ದ್ರಾವಿಡ ಕಾಳಗ
ರಾ.ರಾಮಾರಾಧ್ಯ, ಮೈಸೂರು
ಕಾಮರಾಜ್ ಕಾಲದ ಕಾಂಗ್ರೆಸ್ ಪ್ರಭಾವದಿಂದ ಡ್ರಾವಿಡ ಪಕ್ಷಗಳ ಉದಯದವರೆಗೆ ತಮಿಳುನಾಡು ರಾಜಕೀಯವು ಬದಲಾವಣೆಗಳನ್ನು ಕಂಡಿದೆ. ಕೆ.ಕಾಮರಾಜ್ ಅವರು ಬಲಿಷ್ಠ ನಾಯಕನಾಗಿದ್ದರು. ಅವರ ಆಡಳಿತ ಸಾಮರ್ಥ್ಯ ಮತ್ತು ಶಿಕ್ಷಣಾಭಿವೃದ್ಧಿಗೆ ಒತ್ತು ರಾಜ್ಯದಲ್ಲಿ ಹೊಸ ಮಾನದಂಡ ಗಳನ್ನು ಸ್ಥಾಪಿಸಿತು.
ಆದರೆ, 1967ರ ಚುನಾವಣೆಯೊಂದಿಗೆ ಕಾಂಗ್ರೆಸ್ ಆಳ್ವಿಕೆಗೆ ತೆರೆ ಬಿದ್ದು, ಡ್ರಾವಿಡ ಚಳವಳಿಯ ರಾಜಕೀಯ ಉದಯವಾಯಿತು. ಈ ಸಂದರ್ಭದಲ್ಲಿ ಸಿ.ಎನ್.ಅಣ್ಣಾದೊರೈ ಅವರ ಡಿಎಂಕೆ ಅಧಿಕಾರಕ್ಕೆ ಬಂದು ತಮಿಳುನಾಡಿನ ದಿಕ್ಕನ್ನು ಬದಲಿಸಿತು. ಸಾಮಾಜಿಕ ನ್ಯಾಯ, ಭಾಷಾ ಗೌರವ ಮತ್ತು ಪ್ರಾದೇಶಿಕ ಅಸ್ತಿತ್ವವನ್ನು ಒತ್ತಿ ಹೇಳಿದ ಡಿಎಂಕೆ ಜನಮನ ಗೆದ್ದಿತು. ಅಣ್ಣಾದೊರೈ ನಂತರ ಕರುಣಾನಿಧಿ ಪಕ್ಷವನ್ನು ಮುಂದುವರಿಸಿ ದೀರ್ಘಕಾಲ ಪ್ರಭಾವ ಬೀರಿದರು.
ಇದೇ ಸಮಯದಲ್ಲಿ ನಟ ಎಂ.ಜಿ.ರಾಮಚಂದ್ರನ್ ಡಿಎಂಕೆಯಿಂದ ಬೇರ್ಪಟ್ಟು ಎಐಡಿಎಂಕೆ ಸ್ಥಾಪಿಸಿದರು. ಮಧ್ಯಾಹ್ನದ ಬಿಸಿ ಊಟ ಯೋಜನೆ ಮತ್ತು ಇತರೆ ಕಾರ್ಯಕ್ರಮಗಳು ಅವರನ್ನು ತುತ್ತತುದಿ ಗೇರಿಸಿದವು. ಡಿಎಂಕೆ-ಎಐಎಡಿಎಂಕೆ ಎಂಬ ಪ್ರಮುಖ ಶಕ್ತಿಗಳ ನಡುವೆ ರಾಜಕೀಯ ಸ್ಪರ್ಧೆ ಆರಂಭವಾಯಿತು.
ಇದನ್ನೂ ಓದಿ: Shashidhara Halady Column: ಕಾಡು ಹಣ್ಣುಗಳ ಸವಿ ರುಚಿಯ ತಖ್ತೆ !
ಎಂಜಿಆರ್ ನಂತರ ಜೆ.ಜಯಲಲಿತಾ ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸಿ ಬಲಿಷ್ಠ ನಾಯಕಿ ಯಾಗಿ ಹೊಮ್ಮಿದರು. ಅವರ ಅಮ್ಮಾ ಕ್ಯಾಂಟೀನ್ ಪ್ರಸಿದ್ಧಿಯಾಗಿ ಜನಪ್ರಿಯರಾದರು. ಹಲವು ವರ್ಷಗಳ ಕಾಲ ತೀವ್ರ ರಾಜಕೀಯ ಪೈಪೋಟಿ ನಡೆಯಿತು. 2016ರಲ್ಲಿ ಜಯಲಲಿತಾ ಮತ್ತು 2018ರಲ್ಲಿ ಕರುಣಾನಿಧಿ ನಿಧನದ ನಂತರ ತಮಿಳುನಾಡಲ್ಲಿ ಹೊಸ ಹಂತ ಆರಂಭವಾಯಿತು.
ಎಂ.ಕೆ.ಸ್ಟಾಲಿನ್ ಡಿಎಂಕೆ ನಾಯಕತ್ವವನ್ನು ಸ್ವೀಕರಿಸಿ 2021ರಲ್ಲಿ ಅಧಿಕಾರಕ್ಕೆ ಬಂದರು. ಎಐಎಡಿಎಂಕೆಯಲ್ಲಿ ನಾಯಕತ್ವದ ಸಮಸ್ಯೆಗಳು ಕಾಣಿಸಿಕೊಂಡವು. ಇದೇ ವೇಳೆ, ಭಾರತೀಯ ಜನತಾ ಪಾರ್ಟಿ ತನ್ನ ನೆಲೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದು, ಚಿತ್ರರಂಗದ ಹೊಸ ಮುಖಗಳು ರಾಜಕೀಯ ಪ್ರವೇಶ ಮಾಡುತ್ತಿರುವುದು ಗಮನಾರ್ಹ. ಕಮಲ್ ಹಾಸನ್ ಹಾಗೂ ವಿಜಯ್ ಪರ್ಯಾಯ ರಾಜಕೀಯದ ಬಗ್ಗೆ ಯೋಚಿಸತೊಡಗಿದರು.
ಕಮಲ್ ವಿಫಲತೆ ಹೊಂದಿದರು. ರಜನಿಕಾಂತ್ ರಾಜಕೀಯ ಅಡಿಯಿಟ್ಟು ಕೆಲವೇ ದಿನದಲ್ಲಿ ಹಿಂದಡಿ ಇಟ್ಟು ತೆರೆಮರೆಗೆ ಸರಿದರು. ವಿಜಯಕಾಂತ್ ಅವರ ಪಕ್ಷ ಸಹ ಮುಗ್ಗರಿಸಿತು.ವಿಜಯ್ 2009ರಲ್ಲಿ ತಮ್ಮದೇ ಅಭಿಮಾನಿ ಸಂಘ ಸ್ಥಾಪನೆ ಮೂಲಕ ರಾಜಕೀಯಕ್ಕೆ ಅಡಿಯಿಟ್ಟರು. ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್ ಪ್ರವೇಶವಾಯಿತು. ದ್ರಾವಿಡ ಪಕ್ಷಗಳೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಸ್ಪರ್ಧೆ ಮಾಡಲಾಯಿತು.
ಪಕ್ಷಕ್ಕೆ ಕೆಲಹಂತದಿಂದ ಪದಾಧಿಕಾರಿಗಳನ್ನು ನೇಮಿಸಿ ಸಂಘಟನೆ ಮಾಡಲಾಯಿತು. ಕಾಮನ್ ಮ್ಯಾನ್ ರೂಪದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಯಿತು. ಈ ಎಲ್ಲ ಸ್ಟ್ರಾಟೆಜಿಗಳ ಪ್ರತಿಫಲವೇ ಟಿವಿಕೆ ಪಕ್ಷದ ಜಯಭೇರಿ. ಈ ಸಂದರ್ಭದಲ್ಲಿ ಪ್ರಣಾಳಿಕೆಯ ಕೆಲವು ಅಂಶಗಳ ಬಗ್ಗೆ ತುರ್ತು ತೀರ್ಮಾನ ಮಾಡಬೇಕಾದ ಅಗತ್ಯ ಇದೆ. ಮ್ಯಾಜಿಕ್ ನಂಬರ್ ತಲುಪುವ ಹಾದಿ ಸಹ ದುರ್ಗಮವಾಗಿದೆ.