ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಅನೇಕ ಸದ್ಗುಣಗಳಿದ್ದೂ ಹತನಾದ ರಾವಣ

ರಾವಣನ ಶಿವಭಕ್ತಿ ಮತ್ತು ಆತನ ಉತ್ತಮ ಗುಣಗಳಿಗಾಗಿ ಶ್ರೀಲಂಕಾ ಮತ್ತು ಭಾರತದಲ್ಲಿ ಆತನ ದೇವಾಲಯಗಳು ಕೂಡಾ ಇವೆ. ರಾವಣನ ಹತ್ತು ತಲೆಗಳು, ೧೦ ನಕಾರಾತ್ಮಕ ಗುಣಗಳನ್ನು ಸಾಂಕೇತಿಕ ವಾಗಿ ಪ್ರತಿನಿಧಿಸುತ್ತವೆ: ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ. ಇವೇ ರಾವಣನ ವಿನಾಶಕ್ಕೆ ಕಾರಣ. ಈ ತಲೆಗಳು ಅವನ ಅತಿ ಬುದ್ಧಿವಂತಿಕೆ ಮತ್ತು ಅಹಂಕಾರದ ಸಂಕೇತ.

ಒಂದೊಳ್ಳೆ ಮಾತು

ರಾವಣನು ಮಹರ್ಷಿ ವಿಶ್ರವಸ್ಸು ಮತ್ತು ರಾಕ್ಷಸಿ ಕೈಕಸಿ ಇವರ ಪುತ್ರ. ಅವನು ಹುಟ್ಟಿದಾಗಲೇ ಹತ್ತು ತಲೆಗಳನ್ನು ಹೊಂದಿರಲಿಲ್ಲ; ಸಾಮಾನ್ಯ ಶಿಶುವಿನಂತೆಯೇ ಇದ್ದನು. ಅವನ ಮೂಲ ಹೆಸರು ದಶಾನನ ಅಥವಾ ದಶಗ್ರೀವ ಎಂದು. ಇದರ ಅರ್ಥ ಹತ್ತು ತಲೆಗಳುಳ್ಳವನು ಎಂದಾದರೂ ಅದು ನಿಜವಾದ ಹತ್ತು ತಲೆಗಳನ್ನು ಸೂಚಿಸುವುದಿಲ್ಲ; ಇದು ರೂಪಕ ಮಾತ್ರ.

ರಾವಣನು ಅಪಾರ ಬುದ್ಧಿಶಕ್ತಿ, ಜ್ಞಾನ ಮತ್ತು ಶಕ್ತಿಯನ್ನು ಹೊಂದಿದ್ದ. ಅವನೊಬ್ಬನೇ ಹತ್ತು ಜನರಿಗೆ ಸಮಾನವಾದ ಬುದ್ಧಿಯುಳ್ಳವನು ಎಂದು ಹೇಳುವ ಅರ್ಥದಲ್ಲಿ ಅವನಿಗೆ ದಶಾನನ ಎಂಬ ಹೆಸರಿಟ್ಟರು. ಅವನ ಪ್ರತಿಯೊಂದು ತಲೆ ಒಂದು ಶಾಸದಲ್ಲಿ- ವೇದಗಳು, ಸಂಗೀತ, ಆಯುಧಶಾಸ, ರಾಜಕೀಯ ಮತ್ತು ಇತರ ವಿಷಯಗಳಲ್ಲಿ ಅವನಿಗಿದ್ದ ಪರಿಣತಿಯನ್ನು ಸೂಚಿಸುತ್ತದೆ.

ಕೆಲ ಪುರಾಣಗಳಲ್ಲಿ ಅವನು ತಪಸ್ಸಿನಿಂದ ದೊರೆತ ಯೋಗಬಲದಿಂದ ಹತ್ತು ಮುಖಗಳನ್ನು ಒಮ್ಮೆಲೇ ತೋರಿಸಬಹುದಾದ ಶಕ್ತಿಯನ್ನು ಹೊಂದಿದ್ದನೆಂದು ಹೇಳಲಾಗಿದೆ. ನಂತರ ಅವನಿಗೆ ರಾವಣ ಎಂಬ ಹೆಸರು ಪ್ರಸಿದ್ಧವಾಯಿತು. ಇದಕ್ಕೆ ಕಾರಣ ಹೀಗಿದೆ: ಶಿವನನ್ನು ಕುರಿತು ತಪಸ್ಸು ಮಾಡಿಯೂ ಶಿವ ಪ್ರತ್ಯಕ್ಷನಾಗದಿದ್ದಾಗ, ಈತ ಕೈಲಾಸ ಪರ್ವತವನ್ನೇ ಎತ್ತಲು ಯತ್ನಿಸಿದ.

ಇದನ್ನೂ ಓದಿ:Roopa Gururaj Column: ರಾಮನ ಬಾಣದಿಂದ ಸೃಷ್ಟಿಯಾದ ಥಾರ್‌ ಮರುಭೂಮಿ

ಇದನ್ನರಿತ ಶಿವ, ತನ್ನ ಪಾದವನ್ನು ಪರ್ವತದ ಮೇಲೆ ಒತ್ತಿದನು. ಅದರಿಂದ ದಶಾನನನ ಕೈಗಳು ಕೈಲಾಸ ಪರ್ವತದ ಕೆಳಗೆ ಸಿಲುಕಿ, ಅವನು ನೋವಿನಿಂದ ಭೀಕರವಾಗಿ ಕಿರುಚಲು ಆರಂಭಿಸಿದನು. ಆ ಭೀಕರ ಗರ್ಜನೆಯನ್ನು ಕೇಳಿದ ಶಿವ ಅವನಿಗೆ ರಾವಣ (ಅಂದರೆ ಗರ್ಜಿಸುವವನು, ಭೀಕರವಾಗಿ ಅಳುವವನು) ಎಂಬ ಹೆಸರು ನೀಡಿದನು.

ರಾವಣನಲ್ಲಿ ಅನೇಕ ಸದ್ಗುಣಗಳು ಕೂಡ ಇದ್ದವು. ರಾವಣನೊಬ್ಬ ಮಹಾನ್ ವಿದ್ವಾಂಸ, ಕವಿ, ಸಂಗೀತಗಾರ, ವೀಣಾವಾದಕ ಮತ್ತು ಜ್ಯೋತಿಷ್ಯ ಶಾಸ್ತ್ರ ಹಾಗೂ ವೇದಗಳಲ್ಲಿ ಪಾರಂಗತನಾಗಿದ್ದನು. ಶಿವನಿಗೆ ಅತ್ಯಂತ ಪ್ರಿಯವಾದ ತಾಂಡವ ನೃತ್ಯದ ಸಂಯೋಜನೆ ಮಾಡಿದ್ದು ರಾವಣನೇ ಎಂದು ಹೇಳುತ್ತಾರೆ.

ರಾವಣನು ಒಬ್ಬ ಮಹಾನ್ ಆಡಳಿತಗಾರ ಮತ್ತು ತನ್ನ ಪ್ರಜೆಗಳ ಬಗ್ಗೆ ಅತಿಯಾದ ಕಾಳಜಿ ಹೊಂದಿ ದ್ದ. ಆತನ ಆಡಳಿತವನ್ನು ಲಂಕಾದ ಸುವರ್ಣಯುಗ ಎಂದು ಪರಿಗಣಿಸಲಾಗಿತ್ತು. ಸಾಯುತ್ತಿರುವ ರಾವಣನು ಲಕ್ಷ್ಮಣನಿಗೆ ಜೀವನದ ಸತ್ಯ, ಸಾರ ಮತ್ತು ರಹಸ್ಯವನ್ನು ಹೇಳಿದನಲ್ಲದೆ ತನ್ನಲ್ಲಿದ್ದ ಜ್ಞಾನವನ್ನೆ ಧಾರೆ ಎರೆಯುತ್ತಾನೆ.

ರಾಮನಿಂದ ಹತನಾಗಿ ಮೋಕ್ಷ ಪಡೆಯುವ ಸಲುವಾಗಿಯೇ ರಾವಣನು ಸೀತೆಯನ್ನು ಅಪಹರಿಸು ತ್ತಾನೆ ಮತ್ತು ಈ ಕಾರಣದಿಂದಲೇ ಅವನು ಸೀತೆಯನ್ನು ಸ್ಪರ್ಶಿಸುವುದಿಲ್ಲ ಎನ್ನುವ ವಿಷಯ ವಾಲ್ಮೀಕಿ ರಾಮಾಯಣದಲ್ಲಿ ಉಖವಾಗಿದೆ.

ಸಮುದ್ರಕ್ಕೆ ಸೇತುವೆ ಕಟ್ಟುವಾಗ ರಾಮನು ಮಾಡಬೇಕಾದ ಒಂದು ಯಜ್ಞಕ್ಕೆ ಯಾರೂ ಪುರೋಹಿ ತರು ಸಿಗದಿದ್ದಾಗ ಶಿವಭಕ್ತ ಮತ್ತು ಮಹಾನ್ ಬ್ರಾಹ್ಮಣ ರಾವಣನೇ ಸ್ವತಃ ಪುರೋಹಿತನಾಗಿ ಬಂದು ‘ಯುದ್ಧದಲ್ಲಿ ವಿಜಯಿಯಾಗು’ ಎಂದು ರಾಮನಿಗೆ ಆಶೀರ್ವಾದ ಮಾಡಿ ತನ್ನ ಕರ್ತವ್ಯನಿಷ್ಠೆ ಮೆರೆಯುತ್ತಾನೆ.

ರಾವಣನ ಶಿವಭಕ್ತಿ ಮತ್ತು ಆತನ ಉತ್ತಮ ಗುಣಗಳಿಗಾಗಿ ಶ್ರೀಲಂಕಾ ಮತ್ತು ಭಾರತದಲ್ಲಿ ಆತನ ದೇವಾಲಯಗಳು ಕೂಡಾ ಇವೆ. ರಾವಣನ ಹತ್ತು ತಲೆಗಳು, ೧೦ ನಕಾರಾತ್ಮಕ ಗುಣಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತವೆ: ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ. ಇವೇ ರಾವಣನ ವಿನಾಶಕ್ಕೆ ಕಾರಣ. ಈ ತಲೆಗಳು ಅವನ ಅತಿ ಬುದ್ಧಿವಂತಿಕೆ ಮತ್ತು ಅಹಂಕಾರದ ಸಂಕೇತ.

ನಮ್ಮಲ್ಲಿ ಅನೇಕ ಒಳ್ಳೆಯ ಗುಣಗಳಿದ್ದೂ ರಾವಣನಂತೆ ನಕಾರಾತ್ಮಕ ಗುಣಗಳನ್ನು ನಾವು ಪೋಷಿಸುತ್ತಿದ್ದರೆ, ಆ ಎಲ್ಲಾ ಒಳ್ಳೆಯ ಗುಣಗಳಿಗೂ ಯಾವ ಬೆಲೆಯೂ ಇರುವುದಿಲ್ಲ. ಆದ್ದರಿಂದಲೇ ಆದಷ್ಟು ನಮ್ಮ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಿ ನಮ್ಮೊಳಗಿರುವ ನಕಾರಾತ್ಮಕ ಗುಣಗಳನ್ನು ಗೆಲ್ಲಬೇಕು.

ಆಗ ಮಾತ್ರ ನಮ್ಮಲ್ಲಿರುವ ಒಳ್ಳೆಯ ಗುಣಗಳಿಗೂ ಒಂದು ಬೆಲೆ. ನಾವು ರಾಮನಷ್ಟು ಪರಿಪೂರ್ಣ ರಾಗದಿದ್ದರೂ ತೊಂದರೆ ಇಲ್ಲ, ರಾವಣನಂತೆ ಅನೇಕ ಸದ್ಗುಣಗಳು ಇದ್ದೂ ಅಹಂಕಾರದಿಂದ ನಮ್ಮ ಅಧೋಗತಿಯನ್ನು ನಾವೇ ತಂದುಕೊಳ್ಳಬಾರದು ಅಲ್ಲವೇ?

ರೂಪಾ ಗುರುರಾಜ್

View all posts by this author