ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gururaj Gantihole Column: ಆಧುನಿಕ ಕರ್ನಾಟಕದ ರಾಜಾಹುಲಿಯ ದೂರದೃಷ್ಟಿಯ ನಾಯಕತ್ವ

ಜನಸಾಮಾನ್ಯರ ಪಾಲಿಗೆ ದಾರಿದೀಪದಂತಿರುವ ಯಡಿಯೂರಪ್ಪನವರು ಅನೇಕರಿಗೆ ಮಾರ್ಗದರ್ಶಕ ರಾಗಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ನಿಕಟ ಸಂಪರ್ಕ ಹೊಂದಿದ್ದು, ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಬರುವುದರಿಂದ ಈ ಭಾಗದ ಜನರೊಂದಿಗೆ ಅವರಿಗೆ ಮತ್ತು ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಒಂದು ಅವಿನಾಭಾವ ಸಂಬಂಧವಿದೆ. ಒಂದು ಕಾಲದಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿದ್ದ ಬೈಂದೂರು ಕ್ಷೇತ್ರವು, ಇಂದು ಇವರ ದೂರದೃಷ್ಟಿ ಯಿಂದ ಹಲವು ಅಭಿವೃದ್ಧಿ ಯೋಜನೆಗಳನ್ನು ಪಡೆದಿದೆ.

ಗಂಟಾಘೋಷ

ಐದು ದಶಕಗಳಿಂದ ಕರ್ನಾಟಕದ ರಾಜಕೀಯ ಒಬ್ಬರು ನಾಯಕರ ಜೊತೆ ಅವಿನಾಭಾವವಾಗಿ ಬೆಸೆದುಕೊಂಡಿದೆ ಎಂದರೆ ಅದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ರಾಜ್ಯ ರಾಜಕೀಯ ದಲ್ಲಿ ಯಡಿಯೂರಪ್ಪ ಎಂಬ ಹೆಸರು ಕೇವಲ ಒಬ್ಬ ನಾಯಕನದ್ದಲ್ಲ, ಅದು ಐದು ದಶಕಗಳ ಕಾಲ ನಡೆದ ಅವಿರತ ಹೋರಾಟದ ಸಂಕೇತ.

ಶಿಕಾರಿಪುರದ ಪುರಸಭೆ ಅಧ್ಯಕ್ಷ ಸ್ಥಾನದಿಂದ ಪ್ರಾರಂಭವಾದ ಇವರ ಪಯಣ, ಇಂದು ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಪ್ರಮುಖ ಶಕ್ತಿಯಾಗಿ ಬೆಳೆದು ನಿಂತಿದೆ. ಜನಸಾಮಾನ್ಯರು ಇವರನ್ನು ಪ್ರೀತಿಯಿಂದ ‘ರಾಜಾಹುಲಿ’ ಎಂದು ಕರೆಯುವುದು ಇವರ ಅಚಲ ನಿರ್ಧಾರಗಳು ಮತ್ತು ಹೋರಾಟದ ಗುಣಕ್ಕಾಗಿಯೇ ಹೊರತು ಕೇವಲ ರಾಜಕೀಯ ಕಾರಣಕ್ಕಲ್ಲ.

ಜನಸಾಮಾನ್ಯರ ಪಾಲಿಗೆ ದಾರಿದೀಪದಂತಿರುವ ಯಡಿಯೂರಪ್ಪನವರು ಅನೇಕರಿಗೆ ಮಾರ್ಗ ದರ್ಶಕರಾಗಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ನಿಕಟ ಸಂಪರ್ಕ ಹೊಂದಿದ್ದು, ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಬರುವುದರಿಂದ ಈ ಭಾಗದ ಜನರೊಂದಿಗೆ ಅವರಿಗೆ ಮತ್ತು ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಒಂದು ಅವಿನಾಭಾವ ಸಂಬಂಧವಿದೆ. ಒಂದು ಕಾಲದಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿದ್ದ ಬೈಂದೂರು ಕ್ಷೇತ್ರವು, ಇಂದು ಇವರ ದೂರದೃಷ್ಟಿಯಿಂದ ಹಲವು ಅಭಿವೃದ್ಧಿ ಯೋಜನೆಗಳನ್ನು ಪಡೆದಿದೆ.

ಬಿಎಸ್‌ವೈ ಹಾಗೂ ಬೈಂದೂರು ನಂಟು

ಸಮಸ್ತ ಬೈಂದೂರು ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಯಡಿಯೂರಪ್ಪನವರು ತೋರಿರುವ ಕಾಳಜಿ ಸ್ತುತ್ಯರ್ಹ. ಅವರು ಪ್ರತಿ ಬಾರಿಯೂ ಕ್ಷೇತ್ರದ ಜನರ ಕ್ಷೇಮ ಸಮಾಚಾರ ಮತ್ತು ಇಲ್ಲಿನ ಪ್ರಗತಿ ಕಾರ್ಯಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಾರೆ. ಅವರ ಕಾರ್ಯದಕ್ಷತೆ, ಶಿಸ್ತು ಮತ್ತು ಸಾಮಾನ್ಯ ಜನರ ಬದುಕನ್ನು ಹಸನು ಮಾಡುವ ಅವರ ಛಲವು ಸಾರ್ವಜನಿಕ ಜೀವನದಲ್ಲಿರು ವವರಿಗೆ ಮಾದರಿಯಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು ಸಹ ಬಿಎಸ್‌ವೈ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಈ ನಾಯಕತ್ವದ ಜೋಡಿಯು ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡಿದೆ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Gururaj Gantihole Column: ಸಾಂಸ್ಥಿಕ ಸೋಗಿನಲ್ಲಿ ಸಂಘಟಿತ ಮತಾಂತರ

ಬೈಂದೂರಿನ ಆರ್ಥಿಕತೆಯ ಬೆನ್ನೆಲುಬು ನಮ್ಮ ಮೀನುಗಾರರು. ಬಿಎಸ್‌ವೈ ಅವರು ಮುಖ್ಯಮಂತ್ರಿ ಯಾಗಿದ್ದಾಗ ಮತ್ತು ರಾಘವೇಂದ್ರ ಅವರು ಸಂಸದರಾಗಿ ನಮ್ಮ ಮೀನುಗಾರರಿಗೆ ಅಗಾಧ ಕೊಡುಗೆ ಗಳನ್ನು ನೀಡಿದ್ದಾರೆ. ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ಮೇಲಿನ ಮಾರಾಟ ತೆರಿಗೆ ಮನ್ನಾ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಮೂಲಕ ಮೀನುಗಾರರ ಹೊರೆ ಕಡಿಮೆ ಮಾಡಿದ್ದಾರೆ.

ಮರವಂತೆಯಲ್ಲಿ ಹೊರಬಂದರು, ಕೋಡೇರಿಯಲ್ಲಿ ಕಿರು ಬಂದರು ಮತ್ತು ಗಂಗೊಳ್ಳಿ ಜೆಟ್ಟಿ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಬೈಂದೂರಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ‘ಸೀ ಫುಡ್ ಪಾರ್ಕ್’ ನಿರ್ಮಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಇದು ನಮ್ಮ ಮೀನುಗಾರರಿಗೆ ಹೆಚ್ಚಿನ ಆದಾಯ ತಂದುಕೊಡಲಿದೆ. ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿದ್ದ 26,414 ಮೀನುಗಾರರಿಗೆ ತಲಾ 3000 ರೂ. ನಂತೆ ಪರಿಹಾರ ನೀಡಿದ್ದು ಅವರ ಮಾನವೀಯತೆಗೆ ಸಾಕ್ಷಿ.

ಬೈಂದೂರು ಕ್ಷೇತ್ರದ ಬಹುದೊಡ್ಡ ಸಮಸ್ಯೆ ಕುಡಿಯುವ ನೀರಾಗಿತ್ತು. ಇದನ್ನು ಮನಗಂಡ ರಾಘವೇಂದ್ರ ಅವರು ಮತ್ತು ಬಿಎಸ್‌ವೈ ಅವರು ಜಲಜೀವನ್ ಮಿಷನ್ ಮತ್ತು ನಬಾರ್ಡ್ ಅಡಿ ಯಲ್ಲಿ ಬರೋಬ್ಬರಿ 784.60 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯನ್ನು ತಂದಿದ್ದಾರೆ.

ಹೊಸಂಗಡಿ ಮತ್ತು ಗುಲ್ವಾಡಿಯಲ್ಲಿ ನೀರನ್ನು ಶುದ್ಧೀಕರಿಸಿ, ನಮ್ಮ ಕ್ಷೇತ್ರದ 40 ಗ್ರಾಮ ಪಂಚಾಯತ್‌ಗಳ 60 ಸಾವಿರ ಮನೆಗಳಿಗೆ ಶುದ್ಧ ನೀರು ತಲುಪಿಸುವ ಕಾರ್ಯ ನಡೆಯುತ್ತಿದೆ. ಇದು ನಮ್ಮ ತಾಯಂದಿರ ನೀರಿನ ಬವಣೆಯನ್ನು ನೀಗಿಸುವ ಅತೀ ದೊಡ್ಡ ಪುಣ್ಯದ ಕೆಲಸವಾಗಿದೆ.

ಕೃಷಿಕರ ಹಿತ ಕಾಯುವಲ್ಲಿ ಬಿಎಸ್‌ವೈ ಅವರು ಯಾವಾಗಲೂ ಮುಂದು. ಬೈಂದೂರು ಕ್ಷೇತ್ರದಲ್ಲಿ ನೀರಾವರಿಗೆ ನೂರಾರು ಕೋಟಿ ಹಣ ಬಿಡುಗಡೆ ಮಾಡಿದ್ದು, ಸಾವಿರಾರು ಎಕರೆ ಭೂಮಿಗೆ ನೀರುಣಿಸುವ ಕನಸು ನನಸಾಗುತ್ತಿದೆ. ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ.

bs yediyurappa

ಹೆಮ್ಮಾಡಿಯಿಂದ ಕೊಲ್ಲೂರು ರಸ್ತೆ ನಿರ್ಮಾಣಕ್ಕೆ 20 ಕೋಟಿ ರೂ., ಮತ್ತು ವಿವಿಧ ಮೀನುಗಾರಿಕಾ ರಸ್ತೆಗಳಿಗೆ 12 ಕೋಟಿ ರೂ. ನೀಡಲಾಗಿದೆ. ಸೌಡ-ಶಂಕರನಾರಾಯಣ ನಡುವೆ ಬೃಹತ್ ಸೇತುವೆ ನಿರ್ಮಾಣವಾಗಿರುವುದು ಜನರ ಬಹುಕಾಲದ ಬೇಡಿಕೆಯಾಗಿತ್ತು. ಬೈಂದೂರು ಒಂದು ಪವಿತ್ರ ಭೂಮಿ. ಬಿಎಸ್‌ವೈ ಮತ್ತು ರಾಘವೇಂದ್ರ ಅವರು ನಮ್ಮ ಸಂಸ್ಕೃತಿಯನ್ನು ಉಳಿಸಲು ಅಪಾರ ಶ್ರಮವಹಿಸಿದ್ದಾರೆ.

ತಾಯಿ ಮೂಕಾಂಬಿಕೆ ಭಕ್ತರಾಗಿ ರುವ ಅವರು ಬೈಂದೂರು ಕ್ಷೇತ್ರಕ್ಕೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದಾರೆ. ಬೈಂದೂರು ಕ್ಷೇತ್ರದ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಖಾರ್ವಿ, ಕೊಂಕಣ ಖಾರ್ವಿ, ಮರಾಠಿ, ಕುಲಾಲ ಮತ್ತು ಬೋವಿ ಸೇರಿದಂತೆ ವಿವಿಧ ಸಮಾಜದ ಸಮುದಾಯ ಭವನಗಳಿಗೆ 27ಕೋಟಿ ರೂ. ಅನುದಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ.

ಆಡಳಿತಾತ್ಮಕವಾಗಿಯೂ ಬೈಂದೂರನ್ನು ಅಭಿವೃದ್ಧಿಪಡಿಸುವಲ್ಲಿ ಇವರ ಪಾತ್ರ ದೊಡ್ಡದು. 8 ಕೋಟಿ ರೂ. ವೆಚ್ಚದ ಹೊಸ ತಾಲೂಕು ಆಡಳಿತ ಸೌಧ, ನೂತನ ಅಗ್ನಿಶಾಮಕ ಠಾಣೆ, ನ್ಯಾಯಾ ಲಯ ಮತ್ತು ಬೈಂದೂರನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿದ್ದು ಇವರ ದೂರದೃಷ್ಟಿಯ ಫಲ.

ಅಷ್ಟೇ ಅಲ್ಲದೆ ಪ್ರವಾಸೋದ್ಯಮ, ರೈಲು ಸಂಪರ್ಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿಯೂ ಕೂಡ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ದಕ್ಷಿಣ ಭಾರತಕ್ಕೆ ‘ಬಿಜೆಪಿ ಹೆಬ್ಬಾಗಿಲು’ ತೆರೆದ ಶಿಲ್ಪಿ ಬಿಎಸ್‌ವೈ ಅವರಿಗಿಂತ ಮೊದಲು, ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಸ್ತಿತ್ವವು ಕೇವಲ ಹೆಸರಿಗಷ್ಟೇ ಇತ್ತು.

ಯಡಿಯೂರಪ್ಪನವರ ಅದಮ್ಯ ಉತ್ಸಾಹವೇ ಕರ್ನಾಟಕದಲ್ಲಿ ಪಕ್ಷವನ್ನು ಒಂದು ಬಲಿಷ್ಠ ಶಕ್ತಿಯಾಗಿ ರೂಪಿಸಿ, ಬಿಜೆಪಿಗೆ ದಕ್ಷಿಣ ಭಾರತದ ‘ಹೆಬ್ಬಾಗಿಲು’ ತೆರೆಯುವಂತೆ ಮಾಡಿತು. ಅವರ ಮುಖ್ಯಮಂತ್ರಿ ಪಟ್ಟವು ಅವರಿಗೆ ಸುಲಭವಾಗಿ ಸಿಕ್ಕಿದ್ದಲ್ಲ; ಇದು 45 ವರ್ಷಗಳ ದೀರ್ಘ ಹೋರಾಟದ ಫಲವಾಗಿದ್ದು, ಅದರಲ್ಲೂ ಹೆಚ್ಚಾಗಿ ಅವರು ಅಧಿಕ ಸಮಯವನ್ನು ವಿರೋಧ ಪಕ್ಷದ ಕಳೆದಿದ್ದರು.

ಅವರು ತಳಮಟ್ಟದಿಂದ ಏಕಾಂಗಿಯಾಗಿ ಪಕ್ಷವನ್ನು ಕಟ್ಟಿದರು, ದೂರದ ಹಳ್ಳಿಗಳಿಂದ ನಗರ ಕೇಂದ್ರಗಳವರೆಗೆ ರಾಜ್ಯಾದ್ಯಂತ ದಣಿವರಿಯದ ಪ್ರಯಾಣ ಬೆಳೆಸಿದರು. ಬಿಎಸ್‌ವೈ ಪ್ರತಿ ಮನೆಗೂ ಪಕ್ಷದ ಸಿದ್ಧಾಂತವನ್ನು ತಲುಪಿಸಿದರು, ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಅಲ್ಪ ಅಸ್ತಿತ್ವ ದಿಂದ ಪೂರ್ಣ ಬಹುಮತದವರೆಗೆ ಕೊಂಡೊಯ್ದರು.

ಇಂದು, ಅವರ ಹೆಸರು ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಯೊಂದಿಗೆ ಪರ್ಯಾಯವಾಗಿ ನಿಂತಿದೆ. ಯಡಿಯೂರಪ್ಪನವರ ಕೆಲಸದ ಶೈಲಿ ಪ್ರೇರಣಾತ್ಮಕವಾಗಿದೆ, ಅದು ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವದಲ್ಲಿ ಆಳವಾಗಿ ಬೇರೂರಿದೆ. ಸಾರ್ವಜನಿಕ ಸೇವೆಗೆ ಅವರ ಸಮರ್ಪಣೆ ಯು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತಿತ್ತು, ಬೆಳಗಿನ ಸಭೆಗಳನ್ನು ನಡೆಸಿ ಸಾಮಾನ್ಯ ಜನರ ಕುಂದುಕೊರತೆಗಳನ್ನು ಪರಿಹರಿಸಲು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

ಈ ಸಮರ್ಪಣಾ ಮನೋಭಾವವು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸ್ಪಷ್ಟವಾಗಿ ನಾವು ಕಂಡಿದ್ದೇವೆ. ಇಡೀ ಜಗತ್ತು ಭಯಭೀತರಾಗಿzಗ, ಬಿಎಸ್‌ವೈ ಒಬ್ಬ ‘ಮೇರು ನಾಯಕ’ನಾಗಿ ಮುಂಚೂಣಿಯಲ್ಲಿ ನಿಂತರು. ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿದರು, ಆರೋಗ್ಯ ಮೂಲ ಸೌಕರ್ಯಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿದರು ಮತ್ತು ಆರೋಗ್ಯ ಕಾರ್ಯಕರ್ತ ರಲ್ಲಿ ಆತ್ಮವಿಶ್ವಾಸ ತುಂಬಿದರು.

2020ರ ಅಡೆತಡೆಗಳ ನಡುವೆಯೂ ಕರ್ನಾಟಕದ ಆರ್ಥಿಕತೆಯು 5% ಬೆಳವಣಿಗೆಯನ್ನು ಕಾಯ್ದುಕೊಳ್ಳುವಂತೆ ಮಾಡಿದರು. ಅಸಂಘಟಿತ ಕಾರ್ಮಿಕರಿಗೆ 1610 ಕೋಟಿಗಳ ಪರಿಹಾರ ಪ್ಯಾಕೇಜ್ ನೀಡುವ ಜೊತೆಗೆ ಹೊಸ ಕೈಗಾರಿಕಾ ನೀತಿ 2020-25 ಅನ್ನು ಜಾರಿಗೆ ತಂದರು. ಈ ನೀತಿಯು 5 ಲಕ್ಷ ಕೋಟಿ ಹೂಡಿಕೆ ಆಕರ್ಷಿಸುವ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿತ್ತು.

ಗ್ರಾಮೀಣ ಹೃದಯದ ನಾಯಕ

‘ರೈತ ಬಂಧು’ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಡಿಯೂರಪ್ಪನವರು ವಿವಿಧ ಸುಧಾರಣೆ ಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿzರೆ. ಭಾರತದ ಇತಿಹಾಸದ ಮೊದಲ ಬಾರಿಗೆ ರೈತರಿಗಾಗಿ ಪ್ರತ್ಯೇಕ ‘ಕೃಷಿ ಬಜೆಟ್’ ಮಂಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.‌

ಇವರ ಅವಧಿಯಲ್ಲಿ ಒಣ ಭೂಮಿಗೆ ನೀರುಣಿಸುವ ಹಲವು ನೀರಾವರಿ ಯೋಜನೆಗಳಿಗೆ ಕಾಯಕಲ್ಪ ದೊರೆಯಿತು. ಮತ್ತು ಸಾವಿರಾರು ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಬೆಳೆ ಸಾಲ ಮನ್ನಾ ಮಾಡಿದರು. ಕೇಂದ್ರದ ಪಿಎಂ-ಕಿಸಾನ್ ಸಮ್ಮಾನ್ ನಿಧಿಗೆ ಪೂರಕವಾಗಿ ರೈತರಿಗೆ ಹೆಚ್ಚುವರಿ 4000 ಸಹಾಯಧನವನ್ನು ಯಡಿಯೂರಪ್ಪನವರು ಘೋಷಿಸಿದರು, ದುರದೃಷ್ಟವತಾಶ್ ಕಾಂಗ್ರೆಸ್ ಸರ್ಕಾರ ಇದನ್ನು ನಿಲ್ಲಿಸಿತು.

2019ರ ಭೀಕರ ಪ್ರವಾಹದ ಸಮಯದಲ್ಲಿ, ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗುವ ಮೊದಲೇ ಅವರು ಸಂತ್ರಸ್ತರಿಗೆ ಮನೆ ನಿರ್ಮಿಸಲು 5 ಲಕ್ಷ ಪರಿಹಾರ ಘೋಷಿಸಿದ್ದರು. ಯಾವುದೇ ಆಡಳಿತಾತ್ಮಕ ಸಬೂಬು ನೀಡದೆ ಜನಪರ ಕೆಲಸ ಮಾಡುವುದೇ ಅವರ ವಿಶೇಷಣವಾಗಿದೆ.

ಯಡಿಯೂರಪ್ಪನವರು ಅಶಕ್ತರ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಆಳವಾದ ಸಹಾನುಭೂತಿ ಹೊಂದಿzರೆ. ‘ಭಾಗ್ಯಲಕ್ಷ್ಮಿ’ ಯೋಜನೆಯು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಒಂದು ಯಶಸ್ವಿ ಯೋಜನೆಯಾಗಿತ್ತು. ಹೆಣ್ಣುಮಕ್ಕಳನ್ನು ಭಾರವಾಗಿ ಪರಿಗಣಿಸಬಾರದು ಎನ್ನುವ ಅವರ ದೂರದೃಷ್ಟಿ ಇಂದು ನಮಗೆ ಕಾಣುತ್ತಿದೆ. ಕೇವಲ ತಕ್ಷಣದ ಅಧಿಕಾರ ಪಡೆಯಲು ಅಪ್ರಾಯೋಗಿಕ ಆಮಿಷಗಳನ್ನು ನೀಡದೆ, ಅವರ ಭವಿಷ್ಯಕ್ಕೆ ಭದ್ರ ಬುನಾದಿ ಒದಗಿಸಿದ್ದರು. ಅಷ್ಟೇ ಅಲ್ಲದೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಉಚಿತ ಸೈಕಲ್ ವಿತರಣಾ ಯೋಜನೆಯನ್ನು ಆರಂಭಿಸಿ ದರು.

ಬಸವಣ್ಣನವರ ಸಮಾನತೆಯ ತತ್ವಗಳಲ್ಲಿ ನಂಬಿಕೆಯಿಟ್ಟಿದ್ದ ಅವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ವಿವಿಧ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದರು. 2008ರಲ್ಲಿ ದೇವದಾಸಿ ಮಹಿಳೆ ಯರ ಕಷ್ಟಗಳನ್ನು ಕಂಡು ತಕ್ಷಣವೇ ವೇದಿಕೆಯಿಂದಲೇ ಮಾಶಾಸನ ಯೋಜನೆಯನ್ನು ಘೋಷಿಸಿ ಸಾವಿರಾರು ಮಹಿಳೆಯರ ಬದುಕಿಗೆ ಆಸರೆಯಾದರು.

ನೇಯ್ಗೆಯವರಿಗೆ ವಿದ್ಯುತ್ ಮಗ್ಗಗಳ ಸಬ್ಸಿಡಿ ಮತ್ತು ಹಿರಿಯ ನಾಗರಿಕರಿಗಾಗಿ ‘ಸಂಧ್ಯಾ ಸುರಕ್ಷಾ’ ಯೋಜನೆಯನ್ನು ಸಹ ಜಾರಿಗೆ ತಂದರು. ಕೈಗಾರಿಕಾ ಪುನರುಜ್ಜೀವನದ ಶಿಲ್ಪಿ ತಮ್ಮ ಮೊದಲ ಪೂರ್ಣಾವಧಿಯ ಅಧಿಕಾರದಲ್ಲಿ, ಯಡಿಯೂರಪ್ಪ ಅವರು ಕರ್ನಾಟಕವನ್ನು ಜಾಗತಿಕ ಬಂಡವಾಳದ ಪ್ರಮುಖ ತಾಣವನ್ನಾಗಿ ಪರಿವರ್ತಿಸಿದರು.

2008-09ರ ಹಣಕಾಸು ವರ್ಷದಲ್ಲಿ 2 ಬಿಲಿಯನ್‌ಗಿಂತಲೂ ಹೆಚ್ಚು ನೇರ ವಿದೇಶಿ ಹೂಡಿಕೆಯನ್ನು ತರುವ ಮೂಲಕ ಕರ್ನಾಟಕವನ್ನು ಭಾರತದಲ್ಲಿ ಮೂರನೇ ಸ್ಥಾನಕ್ಕೆ ಏರಿಸಿದರು. ಅವರ ಹೆಗ್ಗುರು ತಾದ ಜಾಗತಿಕ ಹೂಡಿಕೆದಾರರ ಸಮಾವೇಶ 2010 ಒಂದು ಐತಿಹಾಸಿಕ ಘಟ್ಟವಾಗಿದ್ದು, 4.5 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಭರವಸೆ ಮತ್ತು 8.5 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಯ ಗುರಿಯನ್ನು ಹೊಂದಿತ್ತು. ಹಲವು ಕೈಗಾರಿಕಾ ಕಾರಿಡಾರ್ ಹಾಗೂ ಕೈಗಾರಿಕಾ ಕ್ಲಸ್ಟರ್‌ಗಳನ್ನು ಪರಿಚಯಿಸುವ ಮೂಲಕ, ಅವರು ಅಭಿವೃದ್ಧಿಯನ್ನು ವಿಕೇಂದ್ರೀಕರಿಸಲು ಶ್ರಮಿಸಿದರು.

ಬಿ.ಎಸ್. ಯಡಿಯೂರಪ್ಪ ಅವರ ಕೈಗಾರಿಕಾ ಮತ್ತು ಅಭಿವೃದ್ಧಿ ದೃಷ್ಟಿಕೋನವು ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಉದ್ದೇಶವನ್ನು ಕೂಡ ಹೊಂದಿತ್ತು. ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧ ನಿರ್ಮಿಸುವ ಮೂಲಕ ರಾಜಕೀಯ ಶಕ್ತಿಯನ್ನು ವಿಕೇಂದ್ರೀಕರಿಸಿದರು, ಇದು ಉತ್ತರ ಕರ್ನಾಟಕದ ಅಭಿವೃದ್ಧಿ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಲು ನೆರವಾಯಿತು.

ಕೇವಲ ಆಡಳಿತಕ್ಕಷ್ಟೇ ಸೀಮಿತವಾಗದೆ, ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಸ್ಥಳೀಯ ಉದ್ಯೋಗ ಮತ್ತು ಜ್ಞಾನಾಧಾರಿತ ಆರ್ಥಿಕತೆಗೆ ನಾಂದಿ ಹಾಡಿದರು.

ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಜೀವನವು ಜನಸಾಮಾನ್ಯರ ನಾಯಕತ್ವ, ಸಹಾನುಭೂತಿ ಮತ್ತು ಅಭಿವೃದ್ಧಿ ರಾಜಕಾರಣದ ದಾರಿದೀಪವಾಗಿದೆ. ವಿಧಾನ ಸೌಧದಿಂದ ಹಳ್ಳಿಯ ಮೂಲೆಗಳವರೆಗೆ ಸೇತುವೆಯಾಗಿ ಕೆಲಸ ಮಾಡಿದ ಅವರು, ಆಧುನಿಕ ಕರ್ನಾಟಕವನ್ನು ರೂಪಿಸುವಲ್ಲಿ ಅಮೋಘ ಕೊಡುಗೆ ನೀಡಿzರೆ. ಯಡಿಯೂರಪ್ಪನವರು ಯಾವಾಗಲೂ ‘ಜನನಾಯಕ’ನಾಗಿಯೇ ನೆನಪಿನಲ್ಲಿ ಉಳಿಯುತ್ತಾರೆ.

ಗುರುರಾಜ್ ಗಂಟಿಹೊಳೆ

View all posts by this author