Ranjith H Ashwath Column: ಅದು ಬಟ್ಟೆ ಬದಲಿಸಿದಷ್ಟು ಸುಲಭವಲ್ಲ
ಬೆಳಗಾವಿಯಲ್ಲಿ 2 ವಾರದ ಹಿಂದೆ ನಡೆದ ‘ಜೈ ಬಾಪು-ಜೈ ಭೀಮ್ -ಜೈ ಸಂವಿಧಾನ್’ ಕಾರ್ಯಕ್ರಮ ದಲ್ಲೂ ಕಾಂಗ್ರೆಸ್ಸಿಗರು ಈ ವಿಷಯವನ್ನು ಬಲವಾಗಿ ಪ್ರತಿಪಾದಿಸಿದರು. ಆದರೆ, ಸಂವಿಧಾನ ಬದಲಿಸು ವುದು ಅಷ್ಟು ಸುಲಭವೇ ಎಂಬ ಪ್ರಶ್ನೆಗೆ ಮಾತ್ರ ಯಾವೊಬ್ಬ ಕಾಂಗ್ರೆಸ್ಸಿಗರೂ ಉತ್ತರಿಸುತ್ತಿಲ್ಲ
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಇಡೀ ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿರುವ ಭಾರತವನ್ನು ಮುನ್ನಡೆಸಲು ಬೃಹದಾಕಾರದ ಸಂವಿಧಾನವಿದೆ. ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣದಲ್ಲಿ ಸಂವಿಧಾನದ ರಚನೆಯೂ ಪ್ರಮುಖ ಪಾತ್ರ ವಹಿಸಿದೆ ಎಂದರೆ ತಪ್ಪಾಗುವುದಿಲ್ಲ.
ಅರಸನಿಂದ ಆಳಿನವರೆಗೆ ಸಮಾನಾವಕಾಶ ನೀಡುವುದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಈ ಸಂವಿಧಾನದ ಮೂಲ ಆಶಯ. ಇಂಥ ಶ್ರೇಷ್ಠ ಸಂವಿಧಾನದ ರಚನೆಯ ಬಳಿಕ ಎದುರಾದ ಹಲವಾರು ಪ್ರಶ್ನೆಗಳಿಗೆ ಉತ್ತರವಾಗಿ ಕೇಂದ್ರ ಸರಕಾರಗಳಿಂದ ಆಗಿರುವ ‘ತಿದ್ದುಪಡಿ’ ಯನ್ನು ಅಥವಾ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಆದೇಶದಿಂದ ಆಗಿರುವ ಬದಲಾ ವಣೆಯನ್ನು ಗಮನಿಸಿದ್ದೇವೆ. ಇಂಥ ಬದಲಾವಣೆಯನ್ನು ಒಪ್ಪಿಕೊಳ್ಳುವುದಕ್ಕೆ ಅವಕಾಶವಿರು ವುದೇ ಭಾರತ ಸಂವಿಧಾನದ ವೈಶಿಷ್ಟ್ಯ ಎಂದರೆ ತಪ್ಪಾಗುವುದಿಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ, ‘ಬಿಜೆಪಿಯವರು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು. ಸಂವಿಧಾನದ ಬದಲಿಗೆ ಮನು ಸ್ಮೃತಿಯನ್ನು ದೇಶದ ಮೇಲೆ ಹೇರುವ ಹುನ್ನಾರ ಬಿಜೆಪಿಯದ್ದು’ ಎಂಬ ಆರೋಪ ಸಾಮಾನ್ಯವಾಗಿ ಕೇಳಿಬರುತ್ತಿದೆ.
ಇದನ್ನೂ ಓದಿ: Ranjith H Ashwath Column: ಪ್ರತಿಪಕ್ಷದೊಳಗಿನ ಒಳಬೇಗುದಿಗೆ ಕೊನೆಯೆಂದು ?
ಅದರಲ್ಲಿಯೂ ಕಾಂಗ್ರೆಸ್‌ನ ವರಿಷ್ಠ, ಲೋಕಸಭಾ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಯವರು 2024ರ ಲೋಕಸಭಾ ಚುನಾವಣೆಯ ಬಹುಪಾಲು ರ‍್ಯಾಲಿ, ಸಮಾವೇಶಗಳಲ್ಲಿ ಸಂವಿಧಾ ನದ ಬದಲಾವಣೆಯ ಸುತ್ತಲೇ ಮಾತನಾಡಿದ್ದನ್ನು ನೋಡಿದ್ದೇವೆ. ಕೈಯಲ್ಲಿ ಸಂವಿಧಾನದ ಪ್ರತಿ ಯಿಟ್ಟುಕೊಂಡು ಬಿಜೆಪಿಯ ಹಾಗೂ ಬಿಜೆಪಿಯ ನಾಯಕರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದನ್ನು ಕಂಡಿದ್ದೇವೆ.
ರಾಹುಲ್ ಹಾಡಿದ ‘ರಾಗ’ವನ್ನೇ ಕಾಂಗ್ರೆಸ್‌ನ ಬಹುತೇಕ ನಾಯಕರು ಮತ್ತೆ ಆಲಾಪಿಸಿದ್ದನ್ನು, ‘ಇಂಡಿಯ’ ಮೈತ್ರಿಕೂಟದ ಬಹುತೇಕರು ಅದನ್ನೇ ಬಿಜೆಪಿಯ ವಿರುದ್ಧದ ಬಹುದೊಡ್ಡ ಅಸ್ತ್ರವಾಗಿ ಬಳಸಿದ್ದನ್ನು ನೋಡಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾಯಿಸಿ, ದಲಿತರಿಗೆ ಅಲ್ಪಸಂಖ್ಯಾತರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸುವ ಹುನ್ನಾರವನ್ನು ಬಿಜೆಪಿ ಹೊಂದಿದೆ ಎಂದು ಆರೋಪಿಸಿದ ಕಾಂಗ್ರೆಸ್ಸಿಗರು ಇದಕ್ಕೆ ಬಳಸಿಕೊಂಡಿದ್ದು ಮನುಸ್ಮೃತಿ ಯನ್ನು. ‘ಬಿಜೆಪಿಯು ಸಂವಿಧಾನದ ಬದಲಿಗೆ ಮನುಸ್ಮೃತಿಯನ್ನು ಜಾರಿಗೊಳಿಸುವ ಸಾಧ್ಯತೆಯಿದೆ’ ಎಂಬ ಕಾಂಗ್ರೆಸ್ಸಿಗರ ಆರೋಪದಿಂದ ಬಿಜೆಪಿಗೆ ಕೆಲ ಕ್ಷೇತ್ರದಲ್ಲಿ ಹಿನ್ನಡೆಯಾಗಿದ್ದರಲ್ಲಿ ಅನು ಮಾನವಿಲ್ಲ.
ಆದರೆ, ಬಿಜೆಪಿಯು ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದು ಸಾಕಷ್ಟು ತಿಂಗಳಾಗಿ ದ್ದರೂ ಕಾಂಗ್ರೆಸ್ಸಿಗರ ಆರೋಪಕ್ಕೆ ಕೊನೆಯಿಲ್ಲವಾಗಿದೆ. ಬೆಳಗಾವಿಯಲ್ಲಿ 2 ವಾರದ ಹಿಂದೆ ನಡೆದ ‘ಜೈ ಬಾಪು-ಜೈ ಭೀಮ್ -ಜೈ ಸಂವಿಧಾನ್’ ಕಾರ್ಯಕ್ರಮದಲ್ಲೂ ಕಾಂಗ್ರೆಸ್ಸಿಗರು ಈ ವಿಷಯವನ್ನು ಬಲವಾಗಿ ಪ್ರತಿಪಾದಿಸಿದರು. ಆದರೆ, ಸಂವಿಧಾನ ಬದಲಿಸುವುದು ಅಷ್ಟು ಸುಲಭವೇ ಎಂಬ ಪ್ರಶ್ನೆಗೆ ಮಾತ್ರ ಯಾವೊಬ್ಬ ಕಾಂಗ್ರೆಸ್ಸಿಗರೂ ಉತ್ತರಿಸುತ್ತಿಲ್ಲ.
ಭಾನುವಾರದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಕಾಂಗ್ರೆಸ್‌ನ ರಾಜ್ಯ ಹಾಗೂ ರಾಷ್ಟ್ರ ನಾಯಕರು ಮಾಡಿದ್ದ ‘ಕಾಮನ್ ಆರೋಪ’ ಎಂದರೆ- ಬಿಜೆಪಿಯವರು ಸಂವಿಧಾನವನ್ನು ಬದಲಿಸಲು ಮುಂದಾಗಿದ್ದಾರೆ ಎಂಬುದು. ಹೀಗೆ ಆರೋಪಿಸಿದವರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾ ರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್ ಸೇರಿದ್ದರು ಎಂಬುದು ಗಮನಾರ್ಹ.
ಮೊದಲೆಲ್ಲ ಇಂಥ ಆರೋಪವನ್ನು ದೇಶದ ಜನರೂ ಗಂಭೀರವಾಗಿ ಪರಿಗಣಿಸುತ್ತಿದ್ದರು; ಆದರೀಗ ಇದು ರಾಜಕೀಯದವರ ‘ಸಾಮಾನ್ಯ’ ಆರೋಪ ಎನ್ನುವಂತಾಗಿದೆ. ಕಾಂಗ್ರೆಸ್ಸಿಗರ ಆರೋಪಕ್ಕೆ ಸರಿಯಾಗಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಅಖಂಡ ಹಿಂದೂ ರಾಷ್ಟ್ರದ ಸಂವಿಧಾನವನ್ನು ಸಿದ್ಧಪಡಿಸಲಾಗಿದೆ.
501 ಪುಟಗಳ ಈ ಸಂವಿಧಾನವನ್ನು ಉತ್ತರ ಮತ್ತು ದಕ್ಷಿಣ ಭಾರತದ 25 ವಿದ್ವಾಂಸರ ಸಮಿತಿಯು 12 ತಿಂಗಳು 12 ದಿನಗಳಲ್ಲಿ ರಚಿಸಿದ್ದು, ರಾಮರಾಜ್ಯ, ಕೃಷ್ಣನ ರಾಜ್ಯ, ಮನುಸ್ಮೃತಿ ಮತ್ತು ಚಾಣ ಕ್ಯನ ಅರ್ಥಶಾಸ್ತ್ರದಿಂದ ಸ್ಪೂರ್ತಿ ಪಡೆದ ಅಂಶಗಳನ್ನು ಇದರಲ್ಲಿ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸಿದ ಬಳಿಕ ಕೇಂದ್ರ ಸರಕಾರಕ್ಕೆ ಸಲ್ಲಿಸಿ, ‘ಅದನ್ನೇ ಸಂವಿಧಾನ ಮಾಡಬೇಕು’ ಎಂದು ಆಗ್ರಹಿಸಲು ಕೆಲವರು ತಯಾರಾಗಿದ್ದಾರೆ ಎನ್ನುವ ಮಾತುಗಳಿವೆ.
ಇದೇ ವಿಷಯವನ್ನು ಮುಂದಿಟ್ಟುಕೊಂಡು, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕರು ರಾಷ್ಟ್ರಪತಿ ಗಳಿಗೆ ಪತ್ರ ಬರೆದು, ಯಾವುದೇ ಕಾರಣಕ್ಕೂ ‘ಹಿಂದೂ ಸಂವಿಧಾನ’ವನ್ನು ಒಪ್ಪಿಕೊಳ್ಳಬಾರದು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಈ ರೀತಿಯ ಆರೋಪ ಮತ್ತು ಆಗ್ರಹವನ್ನು ಮಾಡುತ್ತಿರುವ ಕೆಲ ನಾಯಕರಿಗೆ, ಸಂವಿಧಾನವನ್ನುಬದಲಿಸುವುದು ಅಷ್ಟು ಸುಲಭವಲ್ಲ ಎಂಬ ಸಾಮಾನ್ಯ ಕಾನೂನು ಜ್ಞಾನವಿಲ್ಲ ಎಂಬುದೇ ವಿಪರ್ಯಾಸ.
ಇಂಥ ಯಾವುದೋ ವರದಿಯನ್ನಿಟ್ಟುಕೊಂಡು ರಾಜಕೀಯ ಕಾರಣಕ್ಕೆ ‘ಸಂವಿಧಾನ ಬದಲಾಗುತ್ತದೆ, ಭಾರತ ಹಿಂದೂರಾಷ್ಟ್ರವಾಗುತ್ತದೆ’ ಎನ್ನುವ ಹೇಳಿಕೆ ನೀಡಿದರೆ, ಅದಕ್ಕೆ ರಾಜಕೀಯ ನಾಯಕರು ‘ರಾಜಕೀಯವಾಗಿಯೇ’ ಉತ್ತರಿಸಿಕೊಳ್ಳುತ್ತಾರಷ್ಟೇ. ಆದರೆ, ಕಾನೂನಾತ್ಮಕವಾಗಿ, ಸಂವಿಧಾನಾತ್ಮಕ ವಾಗಿ ಇಂಥ ಬದಲಾವಣೆ ಸಾಧ್ಯವೇ ಎಂದು ಪ್ರಶ್ನಿಸಿದರೆ, ‘ಇಲ್ಲ’ ಎನ್ನುವ ಸರಳ ಉತ್ತರವನ್ನಷ್ಟೇ ನೀಡಬಹುದು.
ಹೌದು, ಭಾರತದ ಸಂವಿಧಾನವು ಎಷ್ಟು ‘ಫ್ಲೆಕ್ಸಿಬಲ್’ ಆಗಿದೆಯೇ ಅಷ್ಟೇ ‘ಕಾಠಿಣ್ಯ’ದಿಂದಲೂ ಕೂಡಿದೆ. ಅಂಬೇಡ್ಕರ್ ನೇತೃತ್ವದ ಸಮಿತಿಯಲ್ಲಿ ೩೦ಕ್ಕೂ ಹೆಚ್ಚು ಮಂದಿ, ಸುಮಾರು 4 ವರ್ಷಗಳ ಸುದೀರ್ಘ ಸಮಯ ತೆಗೆದುಕೊಂಡು ರಚಿಸಿರುವ ಸಂವಿಧಾನವಿದು. ಅಮೆರಿಕ, ಬ್ರಿಟನ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ಐರ್ಲೆಂಡ್, ಫ್ರಾನ್ಸ್, ಸೋವಿಯತ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳ ಸಂವಿಧಾನದಲ್ಲಿರುವ ಒಳ್ಳೆಯ ಅಂಶಗಳನ್ನು ಸೇರಿಸಿಕೊಂಡು ಸಿದ್ಧವಾಗಿರುವಂಥದ್ದು ಭಾರತದ ಸಂವಿಧಾನ.
ಇಷ್ಟಾಗಿಯೂ ಇದರಲ್ಲಿ ಹಲವಾರು ಬದಲಾವಣೆಗೆ ‘ಜಾಗ’ವನ್ನು ನೀಡಲಾಗಿದೆ. ಆದರೆ, ಸಂವಿ ಧಾನದ ಪ್ರಮುಖ ಪರಿಚ್ಛೇದಗಳನ್ನು ಬದಲಿಸುವುದು ಸುಲಭದ ಮಾತಲ್ಲ. ಸಾಮಾನ್ಯ ತಿದ್ದುಪಡಿಗೆ ಕೇಂದ್ರದಲ್ಲಿರುವ ಸರಳ ಬಹುಮತವಷ್ಟೇ ಸಾಕು; ಆದರೆ ಆಯಕಟ್ಟಿನ ಪರಿಚ್ಛೇದವನ್ನು ಮುಟ್ಟುವು ದಕ್ಕೆ ಕೇಂದ್ರದಲ್ಲಿ ಮೂರನೇ ಎರಡರಷ್ಟು ಬಹುಮತವಲ್ಲದೆ, ಶೇ.50ಕ್ಕಿಂತ ಹೆಚ್ಚು ರಾಜ್ಯಗಳಿಂದ ಅನುಮೋದನೆ ಸಿಗಬೇಕಾಗುತ್ತದೆ.
ಬಳಿಕವಷ್ಟೇ ಆ ತಿದ್ದುಪಡಿಗೆ ಕಾನೂನಿನ ಮಾನ್ಯತೆ ಸಿಗುತ್ತದೆ. ಸಂವಿಧಾನದ ಪರಿಚ್ಛೇದವನ್ನು ಬದಲಿಸುವುದಕ್ಕೆ ಈ ಪ್ರಮಾಣದ ಅನುಮತಿಗಳ ಅಗತ್ಯವಿರುವಾಗ, ಇಡೀ ಸಂವಿಧಾನವನ್ನು ಬದಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದರೆ, ಹಲವರ ಬಳಿ ಅದಕ್ಕೆ ಉತ್ತರವಿಲ್ಲ. ಹಾಗೆ ನೋಡಿದರೆ, ಸಂವಿಧಾನದ ಬದಲಾವಣೆಗೂ ತಿದ್ದುಪಡಿಗೂ ಭಾರಿ ವ್ಯತ್ಯಾಸವಿದೆ. ಇದನ್ನು ರಾಜಕೀಯ ಪಕ್ಷಗಳು ಮರೆಯಬಾರದು. ‘ಬದಲಾವಣೆ’ ಎಂದರೆ ಇಡೀ ಸಂವಿಧಾನವನ್ನೇ ಹೊಸದಾಗಿ ರಚಿಸುವುದು. ಆದರೆ ‘ತಿದ್ದುಪಡಿ’ ಎಂದರೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅಗತ್ಯ ತಿದ್ದುಪಡಿ ಯನ್ನು ತರುವುದು ಎಂದರ್ಥ.
ಕಳೆದ 75 ವರ್ಷದ ಅವಧಿಯಲ್ಲಿ ಸಂವಿಧಾನಕ್ಕೆ 106 ಬಾರಿ ತಿದ್ದುಪಡಿ ತರಲಾಗಿದೆ. ಈ ಪೈಕಿ ಬಿಜೆಪಿ ಯು ಕೇಂದ್ರದಲ್ಲಿ ಅಽಕಾರದಲ್ಲಿರುವಾಗ 23 ಬಾರಿ ತಿದ್ದುಪಡಿಯಾಗಿದ್ದರೆ, ಕಾಂಗ್ರೆಸ್ ಸರಕಾರವು 75 ಬಾರಿ ತಿದ್ದುಪಡಿ ಮಾಡಿರುವ ದಾಖಲೆಗಳಿವೆ. ಮಿಕ್ಕಂತೆ, ಜನತಾಪಕ್ಷದ ದರ್ಬಾರಿನ ವೇಳೆ 8 ಬಾರಿ ತಿದ್ದುಪಡಿಯಾಗಿದೆ. ಹಾಗೆ ನೋಡಿದರೆ, ಸಂವಿಧಾನದ ಜೀವಾಳ ಎನಿಸಿರುವ ‘ಪೀಠಿಕಾ ಭಾಗ’ದಲ್ಲಿ ‘ಜಾತ್ಯತೀತ’ ಎಂಬ ಅಂಶವು ಸೇರ್ಪಡೆಯಾಗಿದ್ದೂ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಂಬು ದನ್ನು ಮರೆಯಬಾರದು!
ಕಳೆದ ಒಂದು ದಶಕದಿಂದ ಆಡಳಿತ ನಡೆಸಿರುವ ಬಿಜೆಪಿಯ ಸರಕಾರಕ್ಕೂ, ಈ ಬಾರಿಯ ಬಿಜೆಪಿ ಆಡಳಿತಕ್ಕೂ ಅಜಗಜಾಂತರವಿದೆ ಎಂಬುದು ಜಗಜ್ಜಾಹೀರು. ಅದರಲ್ಲೂ, ಯಾವುದೇ ಸಾಂವಿ ಧಾನಿಕ ತಿದ್ದುಪಡಿಯ ವಿಷಯ ಬಂದಾಗ, ಕಳೆದ ಎರಡು ಬಾರಿಯಂತೆ ಈ ಬಾರಿ ಮಾಡಲು ಸಾಧ್ಯ ವಿಲ್ಲ. ಕೆಲ ತಿದ್ದುಪಡಿಗಳಿಗೆ ಮೂರನೇ ಎರಡರಷ್ಟು ಬಹುಮತ ಅಗತ್ಯ. ‘ಒಂದು ರಾಷ್ಟ್ರ, ಒಂದು ಚುನಾವಣೆ’, ‘ಏಕರೂಪ ನಾಗರಿಕ ಸಂಹಿತೆ’ ಸೇರಿದಂತೆ ಕೆಲ ಸೂಕ್ಷ್ಮ ವಿಧೇಯಕಗಳಿಗೆ ಲೋಕಸಭೆ ಯಲ್ಲಿ ಅನುಮತಿ ಪಡೆಯುವುದಕ್ಕೂ ಈ ಮಾತು ಅನ್ವಯ.
ಆದ್ದರಿಂದ, ವಿಧೇಯಕಗಳನ್ನು ಮಂಡಿಸುವುದು ಸುಲಭ, ಆದರೆ ಒಪ್ಪಿಗೆ ಪಡೆಯುವುದಕ್ಕೆ ನೇರ ವಾಗಿ ಅಥವಾ ಪರೋಕ್ಷವಾಗಿ ಪ್ರತಿಪಕ್ಷಗಳ ಸಹಕಾರ ಅನಿವಾರ್ಯ. ಹೀಗಿರುವಾಗ ಸಂವಿಧಾನದ ತಿದ್ದುಪಡಿಗೆ ಸರಕಾರ ಮುಂದಾದರೂ, ಅದನ್ನು ತಡೆಯುವ ಶಕ್ತಿಯನ್ನು ಜನರು ಈ ಬಾರಿ ಕಾಂಗ್ರೆ ಸ್‌ಗೆ ಹಾಗೂ ‘ಇಂಡಿಯ’ ಒಕ್ಕೂಟಕ್ಕೆ ನೀಡಿದ್ದಾರೆ. ಸಂವಿಧಾನದ ಯಾವುದೇ ಅಂಶವನ್ನು ಬದಲಾ ಯಿಸಲು ಭಾರತದಲ್ಲಿ ಬಹುದೊಡ್ಡ ಕಾನೂನು ಪ್ರಕ್ರಿಯೆ ಅಗತ್ಯ.
ಇದು ಬದಲಾವಣೆಯ ಮಾತುಗಳನ್ನು ಆಡುತ್ತಿರುವ ವರಿಗೂ ಗೊತ್ತಿರುವ ವಿಷಯವೇ. ಆದರೆ, ಸಂವಿಧಾನವನ್ನು ಅಳವಡಿಸಿಕೊಂಡ ದಿನದಿಂದ ಈವರೆಗೆ ಅತಿಹೆಚ್ಚು ಬಾರಿ ಅದನ್ನು ತಿದ್ದುಪಡಿ ಮಾಡಿರುವ ರಾಷ್ಟ್ರವೂ ಭಾರತವೇ ಆಗಿದೆ. ಹಾಗೆ ನೋಡಿದರೆ, ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕನ್ನು ನೀಡಿರುವ ಭಾರತದ ಸಂವಿಧಾನವನ್ನು ಸಿದ್ಧಪಡಿಸಿದ್ದ ಅಂಬೇಡ್ಕರ್ ಅವರೇ, ಅದನ್ನು ಆಯಾ ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡುವ ಅಧಿಕಾರವನ್ನು ಆಯಾ ಸರಕಾರಗಳಿಗೆ ನೀಡಿದ್ದಾರೆ.
ಆದರೆ ಇಡೀ ಸಂವಿಧಾನವನ್ನೇ ಬದಲಿಸುವ ಅಧಿಕಾರ ಲಭ್ಯವಿಲ್ಲ. ‘ಸಂವಿಧಾನವನ್ನು ಬದಲಿಸು ತ್ತಾರೆ’ ಎಂಬುದಾಗಿ ಆಗಾಗ್ಗೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆಂದೂ ಕೊನೆಯಿಲ್ಲ. ಆದರೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಅತಿದೊಡ್ಡ ಮತ್ತು ಪವಿತ್ರಗ್ರಂಥ ಎನಿಸಿರುವ ಸಂವಿಧಾನವನ್ನು ಬದಲಿಸುವುದು ಬಟ್ಟೆ ಬದಲಿಸಿದಷ್ಟು ಸುಲಭವಲ್ಲ.
ರಾಜಕೀಯ ಪಕ್ಷಗಳು ತಮ್ಮದೇ ಆದ ‘ರಾಜಕೀಯ ಕಾರಣಗಳಿಗಾಗಿ’ ಯಾವುದೇ ಹಂತದ ಆರೋಪ ಗಳನ್ನು ಮಾಡಬಹುದು. ಆದರೆ, ಅವು ಮಾತಾಡಿದಷ್ಟು ಸುಲಭವಾಗಿ ಸಂವಿಧಾನದ ಆಶಯದ ಬದಲಾವಣೆ ಸಾಧ್ಯವಿಲ್ಲ ಎಂಬುದೇ ಅಂತಿಮ ವಾಸ್ತವ.