ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಗುರುರಾಜ್ ಗಂಟಿಹೊಳೆ

Byndoor MLA, Columnist

gururaj2012@gmail.com

ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ಬಳಿಯ ಗೋವು ಗಂಗೆಯ ಬೀಡು ಗಂಟಿಹೊಳೆಯವರಾದ ಗುರುರಾಜ್ ಗಂಟಿಹೊಳೆ ಅವರು ಪ್ರಾಥಮಿಕ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಿನ ಆಸುಪಾಸಿನ ಸರಕಾರಿ ಶಾಲಾ ಕಾಲೇಜಿನಲ್ಲಿ ಪೂರೈಸಿದ ನಂತರ ಉನ್ನತ ಶಿಕ್ಷಣದ ಭಾಗವಾಗಿ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಮೂಲತಃ ಕೃಷಿ ಕುಟುಂಬದಿಂದ ಬಂದ ಅವರ ತಂದೆ-ತಾಯಿ ಅಪ್ಪಟ ಹಳ್ಳಿಯ ರೈತರು. ಗೆಳೆಯರಲ್ಲ ಗೆಳೆಯರ ಬಳಗವೇ ಇತ್ತು. ಇವರ ಬದುಕು ಸಂತಸದಿಂದ ಕೂಡಿದ್ದು, ಇದಕ್ಕೆ ಅರ್ಥಪೂರ್ಣತೆ ತಂದವರು ಸ್ನೇಹಿತರು ಹಾಗೂ ಹಿತೈಷಿಗಳು. ರಾಜಕೀಯಕ್ಕಿಳಿದ ಮೇಲೆ ಮನಸ್ಸು ತುಡಿದದ್ದು ನಮ್ಮಲ್ಲಿ ಎಷ್ಟು ಎಷ್ಟು ಬಗೆಯ ಯೋಜನೆಗಳು, ಅವುಗಳ ಅನುಷ್ಠಾನಕ್ಕೆ ಇರುವ ತೊಡಕುಗಳು, ಹೈರಾಣಾಗುವ ಫಲಾನುಭವಿಗಳು, ಅಭಿವೃದ್ಧಿಯ ಹೆಸರಿನಲ್ಲಿ ಆಗುವ ಅನಾಹುತಗಳು. ಹೀಗೆ ಹಲವು ಆಯಾಮದ ಯೋಚನೆಗಳ ಕುರಿತ ಕಂತೆ ಕಂತೆ ಆಲೋಚನೆಗಳ ಅಂಕಣ ಬರಹವೇ "ಗಂಟಾಘೋಷ" ವಾಗಿ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟ ವಾಗುತ್ತಿದೆ. ಗಂಟಾಘೋಷವು ಆರಂಭದ ಹೆಜ್ಜೆಯಾಗಿದೆ. ಅಂಕಣ ಬರಹವನ್ನು ಓದಿ ವಿಮರ್ಶಿಸಿ ಹುರಿದುಂಬಿಸಿದ ಮನಸ್ಸುಗಳಿಗೆ, ಬರೆಯಲು ಅವಕಾಶ ಕಲ್ಪಿಸಿದ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟರಿಗೆ, ಅಂಕಣ ಬರಹ ಬರೆಯಲು ಸಹಕರಿಸಿ, ಪ್ರತಿ ವಾರದ ವಿಷಯದ ಕುರಿತು ಕ್ಲಪ್ತ ಸಮಯದಲ್ಲಿ ಸಲಹೆ ಸಹಕಾರ ನೀಡಿದ ನನ್ನೆಲ್ಲ ಸಾಹಿತ್ಯ ಒಡನಾಡಿಗಳಿಗೆ ನನ್ನ ಪ್ರೀತಿಯ ವಂದನೆಗಳು. ಈ ಅಂಕಣ ಬರಹವನ್ನು ಒಟ್ಟಾಗಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸು ತ್ತಿರುವ " ವಿಶ್ವವಾಣಿ ಪುಸ್ತಕ " ದವರಿಗೆ ನಾನು ಆಭಾರಿ. ಓದುಗರಾದ ನೀವೆಲ್ಲ ಎಂದಿನಂತೆ ಜತೆಗಿದ್ದೀರಿ. ಈ ಒಲವು ಸ್ನೇಹ ,ಪ್ರೀತಿ ಹೀಗೆ ಇರಲಿ... ಅದೇ ನನಗೆ ದೊಡ್ಡ ಇನಾಮು.. ವಿಳಾಸ: ಪ್ರೇಮಾಶ್ರಯ ಗಂಟಿಹೊಳೆ, ಬಿಜೂರು, ಬೈಂದೂರು ತಾಲೂಕು, ಉಡುಪಿ ಜಿಲ್ಲೆ –576232

Articles
Gururaj Gantihole Column: ನ್ಯಾಯಾಗ v/s ಶಾಸಕಾಂಗ: ಅರ್ಥವಾಗದ ಹಿರಿಯರ ಹಿರಿ ಚರ್ಚೆಗಳು !

ನ್ಯಾಯಾಗ v/s ಶಾಸಕಾಂಗ: ಅರ್ಥವಾಗದ ಹಿರಿಯರ ಹಿರಿ ಚರ್ಚೆಗಳು !

ಭಾರತೀಯ ಸಂವಿಧಾನದಲ್ಲಿ ‘ಚೆಕ್ ಆಂಡ್ ಬ್ಯಾಲೆ’ ಎಂಬ ವಿಧಾನವಿದ್ದು, ಇದು ಸಂವಿಧಾನದ ಯಾವುದೇ ಅಂಗವು ತನ್ನದೇ ಆದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದ ವ್ಯವಸ್ಥೆಯಾಗಿದೆ. ಪರಿಶೀಲನೆಗಳು ಮತ್ತು ಸಮತೋಲನಗಳು ಒಂದು ಅಂಗವು ತುಂಬಾ ಶಕ್ತಿಶಾಲಿಯಾಗದಂತೆ ನೋಡಿ ಕೊಳ್ಳುತ್ತದೆ. ನಮ್ಮ ಸಂವಿಧಾನ ನಿರ್ಮಾತೃಗಳು ಅತ್ಯಂತ ಸ್ಪಷ್ಟವಾಗಿ ಮೂರೂ ಅಂಗಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪ್ರತ್ಯೇಕಿಸಿ ನೀಡಿದ್ದಾರೆ.

Gururaj Gantihole Column: ರಾಷ್ಟ್ರೀಯ ಭದ್ರತೆಯೂ ರಾಜಕೀಯ ವಿಷಯವಾದಾಗ !

ರಾಷ್ಟ್ರೀಯ ಭದ್ರತೆಯೂ ರಾಜಕೀಯ ವಿಷಯವಾದಾಗ !

ಕಾಲಚಕ್ರ, ಎಲ್ಲವನ್ನೂ ಒರೆಗೆ ಹಚ್ಚುತ್ತದೆ. ಸತ್ಯ ಶಾಶ್ವತವಾಗಿದ್ದು, ಮುಚ್ಚಿಡಲು ಸಾಧ್ಯವಿಲ್ಲ ಎಂಬ ಮಾತಿನಂತೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಮಾಡಿದ್ದ ಪಿತೂರಿ ಪಾಕಿಸ್ತಾನಕ್ಕಿಂತ ಏನು ಕಡಿಮೆಯಿರಲಿಲ್ಲ! ಈಗ, ಇನ್ನೊಬ್ಬ ದಾಳಿಕೋರ ರಾಣಾ ಎಂಬಾತನನ್ನು ಅಮೆರಿಕಾದ ಜೈಲಿ ನಿಂದ ಹೆಡೆಮುರಿ ಕಟ್ಟಿ ಭಾರತಕ್ಕೆ ತರಲಾಗಿದೆ. ಮುಂಬೈ ದಾಳಿಯ ಸತ್ಯಗಳು ಇನ್ನಷ್ಟು ಹೊರಬರಲಿವೆ.

Gururaj Gantihole Column: ಆಯುಷ್ಮಾನ್: ಆರ್ಥಿಕ ಕಾಳಜಿಯೋ, ಆರೋಗ್ಯ ಕಾಳಜಿಯೋ ?

ಆಯುಷ್ಮಾನ್: ಆರ್ಥಿಕ ಕಾಳಜಿಯೋ, ಆರೋಗ್ಯ ಕಾಳಜಿಯೋ ?

ಯೂರೋಪಿಯನ್ನರಿಂದ ಬಂದ ಅಲೋಪತಿ ಪದ್ಧತಿಯತ್ತ ನಾವು ದಾಪುಗಾಲು ಹಾಕುತ್ತಿದ್ದರೆ, ಪಾಶ್ಚಾ ತ್ಯರು ನಮ್ಮ ಆಯುರ್ವೇದ ಪದ್ಧತಿಯನ್ನು ಗಂಭೀರವಾಗಿ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುತ್ತ ಸಾಗುತ್ತಿದ್ದಾರೆ. ಇಂತಹ ಆಯುರ್ವೇದವನ್ನು ಸಾಮಾನ್ಯ ಜನರು ತಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿ ಕೊಳ್ಳುವತ್ತ ಇದಕ್ಕೆ ಸಂಬಂಧಿಸಿದ ರಾಜ್ಯ ಸರಕಾರದ ಇಲಾಖೆಗಳು, ಅಧಿಕಾರಿಗಳು ಜಾಗೃತಿ ಮೂಡಿಸಲು ಕಾರ್ಯ ಪ್ರವೃತ್ತರಾಗಬೇಕಿತ್ತು

Gururaj Gantihole Column: ಪಂಚಾಯತ್‌ ವ್ಯವಸ್ಥೆಗೆ ಶಕ್ತಿ ತುಂಬಿದ ಹಣಕಾಸು ಆಯೋಗ

ಪಂಚಾಯತ್‌ ವ್ಯವಸ್ಥೆಗೆ ಶಕ್ತಿ ತುಂಬಿದ ಹಣಕಾಸು ಆಯೋಗ

1951ರಲ್ಲಿ ಕೆ.ಸಿ.ನಿಯೋಗಿ ನೇತೃತ್ವದಲ್ಲಿ ರಚನೆಯಾದ ಮೊದಲ ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವೆ ವಿಂಗಡಿಸಲಾದ ತೆರಿಗೆಗಳ ನಿವ್ವಳ ಆದಾಯದ ವಿತರಣೆಯ ಕುರಿತು ಶಿಫಾರಸು ಇದರ ಪ್ರಾಥಮಿಕ ಕಾರ್ಯವಾಗಿತ್ತು, ಜೊತೆಗೆ ರಾಜ್ಯಗಳಿಗೆ ಅನುದಾನ-ಸಹಾಯವನ್ನು ನಿಯಂತ್ರಿಸುವ ತತ್ವಗಳನ್ನು ಸಹ ನೀಡುವುದಾಗಿತ್ತು. ಇದಾಗಿ, ಪ್ರತಿ 5 ವರ್ಷ ಕ್ಕೊಮ್ಮೆಯಂತೆ, ಇಲ್ಲಿಯವರೆಗೆ 17 ಹಣಕಾಸು ಆಯೋಗಗಳು ರಚನೆಯಾಗಿವೆ.

Gururaj Gantihole Column: ಆಧುನಿಕತೆಯಲ್ಲಿ ಕಾಣೆಯಾಗುತ್ತಿರುವ ಎಪಿಎಂಸಿ ವ್ಯವಸ್ಥೆ

ಆಧುನಿಕತೆಯಲ್ಲಿ ಕಾಣೆಯಾಗುತ್ತಿರುವ ಎಪಿಎಂಸಿ ವ್ಯವಸ್ಥೆ

ತನ್ನ ಬೆಳೆಗಳನ್ನು ಯಾವುದೇ ಹಳ್ಳಿಯ ಯಾವುದೇ ಸಂತೆಪೇಟೆಯಲ್ಲಿ ಮಾರಾಟ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದ ರೈತ, ಕ್ರಮೇಣ ದಳಿಗಳ ನಿಯಂತ್ರಣಕ್ಕೊಳಪಟ್ಟು ಮಾರುಕಟ್ಟೆಗಳಲ್ಲಿ ತನ್ನ ಬೆಳೆಗಳನ್ನು ಏಜೆಂಟರುಗಳಿಗೆ ಮಾರುತ್ತಿದ್ದಾನೆ. ಕಾಲ ಬದಲಾ ಗಿದ್ದು ಬಿಟ್ಟರೆ, ಬ್ರಿಟಿಷರಿಂದ ಹಿಡಿದು, ಈಗಿನ ಸರಕಾರದವರೆಗೆ ಇರುವುದು ಅದೇ ಕಮಿಷನ್ ವ್ಯವಸ್ಥೆ!

Gururaj Gantihole Column: ಅಮೆರಿಕದಲ್ಲಿ ಅರಳಿದ ಸನಾತನ ಪ್ರಭೆ ಕೃಷ್ಣ ತುಳಸಿ

ಅಮೆರಿಕದಲ್ಲಿ ಅರಳಿದ ಸನಾತನ ಪ್ರಭೆ ಕೃಷ್ಣ ತುಳಸಿ

ತಮ್ಮ ವ್ಯಕ್ತಿತ್ವದಲ್ಲಿ ಅಪರೂಪದ ಗುಣಗಳನ್ನು, ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆದ ತುಳಸಿಯವರು ಎಂದೂ ರಾಜಿಯಾಗದ, ಜನವಿರೋಧಿ ವಿಚಾರ, ನಿಯಮಗಳನ್ನು, ಆಡಳಿತ ವನ್ನು ಕಟ್ಟುವಾಗಿ ವಿರೋಧಿಸುವುದರಲ್ಲಿ ಎಂದೂ ಹಿಂಜರಿಯದ ಜನಪ್ರತಿನಿಧಿಯಾಗಿ ಬೆಳೆ ಯುತ್ತ ಬಂದವರು. ಅಮೆರಿಕದ ಸಮೋವಾ ದ್ವೀಪದಲ್ಲಿ ಗಬ್ಬಾರ್ಡ್ ದಂಪತಿಗೆ ನಾಲ್ಕನೇ ಮಗಳಾಗಿ 1981ರ ಏಪ್ರಿಲ್ 12ರಂದು ಜನಿಸಿದ ತುಳಸಿ, ಎರಡು ವರ್ಷದ ಮಗು ವಾಗಿದ್ದಾಗ, ಇವರ ಕುಟುಂಬ ಹವಾಯಿ ದ್ವೀಪಕ್ಕೆ ವಲಸೆ ಬಂದಿತು

Gururaj Gantihole Column: ಕರಾವಳಿ ಸಮಸ್ಯೆ ತಿಳಿಯದ ಅಧಿಕಾರಿಗಳಿಂದ ಜನ ಹೈರಾಣು !

ಕರಾವಳಿ ಸಮಸ್ಯೆ ತಿಳಿಯದ ಅಧಿಕಾರಿಗಳಿಂದ ಜನ ಹೈರಾಣು !

ಕಳೆದ 30 ವರ್ಷಗಳಿಂದ ನಡೆದುಕೊಂಡು ಬಂದಿರುವ ಬಹುದೊಡ್ಡ ದಂಧೆ ಮತ್ತು ಬೆಂಗಳೂರಿ ನಲ್ಲಿ ದಾಖಲೆ ಪ್ರಮಾಣದಲ್ಲಿ ಬಿ-ಖಾತಾ ಆಗಿರುವ ಮತ್ತು ಬಿ-ಖಾತಾ ನೊಂದಣಿಯೂ ಆಗದಿ ರುವ ಸೈಟುಗಳಿವೆ. ಹೀಗಿದ್ದರೂ, ಮಾನ್ಯ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು, ಒಂದು ಬಾರಿ ಎಲ್ಲರನ್ನೂ ಕ್ಷಮಿಸಿಬಿಡೋಣ, ಇದೊಂದು ಸಲ ಎಲ್ಲರಿಗೂ ಬಿ-ಖಾತಾ ಕೊಡು ತ್ತೇವೆ

Gururaj Gantihole Column:  ಮಂಡಳಿಯ ಚಿತ್ತ ಕೊಳಗೇರಿ ನಿರ್ಮೂಲನೆಯೋ, ಅಭಿವೃದ್ದಿಯೋ ?

ಮಂಡಳಿಯ ಚಿತ್ತ ಕೊಳಗೇರಿ ನಿರ್ಮೂಲನೆಯೋ, ಅಭಿವೃದ್ದಿಯೋ ?

ಹತ್ತಾರು ದಶಕಗಳು ಕಳೆದರೂ, ಕೊಳಗೇರಿಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇರುವ ಮಾಹಿತಿ ಕೊಡುವುದು ಮಂಡಳಿಯ ಕೆಲಸವೆಂಬಂತೆ ಕಾಣಬರುತ್ತಿದೆ. ರಾಜ್ಯಾ ದ್ಯಂತ ಮಂಡಳಿಯ ಕ್ರಿಯಾಯೋಜನೆಯಾಗಲಿ, ತ್ವರಿತಗತಿಯ ಬದಲಾವಣೆಯ ಅಭಿವೃದ್ಧಿಗಳಾಗಲಿ ಎಲ್ಲಿಯೂ ಕಂಡುಬಾರದಿರುವುದರಿಂದ, ಜನಸಾಮಾನ್ಯರು ಈ ಮಂಡಳಿಯ ನಾಮಫಲಕದಲ್ಲಿರುವಂತೆ, ಇದು ಕೊಳಗೇರಿಯನ್ನು ನಿರ್ಮೂಲನೆ ಗೊಳಿಸುವುದಕ್ಕೆ ಇರುವುದೋ ಅಥವಾ ಕೊಳಗೇರಿ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದಕ್ಕೋ ಎಂದು ಅನುಮಾನ ವ್ಯಕ್ತಪಡಿಸುವ ಕಾಲ ಬಂದಿದೆ.

Gururaj Gantihole Column: ಪಂಚಾಯತ್‌ ರಾಜ್‌ ವ್ಯವಸ್ಥೆಯ ಜೀವಾಧಾರಕ

ಪಂಚಾಯತ್‌ ರಾಜ್‌ ವ್ಯವಸ್ಥೆಯ ಜೀವಾಧಾರಕ

ಅಧಿಕಾರ ವಿಕೇಂದ್ರಿತ ವ್ಯವಸ್ಥೆಯಲ್ಲಿ ಪಂಚಾಯ ತಿಗಳು ಮುಖ್ಯವಾಗಿರುತ್ತವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೆಲವು ಯೋಜನೆಗಳು ಪಂಚಾಯತಿ ಮೂಲಕವೇ ನೇರವಾಗಿ ಅನುಷ್ಠಾನಕ್ಕೆ ಬರುತ್ತವೆ. ಪಂಚಾಯತ್ ವ್ಯವಸ್ಥೆ ಸದೃಢವಾದಂತೆ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಸದೃಢವಾಗುತ್ತವೆ. ಹಿಂದೆ ಗ್ರಾಮಗಳಲ್ಲಿ ಪಂಚಾಯತಿ ಕಟ್ಟೆ ವ್ಯವಸ್ಥೆಯಿದ್ದು, ಊರಿನ ಹಿರಿಯರ ಸಮಿತಿಯು ಅಲ್ಲೇ ಬಹುಪಾಲು ಸಮಸ್ಯೆಗಳನ್ನು ಬಗೆಹರಿಸುತ್ತಿತ್ತು, ತೀರ್ಪು ನೀಡುತ್ತಿತ್ತು. ತದನಂತರ ಮಂಡಲ ಪಂಚಾ ಯತ್ ವ್ಯವಸ್ಥೆ ಜಾರಿಗೆ ಬಂತು. ಈಗ ಗ್ರಾಮ ಪಂಚಾಯತಿಗಳುಕಾರ್ಯನಿರ್ವಹಿಸುತ್ತಿದ್ದು ಅವು ಜಿಲ್ಲಾ ಪಂಚಾಯತಿಯ ನೇರ ಅಧೀನದಲ್ಲಿ ಬರುತ್ತವೆ.

Gururaj Gantihole Column: ಓದುವ ಸಂಸ್ಕೃತಿ ಬೆಳೆಸುವ ಗ್ರಂಥಾಲಯಗಳನ್ನು ನಿರ್ಲಕ್ಷಿಸುವುದೇಕೆ ?

ಓದುವ ಸಂಸ್ಕೃತಿ ಬೆಳೆಸುವ ಗ್ರಂಥಾಲಯಗಳನ್ನು ನಿರ್ಲಕ್ಷಿಸುವುದೇಕೆ ?

ಕ್ರಿಯಾಶೀಲ ಶಿಕ್ಷಕರಿರುವ ಶಾಲೆಗಳಲ್ಲಿ ‘ಕಾರ್ನರ್ ಲೈಬ್ರರಿ’ ಎಂಬ ಪುಟ್ಟ ಗ್ರಂಥಾಲಯವನ್ನು ವ್ಯವಸ್ಥೆ ಮಾಡುತ್ತಾರೆ. ಇದರಿಂದಾಗಿ ಮಕ್ಕಳಿಗೆ ಓದಿನ ಜತೆಗೆ, ಗ್ರಂಥಾಲಯ ಹೇಗಿರುವುದೆಂಬ ಅರಿವೂ ಮೂಡು ತ್ತದೆ. ಇತ್ತೀಚಿನ ವರ್ಷ ಗಳಲ್ಲಿ, ಪ್ರಾಥಮಿಕ-ಪ್ರೌಢಶಾಲಾ ಮಕ್ಕಳನ್ನು ಆಯಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಗ್ರಂಥಾ ಲಯಗಳಿಗೆ ಶಿಕ್ಷಕರು ಒಯ್ದು ಆ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದಾರೆ. ಹೀಗೆ ಎಳವೆಯಲ್ಲೇ ಓದಿನ ಅಭಿರುಚಿ ಬೆಳೆದಾಗಷ್ಟೇ ಗ್ರಂಥಾಲಯಗಳು ನಳನಳಿಸಲು ಸಾಧ್ಯ

Gururaj Gantihole Column: ಕೆರೆಗಳ ಪುನಶ್ಚೇತನವು ದೇವರ ಸೇವೆ ಇದ್ದಂತೆ !

ಕೆರೆಗಳ ಪುನಶ್ಚೇತನವು ದೇವರ ಸೇವೆ ಇದ್ದಂತೆ !

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ನದಿಗಳಿರುವಂತೆ ಸಣ್ಣ-ದೊಡ್ಡ ಕೆರೆಗಳೂ ಹೆಚ್ಚಿವೆ. ಕೃಷಿ ಪಂಪ್‌ಸೆಟ್‌ಗಳನ್ನು ಇಡಲಾಗದಷ್ಟು ಸ್ಥಿತಿಗೆ ಕೆಲವು ಕೆರೆಗಳು ತಲುಪಿದ್ದು, ಅಷ್ಟು ಹೂಳು ತುಂಬಿಕೊಂಡಿದೆ. ಕೆಲವೆಡೆ ಕೃಷಿಕರು, ಸ್ಥಳೀಯರೇ ಕೆರೆಯನ್ನು ಸ್ವಚ್ಛಗೊಳಿಸುವುದುಂಟು; ಆದರೆ ನಿರ್ವಹಣೆಯ ಕೊರತೆ. ನಿರ್ವಹಣಾ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.