ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಕೆ. ರಾಘವ ಶರ್ಮ ನಿಡ್ಲೆ

ಅಂಕಣಕಾರ, ವಿಶೇ಼ಷ ಭಾತ್ಮೀದಾರ

[email protected]

ರಾಘವ ಶರ್ಮ ನಿಡ್ಲೆ ಅವರು ರಾಜಧಾನಿ ದೆಹಲಿಯಲ್ಲಿ 18 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ದ ಸಂಡೇ ಇಂಡಿಯನ್ ಸುದ್ದಿ ವಾರ ಪತ್ರಿಕೆಗೆ ದೆಹಲಿಯಲ್ಲಿ 2007ರಿಂದ 3 ವರ್ಷ, ಜನಶ್ರೀ ಕನ್ನಡ ಸುದ್ದಿ ವಾಹಿನಿಯಲ್ಲಿ 2 ವರ್ಷ ಮತ್ತು ವಿಜಯವಾಣಿ ದಿನಪತ್ರಿಕೆಗೆ ದೆಹಲಿ ವಿಶೇಷ ಪ್ರತಿನಿಧಿಯಾಗಿ 2012ರಿಂದ 2025ರ ತನಕ ಕಾರ್ಯನಿರ್ವಹಿಸಿದ್ದಾರೆ. 2017ರಿಂದ 2023ರ ತನಕ ವಿಜಯವಾಣಿ ಸೋದರ ಸಂಸ್ಥೆ ದಿಗ್ವಿಜಯ ಸುದ್ದಿ ವಾಹಿನಿಗೂ ವಿಶೇಷ ಪ್ರತಿನಿಧಿ ಆಗಿದ್ದರು 2014, 2019, 2024ರ ಲೋಕಸಭೆ ಚುನಾವಣೆ, ಹಾಗೇ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪ್ರತ್ಯಕ್ಷ ವರದಿ ಮಾಡಿದ ಅನುಭವ ಹೊಂದಿರುವ ಅವರು, ಹತ್ತು ಹಲವು ಕೇಸುಗಳ ಸುಪ್ರೀಂಕೋರ್ಟ್ ಕಲಾಪಗಳ ಬಗ್ಗೆಯೂ ವರದಿ, ವಿಶ್ಲೇಷಣೆಗಳನ್ನು ಮಾಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್ ನ ಸಂಪಾದಕೀಯ ಸಲಹೆಗಾರ ರಾಗಿ ಕೆಲಸ ಮಾಡುತ್ತಿರುವ ಜತೆಗೆ ವಿಶ್ವವಾಣಿ ಪತ್ರಿಕೆಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ವರದಿ, ವಿಶ್ಲೇಷಣೆ, ಲೇಖನಗಳನ್ನು ಬರೆಯುತ್ತಿದ್ದಾರೆ.

Articles
Raghava Sharma Nidle Column: ವೋಟ್ ಚೋರಿ ಅಸ್ತ್ರವೂ, ರಾಜಕೀಯ ಲೆಕ್ಕವೂ

ವೋಟ್ ಚೋರಿ ಅಸ್ತ್ರವೂ, ರಾಜಕೀಯ ಲೆಕ್ಕವೂ

ರಾಹುಲ್ ಗಾಂಧಿ ಮತ್ತು ಇಂಡಿ ಒಕ್ಕೂಟದ ನಾಯಕರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟಿಸಲು, ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಲು ಮತ್ತು ಈ ವಿಚಾರದಲ್ಲಿ ನ್ಯಾಯಾಂಗದ ಮಧ್ಯಪ್ರವೇಶಕ್ಕಾಗಿ ಸುಪ್ರೀಂ ಕೋರ್ಟ್‌ಗೆ ತೆರಳಿದ್ದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಸಮಯ ಕೇಳಿದ್ದರು. ಆದರೆ, ಅದಕ್ಕೆ ಅವರು ಒಪ್ಪಿರಲಿಲ್ಲ

Raghava Sharma Nidle Column: ಅಖಿಲೇಶ್‌ ಗೆಲುವಿಗೆ ಯೋಗಿ ಬ್ರ್ಯಾಂಡ್‌ʼನದೇ ಸವಾಲು

ಅಖಿಲೇಶ್‌ ಗೆಲುವಿಗೆ ಯೋಗಿ ಬ್ರ್ಯಾಂಡ್‌ʼನದೇ ಸವಾಲು

ಕಳೆದ 10 ವರ್ಷಗಳಿಂದ ವಿಪಕ್ಷ ಸ್ಥಾನದಲ್ಲಿ ಕುಳಿತಿರುವ ಅಖಿಲೇಶ್ ಯಾದವ್‌ಗೆ ರಾಜ್ಯದಲ್ಲಿ ತಮ್ಮ ರಾಜಕೀಯ ಭವಿಷ್ಯ ಬಿಗಿಗೊಳಿಸುವ ದೃಷ್ಟಿಯಿಂದ ಅಧಿಪತ್ಯವನ್ನು ಮರುಸ್ಥಾಪಿಸುವುದು ಅನಿ ವಾರ್ಯ. ಇಲ್ಲವಾದಲ್ಲಿ, ಸಮಾಜವಾದಿ ಪಕ್ಷದೊಳಗೇ ಅವರ ನಾಯಕತ್ವ ಮತ್ತು ಸಾಮರ್ಥ್ಯ ಪ್ರಶ್ನಿಸುವ ಧ್ವನಿಗಳು ಹೆಚ್ಚಾಗಲಿವೆ.

Raghava Sharma Nidle Column: ತುಳು ಅಸ್ತ್ರ: ಡಿಕೆಶಿ ಹೊಸ ರಾಜಕೀಯ ಲೆಕ್ಕಾಚಾರ ?

ತುಳು ಅಸ್ತ್ರ: ಡಿಕೆಶಿ ಹೊಸ ರಾಜಕೀಯ ಲೆಕ್ಕಾಚಾರ ?

ಸೆ.18ರಂದು ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವಿಗೆ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಲು ನಿರ್ಧರಿಸಲಾಯಿತು. ಇದರ ಜತೆಗೆ ಮಂಗಳೂರಿನ ಮೀನುಗಾರಿಕಾ ದಕ್ಕೆಗೆ ಮುಖ್ಯಮಂತ್ರಿ ಸ್ವತಃ ಭೇಟಿ ನೀಡಿ ಮೀನುಗಾರರು, ಕಾರ್ಮಿಕರು, ಮಹಿಳೆಯರು ಮತ್ತು ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿರುವುದು ರಾಜಕೀಯವಾಗಿ ಮತ್ತೊಂದು ಗಮನಾರ್ಹ ಹೆಜ್ಜೆ.

Raghava Sharma Nidle Column: ಮೋದಿ ಬಿಡಿ, ನಿಮ್ಮ ಪರ್ಯಾಯ ಮಾದರಿ ಏನು ರಾಹುಲ್‌ ?

ಮೋದಿ ಬಿಡಿ, ನಿಮ್ಮ ಪರ್ಯಾಯ ಮಾದರಿ ಏನು ರಾಹುಲ್‌ ?

ಮೋದಿ ವಿರುದ್ಧ ಯಾರು? ಎಂಬ ಪ್ರಶ್ನೆಯ ಜೊತೆಗೆ ಮೋದಿ ನಂತರ ಏನು? ಎಂಬ ಪ್ರಶ್ನೆಗೂ ಉತ್ತರ ನೀಡಬೇಕಾಗುತ್ತದೆ. ಇಲ್ಲಿಯೇ ರಾಹುಲ್ ಗಾಂಧಿಯವರ ಇತ್ತೀಚಿನ ರಾಜಕೀಯ ಶೈಲಿಯ ಬಗ್ಗೆ ಚರ್ಚೆ ಮುಖ್ಯವಾಗುತ್ತದೆ. ಇಂದೋರ್‌ನಲ್ಲಿ ಕೆಲ ದಿನಗಳ ಹಿಂದೆ ನಡೆದ ಛಾತ್ರೋ ಕೀ ಗೂಂಜ್‌ʼನಲ್ಲಿ ಅವರು ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ, ದೇಶಕ್ಕಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಶತ್ರುರಾಷ್ಟ್ರ ಪಾಕಿಸ್ತಾನ ದಲ್ಲಿ ಎಷ್ಟೋ ವರ್ಷಗಳ ಕಾಲ ಗೂಢಚರ್ಯೆ ಕೆಲಸ ಮಾಡಿದ್ದ ಅಜಿತ್ ದೋವಲ್‌ರನ್ನು ತಮ್ಮ ರಾಜಕೀಯ ಲಾಭಕ್ಕೆ ಎಳೆದು ತಂದದ್ದು ವ್ಯಾಪಕ ಟೀಕೆಗೆ ಗ್ರಾಸವಾಯಿತು.

Raghava Sharma Nidle Column: ಪಂಜಾಬ್‌ʼನಲ್ಲಿ ಬಿಜೆಪಿಗೆ ಸ್ವತಂತ್ರ ನೆಲೆ ಸಾಧ್ಯವೇ ?

ಪಂಜಾಬ್‌ʼನಲ್ಲಿ ಬಿಜೆಪಿಗೆ ಸ್ವತಂತ್ರ ನೆಲೆ ಸಾಧ್ಯವೇ ?

ಒಂದು ವೇಳೆ ಬಿಜೆಪಿ-ಅಕಾಲಿದಳ ಮೈತ್ರಿಯಾದರೆ ಈ ಸಲ ಚತುಷ್ಕೋನ ಚುನಾವಣಾ ಸ್ಪರ್ಧೆಗೆ ಪಂಜಾಬ್ ಸಾಕ್ಷಿಯಾಗಲಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶಗೊಂಡು 2020 ರಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಶಿರೋಮಣಿ ಅಕಾಲಿದಳ ಹೊರ ನಡೆದ ನಂತರ ಉಭಯ ಪಕ್ಷಗಳು ರಾಜ್ಯದಲ್ಲಿ ಸ್ವತಂತ್ರ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿವೆ.

B Y Vijayendra Interview: ಸವಾಲು, ಗೊಂದಲ ಮೀರಿ 2028ರಲ್ಲಿ ಬಿಜೆಪಿಗೇ ಅಧಿಕಾರ

ಸವಾಲು, ಗೊಂದಲ ಮೀರಿ 2028ರಲ್ಲಿ ಬಿಜೆಪಿಗೇ ಅಧಿಕಾರ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ(B Y Vijayendra) ನೇತೃತ್ವ ದಲ್ಲಿ ಬಳ್ಳಾರಿ ಚಲೊ ಪಾದ ಯಾತ್ರೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಸರಕಾರದ ವೈಫಲ್ಯ, ಭ್ರಷ್ಟಾಚಾರ ಆರೋಪಗಳು, ರೈತರ ಸಮಸ್ಯೆ, ಬರ ಪರಿಸ್ಥಿತಿ, ಅಭಿವೃದ್ಧಿ ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ನಡಿಗೆಗೆ ಭಾರೀ ಜನಸ್ಪಂದನೆ ವ್ಯಕ್ತ ಆಗಿದೆ.

Raghava Sharma Nidle Column: ವಿಜಯೇಂದ್ರ ಬ್ರ್ಯಾಂಡ್ ಮೌಲ್ಯ ವೃದ್ಧಿಸುವುದೇ ಪಾದಯಾತ್ರೆ?

ವಿಜಯೇಂದ್ರ ಬ್ರ್ಯಾಂಡ್ ಮೌಲ್ಯ ವೃದ್ಧಿಸುವುದೇ ಪಾದಯಾತ್ರೆ?

ಪಾದಯಾತ್ರೆಯ ಆರಂಭದ ದಿನದಲ್ಲಿ ಕಾಣಿಸಿಕೊಂಡ ಕೆಲ ಬಿಜೆಪಿ ನಾಯಕರು ಈ ಝಳಪಿನ ಬಿಸಿಲಿನ ಮಧ್ಯೆ ನಡೆಯುವುದು ಸಾಧ್ಯವಿಲ್ಲಪ್ಪ ಎಂದು ಬೆಂಗಳೂರಿಗೆ ವಾಪಸಾಗಿದ್ದಾರೆ. ಮತ್ತೆ ಕೆಲವರು ತಮ್ಮ ಇರುವಿಕೆಯನ್ನು 2 ದಿನಕ್ಕೆ ಸೀಮಿತಗೊಳಿಸಿ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಮಾಜಿ ಸಚಿವ, ಹಿರಿಯ ನಾಯಕ ಸಿ.ಟಿ. ರವಿ ಪಾದಯಾತ್ರೆಯಲ್ಲಿ ಅಧ್ಯಕ್ಷ ವಿಜಯೇಂದ್ರರಿಗೆ ಸಾಥ್ ನೀಡಿ ಹೆಜ್ಜೆ ಹಾಕುತ್ತಿರುವುದು ಗಮನಾರ್ಹ ಬೆಳವಣಿಗೆ.

Raghava Sharma Nidle Column: ಮೀಸಲಾತಿ ನೀತಿ ಲೋಪ: ಸುಧಾರಣೆ ಬರೀ ಕನಸು ?

ಮೀಸಲಾತಿ ನೀತಿ ಲೋಪ: ಸುಧಾರಣೆ ಬರೀ ಕನಸು ?

ದೇಶದ ಮೀಸಲಾತಿ ನೀತಿಯಲ್ಲಿ ತಿದ್ದುಪಡಿಗಳಾಗಬೇಕು. ಅರ್ಹ, ಪ್ರತಿಭಾನ್ವಿತರು ಅವಕಾಶ ವಂಚಿತ ರಾಗುತ್ತಿದ್ದಾರೆ ಎಂಬ ಕೂಗು ಇಂದು ನಿನ್ನೆಯದಲ್ಲ. ಮೀಸಲಾತಿ ನೀತಿಯಲ್ಲಿನ ಅಗತ್ಯ ಬದಲಾವಣೆಗಾಗಿ ಸಾಮಾನ್ಯ ವರ್ಗದ ಮಂದಿ ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಅನೇಕ ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ.

Raghava Sharma Nidle Column: ಮಂಗಳೂರು ರೈಲ್ವೆ: ಸಂಭ್ರಮ ಏಕಿಲ್ಲ ಮುಖ್ಯಮಂತ್ರಿಗಳೇ?

ಮಂಗಳೂರು ರೈಲ್ವೆ: ಸಂಭ್ರಮ ಏಕಿಲ್ಲ ಮುಖ್ಯಮಂತ್ರಿಗಳೇ?

ದಿಲ್ಲಿ ಮಟ್ಟದಲ್ಲಿ ಪ್ರಬಲ ಲಾಬಿ ಮಾಡುತ್ತಾ ಮಂಗಳೂರನ್ನು ಪಾಲಕ್ಕಾಡ್‌ನಿಂದ ಪ್ರತ್ಯೇಕಗೊಳ್ಳದಂತೆ ನೋಡಿಕೊಳ್ಳುತ್ತಿದ್ದ ಕೇರಳದ ಜನಪ್ರತಿನಿಧಿಗಳಿಗೆ ಈ ಬೆಳವಣಿಗೆ ಸಹಜವಾಗಿಯೇ ಭಾರೀ ಆಘಾತ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರೇ, ನಮಗೆ ನ್ಯಾಯ ಒದಗಿಸಿ ಎಂದು ಕೇರಳ ಸಿಎಂ ವಿ.ಡಿ. ಸತೀಶನ್ ಹಾಗೂ ಇತರೆ ಸಂಸದರು ಕಣ್ಣೀರು ಹಾಕುತ್ತಿದ್ದಾರೆ.

Raghava Sharma Nidle Column: ಉ.ಪ್ರ. ಕ್ಕೆ ಮೋದಿ-ಶಾ ಆಪ್ತರ ಅಧಿಕೃತ ಪ್ರವೇಶ

ಉ.ಪ್ರ. ಕ್ಕೆ ಮೋದಿ-ಶಾ ಆಪ್ತರ ಅಧಿಕೃತ ಪ್ರವೇಶ

ಬ್ರಾಹ್ಮಣ, ಒಬಿಸಿ, ದಲಿತ ಸಮುದಾಯಕ್ಕೆ ವಿಶೇಷ ಪ್ರಾಧಾನ್ಯತೆ ಸಿಕ್ಕಿದೆ. ಮಾಜಿ ಕೇಂದ್ರ ಸಚಿವೆ, ಅಮೇಥಿ ಲೋಕಸಭೆ ಕ್ಷೇತ್ರದ ಸ್ಮೃತಿ ಇರಾನಿ ಅವರೂ ಸಂಘಟನೆಗೆ ವಾಪಸಾಗಿದ್ದಾರೆ. ಮೂಲತಃ ದೆಹಲಿಯವ ರಾಗಿದ್ದರೂ, ಉ.ಪ್ರ.ದಲ್ಲಿ ರಾಜಕಾರಣದ ಭಾಗವಾಗಿರುವುದರಿಂದ ಇರಾನಿ ಮರು ಸೇರ್ಪಡೆ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.

Raghava Sharma Nidle Column: ಉ.ಪ್ರ.ಚುನಾವಣೆ: ಕೇಸರಿಗೆ ಮೇಲ್ಜಾತಿ ಮುನಿಸಿನ ಚಿಂತೆ

ಉ.ಪ್ರ.ಚುನಾವಣೆ: ಕೇಸರಿಗೆ ಮೇಲ್ಜಾತಿ ಮುನಿಸಿನ ಚಿಂತೆ

ಜೆಎಸ್ಪಿಗಂತೂ ಇದೊಂದು ಐತಿಹಾಸಿಕ ರಾಜಕೀಯ-ಚುನಾವಣಾ ಗೆಲುವು. ಅದೂ ಪಕ್ಷದ ಭದ್ರಕೋಟೆ ಎನಿಸಿದ ಕ್ಷೇತ್ರದಲ್ಲಿ ಮತ್ತು ಮೈತ್ರಿ ಸರಕಾರದಲ್ಲಿ ಬಿಜೆಪಿ ನಾಯಕರೇ ಮುಖ್ಯಮಂತ್ರಿ ಹುದ್ದೆಯಲ್ಲಿರು ವಾಗ ಸೋಲುಂಟಾಗಿರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕ್ಷೇತ್ರದ ಅವರ ಪ್ರಭಾವಳಿ ಕೆಲಸ ಮಾಡಲಿಲ್ಲ.

Raghava Sharma Nidle Column: ಬಾಂಕಿಪುರದಲ್ಲಿ ಹೊಸ ಅಧ್ಯಾಯ ಬರೆದ ಪ್ರಶಾಂತ್‌ ಕಿಶೋರ್

ಬಾಂಕಿಪುರದಲ್ಲಿ ಹೊಸ ಅಧ್ಯಾಯ ಬರೆದ ಪ್ರಶಾಂತ್‌ ಕಿಶೋರ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ನಿತಿನ್‌ ನಬಿನ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ರಾಜ್ಯಸಭೆ ಪ್ರವೇಶಿಸಿದ್ದರಿಂದ ಬಾಂಕಿಪುರಕ್ಕೆ ಉಪ ಚುನಾವಣೆ ನಿಗದಿಯಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಯುವ ಕಾರ್ಯಕರ್ತ ನೀರಜ್‌ ಕುಮಾರ್‌ ಸಿನ್ಹಾ ಸ್ಪರ್ಧೆ ಮಾಡಿದ್ದರೂ, ಇದು ನಿತಿನ್‌ ನಬಿನ್‌ Vs ಪ್ರಶಾಂತ್‌ ಕಿಶೋರ್‌ ಚುನಾವಣೆ ಎಂದೇ ಬಿಂಬಿತವಾಗಿತ್ತು

Raghava Sharma Nidle Column: ಕಾಲ ಮಿಂಚಿಲ್ಲ, ಆತ್ಮಾವಲೋಕನಕ್ಕಿದು ಸಕಾಲ!

ಕಾಲ ಮಿಂಚಿಲ್ಲ, ಆತ್ಮಾವಲೋಕನಕ್ಕಿದು ಸಕಾಲ!

ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಮತ್ತು 21 ವಿದ್ಯಾರ್ಥಿಗಳ ಆತ್ಮಹತ್ಯೆಗೆ ನ್ಯಾಯ ಕೇಳುತ್ತಾ ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತ ಆರಂಭಿಕ ದಿನಗಳಲ್ಲಿ ಕೇಂದ್ರ ಸರಕಾರ ಆ ಧರಣಿಯನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಲಡಾಖ್‌ನ ಸೋನಂ ವಾಂಗ್ಚುಕ್ ಆಗಮಿಸಿ ಆಮರಣಾಂತ ಉಪವಾಸ ಕುಳಿತು, 21 ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾದ ಬಳಿಕ ಹಾಗೂ ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗು ತ್ತಿದ್ದಂತೆಯೇ ಜಂತರ್ ಮಂತರ್ ಹೋರಾಟ ಹೊಸ ತಿರುವು ಪಡೆದುಕೊಂಡಿತು.

Raghava Sharma Nidle Column: ಅಡಿಕೆ ಕ್ಷೇತ್ರಕ್ಕೆ ವರದಾನವಾಗುವುದೇ ಚೀನಾ ಸಂಶೋಧನೆ?

ಅಡಿಕೆ ಕ್ಷೇತ್ರಕ್ಕೆ ವರದಾನವಾಗುವುದೇ ಚೀನಾ ಸಂಶೋಧನೆ?

ಇದು ಅಡಿಕೆ ಕ್ಷೇತ್ರಕ್ಕೆ ವರದಾನವಾಗಿ ಪರಿಣಮಿಸುವ ನಿರೀಕ್ಷೆ ಹೆಚ್ಚಿದೆ. ಹಾಗೆ ನೋಡಿದರೆ ಅಡಿಕೆ ವಿಷಕಾರಕ ಎಂದು ಮೊದಲು ಅಧ್ಯಯನ ವರದಿ ನೀಡಿದ್ದೇ ಚೀನಾ. 1998ರಲ್ಲಿ ಚೀನಾದ ತೈವಾನ್ ನ ಚುಂಗ್ ಶಾನ್ ಮೆಡಿಕಲ್ ಡೆಂಟಲ್ ಕಾಲೇಜಿನ ವಿಜ್ಞಾನಿ ಚಿನ್-ಕುನ್ ವಾಂಗ್ ನೇತೃತ್ವದ ತಂಡ ಅಡಿಕೆ ವಿಷಕಾರಕ ಹೇಗೆ ಎಂಬ ಬಗ್ಗೆ ಸಂಶೋಧನೆ ಮಂಡಿಸಿತ್ತು. ಇದೀಗ, ಅದೇ ಚೀನಾ 28 ವರ್ಷಗಳ ನಂತರ ಅಡಿಕೆ ಕುರಿತ ತನ್ನ ನಿಲುವಿನಲ್ಲಿ ಸಣ್ಣ ಬದಲಾವಣೆ ಮಾಡಿರುವುದು ಗಮನಾರ್ಹ.

Raghava Sharma Nidle Column: ಹಠಕ್ಕೆ ಬಿದ್ದು ಕಂಬಳ ನಡೆಸುವುದರ ಉದ್ದೇಶವೇನು ?

ಹಠಕ್ಕೆ ಬಿದ್ದು ಕಂಬಳ ನಡೆಸುವುದರ ಉದ್ದೇಶವೇನು ?

ವಿಶ್ವಪ್ರಸಿದ್ಧ ಮೈಸೂರು ದಸರಾದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳದ ಆಯೋಜನೆಗೆ ತೀರ್ಮಾನ ಮಾಡಿರುವುದು ಪರ/ವಿರೋಧ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ಸಂಸದ ಯದು ವೀರ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲ ಸಾಂಸ್ಕೃತಿಕ ಸಂಘಟನೆಗಳು, ರೈತ ಮುಖಂಡರು ಕಂಬಳದ ಆಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ದಕ್ಷಿಣ ಕನ್ನಡದ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಒತ್ತಾಯದ ಮೇರೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಕಂಬಳ ನಡೆಸುವ ನಿರ್ಧಾರ ಮಾಡಿದ್ದಾರೆ.

ಸರ್ವಪಕ್ಷ ಸಭೆಗೆ ತಜ್ಞರ ಒತ್ತಾಯ

ಸರ್ವಪಕ್ಷ ಸಭೆಗೆ ತಜ್ಞರ ಒತ್ತಾಯ

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ಟಿವಿಕೆ ಸರ್ಕಾರ ವಿಧಾನಸಭೆಯಲ್ಲಿ ಸರ್ವಾನು ಮತದ ನಿರ್ಣಯವನ್ನು ಮೇ ತಿಂಗಳ ತೆಗೆದುಕೊಂಡಿತ್ತು. ಅದರೆ, ಈ ನಿರ್ಣಯ ಹಾಗೂ ಕೇಂದ್ರದ ಮುಂದೆ ನ್ಯಾಯಾಧೀಕರಣದ ಬೇಡಿಕೆ ಇಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಸರಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

Raghava Sharma Nidle Column: ಮೇಕೆದಾಟು: ತ.ನಾಡು ದೂರಿಗೆ ಏನಂತೀರಿ ಮುಖ್ಯಮಂತ್ರಿಗಳೇ?

ಮೇಕೆದಾಟು: ತ.ನಾಡು ದೂರಿಗೆ ಏನಂತೀರಿ ಮುಖ್ಯಮಂತ್ರಿಗಳೇ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋತು ಅಧಿಕಾರ ಕಳೆದುಕೊಂಡಿದೆ. ಆದರೆ, ಮೇಕೆದಾಟು ವಿರೋಧದ ವಿಷಯದಲ್ಲಿ ಹೊಸ ಸರಕಾರವೂ ಸಕ್ರಿಯತೆ ಪ್ರದರ್ಶಿಸಿ, ಯೋಜನೆ ವಿರುದ್ಧ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದೆ. ಡಿಎಂಕೆ ಸರಕಾರ 2025ರ ಡಿಸೆಂಬರ್ ಮತ್ತು 2026ರ ಮಾರ್ಚ್ ತಿಂಗಳಲ್ಲಿ ಕೇಂದ್ರಕ್ಕೆ ಸಲ್ಲಿಸಿದ್ದ 2ನೇ ಕಾವೇರಿ ನ್ಯಾಯಾಧೀಕರಣ ಬೇಡಿಕೆಯ ಅರ್ಜಿ ಬಗ್ಗೆ ಶೀಘ್ರದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತ.ನಾಡು ಹೊಸ ಸರಕಾರವು ಕೇಂದ್ರ ಸರ್ಕಾರದ ಮೇಲೆ ಮತ್ತೆ ಒತ್ತಡ ಮುಂದುವರಿಸಿದೆ.

Advocate K N Bhat Interview: ಮಂದಿರದ ಪೂರ್ಣಾಧಿಕಾರ ಚಂಪತ್‌ಗೆ ನೀಡಿದ್ದೇ ತಪ್ಪು

ಮಂದಿರದ ಪೂರ್ಣಾಧಿಕಾರ ಚಂಪತ್‌ಗೆ ನೀಡಿದ್ದೇ ತಪ್ಪು

ರಾಮಮಂದಿರ ಹುಂಡಿಹಣ ಕಳವು ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಮಮಂದಿರ ಟ್ರಸ್ಟ್‌ನ ವಿಶ್ವಾಸಾರ್ಹತೆಗೇ ಭಾರೀ ಹಾನಿಯಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ, ಹಲವರ ಬಂಧನವೂ ಆಗಿದೆ. ದೀರ್ಘಕಾಲ ರಾಮಮಂದಿರ ನಿರ್ಮಾಣಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ವಾದ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲ ಕೆ.ಎನ್.ಭಟ್, ವಿಶ್ವವಾಣಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ

Raghav Sharma Nidle Column: ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು

ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು

ಪ್ರಕರಣಕ್ಕೆ ಸಂಬಂಧಿಸಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಜೂನ್ 18-19ರಂದು ಉತ್ತರಾಖಂಡದ ಹರಿದ್ವಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್‌ನ ಉನ್ನತ ಮುಖಂಡರು ಮಹತ್ವದ ಸಭೆ ನಡೆಸಿ, ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ನೀಡಬೇಕು ಎಂಬ ತೀರ್ಮಾನ ಮಾಡಿದ್ದರು

Raghava Sharma Nidle Column: ವಿಜಯೇಂದ್ರರೊಬ್ಬರನ್ನೇ ಹೊಣೆ ಮಾಡುವುದೇಕೆ ?

ವಿಜಯೇಂದ್ರರೊಬ್ಬರನ್ನೇ ಹೊಣೆ ಮಾಡುವುದೇಕೆ ?

ದೇಶದಲ್ಲಿ ಪೊಲಿಟಿಕಲ್ ಡೈನಾಮಿಕ್ಸ್‌ಗಳು ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಳೆತಲೆ ಗಳಿಗೆ ದೊಡ್ಡ ಹುದ್ದೆಯನ್ನು ನೀಡುವ ಮನಸ್ಸಿನಲ್ಲಂತೂ ಹೈಕಮಾಂಡ್ ಇದ್ದಂತಿಲ್ಲ. ಆದರೆ, ವಿಧಾನ ಪರಿಷತ್ ಚುನಾವಣೆಯನ್ನು ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ನಿರ್ವಹಿಸಿದ ರೀತಿ ಮತ್ತು ಬಿಜೆಪಿ ಶಾಸಕರ ಅಡ್ಡಮತದಾನ ತಡೆಯುವಲ್ಲಿ ನಾಯಕತ್ವ ವಿಫಲವಾಗಿರುವುದು ದಿಕ್ಕೆಟ್ಟು ಕೂತಿರುವ ಪಕ್ಷನಿಷ್ಠ ಮತ್ತು ತಟಸ್ಥ ಕಾರ್ಯಕರ್ತ ವರ್ಗದ ನೋವನ್ನು ಮತ್ತಷ್ಟು ಗಾಢವಾಗಿಸಿದೆ

Raghava Sharma Nidle Column: ಒಂದು ವೋಟಿನ ಕರಾಮತ್ತು ಹೇಗಿದೆ ನೋಡಿ...!

ಒಂದು ವೋಟಿನ ಕರಾಮತ್ತು ಹೇಗಿದೆ ನೋಡಿ...!

ಸೋದರಳಿಯನ ಅಕ್ರಮ ಕೃತ್ಯ, ಅವ್ಯವಹಾರಗಳನ್ನು ನೋಡಿಯೂ ಜಾಣಕುರುಡು ಪ್ರದರ್ಶಿಸು ತ್ತಿದ್ದ ಮಮತಾ ತಾನೊಬ್ಬ ಮಹಾನ್ ಜನನಾಯಕಿ ಎಂಬಂತೆ ಪೋಸು ಕೊಡುತ್ತಿದ್ದರು. ಆದರೆ, ಮೇ 4ರಂದು ಮಮತಾ ದೀದಿಯ ದರ್ಪ, ಅಹಂಕಾರವನ್ನು ಜನರೇ ಕೊನೆಗೊಳಿಸಿದರು. ದೆಹಲಿ ಯಲ್ಲಿರುವ ಇಂಡಿ ಮೈತ್ರಿಕೂಟದವರ ಮನೆಗಳಿಗೆ ಎಡತಾಕುತ್ತಾ ನಮ್ಮ ಟಿಎಂಸಿಯನ್ನು ರಕ್ಷಿಸಿ ಎಂದು ಮನವಿ ಮಾಡುವ ಸ್ಥಿತಿ ಈ ಮಮತಾರದ್ದು.

Raghava Sharma Nidle Column: ಮಮತಾ ರಾಜಕೀಯ ಪತನ ಕಾಂಗ್ರೆಸ್‌ʼಗೆ ವರದಾನ

ಮಮತಾ ರಾಜಕೀಯ ಪತನ ಕಾಂಗ್ರೆಸ್‌ʼಗೆ ವರದಾನ

ಯಾವಾಗ ಮಮತಾ ಬ್ಯಾನರ್ಜಿ ಅವರು ಪಕ್ಷದಲ್ಲಿ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಗೆ ಹೆಚ್ಚಿನ ಅಧಿಕಾರ ನೀಡಲು ಶುರುಮಾಡಿದ್ದರೋ ಆಗಲೇ ಟಿಎಂಸಿ ಒಂದ ಒಂದು ದಿನ ಒಡೆದುಹೋಗುವುದು ನಿಶ್ಚಿತ ಎಂಬ ಚರ್ಚೆ ಬಂಗಾಳದ ರಾಜಕೀಯ ಕಾರಿಡಾರ್‌ನಲ್ಲಿ ಆರಂಭ ವಾಗಿದ್ದವು. ಟಿಎಂಸಿಯ ಒಂದು ಗುಂಪು ಮಮತಾ ಬ್ಯಾನರ್ಜಿಗೆ ವಿಧೇಯವಾಗಿತ್ತೇ ವಿನಃ ಯುವಕ ಅಭಿಷೇಕ್‌ರನ್ನು ಒಪ್ಪುವ ಸ್ಥಿತಿಯಲ್ಲಿರಲಿಲ್ಲ

Raghava Sharma Nidle Column: ಅಣ್ಣಾಮಲೈ ಹೃದಯಕ್ಕೆ ಹತ್ತಿರವಾಗಿದ್ದ ಬಿಜೆಪಿ ಭಾರವಾಗಿದ್ದೇಕೆ ?

ಅಣ್ಣಾಮಲೈ ಹೃದಯಕ್ಕೆ ಹತ್ತಿರವಾಗಿದ್ದ ಬಿಜೆಪಿ ಭಾರವಾಗಿದ್ದೇಕೆ ?

ರಾಜಕಾರಣ, ಚುನಾವಣೆಗಳು ಸಾಂಪ್ರದಾಯಿಕ ಶೈಲಿಯನ್ನು ಕಳಚಿ ಹೊಸ ರೂಪಾಂತರಕ್ಕೆ ತೆರದುಕೊಳ್ಳಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ, ತಮಿಳು ನಾಡಿನಾಚೆಗಿನ ಶಿಕ್ಷಿತ ಮತದಾರ ವರ್ಗಕ್ಕೂ ಅಣ್ಣಾಮಲೈ ಬಗ್ಗೆ ವಿಶೇಷ ಅಭಿಮಾನ ಹುಟ್ಟಿದ್ದು ಸುಳ್ಳೇನಲ್ಲ. ಆದರೆ, ಬಿಜೆಪಿ ಜತೆಗಿನ ಪಯಣವನ್ನು ಅವರೀಗ ಅಂತ್ಯ ಗೊಳಿಸುವ ಸನಿಹದಲ್ಲಿದ್ದಾರೆ.

Raghava Sharma Nidle Column: ಕುರ್ಚಿ ಕಾಳಗ: ದಿಲ್ಲಿ ಅಂಗಳದಲ್ಲಿ ಗೆದ್ದವರು ಯಾರು ?

ಕುರ್ಚಿ ಕಾಳಗ: ದಿಲ್ಲಿ ಅಂಗಳದಲ್ಲಿ ಗೆದ್ದವರು ಯಾರು ?

ಕರ್ನಾಟಕದಲ್ಲಿ ಸಿದ್ದರಾಮಯ್ಯರ ಬದಲಿಗೆ ಹೊಸ ನಾಯಕತ್ವವನ್ನು ತರುವ ಉದ್ದೇಶ ರಾಹುಲ್ ಗಾಂಧಿಯಲ್ಲಿ ಖಂಡಿತಾ ಇಲ್ಲ ಎನ್ನುವುದು ಪ್ರಾರಂಭದಲ್ಲಿ ಕೇಳುತ್ತಿದ್ದ ಮಾತುಗಳು. ಇತರೆ ಹಿಂದುಳಿತ ವರ್ಗದ (ಒಬಿಸಿ) ಪ್ರಬಲ ನಾಯಕನೊಬ್ಬನನ್ನು ಅಧಿಕಾರದಿಂದ ಕೆಳಗಿಳಿಸಿ, ಪ್ರಭಾವಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರರನ್ನು ಮುಖ್ಯಮಂತ್ರಿ ಮಾಡಲು ರಾಹುಲ್ ಗಾಂಧಿ ಒಪ್ಪಿರಲಿಲ್ಲ.

Loading...