ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ವಾರಕ್ಕೆ 48 ಗಂಟೆ ಕೆಲಸ ಸಾಕೆಂದ ಹೊಸ ಕಾರ್ಮಿಕ ನೀತಿ !

ಹೊಸ ಕಾರ್ಮಿಕ ನೀತಿ ಸಂಹಿತೆ ನಿರೀಕ್ಷೆಯಂತೆ ಸಂಚಲನ ಮೂಡಿಸಿದೆ. ಟ್ಯಾಕ್ಸಿ ಕ್ಯಾಬ್ ಚಾಲಕರು, ಡೆಲಿವರಿ ಬಾಯ್ಸ್ ಮತ್ತು ದಿನಗೂಲಿ ಕಾರ್ಮಿಕರಿಗೆ ಅದು ಸಿಹಿ ಸುದ್ದಿ ನೀಡಿದೆ. ಜತೆಗೆ ಕೆಲವು ಬಗೆಯ ಆತಂಕ, ಗೊಂದಲಗಳನ್ನೂ ಸೃಷ್ಟಿಸಿದೆ. ಹೀಗಿದ್ದರೂ ಇದು ಹಲವು ಆಯಾಮಗಳಿಂದ ಕಾರ್ಮಿಕ ಸ್ನೇಹಿಯಾಗಿದೆ ಎನ್ನಲು ಕಾರಣಗಳೂ ಇವೆ. ‌

ಮನಿ ಮೈಂಡೆಡ್

ಕೇಂದ್ರ ಸರಕಾರವು 29 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ, 4 ಕಾರ್ಮಿಕ ನೀತಿಸಂಹಿತೆಗಳನ್ನು ರಚಿಸಿದೆ. ಇದು ಕಾರ್ಮಿಕ ಕೇಂದ್ರಿತವಾಗಿದೆ, ಭವಿಷ್ಯದ ಪೀಳಿಗೆಯ ಉದ್ಯೋಗಿಗಳನ್ನುಸಜ್ಜುಗೊಳಿಸಲಿದೆ. ಹೊಸ ಸಂಹಿತೆಯ ಪ್ರಕಾರ, ನಿಮ್ಮ ಸಂಬಳದ ಕನಿಷ್ಠ 50 ಪರ್ಸೆಂಟ್ ಪಾಲು ಮೂಲವೇತನ (ಬೇಸಿಕ್ ಪೇ) ಎಂದು ಪರಿಗಣನೆ ಯಾಗಬೇಕು.

ಹೊಸ ಕಾರ್ಮಿಕ ನೀತಿಸಂಹಿತೆ ನಿರೀಕ್ಷೆಯಂತೆ ಸಂಚಲನ ಮೂಡಿಸಿದೆ. ಟ್ಯಾಕ್ಸಿ ಕ್ಯಾಬ್ ಚಾಲಕರು, ಡೆಲಿವರಿ ಬಾಯ್ಸ್ ಮತ್ತು ದಿನಗೂಲಿ ಕಾರ್ಮಿಕರಿಗೆ ಅದು ಸಿಹಿಸುದ್ದಿ ನೀಡಿದೆ. ಜತೆಗೆ ಕೆಲವು ಬಗೆಯ ಆತಂಕ, ಗೊಂದಲಗಳನ್ನೂ ಸೃಷ್ಟಿಸಿದೆ. ಹೀಗಿದ್ದರೂ ಇದು ಹಲವು ಆಯಾಮಗಳಿಂದ ಕಾರ್ಮಿಕ ಸ್ನೇಹಿಯಾಗಿದೆ ಎನ್ನಲು ಕಾರಣಗಳೂ ಇವೆ. ‌

ಇನ್ಫೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಸೇರಿದಂತೆ ಕಾರ್ಪೊರೇಟ್ ವಲಯದ ಕೆಲವು ದಿಗ್ಗಜರು ವಾರಕ್ಕೆ 72 ಗಂಟೆಗಳ ದುಡಿಮೆ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಇದು ಜಿeಸೆಗೆ ಕಾರಣವಾಗಿತ್ತು. ಮಾಡುವ ಕೆಲಸಕ್ಕೆ ತಕ್ಕಂತೆ ಸಂಬಳ ಕೊಡುತ್ತಾರೆಯೇ? ಎಂದು ಜಾಲತಾಣಗಳಲ್ಲಿ ಜನ ಪ್ರಶ್ನಿಸಿದ್ದರು.

ಈ ನಡುವೆ ಕೇಂದ್ರ ಸರಕಾರ 2025ರ ನವೆಂಬರ್ 21ರಂದು ನೂತನ ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳನ್ನು ಜಾರಿಗೊಳಿಸಿದೆ. ಇದರ ಪ್ರಕಾರ, ವಾರಕ್ಕೆ 48 ಗಂಟೆಗಳ ಕೆಲಸ ಸಾಕು. ವಾರದ ೬ ದಿನಗಳಲ್ಲಿ ಪ್ರತಿದಿನ ೮ ಗಂಟೆಗಳ ಕೆಲಸದ ಮಿತಿಯನ್ನು ನಿಗದಿಪಡಿಸಿದೆ. ಒಂದು ವೇಳೆ ವಾರಕ್ಕೆ ೫ ದಿನಗಳ ಕೆಲಸ ಅಥವಾ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ನಿಗದಿಪಡಿಸಿದರೂ, ದಿನಕ್ಕೆ ೧೨ ಗಂಟೆ ಗಿಂತ ಹೆಚ್ಚು ಕೆಲಸ ಇರಕೂಡದು.

ಇದನ್ನೂ ಓದಿ: Keshava Prasad B Column: ವಾರಕ್ಕೆ 72 ಗಂಟೆ ಕೆಲಸ ಮಾಡಿ ಎಂದು ಅವರೆಲ್ಲ ಹೇಳುತ್ತಿರುವುದೇಕೆ ?

ಈ 12 ಗಂಟೆಯಲ್ಲಿ ವಿರಾಮದ ಬಿಡುವು ಕೂಡ ಸೇರಿಕೊಂಡಿರಬೇಕು ಎಂದು ನೂತನ ಕಾರ್ಮಿಕ ನೀತಿಸಂಹಿತೆ ತಿಳಿಸಿದೆ. ಜತೆಗೆ ಇದೇ ಮೊದಲ ಬಾರಿಗೆ ಗಿಗ್ ಕಾರ್ಮಿಕರಿಗೆ, ಅಂದರೆ ಸ್ವಿಗ್ಗಿ, ಜೊಮ್ಯಾಟೊ, ಡೊನ್ಜೊ, ಅಮೆಜಾನ್, ಫ್ಲಿಪ್‌ಕಾರ್ಟ್ ಮೊದಲಾದ ಆನ್‌ಲೈನ್ ಕಂಪನಿಗಳಲ್ಲಿ ದುಡಿಯುವ ಡೆಲಿವರಿ ಬಾಯ್‌ಗಳಿಗೆ, ಓಲಾ-ಉಬರ್ ಮೊದಲಾದ ನೆಟ್‌ವರ್ಕ್‌ಗಳಲ್ಲಿ ದುಡಿಯುವ ಕ್ಯಾಬ್ ಚಾಲಕರಿಗೆ ಸಾಮಾಜಿಕ ಭದ್ರತೆ, ಅಂದರೆ ಭವಿಷ್ಯನಿಧಿ ಅಥವಾ ಪಿಎಫ್, ಪಿಂಚಣಿ, ವಿಮೆ ಸೌಲಭ್ಯ ಸಿಗಲಿರುವುದು ಉತ್ತಮ ಬೆಳವಣಿಗೆ. ಒಂದು ವೇಳೆ ದಿನಕ್ಕೆ ೮ ಗಂಟೆಗಳ ಬಳಿಕ ದುಡಿಸುವು ದಿದ್ದರೆ, ಅದಕ್ಕೆ ಉದ್ಯೋಗಿಯ ಒಪ್ಪಿಗೆ ಇರಬೇಕು. ‌

ಜತೆಗೆ ಹೆಚ್ಚುವರಿ ಗಂಟೆಗಳ ಕೆಲಸಕ್ಕೆ ಇಮ್ಮಡಿ ವೇತನವನ್ನು ನೀಡಬೇಕಾಗುತ್ತದೆ. ಇದೀಗ ಕಂಪನಿ ಗಳ ಸಿಇಒಗಳು ತಮ್ಮ ಉದ್ಯೋಗಿಗಳಿಗೆ ವಾರಕ್ಕೆ 48 ಗಂಟೆಗಳ ಮಿತಿ ದಾಟಿದರೆ ಎರಡು ಪಟ್ಟು ಸಂಬಳ ಕೊಡುತ್ತಾರೆಯೇ ಎಂಬ ಕುತೂಹಲ ಉಂಟಾಗಿದೆ. ವಾರಕ್ಕೆ 72 ಗಂಟೆಗಳ ಕಾಲ ಕೆಲಸ ಮಾಡಬೇಕು ಎನ್ನುವವರು 48 ಗಂಟೆ ದಾಟಿದ ಬಳಿಕ ಇಮ್ಮಡಿ ಸಂಬಳ ಕೊಡಬೇಕಾಗುತ್ತದೆ.

ಇಲ್ಲದಿದ್ದರೆ ಅದು ಕಾನೂನುಬಾಹಿರವಾಗುತ್ತದೆ. ಕೇಂದ್ರ ಸರಕಾರವು ೨೯ ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ, ೪ ಕಾರ್ಮಿಕ ನೀತಿಸಂಹಿತೆಗಳನ್ನು ರಚಿಸಿದೆ. ಇದು ಕಾರ್ಮಿಕ ಕೇಂದ್ರಿತವಾಗಿದೆ, ಭವಿಷ್ಯದ ಪೀಳಿಗೆಯ ಉದ್ಯೋಗಿಗಳನ್ನುಸಜ್ಜುಗೊಳಿಸಲಿದೆ.

ಹೊಸ ಸಂಹಿತೆಯ ಪ್ರಕಾರ, ನಿಮ್ಮ ಸಂಬಳದ ಕನಿಷ್ಠ 50 ಪರ್ಸೆಂಟ್ ಪಾಲು ಮೂಲವೇತನ (ಬೇಸಿಕ್ ಪೇ) ಎಂದು ಪರಿಗಣನೆಯಾಗಬೇಕು. ಉದಾಹರಣೆಗೆ ನಿಮ್ಮ ಸಂಬಳ 10 ಲಕ್ಷ ರುಪಾಯಿ ಆಗಿದ್ದರೆ, ಅದರಲ್ಲಿ ೫ ಲಕ್ಷ ರುಪಾಯಿ ಮೂಲವೇತನವಾಗುತ್ತದೆ. ಇದರ ಪರಿಣಾಮ ನಿಮ್ಮ ಮಾಸಿಕ ನಿವ್ವಳ ವೇತನ (ಟೇಕ್ ಹೋಮ್ ಸ್ಯಾಲರಿ) ಕಡಿಮೆಯಾಗಲಿದೆ. ಆರೆ ಇದು ಒಳ್ಳೆಯದೇ. ಏಕೆಂದರೆ, ನಿಮ್ಮ ಭವಿಷ್ಯನಿಧಿ ಅಥವಾ ಪಿಎಫ್ ಹಣದ ಉಳಿತಾಯ ಹೆಚ್ಚಲಿದೆ. ‌

Labour law R

ನಿವೃತ್ತಿಯ ಆರ್ಥಿಕ ಭದ್ರತೆಗೆ ಹೆಚ್ಚು ಒತ್ತು ಸಿಗಲಿದೆ. ಎರಡನೆಯದಾಗಿ ಕನಿಷ್ಠ ವೇತನ ಗ್ಯಾರಂಟಿ ಯಾಗಿ ಸಿಗಲಿದೆ. ಸಂಘಟಿತ ಅಥವಾ ಅಸಂಘಟಿತ ವಲಯದ ಕಾರ್ಮಿಕರಿಗೆ ಇದು ಅನ್ವಯ ವಾಗಲಿದೆ. ಭಾರತದಲ್ಲಿ ಕೆಲಸ ಮಾಡುವುದಿದ್ದರೆ, ಕನಿಷ್ಠ ವೇತನ ಖಚಿತವಾಗಿ ಸಿಗಲಿದೆ.

2019ರಲ್ಲಿ ತಜ್ಞರ ಸಮಿತಿಯ ಶಿಫಾರಸು ಪ್ರಕಾರ ದಿನಕ್ಕೆ ಕನಿಷ್ಠ ವೇತನವು 375 ರುಪಾಯಿ ಆಗಿದೆ. ಇದು ಮತ್ತೊಮ್ಮೆ ಲೆಕ್ಕಾಚಾರವಾಗಿ ಪರಿಷ್ಕರಣೆಯಾಗುವ ಸಾಧ್ಯತೆಯೂ ಇದೆ. ಮೂರನೆಯದಾಗಿ ಸಕಾಲಕ್ಕೆ ಸಂಬಳ ವಿತರಣೆ ಕಡ್ಡಾಯವಾಗಲಿದೆ. ದಿನಗೂಲಿ ಕಾರ್ಮಿಕರಿಗೆ ದಿನದ ಕೊನೆಯಲ್ಲಿ ವೇತನ ಬಟವಾಡೆ ಆಗಬೇಕು. ವಾರದ ಲೆಕ್ಕದಲ್ಲಿರುವವರಿಗೆ ವಾರಾಂತ್ಯಕ್ಕೆ ಸಂಬಳ ಕೊಡಬೇಕು. ಮಾಸಿಕ ಸಂಬಳ ಪಡೆಯುವವರಿಗೆ ಮುಂದಿನ ತಿಂಗಳು ೭ನೇ ತಾರೀಕಿನ ಒಳಗೆ ವೇತನ ವಿತರಣೆ ಯಾಗಬೇಕು.

ನಾಲ್ಕನೆಯದಾಗಿ ನಾನೀಗಾಗಲೇ ಬರೆದಿರುವಂತೆ ಕೆಲಸದ ಅವಽ ನಿಶ್ಚಿತವಾಗಿದೆ. ಐದನೆಯದಾಗಿ ‘ಗಿಗ್’ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸಿಗಲಿದೆ. ಡೆಲಿವರಿ ಬಾಯ್ಸ, ಕ್ಯಾಬ್ ಡ್ರೈವರ್‌ಗಳಿಗೆ ಸಾಮಾಜಿಕ ಭದ್ರತೆ ದೊರೆಯಲಿದೆ. ಅಂದರೆ ಇನ್ಷೂರೆನ್ಸ್, ಹೆ‌ಲ್ತ್ ಬೆನಿಫಿಟ್ ಸಿಗಲಿದೆ. ‌

ಆರನೆಯದಾಗಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಅನ್ವಯ ವಾಗಲಿದೆ. ಮಹಿಳೆಯರು ರಾತ್ರಿ ಪಾಳಿಯಲ್ಲೂ ಕೆಲಸ ಮಾಡಬಹುದು. ಆದರೆ ಅವರಿಗೆ ಭದ್ರತೆ ಒದಗಿಸಬೇಕಾಗುತ್ತದೆ. ಏಳನೆಯದಾಗಿ ೪೦ ವರ್ಷ ದಾಟಿದ ಉದ್ಯೋಗಿಗಳಿಗೆ ಪ್ರತಿ ವರ್ಷ ಉಚಿತ ವಾಗಿ ಆರೋಗ್ಯ ತಪಾಸಣೆ ನಡೆಸಬೇಕಾಗುತ್ತದೆ.

ಎಂಟನೆಯದಾಗಿ ನಿರ್ದಿಷ್ಟ ಅವಧಿಗೆ ನೇಮಕವಾಗುವ ಉದ್ಯೋಗಿಗಳಿಗೆ, ಗ್ರಾಚ್ಯುಯಿಟಿಗೆ ಅರ್ಹತೆ ಪಡೆಯಲು ಒಂದು ವರ್ಷ ಸೇವೆ ಸಲ್ಲಿಸಿದರೂ ಸಾಕು. ಈ ಮೊದಲು ಅವರಿಗೂ ೫ ವರ್ಷದ ಸೇವೆ ಬೇಕಾಗುತ್ತಿತ್ತು. ಆದರೆ ರೆಗ್ಯುಲರ್ ಉದ್ಯೋಗಿಗಳಿಗೆ ೫ ವರ್ಷ ಸೇವೆ ಸಲ್ಲಿಸಬೇಕಾಗುತ್ತದೆ.

ಭಾರತದಲ್ಲಿ ಕಾರ್ಮಿಕ ನೀತಿಗಳು ಸುಧಾರಣೆ ಆಗಬೇಕು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಕಂಪನಿಗಳು ಕೂಡ ಹಲವಾರು ಸಂಕೀರ್ಣ ಕಾಯಿದೆಗಳಿಂದ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದವು. ಮತ್ತೊಂದು ಕಡೆ ಉದ್ಯೋಗಿಗಳಿಗೂ ಸಾಮಾಜಿಕ ಭದ್ರತೆ, ಕೆಲಸದ ಅವಧಿ, ಕನಿಷ್ಠ ವೇತನದ ಖಾತರಿಯ ಅಗತ್ಯತೆ ಇತ್ತು.

ಡೆಲಿವರಿ ಬಾಯ್ಸ್, ಕ್ಯಾಬ್ ಡ್ರೈವರ್ಸ್ ಇದುವರೆಗೆ ಅಸಂಘಟಿತ ವಲಯದಲ್ಲಿದ್ದರು. ಅವರಿಗೆ ಸಾಮಾಜಿಕ ಭದ್ರತೆಯ ಚೌಕಟ್ಟು ಸಿಗುತ್ತಿರುವುದು ಶ್ಲಾಘನೀಯ. ಇದು ಅವರ ವೈಯಕ್ತಿಕ ಹಣ ಕಾಸು ಪರಿಸ್ಥಿತಿ ಸುಧಾರಿಸಲು, ಸಾಲದ ಅರ್ಹತೆ ಹೆಚ್ಚಿಸಲು ಹಾದಿಯನ್ನು ಸುಗಮಗೊಳಿಸಲಿದೆ. ‌

ಅನೌಪಚಾರಿಕ ವಲಯವು ಔಪಚಾರಿಕ ವಲಯವಾಗಿ ಬದಲಾಗಲಿರುವುದು ಸ್ವಾಗತಾರ್ಹ. ಏಕೆಂದರೆ ಭಾರತದಲ್ಲಿ ಈಗ ಸುಮಾರು ೧ ಕೋಟಿ ಗಿಗ್ ಕಾರ್ಮಿಕರು ಇದ್ದಾರೆ. 2029-30ರ ವೇಳೆಗೆ ಇವರ ಸಂಖ್ಯೆ ೨ ಕೋಟಿ 35 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.

ಜಾರಿಯಾಗಿರುವ ನಾಲ್ಕು ಕಾರ್ಮಿಕ ನೀತಿಸಂಹಿತೆಗಳ ಹೆಸರುಗಳು, ಅವುಗಳ ವ್ಯಾಪ್ತಿ ಮತ್ತು ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ನೋಡೋಣ.

೧. ವೇತನ ಸಂಹಿತೆ 2019 (Code on wages): ಇದು ಸಂಬಳ, ಕನಿಷ್ಠ ವೇತನ ಮತ್ತು ಸಂಬಳ ವಿತರಣೆ ಹೇಗಿರಬೇಕು ಎಂದು ತಿಳಿಸಿದೆ.

೨. ಕೈಗಾರಿಕಾ ಸಂಬಂಧಗಳ ನೀತಿಸಂಹಿತೆ 2020 (Hiring, firing, dispute resolution, unions): ನೇಮಕಾತಿ, ವಜಾ, ವಿವಾದ ಇತ್ಯರ್ಥ, ಯೂನಿಯನ್ ವಿಚಾರಗಳನ್ನು ಇದು ಒಳಗೊಂಡಿದೆ.

೩. ಸಾಮಾಜಿಕ ಭದ್ರತೆಯ ನೀತಿಸಂಹಿತೆ ( Code on social security , 2020): ಇದು ಪಿಎಫ್, ಇಎಸ್‌ಐಸಿ, ತಾಯ್ತನದ ರಜೆ, ಗಿಗ್ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರ ವಿಷಯ ಗಳನ್ನು ಒಳಗೊಂಡಿದೆ. ‌

೪. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿ (Occupational safety, health, and working conditions code 2020): ಇದು ಎಲ್ಲ ಇಂಡಸ್ಟ್ರಿಗಳಲ್ಲಿನ ಕೆಲಸದ ಸುರಕ್ಷತೆಯನ್ನು ಒಳಗೊಂಡಿದೆ.

1930-1950ರ ಕಾಲಘಟ್ಟದಲ್ಲಿ ರಚಿಸಲಾಗಿದ್ದ ಕಾರ್ಮಿಕ ಕಾನೂನುಗಳನ್ನೇ ಭಾರತವು ಹಲವಾರು ದಶಕಗಳಿಂದಲೂ ಅನುಸರಿಸುತ್ತಿತ್ತು. ಆಗಿನ ವ್ಯವಸ್ಥೆಗೂ ಈಗಿನ ಪರಿಸ್ಥಿತಿಗೂ ಅದು ಹೊಂದು ತ್ತಿರಲಿಲ್ಲ. ಮುಖ್ಯವಾಗಿ ಈಗ ಗಿಗ್ ಇಕಾನಮಿ ಬೆಳೆಯುತ್ತಿದೆ. ಕೋಟ್ಯಂತರ ಮಂದಿ ಈ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದು, ಇವರು ಸಂಘಟಿತ ವಲಯದ ಸೌಲಭ್ಯಗಳಿಂದ ವಂಚಿತರಾಗುವುದು ಸಮಂಜಸವೂ ಅಲ್ಲ. ಡಿಜಿಟಲ್ ಮಾಧ್ಯಮಗಳು, ಎಂಎಸ್‌ಎಂಇಗಳು, ಭಾರಿ ಕೈಗಾರಿಕೆಗಳು ವ್ಯವಸ್ಥೆ ಯಲ್ಲಿವೆ.

ಆದ್ದರಿಂದ ನೀತಿಸಂಹಿತೆಗಳ ಸುಧಾರಣೆ ಅವಶ್ಯವಿತ್ತು. 2025ರ ನೀತಿಸಂಹಿತೆ ಬರುವುದಕ್ಕೆ ಮುನ್ನ ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡುವುದು ಕಡ್ಡಾಯವಾಗಿರಲಿಲ್ಲ. ಈಗ ಎಲ್ಲರಿಗೂ ಕಡ್ಡಾಯ ವಾಗಿದೆ. ಸಾಮಾಜಿಕ ಭದ್ರತೆಯು ಮೊದಲು ಸೀಮಿತ ಕವರೇಜ್ ಅನ್ನು ಹೊಂದಿತ್ತು. ಈಗ ಎಲ್ಲ ಕೆಲಸಗಾರರಿಗೂ ಪಿಎಫ್, ಇಎಸ್‌ಐಸಿ, ವಿಮೆಯನ್ನು ಕೊಡಲೇಬೇಕು.‌

ಮೊದಲು ವರ್ಗೀಕೃತ ಉದ್ಯೋಗಿಗಳಿಗೆ ಮಾತ್ರ ಕನಿಷ್ಠ ವೇತನ ಮಿತಿ ಇತ್ತು. ಈಗ ಪ್ರತಿಯೊಬ್ಬ ಕಾರ್ಮಿಕರಿಗೂ ಅನ್ವಯವಾಗಲಿದೆ. ಮೊದಲು ವಾರ್ಷಿಕ ಆರೋಗ್ಯ ತಪಾಸಣೆ ಇರಲಿಲ್ಲ. ಈಗ 40 ಕ್ಕೂ ಹೆಚ್ಚು ಸಿಬ್ಬಂದಿ ಇರುವ ಸಂಸ್ಥೆಯಲ್ಲಿ ವಾರ್ಷಿಕ ಉಚಿತ ಆರೋಗ್ಯ ತಪಾಸಣೆ ಮಾಡಬೇಕು.

ಮೊದಲು ಸಕಾಲಕ್ಕೆ ವೇತನ ಪಾವತಿ ಆಗಬೇಕೆಂದು ಇರಲಿಲ್ಲ. ಈಗ ಕಡ್ಡಾಯವಾಗಿದೆ. ಮೊದಲು ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನಿರ್ಬಂಧ ಇತ್ತು. ಈಗ ಸುರಕ್ಷತೆಯನ್ನು ಒದಗಿಸಿದರೆ ರಾತ್ರಿ ಪಾಳಿಯ ಕೆಲಸಕ್ಕೂ ಅನುಮತಿ ನೀಡಬಹುದು. ಈ ಹಿಂದೆ ಇಎಸ್‌ಐಸಿ ಕವರೇಜ್ ಅಧಿ ಸೂಚಿತ ಪ್ರದೇಶಗಳಿಗೆ ಸೀಮಿತವಾಗಿತ್ತು. ಈಗ ಸಣ್ಣ ಘಟಕಗಳಿಗೂ ವಿಸ್ತರಿಸಿದೆ.

ಮೊದಲು ಹಲವಾರು ರಿಟ ಮತ್ತು ಲೈಸೆನ್ಸ್ ಅಗತ್ಯ ಇದ್ದರೆ ಈಗ ಇಳಿಕೆಯಾಗಿದೆ. ಹೀಗಿದ್ದರೂ, ಕೆಲವು ವಿಚಾರಗಳಲ್ಲಿ ಗೊಂದಲ ಮತ್ತು ಪ್ರಶ್ನೆಗಳು ಮುಂದುವರಿದಿವೆ. ಉದಾಹರಣೆಗೆ ರಾಜ್ಯಗಳು ನಾನಾ ಸೆಸ್ ಗಳ ಮೂಲಕ ಗಿಗ್ ಕಾರ್ಮಿಕರಿಗೆ ಪರಿಹಾರ ನೀಡಲು ಆರ್ಥಿಕ ಸಂಪನ್ಮೂಲ ಸಂಗ್ರಹಿಸುತ್ತಿರುವುದೇಕೆ? ಎಂಬ ಪ್ರಶ್ನೆ ಇದೆ. ‌

ಅದೇ ರೀತಿ ಓಲಾ, ಉಬರ್ ಮೊದಲಾದ ಅಗ್ರಿಗೇಟರ್ ಗಳು ಗಿಗ್ ವರ್ಕರ್‌ಗಳನ್ನು ತಮ್ಮ ಉದ್ಯೋಗಿ ಗಳು ಎಂದು ಒಪ್ಪಿಕೊಳ್ಳುವುದಿಲ್ಲ. ಈ ಚಾಲಕರು ತಮ್ಮದೇ ವಾಹನವನ್ನು ಖರೀದಿಸಿರು ತ್ತಾರೆ. ಅವರು ಸ್ವತಂತ್ರವಾಗಿ ಸೇವೆ ಒದಗಿಸುವವರು. ಹೀಗಿರುವಾಗ ಇವರನ್ನು ವೇತನ ಪಡೆಯುವ ಕಾರ್ಮಿಕರು ಎಂದು ಪರಿಗಣಿಸುವುದು ಹೇಗೆ? ಇವರ ವೇತನ ಪ್ಯಾಕೇಜ್‌ಗೆ ಸಾರ್ವಜನಿಕರು ಖರೀದಿ ಸುವ ಮೋಟಾರು ವಾಹನಗಳ ಮೇಲೆ ಸೆಸ್ ವಿಧಿಸಿ ಸಂಗ್ರಹಿಸುವುದು ಎಷ್ಟು ಸರಿ ಎಂಬ ವಾದವೂ ಇದೆ.

ಸಾರಿಗೆ ವಲಯವು ಕೇಂದ್ರ-ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ರಾಜ್ಯಗಳ ಹೊಣೆಗಾರಿಕೆಯೂ ಇಲ್ಲಿರುತ್ತದೆ. ಎರಡನೆಯದಾಗಿ ಗುತ್ತಿಗೆ ಅಧಾರಿತ ಕಾರ್ಮಿಕರಿಗೆ ಗ್ರಾಚ್ಯುಯಿಟಿ, ಪಿಎಫ್, ಕನಿಷ್ಠ ವೇತನ ಇತ್ಯಾದಿ ಅನುಕೂಲ ಆದರೂ, ಕಾಯಂ ಉದ್ಯೋಗಗಳು ನಶಿಸಿ ಹೋಗಲಿ‌ ವೆಯೇ ಎಂಬ ಆತಂಕವೂ ಇದೆ. ಆದರೆ ತಜ್ಞರ ಪ್ರಕಾರ ಕಾಯಂ ಉದ್ಯೋಗಗಳು ಕಣ್ಮರೆಯಾಗ ದಿದ್ದರೂ, ಕಂಪನಿಗಳಲ್ಲಿ ಕೆಲಸದ ಸ್ವರೂಪದಲ್ಲಿ ಹೊಸ ಸ್ವರೂಪ ಕಾಣಬಹುದು ಎನ್ನುತ್ತಾರೆ ತಜ್ಞರು.

ಕೇಶವ ಪ್ರಸಾದ್​ ಬಿ

View all posts by this author