ವೀಕೆಂಡ್ ವಿತ್ ಮೋಹನ್
ಅಧಿಕಾರ ಮತ್ತು ಸ್ವಾರ್ಥಕ್ಕಾಗಿ ಏನನ್ನಾದರೂ ಮಾಡಲು ಸಿದ್ಧವಿದ್ದ ನೆಹರುರವರ ಕೈಗೆ ಸ್ವತಂತ್ರ ಭಾರತದ ಮೊದಲ ಆಡಳಿತ ಸಿಕ್ಕಿತು. ಅಧಿಕಾರಕ್ಕಾಗಿ ಬಾಬಾ ಸಾಹೇಬ್ ಅಂಬೇ ಡ್ಕರ್ ಅವರನ್ನು ಅವರ ಶಿಷ್ಯನಿಂದಲೇ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರು. 1955ರಲ್ಲಿ ನೆಹರು ಪ್ರಧಾನಮಂತ್ರಿಯಾಗಿದ್ದಾಗ ಭಾರತಕ್ಕೆ ಅಮೆರಿಕವು ಸುವರ್ಣಾ ವಕಾಶವೊಂದನ್ನು ನೀಡಿತ್ತು.
ಚೀನಾವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಹೊರಗಿಟ್ಟು ಭಾರತವನ್ನು ‘ಶಾಶ್ವತ ಸದಸ್ಯ’ನಾಗುವಂತೆ ಹೇಳಿತ್ತು. ಆ ಅವಕಾಶವನ್ನು ಬಳಸಿಕೊಳ್ಳದ ನೆಹರು ಅಮೆರಿಕದ ಸೂಚನೆಯನ್ನು ತಿರಸ್ಕರಿಸಿದರು. ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ನೆಹರು ಹೇಳಿದ್ದು ಹೀಗಿತ್ತು: ‘ನಾವು ಚೀನಾವನ್ನು ಭದ್ರತಾ ಮಂಡಳಿ ಯಿಂದ ದೂರವಿಡುವುದು ಅನ್ಯಾಯದ ಕೆಲಸ. ಆದ್ದರಿಂದ ಅಮೆರಿಕದ ಸಲಹೆಯನ್ನು ನಾವು ತಿರಸ್ಕರಿಸಬೇಕು.
ಭಾರತದ ಈಗಿನ ಪರಿಸ್ಥಿತಿಯಲ್ಲಿ ಭದ್ರತಾ ಮಂಡಳಿಯ ಸದಸ್ಯರಾಗುವುದು ಸರಿಯಲ್ಲ. ಮೊದಲು ಚೀನಾ ದೇಶಕ್ಕೆ ದಕ್ಕಬೇಕಿರುವ ಅಧಿಕಾರವನ್ನು ನೀಡಿದ ಮೇಲಷ್ಟೇ ಅಮೆರಿಕವು ಭಾರತವನ್ನು ಪರಿಗಣಿಸಲಿ’. ನೆಹರು ಬರೆದ ಈ ಪತ್ರ, ಭಾರತದ ಬಗೆಗಿನ ಅವರ ದೂರ ದೃಷ್ಟಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಅಂದಿನ ಕಾಲದಲ್ಲಿ ಅಮೆರಿಕ ಎರಡನೇ ಮಹಾಯುದ್ಧದಲ್ಲಿ ವಿಜಯಶಾಲಿಯಾಗಿ ಜಗತ್ತಿನ ದೊಡ್ಡಣ್ಣನಾಗಿ ಹೊರಹೊಮ್ಮಿತ್ತು. ಜಗತ್ತಿನಲ್ಲಿ ಚೀನಾದ ಗುರುತೇ ಇಲ್ಲದ ಸಮಯದಲ್ಲಿ, ಅಮೆರಿಕದ ಮಾತನ್ನು ನೆಹರು ಕೇಳಲಿಲ್ಲ. ಅಂದು ಚೀನಾ ದೇಶದ ಪರವಾಗಿ ನಿಂತ ಭಾರತಕ್ಕೆ ಸಿಕ್ಕ ಉಡುಗೊರೆ ಏನು? 1962ರಲ್ಲಿ ಕಾಲು ಕೆದರಿಕೊಂಡು ಚೀನಾ ಯುದ್ಧಕ್ಕೆ ಬಂತು.
ಇದನ್ನೂ ಓದಿ: Mohan Vishwa Column: ಮೈ ಡಿಯರ್ ಎಡ್ವಿನಾ ಮೌಂಟ್ ಬ್ಯಾಟನ್ !
ಇಂದಿಗೂ ಡೋಕ್ಲಾಂ ವಿಚಾರದಲ್ಲಿ ಜಗಳ ಮಾಡುತ್ತಲೇ ಇದೆ. ಅಂದು ಚೀನಾದ ಪರವಾಗಿ ನೆಹರು ನಿಂತರು. ಇಂದು ಚೀನಾ ದೇಶವು, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಭಾರತದ ಶಾಶ್ವತ ಸದಸ್ಯತ್ವಕ್ಕೆ ಅಡ್ಡಗಾಲು ಹಾಕುತ್ತಿದೆ. ಪ್ರತಿಯೊಂದು ಬಾರಿಯೂ ಜಗತ್ತಿನ ಇತರ ದೇಶಗಳು ಭಾರತದ ಪರವಾಗಿ ನಿಂತರೂ ಚೀನಾ ಮಾತ್ರ ಭಾರತದ ಪರವಾಗಿ ನಿಲ್ಲುತ್ತಿಲ್ಲ.
ನೆಹರು ಮಾಡಿದ್ದ ಪ್ರಮಾದವನ್ನು ಅವರದ್ದೇ ಪಕ್ಷದ ನಾಯಕ ಶಶಿ ತರೂರ್ ಒಪ್ಪಿಕೊಂಡಿ ದ್ದರು. ಪ್ರಧಾನಿಯಾದವರು ತಮ್ಮ ದೇಶವನ್ನು ಮುಂದುವರಿಸಲು ಬಯಸುತ್ತಾರೋ ಅಥವಾ ಬೇರೆಯವರಿಗೆ ಸಹಾಯಮಾಡಿ ತಾವು ಹಿಂದೆ ಹೋಗಲು ಬಯಸುತ್ತಾರೋ? ಆ ಮಟ್ಟದ ತಿಳಿವಳಿಕೆ ಇಲ್ಲದ ವ್ಯಕ್ತಿಯನ್ನು ದೇಶದ ಮೊದಲ ಪ್ರಧಾನಿಯನ್ನಾಗಿ ಪಡೆದದ್ದು ನಮ್ಮ ದೌರ್ಭಾಗ್ಯ.
1962ರ ಭಾರತ-ಚೀನಾ ಯುದ್ಧದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂರ್ವ ಭಾಗದ ‘ಆಕ್ಸೈ ಚಿನ್’ ಪ್ರಾಂತ್ಯವನ್ನು ಚೀನಾ ದೇಶ ವಶಪಡಿಸಿಕೊಂಡಿತು. ಈ ಭಾಗ ಸುಮಾರು 2150 ಕಿ.ಮೀ. ಗಡಿಯನ್ನು ಹೊಂದಿದೆ. ನೆಹರುರ ಪ್ರಮಾದದಿಂದಾಗಿ ಅಂದು ಆ ದೊಡ್ಡ ಭೂಭಾಗವನ್ನು ಭಾರತ ಕಳೆದುಕೊಳ್ಳಬೇಕಾಯಿತು.
ಇಂಥ ಭೂಭಾಗವನ್ನು ಕಳೆದುಕೊಂಡ ಮೇಲೆ, ‘ಈ ಭಾಗದಲ್ಲಿ ಒಂದು ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲ, ಆದ್ದರಿಂದ ನಮಗೆ ಯಾವ ನಷ್ಟವೂ ಇಲ್ಲ’ ಎಂಬ ಉಡಾಫೆ ಮಾತನ್ನು ನೆಹರು ಹೇಳಿದ್ದರು. ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಹಗುರವಾಗಿ ಮಾತನಾಡುವ ರಾಹುಲ್ ಗಾಂಧಿ ಮತ್ತು ಅವರ ಪಟಾಲಂ, ನೆಹರು ಹೇಳಿದ್ದ ಈ ಮಾತಿಗೆ ಉತ್ತರ ಕೊಡಲು ಸಾಧ್ಯವೇ? ಭಾರತದ ದೊಡ್ಡದೊಂದು ಭೂಭಾಗವನ್ನು ಕಳೆದುಕೊಂಡ ನಂತರ ಸ್ವತಃ ಭಾರತದ ಪ್ರಧಾನಿಯೇ ಹೀಗೆ ಹೇಳಿದಾಗ, ಚೀನಾಕ್ಕೆ ಭಯ ಎಲ್ಲಿಂದ ಬರಬೇಕು? ನೆಹರು ಭಾರತೀಯ ಸೈನ್ಯವನ್ನು ‘ನಿಶ್ಶಕ್ತೀಕರಣ’ ಮಾಡಿದ ಪರಿಣಾಮ ಭಾರತದ ಇತಿಹಾಸದಲ್ಲಿ ದೊಡ್ಡದೊಂದು ಪ್ರಮಾದ ನಡೆದು ಹೋಗಿತ್ತು.
ಚೀನಾ ಹಾಗು ಪಾಕಿಸ್ತಾನದ ನಡುವೆ ದೊಡ್ಡದೊಂದು ಆರ್ಥಿಕ ಕಾರಿಡಾರ್ ನಿರ್ಮಿಸು ತ್ತಿರುವ ಚೀನಾ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 12 ಬಿಲಿಯನ್ ಡಾಲರ್‌ನಷ್ಟು, ಅಂದರೆ ಸುಮಾರು 100000 ಕೋಟಿ ರುಪಾಯಿಯಷ್ಟು ಹಣವನ್ನು ಖರ್ಚು ಮಾಡಿದೆ. ಚೀನಾ ನಿರ್ಮಿಸುತ್ತಿರುವ ಈ ಕಾರಿಡಾರ್, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗು ತ್ತದೆ.
1948ರಲ್ಲಿ ನೆಹರು ಮಾಡಿದ ಪ್ರಮಾದದಿಂದಾಗಿ, ಭಾರತಕ್ಕೆ ಸೇರಿದ ಭೂಭಾಗದೊಳಗೆ ಚೀನಾ ತನ್ನ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡುವಂತಾಗಿದೆ. ಆಪರೇಷನ್ ಸಿಂದೂರ ಬಳಿಕ, ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿ ಗರು, ತಮ್ಮ ಅವಧಿಯಲ್ಲಾದ ಪ್ರಮಾದದ ಬಗ್ಗೆ ಮಾತನಾಡುವುದಿಲ್ಲ.
1962ರ ಭಾರತದ ವಿರುದ್ಧದ ಯುದ್ಧದ ನಂತರ, 1963ರಲ್ಲಿ ಪಾಕಿಸ್ತಾನವು, ಪಾಕ್ ಆಕ್ರಮಿತ ಕಾಶ್ಮೀರ (ಗಿಲ್ಗಿಟ್ ಬಾಲ್ಟಿಸ್ತಾನ್)ದಲ್ಲಿರುವ ‘ಶಕ್ ಗಮ್ ಕಣಿವೆ’ಯನ್ನು ಚೀನಾ ದೇಶಕ್ಕೆ ನೀಡಿತು. ಆಗಲೂ ನೆಹರು ಪ್ರತಿಭಟಿಸಲಿಲ್ಲ. ಆಪರೇಷನ್ ಸಿಂದೂರದ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್ಸಿನ ಬಾಲಂಗೋಚಿಗಳು, ನೆಹರು ಮಾಡಿದ ಈ ಪ್ರಮಾದದ ಬಗ್ಗೆಯೂ ಮಾತನಾಡಬೇಕು.
ಡೋಕ್ಲಾಂ ಭಾರತಕ್ಕೆ ಅತ್ಯಂತ ಮಹತ್ವಪೂರ್ಣವಾದ ಭೂಭಾಗ. ಇದು ಭಾರತ, ಚೀನಾ ಹಾಗೂ ಭೂತಾನ್ ಗಡಿಗಳು ಸೇರುವ ‘ತ್ರಿಕೋನ ಸಂಧಿಸ್ಥಾನ’ದಂಥ ಜಾಗದಲ್ಲಿದೆ. ಚೀನಾ ಈ ಜಾಗದಲ್ಲಿ ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸಿದರೆ ತನ್ನ ಶಸ್ತ್ರಾಸ್ತ್ರಗಳನ್ನು ಭಾರತದ ಗಡಿಯತ್ತ ಸಾಗಿಸಲು ಸುಲಭವಾಗುತ್ತದೆ ಎಂಬ ಭ್ರಮೆಯಲ್ಲಿತ್ತು. ಇದನ್ನರಿತ ನರೇಂದ್ರ ಮೋದಿಯವರು ಚೀನಾದ ಕಾಮಗಾರಿಯನ್ನು ತಡೆದರು.
ಜತೆಗೆ ಭೂತಾನ್ ದೇಶಕ್ಕೆ ದೊಡ್ಡಮಟ್ಟದ ಹಣದ ಸಹಾಯ ಮಾಡಿ ಉತ್ತಮ ಬಾಂಧವ್ಯ ವನ್ನು ರೂಪಿಸಿದರು. ಮಾತುಮಾತಿಗೂ, ‘ಮೋದಿಯವರು ಹೊರದೇಶಕ್ಕೆ ಪ್ರಯಾಣ ಮಾಡು ತ್ತಾರೆ’ ಎಂದು ಚೀರಾಡುವ ಕಾಂಗ್ರೆಸ್ಸಿಗರಿಗೆ ಈ ವಿಷಯದ ಜ್ಞಾನವಿಲ್ಲ. ಈಶಾನ್ಯ ಭಾರತದ ಏಳು ರಾಜ್ಯಗಳನ್ನು ತಲುಪಲು ಅತಿ ಮುಖ್ಯವಾದ ಜಾಗ ಸಿಲಿಗುರಿ ಕಾರಿಡಾರ್. ಇದೊಂದು ಸಣ್ಣ ಭೂಭಾಗ. ಈ ಭೂಭಾಗವನ್ನು ‘ಚಿಕನ್ ನೆಕ್’ ಎಂದು ಕರೆಯುತ್ತಾರೆ.
ಕೇವಲ 200 ಕಿ.ಮೀ. ಉದ್ದ ಹಾಗೂ 60 ಕಿ.ಮೀ. ಅಗಲವಿರುವ ಭೂಭಾಗವಿದು. ಈ ಕಾರಿ ಡಾರ್‌ನ ಅತ್ಯಂತ ಸಣ್ಣ ಭಾಗ ಕೇವಲ 17 ಕಿ.ಮೀ.ಇದೆ. ಈ ಕಿರಿದಾದ ಭೂಭಾಗದಿಂದ ಮಾತ್ರ ಈಶಾನ್ಯ ಭಾರತದ ರಾಜ್ಯಗಳಿಗೆ ಸಂಪರ್ಕ ಸಾಧ್ಯ. ಗೂಗಲ್ ಮ್ಯಾಪ್ ಓಪನ್ ಮಾಡಿ ಈಶಾನ್ಯ ಭಾರತದೆಡೆಗೆ ಗಮನ ಹರಿಸಿದರೆ ‘ಚಿಕನ್ ನೆಕ್’ ಕಾಣಿಸುತ್ತದೆ.
1971ರ ಯುದ್ಧದ ನಂತರ ಇಂದಿರಾ ಗಾಂಧಿಯವರು ಬಾಂಗ್ಲಾದೇಶದ ಜತೆ ಮಾತುಕತೆ ನಡೆಸಿ ಈ ಭೂಭಾಗವನ್ನು ಮತ್ತಷ್ಟು ವಿಸ್ತರಿಸಬೇಕಿತ್ತು. ಅವರಿಗೂ ಭಾರತದ ಭದ್ರತೆಯ ದೂರದೃಷ್ಟಿಯಿರಲಿಲ್ಲ. ನೆಹರು ಕುಟುಂಬಸ್ಥರು ಮಾಡಿದ ಅನೇಕ ಪ್ರಮಾದಗಳಿಂದಾಗಿ, ಭಾರತವು ಜಗತ್ತಿನಲ್ಲಿ ತನ್ನ ಸ್ಥಾನವನ್ನು ಮೇಲೇರಿಸಿಕೊಳ್ಳಲು ಹಲವು ದಶಕಗಳೇ ಬೇಕಾ ದವು.
ನರೇಂದ್ರ ಮೋದಿಯವರು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಕ್ಕೇ, ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ಬಾಂಬ್ ಹಾಕಿದಾಗ, ಪಕ್ಕದ ಚೀನಾ ತುಟಿ ಬಿಚ್ಚಲಿಲ್ಲ. ಅದೇ ಜಾಗದಲ್ಲಿ ನೆಹರು ಇದ್ದಿದ್ದರೆ ಏನಾಗುತ್ತಿತ್ತು ಯೋಚಿಸಿ ನೋಡಿ? 2008ರಲ್ಲಿ ಮುಂಬೈನ ಬೀದಿಗಳಲ್ಲಿ ನಾಗರಿಕರ ಮೇಲೆ ಭಯೋತ್ಪಾದಕರು ದಾಳಿ ಮಾಡಿ ದಾಗ, ಕಾಂಗ್ರೆಸ್ಸಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಚೀನಾಕ್ಕೆ ಹೆದರಿ ಪಾಕಿಸ್ತಾನಕ್ಕೆ ಸಣ್ಣ ವಾರ್ನಿಂಗ್ ಸಹ ನೀಡಲಿಲ್ಲ.
2011ರಲ್ಲಿ ಅಮೆರಿಕ ತನ್ನ ಅಣು ವಿದ್ಯುತ್ ಸ್ಥಾವರದ ತ್ಯಾಜ್ಯವನ್ನು ತಂದು ಭಾರತದಲ್ಲಿ ಸುರಿಯಲು ಮುಂದಾದಾಗ, ಮನಮೋಹನ್ ಸಿಂಗ್ ಒಪ್ಪಿಗೆ ಕೊಡಲು ತಯಾರಾಗಿದ್ದರು. ಇಂದು ಭಾರತ ಬದಲಾಗಿದೆ. ಕರೋನ ನಿಯಂತ್ರಿಸಲು ಅಮೆರಿಕಕ್ಕೆ ಬೇಕಾಗಿದ್ದ ಹೈಡ್ರೋ ಕ್ಲೋರೋಕ್ವಿನ್ ಮಾತ್ರೆಗಳನ್ನು ಟನ್‌ಗಟ್ಟಲೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತುಮಾತಿಗೂ ‘ನನ್ನ ಮಿತ್ರ ಮೋದಿ’ ಎಂದು ಇಡೀ ಜಗತ್ತಿನ ಮುಂದೆ ಹೇಳುತ್ತಾರೆ. ಒಂದು ಸಲವಾದರೂ ಜಗತ್ತಿನ ಮುಂದು ವರಿದ ರಾಷ್ಟ್ರಗಳು ಕಾಂಗ್ರೆಸ್ ಆಡಳಿತಾವಽಯಲ್ಲಿ, ಭಾರತದ ಪ್ರಧಾನಿಯ ಬಗ್ಗೆ ಈ ಮಟ್ಟಿಗೆ ಮಾತನಾಡಿರಲಿಲ್ಲ.
ಕಾಂಗ್ರೆಸ್ಸಿನ ಆಡಳಿತ ಯಾವ ರೀತಿ ಇತ್ತೆಂದರೆ, ಭಾರತದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವಿಶ್ವ ನಾಯಕರ ಅನುಮತಿ ಬೇಕಿತ್ತು. ಪಾಕಿಸ್ತಾನಕ್ಕೆ ಹೆದರಿ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿಲ್ಲ. ಪಾಕಿಸ್ತಾನಕ್ಕೆ ಚೀನಾ ಮತ್ತು ಅಮೆರಿಕದ ನೆರವಿದೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿತ್ತು.
ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಿದರೆ, ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳು ನಮ್ಮ ನೆರವಿಗೆ ಬರುವುದಿಲ್ಲವೆಂಬ ಭಯವಿತ್ತು. ಮನಮೋಹನ್ ಸಿಂಗ್ ಅತ್ಯುತ್ತಮ ಪ್ರಧಾನಿ ಯೆಂದು ಬಾಯಿ ಬಡಿದುಕೊಳ್ಳುವ ಕಾಂಗ್ರೆಸ್ಸಿಗರಿಗೆ, ಯಾಕೆ ನಮ್ಮ ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅವರು ವಿಫಲರಾದರೆಂದು ಕೇಳಿದರೆ, ಉತ್ತರ ಸಿಗುವುದಿಲ್ಲ.
2019ರಲ್ಲಿ, 7 ದಶಕಗಳ ಕಾಶ್ಮೀರ ಸಮಸ್ಯೆಯನ್ನು, ಮೋದಿಯವರು ಎರಡನೇ ಬಾರಿ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ಬಗೆಹರಿಸಿದರು. ಚೀನಾ ಕೂಡ ತುಟಿ ಬಿಚ್ಚಲಿಲ್ಲ. ಅಮೆರಿಕಾ ಕಡ್ಡಿ ಎರಡು ತುಂಡಾದ ಹಾಗೆ ‘ಇದು ಭಾರತದ ಆಂತರಿಕ ಸಮಸ್ಯೆ’ ಎಂದು ಹೇಳಿತು. ಇದು ನರೇಂದ್ರ ಮೋದಿಯವರ ವಿಶ್ವ ಪರ್ಯಟನೆಯ ಪ್ರಭಾವ. ತಾವು ಸೃಷ್ಟಿಸಿದ ಪ್ರಮಾದಗಳನ್ನು ಸರಿಪಡಿಸುವ ಅನೇಕ ಅವಕಾಶಗಳು ಸ್ವತಃ ನೆಹರುರಿಗೆ ಸಿಕ್ಕರೂ ಅವರು ಸರಿಪಡಿಸಲಿಲ್ಲ.
ನಂತರ ಇಂದಿರಾ ಗಾಂಧಿಯವರು ತಮಗಿದ್ದ ಚಿನ್ನದಂಥ ಅವಕಾಶವನ್ನು 1971ರಲ್ಲಿ ಬಳಸಿಕೊಳ್ಳಲಿಲ್ಲ. ಕಾಂಗ್ರೆಸ್ಸಿನ ಅವಧಿಯಲ್ಲಿ ಅಖಂಡ ಭಾರತದ ಸಾವಿರಾರು ಕಿ.ಮೀ. ಭೂಭಾಗವನ್ನು ಪಾಕಿಸ್ತಾನ ಮತ್ತು ಚೀನಾಕ್ಕೆ ಬಿಟ್ಟುಕೊಡಲಾಗಿದೆ. ಭಾರತವನ್ನು ಏಳು ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷವು ಪಾಕಿಸ್ತಾನ ಮತ್ತು ಚೀನಾದ ವಿರುದ್ಧ ತೋರಿದ ಮೃದುಧೋರಣೆ ಇಷ್ಟಕ್ಕೆಲ್ಲ ಕಾರಣ.
ಭಾರತದ ನೆಲ-ಜಲದ ಬಗ್ಗೆ ಕಾಳಜಿ ಇಲ್ಲದವರ ಬಾಯಲ್ಲಿ ದೇಶದ ಭದ್ರತೆಯ ಮಾತು ಗಳನ್ನು ಕೇಳಿದಾಗ ನಗು ಬರುತ್ತದೆ. 1993, 1996, 2008ರಲ್ಲಿ ಚೀನಾದೊಂದಿಗೆ ಗಡಿ ಒಪ್ಪಂದವನ್ನು ಮಾಡಿಕೊಂಡಾಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಸರಕಾರ. ಭಾರತದ ಇತಿಹಾಸದಲ್ಲಿ ನಡೆದ ಅನೇಕ ಸಮಸ್ಯೆಗಳ ಸೂತ್ರಧಾರ ಮತ್ತು ಪ್ರತಿ ಬಾರಿಯೂ ದೇಶದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡ ವ್ಯಕ್ತಿ ಜವಾಹರಲಾಲ್ ನೆಹರು.