ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashikumar K Column: ಭಾರತದ ಪ್ರವೇಶಕ್ಕೆ ಸ್ಟಾರ್‌ ಲಿಂಕ್‌ ಕುತಂತ್ರ

ಸ್ಟಾರ್ ಲಿಂಕ್ ಏಕೆ ಅವಶ್ಯಕವೆಂದರೆ ಬೆಟ್ಟ-ಗುಡ್ಡಗಳ ನಡುವಿನ ಹಳ್ಳಿಗಳಿಗೆ ನೆಟ್‌ವರ್ಕ್ ಪೂರೈಸಲು ಟವರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಜತೆಗೆ ಮಳೆಗಾಲದಲ್ಲಿ ಟವರ್‌ಗಳಿಗೆ ಬೇಕಾದ ಕರೆಂಟ್ ಪೂರೈಸಲು ಆಗುವುದಿಲ್ಲ. ಇದರಿಂದ ನೆಟ್‌ವರ್ಕ್ ಶಡೌನ್ ಆಗುತ್ತದೆ. ಅಲ್ಲದೆ ಓಎಫ್‌ʼಸಿ ಭೂಕಂಪದಿಂದ ಅಥವಾ ಪ್ರವಾಹದಿಂದ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಇದಕ್ಕೆ ಪರಿಹಾರವೆಂದರೆ ಸ್ಟಾರ್ ಲಿಂಕ್.

ತಂತ್ರಜ್ಞಾನ

ಶಶಿಕುಮಾರ್‌ ಕೆ.

ಭಾರತವು ಅತಿದೊಡ್ಡ ದೇಶವಾಗಿರುವುದರಿಂದ ಕೇವಲ 2-3 ನೆಟ್‌ವರ್ಕ್ ಪ್ರೊವೈಡರ್ ಕಂಪನಿಗಳು ನೆಟ್‌ವರ್ಕ್ ಪೂರೈಸುವುದು ಕಷ್ಟ. ಆದ್ದರಿಂದ ಗುಡ್ಡಗಾಡು ಪ್ರದೇಶಗಳು ಹಾಗೂ ಅರಣ್ಯಗಳ ನಡುವೆ ನೆಟ್‌ವರ್ಕ್ ಪೂರೈಸುವ ಗುರಿ ಹೊಂದಿರುವ ಸಂಸ್ಥೆ ವಿಶ್ವದ ನಂಬರ್-1 ಶ್ರೀಮಂತ ಎಲಾನ್ ಮಸ್ಕ್‌ʼರ ಸ್ಟಾರ್ ಲಿಂಕ್. ಸ್ಟಾರ್ ಲಿಂಕ್ ಪ್ರಪಂಚದ ಯಾವ ಭಾಗದಲ್ಲಿ ಟವರ್‌ಗಳನ್ನು ಹಾಕಲು ಸಾಧ್ಯವಿಲ್ಲವೋ, OFC (ಆಪ್ಟಿಕಲ್ ಫೈಬರ್ ಕೇಬಲ್) ಹಾಕಲು ಸಾಧ್ಯವಿಲ್ಲವೋ ಅಲ್ಲಿಗೆ ಇಂಟರ್‌ ನೆಟ್ ಕನೆಕ್ಷನ್ ಕೊಡಲು ಡಿಟಿಎಚ್ ರೀತಿ ಕೊಡೆಯನ್ನು ಅಳವಡಿಸುತ್ತಾರೆ.

ಅದು ಸ್ಯಾಟಲೈಟ್‌ನಿಂದ ನೇರವಾಗಿ ಹೈಸ್ಪೀಡ್ ಇಂಟರ್‌ನೆಟ್‌ನ್ನು ಪ್ರೊವೈಡ್ ಮಾಡುತ್ತದೆ. ಅದಕ್ಕೋಸ್ಕರವೇ ಎಲಾನ್ ಮಸ್ಕ್ ಒಡೆತನದ ಖಾಸಗಿ ಉಪಗ್ರಹ ಉಡಾವಣಾ ಸಂಸ್ಥೆ ಸ್ಪೇಸ್-ಎಕ್ಸ್ ಮೂಲಕ 12900 ಸ್ಯಾಟಲೈಟ್ ಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡಿದ್ದಾರೆ. ಈ ಸ್ಯಾಟಲೈಟ್ʼ ಗಳಿಂದ ನೇರವಾಗಿ ಸ್ಟಾರ್ ಲಿಂಕ್ ನೆಟ್‌ವರ್ಕ್ ಕೊಡೆಗಳಿಗೆ ನೆಟ್ ವರ್ಕ್ ಪೂರೈಸಲಾಗುತ್ತದೆ.

ಸ್ಟಾರ್ ಲಿಂಕ್ ಏಕೆ ಅವಶ್ಯಕವೆಂದರೆ ಬೆಟ್ಟ-ಗುಡ್ಡಗಳ ನಡುವಿನ ಹಳ್ಳಿಗಳಿಗೆ ನೆಟ್‌ವರ್ಕ್ ಪೂರೈಸಲು ಟವರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಜತೆಗೆ ಮಳೆಗಾಲದಲ್ಲಿ ಟವರ್‌ಗಳಿಗೆ ಬೇಕಾದ ಕರೆಂಟ್ ಪೂರೈಸಲು ಆಗುವುದಿಲ್ಲ. ಇದರಿಂದ ನೆಟ್‌ವರ್ಕ್ ಶಡೌನ್ ಆಗುತ್ತದೆ. ಅಲ್ಲದೆ ಓಎಫ್‌ʼಸಿ ಭೂಕಂಪದಿಂದ ಅಥವಾ ಪ್ರವಾಹದಿಂದ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಇದಕ್ಕೆ ಪರಿಹಾರವೆಂದರೆ ಸ್ಟಾರ್ ಲಿಂಕ್.

ಇದನ್ನೂ ಓದಿ: Elon Musk: ಗಣೇಶನ ಬಗ್ಗೆ ಗ್ರೋಕ್ ಎಐ ಜೊತೆ ಇದು ಯಾರೆಂದು ಕೇಳಿದ ಎಲಾನ್ ಮಸ್ಕ್; ನೆಟ್ಟಿಗರ ಹೃದಯಗೆದ್ದ ಸಿರಿವಂತ ಉದ್ಯಮಿ

ಸ್ಟಾರ್ ಲಿಂಕ್‌ನ ಈ ತಂತ್ರಜ್ಞಾನಕ್ಕೆ ಸ್ಯಾಟ್ ಕಾಮ್ ಎನ್ನುವರು. 165 ದೇಶಗಳಲ್ಲಿ ಎಲಾನ್ ಮಸ್ಕ್‌ʼರ ಸ್ಟಾರ್ ಲಿಂಕ್ ಕಾರ್ಯನಿರ್ವಹಿಸುತ್ತಿದೆ. ಇವರಿಗೆ ಭಾರತದ ಮಾರುಕಟ್ಟೆಗೆ ಬರಬೇಕೆಂಬ ಬಹುದೊಡ್ಡ ಆಸೆ ಇದೆ. ಏಕೆಂದರೆ ಭಾರತದ ಮಾರುಕಟ್ಟೆಯಲ್ಲಿ ಬಹುದೊಡ್ಡ ಅವಕಾಶಗಳು ಕಾದಿವೆ. ಏಕೆಂದರೆ 2026ರ ಮೇ ವೇಳೆಗೆ ನಮ್ಮ ದೇಶದ 11,256 ಗ್ರಾಮಗಳಲ್ಲಿ 4ಜಿ ಕನೆಕ್ಷನ್ ಇರುವುದಿಲ್ಲ. 109.30 ಕೋಟಿ ಜನ ಭಾರತದಲ್ಲಿ ಇಂಟರ್‌ನೆಟ್ ಬಳಸುತ್ತಿದ್ದಾರೆ.

ಇದರಲ್ಲಿ ಗ್ರಾಮೀಣ ಪ್ರದೇಶದ ಬಳಕೆದಾರರು 44.87 ಕೋಟಿ ಜನ ಮಾತ್ರ. ಅಂದರೆ 45.31% ಮಾತ್ರ ಗ್ರಾಮೀಣ ಪ್ರದೇಶದವರಿಗೆ ಇಂಟರ್‌ನೆಟ್ ಸಿಗುತ್ತಿದೆ. 8.30 ಲಕ್ಷ ಕಿಲೋ ಮೀಟರ್ ಒಎಫ್‌ʼಸಿ ಹಾಕಲಾಗಿದ್ದು, 2.21 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಇಂಟರ್‌ನೆಟ್ ಸೇವೆ ನೀಡಬಹುದೆಂದು ಗುರುತಿಸಲಾಗಿದ್ದರೂ 70,472 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಒದಗಿಸಲಾಗುತ್ತಿದೆ.

ಮಾರ್ಚ್ 2026ರ ವರೆಗೆ ಭಾರತದಲ್ಲಿ ಫೈಬರ್ ಕೇಬಲ್ ಸಂಪರ್ಕ 4.26% ಮಾತ್ರ ಒದಗಿಸಲು ಸಾಧ್ಯವಾಗಿದೆ. ಇಂಟರ್‌ನೆಟ್ ಸಂಪರ್ಕದಿಂದ ಜನರು ಕೇವಲ ಸಾಮಾಜಿಕ ಮಾಧ್ಯಮಗಳನ್ನು ಮಾತ್ರ ಬಳಕೆ ಮಾಡುವು ದಿಲ್ಲ. ಬದಲಾಗಿ ಇದರಿಂದ ಜನರ ಜೀವನಮಟ್ಟದಲ್ಲಿ ಬದಲಾವಣೆ ಸಾಧ್ಯವಾಗಲಿದೆ. ಹೇಗೆಂದರೆ ಗ್ರಾಮೀಣ ಶಾಲೆಗಳಿಗೆ ಆನ್‌ಲೈನ್ ಶಿಕ್ಷಣ, ಟೆಲಿ ಮೆಡಿಸಿನ್ ಮೂಲಕ ತಜ್ಞ ವೈದ್ಯರ ಕನ್ಸಲ್ಟೇಶನ್, ಗ್ರಾಮೀಣ ಭಾಗದ ರೈತರು ಹಾಗೂ ಉದ್ಯಮಿಗಳಿಗೆ ಆನ್‌ಲೈನ್ ಮಾರುಕಟ್ಟೆ ಸೇವೆ, ಕೊರಿಯರ್ ಮಾಡಲು, ಹೊಸ ಗ್ರಾಹಕರನ್ನು ತಲುಪಲು, ಈ ಎಲ್ಲವನ್ನು ಮಾಡುವ ಮೂಲಕ ಶಿಕ್ಷಣ, ಆರೋಗ್ಯ, ಉದ್ಯೋಗ, ವ್ಯಾಪಾರ-ವ್ಯವಹಾರ, ತುರ್ತು ಸೇವೆಗಳು... ಇವೆಲ್ಲವನ್ನೂ ಮಾಡುವ ಮೂಲಕ ಜನರ ಜೀವನವನ್ನು ಸುಧಾರಿಸಲು ಸಾಧ್ಯವಾಗಲಿದೆ. ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ಎಲಾನ್ ಮಸ್ಕ್ ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಒದಗಿಸಲು ಕೇಂದ್ರ ಸರಕಾರಕ್ಕೆ 2022ರಲ್ಲಿ ಅರ್ಜಿ ಸಲ್ಲಿಸಿದ್ದರು. ‌

Shashidhara K

2025ರ ಜೂನ್ 6 ರಂದು DOT (ಡಿಪಾರ್ಟ್‌ಮೆಂಟ್ ಆಫ್ ಟೆಲಿ ಕಮ್ಯುನಿಕೇಷನ್ಸ್) ಸ್ಟಾರ್ ಲಿಂಕ್‌ನ ಲೈಸೆ‌ನ್ಸ್‌ʼಗೆ ಭಾರತದಲ್ಲಿ ಕ್ಲಿಯರೆನ್ಸ್ ನೀಡಿತ್ತು. ಜುಲೈ 9ರಂದು ಇನ್ ಸ್ಪೇಸ್ (ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಆಂಡ್ ಆತರೈಸೇಷನ್ ಸೆಂಟರ್) ಸ್ಟಾರ್ ಲಿಂಕ್‌ನ ಪ್ರಾಯೋಗಿಕ ಬಳಕೆಗೆ ಅನುಮತಿ ನೀಡಿತ್ತು. ಅಕ್ಟೋಬರ್ 30-31ರಂದು ಮುಂಬೈನಲ್ಲಿ ಸ್ಪೇಸ್ ಎಕ್ಸ್ ಮೊದಲ ಟೆಕ್ನಿಕಲ್ ಮತ್ತು ಸೆಕ್ಯೂರಿಟಿ ಡೆಮೋ ಟ್ರಯಲ್ ನಡೆಸಿತ್ತು. ಆದರೆ ಪೂರ್ಣಾವಧಿಯ ಕಾರ್ಯಾ ಚರಣೆಗೆ ಇವರಿಗೆ ಇನ್ನೂ ಅನುಮತಿ ಲಭಿಸಿರಲಿಲ್ಲ.

ಕಳೆದ ಕೆಲವು ದಿನಗಳ ಹಿಂದೆ ಎಲಾನ್ ಮಸ್ಕ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಟ್ವೀಟ್ ಮಾಡಿ ‘ನಮ್ಮ ಸಂಸ್ಥೆ ಈಗಾಗಲೇ ಜಗತ್ತಿನ 165 ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ, ಆದರೆ ಭಾರತ ಸರಕಾರ ವಿಧಿಸಿದ ಎಲ್ಲ ನಿಯಮಗಳನ್ನು ಒಪ್ಪಿಕೊಂಡರೂ ನಮಗೆ ಅನುಮತಿ ಲಭಿಸುತ್ತಿಲ್ಲ. ಮುಕೇಶ್ ಅಂಬಾನಿ ಭಾರತದ ನಿಜವಾದ ಬಾಸ್ ಆಗಿದ್ದಾರೆಯೇ?’ ಎಂದು ಟ್ವೀಟ್ ಮಾಡಿದ್ದರು.

ಇಲ್ಲಿ ಎಲಾನ್ ಮಸ್ಕ್ ಅಂಬಾನಿ ಹೆಸರು ಬಳಸಲು ಕಾರಣವೇನೆಂದರೆ ಸ್ಟಾರ್ ಲಿಂಕ್ ಬಳಸುತ್ತಿರುವ ಸ್ಯಾಟ್ ಕಾಮ್ ಟೆಕ್ನಾಲಜಿಯು ರಿಲಯನ್ಸ್ ಜಿಯೋ ಬಳಿಯೂ ಇದೆ. ಸ್ಟಾರ್ ಲಿಂಕ್, ರಿಲಯನ್ಸ್ ಜಿಯೋ, ಭಾರತಿ ಏರ್‌ಟೆಲ್ ಈ ಕಂಪನಿಗಳಿಗೂ ಪ್ರಾಯೋಗಿಕ ಅನುಮತಿಯನ್ನು ಕೇಂದ್ರ ಸರಕಾರ ನೀಡಿದೆ.

ಎಲಾನ್ ಮಸ್ಕ್ ಟ್ವೀಟ್ ನೋಡಿ ಎಂಥವರಿಗೂ ಮಸ್ಕ್ ಮಾತು ನಿಜವೆನಿಸುತ್ತದೆ. ಆದರೆ ನಾವಿಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ಯಾವುದೋ ಒಂದು ವಿದೇಶಿ ಕಂಪನಿ ಭಾರತದಲ್ಲಿ ಇಂಟರ್‌ನೆಟ್ ಸಂಪರ್ಕ ನೀಡಬೇಕೆಂದರೆ, ಇಲ್ಲಿ ನಮ್ಮದೇ ಆದ ಕೆಲವು ನೀತಿ ನಿಯಮಗಳಿರುತ್ತವೆ. ಆ ಎಲ್ಲ ನಿಯಮಗಳಿಗೆ ಒಪ್ಪಿದರೆ ಮಾತ್ರ ವಿದೇಶಿ ಕಂಪನಿಗೆ ನೆಟ್‌ವರ್ಕ್ ಪ್ರೊವೈಡ್ ಮಾಡಲು ಅನುಮತಿ ಲಭಿಸುತ್ತದೆ. ಜತೆಗೆ ದೇಶದ ಭದ್ರತೆಯ ವಿಚಾರವು ಇಲ್ಲಿ ಪ್ರಮುಖವಾಗಿರುತ್ತದೆ. ‌

ಎಲಾನ್ ಮಸ್ಕ್ ನೇರವಾಗಿ ಆರೋಪಿಸುತ್ತಿರುವ ರಿಲಯನ್ಸ್ ಜಿಯೋ ಸಂಸ್ಥೆ ದೇಶದಲ್ಲಿ 1600 ಸ್ಯಾಟಲೈಟ್‌ಗಳು, 23 ಗ್ರೌಂಡ್ ಸ್ಟೇಷನ್‌ಗಳ ಮೂಲಕ ದೇಶದ ಮೂಲೆ ಮೂಲೆಗೂ ಇಂಟರ್‌ನೆಟ್ ಪೂರೈಸುವ ಪ್ರಾಜೆಕ್ಟ್ ಪ್ರಕಟಿಸುವ ಎರಡು ದಿನಗಳ ಮುಂಚೆ ಎಲಾನ್ ಮಸ್ಕ್ ಟ್ವೀಟ್ ಮಾಡುವ ಮೂಲಕ ತಮ್ಮ ಓವರ್ ಆಕ್ಷನ್ ಆರಂಭಿಸಿದರು. ‌

ಭಾರತಕ್ಕೆ ಸ್ಟಾರ್ ಲಿಂಕ್ ಅವಶ್ಯಕತೆ ಇದೆ ಎಂದು ಡೋಜ್ ಡಿಸೈನರ್ ಎಂಬ ಎಕ್ಸ್ ಅಕೌಂಟ್ ಪೋಸ್ಟ್ ಮಾಡಿದುದರ ಕುರಿತು ಎಲಾನ್ ಮಸ್ಕ್ ಸ್ಪಂದಿಸುವ ಮೂಲಕ ವಿವಾದ ಹುಟ್ಟು ಹಾಕಿದರು. ತಮ್ಮ ಟ್ವೀಟ್‌ಗೆ ಎಲಾನ್ ಮ‌ಸ್ಕ್‌ʼರ ಸ್ಪಂದನೆ ನೋಡಿದ ಡೋಜ್ ಡಿಸೈನರ್ ಎಂಬ ಬಿಟ್ ಕಾಯಿನ್ ಈಗ ಎಲಾನ್ ಮಸ್ಕ್ ಗೆ ಸಪೋರ್ಟ್ ಮಾಡುತ್ತಿದೆ. ಭಾರತದಲ್ಲಿ ಸ್ಟಾರ್ ಲಿಂಕ್‌ನಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಡಿಫೆನ್ಸ್‌ ಎಕ್ಸ್‌ಪರ್ಟ್‌ಗಳು ಕೇಂದ್ರ ಸರಕಾರಕ್ಕೆ ಎಚ್ಚರಿಸುತ್ತಿದ್ದಾರೆ.

ಭಯೋತ್ಪಾದಕರು, ಸ್ಮಗ್ಲರ್ ಗಳಿಗೆ ಮತ್ತು ದೇಶ ವಿರೋಧಿ ಶಕ್ತಿಗಳಿಗೆ ಸ್ಟಾರ್ ಲಿಂಕ್ ಮೂಲಕ ಸೆಕ್ಯೂರ್ ಕಮ್ಯುನಿಕೇಷನ್ ಲಭಿಸಿದರೆ ಭದ್ರತಾ ಪಡೆಗಳು ಇವರನ್ನು ಹಿಡಿಯಲು ಕಷ್ಟವಾಗುತ್ತದೆ. ಪೂರ್ಣ ಅನುಮತಿ ಸಿಗದಿರುವ ಮುಂಚೆಯೇ ಇಷ್ಟೊಂದು ಓವರ್ ಆಕ್ಷನ್ ಮಾಡುತ್ತಿರುವ ಮ ಎಲ್ಲ ರೀತಿಯ ಅನುಮತಿಗಳು ಲಭಿಸಿದರೆ ಭಾರತ ಸರಕಾರಕ್ಕೆ, ತನಿಖಾ ಸಂಸ್ಥೆಗಳಿಗೆ ಸಹಕಾರ ನೀಡುತ್ತಾ ರೆಯೇ ಎಂಬ ಗ್ಯಾರಂಟಿಯೇ ಇಲ್ಲ.

ಮಯನ್ಮಾರ್‌ಗೆ ಸೇರಿದ ಮಿಲಿಟೆಂಟ್ ಗ್ರೂಪ್ ಭಾರತದ ಗಡಿಗಳಲ್ಲಿ ಸ್ಟಾರ್ ಲಿಂಕ್ ಪರಿಕರ ಗಳೊಂದಿಗೆ ನಮ್ಮ ಭದ್ರತಾ ಪಡೆಗಳಿಗೆ ಸಿಕ್ಕಿಬಿದ್ದಾಗ, ಯೂಸರ್ ಪ್ರೈವಸಿ ಹೆಸರಲ್ಲಿ ಆ ಕನೆಕ್ಷನ್‌ಗೆ ಸಂಬಂಧಿಸಿದ ವಿವರಗಳನ್ನು ನೀಡಲು ಸ್ಟಾರ್ ಲಿಂಕ್ ಒಪ್ಪಿಕೊಳ್ಳಲಿಲ್ಲ. ಪೊಲಿಟಿಕಲ್ ಬ್ಲಾಕ್‌ ಮೇಲ್‌ನೊಂದಿಗೆ ತನ್ನ ವ್ಯಾಪಾರವನ್ನು ಹೆಚ್ಚಿಸುವುದು, ತನ್ನ ಏಕ ಚಕ್ರಾಧಿಪತ್ಯವನ್ನು ಉಳಿಸಿಕೊಳ್ಳುವುದು ಎಲಾನ್ ಮಸ್ಕ್‌ʼಗೆ ಹೊಸದೇನು ಅಲ್ಲ.

ಕ್ಯಾಲಿಪೋರ್ನಿಯಾದಲ್ಲಿ ಟೆಸ್ಲಾ ಕಾರು ಕಂಪನಿಗೆ ತೊಂದರೆ ನೀಡಿದ ಡೆಮಾಕ್ರೆಟಿಕ್ ಪಕ್ಷದ ಮೇಲಿನ ಕೋಪದಿಂದ ಡೊನಾಲ್ಡ್ ಟ್ರಂಪ್‌ನ್ನು ಗೆಲ್ಲಿಸಲು ಸಾವಿರಾರು ಕೋಟಿ ಡಾಲರ್‌ಗಳನ್ನು ಮಸ್ಕ್ ಖರ್ಚು ಮಾಡಿದರು. ಆದರೆ ಅಧಿಕಾರಕ್ಕೆ ಬಂದ ನಂತರ ಟ್ರಂಪ್ ಮಸ್ಕ್‌ʼಗೆ ದೊಡ್ಡ ಶಾಕ್ ನೀಡಿದರು. ಎಲೆಕ್ಟ್ರಿಕ್ ಕಾರುಗಳ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಿದ್ದರಿಂದ ಟೆಸ್ಲಾ ಕಾರುಗಳ ಮಾರಾಟದ ಮೇಲೆ ಪ್ರಭಾವ ಬೀರಿತು. ಇದರಿಂದ ಸಬ್ಸಿಡಿ ತೆಗೆದು ಹಾಕಲು ತಂದಂತಹ ಬಿಗ್ ಬ್ಯೂಟಿಫುಲ್ ಬಿಲ್ ಜತೆಗೆ ಟ್ರಂಪ್ ಕಾರ್ಯವೈಖರಿ ಮೇಲೆ ಮಸ್ಕ್ ತುಂಬಾ ಟೀಕೆಗಳನ್ನು ಮಾಡಿದರು. ಆದರೂ ಟ್ರಂಪ್ ತಲೆಬಾಗದ ಕಾರಣ ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ.

ಭಾರತದಲ್ಲಿ ಸ್ಟಾರ್ ಲಿಂಕ್‌ಗೆ ಅನುಮತಿ ಸಿಗುತ್ತಿಲ್ಲವೆಂದು ಮ ಇಷ್ಟೊಂದು ರಾದ್ಧಾಂತ ಮಾಡು ತ್ತಿದ್ದಾರೆ. ಆದರೆ ಚೀನಾದಲ್ಲಿ ಸ್ಟಾರ್ ಲಿಂಕ್, ಎಕ್ಸ್ ಜತೆಗೆ ಅಮೆರಿಕದ ಇಂಟರ್‌ನೆಟ್ ಕಂಪನಿಗಳಿಗೆ ಎಂಟ್ರಿ ಸಹ ನೀಡುವುದಿಲ್ಲ. ಆದರೆ ಚೀನಾದ ವಿರುದ್ಧ ಒಂದು ಮಾತನ್ನು ಆಡುವ ಧೈರ್ಯ ಎಲಾನ್ ಮಸ್ಕ್ ಮಾಡುವುದಿಲ್ಲ. ‌

ಏಕೆಂದರೆ ಟೆಸ್ಲಾ ಕಾರುಗಳಲ್ಲಿ ಅರ್ಧದಷ್ಟು ಕಾರುಗಳು ಚೀನಾದಲ್ಲಿಯೇ ಉತ್ಪತ್ತಿಯಾಗುತ್ತವೆ. ಜತೆಗೆ ಎಲೆಕ್ಟ್ರಿಕ್ ಕಾರುಗಳಿಗೆ ಬೇಕಾದ ಬಿಡಿ ಭಾಗಗಳು ಮತ್ತು ಕೆಮಿಕಲ್ಸ್ ಚೀನಾದಿಂದಲೇ ಬರಬೇಕಾಗಿದೆ. ಆದ್ದರಿಂದ ಎಲಾನ್ ಮ‌ಸ್ಕ್‌ʼಗೆ ಚೀನಾ ಡೋರ್ ಕ್ಲೋಸ್ ಆದರೂ ತುಟಿಕ್ ಪಿಟಿಕ್ ತಿನ್ನುತ್ತಿಲ್ಲ. ಮರ ಲಾಭಕೋರತನವನ್ನು ಅವರದೇ ದೇಶದ ಪಕ್ಷೇತರ ಸಂಸದ ಬರ್ನಿ ಸ್ಯಾಂಡರ್ಸ್ ಬಿಚ್ಚಿಟ್ಟಿದ್ದಾರೆ.

ಡೊನಾಲ್ಡ್ ಟ್ರಂಪ್ ರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಿಸಲು ಎಲಾನ್ ಮಸ್ಕ್ 290 ಮಿಲಿಯನ್ ಡಾಲರ್ ಖರ್ಚು ಮಾಡಿದರು. ಟ್ರಂಪ್ ಗೆದ್ದ ಬಳಿಕ ಮರವರ ಆಸ್ತಿ 696 ಬಿಲಿಯನ್ ಡಾಲರ್‌ಗೆ ಹೆಚ್ಚಳವಾಗಿದೆ. ಜತೆಗೆ ಜಗತ್ತಿನ ಟ್ರಿಲಿಯನೇರ್ ಆದರು. ಜತೆಗೆ ಮಸ್ಕ್ ಈಗ ರಿಪಬ್ಲಿಕನ್ ಕಂಟ್ರೋಲ್‌ಗೆ 366 ಮಿಲಿಯನ್ ಡಾಲರ್ ಖರ್ಚು ಮಾಡುತ್ತಿದ್ದಾರೆ.

ಅಮೆರಿಕದಲ್ಲಿ ನಿಜವಾಗಲೂ ಲಾಬಿಕೋರ ಉದ್ಯಮಿ ಎಂದರೆ ಅದು ಮಸ್ಕ್ ಎಂದಿದ್ದಾರೆ. ಜತೆಗೆ ಸ್ಟಾರ್ ಲಿಂಕ್‌ನ ಉಪಕರಣಗಳು ಸಹ ಅಷ್ಟೇ ದುಬಾರಿಯಾದವುಗಳಾಗಿವೆ. ಒನ್ ಟೈಮ್ ಹಾರ್ಡ್‌ ವೇರ್ ಕಿಟ್ (ಸ್ಯಾಟಲೈಟ್ ಡಿಶ್+ರೂಟರ್) ಭಾರತದ ಕರೆನ್ಸಿಯಲ್ಲಿ 33000-34000 ರು. ಆಗಿರುತ್ತದೆ. ಜತೆಗೆ ಮಾಸಿಕ ಚಂದಾದಾರಿಕೆ 3000-8600 ರು.ಗಳಾಗಿವೆ. ‌

ಒಟ್ಟಾರೆ ಎಲಾನ್ ಮಸ್ಕ್ ಭಾರತದ ಮಾರುಕಟ್ಟೆಯನ್ನು ಪ್ರವೇಶ ಮಾಡಲು ಎಷ್ಟೇ ಪ್ರಯತ್ನಿಸಿ ದರೂ ಇಲ್ಲಿನ ನೀತಿ ನಿಯಮಗಳಿಗೆ ಹಾಗೂ ಕಾನೂನುಗಳಿಗೆ ಬದ್ಧರಾಗುವವರೆಗೆ ಕೇಂದ್ರ ಸರಕಾರ ಅವರಿಗೆ ಸ್ಟಾರ್ ಲಿಂಕ್ ಕಾರ್ಯಾಚರಣೆಯ ಅಂತಿಮ ಅನುಮತಿ ನೀಡುವುದು ಕಷ್ಟ ಸಾಧ್ಯ.