Naveen Sagar Column: ಪಾಕಿಸ್ತಾನವನ್ನು ಸೋಲಿಸಲು ಸ್ಮೃತಿ ಮಂಧನ ತಂಡವೇ ಸಾಕು !
ನವೀ, ನಾನೊಂದ್ ಸಲ ಬ್ಯಾಟಿಂಗ್ ಮಾಡ್ತೀನೋ" ಅಂತ ನನ್ನಕ್ಕ ಕ್ರಿಕೆಟಿನ ಅಂಗಳದ ಮಧ್ಯ ಬಂದು ನಿಂತುಬಿಡ್ತಿಡ್ಳು. “ಬ್ಯಾಟಿಂಗ್ ಕೊಡದೇ ಹೋದ್ರೆ ಆಡೋಕೆ ಬಿಡಲ್ಲ. ಅಮ್ಮಂಗೆ ಬ್ಯಾಟ್ ಸುಟ್ಟಾಕೋಕೆ ಹೇಳ್ತೀನಿ. ಓದ್ಕೊಳೋದು ಬಿಟ್ಟು ಕ್ರಿಕೆಟ್ ಆಡ್ತಾ ಇದ್ದ ಅಂತ ಹೇಳ್ತೀನಿ..." ಹೀಗೆಲ್ಲ ಧಮಕಿ ಹಾಕಿ ಬ್ಯಾಟಿಂಗ್ ಗಿಟ್ಟಿಸ್ಕೋತಾ ಇದ್ಳು ಅಕ್ಕ.

-

ಪದಸಾಗರ
ನವೀ, ನಾನೊಂದ್ ಸಲ ಬ್ಯಾಟಿಂಗ್ ಮಾಡ್ತೀನೋ" ಅಂತ ನನ್ನಕ್ಕ ಕ್ರಿಕೆಟಿನ ಅಂಗಳದ ಮಧ್ಯ ಬಂದು ನಿಂತುಬಿಡ್ತಿಡ್ಳು. “ಬ್ಯಾಟಿಂಗ್ ಕೊಡದೇ ಹೋದ್ರೆ ಆಡೋಕೆ ಬಿಡಲ್ಲ. ಅಮ್ಮಂಗೆ ಬ್ಯಾಟ್ ಸುಟ್ಟಾಕೋಕೆ ಹೇಳ್ತೀನಿ. ಓದ್ಕೊಳೋದು ಬಿಟ್ಟು ಕ್ರಿಕೆಟ್ ಆಡ್ತಾ ಇದ್ದ ಅಂತ ಹೇಳ್ತೀನಿ..." ಹೀಗೆಲ್ಲ ಧಮಕಿ ಹಾಕಿ ಬ್ಯಾಟಿಂಗ್ ಗಿಟ್ಟಿಸ್ಕೋತಾ ಇದ್ಳು ಅಕ್ಕ. ಅವಳು ಬ್ಯಾಟಿಂಗಿಗೆ ನಿ ಸ್ಟೈಲ್ ನೋಡಿದರೆ ಎಲ್ಲಿಲ್ಲದ ಕೋಪ ಬಂದುಬಿಡ್ತಿತ್ತು.
ಅವಳು ಮಾತ್ರ ಅಲ್ಲ. ಆ ಕಾಲದಲ್ಲಿ ಯಾವೊಬ್ಬ ಹುಡುಗಿಯೂ ಒಂದು ಪರ್ಫೆಕ್ಟ್ ಸ್ಟಾನ್ಸ್ ನಲ್ಲಿ ಬ್ಯಾಟ್ ಹಿಡಿದು ನಿಲ್ಲುತ್ತಿರಲಿಲ್ಲ. ಈ ಹುಡುಗಿಯರಿಗೆ ಜನ್ಮದಲ್ಲಿ ಕ್ರಿಕೆಟ್ ಒಲಿಯುವು ದಿಲ್ಲ. ಇದು ಹುಡುಗಿಯರ ಆಟ ಆಗೋಕೆ ಸಾಧ್ಯವೇ ಇಲ್ಲ ಅಂತ ನನ್ನ ಮನಸಿನಲ್ಲಿ ಗಟ್ಟಿಯಾಗಿ ಕೂತುಬಿಟ್ಟಿತ್ತು. ಆದರೂ ಗೆಳೆಯರಾರೂ ಸಿಗದೇ ಹೋದ ಹೊತ್ತಲ್ಲಿ ಅಕ್ಕನೇ ನನ್ನ ಕ್ರಿಕೆಟ್ ಹುಚ್ಚನ್ನು ಶಮನ ಮಾಡಬೇಕಾಗಿತ್ತು. ಅವಳಿಗೆ ದುಂಬಾಲು ಬಿದ್ದು ಬಾಲ್ ಹಾಕಿಸಿಕೊಂಡು ಬ್ಯಾಟ್ ಮಾಡುತ್ತಿದ್ದೆ. ಆ ತಪ್ಪಿಗೆ ಅವಳಿಗೂ ಬ್ಯಾಟಿಂಗ್ ಕೊಟ್ಟು ಬೌಲ್ ಮಾಡುತ್ತಿದ್ದೆ.
ತೀರಾ ಇತ್ತೀಚಿನವರೆಗೂ ನನಗೆ ಮಹಿಳೆಯರು ಸ್ಟಾಂಡರ್ಡ್ ಕ್ರಿಕೆಟ್ ಆಡಬಲ್ಲರು ಅಂತ ಅನಿಸುತ್ತಲೇ ಇರಲಿಲ್ಲ. ಅವರು ಏನಿದ್ದರೂ ಸುಮ್ಮನೆ ಯಾರೋ ಕ್ರಿಕೆಟಿಗನ ಮೇಲೆ ಕ್ರಶ್ ಹುಟ್ಟಿಸಿಕೊಂಡು ಕ್ರಿಕೆಟ್ ನೋಡುವವರು. ಸ್ಟೇಡಿಯಮ್ಮಿನ ಜೋಷ್ ಎಂಜಾಯ್ ಮಾಡಲು ಕ್ರಿಕೆಟ್ ನೋಡುವವರು, ಐಪಿಎಲ್‌ನಿಂದ ಕ್ರಿಕೆಟ್ ಕ್ರೇಜ್ ಬೆಳೆಸಿಕೊಂಡವರು, ಬಾಯ್ ಫ್ರೆಂಡ್‌ಗೋಸ್ಕರ ಅಥವಾ ಅಟೆನ್ಶನ್ ಗಳಿಸಲಿಕ್ಕೋಸ್ಕರ ಕ್ರಿಕೆಟ್ ಆಸಕ್ತಿ ತೋರು ವವರು ಅಂತಷ್ಟೇ ಅನಿಸುತ್ತಿರುತ್ತಿತ್ತು.
ಇದನ್ನೂ ಓದಿ: Naveen Sagar Column: ಪಾಕಿಸ್ತಾನ ಒಂದು ಹ್ಯಾಂಡ್ ಶೇಕ್ ಗಾಗಿ ಅಳುವಂತಾಯ್ತಲ್ಲ !
ಟಿವಿಯಲ್ಲಿ ಕ್ರಿಕೆಟ್ ನೋಡುವಾಗ ಹೆಣ್ಮಕ್ಕಳು ಬಂದು ಕ್ರಿಕೆಟಿನ ಬಗ್ಗೆ ಕೇಳಿದರೆ ಕಿರಿಕಿರಿ. ಯಾಕಂದ್ರೆ ಅವರಿಗೆ ಏನಂದ್ರೆ ಏನೂ ಗೊತ್ತಾಗ್ತಾ ಇರಲಿಲ್ಲ. ನಿಯಮಗಳು, ರನ್, ವಿಕೆಟ್, ಎಲ್‌ಬಿಡಬ್ಲ್ಯು ಅಂದ್ರೆ ಏನು? ವೈಡ್ ಬಾಲ್, ನೋಬಾಲ್ ಅಂದ್ರೇನು, ಬೌಲ್ಡ್ ಅಂದ್ರೇನು, ಸ್ಟಂಪಿಂಗು, ರನೌಟ್ ಅಂದ್ರೇನು ಎಲ್ಲವನ್ನೂ ಬಿಡಿಸಿಬಿಡಿಸಿ ಹೇಳಬೇಕು.
ಆಟಗಾರರೂ ಅಷ್ಟೆ, ಒಬ್ರೋ ಇಬ್ರೋ ಬಿಟ್ರೆ ಮಿಕ್ಕವರ ಹೆಸರೂ ಗೊತ್ತಿರ್ತಾ ಇರ‍್ಲಿಲ್ಲ. “ಗಾವಸ್ಕರ್ ಎಷ್ಟ್ ಸಿಕ್ಸ್ ಹೊಡೆದ. ಕಪಿಲ್‌ದೇವ್ ಎಷ್ಟ್ ಔಟ್ ತೆಗೆದ? ವಿಕೆಟೆಲ್ಲ ಅಲ್ಲೇ ಇದೆ, ತೆಗ್ದ ಅಂತೀಯಲ್ಲ..." ಇಂಥ ಅಸಂಬದ್ಧ ಪ್ರಶ್ನೆಗಳೇ! ಕಿರ್ಮಾನಿಗೂ ಹಿರ್ವಾನಿಗೂ ವ್ಯತ್ಯಾಸ ಗೊತ್ತಿರಲಿಲ್ಲ. ಕುಂಬ್ಳೆಗೂ ಕಾಂಬ್ಳಿಗೂ ವ್ಯತ್ಯಾಸ ಗೊತ್ತಿರಲಿಲ್ಲ.

ಇಂಥದ್ದೆಲ್ಲ ನೋಡಿ, ‘ಈ ಜನ್ಮದಲ್ಲಿ ಕ್ರಿಕೆಟ್ ಅನ್ನು ಯಾವತ್ತಿಗೂ ಹೆಣ್ಣುಮಕ್ಕಳು ಆಡಲು ಸಾಧ್ಯವೇ ಇಲ್ಲ’ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದೆ. ಆದರೆ ಇವತ್ತು? ಸ್ಮೃತಿ ಮಂಧನ ಎಂಬ ಸುಂದರಿ, ಪುರುಷ ಕ್ರಿಕೆಟಿಗರನ್ನೇ ಮೀರಿಸುವಂಥ ಆಟ ಆಡುತ್ತಿದ್ದಾಳೆ.
ದೀಪ್ತಿ ಶರ್ಮ, ಶೆಫಾಲ್ ವರ್ಮಾ, ಹರ್ಮನ್ ಪ್ರೀತ್ ಕೌರ್, ಒಬ್ಬೊಬ್ಬರ ಆಟ ನೋಡ್ತಾ ಇದ್ದರೆ ಅಚ್ಚರಿ ಆಗುತ್ತಿದೆ. ನನ್ನ ಅಭಿಪ್ರಾಯ, ಪೂರ್ವಗ್ರಹ ಎಲ್ಲವನ್ನೂ ಎಂದೋ ಮೂಟೆ ಕಟ್ಟಿ ತಿಪ್ಪೆಗೆಸೆದುಬಿಟ್ಟಿದ್ದೇನೆ.
ಅಸಲಿಗೆ ಮಹಿಳಾ ಕ್ರಿಕೆಟ್ ಹದಿನೆಂಟನೇ ಶತಮಾನದ ಶುರು ಆಗಿತ್ತು ಎಂಬ ಸತ್ಯವೇ ನನಗೆ ಗೊತ್ತಿರಲಿಲ್ಲ. ಆ ದಿನಗಳ ಮಹಿಳೆಯರು ಕ್ಲಬ್ ಲೆವೆಲ್ ಕ್ರಿಕೆಟ್ ಶುರುವಿಟ್ಟುಕೊಂಡಿದ್ದ ರಂತೆ. ಆದರೆ ನನಗೆ ಮಹಿಳೆಯರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ ಅಂತ ಗೊತ್ತಾಗಿದ್ದು ತೊಂಬತ್ತರ ದಶಕದ ಆರಂಭದಲ್ಲಿ ಅಥವಾ ಕೊಂಚ ಮೊದಲು. ನಾನು ಕೇಳಿದ ಮೊದಲ ಮಹಿಳಾ ಕ್ರಿಕೆಟರ್ ಹೆಸರು ಶಾಂತಾ ರಂಗಸ್ವಾಮಿ.
ಆಕೆ ಕರ್ನಾಟಕದವರು ಅಂತಲೇ ಭಾವಿಸಿದ್ದೆ. ಆನಂತರ ಆಕೆ ತಮಿಳುನಾಡಿನ ಕ್ರಿಕೆಟರ್ ಎಂದು ಗೊತ್ತಾಯ್ತು. ಭಾರತ ತಂಡದ ನಾಯಕತ್ವ ವಹಿಸಿದ್ದ ಹಿರಿಯ ಕ್ರಿಕೆಟ್ ಆಟಗಾರ್ತಿ ಅವರು. ಆ ನಂತರ ನನ್ನ ನೆನಪಲ್ಲುಳಿದ ಕೆಲವು ಮಹಿಳಾ ಕ್ರಿಕೆಟರ್ ಗಳೆಂದರೆ ಜೂಲನ್ ಗೋಸ್ವಾಮಿ, ಅಂಜುಮ್ ಛೋಪ್ರಾ ಮತ್ತು ಮಿಥಾಲಿ ರಾಜ್. ಆದರೆ ಮಹಿಳಾ ಕ್ರಿಕೆಟ್‌ಗೆ ಗ್ಲಾಮರ್ ಸ್ಪರ್ಶ, ಕಮರ್ಷಿಯಲ್ ಸ್ಪರ್ಶ, ಜನಪ್ರಿಯತೆ, ಗಾಂಭೀರ್ಯ, ಮೀಡಿಯಾ ಗಮನ ಇವೆಲ್ಲ ದಕ್ಕುವುದಕ್ಕೆ ಐಪಿಎಲ್ ಎಂಬ ಕ್ರಿಕೆಟ್ ಮೇನಿಯಾವೇ ಬರಬೇಕಾಯ್ತು.
ಸಿನಿಮಾ ಅಂದಮೇಲೆ ಅಬ್ಬ ಹೀರೋ ಹೀರೋಯಿನ್ ಇರಬೇಕು. ಆಟಕ್ಕೂ ಅದು ಅನ್ವಯ. ಅಲ್ಲಿ ಒಬ್ಬ ಸ್ಟಾರ್ ಆಟಗಾರ ಕಾಣಿಸದ ಹೊರತು ಆಟ ಬೆಳೆಯುವುದಿಲ್ಲ. ಹಾಕಿ, ಫುಟ್‌ಬಾಲ್, ಕ್ರಿಕೆಟ್ ಹೀಗೆ ಯಾವುದೇ ಟೀಮ್ ಗೇಮ್ ಆದರೂ ಅಬ್ಬ ಸ್ಟಾರ್ ಹುಟ್ಟಿ ಕೊಳ್ಳದ ಹೊರತು ಆಟ ಆಕರ್ಷಣೆ ಪಡೆಯುವುದಿಲ್ಲ. ಅಲ್ಲಿ ಸ್ಟಾರ್‌ಗಳು ಹುಟ್ಟಬೇಕು, ಸ್ಟಾರ್‌ವಾರ್ ಶುರು ಆಗಬೇಕು.. ಆಗಲೇ ಅದಕ್ಕೊಂದು ರುಚಿ ದಕ್ಕುವುದು.
ಪುರುಷರ ಕ್ರಿಕೆಟ್‌ನಲ್ಲಿ ಅದು ಕಾಲಕಾಲಕ್ಕೆ ಆಗುತ್ತಲೇ ಬಂತು. ಗಾವಸ್ಕರ್, ಕಪಿಲ್ ದೇವ್, ಅಜರ್, ಸಚಿನ್, ಸೆಹ್ವಾಗ್, ಯುವಿ, ಗಂಗೂಲಿ, ಧೋನಿ, ರೋಹಿತ್, ಕೊಹ್ಲಿ ಹೀಗೆ ಒಬ್ಬರಾದ ಮೇಲೆ ಒಬ್ಬರು ಹುಟ್ಟಿಕೊಳ್ತಾ ಹೋದರು. ಆದರೆ ಮಹಿಳಾ ಕ್ರಿಕೆಟ್‌ನಲ್ಲಿ ಅದು ಆಗಿರಲಿಲ್ಲ. ಮಹಿಳಾ ಕ್ರಿಕೆಟ್ ಕೂಡ ಜನರನ್ನು ಸೆಳೆಯುವ ಹಂತಕ್ಕೆ ಬೆಳೆಯಬಹುದು ಎಂಬ ಕಲ್ಪನೆ ಯೂ ಯಾರಲ್ಲೂ ಇರಲಿಲ್ಲ.
ಕಳೆದ ಒಂದು ದಶಕ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿತು. ಭಾರತದ ಮಹಿಳಾ ತಂಡ ಇಂದು ಮನಸ್ಸು ಮಾಡಿದಾರೆ ಪಾಕಿಸ್ತಾನಿ ಪುರುಷರ ತಂಡವನ್ನು ಬಗ್ಗುಬಡಿಯ ಬಲ್ಲದು. ಅಷ್ಟು ತಾಕತ್ ಹೊಂದಿದೆ. ಹೌದು, ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಭಾರತ ಎಲ್ಲವೂ ದಿನೇದಿನೆ ಬಲಾಢ್ಯವಾಗುತ್ತಾ ಹೋಗುತ್ತಿವೆ.
ಅವರ ಕ್ರಿಕೆಟಿಂಗ್ ಶಾಟ್‌ಗಳು, ಕ್ಯಾಚಿಂಗ್‌ಗಳು, ಬೌಲಿಂಗ್ ವೇಗ, ನಿಖರತೆ, ಸ್ಪಿನ್ ಕೌಶಲ, ಬಿಗ್ ಹಿಟ್ಟಿಂಗ್ ಇವೆಲ್ಲವೂ ಅಚ್ಚರಿ ಹುಟ್ಟಿಸುತ್ತಿವೆ. ಇಪ್ಪತ್ತು ಓವರ್ ಪಂದ್ಯಗಳಲ್ಲಿ ಇನ್ನೂರರ ಗಡಿ ಸುಲಭವಾಗಿ ದಾಟುತ್ತಿzರೆ. ಐಸಿಸಿ ಕ್ರಿಕೆಟ್ ಮಂಡಳಿಯು ‘ಬ್ಯಾಟರ್’ ಎಂಬ ಕಾಮನ್ ಪದವನ್ನು ತರುವ ಮಟ್ಟಿಗೆ ಮಹಿಳಾ ಕ್ರಿಕೆಟ್ ಎಂಬುದು ಪುರುಷ ಕ್ರಿಕೆಟ್‌ಗೆ ಸಮಾನವಾಗಿ ಬಂದು ನಿಂತಿದೆ.
ಕ್ರಿಕೆಟ್ ಪ್ರೇಮಿಗಳು ಸ್ಟೇಡಿಯಮ್ಮನ್ನು ಫುಲ್ ಮಾಡುತ್ತಿದ್ದಾರೆ. ಟಿವಿಯಲ್ಲಿ ಲೈವ್ ಟೆಲಿಕಾಗೆ ಟಿಆರ್‌ಪಿ ಬರುತ್ತಿದೆ. ಹೊರಗೆ ಜನರು ಮೆನ್ಸ್ ಕ್ರಿಕೆಟ್ ಬಗ್ಗೆ ಮಾತನಾಡುವ ಹಾಗೆ ವಿಮೆನ್ಸ್ ಕ್ರಿಕೆಟ್ ಬಗ್ಗೆಯೂ ಮಾತನಾಡಲು ಶುರುವಿಟ್ಟಿದ್ದಾರೆ. ಪ್ರೀಮಿಯರ್ ಲೀಗ್‌ಗಳು ಶುರುವಾಗಿ ಫ್ರಾಂಚೈಸ್‌ಗಳು ಹುಟ್ಟಿಕೊಂಡಿವೆ.
ಇಂದಿಗೆ ಭಾರತದಲ್ಲಿ ಅತಿ ದೊಡ್ಡ ಕ್ರೇಜ್ ಹುಟ್ಟು ಹಾಕಿರುವ ಮಹಿಳಾ ಕ್ರಿಕೆಟರ್ ಅಂದ್ರೆ ಅದು ಸ್ಮೃತಿ ಮಂಧನ. ಈಕೆಯ ಸೌಂದರ್ಯಕ್ಕೆ ಮಾರುಹೋಗಿದ್ದ ಪುರುಷರು ಈಗ ಆಟಕ್ಕೆ ತಲೆದೂಗುತ್ತಿzರೆ. ಕರ್ನಾಟಕದವರಂತೂ ಈಕೆ ಕೊಡಗಿನ ಬೆಡಗಿ ಎಂದು ಯಾಮಾರಿದ್ದೂ ಆಗಿತ್ತು!
ರಶ್ಮಿಕಾ ಮಂದಣ್ಣನ ಥರ ಈಕೆ ಸ್ಮೃತಿ ಮಂದಣ್ಣ ಎಂದು ತಪ್ಪಾಗಿ ಭಾವಿಸಿ ತುಸು ಹೆಚ್ಚೇ ಪ್ರೀತಿ ಕೊಟ್ಟದ್ದೂ ಆಗಿತ್ತು. ಸ್ಮೃತಿ ಮಂಧನ ಈಗ ದೇಶಾದ್ಯಂತ ಮನೆಮಾತು. ವಿರಾಟ್ ಕೊಹ್ಲಿಯದ್ದೇ ಜೆರ್ಸಿ ನಂಬರ್ ಹೊಂದಿರುವ ಈಕೆಯನ್ನು ಲೇಡಿ ಕೊಹ್ಲಿ ಎನ್ನುವವ ರಿದ್ದಾರೆ, ಕೊಹ್ಲಿಯ ಎಡಗೈ ವರ್ಶನ್ ಎಂದು ಹೊಗಳಿದವರಿದ್ದಾರೆ. ಆಕೆಯ ಆಟದ ವೈಖರಿ, ಡ್ರೈವ್, ಗ್ಲಾನ್ಸ್ ಫ್ಲಿಕ್ಸ್ ನೋಡಿದವರು ಗಂಗೂಲಿಗೆ, ಕುಮಾರ ಸಂಗಾಕ್ಕರನಿಗೆ ಹೋಲಿಸಿದ್ದೂ ಇದೆ. ಹೌದು ಸ್ಮೃತಿ ಮಂಧನ ಸದ್ಯದ ಲೇಡಿ ಸೂಪರ್‌ಸ್ಟಾರ್ ಆಫ್ ಇಂಡಿಯನ್ ಕ್ರಿಕೆಟ್.
ಮಿಥಾಲಿ ರಾಜ್ ಭಾರತ ಕಂಡ ಸರ್ವಶ್ರೇಷ್ಠ ಮಹಿಳಾ ಕ್ರಿಕೆಟರ್. ಹತ್ತು ಸಾವಿರ ರನ್ ಗುಡ್ಡೆ ಹಾಕಿ, ಎರಡು ವಿಶ್ವಕಪ್ ಗಳಲ್ಲಿ ಭಾರತವನ್ನು ಫೈನಲ್‌ಗೆ ಕರೆದೊಯ್ದಾಕೆ. ಟೆಸ್ಟ್ ನಲ್ಲಿ ಎರಡು ಡಬಲ್ ಸೆಂಚುರಿ ಬಾರಿಸಿ ಲೇಡಿ ತೆಂಡೂಲ್ಕರ್ ಎಂದು ಕರೆಸಿಕೊಂಡ ಆಟಗಾರ್ತಿ. ಜೂಲನ್ ಗೋಸ್ವಾಮಿ ಕೂಡ ಕಮ್ಮಿ ಏನಲ್ಲ. ಇನ್ನೂರಾ ಐವತ್ತೈದು ವಿಕೆಟ್ ಕಿತ್ತು ಅತಿ ಹೆಚ್ಚು ವಿಕೆಟ್ ಪಡೆದ ಮಹಿಳಾ ಕ್ರಿಕೆಟರ್ ದಾಖಲೆಯನ್ನು ತಮ್ಮದಾಗಿಸಿಕೊಂಡವರು.
ಪ್ರಸ್ತುತ ನಾಯಕಿಯಾಗಿರುವ ಹರ್ಮನ್ ಪ್ರೀತ್ ಕೌರ್ ಕೂಡ ಕಪಿಲ್ ದೇವ್‌ರಂತೆ 171 ರನ್ ಬಾರಿಸಿ ಸ್ಫೋಟಕ ಆಟ ಪ್ರದರ್ಶಿಸಿದ್ದ ಧೀರೆ. ಭಾರತಕ್ಕೆ ಕಾಮನ್‌ವೆಲ್ತ್ ನಲ್ಲಿ ರಜತ ಪದಕ ತಂದುಕೊಟ್ಟವರು. ಇಲ್ಲಿ ಸೆಹ್ವಾಗ್ ಥರ ಆಕ್ರಮಣಕಾರಿಯಾಗಿ ಆಡುವ ಶೆಫಾಲಿ ವರ್ಮ,
ನಂಬಿಕಸ್ಥ ಆಲ್‌ರೌಂಡರ್ ದೀಪ್ತಿ ಶರ್ಮ ಎಲ್ಲರೂ ಇದ್ದರೂ ಸ್ಮೃತಿ ಮಂಧನ ಥರದ ಖ್ಯಾತಿ ಒಬ್ಬರಿಗೂ ಬರಲಿಲ್ಲ. ಸ್ಮೃತಿ ಮಂಧನ ಆಟದಲ್ಲಿ ಬೇರೆಯದೇ ಚಾರ್ಮ್ ಇದೆ. ಆಕೆಯ ಆಟದ ಸೊಗಸು ವಿಭಿನ್ನ. ಕ್ರಿಕೆಟ್‌ನ ಮೂರೂ ಪ್ರಕಾರಗಳಲ್ಲಿ ಶತಕ ಸಿಡಿಸಿದ ಹುಡುಗಿ ಸ್ಮೃತಿ.
ಈಗಿನ್ನೂ ವಯಸ್ಸು ಇಪ್ಪತ್ತೊಂಬತ್ತು. ಆಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹದಿನಾರು ಶತಕ, ಅರವತ್ತಾರು ಅರ್ಧಶತಕ ಗಳಿಸಿದ್ದಾಳೆ. ಮೊನ್ನೆ ಕೇವಲ ಐವತ್ತು ಎಸೆತಗಳಲ್ಲಿ ಶತಕ ಬಾರಿಸಿ ಕೊಹ್ಲಿ, ರೋಹಿತ್‌ರನ್ನೇ ಮೀರಿಸಿದ್ದಾಳೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಹುಟ್ಟಿದ ಈಕೆಯ ಕುಟುಂಬ ಕ್ರಿಕೆಟ್ ಹುಚ್ಚಿನದ್ದೇ. ಅಪ್ಪ ಮತ್ತು ಅಣ್ಣ ಶ್ರವಣ್ ಜಿಲ್ಲಾಮಟ್ಟದ ಕ್ರಿಕೆಟ್ ಆಡ್ತಾ ಇದ್ದವರು. ಹೀಗಾಗಿ ಹುಟ್ಟಿನಿಂದಲೇ ಕ್ರಿಕೆಟ್ ಆಕರ್ಷಿಸಿತ್ತು.
ಒಂಬತ್ತನೇ ವಯಸ್ಸಲ್ಲೇ ಮಹಾರಾಷ್ಟ್ರದ ಅಂಡರ್ ಫಿಫ್ಟೀನ್ ತಂಡಕ್ಕೆ ಆಯ್ಕೆಯಾಗಿ ಬಿಟ್ಟಳು. ಹನ್ನೊಂದು ತುಂಬುವ ಹೊತ್ತಿಗೆ ಅಂಡರ್ 19 ಆಡೋಕೆ ಕಣಕ್ಕಿಳಿದಿದ್ದಳು. 2013ರಲ್ಲಿ ಆಕೆ ಪಶ್ಚಿಮ ವಲಯ ಅಂಡರ್ 19 ಟೂರ್ನಿಯಲ್ಲಿ ಗುಜರಾತ್ ವಿರುದ್ಧ 150 ಎಸೆತಗಳಲ್ಲಿ 224 ರನ್ ಬಾರಿಸಿಬಿಡುತ್ತಾಳೆ.
ವಿಶೇಷ ಅಂದರೆ ಆಕೆ ಆಡಿದ ಬ್ಯಾಟ್ ರಾಹುಲ್ ದ್ರಾವಿಡ್ ಕೊಟ್ಟ ಗಿಫ್ಟ್ ಆಗಿತ್ತು. ಸ್ಮೃತಿ ಮಂಧನ ಚಿಕ್ಕಂದಿನಲ್ಲಿ ದ್ರಾವಿಡ್‌ನ ಬಹು ದೊಡ್ಡ ಅಭಿಮಾನಿ. ಆಕೆಯ ಅಣ್ಣ ಶ್ರವಣ್‌ಗೆ ತಂಗಿ ಮೇಲೆ ಅಪಾರ ಪ್ರೀತಿ. ಹೀಗಾಗಿ ಆಕೆಯ ಹದಿನಾರನೇ ಹುಟ್ಟುಹಬ್ಬಕ್ಕೆ ದ್ರಾವಿಡ್ ಬಳಸುತ್ತಿದ್ದ ಬ್ಯಾಟ್ ಮೇಲೆ ಅವರದ್ದೇ ಹಸ್ತಾಕ್ಷರ ಹಾಕಿಸಿ ತಂದಿದ್ದ. ಆ ಬ್ಯಾಟ್‌ನಲ್ಲಿ ಆಡುವ ಬದಲಿಗೆ ಸ್ಮೃತಿ ಅದನ್ನು ಷೋಕೇಸ್‌ನಲ್ಲಿ ಜೋಪಾನ ಮಾಡಿದ್ದಳು.
ಅದೊಂದು ದಿನ ಷೋಕೇಸ್‌ನಿಂದ ತೆಗೆದು ಬ್ಯಾಟ್ ಹಿಡಿದಾಗ ಅದೇನೋ ಶಕ್ತಿಸಂಚಾರ ವಾದ ಅನುಭವ. ಅದರ ಬ್ಯಾಲೆನ್ಸ್, ತೂಕ ಎಲ್ಲವೂ ತನ್ನ ಆಟಕ್ಕೆ ಪರ್ಫೆಕ್ಟ್ ಅನಿಸಿ ಬಿಡುತ್ತದೆ. ಸೀದಾ ಅದನ್ನು ಕಿಟ್‌ಗೆ ತುಂಬಿಸಿಕೊಳ್ಳುತ್ತಾಳೆ ಸ್ಮೃತಿ. ಮಹಾರಾಷ್ಟ್ರ ಪರ ಓಪನರ್ ಆಗಿ ಆಡುವ ಪಂದ್ಯದಲ್ಲಿ ಆಕೆಯ ಮೊದಲ ದ್ವಿಶತಕ ಬಂದುಬಿಡುತ್ತದೆ!
ಅಂದು ತನ್ನ ಆಗಮನವನ್ನು ಸಾರಿದ್ದ ಈ ಹುಡುಗಿ ಹಲವು ಏಳುಬೀಳು ಕಂಡು ಇಂದಿಗೆ ಮಹಿಳಾ ಕ್ರಿಕೆಟ್‌ನ ದಂತಕಥೆ ಆಗುವತ್ತ ಸಾಗಿದ್ದಾಳೆ. ಇಂದಿನ ಆಕೆಯ ಫಾರ್ಮ್ 2017ರ ವಿಶ್ವಕಪ್‌ನಲ್ಲಿ ಇದ್ದಿದ್ದರೆ ಭಾರತ ಮೊದಲ ವಿಶ್ವಕಪ್ ಗೆದ್ದಿರುತ್ತಿತ್ತು. ಆದರೆ ಸರಿಯಾದ ಸಮಯಕ್ಕೆ ಫಾರ್ಮ್ ಕೈಕೊಟ್ಟಿತ್ತು. ಆಕೆಯ ಕೆರಿಯರ್ ಮುಗಿದೇ ಹೋಯ್ತು ಅನಿಸುವ ಹೊತ್ತಿಗೆ ಥೇಟ್ ಕೊಹ್ಲಿಯ ಹಾಗೆ ಫೀನಿP ಪಕ್ಷಿಯಂತೆ ಎದ್ದು ನಿಂತಿದ್ದಾಳೆ.
ಹದಿನೇಳು ವರ್ಷ ತಪಸ್ಸು ಮಾಡಿದ್ದ ಆರ್‌ಸಿಬಿಗೆ ಮೊದಲು ಕಪ್ ತಂದು ಕೊಟ್ಟಿದ್ದು ಸ್ಮೃತಿ ಮಂಧನ. ಇದೀಗ ಎಲ್ಲ ದೇಶಗಳ ಎದುರು ರನ್ ಸುರಿಮಳೆಯನ್ನೇ ಸುರಿಸಿ ದಾಖಲೆ ಬರೆಯುತ್ತಿದ್ದಾಳೆ. ‘ಘೂಮರ್’ ಅಂತೊಂದು ಲೇಡಿ ಕ್ರಿಕೆಟರ್ ಸಿನಿಮಾ ಬಂದು ಹೋಯ್ತು. ಅ ಒಬ್ಬ ಗ್ರಾಮೀಣ ಪ್ರತಿಭೆ ಜಹೀರ್ ಖಾನ್ ಶೈಲಿಯಲ್ಲಿ ಬೌಲಿಂಗ್ ಮಾಡಿ ಸಚಿನ್ ತೆಂಡೂಲ್ಕರನ ಗಮನ ಸೆಳೆದಳು.
ಇಂಥವೆಲ್ಲ ಘಟಿಸುತ್ತಿವೆ ಅಂದರೆ ಮಹಿಳಾ ಕ್ರಿಕೆಟ್ ಭಾರತದಲ್ಲೀಗ ಉತ್ತುಂಗ ಸ್ಥಿತಿ ತಲುಪಿದೆ ಅಂತಲೇ ಅರ್ಥ. ಸದ್ಯದ ಸ್ಮೃತಿ ಮಂಧನ ಬಯೋಪಿಕ್ ಬಂದರೂ ಅಚ್ಚರಿ ಯಿಲ್ಲ. ಮಹಿಳಾ ಕ್ರಿಕೆಟ್‌ಗೆ ಇಷ್ಟೊಂದು ಜನಪ್ರಿಯತೆ ತಂದುಕೊಟ್ಟ ಸ್ಮೃತಿ ಅದಕ್ಕೆ ಖಂಡಿತ ಅರ್ಹಳು.