Shashidhara Halady Column: ದೆಹಲಿಯಲ್ಲೊಂದು ಆನೆಯ ಮೆರವಣಿಗೆ !

1912ರ ತನಕ ಕೊಲ್ಕೊತ್ತಾವು ಭಾರತದ ರಾಜಧಾನಿಯಾಗಿತ್ತು. ಕೊಲ್ಕೊತ್ತಾವು ಇಂಗ್ಲಿಷ್ ವಿದ್ಯಾ ಭ್ಯಾಸದ ಪ್ರಮುಖ ಕೇಂದ್ರವೂ ಆಗಿತ್ತು. ಹಲವು ಕಾಲೇಜುಗಳು ಅಲ್ಲಿದ್ದವು; 1857ರಲ್ಲೇ ಕೊಲ್ಕೊತ್ತಾ ವಿಶ್ವವಿದ್ಯಾ ಲಯವನ್ನು ಸ್ಥಾಪಿಸಲಾಗಿತ್ತು. ಅಂದು ಕೊಲ್ಕೊತ್ತಾವು ಬುದ್ಧಿಜೀವಿಗಳ, ವಿದ್ಯಾವಂತರ ನಾಡು. ಅಂದಿನ ಸಿರಿವಂತರ ಒಂದು ಗುರಿ ಎಂದರೆ, ಇಂಗ್ಲೆಂಡಿಗೆ ಮಕ್ಕಳನ್ನು ಕಳುಹಿಸಿ, ಉನ್ನತ ವಿದ್ಯಾಭ್ಯಾಸ ಕೊಡಿಸು ವುದು. ಇಂಗ್ಲಿಷ್ ಶಿಕ್ಷಣ ಪಡೆದರೆ ಮಾತ್ರ, ಬ್ರಿಟಿಷ್ ಸರಕಾರದ ಸವಲತ್ತುಗಳನ್ನು ಪಡೆಯಬಹುದು ಮತ್ತು ಸಾಹಿತ್ಯ, ಸಂಸ್ಕೃತಿಯ ವಲಯಗಳಲ್ಲೂ ಗುರುತಿಸಿಕೊಳ್ಳ ಬಹುದು ಎಂಬ ತಿಳಿವಳಿಕೆ ಅಂದಿನ ಸ್ಥಿತಿವಂತರಲ್ಲಿತ್ತು

Shashidhara Halady Column 070225

ದೇಶದ ರಾಜಧಾನಿ ದೆಹಲಿಯಲ್ಲಿ ಚುನಾವಣೆಗಳು ನಡೆದಿವೆ; ಯಾವ ಪಕ್ಷದವರು ಅಧಿಕಾರಕ್ಕೆ ಬರುವರೆಂಬ ಕುತೂಹಲವೂ ಎದುರಾಗಿದೆ. ಆ ಕುರಿತು ನಾನಾ ರೀತಿಯ ಸಮೀಕ್ಷೆಗಳೂ ನಡೆದಿವೆ. ಈ ಸಂದರ್ಭದಲ್ಲಿ, ದೆಹಲಿಯಲ್ಲಿ ಅಧಿಕಾರದ ಗದ್ದುಗೆಯನ್ನು ಮೊದಲು ಸ್ಥಾಪಿಸಿದ್ದಾರು, ಯಾವಾಗ ಮತ್ತು ಆಗೇನಾಯಿತು ಎಂದು ನೆನಪಿಸಿಕೊಳ್ಳಬಹುದೇನೋ! ನಮ್ಮ ದೇಶವನ್ನು ದೀರ್ಘಕಾಲ ಆಳಿದ ಬ್ರಿಟಿಷರು, ಮೊದಲಿಗೆ ಭದ್ರವಾಗಿ ನೆಲೆಯೂರಿದ್ದು ಕೊಲ್ಕೊತ್ತಾದಲ್ಲಿ. ಸಮುದ್ರದ ಮೂಲಕ ತಲುಪಬಲ್ಲ ಕೊಲ್ಕೊತ್ತಾವು, ಅವರ ವಾಣಿಜ್ಯಿಕ ಮತ್ತು ರಾಜಕೀಯ ಉದ್ದೇಶಗಳಿಗೆ ಆಗ ಸೂಕ್ತ ಎನಿಸಿತ್ತು. ಕೊಲ್ಕೊತ್ತಾದಲ್ಲಿ ರಾಜಧಾನಿ ಸ್ಥಾಪಿಸಿ, ಸಂಪ ನ್ಮೂಲಗಳನ್ನು ಸಂಗ್ರಹಿಸಿ, ತಮ್ಮ ದೇಶಕ್ಕೆ ಸಮುದ್ರದ ಮೂಲಕ ಹಡಗಿನಲ್ಲಿ ಕಳಿಸುತ್ತಾ ಇದ್ದರು.

1912ರ ತನಕ ಕೊಲ್ಕೊತ್ತಾವು ಭಾರತದ ರಾಜಧಾನಿಯಾಗಿತ್ತು. ಕೊಲ್ಕೊತ್ತಾವು ಇಂಗ್ಲಿಷ್ ವಿದ್ಯಾ ಭ್ಯಾಸದ ಪ್ರಮುಖ ಕೇಂದ್ರವೂ ಆಗಿತ್ತು. ಹಲವು ಕಾಲೇಜುಗಳು ಅಲ್ಲಿದ್ದವು; 1857ರಲ್ಲೇ ಕೊಲ್ಕೊತ್ತಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿತ್ತು. ಅಂದು ಕೊಲ್ಕೊತ್ತಾವು ಬುದ್ಧಿಜೀವಿಗಳ, ವಿದ್ಯಾವಂತರ ನಾಡು. ಅಂದಿನ ಸಿರಿವಂತರ ಒಂದು ಗುರಿ ಎಂದರೆ, ಇಂಗ್ಲೆಂಡಿಗೆ ಮಕ್ಕಳನ್ನು ಕಳುಹಿಸಿ, ಉನ್ನತ ವಿದ್ಯಾಭ್ಯಾಸ ಕೊಡಿಸುವುದು. ಇಂಗ್ಲಿಷ್ ಶಿಕ್ಷಣ ಪಡೆದರೆ ಮಾತ್ರ, ಬ್ರಿಟಿಷ್ ಸರಕಾರದ ಸವಲತ್ತು ಗಳನ್ನು ಪಡೆಯಬಹುದು ಮತ್ತು ಸಾಹಿತ್ಯ, ಸಂಸ್ಕೃತಿಯ ವಲಯಗಳಲ್ಲೂ ಗುರುತಿಸಿಕೊಳ್ಳ ಬಹುದು ಎಂಬ ತಿಳಿವಳಿಕೆ ಅಂದಿನ ಸ್ಥಿತಿವಂತರಲ್ಲಿತ್ತು.

ಇದನ್ನೂ ಓದಿ: Shashidhara Halady Column: ಬ್ರಿಟಿಷರ ವಿರುದ್ದ ಹೋರಾಡಿದ ವೈದ್ಯೆ

ನಮ್ಮ ದೇಶದ ಜನರಿಗೆ ಇಂಗ್ಲಿಷ್ ವಿದ್ಯಾಭ್ಯಾಸ ಕೊಡಿಸಿ, ಬ್ರಿಟಿಷ್ ಸರಕಾರದ ಆಡಳಿತಕ್ಕೆ ಸಹಕಾರ ನೀಡುವ ಅಕ್ಷರಸ್ಥರನ್ನು ತಯಾರಿಸುವುದು ಅಂದಿನ ವಿದ್ಯಾಭ್ಯಾಸ ಪದ್ಧತಿಯ ಒಂದು ಉದ್ದೇಶ ವಾಗಿತ್ತು. ಜತೆಗೆ, ಬ್ರಿಟಿಷರು ನಮ್ಮ ದೇಶಕ್ಕೆ ಒಳ್ಳೆಯದನ್ನೇ ಮಾಡುತ್ತಿದ್ದಾರೆ ಮತ್ತು ಅವರು ಮಾಡಿದ ಉತ್ತಮ ಕಾರ್ಯಗಳಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವೂ ಒಂದು ಎಂಬ ಪ್ರಚಾರವೂ ಬಹಳ ಜೋರಾ ಗಿತ್ತು.

ವಿಶೇಷವೆಂದರೆ, ಕೊಲ್ಕೊತ್ತಾ ಮತ್ತು ಬಂಗಾಳ ಪ್ರದೇಶವು ಮೊದಲಿನಿಂದಲೂ ಹೋರಾಟಗಾರರ ನಾಡು! ಬರಬರುತ್ತಾ ಅದು ಕ್ರಾಂತಿಕಾರಿಗಳ ನೆಲವಾಯಿತು. ನಂತರದ ವರ್ಷಗಳಲ್ಲಿ ಬ್ರಿಟಿಷರ ವಿರುದ್ಧ, ಅವರ ವಸಾಹತುಶಾಹಿ ಆಡಳಿತದ ವಿರುದ್ಧ ತೀವ್ರ ಎನಿಸುವ ಹೋರಾಟ ಆರಂಭ ಗೊಂಡದ್ದೇ ಪ್ರಮುಖವಾಗಿ ಬಂಗಾಳದಲ್ಲಿ (ಮತ್ತು ಪಂಜಾಬಿನಲ್ಲಿ). ಬ್ರಿಟಿಷರನ್ನು ಭಾರತದಿಂದ ಓಡಿಸಲು ಸಶಸ್ತ್ರ ಹೋರಾಟ ನಡೆಸಿದ ಬಂಗಾಲದ ಕ್ರಾಂತಿಕಾರಿಗಳು ಸಾಕಷ್ಟು ಪ್ರಸಿದ್ಧರು.

1900ರ ಸಮಯದಲ್ಲೇ ಅವರ ಬೇಡಿಕೆ ಎಂದರೆ, ಸಂಪೂರ್ಣ ಸ್ವರಾಜ್ಯ, ಸಂಪೂರ್ಣ ದಾಸ್ಯ ವಿಮೋ ಚನೆ. ಕ್ರಾಂತಿಕಾರಿಗಳು ಬ್ರಿಟಿಷರನ್ನು ಓಡಿಸಲು ‘ಶಾಂತಿಯುತ ಹೋರಾಟ’ ನಡೆಸಲಿಲ್ಲ, ಬದಲಿಗೆ ತಮ್ಮನ್ನು ಶೋಷಿಸುವವರನ್ನು ಬಡಿದು ಓಡಿಸಬೇಕು ಎಂದು ಹೋರಾಟ ಮಾಡಿದರು. ಅಕ್ಷರಶಃ ಸಾವಿರಾರು ಸಂಖ್ಯೆಯಲ್ಲಿದ್ದ ಕ್ರಾಂತಿಕಾರಿಗಳ ಚಟುವಟಿಕೆ, ಅವರು ನಡೆಸಿದ ಬ್ರಿಟಿಷ್ ಅಧಿಕಾರಿಗಳ ಕೊಲೆ, ಬ್ರಿಟಿಷರನ್ನು ಭಾರತದಿಂದ ಓಡಿಸಬೇಕೆಂಬ ಅವರ ಉದ್ದೇಶದ ಸ್ಪಷ್ಟತೆ, 1910ರ ದಶಕದಲ್ಲೇ ಬ್ರಿಟಿಷರಿಗೆ ಬಿಸಿ ಮುಟ್ಟಿಸಿದ ಅವರ ಬಾಂಬ್ ಮತ್ತು ಪಿಸ್ತೂಲುಗಳು, ಅವರು ನಡೆಸಿದ ಭೂಗತ ಹೋರಾಟ, ಇವೆಲ್ಲವೂ ಇತಿಹಾಸ ಪುಟದಲ್ಲಿ ದಾಖಲಾಗಿವೆ, ಹೆಚ್ಚು ಬೆಳಕಿಗೆ ಬಾರದೇ ಕಡತಗಳಲ್ಲಿ, ಹಳೆಯ ಪುಸ್ತಕಗಳಲ್ಲಿ ಹುದುಗಿವೆ.

ಒಬ್ಬೊಬ್ಬರೇ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲುತ್ತಾ, ವೈಸ್‌ರಾಯ್ ಮೇಲೆಯೇ ಬಾಂಬ್ ಎಸೆಯು ತ್ತಾ, ಸರಕಾರಕ್ಕೆ ಸವಾಲೆಸೆದಿದ್ದ ಅವರ ಪ್ರಯತ್ನವನ್ನು, ನಂತರ ಪ್ರಮುಖ ಪಕ್ಷವಾಗಿ ಹೊರ ಹೊಮ್ಮಿ, ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿದ ಕಾಂಗ್ರೆಸ್ ಬೆಂಬಲಿಸದೇ ಇದ್ದ ಸಂಗತಿ ಸ್ಪಷ್ಟವಾಗಿ ಇತಿಹಾಸದಲ್ಲಿ ದಾಖಲಾಗಿದೆ.

ಬ್ರಿಟಿಷರ ವಿರುದ್ಧ ಹೋರಾಡಲು ಅಹಿಂಸೆ ಮತ್ತು ಅಸಹಕಾರವನ್ನೇ ಅಸ್ತ್ರವನ್ನಾಗಿ ಉಪಯೋಗಿ ಸಿದ್ದು ಅಂದಿನ ಕಾಂಗ್ರೆಸ್ ಪಕ್ಷ. 1915ರಲ್ಲಿ ಭಾರತಕ್ಕೆ ವಾಪಸಾಗಿ, 1920ರ ದಶಕದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಬೆಳೆದ, ಮಾಸ್ ಲೀಡರ್ ಆಗಿ ಹೊರಹೊಮ್ಮಿದ ಮಹಾತ್ಮ ಗಾಂಧಿ ಯವರಂತೂ, “ಬ್ರಿಟಿಷ್ ಅಧಿಕಾರಿಗಳನ್ನು ಸಾಯಿಸಬೇಡಿ, ಅವರ ಮೇಲೆ ಬಾಂಬ್ ಎಸೆಯಬೇಡಿ, ಪೊಲೀಸರನ್ನು ಕೊಲ್ಲಬೇಡಿ, ಆ ರೀತಿ ಬ್ರಿಟಿಷರನ್ನು ಸಾಯಿಸಿದ ಕ್ರಾಂತಿಕಾರಿಗಳು ತಪ್ಪು ಹಾದಿ ಹಿಡಿದಿದ್ದಾರೆ, ಬ್ರಿಟಿಷರನ್ನು ಅಹಿಂಸೆ, ಶಾಂತಿ ಮತ್ತು ಸತ್ಯಾಗ್ರಹದಿಂದ ಎದುರಿಸಬೇಕು" ಎಂದು ಹಲವು ಕಡೆ, ಹಲವು ಬಾರಿ ಒತ್ತಿ ಹೇಳಿದ್ದರು.

ಗಾಂಧಿಯವರ ಹೋರಾಟವು ಶಾಂತಿಯುತ ಮೆರವಣಿಗೆ, ಅಸಹಕಾರ, ಮೌನ ಪ್ರತಿಭಟನೆ, ಉಪವಾ ಸದ ಆಚರಣೆ, ಬ್ರಿಟಿಷರಿಗೆ ಮನವಿ ಕೊಡುವುದು ಇವುಗಳನ್ನು ಒಳಗೊಂಡಿತ್ತು. ಆದ್ದರಿಂದಲೇ, ಬ್ರಿಟಿಷರ ವಿರುದ್ಧ ಕ್ರಾಂತಿಕಾರಿಗಳು ಜಾರಿಯಲ್ಲಿಟ್ಟಿದ್ದ ಹೋರಾಟವು ತಪ್ಪು ದಾರಿಯ ನಡೆ ಎಂದು ನಮ್ಮ ದೇಶದ ಜನಸಾಮಾನ್ಯರು, ಶಾಲಾ ಶಿಕ್ಷಣ ಪಡೆದ ವಿದ್ಯಾವಂತರು ನಂಬುವಂತಾಯಿತು.

ಜತೆಗೆ, ಗಾಂಧೀಜಿ ಬೋಧಿಸಿದ ಅಹಿಂಸೆ ಮತ್ತು ಶಾಂತಿಯ ಸಂದೇಶಗಳು, ಶಾಂತಿಯುತ ಹೋರಾಟ ಅಪಾರ ಪ್ರಮಾಣದ ಮಾನ್ಯತೆ ಪಡೆದವು ಮತ್ತು ಕ್ರಮೇಣ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ಕ್ರಾಂತಿಕಾರಿಗಳ ಹೋರಾಟವು ಮೂಲೆಗುಂಪಾಯಿತು. ಈಗ ಪುನರ್ ಅವಲೋಕಿಸಿದರೆ, ಇಂಥ ಅಹಿಂಸೆಯ ಹೋರಾಟದಿಂದಾಗಿ, ಆ ದಶಕಗಳಲ್ಲಿ ಅದೆಷ್ಟೋ ಬ್ರಿಟಿಷ್ ಅಧಿಕಾರಿಗಳ ಪ್ರಾಣ ಉಳಿದಿರಬೇಕು ಎನಿಸುತ್ತದೆ!

ಮೊದಲನೆಯ ಮಹಾಯುದ್ಧ 1914ರಲ್ಲಿ ಆರಂಭಗೊಂಡ ನಂತರ, 1915ರಲ್ಲಿ ಬ್ರಿಟಿಷರನ್ನು ಶಸ್ತ್ರ ಸಹಿತ ಹೋರಾಟದ ಮೂಲಕ ಒದ್ದೋಡಿಸುವ ಒಂದು ಗಂಭೀರ ಪ್ರಯತ್ನ ನಡೆದಿದ್ದು, ಆ ಹೋರಾ ಟವನ್ನು ರೂಪಿಸಿದ ಒಬ್ಬ ಬಂಗಾಳಿ ಹೋರಾಟಗಾರನ ಪ್ರಯತ್ನವನ್ನು ನಮ್ಮ ದೇಶದ ಬಹುಪಾಲು ಜನರು ಬಹುಮಟ್ಟಿಗೆ ಮರೆತೇ ಬಿಟ್ಟಿದ್ದಾರೆ. ಅವರೇ ರಾಸ್ ಬಿಹಾರಿ ಬೋಸ್ (1886-1945). ಬಂಗಾಳ ದಲ್ಲಿ ಜನಿಸಿದ ಇವರು ಬ್ರಿಟಿಷರ ವಿರುದ್ಧ ನಿರಂತರ ಹೋರಾಟ ನಡೆಸಿ, ನಂತರ ಅವರಿಂದ ತಪ್ಪಿಸಿ ಕೊಳ್ಳಲು ತಾಯ್ನಾಡನ್ನೇ ತೊರೆದು, ಕೊನೆಗೆ ಜಪಾನ್‌ನಲ್ಲಿ ನೆಲೆಸಬೇಕಾಯಿತು. ಅವರು ಜಪಾನ ನ್ನು ಆಯ್ಕೆ ಮಾಡಿಕೊಂಡ ಮುಖ್ಯ ಕಾರಣವೆಂದರೆ, ಅಲ್ಲಿ ಅವರಿಗೆ ರಾಜಕೀಯ ಆಶ್ರಯ ದೊರ ಕಿದ್ದು. ಇವರ ಹೋರಾಟವನ್ನು ಮಣಿಸಲು ಬ್ರಿಟಿಷ್ ಸರಕಾರವು ಸಾಕಷ್ಟು ಯತ್ನಿಸಿತು. ಆದರೂ, ಇವರು ಎಂಥ ಗಟ್ಟಿ ಹೋರಾಟಗಾರರೆಂದರೆ, ಜಪಾನ್‌ನಲ್ಲಿದ್ದುಕೊಂಡೇ, 1940ರ ದಶಕದ ತನಕ ತಮ್ಮ ಹೋರಾಟವನ್ನು ಮುಂದುವರಿಸಿದ್ದರು!

ಬಂಗಾಳದ ಹಳ್ಳಿಯೊಂದರಲ್ಲಿ ಜನಿಸಿದ ಇವರು, ಕೊಲ್ಕೊತ್ತಾದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿ, ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಪಡೆದಿದ್ದರು. 1908ರಲ್ಲಿ ನಡೆದ ಅಲಿಪುರ ಬಾಂಬಿಂಗ್ ಘಟನೆಯ ನಂತರ (ಇದೇ ಪ್ರಕರಣದಲ್ಲಿ 18 ವರ್ಷ ವಯಸ್ಸಿನ ಖುದಿರಾಮ್ ಬೋಸ್‌ಗೆ ಗಲ್ಲುಶಿಕ್ಷೆಯಾಯಿತು) ಬಿಗಿಗೊಂಡ ಬ್ರಿಟಿಷರ ತಪಾಸಣೆಯಿಂದ ತಪ್ಪಿಸಿಕೊಳ್ಳಲು, ಬಂಗಾಳ ಪ್ರಾಂತ್ಯವನ್ನೇ ತೊರೆದರು; ಕೊಲ್ಕೊತ್ತಾದಿಂದ ಬಹುದೂರವಿದ್ದ ಡೆಹರಾಡೂನ್‌ಗೆ ಹೋದರು.

ಅಲ್ಲಿಯೇ ಇದ್ದುಕೊಂಡು, ಹೋರಾಟಗಾರರ ಜಾಲವನ್ನು ಬೆಳೆಸಿದರು. ಹಲವು ಕ್ರಾಂತಿಕಾರಿಗಳ ಸಂಪರ್ಕ ಇಟ್ಟುಕೊಂಡು, ಬಾಂಬ್ ತಯಾರಿಸುವ ತಂತ್ರವನ್ನು ಕಲಿತು, ಸಂಘಟನೆಗೆ ತೊಡಗಿ ಕೊಂಡಿದ್ದರು. 1900ರ ನಂತರ, ಬಂಗಾಳದಲ್ಲಿ ತಮ್ಮ ಆಡಳಿತದ ವಿರುದ್ಧ ನಡೆದ ತೀವ್ರ ಪ್ರತಿಭಟನೆ ಮತ್ತು ಹೋರಾಟವನ್ನು ಮಣಿಸಲು, ಬ್ರಿಟಿಷರು ಎರಡು ಕೆಲಸ ಮಾಡಿದರು. 1905ರಲ್ಲಿ ಬಂಗಾಳ ವನ್ನು ವಿಭಜಿಸಿ, ಹೋರಾಟಗಾರರ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು.

ಆದರೆ, ಇದು ಎಲ್ಲರಿಂದ ತೀವ್ರ ಟೀಕೆಗೆ ಒಳಗಾಯಿತು. ಬಂಗಾಳವನ್ನು ವಿಭಜಿಸಬಾರದು ಎಂಬು ದರ ಕುರಿತು ಸಾಕಷ್ಟು ಹೋರಾಟವಾಯಿತು. ಜನ ದಂಗೆ ಎದ್ದರು. ಬ್ರಿಟಿಷರು ಮುಂದಿಟ್ಟ ಹೆಜ್ಜೆ ಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಯಿತು. ವಿಭಜಿಸಿದ ಬಂಗಾಳವನ್ನು ಮತ್ತೆ ಒಂದುಗೂಡಿಸು ವಲ್ಲಿ ಬಂಗಾಳದ ಹೋರಾಟಗಾರರು ಯಶಸ್ವಿಯಾದ್ದರಿಂದ, ಬ್ರಿಟಿಷರಿಗೆ ತೀವ್ರ ಮುಖಭಂಗ ವಾಯಿತು.

ಇದಕ್ಕೆ ಪ್ರತೀಕಾರವೋ ಎಂಬಂತೆ ಹಲವು ಕ್ರಮಗಳನ್ನು ಬ್ರಿಟಿಷ್ ಸರಕಾರ ತೆಗೆದುಕೊಂಡಿತು. ಕ್ರಾಂತಿಕಾರಿಗಳ ನೆಲೆವೀಡಾದ ಬಂಗಾಳ ಮತ್ತು ಕೊಲ್ಕೊತ್ತಾದಲ್ಲಿ ಅವರಿಗೆ ಸದಾಕಾಲ ಕ್ರಾಂತಿಕಾರಿ ಗಳಿಂದ ಭಯವಿತ್ತು; ಹಲವು ಬ್ರಿಟಿಷ್ ಅಧಿಕಾರಿಗಳನ್ನು, ಸೇವೆಯಲ್ಲಿದ್ದವರನ್ನು ಕ್ರಾಂತಿಕಾರಿಗಳು ನಿರಂತರವಾಗಿ ಗುಂಡಿಟ್ಟು ಸಾಯಿಸತೊಡಗಿದರು.

ಕೊಲ್ಕೊತ್ತಾದಲ್ಲಿ ರಾಜಧಾನಿ ಇದ್ದರೆ ತಮ್ಮ ಅಧಿಕಾರಿಗಳಿಗೆ ಅಪಾಯವಿದೆ ಎಂದು ಗಮನಿಸಿದ ಬ್ರಿಟಿಷ್ ಸರಕಾರವು, ಎರಡನೆಯ ಕ್ರಮವಾಗಿ, ದೇಶದ ರಾಜಧಾನಿಯನ್ನೇ ಕೊಲ್ಕೊತ್ತಾದಿಂದ ದೂರದ ದೆಹಲಿಗೆ 1912ರಲ್ಲಿ ವರ್ಗಾಯಿಸಿತು. ಈ ಕುಟಿಲ ತಂತ್ರವನ್ನು ಪ್ರತಿಭಟಿಸಲು ರಾಸ್ ಬಿಹಾರಿ ಬೋಸ್ ಆರಿಸಿಕೊಂಡ ಮಾರ್ಗವೆಂದರೆ, ವೈಸ್ ರಾಯ್‌ನನ್ನೇ ಕೊಲೆ ಮಾಡುವುದು!

ಹೊಸ ರಾಜಧಾನಿ ದೆಹಲಿಯಲ್ಲಿ ಆಡಳಿತ ಕಚೇರಿಗಳು ತೆರೆದವು. ಸಮಗ್ರ ಭಾರತದ ಮೊದಲ ರಾಜಧಾನಿಯಾಗಿ ದೆಹಲಿಯನ್ನು ರೂಪಿಸಲು ಬ್ರಿಟಿಷರು ಸಾಕಷ್ಟು ಕ್ರಮಗಳನ್ನು ಕೈಗೊಂಡರು. ಹೊಸ ರಾಜಧಾನಿ ದೆಹಲಿಯ ಪುರಪ್ರವೇಶವನ್ನು ಬ್ರಿಟಿಷರು ವೈಭವದಿಂದ ಆಯೋಜಿಸಿದ್ದರು. ನಮ್ಮ ದೇಶದ ವಿವಿಧ ಪ್ರಾಂತ್ಯಗಳ ರಾಜರುಗಳನ್ನು, ಜಮೀನುದಾರರನ್ನು, ಮುಖ್ಯಸ್ಥರನ್ನು, ಸಿರಿವಂತರನ್ನು ದೆಹಲಿಗೆ ಆಹ್ವಾನಿಸಲಾಯಿತು. ಪುರಪ್ರವೇಶದ ದಿನ ಪೊಲೀಸ್ ಮತ್ತು ಸೇನೆಯ ಕವಾಯತು, ಕುದುರೆ ಸವಾರರ ಸಾಲುಗಳ ಜತೆಯಲ್ಲೇ, ವೈಸ್ ರಾಯ್ ಅವರ ಭವ್ಯ ಮೆರವಣಿಗೆ ಯನ್ನು ಆಯೋಜಿಸಲಾಗಿತ್ತು.

ಆಗಿನ ವೈಸ್‌ರಾಯ್ ಹಾರ್ಡಿಂಜ್ ಆನೆಯ ಮೇಲೆ ಕುಳಿತು ಭವ್ಯ ಮೆರವಣಿಗೆಯ ಮೇಲೆ ದೆಹಲಿ ಯನ್ನು ಪ್ರವೇಶಿಸುತ್ತಿದ್ದ. ಆನೆಯ ಮೇಲಿನ ಹೌದಾ ಅಥವಾ ಅಂಬಾರಿಯಲ್ಲಿ ವೈಸ್ ರಾಯ್ ಮತ್ತು ಆತನ ಹೆಂಡತಿ ಕುಳಿತಿದ್ದರು. ಇಂಥ ಸಂದರ್ಭದಲ್ಲಿ ರಾಸ್ ಬಿಹಾರಿ ಬೋಸ್ ಮತ್ತು ಅವರ ತಂಡ ದವರು ಒಂದು ಸಂಚು ರೂಪಿಸಿದರು. ಅಲಂಕೃತ ಆನೆಯ ಮೇಲೆ ಕುಳಿತಿದ್ದ ವೈಸ್‌ರಾಯ್ ಮತ್ತು ಆತನ ಹೆಂಡತಿ ಜನರತ್ತ ಕೈಬೀಸಿ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗಲೇ, ಬಂಗಾಳದ ಕ್ರಾಂತಿಕಾರಿ ಗಳು ಅವನ ಮೇಲೆ ಬಾಂಬ್ ಎಸೆದರು.

ಆನೆಯ ಮೇಲೆ ಕುಳಿತಿದ್ದ ಹಾರ್ಡಿಂಜ್‌ಗೆ ನೆರಳಿಗೆಂದು ಛತ್ರಿ ಹಿಡಿದಿದ್ದ ಭಾರತೀಯ ಅಂಗರಕ್ಷಕ ಬಾಂಬ್ ಸಿಡಿತದಿಂದಾಗಿ ಅದೇ ಕ್ಷಣದಲ್ಲಿ ಸತ್ತು ಹೋದ. ವೈಸ್‌ರಾಯ್‌ಗೆ ಸಾಕಷ್ಟು ಗಾಯ ಗಳಾದವು. ಹಾರ್ಡಿಂಜ್ ತಕ್ಷಣ ಕೆಳಗಿಳಿದು, ಚಿಕಿತ್ಸೆ ಪಡೆದುಕೊಂಡು ಬಚಾವಾದ. ಆದರೆ, ಆತ ಬದುಕುಳಿದರೂ, ವೈಸ್‌ರಾಯ್ ಮೇಲೆ ಬಾಂಬ್ ಎಸೆಯುವುದು ಎಂದರೆ, ಬ್ರಿಟಿಷ್ ಸಾಮ್ರಾಜ್ಯದ ಮೇಲೆಯೇ ನಡೆದ ದಾಳಿ ತಾನೆ!

ಬ್ರಿಟಿಷರು ತಣ್ಣಗೆ ಬೆವರಿದರು. ಕ್ರಾಂತಿಕಾರಿಗಳ ಬೇಟೆಯನ್ನು ಇನ್ನಷ್ಟು ಚುರುಕುಗೊಳಿಸಿದರು. ಬಾಂಬ್ ಎಸೆದವರನ್ನು ಹಿಡಿಯಲು ಪೊಲೀಸರು ಎಲ್ಲೆಡೆ ತಪಾಸಣೆ ನಡೆಸತೊಡಗಿದರು. ಆದರೆ ಬೋಸ್ ಹೆಸರು ಬೇಗನೆ ಹೊರಬರಲಿಲ್ಲ. ವೈಸ್ ರಾಯ್ ಮೇಲೆ ಬಾಂಬ್ ಎಸೆದ ಯೋಚನೆ, ಯೋಜನೆ ಎಲ್ಲವೂ ರಾಸ್ ಬಿಹಾರಿ ಬೋಸ್ ಅವರದ್ದೇ.

ಬಾಂಬ್ ಸಿಡಿತವಾದ ಕೂಡಲೆ ಅವರು ಡೆಹರಾಡೂನ್‌ಗೆ ರಹಸ್ಯವಾಗಿ ಪಯಣಿಸಿದರು (ತಾವೇ ಬಾಂಬ್ ಎಸೆದದ್ದು ಎಂದು 1940ರ ದಶಕದಲ್ಲಿ ಅವರು ಹೇಳಿಕೊಂಡಿದ್ದಾರೆ). ಅವರ ಸಹವರ್ತಿ ಗಳು ತಪ್ಪಿಸಿಕೊಂಡರು. ಈ ಪ್ರಕರಣದ ನಂತರ ಲಾಹೋರ್‌ನಲ್ಲಿ ಬ್ರಿಟಿಷ್ ಅಧಿಕಾರಿಗಳ ಮೇಲೆ ಬಾಂಬ್ ಎಸೆಯುವ ಪ್ರಯತ್ನದಲ್ಲಿದ್ದ ಅಜಯ್‌ಕುಮಾರ್ ಬೋಸ್ ಎಂಬ ಕ್ರಾಂತಿಕಾರಿಯ ಸುಳಿವು ಸಿಕ್ಕಿತು. ಅವನನ್ನು ಹಿಡಿದ ಬ್ರಿಟಿಷರು, ವಿಚಾರಣೆಗೆ ಒಳಪಡಿಸಿ ಆತನನ್ನು ಮತ್ತು ಇತರ ಮೂವ ರನ್ನು ಗಲ್ಲಿಗೇರಿಸಿದರು.

ವೈಸ್‌ರಾಯ್ ಮೇಲೆ ಬಾಂಬ್ ಎಸೆದಿದ್ದ ರಾಸ್ ಬಿಹಾರಿ ಬೋಸ್ ರಹಸ್ಯವಾಗಿಯೇ ಇದ್ದುಕೊಂಡು, ಗದ್ದರ್ ಪಕ್ಷದ ಹೋರಾಟಗಾರರೊಂದಿಗೆ ಕೈಜೋಡಿಸಿ, 1915ರಲ್ಲಿ ಮೊದಲನೆಯ ಹಾಯುದ್ಧದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಮತ್ತೊಂದು ಹೋರಾಟವನ್ನು ಯೋಜಿಸಿದರು. ಅದೂ ವಿಫಲ ಗೊಂಡ ನಂತರ, ಅನಿವಾರ್ಯವಾಗಿ ದೂರದ ಜಪಾನ್‌ಗೆ ಪಯಣಿಸಿ, ಅಲ್ಲಿನ ಮಹಿಳೆಯನ್ನೇ ಮದುವೆಯಾಗಿ, ಹೋರಾಟವನ್ನು ಮುಂದುವರಿಸಿದರು.

ಅಲ್ಲಿ ಇಂಡಿಯನ್ ನ್ಯಾಷನಲ್ ಲೀಗ್ ಸ್ಥಾಪಿಸಿ, ಅದಕ್ಕೆಂದು ಬಾವುಟ ತಯಾರಿಸಿ, ಆ ಬಾವುಟವನ್ನು ಸುಭಾಷ್‌ಚಂದ್ರ ಬೋಸ್‌ರಿಗೆ ಹಸ್ತಾಂತರಿಸಿದರು. ಸುಭಾಷರು ಬೃಹತ್ ಸೈನ್ಯ ಕಟ್ಟಿ, ಹೋರಾಟ ಮುಂದುವರಿಸಿದರು. ರಾಸ್ ಬಿಹಾರಿ ಬೋಸರ ಜೀವನವು ರೋಚಕ, ಸಾಹಸಮಯ! ತಮ್ಮ ಜೀವ ಮಾನದುದ್ದಕ್ಕೂ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಪ್ರಯತ್ನ ನಡೆಸುತ್ತಲೇ ಇದ್ದರು.

1912ರಲ್ಲಿ ನಡೆದ ಈ ಘಟನೆಯು ಚರಿತ್ರಾರ್ಹ ಮತ್ತು ಅಭೂತಪೂರ್ವ. ಅಂದಿನ ವೈಸ್‌ರಾಯ್ ಎಂದರೆ, ಇಡೀ ಭಾರತದ ಚುಕ್ಕಾಣಿಯನ್ನು ಕೈಯಲ್ಲಿ ಹಿಡಿದ ಅಧಿಕಾರಿ. ಸೈನ್ಯದ ನಿಯಂತ್ರಣವೂ ಆತನದ್ದೇ. ಅಂಥ ಪ್ರಮುಖ ವ್ಯಕ್ತಿಯ ಮೇಲೆ ಬಾಂಬ್ ಎಸೆಯುವುದು ಎಂದರೆ ಸಾಮಾನ್ಯವೆ? ಬಾಂಬ್ ಸಿಡಿದಾಗ, ಆತನ ಅಂಗರಕ್ಷಕ ಸ್ಥಳದಲ್ಲೇ ಸತ್ತುಹೋದನು.

ಅಂಗರಕ್ಷಕನು ಹಿಡಿದ ಛತ್ರಿಯ ಕೆಳಗೆ, ಒಂದೆರಡು ಅಡಿಗಳಷ್ಟು ದೂರದಲ್ಲಿ ಕುಳಿತಿದ್ದ ವೈಸ್‌ ರಾಯ್ ಅಕಸ್ಮಾತ್ ಬಚಾವಾದನು. ಇದೇ ವೈಸ್‌ರಾಯ್ ಹಾರ್ಡಿಂಜ್‌ನು 1915ರಲ್ಲೂ ಅಧಿಕಾರ ದಲ್ಲಿ ಮುಂದುವರಿದಿದ್ದನು ಮತ್ತು ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಬಂದ ಕೂಡಲೆ, ಅವರಿಗೆ ಕೈಸರ್-ಎ-ಹಿಂದ್ ಪ್ರಶಸ್ತಿಯನ್ನು (ಅಂದಿನ ಅತ್ಯುಚ್ಚ ಪ್ರಶಸ್ತಿಗಳಲ್ಲಿ ಒಂದು) ನೀಡುವ ಅವಕಾಶ ಈತನಿಗೇ ದೊರಕಿತು. ಆ ಮೂಲಕ ಗಾಂಧೀಜಿಯನ್ನು ಗೌರವಿಸುವ ಅವಕಾಶವನ್ನು ಪಡೆದ ಹಾರ್ಡಿಂಜ್, ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದ ಮೊದಲ ವೈಸ್‌ರಾಯ್ ಎಂದೇ ಹೆಸರಾಗಿದ್ದಾನೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?