ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narada Sanchara: ಸಹೋದರಿಯೇ ಮಿಂಚಿಂಗು!

ಓರ್ವ ಸಂಸದೀಯ ಪಟುವಾಗಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ಸೋದರ ರಾಹುಲ್ ಗಾಂಧಿ ಯವರಿಗಿಂತ ಹೆಚ್ಚು ಮಿಂಚುತ್ತಾರೆ ಅನ್ನೋದು ಜನಸಾಮಾನ್ಯರ ಗ್ರಹಿಕೆ ಮಾತ್ರವಲ್ಲ, ಇದು ಕಾಂಗ್ರೆಸ್‌ ನಲ್ಲಿ ಬಹುತೇಕರು ಒಳಗೊಳಗೇ ಮಾಡುವ ಗುಸುಗುಸು ಕೂಡ ಹೌದು. ಯಾವುದಾದರೊಂದು ವಿಷಯದ ಕುರಿತು ಸದನದಲ್ಲಿ ಮಾತನಾಡುವಾಗ, ಅದಕ್ಕೆ ಆಧಾರವಾಗಿ ಮಾಡಿಕೊಂಡಿರುವ ಒಂದಿಷ್ಟು ಟಿಪ್ಪಣಿಗಳನ್ನು ಜತೆಗಿಟ್ಟುಕೊಂಡೇ ಹಿಂದಿಯಲ್ಲಿ ಅದನ್ನು ಹರವಿಡುವ ಪ್ರಿಯಾಂಕಾ ಅವರ ಶೈಲಿಯು ಪ್ರೇಕ್ಷಕ-ವೀಕ್ಷಕ ಗಣದ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬೇಕು.

ನಾರದ ಸಂಚಾರ

ಓರ್ವ ಸಂಸದೀಯ ಪಟುವಾಗಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ಸೋದರ ರಾಹುಲ್ ಗಾಂಧಿ ಯವರಿಗಿಂತ ಹೆಚ್ಚು ಮಿಂಚುತ್ತಾರೆ ಅನ್ನೋದು ಜನಸಾಮಾನ್ಯರ ಗ್ರಹಿಕೆ ಮಾತ್ರವಲ್ಲ, ಇದು ಕಾಂಗ್ರೆಸ್‌ನಲ್ಲಿ ಬಹುತೇಕರು ಒಳಗೊಳಗೇ ಮಾಡುವ ಗುಸುಗುಸು ಕೂಡ ಹೌದು. ಯಾವುದಾದ ರೊಂದು ವಿಷಯದ ಕುರಿತು ಸದನದಲ್ಲಿ ಮಾತನಾಡುವಾಗ, ಅದಕ್ಕೆ ಆಧಾರವಾಗಿ ಮಾಡಿಕೊಂಡಿ ರುವ ಒಂದಿಷ್ಟು ಟಿಪ್ಪಣಿಗಳನ್ನು ಜತೆಗಿಟ್ಟುಕೊಂಡೇ ಹಿಂದಿಯಲ್ಲಿ ಅದನ್ನು ಹರವಿಡುವ ಪ್ರಿಯಾಂಕಾ ಅವರ ಶೈಲಿಯು ಪ್ರೇಕ್ಷಕ-ವೀಕ್ಷಕ ಗಣದ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬೇಕು.

ಪ್ರಿಯಾಂಕಾ ಅವರು ರಾಜಕಾರಣದಲ್ಲಿ ಹೀಗೆ ಮೆರೆಯುತ್ತಿರುವ ‘ವೃತ್ತಿಪರತೆ’ಗೆ ಸಂಬಂಧಿಸಿ ಮತ್ತಷ್ಟು ನಿದರ್ಶನಗಳಿವೆ. ತಾವು ಪ್ರತಿನಿಧಿಸುವ ಕೇರಳದ ವಯನಾಡ್ ಕ್ಷೇತ್ರಕ್ಕೆ ಕೇಂದ್ರದಿಂದ ಒದಗಬೇಕಿರುವ ನೆರವನ್ನು ಕೋರಿ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಪ್ರಿಯಾಂಕಾ ಅವರು ಭೇಟಿ ಮಾಡಿದ್ದುಂಟು. ಮಾತ್ರವಲ್ಲದೆ, ಗೃಹಖಾತೆಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಸಕ್ರಿಯ ಸದಸ್ಯರೂ ಆಗಿರುವ ಪ್ರಿಯಾಂಕಾ, ಪಕ್ಷಭೇದ ವಿಲ್ಲದೆ ತಮ್ಮ ಸಹವರ್ತಿ ಸಂಸದರ ಜತೆಗೆ ಸ್ನೇಹಪರ ನಂಟನ್ನೂ ಹೊಂದಿದ್ದಾರೆ. ಆದರೆ ಅದೇಕೋ ಏನೋ ಗೊತ್ತಿಲ್ಲ, ರಾಹುಲ್ ಗಾಂಧಿಯವರದ್ದು ಮಾತ್ರ ಇದಕ್ಕೆ ತದ್ವಿರುದ್ಧವಾದ ಧೋರಣೆ ಮತ್ತು ವರ್ತನೆ; ಆಡಳಿತ ಪಕ್ಷದ ಬಗ್ಗೆ ಅವರು ನಿಷ್ಠುರ ಅಭಿಪ್ರಾಯವನ್ನೇ ಹೊಂದಿರುವುದು, ಅಂದಾನಿ-ಅದಾನಿ ಉದ್ಯಮಪತಿಗಳ ಏಕಸ್ವಾಮ್ಯದ ಬಗ್ಗೆ ಆಗಾಗ ಕುಟುಕುತ್ತಲೇ ಇರುವುದು ಅಥವಾ ‘ಮತ ಗಳ್ಳತನ’ದ ಬಗ್ಗೆ ಆವರು ಮಾಡಿಕೊಂಡೇ ಬಂದ ಆಲಾಪನೆಗಳು ಇದಕ್ಕೆ ಒಂದಷ್ಟು ಸಾಕ್ಷಿಯಾಗ ಬಲ್ಲವು.

ಇದನ್ನೂ ಓದಿ: Narada Sanchara: ಎಲ್ಲಾ ಗದ್ದುಗೆ ಮಹಿಮೆ!

ಇಷ್ಟು ಸಾಲದೆಂಬಂತೆ, ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ನಂತರ, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರಣದಿಂದಲೇ ಭಾರತವು ತನ್ನ ಶಸ್ತ್ರಾಸ್ತ್ರವನ್ನು ಕೆಳಗಿಟ್ಟಿತು’ ಎಂದ ರಾಹುಲ್ ಅವರು, ‘ಭಾರತದ ಆರ್ಥಿಕತೆಯು ಸತ್ತಿದೆ’ ಎಂಬ ಟ್ರಂಪ್‌ರ ವಿವರಣೆಯನ್ನು ಅನುಮೋ ದಿಸುವುದಕ್ಕೂ ಹಿಂದು-ಮುಂದು ನೋಡಲಿಲ್ಲ!

ಇಂಥ ಹೆಜ್ಜೆಗಳನ್ನು ಇಡುವ ಮೂಲಕ, ತಾವು ಮೋದಿಯವರನ್ನು ಮಾತ್ರವೇ ಅಪಹಾಸ್ಯ ಮಾಡು ತ್ತಿಲ್ಲ, ಅದರ ಜತೆಜತೆಗೆ ಜನರ ರಾಷ್ಟ್ರೀಯವಾದಿ ಭಾವನೆಗಳಿಗೂ ಧಕ್ಕೆ ಉಂಟು ಮಾಡುತ್ತಿರುವು ದನ್ನು ರಾಹುಲ್ ಮರೆತೇಬಿಟ್ಟರು. ರಾಹುಲ್ ಮತ್ತು ಪ್ರಿಯಾಂಕಾ- ಈ ಎರಡೂ ‘ಒಂದೇ ಬಳ್ಳಿಯ ಹೂಗಳೇ’. ಆದರೆ ಧೋರಣೆಯಲ್ಲಿ ಎಷ್ಟೊಂದು ವ್ಯತ್ಯಾಸವಿದೆ ಅಲ್ಲವೇ? ಎಂಬುದು ಕಲಹಪ್ರಿಯ ನಾರದರನ್ನು ಕಂಟಿನ್ಯುಯಸ್ ಆಗಿ ಕಾಡುವ ಗೊಂದಲ...!

ನಾರಾಯಣ ನಾರಾಯಣ!

ಪಾರಿವಾಳಗಳಿಂದಲೂ ಕಾಯಿಲೆ ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅವಕ್ಕೆ ಆಹಾರ ನೀಡುವ ಪರಿಪಾಠವನ್ನು ‘ಗ್ರೇಟರ್ ಬೆಂಗಳೂರು ಅಥಾರಿಟಿ’ ನಿಷೇಧಿಸಿದೆ. ಪಾರಿವಾಳಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡಿದರೆ ಜೈಲುಶಿಕ್ಷೆ ನೀಡಲಾಗುತ್ತದೆ ಎಂಬ ಸುದ್ದಿಯನ್ನು ಓದಿದ ಪಡ್ಡೆ ಯೊಬ್ಬರು, “ಪಾರಿವಾಳಕ್ಕೆ ‘ಡವ್’ ಅಂತಲೂ ಕರೀತೀವಿ. ಹಾಗಾದ್ರೆ, ಈ ಎಚ್ಚರಿಕೆಯ ಅನ್ವಯ ನಾವು ನಮ್ ನಮ್ಮ ‘ಡವ್’ಗಳಿಗೂ ‘ಕಾಳು’ ಹಾಕೋಹಾಗಿಲ್ವಾ...?" ಅಂತ ಅಪಾರ್ಥ ಮಾಡಿ ಕೊಂಡು ನಾಯ್ಡು ಬಾರ್‌ನಲ್ಲಿ ನಾಲ್ಕನೇ ಪೆಗ್ಗು ಏರಿಸಿದರಂತೆ..!!

ಯಗಟಿ ರಘು ನಾಡಿಗ್

View all posts by this author