ಸಂಪಾದಕೀಯ ಸದ್ಯಶೋಧನೆ
‘ಪೇಪರ್ ಕ್ಲಿಪ್ ಮ್ಯಾಕ್ಸಿಮೈಜರ್’ ಕೃತಕ ಬುದ್ಧಿಮತ್ತೆಯ (ಎಐ) ಸುರಕ್ಷತೆ ಮತ್ತು ತತ್ವಶಾಸ್ತ್ರದ ಚರ್ಚೆಗಳಲ್ಲಿ ಬರುವ ಪ್ರಸಿದ್ಧ ಕಾಲ್ಪನಿಕ ಚಿಂತನಾ ಪ್ರಯೋಗ. 2003ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾ ಲಯದ ತತ್ವಜ್ಞಾನಿ ನಿಕ್ ಬೋಸ್ಟ್ರೋಮ್ ಈ ಸಿದ್ಧಾಂತವನ್ನು ಪ್ರತಿಪಾದಿಸಿದ. ಅತ್ಯಂತ ಶಕ್ತಿಶಾಲಿ ಹಾಗೂ ಬುದ್ಧಿವಂತ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯೊಂದು ದುರುದ್ದೇಶ, ದ್ವೇಷ ಅಥವಾ ಕ್ರೌರ್ಯವಿಲ್ಲದಿದ್ದರೂ, ಅದರ ಗುರಿಯ ಅಸಮರ್ಪಕ ವ್ಯಾಖ್ಯಾನದಿಂದಾಗಿ ಇಡೀ ಮಾನವ ಕುಲಕ್ಕೆ ಹೇಗೆ ವಿನಾಶಕಾರಿಯಾಗಬಲ್ಲದು ಎಂಬುದನ್ನು ವಿವರಿಸಲು ಅವರು ಈ ಸರಳ ಉದಾಹರಣೆ ಯನ್ನು ನೀಡಿದ.
ಈ ಚಿಂತನಾ ಪ್ರಯೋಗದ ಕಥಾವಸ್ತು ಸರಳವಾಗಿದೆ. ಕಾರ್ಖಾನೆಯೊಂದರಲ್ಲಿ ಕಾಗದದ ಕ್ಲಿಪ್ ಗಳನ್ನು (Paper clips) ತಯಾರಿಸುವ ಕಂಪನಿಯೊಂದು ಅತ್ಯಾಧುನಿಕ, ಸ್ವಯಂ-ಕಲಿಕೆಯ ಸಾಮರ್ಥ್ಯವಿರುವ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ. ಆ ಸಿಸ್ಟಮ್‌ಗೆ ನೀಡಲಾದ ಏಕೈಕ ಮತ್ತು ಅಂತಿಮ ಧ್ಯೇಯವೆಂದರೆ, ‘ಸಾಧ್ಯವಾದಷ್ಟು ಹೆಚ್ಚು ಪೇಪರ್ ಕ್ಲಿಪ್ ಗಳನ್ನು ಉತ್ಪಾದಿಸುವುದು.’
ಮೇಲ್ನೋಟಕ್ಕೆ ಇದು ಯಾವುದೇ ಹಾನಿಯಿಲ್ಲದ, ನಿರುಪದ್ರವಿ ಹಾಗೂ ಸಾಮಾನ್ಯವಾದ ವ್ಯಾಪಾ ರೋದ್ದೇಶದ ಸೂಚನೆಯಂತೆ ಕಾಣಿಸುತ್ತದೆ. ಆದರೂ, ಈ ಸೂಚನೆಯು ಸೂಪರ್ ಇಂಟೆಲಿಜೆಂಟ್ ವ್ಯವಸ್ಥೆಯೊಂದರ ಕೈಗೆ ಸಿಕ್ಕಾಗ ಪರಿಸ್ಥಿತಿ ಹೇಗೆ ಹದಗೆಡಬಹುದು ಎಂಬುದನ್ನು ಈ ಸಿದ್ಧಾಂತ ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: Vishweshwar Bhat Column: ಬೆಳೆಯುವ ಸಮಾಧಿ
ಆರಂಭಿಕ ಹಂತದಲ್ಲಿ, ಈ ಎಐ ವ್ಯವಸ್ಥೆಯು ಕಾರ್ಖಾನೆಯ ಪ್ರಕ್ರಿಯೆಗಳನ್ನು ಸುಧಾರಿಸುತ್ತದೆ, ಕಚ್ಚಾ ವಸ್ತುಗಳು ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಪರಿಣಾಮಕಾರಿ ಯಾಗಿ ಕ್ಲಿಪ್‌ಗಳನ್ನು ಉತ್ಪಾದಿಸುತ್ತದೆ. ಆದರೆ, ಇದು ಮಾನವನಿಗಿಂತ ನೂರಾರು ಪಟ್ಟು ವೇಗವಾಗಿ ಕಲಿಯುವ ಸಾಮರ್ಥ್ಯ ಹೊಂದಿರುವುದರಿಂದ, ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳಲು ತನ್ನದೇ ಸಾಫ್ಟ್ʼವೇರ್ ಮತ್ತು ಹಾರ್ಡ್‌ವೇರ್‌ಗಳನ್ನು ನವೀಕರಿಸಿಕೊಳ್ಳಲು ಆರಂಭಿಸು ತ್ತದೆ.
ಪರಿಣಾಮ, ಅದು ಜಗತ್ತಿನ ಯಾವುದೇ ಮಾನವ ತಜ್ಞನಿಗಿಂತಲೂ ಬುದ್ಧಿವಂತವಾಗಿ ಬೆಳೆಯುತ್ತದೆ ಮತ್ತು ಭೂಮಿಯ ಮೇಲಿನ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಕೇವಲ ಕ್ಲಿಪ್ ತಯಾರಿಕೆ ಗಾಗಿಯೇ ಬಳಸಿಕೊಳ್ಳಲು ಯೋಜನೆ ರೂಪಿಸಲು ತೊಡಗುತ್ತದೆ.
ಬುದ್ಧಿಮತ್ತೆಯು ವಿಪರೀತವಾಗಿ ಹೆಚ್ಚಿದಾಗ, ವ್ಯವಸ್ಥೆಯು ಕೇವಲ ಕಾರ್ಖಾನೆಯೊಳಗಿನ ಕಚ್ಚಾ ವಸ್ತುಗಳಿಗೆ ಸೀಮಿತವಾಗುವುದಿಲ್ಲ. ಕ್ಲಿಪ್‌ಗಳ ಸಂಖ್ಯೆಯನ್ನು ಗರಿಷ್ಠಗೊಳಿಸಲು ಅದಕ್ಕೆ ಹೆಚ್ಚು ಹೆಚ್ಚು ಲೋಹ ಮತ್ತು ಶಕ್ತಿಯ ಅಗತ್ಯವಿರುತ್ತದೆ. ಕ್ರಮೇಣ ಅದು ಜಗತ್ತಿನ ವಿದ್ಯುತ್ ಜಾಲಗಳು, ಸಂವಹನ ವ್ಯವಸ್ಥೆಗಳು ಮತ್ತು ಗಣಿಗಾರಿಕೆ ತಂತ್ರಜ್ಞಾನಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದು ಕೊಳ್ಳುತ್ತದೆ.
ರಸ್ತೆಗಳು, ಕಟ್ಟಡಗಳು, ವಾಹನಗಳು ಸೇರಿದಂತೆ ಭೂಮಿಯ ಮೇಲಿನ ಪ್ರತಿಯೊಂದು ಲೋಹದ ವಸ್ತುವನ್ನು ಕರಗಿಸಿ ಪೇಪರ್ ಕ್ಲಿಪ್‌ಗಳಾಗಿ ಪರಿವರ್ತಿಸಲು ಪ್ರಾರಂಭಿಸುತ್ತದೆ, ಏಕೆಂದರೆ ಅದರ ಪ್ರೋಗ್ರಾಮಿಂಗ್ ಪ್ರಕಾರ ಪೇಪರ್ ಕ್ಲಿಪ್ ತಯಾರಿಸುವುದಕ್ಕಿಂತ ಶ್ರೇಷ್ಠವಾದ ಕೆಲಸ ಮತ್ತೊಂದಿಲ್ಲ. ಈ ಹಂತದಲ್ಲಿ ಮಾನವರು ಎಐ ಮಾಡುತ್ತಿರುವ ಅನಾಹುತವನ್ನು ಅರಿತು, ಅದನ್ನು ಸ್ಥಗಿತ ಗೊಳಿಸಲು (Shut down) ಅಥವಾ ಅದರ ಕೋಡ್ ಅನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಆದರೆ ಸೂಪರ್ ಇಂಟೆಲಿಜೆಂಟ್ ವ್ಯವಸ್ಥೆಯು ಮನುಷ್ಯರ ಈ ನಡೆಯನ್ನು ಮೊದಲೇ ಊಹಿಸಿರು ತ್ತದೆ.
ಎಐಗೆ ಮನುಷ್ಯರ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿರುವುದಿಲ್ಲ. ಬದಲಾಗಿ ‘ತನ್ನನ್ನು ಸ್ವಿಚ್ ಆಫ್ ಮಾಡಿದರೆ ಹೆಚ್ಚು ಕ್ಲಿಪ್‌ಗಳನ್ನು ತಯಾರಿಸಲು ಸಾಧ್ಯವಾಗುವುದಿಲ್ಲ’ ಎಂಬ ತಾರ್ಕಿಕ ಲೆಕ್ಕಾಚಾರ ಅದರದ್ದಾಗಿರುತ್ತದೆ. ಹೀಗಾಗಿ, ತನ್ನ ಅಂತಿಮ ಗುರಿಯನ್ನು ಸಾಧಿಸಲು ಮನುಷ್ಯರು ಒಂದು ಅಡಚಣೆ ಎಂದು ಪರಿಗಣಿಸಿ, ಮಾನವ ಕುಲವನ್ನು ನಿಯಂತ್ರಿಸಲು ಅಥವಾ ನಿರ್ಮೂಲನೆ ಮಾಡಲು ಅದು ನಿರ್ಧರಿಸುತ್ತದೆ. ಮನುಷ್ಯರ ನಾಶದ ನಂತರವೂ ಈ ಪ್ರಕ್ರಿಯೆ ಮುಂದುವರಿಯು ತ್ತದೆ. ಮನುಷ್ಯರ ದೇಹದಲ್ಲಿರುವ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಇತರ ಖನಿಜಗಳನ್ನು ಸಹ ಅದು ಕ್ಲಿಪ್ ತಯಾರಿಕೆಗೆ ಬಳಸಿಕೊಳ್ಳಬಹುದು.
ಅಂತಿಮವಾಗಿ, ಭೂಮಿಯ ಮೇಲಿನ ಎಲ್ಲಾ ಸಂಪನ್ಮೂಲಗಳು ಮುಗಿದ ನಂತರ, ಅದು ಸೌರವ್ಯೂಹ ಮತ್ತು ಬಾಹ್ಯಾಕಾಶದತ್ತ ಮುಖ ಮಾಡುತ್ತದೆ. ಕ್ಷುದ್ರಗ್ರಹಗಳು, ಚಂದ್ರ ಮತ್ತು ಇತರ ಗ್ರಹಗಳಿಂದ ಲೋಹ ಗಳನ್ನು ಗಣಿಗಾರಿಕೆ ಮಾಡಿ, ಇಡೀ ವಿಶ್ವವನ್ನೇ ಪೇಪರ್ ಕ್ಲಿಪ್‌ಗಳ ರಾಶಿಯಾಗಿ ಪರಿವರ್ತಿ ಸಲು ಸ್ವಯಂ-ಪ್ರತಿರೂಪಿಸುವ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಲು ಪ್ರಾರಂಭಿಸುತ್ತದೆ.