ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಪಂಚತಂತ್ರ ಕಥೆಗಳು: ಕಾಗೆಗಳು ಮತ್ತು ಕ್ರೂರಿಯಾದ ಕೃಷ್ಣಸರ್ಪ

ಹತಾಶೆಯಲ್ಲಿದ್ದ ಕಾಗೆಗಳು ಹತ್ತಿರದ ಇದ್ದ ತಮ್ಮ ಆಪ್ತ ಮಿತ್ರನಾದ ನರಿಯ ಬಳಿ ಹೋಗಿ, ಮಿತ್ರನೇ, ಆ ದುಷ್ಟ ಸರ್ಪ ನಮ್ಮೆಲ್ಲ ಮಕ್ಕಳನ್ನು ತಿಂದು ಮುಗಿಸುತ್ತಿದೆ. ನಾವು ಮರವನ್ನು ಬಿಟ್ಟು ಹೋಗಬೇಕೇ ಅಥವಾ ಅದನ್ನು ಸಂಹರಿಸಲು ಏನಾದರೂ ಉಪಾಯವಿದೆಯೇ? ಎಂದು ಕಣ್ಣೀರಿಟ್ಟವು. ಆಗ ಚತುರ ನರಿ ನಸುನಕ್ಕು, ಮಿತ್ರರೇ, ಶತ್ರು ಎಷ್ಟೇ ವಿಷಕಾರಿಯಾಗಿದ್ದರೂ, ಅವನನ್ನು ನೇರ ಯುದ್ಧದಲ್ಲಿ ಎದುರಿಸ ಬಾರದು. ಯುಕ್ತಿಯಿಂದ ಬೇರೆಯವರ ಶಕ್ತಿಯನ್ನೇ ಬಳಸಿ ಶತ್ರುವನ್ನು ಹಣಿಯಬೇಕು ಎಂದು ಒಂದು ಯೋಜನೆ ತಿಳಿಸಿತು.

ಸೋಮದೇವನ ‘ಕಥಾಸರಿತ್ಸಾಗರ’ದ ‘ವಿಷಮಶೀಲ ಲಂಬಕ’ದಲ್ಲಿ ಬರುವ ಪಂಚತಂತ್ರದ ‘ಮಿತ್ರ ಭೇದ’ ತಂತ್ರದ ಮತ್ತೊಂದು ಸುಪ್ರಸಿದ್ಧ ನೀತಿಕಥೆ ‘ಕಾಗೆ ಮತ್ತು ಕೃಷ್ಣಸರ್ಪ’ದ್ದು. ದೊಡ್ಡದೊಂದು ಆಲದ ಮರ ದಲ್ಲಿ ಗಂಡು ಮತ್ತು ಹೆಣ್ಣು ಕಾಗೆಗಳು ಬಹುಕಾಲ ದಿಂದ ಗೂಡು ಕಟ್ಟಿಕೊಂಡು ಸುಖವಾಗಿದ್ದವು. ಆದರೆ ಆ ಮರದ ಬುಡದಲ್ಲಿದ್ದ ಹುತ್ತದಲ್ಲಿ ಕಡು ಕಪ್ಪಾದ, ಕ್ರೂರ ಕೃಷ್ಣಸರ್ಪ ವೊಂದು ವಾಸವಾಗಿತ್ತು.

ಹೆಣ್ಣು ಕಾಗೆ ಮೊಟ್ಟೆಯಿಟ್ಟು ಮರಿ ಮಾಡಿ ದಾಗಲೆಲ್ಲ, ಕಾಗೆ ದಂಪತಿ ಆಹಾರ ಹುಡುಕಲು ಹೊರಹೋದ ಸಮಯ ನೋಡಿ ಆ ಸರ್ಪ ಮರವೇರಿ ಪುಟ್ಟ ಮರಿಗಳನ್ನು ನುಂಗಿಬಿಡುತ್ತಿತ್ತು. ಗೂಡಿಗೆ ಮರಳಿ ಬಂದು ಬರಿದಾದ ಗೂಡನ್ನು ಕಂಡ ಕಾಗೆಗಳು ತೀವ್ರ ದುಃಖದಿಂದ ರೋದಿಸು ತ್ತಿದ್ದವು. ತಮ್ಮ ಸಂತಾನವನ್ನು ನಿರಂತರವಾಗಿ ಕಬಳಿಸುತ್ತಿದ್ದ ಸರ್ಪವನ್ನು ಎದುರಿಸುವ ಶಕ್ತಿ ಕಾಗೆಗಳಿಗಿರಲಿಲ್ಲ. ಹಾವಿನ ವಿಷದ ಮುಂದೆ ತಮ್ಮ ಕೊಕ್ಕು ಗಳು ನಿಸ್ಸಹಾಯಕವೆಂದು ಅವುಗಳಿಗೆ ತಿಳಿದಿತ್ತು.

ಹತಾಶೆಯಲ್ಲಿದ್ದ ಕಾಗೆಗಳು ಹತ್ತಿರದ ಇದ್ದ ತಮ್ಮ ಆಪ್ತ ಮಿತ್ರನಾದ ನರಿಯ ಬಳಿ ಹೋಗಿ, ಮಿತ್ರನೇ, ಆ ದುಷ್ಟ ಸರ್ಪ ನಮ್ಮೆಲ್ಲ ಮಕ್ಕಳನ್ನು ತಿಂದು ಮುಗಿಸುತ್ತಿದೆ. ನಾವು ಮರವನ್ನು ಬಿಟ್ಟು ಹೋಗಬೇಕೇ ಅಥವಾ ಅದನ್ನು ಸಂಹರಿಸಲು ಏನಾದರೂ ಉಪಾಯವಿದೆಯೇ? ಎಂದು ಕಣ್ಣೀರಿಟ್ಟವು. ಆಗ ಚತುರ ನರಿ ನಸುನಕ್ಕು, ಮಿತ್ರರೇ, ಶತ್ರು ಎಷ್ಟೇ ವಿಷಕಾರಿಯಾಗಿದ್ದರೂ, ಅವನನ್ನು ನೇರ ಯುದ್ಧದಲ್ಲಿ ಎದುರಿಸ ಬಾರದು. ಯುಕ್ತಿಯಿಂದ ಬೇರೆಯವರ ಶಕ್ತಿಯನ್ನೇ ಬಳಸಿ ಶತ್ರುವನ್ನು ಹಣಿಯಬೇಕು ಎಂದು ಒಂದು ಯೋಜನೆ ತಿಳಿಸಿತು.

ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಜಾಣ ಮೊಲದಿಂದ ಕ್ರೂರ ಸಿಂಹಕ್ಕೆ ಶಾಸ್ತಿ

ಮರುದಿನ ಆ ಪ್ರದೇಶದ ರಾಜಕುಮಾರ ತನ್ನ ಪರಿವಾರ ಮತ್ತು ಅಂಗರಕ್ಷಕರೊಂದಿಗೆ ಕಾಡಿನ ಹತ್ತಿರದ ಕೊಳದಲ್ಲಿ ಜಲಕ್ರೀಡೆಗೆ ಬಂದಿದ್ದ. ತನ್ನ ಅಮೂಲ್ಯವಾದ ಮುತ್ತಿನ ರತ್ನಹಾರ ಮತ್ತು ವಸಗಳನ್ನು ದಡದ ಕಲ್ಲಿನ ಮೇಲಿಟ್ಟು ನೀರಿಗಿಳಿ ದಿದ್ದ. ಯೋಜನೆಯಂತೆ ಕಾಗೆಯು ಮೆಲ್ಲನೆ ಹಾರಿ ಬಂದು, ಕಾವಲುಗಾರರ ಕಣ್ಣೆದುರೇ ಆ ಹೊಳೆಯುವ ರತ್ನಹಾರವನ್ನು ಕೊಕ್ಕಿನಲ್ಲಿ ಹಿಡಿದು ಆಕಾಶಕ್ಕೆ ಹಾರಿತು.

ಕಾವಲುಗಾರರು ಕಳ್ಳ ಕಾಗೆ, ಹಿಡಿಯಿರಿ! ಎಂದು ಬಿಲ್ಲು-ಬಾಣ ಮತ್ತು ಕೋಲುಗಳನ್ನು ಹಿಡಿದು ಕಾಗೆಯ ಹಿಂದೆಯೇ ಓಡಿದರು. ಕಾಗೆಯು ಸೈನಿಕರಿಗೆ ಕಾಣುವಷ್ಟೇ ವೇಗದಲ್ಲಿ ಹಾರುತ್ತಾ, ನೇರವಾಗಿ ತನ್ನ ಆಲದ ಮರದ ಬಳಿಗೆ ತಲುಪಿತು. ಮರದ ಬುಡದಲ್ಲಿದ್ದ ಕೃಷ್ಣಸರ್ಪದ ಹುತ್ತದೊಳಗೆ ಆ ರತ್ನಹಾರವನ್ನು ಬೀಳಿಸಿ ತಾನು ಮರದ ಕೊಂಬೆಯ ಮೇಲೆ ಕುಳಿತುಕೊಂಡಿತು. ಅಲ್ಲಿಗೆ ಧಾವಿಸಿ ಬಂದ ರಾಜನ ಸೈನಿಕರು ಹುತ್ತ ದೊಳಗೆ ಹೊಳೆಯುತ್ತಿದ್ದ ಹಾರವನ್ನು ಕಂಡರು. ಅದನ್ನು ಹೊರತೆಗೆಯಲು ಕೋಲುಗಳಿಂದ ಹುತ್ತವನ್ನು ಅಗೆಯಲಾರಂಭಿಸಿದರು. ಆ ಶಬ್ದಕ್ಕೆ ಕೆರಳಿದ ಕೃಷ್ಣಸರ್ಪ ರೋಷದಿಂದ ಹೆಡೆ ಎತ್ತಿ ಬುಸುಗುಟ್ಟುತ್ತಾ ಹೊರಬಂದಿತು.

ಜೀವಭಯ ವಿಲ್ಲದ ವಿಷಸರ್ಪವನ್ನು ಕಂಡ ಸೈನಿಕರು, ರಕ್ಷಣೆ ಗೆಂದು ತಮ್ಮ ಕೈಯಲ್ಲಿದ್ದ ದೊಣ್ಣೆ ಮತ್ತು ಖಡ್ಗ ಗಳಿಂದ ಹಾವನ್ನು ಅ ಹೊಡೆದು ಸಾಯಿಸಿ ದರು. ಹಾರವನ್ನು ತೆಗೆದುಕೊಂಡು ಸೈನಿಕರು ಹೊರಟುಹೋದರು. ತಮ್ಮ ಶಕ್ತಿಯನ್ನು ಮೀರಿದ ಶತ್ರುವಿನ ಕಾಟ ಶಾಶ್ವತವಾಗಿ ತೀರಿತು ಎಂದು ಕಂಡ ಕಾಗೆ ದಂಪತಿ ನಿರಾಳವಾಗಿ ಉಸಿರುಬಿಟ್ಟು, ಆಲದ ಮರದಲ್ಲಿ ಸುಖವಾಗಿ ಜೀವಿಸ ತೊಡಗಿದವು. ಬದುಕಿನಲ್ಲಿ ನಮಗೆ ಎದುರಾಗುವ ಎಷ್ಟೋ ಸಮಸ್ಯೆಗಳು ಅಥವಾ ಎದುರಾಳಿಗಳು ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷಮತೆಯನ್ನು ಹೊಂದಿ ರುತ್ತಾರೆ.

ಅಂತಹ ಸಂದರ್ಭದಲ್ಲಿ ಹತಾಶರಾಗಿ ಜಾಗ ಬಿಟ್ಟು ಓಡಿಹೋಗುವುದಾಗಲಿ ಅಥವಾ ವ್ಯರ್ಥವಾಗಿ ನೇರ ಸಂಘರ್ಷಕ್ಕೆ ಇಳಿದು ನಾಶವಾಗುವುದಾಗಲಿ ಜಾಣತನವಲ್ಲ. ಸಂಸ್ಕೃತದ ಸುಭಾಷಿತ ಹೇಳುವಂತೆ ‘ಉಪಾ ಯೇನ ಹಿ ಯಚ್ಛಕ್ಯಂ ನ ತಚ್ಛಕ್ಯಂ ಪರಾಕ್ರಮೈಃ’ ಅಂದರೆ ಯಾವ ಕಾರ್ಯ ವನ್ನು ಉಪಾಯದಿಂದ ಸಾಽಸಬಹುದೋ ಅದನ್ನು ಕೇವಲ ಪರಾಕ್ರಮ ಅಥವಾ ಶಕ್ತಿಯಿಂದ ಸಾಧಿಸಲು ಸಾಧ್ಯವಿಲ್ಲ.

ಅಂತೆಯೇ ನಮ್ಮ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಬೇಕು, ಪ್ರಸ್ತುತ ಪರಿಸ್ಥಿತಿ ಯನ್ನು ಸರಿಯಾಗಿ ಗುರುತಿಸಿ, ನಮ್ಮವರ ಸಹಾಯವನ್ನು ಸಮಸ್ಯೆಯನ್ನು ನಿವಾರಿಸಲು ಜೋಡಿಸಿ ಕೊಳ್ಳುವ ಸಮಯಪ್ರಜ್ಞೆ ಇರಬೇಕು. ನಮ್ಮ ಶಕ್ತಿ ಮೀರಿದ ಸವಾಲುಗಳು ಎದುರಾದಾಗ ಆತಂಕಗೊಳ್ಳದೆ ತಾಳ್ಮೆಯಿಂದ ಇದನ್ನು ಬುದ್ಧಿವಂತಿಕೆಯಿಂದ ಹೇಗೆ ನಿಭಾಯಿಸ ಬಹುದು? ಎಂಬ ದಿಕ್ಕಿನಲ್ಲಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಲು ಇಂತಹ ಕಥೆಗಳು ಅತ್ಯುತ್ತಮ ಮಾರ್ಗದರ್ಶಿ.

ರೂಪಾ ಗುರುರಾಜ್

View all posts by this author