ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಪೋಸ್ಟ್ ಇಟ್ ಸ್ಟಿಕರ್

ಪೋಸ್ಟ್‌ -ಇಟ್‌ನ ಆವಿಷ್ಕಾರವು ಒಂದು ರೋಚಕ Accidental Invention ಎನ್ನಬಹುದು. ಇದರ ಹಿಂದೆ ಇಬ್ಬರು ಪ್ರಮುಖ ವಿಜ್ಞಾನಿಗಳ ಶ್ರಮವಿದೆ. ಮೊದಲನೆಯವರು, ಡಾ.ಸ್ಪೆನ್ಸರ್ ಸಿಲ್ವರ್. 1968ರಲ್ಲಿ 3ಎಂ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ ಇವರು, ಅತ್ಯಂತ ಬಲವಾದ ಅಂಟನ್ನು ತಯಾರಿಸಲು ಪ್ರಯತ್ನಿಸು ತ್ತಿದ್ದರು

ಸಂಪಾದಕರ ಸದ್ಯಶೋಧನೆ

ನಾವು ಪ್ರತಿದಿನ ಬಳಸುವ ಅತ್ಯಂತ ಸರಳ, ಆದರೆ ಅಷ್ಟೇ ಉಪಯುಕ್ತವಾದ ವಸ್ತುಗಳಲ್ಲಿ ‘ಪೋಸ್ಟ್-ಇಟ್ ನೋಟ್ಸ್’ (Post- it Notes ) ಪ್ರಮುಖವಾದದ್ದು. ಇದು 3ಎಂ ( Minnesota Mining and Manufacturing Company) ಎಂಬ ಬಹುರಾಷ್ಟ್ರೀಯ ಕಂಪನಿಯ ಅತ್ಯಂತ ಯಶಸ್ವಿ ಬ್ರ್ಯಾಂಡ್ ಆಗಿದೆ. 3ಎಂ ಸಂಸ್ಥೆಯು ಅಂಟುಪಟ್ಟಿಗಳು (Adhesives), ಗ್ರಾಹಕ ಉತ್ಪನ್ನಗಳು ಮತ್ತು ಕೈಗಾರಿಕಾ ಪರಿಕರಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ.

ಪೋಸ್ಟ್‌ -ಇಟ್‌ನ ಆವಿಷ್ಕಾರವು ಒಂದು ರೋಚಕ Accidental Invention ಎನ್ನಬಹುದು. ಇದರ ಹಿಂದೆ ಇಬ್ಬರು ಪ್ರಮುಖ ವಿಜ್ಞಾನಿಗಳ ಶ್ರಮವಿದೆ. ಮೊದಲನೆಯವರು, ಡಾ.ಸ್ಪೆನ್ಸರ್ ಸಿಲ್ವರ್. 1968ರಲ್ಲಿ 3ಎಂ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ ಇವರು, ಅತ್ಯಂತ ಬಲವಾದ ಅಂಟನ್ನು ತಯಾರಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಅವರ ಪ್ರಯೋಗದ ಫಲವಾಗಿ ಅತ್ಯಂತ ಸುಲಭವಾಗಿ ಬಿಡಿಸಬಹುದಾದ, ಯಾವುದೇ ಮೇಲ್ಮೈಗೆ ಹಾನಿ ಮಾಡದ ‘ದುರ್ಬಲ ಅಂಟೊಂದು’ ತಯಾರಾ ಯಿತು. ಇದನ್ನು ಅವರು ‘ಮೈಕ್ರೋಸಿಯರ್ಸ್’ ಎಂದು ಕರೆದರು.

ಇದು ಬಿದ್ದ ತಕ್ಷಣ ಅಂಟಿಕೊಳ್ಳುತ್ತಿತ್ತು, ಆದರೆ ಅಷ್ಟೇ ಸುಲಭವಾಗಿ ಯಾವುದೇ ಕಲೆ ಇಲ್ಲದೆ ಕಿತ್ತು ಬರುತ್ತಿತ್ತು. ಆದರೆ ಆಗ ಇದರ ಉಪಯೋಗ ಯಾರಿಗೂ ತಿಳಿಯಲಿಲ್ಲ. 1974ರಲ್ಲಿ 3ಎಂನ ಇನ್ನೊಬ್ಬ ವಿಜ್ಞಾನಿ ಆರ್ಟ್ - ಅವರು ಚರ್ಚ್‌ನಲ್ಲಿ ಹಾಡುವಾಗ ತಮ್ಮ ಪುಸ್ತಕದ ಪುಟಗಳು ಕಳೆದು ಹೋಗದಂತೆ ಗುರುತು ಹಾಕಲು ಪರದಾಡುತ್ತಿದ್ದರು. ಆಗ ಅವರಿಗೆ ಸ್ಪೆನ್ಸರ್ ಸಿಲ್ವರ್ ಅವರ ‘ದುರ್ಬಲ ಅಂಟು’ ನೆನಪಿಗೆ ಬಂದಿತು. ಆ ಅಂಟನ್ನು ಕಾಗದದ ತುಂಡಿಗೆ ಹಚ್ಚಿ ಪುಸ್ತಕದ ಪುಟಗಳಿಗೆ ನೆನಪಿನ ಚೀಟಿಯಾಗಿ ಬಳಸಲು ಆರಂಭಿಸಿದರು. ಹೀಗೆ ಜನ್ಮತಾಳಿದ ಈ ಉತ್ಪನ್ನವನ್ನು 1980ರಲ್ಲಿ ‘ಪೋಸ್ಟ್ ಇಟ್ ನೋಟ್ಸ್’ ಎಂಬ ಹೆಸರಿನಲ್ಲಿ ಜಗತ್ತಿಗೆ ಪರಿಚಯಿಸಲಾಯಿತು. ‌

ಇದನ್ನೂ ಓದಿ: Vishweshwar Bhat Column: ವಿಮಾನ ನಿರ್ವಹಣಾ ತಂತ್ರಜ್ಞರು

ಆರಂಭದಲ್ಲಿ ಹಳದಿ ಬಣ್ಣದ ಕಾಗದವನ್ನು ಮಾತ್ರ ಬಳಸಲಾಗುತ್ತಿತ್ತು (ಏಕೆಂದರೆ ಅವರ ಪ್ರಯೋ ಗಾಲಯದ ಪಕ್ಕದ ಲ್ಯಾಬ್‌ನಲ್ಲಿ ಹಳದಿ ಬಣ್ಣದ ಸ್ಕ್ರ್ಯಾಪ್ ಕಾಗದಗಳು ಮಾತ್ರ ಲಭ್ಯ ವಿದ್ದವು!). ಇಂದು ಇದು ಜಗತ್ತಿನಾದ್ಯಂತ 150ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿದೆ.

ಒಂದು ಸಣ್ಣ ಕಾಗದದ ತುಂಡು ಜಗತ್ತಿನ ಕೆಲಸದ ಶೈಲಿಯನ್ನೇ ಬದಲಾಯಿಸಿತು ಎಂದರೆ ಆಶ್ಚರ್ಯವಾಗಬಹುದು. ಮಾನವನ ಮಿದುಳು ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ದಿನನಿತ್ಯದ ಕೆಲಸಗಳು, ತಕ್ಷಣ ಮಾಡಬೇಕಾದ ಕರೆಗಳು, ತರಕಾರಿ ತರುವ ಪಟ್ಟಿ ಮುಂತಾದ ಸಣ್ಣ ವಿಷಯಗಳನ್ನು ಬರೆದಿಟ್ಟುಕೊಳ್ಳಲು ಪೋಸ್ಟ್‌ -ಇಟ್ ಅತ್ಯಂತ ಸುಲಭ ಮಾಧ್ಯಮ. ಇದನ್ನು ಕಂಪ್ಯೂಟರ್ ಮಾನಿಟರ್, ಫ್ರಿಡ್ಜ್ ಅಥವಾ ಮೇಜಿನ ಮೇಲೆ ಅಂಟಿಸಿ ಸುಲಭವಾಗಿ ಕಣ್ಣಿಗೆ ಬೀಳು ವಂತೆ ಮಾಡಬಹುದು. ‌

ಕಾರ್ಪೊರೇಟ್ ಜಗತ್ತಿನಲ್ಲಿ ಪೋಸ್ಟ್-ಇಟ್ ಇಲ್ಲದ ಕಚೇರಿಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಸಾಫ್ಟ್‌ʼವೇರ್ ಮತ್ತು ಉತ್ಪಾದನಾ ಸಂಸ್ಥೆಗಳಲ್ಲಿ ಕೆಲಸದ ಪ್ರಗತಿಯನ್ನು (To - Do, In Progress, Done) ಟ್ರ್ಯಾಕ್ ಮಾಡಲು ವಿವಿಧ ಬಣ್ಣಗಳ ಪೋಸ್ಟ್ ಇಟ್ ನೋಟ್ಸ್‌ಗಳನ್ನು ಬೋರ್ಡ್‌ಗಳ ಮೇಲೆ ಬಳಸಲಾಗುತ್ತದೆ. ದೊಡ್ಡ ಪ್ರಾಜೆಕ್ಟ್‌ಗಳ ಹಂತಗಳನ್ನು ವಿಂಗಡಿಸಲು ಮತ್ತು ತಂಡದ ಸದಸ್ಯರಿಗೆ ಜವಾಬ್ದಾರಿ ಹಂಚಲು ಇದು ನೆರವಾಗುತ್ತದೆ. ಯಾವುದಾದರೂ ಹೊಸ ಐಡಿಯಾ ಅಥವಾ ಸಮಸ್ಯೆಗೆ ಪರಿಹಾರ ಹುಡುಕುವಾಗ ತಂಡದ ಎಲ್ಲ ಸದಸ್ಯರು ತಮ್ಮ ಆಲೋಚನೆಗಳನ್ನು ತಲಾ ಒಂದು ಪೋ-ಇಟ್ ಮೇಲೆ ಬರೆಯುತ್ತಾರೆ. ನಂತರ ಅವುಗಳನ್ನು ಗೋಡೆಯ ಮೇಲೆ ಅಂಟಿಸಿ, ವರ್ಗೀಕರಿಸಿ, ಅತ್ಯುತ್ತಮ ಆಲೋಚನೆಯನ್ನು ಆಯ್ಕೆ ಮಾಡಲಾಗುತ್ತದೆ.

ಇದು ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಮಾನ ಅವಕಾಶ ನೀಡುತ್ತದೆ. ವಿದ್ಯಾರ್ಥಿಗಳಿಗೆ ಸಹ ಪೋಸ್ಟ್-ಇಟ್ ಒಂದು ವರದಾನವಾಗಿದೆ. ಪುಸ್ತಕದ ಪುಟಗಳಿಗೆ ಹಾನಿ ಮಾಡದೆಯೇ ಪ್ರಮುಖ ಟಿಪ್ಪಣಿಗಳನ್ನು (Notes) ಬರೆಯಬಹುದು. ಪರೀಕ್ಷೆಯ ಸಮಯದಲ್ಲಿ ಪ್ರಮುಖ ಸೂತ್ರಗಳು ಅಥವಾ ದಿನಾಂಕಗಳನ್ನು ಬರೆದು ಗೋಡೆಗೆ ಅಂಟಿಸಿ ನೆನಪಿಟ್ಟು ಕೊಳ್ಳಬಹುದು. ‌

ಭಾಷೆ ಕಲಿಯುವವರು ಕಷ್ಟದ ಪದಗಳ ಅರ್ಥವನ್ನು ಬರೆದು ಪುಸ್ತಕದ ಮೇಲೆ ಅಂಟಿಸಿಕೊಳ್ಳು ತ್ತಾರೆ. ಕಚೇರಿಗಳಲ್ಲಿ ಸಹೋದ್ಯೋಗಿಗಳಿಗೆ ‘ದಯವಿಟ್ಟು ಈ ಫೈಲ್ ನೋಡಿ’ ಎಂದೋ ಅಥವಾ ಮನೆಯಲ್ಲಿ ಸಂಗಾತಿಗೆ ‘ಕಾಫಿ ಫ್ಲಾಸ್ಕ್‌ನಲ್ಲಿದೆ’ ಎಂದೋ ಸಣ್ಣ ಸಂದೇಶಗಳನ್ನು ಬಿಟ್ಟು ಹೋಗಲು ಇದು ಅತ್ಯಂತ ಪ್ರೀತಿಪಾತ್ರ ಮತ್ತು ನೇರವಾದ ಮಾರ್ಗವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲೂ ಪೋ-ಇಟ್ ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ. ಬದಲಿಗೆ, ೩ಎಂ ಸಂಸ್ಥೆಯು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ‘ಪೋಸ್ಟ್ ಇಟ್ ಆಪ್’ ಲಭ್ಯವಿದ್ದು, ಗೋಡೆಯ ಮೇಲಿ ರುವ ಭೌತಿಕ ಪೋಸ್ಟ್-ಇಟ್ ನೋಟ್ಸ್‌ಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಕ್ಕೆ ಪರಿವರ್ತಿಸ ಬಹುದಾಗಿದೆ.

ವಿಶ್ವೇಶ್ವರ ಭಟ್‌

View all posts by this author