ್ ಮಂತರ್ ಹೋರಾಟಗಾರರಿಗೆ ಬೆಂಬಲ ಘೋಷಿಸಿದ್ದು ಕೇವಲ ಒಂದು ಉದಾಹರಣೆಯಷ್ಟೇ. ಇಂತಹ ಆಯಕಟ್ಟಿನ ಹುದ್ದೆಯಲ್ಲಿದ್ದ ಹಲವು ಗಣ್ಯವ್ಯಕ್ತಿಗಳ ಮಕ್ಕಳೂ ಸಿಜೆಪಿಯ ಬೆಂಬಲಕ್ಕೆ ನಿಂತು, ನೀಟ್ ಪೇಪರ್ ಲೀಕ್ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಪರಿಣಾಮ 12 ವರ್ಷದಲ್ಲಿ ಮೊದಲ ಬಾರಿಗೆ ಮೋದಿ ನೇತೃತ್ವದ ಸರ್ಕಾರ ಹೋರಾಟವೊಂದಕ್ಕೆ ತಲೆಬಾಗಿದ ಘಟನೆಗೆ ದೇಶ ಸಾಕ್ಷಿಯಾಯಿತು.
ಚಂದಾ ಚೋರಿಯ ಸವಾಲು ಅಯೋಧ್ಯೆ ರಾಮಮಂದಿರ ನಿರ್ಮಾಣ ಎನ್ನುವುದು ಬಿಜೆಪಿಯನ್ನು ರಾಜಕೀಯವಾಗಿ ಬೆಳೆಸಿದ ವಿಚಾರಗಳಂದು. ಮಂದಿರ ನಿರ್ಮಾಣ ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡಿದ್ದನ್ನು ಬಹುಪಾಲು ಜನ ಒಪ್ಪಿಕೊಂಡಿzರೆ ಮತ್ತು ಮತಗಳನ್ನೂ ಹಾಕಿzರೆ. ಆದರೆ, ರಾಮಮಂದಿರದ ಹುಂಡಿ ಹಣ ಕದ್ದ ವಿಚಾರ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ರಾಜಕೀಯವಾಗಿ ಹಾನಿ ಮಾಡುವ ಆತಂಕ ಉ.ಪ್ರ. ಕೇಸರಿ ಪಾಳೆಯದಲ್ಲಿ ಕಂಡುಬರುತ್ತಿರುವುದು ಪಕ್ಷದ ಮಟ್ಟಿಗೆ ಸವಾಲಿನ ಬೆಳವಣಿಗೆ.
ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ತಮ್ಮ ವರ್ಚಸ್ಸು ಹಾಗೂ ಕಾರ್ಯಗಳ ಮೂಲಕ ಜನಪ್ರಿಯತೆ ಉಳಿಸಿಕೊಂಡಿದ್ದರೂ, ಚಂದಾ-ಚೋರಿ ಪ್ರಕರಣ ವಿಪಕ್ಷಗಳ ಪ್ರಬಲ ಪೊಲಿಟಿಕಲ್ ನರೇಟಿವ್ ಆಗುತ್ತಿರುವುದು ಮತ್ತು ಗ್ರಾಮೀಣ ಭಾಗಗಳಲ್ಲೂ ರಾಮ ದುಡ್ಡನ್ನು ಕದ್ದರಲ್ಲ ಎಂಬ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಲು ಕಾರ್ಯಕರ್ತರು, ಬೆಂಬಲಿಗರಿಗೆ ಸಾಧ್ಯವಾಗುತ್ತಿಲ್ಲ. ಪೂರ್ವ ಉತ್ತರ ಪ್ರದೇಶದ ಗ್ರಾಮೀಣ ಪತ್ರಕರ್ತರೊಬ್ಬರೊಂದಿಗೆ ನಾನು ಈ ವಿಷಯದ ಬಗ್ಗೆ ಕೇಳಿದಾಗ, ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡುವುದು ಬಿಜೆಪಿ ಕಷ್ಟವಾಗಲಿದೆ.
ಚುನಾವಣೆ ಬಂದಾಗ ಸ್ಪಷ್ಟ ಚಿತ್ರಣ ಸಿಗಲಿದೆ ಎಂದೇ ಹೇಳಿದರು. ಅಯೋಧ್ಯೆಯಲ್ಲಿ ಪರಿಚಯ ವಿದ್ದ ವ್ಯಾಪಾರಿಯೊಬ್ಬರ ಬಳಿ ಮಾತನಾಡಿದಾಗಲೂ, ರಾಮಮಂದಿರದ ಹುಂಡಿಗೆ ಹಣ ಹಾಕಲು ಭಕ್ತರು ಹಿಂದೇಟು ಹಾಕುತ್ತಿರುವ ಬಗ್ಗೆ ಕೆಲವರು ಮಾತಾಡ್ತಾ ಇದ್ದಾರೆ ಸಾಬ್. ಉನ್ ಲೋಗೋ ನೇ ರಾಮ್ ಕೆ ನಾಮ್ ಪರ್ ಗಲತ್ ಕಾಮ್ ಕಿಯಾ ಸಾಬ್ ಎಂದು ಬೇಸರ ಹೊರಹಾಕಿದರು. ಹಲವು ಚುನಾವಣೆಗಳಲ್ಲಿ ದೇಶದೆಡೆ ಕೇಸರಿಪಡೆಗೆ ಮತಗಳ ಗೊಂಚಲನ್ನೇ ತಂದುಕೊಡುತ್ತಿದ್ದ ಭಗವಾನ್ ಶ್ರೀರಾಮ, 2027ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಏನು ಮಾಡಿಯಾನು? ಕಾದು ನೋಡೋಣ.
ಸಂಸತ್ತಿನಲ್ಲಿ ವಿರೋಧಿಸಲಿಲ್ಲವೇಕೆ? ವಂದೇ ಮಾತರಂ ಗೀತೆಯ ಎಲ್ಲಾ ಪಂಕ್ತಿಗಳನ್ನು ಹಾಡಬೇಕೆಂದು ಕೇಂದ್ರ ಸರ್ಕಾರ ಹೊಸ ತಿದ್ದುಪಡಿ ಕಾನೂನಿನ ಮೂಲಕ ಕಡ್ಡಾಯಗೊಳಿಸಿ ದ್ದರೂ, ಸ್ವಾತಂತ್ರ್ಯ ದಿನದಂದು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಅಧಿನಾಯಕಿ ಸೋನಿಯಾ ಗಾಂಈ ಅವರು ವಂದೇ ಮಾತರಂನ ಎಲ್ಲಾ ಪಂಕ್ತಿಗಳನ್ನು ಹಾಡಲು ಮುಂದಾದವರ ವಿರುದ್ಧ ಅಸಮಾಧಾನಗೊಂಡದ್ದಲ್ಲದೆ, ಅತ್ತಿಂದಿತ್ತ ತೆರಳಿ ವಿಚಲಿತಗೊಂಡವರಂತೆ ವರ್ತಿಸಿದರು. ಅವರಿಗೆ ನಿಂತಲ್ಲಿ ನಿಲ್ಲಲಾಗಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕಾಲು ಅಲುಗಾಡುತ್ತಿದ್ದು ದರಿಂದ ಅವರಿಗೆ ಕುರ್ಚಿ ಹಾಕಲು ಸೋನಿಯಾ ಸನ್ನೆ ಮಾಡುತ್ತಿದ್ದರು ಎಂದು ಪಕ್ಷದಿಂದ ಸ್ಪಷ್ಟನೆ ನೀಡಲಾಯಿತು. ಆದರೆ, ವಾಸ್ತವದಲ್ಲಿ ಅದು ವಂದೇ ಮಾತರಂಗೆ ಸಂಬಂಧಿಸಿದ್ದೇ ಆಗಿತ್ತು ಎನ್ನುವುದು ವಿಡಿಯೋ ಗಮನಿಸಿದರೆ ಸ್ಪಷ್ಟವಾಗುತ್ತದೆ.
ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಬರೆದ ವಂದೇ ಮಾತರಂನ 2 ಪಂಕ್ತಿಗಳನ್ನು ಮಾತ್ರ ಹಾಡುವ ಬಗ್ಗೆ 1937ರಲ್ಲಿ ಕಾಂಗ್ರೆಸ್ ಪಕ್ಷ ನಿರ್ಣಯ ಮಾಡಿದ್ದರೂ, ಈಗಿನ ಹೊಸ ತಿದ್ದುಪಡಿ ಕಾನೂನು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಹೀಗಾಗಿ, ಕಾಂಗ್ರೆಸ್ ಕಚೇರಿಯಗಲೀ ಅಥವಾ ಯಾವುದೇ ಸಾರ್ವಜನಿಕ ಸ್ಥಳದಗಲೀ ವಂದೇ ಮಾತರಂನ ಎಲ್ಲಾ ಪಂಕ್ತಿಗಳನ್ನು ಹಾಡಲೇಬೇಕು. ಅದಕ್ಕೆ ಅಗೌರವ ತೋರುವುದು ಜೈಲು ಶಿಕ್ಷೆಗೆ ಕಾರಣವಾಗಲಿದೆ.
2026ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ವಿಧೇಯಕವು 1971ರ ಕಾಯ್ದೆಯ 3ನೇ ನಿಯಮಕ್ಕೆ ತಿದ್ದುಪಡಿ ತಂದಿರುವುದರಿಂದ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ನೀಡಲಾಗಿರುವ ಕಾನೂನುಬದ್ಧ ರಕ್ಷಣೆ ಮತ್ತು ಗೌರವವನ್ನು ರಾಷ್ಟ್ರಗಾನ ‘ವಂದೇ ಮಾತರಂ’ಗೂ ವಿಸ್ತರಿಸಲಾಗಿದೆ.
ಈ ವಿಧೇಯಕ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಳ್ಳುವ ಮುನ್ನ ತನ್ನ ವಿರೋಧವನ್ನು ಅಧಿಕೃತವಾಗಿ ಮಂಡಿಸದೆ ಸುಮ್ಮನೆ ಕೂತ ಕಾಂಗ್ರೆಸ್ಸಿಗರು, ಈಗ ಬೀದಿಯಲ್ಲಿ ನಿಂತು, ನಾವು ಎರಡೇ ಪಂಕ್ತಿಗಳನ್ನು ಹಾಡುತ್ತೇವೆ ಎಂದು ಕೂಗಾಡುತ್ತಾ ಅವಿವೇಕಿಗಳಂತೆ ವರ್ತಿಸುತ್ತಿzರೆ. ಈ ಬೆಳವಣಿಗೆ ಸೋನಿಯಾ ಗಾಂಧಿಯವರ ಮೂಲವನ್ನು ಪ್ರಶ್ನಿಸುವವರಿಗೆ ಮತ್ತಷ್ಟು ಆಹಾರ ನೀಡಿದ್ದಲ್ಲದೆ, ಕಾಂಗ್ರೆಸ್ ಅನ್ನೂ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಿದೆ.