ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಒಲಿವರ್ ಟ್ಯಾಂಬೋ ನೆನಪು

ಒಲಿವರ್ ಟ್ಯಾಂಬೋ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ (Apartheid) ವಿರುದ್ಧ ನಡೆದ ಹೋರಾಟದ ಅತಿದೊಡ್ಡ ಶಕ್ತಿ. ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ನೆಲ್ಸನ್ ಮಂಡೇ ಲಾರ ಹೆಸರು ಎಷ್ಟು ಪ್ರಸಿದ್ಧವೋ, ಅಷ್ಟೇ ಪ್ರಮುಖವಾದದ್ದು ಒಲಿವರ್ ಟ್ಯಾಂಬೋ ಹೆಸರು. ಮಂಡೇಲಾ ಜೈಲಿನಲ್ಲಿದ್ದಾಗ, ಇಡೀ ಜಗತ್ತಿನ ಗಮನವನ್ನು ದಕ್ಷಿಣ ಆಫ್ರಿಕಾದತ್ತ ಸೆಳೆದು, ಹೊರಗಿನಿಂದ ಹೋರಾಟವನ್ನು ಜೀವಂತವಾಗಿರಿಸಿದವರು ಟ್ಯಾಂಬೋ.

ಸಂಪಾದಕರ ಸದ್ಯಶೋಧನೆ

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ʼಬರ್ಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಲಿಡು ತ್ತಿದ್ದಂತೆ ಒಲಿವರ್ ಟ್ಯಾಂಬೋ ಹೆಸರು ಮತ್ತು ಕಂಚಿನ ಪುತ್ಥಳಿ ಗೋಚರಿಸುತ್ತದೆ. ಈ ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾಕೆ ಇಟ್ಟಿದ್ದಾರೆ ಎಂಬ ಕುತೂಹಲ ಬರಬಹುದು.

ಒಲಿವರ್ ಟ್ಯಾಂಬೋ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ (Apartheid) ವಿರುದ್ಧ ನಡೆದ ಹೋರಾಟದ ಅತಿದೊಡ್ಡ ಶಕ್ತಿ. ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ನೆಲ್ಸನ್ ಮಂಡೇ ಲಾರ ಹೆಸರು ಎಷ್ಟು ಪ್ರಸಿದ್ಧವೋ, ಅಷ್ಟೇ ಪ್ರಮುಖವಾದದ್ದು ಒಲಿವರ್ ಟ್ಯಾಂಬೋ ಹೆಸರು. ಮಂಡೇಲಾ ಜೈಲಿನಲ್ಲಿದ್ದಾಗ, ಇಡೀ ಜಗತ್ತಿನ ಗಮನವನ್ನು ದಕ್ಷಿಣ ಆಫ್ರಿಕಾದತ್ತ ಸೆಳೆದು, ಹೊರಗಿನಿಂದ ಹೋರಾಟವನ್ನು ಜೀವಂತವಾಗಿರಿಸಿದವರು ಟ್ಯಾಂಬೋ. ಒಲಿವರ್ ಟ್ಯಾಂಬೋ ಮತ್ತು ನೆಲ್ಸನ್ ಮಂಡೇಲಾರ ಗೆಳೆತನ ಒಂದು ಇತಿಹಾಸ.

ಇದನ್ನೂ ಓದಿ: Vishweshwar Bhat Column: ಅಲ್ಜೀರಿಯಾ ಸಿಂಡ್ರೋಮ್ ಅಂದರೇನು ?

ಇವರಿಬ್ಬರೂ ಸೇರಿ 1952ರಲ್ಲಿ ದಕ್ಷಿಣ ಆಫ್ರಿಕಾದ ಮೊಟ್ಟಮೊದಲ ಬಾರಿಗೆ ಕಪ್ಪು ವರ್ಣೀಯರಿಗಾಗಿ ‘ಮಂಡೇಲಾ ಆಂಡ್ ಟ್ಯಾಂಬೋ’ ಎಂಬ ಕಾನೂನು ಸಂಸ್ಥೆಯನ್ನು (Law Firm) ಪ್ರಾರಂಭಿಸಿದರು. ವರ್ಣಭೇದ ನೀತಿಯಿಂದ ತುಳಿತಕ್ಕೊಳಗಾದ ಕಪ್ಪು ವರ್ಣೀಯರಿಗೆ ನ್ಯಾಯ ಕೊಡಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು.

ಮಂಡೇಲಾ ಆಕ್ರಮಣಕಾರಿ ನಾಯಕನಾಗಿದ್ದರೆ, ಟ್ಯಾಂಬೋ ಅವರು ಶಾಂತಚಿಂತಕ ಮತ್ತು ರಾಜತಾಂತ್ರಿಕ ಗುಣವುಳ್ಳವರಾಗಿದ್ದರು. 1960ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ANC) ಪಕ್ಷವನ್ನು ನಿಷೇಧಿಸಿದಾಗ, ಪಕ್ಷದ ಅಸ್ತಿತ್ವವನ್ನು ಉಳಿಸಲು ಟ್ಯಾಂಬೋ ಅವರಿಗೆ ದೇಶ ಬಿಟ್ಟು ಹೋಗಲು ಸೂಚಿಸಲಾಯಿತು. ಅವರು ಮುಂದಿನ 30 ವರ್ಷಗಳ ಕಾಲ ತಮ್ಮ ದೇಶದಿಂದ ದೂರವಿದ್ದು, ಲಂಡನ್ ಮತ್ತು ಇತರ ದೇಶಗಳಲ್ಲಿ ನೆಲೆಸಿದರು.

ತನ್ನ ದೇಶದ ಜನರ ಹಕ್ಕುಗಳಿಗಾಗಿ ಹೋರಾಡಲು ಒಬ್ಬ ಮನುಷ್ಯ ತನ್ನ ಮನೆಯಿಂದ, ಮಣ್ಣಿನಿಂದ 30 ವರ್ಷಗಳ ಕಾಲ ದೂರವಿರುವುದು ಸುಲಭದ ಮಾತಲ್ಲ. ಆದರೆ ಟ್ಯಾಂಬೋ ಅವರು ಈ ಕಾಲಾವಧಿಯಲ್ಲಿ ಜಗತ್ತಿನಾದ್ಯಂತ ಸಂಚರಿಸಿ, ವರ್ಣಭೇದ ನೀತಿಯ ವಿರುದ್ಧ ಅಂತಾರಾಷ್ಟ್ರೀಯ ಬೆಂಬಲವನ್ನು ಕ್ರೋಡೀಕರಿಸಿದರು.

ನೆಲ್ಸನ್ ಮಂಡೇಲಾ ಸೇರಿದಂತೆ ಪ್ರಮುಖ ನಾಯಕರು ಜೈಲಿನಲ್ಲಿದ್ದಾಗ, ಎಎನ್‌ಸಿ ಪಕ್ಷವು ದಿಕ್ಕಿಲ್ಲದಂತಾಗಿತ್ತು. ಅಂಥ ಸಮಯದಲ್ಲಿ ಟ್ಯಾಂಬೋ ಪಕ್ಷದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು. ಚದುರಿಹೋಗಿದ್ದ ಹೋರಾಟಗಾರರನ್ನು ಒಂದುಗೂಡಿಸಿ, ‘ವರ್ಣಭೇದ ನೀತಿಯು ಕೇವಲ ದಕ್ಷಿಣ ಆಫ್ರಿಕಾದ ಸಮಸ್ಯೆಯಲ್ಲ, ಅದು ಇಡೀ ಮಾನವೀಯತೆಯ ವಿರುದ್ಧದ ಅಪರಾಧ’ ಎಂದು ಜಗತ್ತಿಗೆ ಮನವರಿಕೆ ಮಾಡಿಕೊಟ್ಟರು.

ಒಲಿವರ್ ಟ್ಯಾಂಬೋ ಅವರ ಮೇಲೆ ಮಹಾತ್ಮ ಗಾಂಧಿಯವರ ತತ್ವಗಳ ಪ್ರಭಾವ ಬಹಳ ವಿತ್ತು. ಅವರು ಮೂಲತಃ ಗಣಿತ ಶಿಕ್ಷಕರಾಗಿದ್ದರು. ಅವರ ಮಾತುಗಳಲ್ಲಿ ಸೌಮ್ಯತೆಯಿತ್ತು, ಆದರೆ ಅವರ ನಿರ್ಧಾರಗಳಲ್ಲಿ ವಜ್ರದಂಥ ಕಾಠಿಣ್ಯವಿತ್ತು. ಅನ್ಯಾಯದ ವಿರುದ್ಧ ಹೋರಾಡುವಾಗಲೂ ಅವರು ಘನತೆಯನ್ನು ಬಿಟ್ಟುಕೊಡಲಿಲ್ಲ.

ಟ್ಯಾಂಬೋ ಅವರಿಗೆ ಸಂಗೀತ ಎಂದರೆ ಬಹಳ ಇಷ್ಟ. ಅವರು ಲಂಡನ್‌ನಲ್ಲಿದ್ದಾಗ ಚರ್ಚ್ ಹಾಡುಗಳನ್ನು (Choir) ಹಾಡುವುದರಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಸೌಮ್ಯ ಸ್ವಭಾವ ಕ್ಕೆ ಸಂಗೀತವೇ ಸ್ಪೂರ್ತಿಯಾಗಿತ್ತು. ಮಂಡೇಲಾ ಅವರು ಜೈಲಿನಿಂದ ಬಿಡುಗಡೆ ಯಾದಾಗ ಮೊದಲು ನೆನೆದದ್ದು ಟ್ಯಾಂಬೋ ಅವರನ್ನು. ‘ನಾನು ಜೈಲಿನಲ್ಲಿದ್ದರೂ ಹೊರಗಿನ ಜಗತ್ತಿಗೆ ನನ್ನ ಧ್ವನಿ ಕೇಳಿಸುವಂತೆ ಮಾಡಿದವರು ಒಲಿವರ್’ ಎಂದು ಮಂಡೇಲಾ ಹೇಳಿದ್ದರು.

ಅವರು ದಕ್ಷಿಣ ಆಫ್ರಿಕಾಕ್ಕೆ ಮರಳಿದಾಗ, ಅವರಿಗೆ ಪಾರ್ಶ್ವವಾಯು ಪೀಡಿಸಿತ್ತು. ಆದರೂ ಅವರು ದೇಶದ ಮೊದಲ ಪ್ರಜಾಪ್ರಭುತ್ವ ಚುನಾವಣೆಯನ್ನು ನೋಡಲು ಬದುಕಿದ್ದರು. ಜೋಹಾನೆಸ್ಬರ್ಗ್ ವಿಮಾನ ನಿಲ್ದಾಣಕ್ಕೆ ಮೊದಲು ‘ಜಾನ್ ಸ್ಮಟ್ಸ್’ ಮತ್ತು ನಂತರ ‘ಜೋಹಾನ್ಸ್‌ʼಬರ್ಗ್ ಇಂಟರ್‌ನ್ಯಾಷನಲ್’ ಎಂಬ ಹೆಸರಿತ್ತು. ಆದರೆ 2006ರಲ್ಲಿ ಇದಕ್ಕೆ O.R. Tambo International Airport ಎಂದು ಮರುನಾಮಕರಣ ಮಾಡಲಾಯಿತು.

ಈ ವಿಮಾನ ನಿಲ್ದಾಣವು ದಕ್ಷಿಣ ಆಫ್ರಿಕಾಕ್ಕೆ ಜಗತ್ತಿನ ಇತರ ದೇಶಗಳನ್ನು ಜೋಡಿಸುವ ಕೊಂಡಿಯಾಗಿದೆ. ಒಲಿವರ್ ಟ್ಯಾಂಬೋ ಅವರು ಕೂಡ ದೇಶಭ್ರಷ್ಟರಾಗಿದ್ದ ಕಾಲದಲ್ಲಿ ಜಗತ್ತನ್ನು ಸುತ್ತಿ ದಕ್ಷಿಣ ಆಫ್ರಿಕಾವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಜೋಡಿಸಿ ದ್ದರು. ಆ ನೆನಪಿಗಾಗಿ ಈ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಲಾಗಿದೆ.

ಒಲಿವರ್ ಟ್ಯಾಂಬೋ ಅವರು ಹೇಳುತ್ತಿದ್ದರು- ‘ಒಬ್ಬ ನಾಯಕನ ಕೆಲಸವೆಂದರೆ ಜನರಿಗೆ ಅವರು ಏನು ಬಯಸುತ್ತಾರೆ ಎಂಬುದನ್ನು ಹೇಳುವುದಲ್ಲ, ಬದಲಿಗೆ ಅವರಿಗೆ ಯಾವುದು ಒಳ್ಳೆಯದು ಎಂಬುದನ್ನು ಮನವರಿಕೆ ಮಾಡಿಕೊಡುವುದು’. ಅವರ ಜೀವನವು ಶಿಸ್ತು, ಸಂಯಮ ಮತ್ತು ಅವಿರತ ಹೋರಾಟಕ್ಕೆ ಮಾದರಿ.

ವಿಶ್ವೇಶ್ವರ ಭಟ್‌

View all posts by this author