Sandeep Balakrishna Column: ಒಳಗಿರುವ ಶತ್ರು ಎಲ್ಲರಿಗಿಂತ ಹೆಚ್ಚು ಅಪಾಯಕಾರಿ

ಸೂರತ್‌ನ ಫ್ರೆಂಚ್ ಗಾರ್ಡನ್‌ನಲ್ಲಿ 1907ರಲ್ಲಿ ಭಾರತೀಯ ನ್ಯಾಷನಲ್ ಕಾಂಗ್ರೆಸ್ ಮೊದಲ ಬಾರಿ ವಿಭಜನೆಯಾದಾಗಲೇ ಈ ರೀತಿಯ ಹಿಂಸಾಚಾರದ ಇತಿಹಾಸಕ್ಕೆ ಆ ಪಕ್ಷ ಮುನ್ನುಡಿ ಬರೆದಿತ್ತು. ಸೋಕಾಲ್ಡ್ ಸೌಮ್ಯವಾದಿಗಳು ಆಗಲೇ ಸಶಸ ಬೊಹ್ರಾ ಮುಸ್ಲಿಂ ಗೂಂಡಾಗಳನ್ನು ಬಾಡಿಗೆಗೆ ಪಡೆದು ಮಹಾರಾಷ್ಟ್ರದ ದೊಡ್ಡ ನಾಯಕ ಬಾಲಗಂಗಾಧರ ತಿಲಕ್‌ರಿಗೆ ಪಾಠ ಕಲಿಸಲು ಸೂಚನೆ ನೀಡಿ ದ್ದರು

Sandeep Balakrishna Column
Profile Ashok Nayak Jan 24, 2025 10:43 AM

ವಿಶ್ಲೇಷಣೆ

ಸಂದೀಪ್‌ ಬಾಲಕೃಷ್ಣ

ಸಂಸತ್ತಿನಲ್ಲಿ ಇತ್ತೀಚೆಗೆ ಬಿ.ಆರ್.ಅಂಬೇಡ್ಕರ್ ಅವರ ವಿಚಾರವಾಗಿ ಅಕ್ಷರಶಃ ಕುಸ್ತಿಯೇ ನಡೆಯಿತು. ಒಬ್ಬ ಸಂಸದರ ಮೂಗು ಒಡೆಯಿತು, ಇನ್ನೊಬ್ಬ ಸಂಸದರಿಗೆ ಗಾಯವಾಯಿತು. ಕಾಂಗ್ರೆಸ್ ಪಕ್ಷದಲ್ಲಿ ಆಳವಾಗಿ ಬೇರುಬಿಟ್ಟಿರುವ ಹಿಂಸಾಚಾರದ ಪ್ರವೃತ್ತಿಗೆ ಇದು ಹೊಸ ಸೇರ್ಪಡೆಯಷ್ಟೆ.

ಸೂರತ್‌ನ ಫ್ರೆಂಚ್ ಗಾರ್ಡನ್‌ನಲ್ಲಿ 1907ರಲ್ಲಿ ಭಾರತೀಯ ನ್ಯಾಷನಲ್ ಕಾಂಗ್ರೆಸ್ ಮೊದಲ ಬಾರಿ ವಿಭಜನೆಯಾದಾಗಲೇ ಈ ರೀತಿಯ ಹಿಂಸಾಚಾರದ ಇತಿಹಾಸಕ್ಕೆ ಆ ಪಕ್ಷ ಮುನ್ನುಡಿ ಬರೆದಿತ್ತು. ಸೋಕಾಲ್ಡ್ ಸೌಮ್ಯವಾದಿಗಳು ಆಗಲೇ ಸಶಸ ಬೊಹ್ರಾ ಮುಸ್ಲಿಂ ಗೂಂಡಾಗಳನ್ನು ಬಾಡಿಗೆಗೆ ಪಡೆದು ಮಹಾರಾಷ್ಟ್ರದ ದೊಡ್ಡ ನಾಯಕ ಬಾಲಗಂಗಾಧರ ತಿಲಕ್‌ರಿಗೆ ಪಾಠ ಕಲಿಸಲು ಸೂಚನೆ ನೀಡಿ ದ್ದರು.

ಪರಿಣಾಮ, ಸಮಾವೇಶದ ವೇದಿಕೆಯಲ್ಲೇ ಸೌಮ್ಯವಾದಿಗಳು ಮತ್ತು ಕ್ರಾಂತಿಕಾರಿಗಳ ನಡುವೆ ಹೊಡೆ ದಾಟ ಸಂಭವಿಸಿ, ರಕ್ತ ಹರಿದಿತ್ತು. ಆದರೆ, ಕಾಂಗ್ರೆಸ್‌ನ ಉನ್ನತ ನಾಯಕತ್ವಕ್ಕೆ ಅಹಿಂಸಾ ವಾದಿಗಳ ಸೋಗು ಧರಿಸುವ ಕಲೆಯೂ ಕರಗತವಾಗಿತ್ತು. ಪ್ರತಿ ಬಾರಿ ಹಿಂಸಾಚಾರ ನಡೆದಾಗಲೂ ಅದು ತನ್ನನ್ನು ತಾನೇ ಸಂತ್ರಸ್ತನೆಂದು ಬಿಂಬಿಸಿಕೊಂಡು, ಶಾಂತಿಯ ಮಂತ್ರ ಜಪಿಸುತ್ತಿತ್ತು.

ಇಂಥ ತಂತ್ರಗಾರಿಕೆಯ ಹಲವು ಹೈ ಪ್ರೊಫೈಲ್ ಬಲಿಪಶುಗಳಲ್ಲಿ ಅಂಬೇಡ್ಕರ್ ಕೂಡ ಒಬ್ಬರು. ತಮ್ಮ ದಾರಿಗೆ ಬರದ ನಾಯಕರನ್ನು ಜವಾಹರಲಾಲ್ ನೆಹರು ಹೇಗೆ ನೀವಾಳಿಸಿ ಎಸೆಯುತ್ತಿದ್ದರು ಎಂಬುದಕ್ಕೆ ೧೯೫೧ರ ಅಕ್ಟೋಬರ್ ೧೦ರಂದು ಸಂಸತ್ತಿನಲ್ಲಿ ಅಂಬೇಡ್ಕರ್ ಮಾಡಿದ ಈ ರಾಜೀ ನಾಮೆ ಭಾಷಣದಲ್ಲಿ ಸಾಕಷ್ಟು ಸುಳಿವುಗಳು ಸಿಗುತ್ತವೆ: “ಸಚಿವ ಸಂಪುಟ ಆಂತರಿಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಂಸತ್ತಿಗೆ ಅವಕಾಶವೇ ಇಲ್ಲದಂತಾಗಿದೆ.

ಸಂಪುಟದಲ್ಲಿ ಸಾಮರಸ್ಯ ಇದೆಯೇ ಅಥವಾ ಸಂಘರ್ಷವಿದೆಯೇ ಎಂಬುದು ಸಂಸತ್ತಿಗೆ ಗೊತ್ತಾಗು ವುದಿಲ್ಲ. ಆಗಸ್ಟ್ ೧೯೪೬ರಲ್ಲಿ ಮಧ್ಯಂತರ ಸರಕಾರ ರಚನೆಯಾದಾಗ ನಾನು ವಿರೋಧಿಗಳ ಕ್ಯಾಂಪ್‌ ನಲ್ಲಿದ್ದೆ. ಹೀಗಾಗಿ ಸರಕಾರದಲ್ಲಿ ಪಾಲುದಾರನಾಗಲು ನನಗೆ ಯೋಗ್ಯತೆಯಿಲ್ಲ ಎಂದು ಬಿಂಬಿಸಿ ಆಗಿತ್ತು. ಸಚಿವ ಸಂಪುಟದಲ್ಲಿ ನಡೆಯುವ ಅಧಿಕಾರದ ರಾಜಕಾರಣದಲ್ಲಿ ನಾನು ಯಾವತ್ತೂ ಪಕ್ಷಗಾರನಾಗಿರಲಿಲ್ಲ, ಹುದ್ದೆಗಳನ್ನು ಕಸಿದುಕೊಳ್ಳುವ ರೇಸ್‌ನಲ್ಲೂ ಇರಲಿಲ್ಲ.

ಏಕೆಂದರೆ ನಾನು ದೇಶಸೇವೆಯಲ್ಲಿ ನಂಬಿಕೆ ಇರಿಸಿದ್ದೆ..." “ಬಾಲ್ಯದಿಂದಲೂ ನಾನು ಪರಿಶಿಷ್ಟ ಜಾತಿಗಳ ಉದ್ಧಾರಕ್ಕಾಗಿ ನನ್ನನ್ನು ಸಮರ್ಪಿಸಿಕೊಂಡವನು. ನಾನು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರೆ ಸಾಂಸ್ಥಿಕವಾಗಿ ಅತ್ಯುನ್ನತ ಹುದ್ದೆಯನ್ನು ತಲುಪಬಹುದಿತ್ತು. ಸರಕಾರದಲ್ಲಿ ಏಕೆ ಪರಿಶಿಷ್ಟ ಜಾತಿ ಯವರಿಗೆ ಅವಕಾಶಗಳು ಸಿಗುತ್ತಿಲ್ಲ ಗೊತ್ತೆ? ಮುಸ್ಲಿಮರ ವಿಷಯದಲ್ಲಿ ಸರಕಾರ ತೋರು ತ್ತಿರುವ ಆದರವನ್ನು ಪರಿಶಿಷ್ಟ ಜಾತಿಗಳ ಜತೆಗೆ ಹೋಲಿಸಿ ನೋಡಿ. ಪ್ರಧಾನ ಮಂತ್ರಿಗಳು ತಮ್ಮೆಲ್ಲಾ ಶಕ್ತಿ ಮತ್ತು ಸಮಯವನ್ನು ಮುಸ್ಲಿಮರ ರಕ್ಷಣೆಗಾಗಿ ವ್ಯಯಿಸುತ್ತಿದ್ದಾರೆ.

ನನ್ನ ಪ್ರಶ್ನೆ ಏನೆಂದರೆ, ಈ ದೇಶದಲ್ಲಿ ರಕ್ಷಣೆ ಸಿಗಬೇಕಾಗಿರುವುದು ಮುಸ್ಲಿಮರಿಗೆ ಮಾತ್ರವೇ? ರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರಕ್ಷಣೆಯ ಅಗತ್ಯವಿಲ್ಲವೇ?"ಇದನ್ನು ಓದುವುದಕ್ಕೇ ಎಷ್ಟೊಂದು ನೋವಾಗುತ್ತದೆ. ಗಾಂಧಿ ಮತ್ತು ನೆಹರು ಅವರ ಕಾಂಗ್ರೆಸ್‌ನಲ್ಲಿ ಅಂಬೇಡ್ಕರ್ ರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳಲಾಗಿತ್ತು ಎಂಬುದರ ಪ್ರತ್ಯಕ್ಷ ವರದಿಯಿದು.

ಸಂಸತ್ತಿನ ಕಳೆದ ಬಾರಿಯ ಅಧಿವೇಶನದಲ್ಲಿ ಅಂಬೇಡ್ಕರ್ ವಿಚಾರ ಬಂದಾಗ ಪ್ರಾಕ್ಟಿಕಲ್ ಆಗಿ ನಡೆದುಕೊಳ್ಳುವುದರ ಬದಲು ಬಿಜೆಪಿ ಕೂಡ ಭಾವನಾತ್ಮಕವಾಗಿ ನಡೆದುಕೊಂಡಂತೆ ಕಾಣಿಸುತ್ತದೆ. ಅದೆಲ್ಲದರ ಪರಿಣಾಮವಾಗಿ ಎಂದಿನಂತೆ ದೊಡ್ಡ ನಷ್ಟವಾಗಿದ್ದು ಮತ್ತೆ ಅಂಬೇಡ್ಕರ್ ಅವರ ಪರಂಪರೆಗೇ. ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಅವಧಿಯಿಂದ ಅಂಬೇಡ್ಕರ್ ಅವರ ಒಟ್ಟಾರೆ ವ್ಯಕ್ತಿತ್ವವನ್ನು ನೆನೆಯುವಾಗ ಇದೇ ತಪ್ಪುಗಳಾಗುತ್ತ ಬಂದಿವೆ.

ಅಂಬೇಡ್ಕರ್‌ರನ್ನು ಗೌರವಿಸಿ, ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಬದಲು ಅವರ ವಿಚಾರ ದಲ್ಲಿ ಎಲ್ಲರನ್ನೂ ದಾರಿ ತಪ್ಪಿಸುವ ಕೆಲಸವೇ ನಡೆಯುತ್ತಾ ಬಂದಿದೆ. ಇದಕ್ಕೆ ಕಾರಣ: ನಾವು ಅಂಬೇ ಡ್ಕರ್ ರನ್ನು ಕುರುಡಾಗಿ ದೈವತ್ವಕ್ಕೇರಿಸಿ, ಅವರು ನೀಡಿದ ಕೊಡುಗೆಯನ್ನು ಪ್ರಾಮಾಣಿಕ ವಾಗಿ ಸ್ಮರಿಸದೆ ಕಡೆಗಣಿಸಿರುವುದು.

ಸಂಸ್ಕೃತದಲ್ಲಿ ‘ಸಹೃದಯ ಸಮೀಕ್ಷಾ’ ಎಂಬ ಶಬ್ದವಿದೆ. ಅಂದರೆ ವಿಶ್ಲೇಷಣಾತ್ಮಕ ಮೌಲ್ಯಮಾಪನ. ಇದನ್ನು ಅಂಬೇಡ್ಕರ್ ವಿಷಯದಲ್ಲಿ ನಾವು ಮಾಡಿಲ್ಲ. ಹೀಗೆ ಹಿಂದೊಮ್ಮೆ ಭಾರತದ ರಾಜಕೀಯ ರಂಗದಲ್ಲಿ ಗಾಂಧೀಜಿಗೆ ಹೇಗೆ ದೇವರ ಸ್ಥಾನವನ್ನು ನೀಡಿ ದೂರವಿರಿಸಲಾಗಿತ್ತೋ ಹಾಗೆಯೇ ನಾವು ಅಂಬೇಡ್ಕರ್‌ಗೂ ಮಾಡಿ ಕೂರಿಸಿದ್ದೇವೆ.

ಆದ್ದರಿಂದಲೇ ಅಂಬೇಡ್ಕರ್ ಬಗ್ಗೆ ಏನು ಬರೆದರೂ, ಏನು ಮಾತನಾಡಿದರೂ ದೊಡ್ಡ ವಿವಾದ ವಾಗುತ್ತದೆ. ಪ್ರತಿಕೃತಿಗಳನ್ನು ದಹಿಸಲಾಗುತ್ತದೆ. ಮೂಗು ಒಡೆಯಲಾಗುತ್ತದೆ. ಅಂಬೇಡ್ಕರ್ ಬಗ್ಗೆ ಹೊಗಳುವುದಕ್ಕೆ ಎಷ್ಟೆಲ್ಲಾ ವಿಚಾರಗಳು ಇವೆಯೋ ಹಾಗೆಯೇ ಅವರನ್ನು ಟೀಕಿಸುವುದಕ್ಕೂ ಸಾಕಷ್ಟು ಸಂಗತಿಗಳು ಇವೆ. ಅವರ ಬರವಣಿಗೆಗಳನ್ನು ಮೇಲ್ನೋಟಕ್ಕೆ ಗಮನಿಸಿದರೂ ಸಾಕು, ಇಂದು ಅಂಬೇಡ್ಕರ್ ಬದುಕಿದ್ದಿದ್ದರೆ ತಮ್ಮ ಟೀಕಾಕಾರರನ್ನು ಮುಕ್ತವಾಗಿ ಸ್ವಾಗತಿಸುತ್ತಿದ್ದರು ಎಂಬುದು ತಿಳಿಯುತ್ತದೆ.

ಬೇರೆ ವಿಚಾರಗಳು ಹಾಗಿರಲಿ, ಅಂಬೇಡ್ಕರ್ ಅತ್ಯಂತ ಮುಕ್ತ ಮನಸ್ಸಿನ ವ್ಯಕ್ತಿಯಾಗಿದ್ದರು. ಅಂಬೇ ಡ್ಕರ್‌ಗೆ ಕಾಂಗ್ರೆಸ್ ಪಕ್ಷ ಹೇಗೆ ಅನ್ಯಾಯ ಮಾಡಿತು ಎಂಬುದನ್ನು ನೆನೆಯುವಾಗ ಬಿಜೆಪಿ ಯವರು ಯಾವಾಗಲೂ 1952ರ ಚುನಾವಣೆಯನ್ನು ಉಲ್ಲೇಖಿಸುತ್ತಾರೆ. ಉತ್ತರ ಬಾಂಬೆ ಕ್ಷೇತ್ರಕ್ಕೆ ನಡೆದ ಆ ಚುನಾವಣೆಯಲ್ಲಿ ಅಂಬೇಡ್ಕರ್ ರನ್ನು ಸೋಲಿಸಲು ಜವಾಹರಲಾಲ್ ನೆಹರು ಅವರು ಖುದ್ದಾಗಿ ಕಮ್ಯುನಿಸ್ಟ್ ಪಕ್ಷದ ನಾಯಕ ಎಸ್.ಎ.ಡಾಂಗೆಗೆ ಬೆಂಬಲ ನೀಡಿದ್ದರು.

ಬಿಜೆಪಿಯ ವಿರೋಧ ಈ ಸಂಗತಿಗೇ ನಿಂತುಬಿಡುತ್ತದೆ. ಇದಕ್ಕಿಂತ ಮುಂದೆ ಹೋಗುವುದಿಲ್ಲ. ಆದರೆ, ಅದೇ ನಾರ್ತ್ ಬಾಂಬೆ ಕ್ಷೇತ್ರದಲ್ಲಿ 10 ವರ್ಷಗಳ ಬಳಿಕವೂ ಇಂತಹುದೇ ನಾಟಕ ನಡೆದಿತ್ತು ಮತ್ತು ಅದರ ಅಂತ್ಯವೂ ಅಂಬೇಡ್ಕರ್ ವಿಷಯದಲ್ಲಿ ಆದಂತೆಯೇ ಆಗಿತ್ತು. ಆ ಚುನಾವಣೆಯಲ್ಲಿ ಆಚಾರ್ಯ ಕೃಪಲಾನಿಯವರು ಅಂಬೇಡ್ಕರ್‌ರ ಜಾಗದಲ್ಲಿದ್ದರು.

ಅಂಬೇಡ್ಕರ್‌ರನ್ನು ಸೋಲಿಸಿದ್ದ ನಾರಾಯಣ ಕಾಜ್ರೋಲ್ಕರ್‌ರ ಜಾಗದಲ್ಲಿ ಭಾರತದ ಮಾಜಿ ರಕ್ಷಣಾ ಸಚಿವ ಹಾಗೂ ನೆಹರು ಅವರ ಪರಮಾಪ್ತ ವಿ.ಕೆ.ಕೃಷ್ಣ ಮೆನನ್ ಇದ್ದರು. ಅವರಿಬ್ಬರ ಭವಿಷ್ಯ ವನ್ನೂ ನಿರ್ಧರಿಸಿದ ಚುನಾವಣೆಯದು. 1962ರ ಆ ಲೋಕಸಭೆ ಚುನಾವಣೆಯನ್ನು ನಾವಿಂದು ಮರೆತೇಬಿಟ್ಟಿದ್ದೇವೆ.

ಆದರೆ ಅದು ಈ ದೇಶದಲ್ಲಿ ನಡೆದ ಐತಿಹಾಸಿಕ ಚುನಾವಣೆಗಳಲ್ಲಿ ಒಂದು. ಉತ್ತರ ಬಾಂಬೆ ಕ್ಷೇತ್ರದ ಕಾರಣದಿಂದಲೇ ಆ ಚುನಾವಣೆ ಬಹಳ ಪ್ರಸಿದ್ಧಿ ಪಡೆದಿದೆ. ಅದು ದಿಗ್ಗಜರ ರಣಭೂಮಿಯಾಗಿತ್ತು. 1962ರ ಫೆಬ್ರವರಿ 2ರ ಟೈಮ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಬರಹದಲ್ಲಿ ನೆಹರು ಅವರ ಅತಿ ಯಾದ ಸಮಾಜವಾದ, ಎಡಪಂಥೀಯ ತಟಸ್ಥವಾದದ ಬಗ್ಗೆ ವಿವರಗಳಿವೆ.

ಅವರು ಚೀನಾವನ್ನು ಹೇಗೆ ಓಲೈಸುತ್ತಿದ್ದರು ಮತ್ತು ಆ ದೇಶದ ಜನರಿಗೆ ‘ಅಮೆರಿಕದವರಿಗೆ ಈ ಚುನಾವಣೆಯಲ್ಲಿ ತುಂಬಾ ಆಸಕ್ತಿಯಿದೆ’ ಎಂದು ಹೇಗೆ ಸಂದೇಶ ರವಾನಿಸಿದ್ದರು ಎಂಬ ಬಗ್ಗೆ ಮಾಹಿತಿಯಿದೆ. ಎಲ್ಲಕ್ಕಿಂತ ಹೆಚ್ಚಾಗಿ, ನಿಯತಕಾಲಿಕೆಯ ಮುಖಪುಟದಲ್ಲೇ ಕೃಷ್ಣ ಮೆನನ್‌ಗೆ ಹಾವಿನ ಹೆಡೆ ಅಂಟಿಸಿ, ಅದನ್ನು ಹಾವಾಡಿಗನೊಬ್ಬ ಪುಂಗಿಯ ಮೂಲಕ ಆಡಿಸುತ್ತಿರುವ ಕ್ಯಾರಿ‌ ಕೇಚರ್ ಪ್ರಕಟಿಸಲಾಗಿದೆ (ಪಬ್ಲಿಕ್ ಅಫರ್ಸ್ ಜರ್ನಲ್: ಸಂಪುಟ 36, ನಂ.2).

ಇತ್ತ ನಮ್ಮದೇ ದೇಶದ ಸಂಡೇ ಸ್ಟಾಂಡರ್ಡ್, ಟೈಮ್ಸ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಲ್ಲಿ 1961ರ ಅಕ್ಟೋಬರ್‌ನಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇಂಥ ಎಚ್ಚರಿಕೆಗಳು ಕಾಣಿಸಿಕೊಂಡಿದ್ದವು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಂತೂ ತನ್ನೆಲ್ಲಾ ಸಂಪನ್ಮೂ ಲಗಳನ್ನು ಬಳಸಿ ಕೃಷ್ಣ ಮೆನನ್‌ರನ್ನು ಸೋಲಿಸಲು ಯತ್ನಿಸಿತ್ತು.

ಅದರ ಮಾಲೀಕ ರಾಮನಾಥ ಗೋಯೆಂಕಾ ಅವರು ಪತ್ರಿಕೆಯ ಸಂಪಾದಕ ಫ್ರಾಂಕ್ ಮೊರೇಸ್‌ಗೆ ಮೆನನ್ ಮತ್ತು ನೆಹರು ಅವರ ಬೆನ್ನತ್ತಲು ಸೂಚನೆ ನೀಡಿದ್ದರು. 1961ರ ಅಕ್ಟೋಬರ್ 18ರ ಪತ್ರಿಕೆ ಯಲ್ಲಿ ಪ್ರಕಟವಾಗಿದ್ದ ವ್ಯಂಗ್ಯಭರಿತ ‘ಟ್ರೋಜನ್ ಹಾರ್ಸ್’ ಶೀರ್ಷಿಕೆಯ ಸಂಪಾದಕೀಯದಲ್ಲಿ ಮೊರೇಸ್ ಅವರು ‘ಇಂದು ಭಾರತ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಕವಲುದಾರಿಯಲ್ಲಿ ನಿಂತಿವೆ.

ಇದರ ಪರಿಣಾಮವು ಈ ದೇಶ ಮತ್ತು ಕಾಂಗ್ರೆಸ್ ಪಕ್ಷಗಳು ಮುಂದೆ ಯಾವ ದಾರಿಯಲ್ಲಿ ಸಾಗುತ್ತವೆ ಎಂಬುದನ್ನು ನಿರ್ಧರಿಸುತ್ತದೆ’ ಎಂದು ಬರೆದಿದ್ದರು. ಬಿಡಿಸಿ ಹೇಳುವುದಾದರೆ, ಕೃಷ್ಣ ಮೆನನ್ ಅವರು ಕಮ್ಯುನಿಸ್ಟ್ ಚೀನಾದ ಟ್ರೋಜನ್ ಹಾರ್ಸ್ ಆಗಿದ್ದರು. ಚೀನಾದ ಸೇನೆಯು ಎರಡು ವರ್ಷ ಗಳ ಹಿಂದಷ್ಟೇ ಟಿಬೆಟ್ ದೇಶವನ್ನು ಕಬಳಿಸಿತ್ತು. ಅದನ್ನು ನೋಡಿಕೊಂಡು ನೆಹರು ಸುಮ್ಮನಿದ್ದರು.

ಕೃಪಲಾನಿಯವರಿಗೆ ಅಂಬೇಡ್ಕರ್‌ಗಿಂತ ಸಂಪೂರ್ಣ ಬೇರೆಯದೇ ಆದ ವ್ಯಕ್ತಿತ್ವವಿತ್ತು. ಅವರು ನೆಹರುಗಿಂತ ಒಂದು ವರ್ಷ ದೊಡ್ಡವರಾಗಿದ್ದರು. ಆ ಕಾಲದಲ್ಲಿ ಅವರು ದೇಶದ ಬಹುದೊಡ್ಡ ಮುತ್ಸದ್ದಿಯಾಗಿದ್ದರು. ಗಾಂಧೀಜಿಗೆ ಬಹಳ ಹತ್ತಿರದವರಾಗಿದ್ದರು. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಂಗ್ರೆಸ್‌ನಲ್ಲಿ ಅವರು ಎಲ್ಲಾ ಉನ್ನತ ಹುದ್ದೆಗಳನ್ನೂ ಅಲಂಕರಿಸಿದ್ದರು.

ಅವರೆಂದರೆ ದೇಶದ ಜನರಿಗೆ ಅಪಾರ ಗೌರವ ಮತ್ತು ಭಯವಿತ್ತು. ಈಗ ಪ್ರಮುಖ ಹುದ್ದೆಗಳಲ್ಲಿರುವ ಕಾಂಗ್ರೆಸ್ ನಾಯಕರು ಅಂದು ಕೃಪಲಾನಿಯೆಂದರೆ ನಡುಗುತ್ತಿದ್ದರು. ನೆಹರುಗೆ ಆಗ ಅಂಥ ಯಾವು ದೇ ಚರಿಷ್ಮಾ ಇರಲಿಲ್ಲ. ಆದರೂ, 1951ರಲ್ಲಿ ನೆಹರು ವಿರೋಧಿ ಕಾಂಗ್ರೆಸಿಗರಿಗೆ ಯಾವ ಗತಿ ಬಂದೊ ದಗಿತೋ ಅದೇ ಗತಿ ಕೃಪಲಾನಿಗೂ ಬಂತು. ಅವರು ಪಕ್ಷವನ್ನೇ ತೊರೆದು, 1962ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಕೃಪಲಾನಿಗೆ ಎಲ್ಲಾ ಕಾಂಗ್ರೆಸ್ ವಿರೋಧಿ ಪಕ್ಷಗಳಿಂದ ಮತ್ತು ಸಂಘಟನೆಗಳಿಂದ ಬೆಂಬಲ ಲಭಿ ಸಿತ್ತು. ಅವರನ್ನು ಬೆಂಬಲಿಸಿದ ಪ್ರಮುಖ ಪಕ್ಷಗಳೆಂದರೆ ಜನಸಂಘ, ಸ್ವತಂತ್ರ ಪಕ್ಷ, ಪ್ರಜಾ ಸೋಷ ಲಿಸ್ಟ್ ಪಾರ್ಟಿ, ಮುಸ್ಲಿಂ ಲೀಗ್, ಕ್ಯಾಥೋಲಿಕ್ ಅಸೋಸಿಯೇಷನ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ರಿಪಬ್ಲಿಕನ್ ಪಾರ್ಟಿ, ಪೆಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ ಹಾಗೂ ಅಕಾಲಿ ದಳ. ಮುಸ್ಲಿಂ ಲೀಗ್ ಆಗಷ್ಟೇ ನಿಧಾನವಾಗಿ ನಿಲುವು ಬದಲಿಸಿ ತನ್ನ 80000 ಮತದಾರರಿಗೆ ಕೃಪಲಾನಿ ಯನ್ನು ಬೆಂಬಲಿಸಲು ಸೂಚನೆ ನೀಡಿತ್ತು.

(ಮುಂದುವರಿಯುವುದು)

(ಲೇಖಕರು ಹಿರಿಯ ಪತ್ರಕರ್ತರು)

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?