ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಾಡಗೀತೆಯ ದೃಶ್ಯಕಾವ್ಯಕ್ಕೆ ; ಹಂಸಲೇಖರ ಹಸ್ತ ಬೇಕಿದೆ !

ನಾಡಗೀತೆಯ ದೃಶ್ಯಕಾವ್ಯಕ್ಕೆ ; ಹಂಸಲೇಖರ ಹಸ್ತ ಬೇಕಿದೆ !

image-efeef089-7cdc-4048-b836-6468f438d735.jpg
ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com “ಮಹಾತಾಯಿಯೊಬ್ಬಳು ಪ್ರಸವ ವೇದನೆಯನ್ನು ಅನುಭವಿಸುತ್ತಿದ್ದಾಳೆ. ಆಕಾಶದಲ್ಲಿ ಗುಡುಗು ಮಿಂಚು ಸಿಡಿಲುಗಳ ಆರ್ಭಟವಾಗುತ್ತಿದೆ. ಇನ್ನೊಂದೆಡೆ ವೇದಮಂತ್ರ ಘೋಷ ಮೊಳಗುತ್ತಿದೆ. ದೇವಾಲಯದ ಗಂಟೆಗಳು ತಂತಾನೆ ಬಡಿದುಕೊಳ್ಳುತ್ತಿದೆ. ರಜತಪರ್ವತದಲ್ಲಿ ಹೊಸದೊಂದು ಬಂಗಾರದ ಗೆರೆಮೂಡುತ್ತಿದೆ. ಮಹಾತಾಯಿಯನ್ನು ಸೂಲಗಿತ್ತಿ ಸಂತೈಸುತ್ತಾ ಸುಗಮ ಹೆರಿಗೆಗೆ ಪ್ರಯತ್ನಿಸುತ್ತಿದ್ದಾಳೆ. ಆಗ ತಾಯಿಯ ಗರ್ಭದಿಂದ ಮಗು ಹೊರಬರುತ್ತಿದ್ದಂತೆ ಮಹಾತಾಯಿಯ ನೋವಿನ ಮುಖದಲ್ಲಿ ನಗು ಅರಳುತ್ತದೆ. ಸೂಲಗಿತ್ತಿ ಆ ಮಹಾತಾಯಿಗೆ ನೀನು ಬಯಸಿ ದಂತೆ ಹೆಣ್ಣುಮಗುವಿಗೆ ಜನ್ಮನೀಡಿದ್ದೀಯ ತಾಯಿ, ಈ ಮಗಳು ಸಾಮಾನ್ಯಳಲ್ಲ ನಿನ್ನ ಹೆಸರಿಗೆ ದೊಡ್ಡ ಕೀರ್ತಿಯನ್ನು ತರುತ್ತಾಳೆ ಎಂದು ಅರಹುತ್ತಾಳೆ. ದೇವ ಲೋಕದಿಂದ ಬ್ರಹ್ಮವಿಷ್ಣು ಮಹೇಶ್ವರ ಸರಸ್ವತಿ ಲಕ್ಷ್ಮೀ ಪಾರ್ವತಿ ದೇವಿಯರಲ್ಲದೇ ಸಕಲ ದೇವತೆಗಳಿಂದ ಆ ಮಗು ಮತ್ತು ತಾಯಿಯ ಮೇಲೆ ಪುಷ್ಪವೃಷ್ಠಿಯಾಗು ತ್ತದೆ. ಆ ಮಗು ತಾಯಿಯನ್ನು ನೋಡಿ ನಗುತ್ತದೆ, ಮಹಾತಾಯಿ ಮಗುವಿನ ಹಣೆಗೆ ಮುತ್ತನ್ನಿಡುತ್ತಾಳೆ. ಹಂಪಿಯ ಭುವನೇಶ್ವರಿಯ ಗರ್ಭಗುಡಿ ಯಲ್ಲಿ ಕನ್ನಡ ಕುಲಪುರೋಹಿತರಾದ ಆಲೂರು ವೆಂಕಟರಾಯರು ಕೈಯಲ್ಲಿ ಗಂಟೆ ಹಿಡಿದು ದೇವಿಗೆ ಬಿರುಸಿನಿಂದ ಮಂಗಳಾರತಿ ಬೆಳಗುತ್ತಿದ್ದಾರೆ." ಇಂಥ ಕನಸನ್ನು ಕಂಡ ಮಹಾಕವಿ ಯೊಬ್ಬರು ತಮಗೆ ಯಾವುದೋ ಒಂದು ದೈವಾನುಗ್ರಹವಾದಂತೆ ಪುಳಕಗೊಂಡು ಪುಸ್ತಕ ತೆರೆದು ಬರೆಯುತ್ತಾರೆ ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ. ಮಹಾತಾಯಿ ಮಗುವಿಗೆ ಜೋಗುಳ ಹಾಡುತ್ತಿದ್ದರೆ, ಸಪ್ತರ್ಷಿಗಳು ವೇದಮಂತ್ರಗಳನ್ನು ಪಠಿಸುತ್ತಿದ್ದಾರೆ. ಮಂತ್ರಗಳ ಶಬ್ಧವನ್ನು ಆಲಿಸಿದ ಮಹಾತಾಯಿ ತನ್ನ ಜೋಗುಳವನ್ನು ನಿಲ್ಲಿಸುತ್ತಾಳೆ. ಮಂತ್ರ ಘೋಷಣೆಗೆ ಚುರುಕಾಗುವ ಮಗು ಕಳೆಕಳೆಯಾಗಿ ನಗುತ್ತಾ ತಣ್ಣನೆಗಾಳಿಯೊಂದಿಗೆ ನಿದ್ರೆಗೆ ಜಾರುತ್ತದೆ. ಮಹಾಕವಿಗಳು ಆಕಾಶದತ್ತ ನೋಡಿ ಮತ್ತೇ ತಮ್ಮ ಲೇಖನಿಯನ್ನು ಹೊರಳಿಸುತ್ತಾರೆ ಜನನಿಯ ಜೋಗುಳ ವೇದದ ಘೋಷ. ಇನ್ನೆರಡು ದೃಶ್ಯಗಳಲ್ಲಿ ಮಹಾತಾಯಿ ತನ್ನ ಮಗಳನ್ನು ಶ್ರೀರಾಮ ಜನ್ಮಭೂಮಿಯ ಅಯೋಧ್ಯೆ ಮಂದಿರದ ಪ್ರಾಂಗಣಳದಲ್ಲಿ ಆಡಲುಬಿಟ್ಟು ಆನಂದಿಸುತ್ತಾಳೆ, ಜತೆಗೆ ಮಥುರೆಯ ಶ್ರೀಕೃಷ್ಣನ ದೇಗುಲದಲ್ಲಿ ಆ ಮಗಳು ಅಂಬೆಗಾಲಿಡುತ್ತಾ ಬೆಣ್ಣೆತುಂಬಿದ ಮಡಿಕೆಗೆ ಕೈಹಾಕುತ್ತಾಳೆ. ಇದನ್ನು ಕಂಡ ಮಹಾತಾಯಿ ಓಡಿಹೋಗಿ ಮಗುವಿನೊಂದಿಗೆ ಕೂರುತ್ತಾಳೆ. ಇಂಥ ದೃಶ್ಯಗಳನ್ನು ಕನಸಿನಂತೆ ಕಂಡ ಆ ಮಹಾಕವಿ ಮತ್ತೇ ಲೇಖನಿ ಹೊರಳಿಸಿದಾಗ ಮೂಡುವ ಅಕ್ಷರ ರಾಘವ ಮಧುಸೂದನರ ವತರಿಸಿದ ಭಾರತ ಜನನಿ ಯ ತನುಜಾತೆ. ಆ ಮಹಾತಾಯಿಯೇ ಭಾರತಮಾತೆ ಮತ್ತು ಆ ಪುಟ್ಟ ಬಾಲಕಿಯೇ ಜಯಕರ್ನಾಟಕ ಮಾತೆ ಅರ್ಥಾತ್ ಭುವನೇಶ್ವರಿದೇವಿ ಮತ್ತು ಆ ಮಹಾ ಕವಿ ನಮ್ಮ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು. ಹೀಗಿರುತ್ತದೆ ನಮ್ಮ ನಾಡಗೀತೆಯ ದೃಶ್ಯರೂಪ. ಇಂದು ಕುವೆಂಪು ಅವರನ್ನು ಕೆಲ ಅವಿವೇಕಿಗಳು ಒಂದು ಜಾತಿಗೆ ಸೀಮಿತಗೊಳಿಸಿ ಅವರಿಗೆ ಜಾತಿಯ ಬೇಲಿಯನ್ನು ಕಟ್ಟುತ್ತಿದ್ದಾರೆ. ಇನ್ನು ಕೆಲ ಅಯೋಗ್ಯರು ದೇಶವೇ ಬೇರೆ ರಾಜ್ಯವೇ ಬೇರೆ ಎಂದು ವಾದಿಸುತ್ತಾರೆ. ಜತೆಗೆ ಅವರನ್ನು ಒಬ್ಬ ಎಡಪಂಥೀಯರಂತೆ ಬಿಂಬಿಸಲು ಕೆಲ ಕುಲಗೆಟ್ಟ ಸಾಹಿತಿಗಳು ಪ್ರಯತ್ನಿಸುತ್ತಿದ್ದಾರೆ. ನೆನಪಿರಲಿ, ನಾಡಗೀತೆ ಬರೆದ ಕುವೆಂಪುರವರು ಬರಿಯ ಒಬ್ಬ ಕನ್ನಡಿಗನಾಗಿ ಭಾವಿಸಿದ್ದಿರಲಿಲ್ಲ. ಬದಲಿಗೆ ತಾನೊ ಬ್ಬ ಅಪ್ಪಟ ಭಾರತೀಯನೆಂಬ ಹೆಮ್ಮೆಯಿಂದ ಬರೆದಿದ್ದಾರೆ. ಇಲ್ಲದೇ ಹೋದರೆ ‘ದೇಶ ನನ್ನದು ನಾಡು ನನ್ನದು ಎನ್ನದ ಮಾನವನೆದೆ ಸುಡುಗಾಡು’ ಎಂಬ ಸಾಲುಗಳನ್ನು ಬರೆಯುತ್ತಿದ್ದರೇ?. ನಾಡಗೀತೆಯಲ್ಲಿ ಅವರು ಭಾರತೀಯ ಪರಂಪರೆಯ ವೇದ ಉಪನಿಷತ್ತು ವೈದಿಕತೆ ಯನ್ನೂ ಗೌರವಿಸಿ ಕರ್ನಾಟಕಮಾತೆಗೆ ವೇದಮಂ ತ್ರಗಳೇ ಜೋಗುಳವೆಂದು ವರ್ಣಿಸಿದ್ದಾರೆ. ಅಷ್ಟೇ ಅ, ಶ್ರೀರಾಮ ಕಾಲ್ಪನಿಕ, ಅಸಲಿಗೆ ಹಿಂದೂತ್ವವೇ ಅಸಂಬಧ್ಧವೆನ್ನುವ ಮನೋವಿ ಕಲರಿಗೆ ತಿಳಿಯದಿರುವುದೆನೆಂದರೆ ‘ರಾಘವ ಮಧುಸೂದನವರವತ ರಿಸಿದ’ ಎಂದರೇ, ರಾಘವ ಅಂದರೆ ತ್ರೇತಾಯುಗದ ಶ್ರೀರಾಮ ಮತ್ತು ಮಧು ಸೂದನ ಅಂದರೆ ದ್ವಾಪರಯುಗದ ‘ಶ್ರೀಕೃಷ್ಣ ಜನಿಸಿದ ಪವಿತ್ರ ಭೂಮಿ ನಮ್ಮ ಭಾರತ’ ಎಂದು ಸಾರಿದ್ದಾರೆ. ಸಮಸ್ತ ಭಾರತೀಯರ ಮಹಾಪುರುಷರನ್ನು ದೇಶದ ಸಂಸ್ಕೃತಿ ಸಂಪತ್ತನ್ನು ಭಾರತಮಾತೆಗೆ ಭುವನೇಶ್ವರಿ ದೇವಿಗೆ ನಿವೇದಿಸಿ ಕೊಂಡಾಡಿದ್ದಾರೆ. ನಾಡಗೀತೆಯಲ್ಲಿ ಇಡೀ ದೇಶ ವನ್ನು ಬಿಂಬಿಸಿದ್ದಾರೆ, ಅನೇಕತೆಯಲ್ಲಿ ಏಕತೆಯನ್ನು ಪ್ರತಿಫಲಿಸಿದ್ದಾರೆ. ಒಬ್ಬ ಭಾರತೀಯ ನಿಗಿರುವ ಹೆಮ್ಮೆಯ ವಿಚಾರ ಗಳನ್ನು ಕನ್ನಡಿಗನಾಗಿ ಅನುಭೂತಿ ಪಡೆಯಬೇ ಕೆಂಬುದನ್ನು ಘೋಷಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕ ಮಾತೆ ಕ್ಷಾತ್ ಭಾರತಾಂಬೆಯ ಮಹಾಪುತ್ರಿ ಎಂದು ಜೈಕಾರ ಹಾಕಿದ್ದಾರೆ. ಇಂಥ ನಾಡಗೀತೆ ಮತ್ತೆ ವಿವಾದದಲ್ಲಿ ಸಿಲುಕಿದೆ. ಮೈಸೂರು ಅನಂತಸ್ವಾಮಿಯ ವರದ್ದೇ ಅಥವಾ ಸಿ.ಅಶ್ವತ್ ಅವರದ್ದೇ ಎಂಬ ಎರಡು ಸಂಗೀತ ಸಂಯೋಜನೆಯ ಗೊಂದಲದಲ್ಲಿ ಬಣ ಗಳ ಪ್ರತಿಷ್ಠೆಯ ವಿಚಾರವಾಗಿದೆ. ಅಸಲಿಗೆ ಸಮಸ್ಯೆ ಇರುವುದು ಸಂಗೀತ ಸಂಯೋಜನೆ ಯಲಲ್ಲ. ನಾಡಗೀತೆಗೆ ಕತ್ತರಿ ಹಾಕುತ್ತಿರುವು ದರಲ್ಲಿದೆ. ಸಾಮಾನ್ಯವಾಗಿ ಇಂಥ ರಾಷ್ಟ್ರಗೀತೆ ಅಥವಾ ನಾಡಗೀತೆಗಳನ್ನು ಸಮಾಜದಲ್ಲಿ ಎಲ್ಲರೂ ಹೆಚ್ಚು ಸಮಯ ನಿಂತು ಹಾಡುವುದು ಸಾಧ್ಯವಿಲ್ಲವೆಂದು ತೀರ್ಮಾನಿಸಿ ಅದಕ್ಕಾಗಿ ಕತ್ತರಿ ಹಾಕಿ ಕನಿಷ್ಠ ಸಮಯಕ್ಕೆ ನಿಗಽಪಡಿಸುವ ತೀರ್ಮಾನಕ್ಕೆ ಬರಲಾ ಗುತ್ತಿದೆ. ಇದೇ ನೋಡಿ ಮಾಡುವ ಮೊದಲ ಅಪಚಾರ. ಬೇರೆ ದೇಶಗಳ ರಾಷ್ಟ್ರಗೀತೆಗಳ ಅವಧಿಗೆ ಹೋಲಿಸಿ ನಮ್ಮ ದೇಶದ ಗೀತೆಗೆ ಕತ್ತರಿ ಹಾಕುವುದೇ ಮೂರ್ಖತನ. ಏಕೆಂದರೆ ಆಯಾ ದೇಶದ ಇತಿಹಾಸ ಸಂಸ್ಕೃತಿಗೆ ತಕ್ಕಂತೆ ಅವರುಗಳು ರೂಪಿಸಿಕೊಂಡಿದ್ದಾರೆ. ಆದರೆ ವಿಶ್ವದ ಅತ್ಯಂತ ಪುರಾತನ ಹಾಗೂ ಸನಾತನ, ಬಹುಸಂಸ್ಕೃತಿ, ಬಹುಭಾಷ ಮತ್ತು ವೈವಿದ್ಯತೆಯ ಪ್ರಾದೇಶಿಕತೆಯ ಕಣಜವಾಗಿ ರುವ ನಮ್ಮ ದೇಶದ ವರ್ಣನೆಯನ್ನು ಎಲ್ಲರಿಗೂ ಸಮಾಧಾನವಾಗುವಂತೆ ರೂಪಿಸಿಲು ನಿಮಿಷಗಳ ಗೀತೆ ಸಾಲುವುದಿಲ್ಲ. ಅದರಲ್ಲೂ ನಮ್ಮ ನಾಡಿನ ಪುರಾಣ ರಾಮಾಯಣದಿಂದ ಹಿಡಿದು ತಿಮ್ಮಕ್ಕರ ವರೆಗೂ ವರ್ಣಿಸಲಸಾಧ್ಯವಾದ ಬೌದ್ಧಿಕ ಮತ್ತು ಭೌತಿಕ ವಿಚಾರಗಳಿವೆ. ಆದರೂ ಕುವೆಂಪು ಅವರು ಬರೆದ ಗೀತೆಯನ್ನು ನಾಡಗೀತೆಯನ್ನು ಎಲ್ಲರು ಒಪ್ಪಿಕೊಂಡಿದ್ದಾರೆ. ಇಂಥ ಗೀತೆ ಒಂದು ಪವಿತ್ರವಾದ ದೇಹದಂತೆ. ದೇಹದ ಯಾವುದೇ ಭಾಗವನ್ನು ಕತ್ತರಿಸಲು ಸಾಧಯವೇ?. ಹೀಗಿರುವಾಗ ನಾಡಗೀತೆಯನ್ನು ನಿಗಧಿತ ನಿಮಿಷ ಗಳಿಗೆ ಹೊಂದಿಸಲು ಸಮಿತಿಗಳನ್ನು ರಚಿಸಿ ಅವರ ಕೈಗೆ ಕತ್ತರಿಕೊಟ್ಟರೆ ಆ ಸಮಿತಿ ಸದಸ್ಯರ ಪೂರ್ವ ಗ್ರಹ ಗಳಿಗೋ, ರಾಜಕಾರಣದ ಅನುಕೂಲತೆಗಳಿಗೋ, ಜಾತಿಬಣ್ಣಗಳಿಗೆ ಹೊಂದಿಕೆಯಾಗು ವಂತೆ ಯೋ ಅವರವರ ಮನಸ್ಥಿತಿಯ ಆಧಾರ ದಲ್ಲಿ ಅನೇಕ ಪದಗಳಿಗೆ ಕತ್ತರಿ ಬೀಳುವುದು ಸುಳ್ಳಲ್ಲ. ಅದರಲ್ಲೂ ರಾಘವ ಮುಧುಸೂದನ, ತ್ರಯಾಚರ್ಯರು, ವಿದ್ಯಾರಣ್ಯರು, ಜೈನರು, ವೇದಘೋಷ ಪದಗಳೇ ಇಂದು ಮೊದಲು ಕತ್ತರಿಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ‘ಇಂಥ ಕೋಮುವಾದಿ ಮನುವಾದಿ’(!?) ಪದಗಳನ್ನು ಕುವೆಂಪು ಅವರು ಯಾಕಾದರೂ ಸೇರಿಸಿದರಪ್ಪಾ ಎಂದು ಈಗಾಗಲೇ ಅನೇಕ ಬರಗೆಟ್ಟ ಸಾಹಿತಿಗಳು ಎಡಗೈ ನೆಕ್ಕುವ ವಿಚಾರ ವ್ಯಾದಿಗಳು ಕೊರಗುತ್ತಿದ್ದಾರೆ. ಅದರಲ್ಲೂ ಗಂಜಿ ಗಿರಾಕಿಗಳಂಥ ಸಾಹಿತಿ ಗಳ ಸಮಿತಿಗಳ ಕೈಗೆ ಇಂಥ ಅಮೂಲ್ಯಗೀತೆ ಸಿಕ್ಕಿದರಂತೂ ಅದರಲ್ಲೂ ಅಹಿಂದ ಪದವನ್ನು ಸೇರಿಸಿ, ನಮ್ಮ ಜಾತಿಯ ಸ್ವಾಮೀಜಿಯ ಹೆಸರು ಗಳನ್ನು ಸೇರಿಸಿ, ಕೊನೆಗೆ ಮಹಿಷಾಸುರ ಗೌರಿ ಲಂಕೇಶ್ ರೊಹಿಂಗ್ಯಾ ಪದ ವನ್ನೂ ಸೇರಿಸಿ ವರದಿ ನೀಡಿದರೂ ಆಶ್ಚರ್ಯವಿಲ್ಲ. ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದ, ದೇಶಾಭಿಮಾನವನ್ನು ಜಾಗೃತಗೊಳಿಸಿದ ಭಾರತೀಯರ ಆತ್ಮಗೀತೆಯಾಗಿದ್ದ ವಂದೇಮಾ ತರಂ ಗೀತೆಯನ್ನು ಕೆಲ ಚಮಚಾಗಳ ಶೋಕಿವಾಲಗಳ ಸ್ವಾರ್ಥಕ್ಕೆ ಬಲಿಕೊಡಲಾಯಿತು. ಅಂಥ ದುರ್ಗತಿ ಇಂದು ಕುವೆಂಪು ವಿರಚಿತ ನಾಡಗೀತೆಗೆ ಬರದಿರಲಿ. ಆದ್ದರಿಂದ ಈಗ ಮಾಡಬೇಕಾದ ಕೆಲಸವೆಂದರೆ ಗೀತೆಯ ಸಾಹಿತ್ಯಕ್ಕೂ ರಾಷ್ಟ್ರಕವಿಗಳ ಆಶಯಕ್ಕೂ ಚ್ಯುತಿ ಬಾರದಂತೆ ಸಂಪೂರ್ಣ ಗೀತೆಯನ್ನೇ ನಾಡಗೀತೆ ಯನ್ನಾಗಿ ಘೋಷಿಸಲಿ. ನಮ್ಮ ಮಹಾಪ್ರಜೆಗಳು ಇಂದು ದೇವರನ್ನು ಒಂದ್ಹತ್ತು ಸೆಕೆಂಡುಗಳ ಕಾಲ ಸ್ಮರಿಸಿದರೆ ಮೊಬೈಲ್ನಲ್ಲಿ ದಿನಗಟ್ಟಲೆ ಧ್ಯಾನಸ್ಥರಾಗುತ್ತಾರೆ. ಹೀಗಿರುವಾಗ ನಾಡಗೀತೆ ಯನ್ನು ಐದಾರು ನಿಮಿಷಗಳ ಕಾಲ ಎದ್ದುನಿಂತು ಹಾಡಿದರೆ ಆ ದಿನದಲ್ಲಿ ಏನೂ ಕಳೆದುಕೊಳ್ಳು ವುದಿಲ್ಲ. ರಾಷ್ಟಗೀತೆಗೆ ನಾಡಗೀತೆಗೆ ಸಮಯ ನೀಡದವರು ಇನ್ನೆಂಥ ಪ್ರಜೆಗಳಾ ಗುತ್ತಾರೆ?. ನಾಡಗೀತೆಯನ್ನು ಹಿರಿಯರಿಗಿಂತ ಮಕ್ಕಳು ಶಾಲೆಗಳಲ್ಲಿ ದಿನನಿತ್ಯ ಹಾಡಬೇಕಿದೆ. ಐದಾರು ನಿಮಿಷ ನಾಡಗೀತೆಯನ್ನು ಶಿಸ್ತುಬದ್ಧ ವಾಗಿ ಹಾಡುವು ದನ್ನು ರೂಢಿಸಿಕೊಂಡರೆ ಮಕ್ಕಳಿಗೆ ಜೀವನದಲ್ಲೂ ಸಂಯಮ ತಾಳ್ಮೆ ಸಹನೆಯನ್ನು ಹೆಚ್ಚಿಸಿಕೊಳ್ಳಲು ನಾಡಗೀತೆ ಸೂರ್ತಿಯಾಗುತ್ತದೆ. ಇದು ವೈಜ್ಞಾನಿಕ ಸತ್ಯ. ಮಕ್ಕಳಿಗೆ ಕಲಿಸಬೇಕಾದ್ದೇ ಇಂಥ ಏಕಾಗ್ರತೆಯನ್ನು. ಸಂಪೂರ್ಣ ಗೀತೆಯನ್ನು ಮಕ್ಕಳು ಹಾಡಿ ಆಲಿಸಿದರೆ ಪ್ರತಿಯೊಂದು ಪದಗಳ ಪರಿಚಯವಾಗಿ ನಾಡಿನ ದೇಶದ ಇತಿಹಾಸವನ್ನು ತಿಳಿದುಕೊಳ್ಳುವ ಮತ್ತು ಸ್ಮರಿಸುವ ಸಂಸ್ಕಾರ ಶಿಸ್ತು ಬೆಳೆಯುತ್ತದೆ. ನಮಗೆ ಬದುಕನ್ನು ನೀಡಿರುವ, ಭವಿಷ್ಯವನ್ನು ನೀಡುವ ನಮ್ಮದೇ ಮಣ್ಣಿನ ವೈಭವ ವನ್ನು ಐದು ನಿಮಿಷ ಸ್ಮರಿಸುವುದಕ್ಕಿಂತ ಪ್ರಥಮ ಆದ್ಯತೆ ಮಕ್ಕಳಿಗೆ ಬೇರೊಂದಿಲ್ಲ. ಇನ್ನು ವಯೋವೃ ದ್ಧರು ವಿಶೇಷಚೇತನರು ನಿಂತು ಹಾಡಲು ಅಶಕ್ತರಾಗಿ ದ್ದರೆ ಅವರಿಗೆ ಕುಳಿತೇ ಹಾಡಿ ಗೌರವಿಸುವ ರಿಯಾಯಿತಿ ನೀಡಲಿ. ಆದ್ದರಿಂದ ಈಗ ಅನಂತ ಸ್ವಾಮಿ ಮತ್ತು ಸಿ ಅಶ್ವತ್ ಅವರಿಬ್ಬರ ಸಂಯೋಜನ್ನೂ ಪರಿಗಣಿಸಿ, ಜತೆಗೆ ಎಲ್ಲಾ ರೀತಿಯ ಸಂಗೀತದಲ್ಲಿ ಪಾಂಡಿತ್ಯ ಹೊಂದಿರುವ ಹಂಸಲೇಖ ಅವರ ಮಾರ್ಗದರ್ಶನದಲ್ಲಿ ಸ್ವರಶೃತಿ ತಾಳಮೇಳದಲ್ಲಿ ನಾವಿನ್ಯತೆಯ ಸಂಗೀತ ಸ್ಪರ್ಷದೊಂದಿಗೆ ಸಂಯೋಜಿಸಿ ನಾಡಗೀತೆಯನ್ನು ನಿಗಽಪಡಿಸಿ ಮಕ್ಕಳು ಅತ್ಯುತ್ಸಾಹದಿಂದ ಹಾಡುವಂತ್ತಾಗಲಿ. ಗಮನಿಸಬೇಕು; ಡಾ.ರಾಜ್ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಯ ತಾಳಮೇಳೆ ಧಾಟಿ ಎಂಥವರಲ್ಲೂ ಹೊಸಚೈತನ್ಯ ನೀಡುತ್ತದೆ. ಹಂಸಲೇಖರವರು ಈಗಾಗಲೇ ‘ಕನ್ನಡ ಕಾವೇರಿ’ ಮಾಲಿಕೆಯಲ್ಲಿ ‘ಎದರು ಇರು’ ಗೀತೆಯನ್ನು ವೇಗದ ಧಾಟಿಯಲ್ಲಿ ಸಂಯೋಜಿಸಿ ಹಾಡಲು ಹೊಸ ಹುರುಪು ನೀಡಿದ್ದಾರೆ. ಕಾಲಮಾನದ ತಕ್ಕಂತೆ ಸಂಗೀತದಲ್ಲೂ ಚೈತನ್ಯ ನೀಡಬೇಕಲ್ಲವೇ?. ಈ ನಿಟ್ಟಿನಲ್ಲಿ ನಾಡಗೀತೆಯನ್ನು ಮಕ್ಕಳು ಬರಿಯ ಒಂದು ಶಿಸ್ತಿನಿಂದ ಹಾಡುವುದು ಸರಿಯೆನಿಸಿದರೂ ಆ ಗೀತೆಯಲ್ಲಿನ ಪ್ರತಿಯೊಂದು ಪದಕ್ಕೂ ದೃಶ್ಯ ರೂಪವನ್ನು ಕೊಟ್ಟು ಅದನ್ನು ಹಾಡುವುದರೊಂದಿಗೆ ‘ಕಾಣುವಂತೆಯೂ’ ಮಾಡುವ ಒಂದು ಅಪರೂಪದ ಪ್ರಯತ್ನವನ್ನು ತಮಿಳು ಮಾತೃಭಾಷೆಯ ಕನ್ನಡ ಚಲನಚಿತ್ರ ನಿರ್ದೇಶಕರೊಬ್ಬರು ಮಾಡುತ್ತಿದ್ದಾರೆ. ನಾಡಗೀತೆ ಹಾಡುವುದೊಂದೇ ಅಲ್ಲ, ನೋಡಲೂ ಸಾಧ್ಯವೆಂಬುದನ್ನು ನಿರೂಪಿಸುವ ಪ್ರಯತ್ನಕ್ಕಿಳಿದಿದ್ದಾರೆ. ಗ್ರಂಥ ರೂಪದ ರಾಮಾಯಣವನ್ನು ಬರಿಯ ಆರುವರೆ ನಿಮಿಷಗಳಲ್ಲಿ ಬರೆದು ದೃಶ್ಯರೂಪ ನೀಡಿದ ‘ರಾಮನ ಅವತಾರ ರಘುಕುಲ ಸೋಮನ ಅವತಾರ’ ಸೃಷ್ಠಿಸಿದ ಕು.ರಾ. ಸೀತಾರಾಮಶಾಸ್ತ್ರಿಗಳು- ಆರ್ ಸುದರ್ಶನಂ- ಗೋವರ್ಧನಂ- ಕೆ.ಶಂಕರ್ ಅವರ ಭೂಕೈಲಾಸದ ಪ್ರಯತ್ನದಂತೆ ಸಂಪೂರ್ಣ ನಾಡಗೀತೆಯನ್ನು ಕುವೆಂಪು ಅವರ ಕಲ್ಪನೆ, ಆಶಯಕ್ಕೆ ಅನುಗುಣವಾಗಿ ಪರಿಣಾಮಕಾರಿಯಾಗಿ ಚಿತ್ರಿಸಿ ದೃಶ್ಯರೂಪ ನೀಡುವ ಕೆಲಸವನ್ನು ಎಂ.ಗಜೇಂದ್ರ ಅವರ ತಂಡ ಮಾಡುತ್ತಿದೆ. ಗೀತೆಯಲ್ಲಿನ ಎಲ್ಲಾ ಮಹಾಪುರುಷರ ಪಾತ್ರಗಳು, ಸ್ಥಳಗಳು, ವೈಭವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿ, ಸುಮಾರು ಒಂದು ಕೋಟಿಗೂ ಹೆಚ್ಚು ಬಂಡವಾಳ ದಲ್ಲಿ ನಾಡಗೀತೆಯನ್ನು ಪೌರಾಣಿಕತೆ ರಾಮಾಯಣ ಮಹಾಭಾರತ ಐತಿಹಾಸಿಕ ಚಾರಿತ್ರಿಕವಲ್ಲದೇ ವಾಸ್ತವದ ಕಾಲಘಟ್ಟದಲ್ಲಿಯೂ ಚಿತ್ರಿಸುವ ಯೋಜನೆಯಾ ಗಿದೆ. ನಾಡ ಗೀತೆಯನ್ನು ನಾಡಿನಾದ್ಯಂತ ಶಾಲೆಗಳಲ್ಲಿ ಉಚಿತ ಪ್ರದರ್ಶನ ನೀಡುವ ಮತ್ತು ಮುಂದಿನ ವಿದ್ಯಾರ್ಥಿಗಳು ನಾಡಗೀತೆಯನ್ನು ನೋಡಿ ಹೆಮ್ಮೆಪಡು ವಂತೆ ಮಾಡುವ ಪ್ರಯತ್ನವೂ ಆಗಿದೆ. ಮೊದಲು ನಾಡಗೀತೆಯನ್ನು ಸರಸ್ವತಿಪುತ್ರ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯ ಅವ ರಿಂದ ಹಾಡಿಸಲು ಪ್ರಯತ್ನಿಸಿ ಅವರೊಂದಿಗೆ (ಲಾಕ್‌ಡೌನ್ ಕಾಲದಲ್ಲಿ) ಮಾತುಕತೆಯೂ ನಡೆದಿತ್ತು. ಇಂಥ ನಾಡಗೀತೆ ಯನ್ನು ಹಾಡುವುದೇ ನನ್ನ ಸೌಭಾಗ್ಯವೆಂದು ಪುಳಕಿತರಾಗಿದ್ದರು. ಆದರೀಗ ಇಂಥ ದೃಶ್ಯಕಾವ್ಯದ ಅನುಷ್ಠಾನಕ್ಕೆ ಹಂಸಲೇಖರಂಥ ಸಂಗೀತ-ಸಾಹಿತ್ಯ ಪಂಡಿತರ ಅವಶ್ಯಕತೆ ಇದೆ. ಈ ದೃಶ್ಯಕಾವ್ಯಕ್ಕೆ ಹಿಂದೂಸ್ತಾನಿ-ಶಾಸ್ತ್ರೀಯ-ಕರ್ನಾಟಕ ಸಂಗೀತ ಜಾನಪದ ಪ್ರಾಕಾರಗಳಲ್ಲದೇ ಆಧುನಿಕ ಘಟ್ಟದ ಸಂಗೀತವನ್ನು ಬಳಸಿ ರಾಗಸಂಯೋಜನೆ ಹಿನ್ನಲೆ ಸಂಗೀತ ಮತ್ತು ಪರಿಕಲ್ಪನೆಯನ್ನು ನೀಡುವ ಸಾಮರ್ಥ್ಯ ಅವರಲ್ಲಿದೆ. ಈ ದೃಶ್ಯಕಾವ್ಯದ ಯೋಜನೆಗೆ ಹಂಸಲೇಖರಂಥ ಆಧುನಿಕ ಪುರಂದರರ ಅಮೃತಾಸ್ತ ಸೇರಿದರೆ ನಿಜಕ್ಕೂ ನಾಡಿಗೆ ಒಂದು ದೊಡ್ಡ ಕೊಡುಗೆಯಾಗುತ್ತದೆ. ಕನ್ನಡ ಚಿತ್ರರಂಗದಿಂದಲೂ ನಾಡಗೀತೆಗೆ ಒಂದು ಸೇವೆಯಾದಂತೆ ಆಗುತ್ತದೆ.