ನಿಮ್ಮೂರಿನ ಹೆಸರು ಹೇಗೆ ಹುಟ್ಟಿತು ?
ಉಡುಪಿ ಎಂಬ ಪ್ರಸಿದ್ಧ ಊರಿನ ಹೆಸರಿನ ಹಿಂದೆ ಹಲವು ಕಥೆಗಳಿದ್ದು, ಇನ್ನೂ ಒಮ್ಮತಕ್ಕೆ ಬಂದಂತಿಲ್ಲ. ಇನ್ನು, ಕೆಲವು ಹಳ್ಳಿಗಳ ಮತ್ತು ಪಟ್ಟಣಗಳ ಹೆಸರಿನ ಮೂಲವನ್ನು ಹುಡುಕುತ್ತಾ ಹೊರಟರೆ, ಬಹಳ ಕುತೂಹಲಕಾರಿ ಮತ್ತು ಕೆಲವು ಬಾರಿ ತಮಾಷೆ ಎನಿಸುವ ವಿಷಯಗಳನ್ನು ಕಾಣಬಹುದು. ಅಪರೂಪಕ್ಕೆ ಒಮ್ಮೊಮ್ಮೆ ಅಭಾಸ ಎನಿಸುವ ವಿಚಾರವೂ ಎದುರಾಗಬಹುದು- ಹುಸ್ಕೂರು ಎಂಬ ಹೆಸರಿನ ಹಳ್ಳಿಯವರು ಅದು ಧ್ವನಿಸುವ ಅರ್ಥದಿಂದ ಬೇಸತ್ತು, ಹೆಸರನ್ನೇ ಬದಲಿಸಿದ್ದುಂಟು!