ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Naveen Sagar Column: ಧರ್ಮವಿಲ್ಲದ ಭಯೋತ್ಪಾದನೆ ಮತ್ತು ಹರಾಮಿ ಹವಾಮಿ !

ಸ್ಮಿತ್ ಮಚ್ಚಾರ್‌ನ ಧೈರ್ಯ, ಸಾಹಸ ಮತ್ತು ಸಮಯಪ್ರಜ್ಞೆಯನ್ನು ಜಗತ್ತಿನ ಮುಕ್ಕಾಲು ಭಾಗ ಹೊಗಳು ತ್ತಿದೆ. ಖುದ್ದು ಕೆಲವು ಇಸ್ಲಾಮಿಕ್ ರಾಷ್ಟ್ರಗಳು, ಭಯೋತ್ಪಾದಕ ಕೃತ್ಯವನ್ನು ಖಂಡಿಸಿವೆ. ಆದರೆ ಭಾರತೀಯ ಸಿಕ್ಯುಲರ್‌ಗಳು, ಕಾಂಗ್ರೆಸ್ಸಿಗರು ಮಾತ್ರ ಭಯೋತ್ಪಾದಕನನ್ನು ಖಂಡಿಸುವ, ಸ್ಮಿತ್ ಮಚ್ಚಾರ್‌ನನ್ನು ಹೊಗಳುವ ಒಂದೇ ಒಂದು ಮಾತನ್ನೂ ಆಡಿಲ್ಲ.

ಪದಸಾಗರ

ಪ್ರತಿ ಉಗ್ರ ಕೃತ್ಯ ನಡೆದಾಗ ಪೊಳ್ಳು ಸೆಕ್ಯುಲರ್‌ಗಳ ಬಾಯಲ್ಲಿ ಬರುವ ಒಂದು ಮಾತು.. ಭಯೋತ್ಪಾದನೆಗೆ ಧರ್ಮ ಇಲ್ಲ! ಧರ್ಮ ಇಲ್ಲದ ಆ ಭಯೋತ್ಪಾದನೆ ಮತ್ತೊಮ್ಮೆ ಸದ್ದು ಮಾಡಿದೆ. ಧರ್ಮ ಇಲ್ಲದ ಆ ಹರಾಮಿ ಉಗ್ರನ ಹೆಸರು ಹಮಾಮ್ ಅಲ್ ಹಮಾಮಿ! ಅಂದ ಹಾಗೆ ಧರ್ಮ ಇಲ್ಲದ ಆತನನ್ನು ಹಾಗೂ ಆತನ ಹೆಸರನ್ನು ಎಕ್ಸ್‌ʼಪೋಸ್ ಮಾಡಿರುವುದು ಅದೇ ಧರ್ಮ ಇಲ್ಲದ ಅರಬ್ ಮಾಧ್ಯಮಗಳು.

ಅಧರ್ಮವನ್ನಷ್ಟೇ ಪಾಲಿಸುವ ಜನಾಂಗಕ್ಕೆ ಧರ್ಮ ಇರುವುದಿಲ್ಲ ಎಂಬುದು ಹಮಾಮಿಯ ಕೃತ್ಯದಿಂದ ಮತ್ತೊಮ್ಮೆ ‘ಸಾಬೀ’ತಾಗಿದೆ. ಕಳೆದ ವಾರ ಸ್ಮಿತ್ ಮಚ್ಚಾರ್ ಎಂಬ ಪೈಲಟ್ ಫ್ಲೈ ದುಬೈನ ವಿಮಾನವನ್ನು ಹಾಗೂ ಅದರ ಒಳಗಿದ್ದ ನೂರಾ ಎಪ್ಪತ್ತೈದು ಪ್ರಯಾಣಿಕರ ಪ್ರಾಣವನ್ನು ರಕ್ಷಣೆ ಮಾಡಿದಾಗ ಆತನ ಮೂಲ, ಆತನ ಧರ್ಮ, ಆತನ ಜಾತಿ, ರಾಷ್ಟ್ರೀಯತೆ ಯಾವುದರ ಬಗ್ಗೆಯೂ ಯೋಚನೆ ಹರಿಯಲಿಲ್ಲ.

ಆದರೆ ಸ್ಮಿತ್ ಮಚ್ಚಾರ್ ಮೇಲೆ ದಾಳಿ ಎಸಗಿದಾತ ಮಾತ್ರ ಕೊ-ಪೈಲಟ್ ಆಗಿರಲು ಸಾಧ್ಯವಿಲ್ಲ. ಕೊ-ಪೈಲಟ್ ವೇಷದಲ್ಲಿದ್ದ ಆ ಹೈಜಾಕರ್, ಉಗ್ರನಷ್ಟೇ ಆಗಿರಲು ಸಾಧ್ಯ ಎಂಬುದು ನಿಚ್ಚಳವಾಗಿತ್ತು. ಆತನ ಧರ್ಮ ಹುಡುಕುವ ಅಗತ್ಯ ಬರಲೇ ಇಲ್ಲ. ಅಂಗೈಹುಣ್ಣಿಗೆ ಕನ್ನಡಿ ಏಕೆ? ಆದರೆ ಭಾರತೀಯ ಮಾಧ್ಯಮಗಳು ಮತ್ತು ಸಿಕ್ಯುಲರ್‌ಗಳು ತಕ್ಷಣವೇ ತಿಪ್ಪೆ ಸಾರಿಸುವ ಕೆಲಸಕ್ಕೆ ಮುಂದಾಗಿ ಆಗಿತ್ತು. ಪೈಲಟ್ ಗಳ ನಡುವೆ ವೈಯಕ್ತಿಕ ಜಗಳ ಎಂಬ ಕಥೆ ಕಟ್ಟಿ ಸ್ಮಿತ್ ಮಚ್ಚಾರ್ ನನ್ನು ಅಪರಾಧಿ ಯಾಗಿಸುವ ಎಲ್ಲ ಹುನ್ನಾರಗಳೂ ಶುರುವಾಗಿತ್ತು. ಅದೇ ಸಮಯದಲ್ಲಿ ದಾಳಿಕೋರನ ಐಡೆಂಟಿಟಿಯನ್ನು ಮುಚ್ಚಿಡುವ ಕೆಲಸವೂ ಸಾಗಿತ್ತು.

ಇದನ್ನೂ ಓದಿ: Naveen Sagar Column: ಗಾಂಧಿಯ ಬ್ರಹ್ಮಚರ್ಯ ಪ್ರಯೋಗ ಪ್ರಶ್ನಾತೀತವೇ ?

ಫ್ಲೈ ದುಬೈ ಮತ್ತು ಅರಬ್ ದೇಶಕ್ಕೆ ತನ್ನ ಬ್ಯುಸಿನೆಸ್, ಘನತೆ ಮತ್ತು ಮರ್ಯಾದೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅದು ಅನಿವಾರ್ಯವಾಗಿತ್ತು. ತಪ್ಪಲ್ಲ. ಆದರೆ ಕೆಲವು ಭಾರತೀಯ ಮಾಧ್ಯಮಗಳಿಗ್ಯಾವ ಅನಿವಾರ್ಯವಿತ್ತು? ನಮ್ಮ ದೇಶದ ಸಿಕ್ಯುಲರ್‌ಗಳಿಗ್ಯಾವ ಅನಿವಾರ್ಯವಿತ್ತು? ಒಂದು ವೇಳೆ ಸ್ಮಿತ್ ಮಚ್ಚಾರ್, ವಿಮಾನ ಕ್ರ್ಯಾಶ್ ಆಗುವುದನ್ನು ತಪ್ಪಿಸಲಾಗದೇ ಪ್ರಯಾಣಿಕರ ಸಾವಿಗೆ ಕಾರಣನಾಗಿದ್ದಿದ್ದರೆ, ತಾನೂ ಪ್ರಾಣ ಕಳೆದುಕೊಂಡಿದ್ದಿದ್ದರೆ ಇಷ್ಟು ಹೊತ್ತಿಗೆ ಎಂಥೆಂಥ ಕಥೆಗಳು ಬಂದಿರುತ್ತಿದ್ದವು? ಯಾರ ತಲೆಗೆ ಆ ದುರಂತವನ್ನು ಕಟ್ಟಲಾಗುತ್ತಿತ್ತು? ಊಹಿಸಲಾಗದ ವಿಷಯವೇನಲ್ಲ.

ಸ್ಮಿತ್ ಮಚ್ಚಾರ್‌ನ ಧೈರ್ಯ, ಸಾಹಸ ಮತ್ತು ಸಮಯಪ್ರಜ್ಞೆಯನ್ನು ಜಗತ್ತಿನ ಮುಕ್ಕಾಲು ಭಾಗ ಹೊಗಳುತ್ತಿದೆ. ಖುದ್ದು ಕೆಲವು ಇಸ್ಲಾಮಿಕ್ ರಾಷ್ಟ್ರಗಳು, ಭಯೋತ್ಪಾದಕ ಕೃತ್ಯವನ್ನು ಖಂಡಿಸಿವೆ. ಆದರೆ ಭಾರತೀಯ ಸಿಕ್ಯುಲರ್‌ಗಳು, ಕಾಂಗ್ರೆಸ್ಸಿಗರು ಮಾತ್ರ ಭಯೋತ್ಪಾದಕನನ್ನು ಖಂಡಿಸುವ, ಸ್ಮಿತ್ ಮಚ್ಚಾರ್‌ನನ್ನು ಹೊಗಳುವ ಒಂದೇ ಒಂದು ಮಾತನ್ನೂ ಆಡಿಲ್ಲ.

ಇಸ್ರೇಲ್ ಪ್ಯಾಲೆಸ್ಟೀನ್ ವಿರುದ್ಧ ಪ್ರತಿ ದಾಳಿ ಮಾಡಿದಾಗ, ಆಲ್ ಐಸ್ ಆನ್ ರಾಫಾ ಎಂದು ಟ್ರೆಂಡ್ ಮಾಡಿದ್ದ ಭಾರತೀಯ ಜಾತ್ಯತೀತರು ಎಲ್ಲಿ ಅಡಗಿದ್ದಾರೆ ಈಗ? ಎಲ್ಲಿದೆ ಅವರ ಕಣ್ಣುಗಳು? ಬಾಲಾಕೋಟ್ ಸ್ಟ್ರೈಕ್, ಆಪರೇಶನ್ ಸಿಂದೂರ್ ಎಲ್ಲವೂ ನಾಟಕ ಎಂಬ ನೆರೇಟಿವ್ ಸೃಷ್ಟಿಸಲು ಪ್ರಯತ್ನಿಸಿದ ಮಂದಿಯೇ ಈಗ ಫ್ಲೈ ದುಬೈ ಪ್ರಕರಣವನ್ನು ನೆತಾನ್ಯಾಹು ಮಾಡುತ್ತಿರುವ ಎಲೆಕ್ಷನ್ ಗಿಮಿಕ್ ಎಂಬ ನೆರೇಟಿವ್ ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ. ಇವರ ಕಣ್ಣಿಗೆ ಇಸ್ರೇಲ್ ಭಾರತ ದಂತೆಯೂ, ನೆತಾನ್ಯಾಹು ಮೋದಿ ಯಂತೆಯೂ, ಇಸ್ರೇಲಿನ ಯಹೂದಿಗಳು ಭಾರತದ ಬಲಪಂಥೀಯ ಹಿಂದೂಗಳಂತೆಯೂ ಕಾಣುತ್ತಿರು ವುದೇ ದಿವ್ಯಮೌನಕ್ಕೆ ಹಾಗೂ ಹೊಸ ನೆರೇಟಿವ್ ಸೃಷ್ಟಿಗೆ ಕಾರಣವಾಗಿದೆ.

62 2

ಇಸ್ರೇಲ್ ಪ್ರಧಾನಿ ನೆತಾನ್ಯಾಹು ಈಗಾಗಲೇ ಸ್ಮಿತ್ ಮಚ್ಚಾರ್ ನಿಂದ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದಿದ್ದಾಗಿದೆ. ಇದನ್ನು ಮುಚ್ಚಿ ಹಾಕಲು ಲೆಫ್ಟ್ ಮೀಡಿಯಾ ಮಾಡಿದ ಎಲ್ಲ ಪ್ರಯತ್ನ ಗಳೂ ವಿಫಲವಾಗಿವೆ. ಅಹಮದಾಬಾದ್ ವಿಮಾನ ದುರಂತಕ್ಕೂ ಫ್ಲೈ ದುಬೈ ಪ್ರಕರಣಕ್ಕೂ ವ್ಯತ್ಯಾಸ ಇರುವುದೇ ಇಲ್ಲಿ.

ಮೂಲಭೂತವಾದ ಹೊಂದಿರದ ಮುಸ್ಲಿಂ ದೇಶಗಳೇ ಇಲ್ಲಿ ಮುಂದೆ ನಿಂತು ಪ್ರಕರಣದತ್ತ ಬೆಳಕು ಚೆಲ್ಲುತ್ತಿರುವುದು ಬಹಳ ವಿಶೇಷ. ಯೆಸ್. ಇಲ್ಲಿ ಮುಸ್ಲಿಂ ದೇಶಗಳ ನಡೆ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಮುಖ್ಯವಾಗಿ ಇಲ್ಲಿ ಅಚ್ಚರಿ ಹುಟ್ಟಿಸಿರೋದು ಅರಬ್‌ನ ಮಾಧ್ಯಮಗಳು. ಫ್ಲೈ ದುಬೈನಲ್ಲಿ ಸ್ಮಿತ್ ಮಚ್ಚಾರ್ ಮೇಲೆ ದಾಳಿ ಎಸಗಿದ ದಾಳಿಕೋರನ ಬಗ್ಗೆ ಮೊದಲು ಮಾಹಿತಿ ಹೊರ ಗೆಡವಿದ್ದೇ ಅರಬ್ ಪತ್ರಿಕೆ.

ಪತ್ರಿಕೆಯ ಹೆಸರು ಅಲ್ ಮಜಲ್ಲ! ಸೌದಿ ಅರೇಬಿಯಾ ಮೂಲದ ಈ ಪತ್ರಿಕೆ ಸುದ್ದಿ ಸ್ಫೋಟ ಮಾಡಿದ ನಂತರ ಅಲ್ಲಿನ ಇತರ ಮಾಧ್ಯಮಗಳು ನಿರ್ಭಿಡೆಯಿಂದ ಈ ಸುದ್ದಿಯನ್ನು ವಿವರವಾಗಿ ಪ್ರಕಟಿಸುತ್ತಿವೆ. ಭಾರತೀಯ ಮಾಧ್ಯಮಗಳಂತೆ ಅಲ್ಲಿನ ಮಾಧ್ಯಮಗಳು ಈ ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿಲ್ಲ.

ತಮ್ಮ ಧರ್ಮದವನನ್ನು ರಕ್ಷಿಸುವ ಕೆಲಸ ಅರಬ್ ಮಾಧ್ಯಮಗಳು ಮಾಡ್ತಾ ಇಲ್ಲ ಎಂಬುದು ಅಚ್ಚರಿಯ ವಿಷಯ ಅನಿಸಿದರೂ, ಇದರ ಹಿಂದೆ ರಾಜತಾಂತ್ರಿಕ ಮತ್ತು ವ್ಯಾವಹಾರಿಕ ಕಾರಣಗಳಿವೆ ಎಂಬುದು ಸುಸ್ಪಷ್ಟ. ಆದರೆ ಅದಕ್ಕಿಂತ ಹೆಚ್ಚಾಗಿ ಯುಎಇ ಇಸ್ಲಾಂ ಮೂಲಭೂತವಾದವನ್ನು ಎಂದಿಗೂ ಬೆಂಬಲಿಸಿಲ್ಲ. ಉಗ್ರವಾದಕ್ಕೆ ಕುಮ್ಮಕ್ಕು ಕೊಟ್ಟಿಲ್ಲ. ಪಾಕಿಸ್ತಾನದಂಥ ದೇಶಗಳನ್ನು ಯಾವತ್ತಿಗೂ ಎಲ್ಲಿಡಬೇಕೋ ಅಲ್ಲಿಯೇ ಇಟ್ಟಿದೆ.

ಅರಬ್ ಮಾಧ್ಯಮಗಳೂ ಈ ಪ್ರಕರಣದಲ್ಲಿ ನೆರೇಟಿವ್ ಬಿಲ್ಡ್ ಮಾಡುವ ಕೆಲಸಕ್ಕೆ ಕೈ ಹಾಕದೇ ಪ್ರಕರಣ ವನ್ನು ದಿಕ್ಕುತಪ್ಪಿಸದೇ ಸತ್ಯವನ್ನು ಯಥಾವತ್ತಾಗಿ ಪ್ರಕಟಿಸುತ್ತಿರುವುದು ಸ್ವಾಗತಾರ್ಹ ವಿಚಾರ. ಭಾರತ ಇದರಿಂದ ಕಲಿಯುವುದಿದೆ. ಹಮಾಮ್ ಅಲ್ ಹಮಾಮಿ ಬಗ್ಗೆ ಭಾರತೀಯ ಮಾಧ್ಯಮಗಳು ಮಾತಾಡದ ಸತ್ಯವನ್ನು ಅಲ್ಲಿನ ಮಾಧ್ಯಮಗಳು ಮಾತನಾಡಿವೆ. ‌

ಹೌದು. ಹಮಾಮಿ ಹುಟ್ಟಿದ್ದು ಬೆಳೆದಿದ್ದು ಎಲ್ಲ ಒಮಾನ್‌ನ. ಆತನಿಗೆ ಈಗಿನ್ನೂ 29 ವರ್ಷ. ತನ್ನ 21ನೆಯ ವರ್ಷಕ್ಕೆ ಒಮಾನ್ ಏವಿಯೇಶನ್ ಸೇರಿಕೊಂಡಿದ್ದ. 2018ರಲ್ಲಿ ಒಮಾನ್ ಏವಿಯೇಶನ್ ಸೇರುವ ಆತ 2020ರಿಂದ 2023ರ ವರೆಗೆ ಯುಕೆಯಲ್ಲಿ ವಿಮಾನಯಾನದ ಬಗ್ಗೆ ಅಧ್ಯಯನ ಮಾಡಿ ಪದವಿ ಪಡೆದುಕೊಂಡಿದ್ದ.

2022ರಲ್ಲಿ ಒಮಾನ್ ಏವಿಯೇಶನ್ ನಲ್ಲಿ ಫ್ಲೈ ಆಫೀಸರ್ ಆಗಿ ಕೆಲಸ ಆರಂಭಿಸಿದ್ದ. ಕೋ ಪೈಲಟ್ ಆಗಿಯೂ ನೇಮಕಗೊಂಡಿದ್ದ. ಆದರೆ ಎರಡೇ ವರ್ಷಗಳಲ್ಲಿ ಈತನ ನಡವಳಿಕೆ ಬಗ್ಗೆ ಸಂಸ್ಥೆಗೆ ಅನುಮಾನ ಶುರುವಾಗಿತ್ತು. ಆತನ ಮೂಲಭೂತವಾದ ಮತ್ತು ಉಗ್ರಮನಸ್ಥಿತಿ ಬಗ್ಗೆ ಸಣ್ಣ ಗುಮಾನಿ ಹುಟ್ಟಿಕೊಂಡಿತ್ತು. ಹೀಗಾಗಿ 2024ರಲ್ಲಿ ಆತನನ್ನು ಕೊ ಪೈಲಟ್ ಹುದ್ದೆಯಿಂದ ಇಳಿಸಿ ಅಡ್ಮಿನ್ ವಿಭಾಗಕ್ಕೆ ಕಳಿಸಲಾಗಿತ್ತು.

ಅಷ್ಟೇ ಅಲ್ಲ ಆತನ ಮೇಲೊಂದು ಕಣ್ಗಾವಲು ಇಡಲಾಗಿತ್ತು. ಈ ವಿಷಯ ಹಮಾಮಿ ಗ್ರಹಿಸಿದ್ದ. ಆದ್ದರಿಂದಲೇ 2025ರ ಫೆಬ್ರವರಿಯಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಬಿದ್ದ. ಭಯದಿಂದ ಅಲ್ಲ. ಮುಂದಾಲೋಚನೆಯಿಂದ! ಒಂದು ವೇಳೆ ಒಮಾನ್ ಏವಿಯೇಶನ್ ತನ್ನ ಮೇಲೆ ತನಿಖೆ ನಡೆಸಿ ತಾನು ಸಿಕ್ಕಿಬಿದ್ದು, ತನ್ನ ಮೂಲಭೂತವಾದ, ಭಯೋತ್ಪಾದಕ ಮನಸ್ಥಿತಿ ಎಲ್ಲ ಗೊತ್ತಾಗಿ ಬಿಟ್ಟರೆ, ತಾನು ಬ್ಲ್ಯಾಕ್ ಲಿಫ್ಟ್ ಆಗಿಬಿಡ್ತೀನಿ, ಭವಿಷ್ಯದಲ್ಲಿ ಯಾವ ವಿಮಾನದ ಕಾಕ್‌ಪಿಟ್ ನೊಳಗೂ ಕಾಲಿಡಲು ಸಾಧ್ಯವಾಗುವು ದಿಲ್ಲ ಎಂಬುದನ್ನು ಗ್ರಹಿಸಿ ರಾಜೀನಾಮೆ ಕೊಟ್ಟಿದ್ದ. ‌ಅಲ್ಲಿಂದ ಹಮಾಮಿ ಸೇರಿಕೊಳ್ಳೋದು ಮೊರಾಕೊ ಸರಕಾರದ ರಾಯಲ್ ಏರ್ ಮೊರಾಕ್ಕೋ!

ಫ್ಲೈ ಆಫೀಸರ್ ಆಗಿ ಸೇರುವ ಈತ ಏಳೇ ತಿಂಗಳಲ್ಲಿ ಅಲ್ಲಿಂದ ಹಾರಿ ಫ್ಲೈ ದುಬೈ ಸೇರಿಕೊಂಡ. 2026 ಫೆಬ್ರವರಿ ಯಲ್ಲಿ ಈತ ಫ್ಲೈ ದುಬೈ ಸೇರಿಕೊಂಡಿದ್ದು. ಫ್ಲೈ ದುಬೈ ಸೇರಲು ಅವನಿಗೆ ಕಾರಣವಿತ್ತು. ಇಸ್ರೇಲ್ ಆತನ ಟಾರ್ಗೆಟ್ ಆಗಿತ್ತು. ಫ್ಲೈ ದುಬೈ ವಿಮಾನದ ಕಾಕ್‌ಪಿಟ್ ಪ್ರವೇಶ ಸಿಕ್ಕರೆ ಯಹೂದಿ ಗಳ ಮೇಲೆ ಸೇಡು ತೀರಿಸಿಕೊಳ್ಳಬಹುದು ಎಂದು ಆತ ನಂಬಿದ್ದ.

ಹೌದು. ಯುಎಇ ಮತ್ತು ಇಸ್ರೇಲ್ ನಡುವೆ ನೇರ ವಿಮಾನಯಾನ ಸಂಪರ್ಕ ಇದೆ. ಇಬ್ಬರ ನಡುವಿನ ರಾಜತಾಂತ್ರಿಕ ಸಂಬಂಧ ತುಂಬಾ ಚೆನ್ನಾಗಿದೆ. ಇಸ್ರೇಲಿಗರು ದೊಡ್ಡ ಸಂಖ್ಯೆಯಲ್ಲಿ ದುಬೈ, ಶಾರ್ಜಾ, ಅಬುಧಾಬಿ ನಗರಗಳಿಗೆ ಬರ್ತಾರೆ. ಇದು ಹಮಾಮಿಯ ಪ್ಲ್ಯಾನ್‌ಗೆ ಪೂರಕವಾಗಿತ್ತು. ಸೆಪ್ಟೆಂಬರ್ 30 ಹಮಾಮಿ ಕಾಯುತ್ತಿದ್ದ ದಿನ ಕೂಡಿ ಬಂದಂತಾಗಿತ್ತು.

ಹಿಂದೂ ಪೈಲಟ್, ಯಹೂದಿ ಪ್ಯಾಸೆಂಜರ್ ಗಳಿಂದ ತುಂಬಿದ್ದ ವಿಮಾನ ಅವನ ಟಾರ್ಗೆಟ್‌ಗೆ ಹೇಳಿ ಮಾಡಿಸಿದಂತಿತ್ತು. ವಿಮಾನವನ್ನು ತನ್ನ ಹಿಡಿತಕ್ಕೆ ಪಡೆಯಲು ಇದಕ್ಕಿಂತ ಸುಸಂದರ್ಭ ಬರಲಿಕ್ಕಿಲ್ಲ ಅನಿಸಿದ್ದಿರಬಹುದಾ? ಅವನ ಉದ್ದೇಶ ಕ್ರ್ಯಾಶ್ ಮಾಡುವುದಾಗಿತ್ತೋ ಅಥವಾ ಹೈಜಾಕ್ ಮಾಡುವು ದಾಗಿತ್ತೋ? ಗೊತ್ತಿಲ್ಲ.

ತನ್ನ ಜೀವ ಕೊಡಲೂ ಸಿದ್ಧನಾಗಿಯೇ ಆತ ಸ್ಮಿತ್ ಮಚ್ಚಾರ್ ಮೇಲೆ ದಾಳಿ ಎಸಗಿರುತ್ತಾನೆ ಎಂಬು ದಂತೂ ಸತ್ಯ. ಅಂದಹಾಗೆ.. ಇದು ಊಹಾಪೋಹವಲ್ಲ. ಇದಿಷ್ಟೂ ಅಲ್ ಮಜಲ್ ಪತ್ರಿಕೆಯ ತನಿಖಾವರದಿಯ ಭಾಗ. ಅಂದು ಕಾಕ್‌ಪಿಟ್ ಒಳಗೆ ನಡೆದದ್ದೇನು? ಈ ವಿಷಯ ಚರ್ಚೆಗೇ ಬಂದಿ ರಲಿಲ್ಲ. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಮಾಮ್ ಅಲ್ ಹಮಾಮಿ ದಾಳಿ ಮಾಡ್ತಾನೆ, ಆಗ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಕಾಕ್‌ಪಿಟ್‌ನ ಡೋರ್ ತೆಗೀತಾರೆ, ಪ್ರಯಾಣಿಕರು ಬಂದು ವಿಮಾನ ವನ್ನು ರಕ್ಷಿಸುತ್ತಾರೆ.

ಇದಿಷ್ಟೇ ನಮಗೆ ಗೊತ್ತಿದ್ದದ್ದು. ಅಸಲಿಗೆ ಅಲ್ಲಿ ನಡೆದ ಪೂರ್ತಿ ದೃಶ್ಯಾವಳಿಯನ್ನು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ನೆತಾನ್ಯಾಹುಗೆ ವಿವರಿಸಿದ್ದಾನೆ. ಆತ ಕೇವಲ ಚಾಕುವಿನಿಂದ ಚುಚ್ಚಿದ್ದಲ್ಲ. ಅದೊಂದು ಭೀಕರ ದಾಳಿ. ಹೌದು. ವಿಮಾನ ಹಾರುತ್ತಿದ್ದಾಗ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಪೈಲಟ್ ಸೀಟಿನಲ್ಲಿ ಕೂತಿರುತ್ತಾನೆ.

ಹೀಗೊಂದು ದಾಳಿ ಆದೀತೆಂಬ ಸಣ್ಣ ಅನುಮಾನವೂ ಕೂಡ ಇರೋದಿಲ್ಲ. ಆಗ ಪಕ್ಕದ ಇದ್ದ ಕೊ ಪೈಲಟ್ ಹಮಾಮ್ ಅಲ್ ಹಮಾಮಿ, ತಾನು ನಮಾಜ್ ಮಾಡಬೇಕು ಅಂತ ಹೇಳುತ್ತಾನೆ. ಸ್ಮಿತ್ ಮಚ್ಚಾರ್ ಓಕೆ ಎಂದು ಹೇಳಿ, ತನ್ನ ಪಾಡಿಗೆ ವಿಮಾನದ ಚಾಲನೆಯಲ್ಲಿ ತೊಡಗುತ್ತಾನೆ. ಸ್ಮಿತ್ ಮಚ್ಚಾರ್ ಕೂತಿರುವ ಪೈಲಟ್ ಸೀಟ್‌ನ ಹಿಂಭಾಗದಲ್ಲಿ ಈ ಹಮಾಮಿ, ನಮಾಜ್ ಮಾಡಲು ಶುರುಮಾಡುತ್ತಾನೆ. ಇದ್ದಕ್ಕಿದ್ದಂತೆ ಸ್ಮಿತ್ ಮಚ್ಚಾರ್‌ಗೆ ಒಂದು ಏಟು ಬಿದ್ದಂತಾಗುತ್ತದೆ. ಆ ಭಾರೀ ಏಟನ್ನು ಸ್ಮಿತ್ ಮಚ್ಚಾರ್‌ಗೆ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ವಿಮಾನ ಕ್ರ್ಯಾಶ್ ಆಗ್ತಾ ಇದೆಯಾ ಅಂತ ಯೋಚಿಸೋ ಹೊತ್ತಿಗೆ ಕಣ್ಣುಗಳು ಮಂಜಾಗುತ್ತವೆ. ನಮಾಜ್ ಮಾಡುತ್ತಿರುವ ಹಮಾಮ್ ಅಲ್ ಹಮಾಮಿಯೇ ಹೊಡೆದದ್ದು ಎಂದು ಗೊತ್ತಾಗುತ್ತದೆ. ಅದಾಗಲೇ ಸ್ಮಿತ್ ಮಚ್ಚಾರ್‌ಗೆ ಗಂಭೀರ ಗಾಯಗಳಾಗಿರುತ್ತದೆ. ಆದರೂ ಹಮಾಮಿಯನ್ನು ತಳ್ಳಿ ಕಾಕ್ ಪಿಟ್ ಡೋರ್ ತೆಗೆಯುತ್ತಾನೆ. ಆದರೆ ಸ್ಮಿತ್ ಬಾಗಿಲು ತೆಗೆದಂತೆಲ್ಲ ಹಮಾಮ್ ವಾಪಸ್ ಲಾಕ್ ಮಾಡುತ್ತಾನೆ.

ಸ್ಮಿತ್ ನೆಲಕ್ಕೆ ಬೀಳುತ್ತಿದ್ದಂತೆಯೇ ವಿಮಾನದ ಕಂಟ್ರೋಲ್ ಪಡೆಯಲು ಹಮಾಮ್ ಯತ್ನಿಸುತ್ತಾನೆ. ಆಗ ಕೊನೆಯ ಪ್ರಯತ್ನ ಎಂಬಂತೆ ಬಾಗಿಲು ತೆರೆಯುತ್ತಾನೆ ಸ್ಮಿತ್. ಪ್ರಯಾಣಿಕರು ದೌಡಾಯಿಸಿ ಬರುತ್ತಾರೆ. ಹಮಾಮಿಯನ್ನು ಎಳೆದುಹಾಕಿ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ಪಡೆಯುತ್ತಾರೆ. ಸೇಫ್ ಲ್ಯಾಂಡಿಂಗ್ ಕೂಡ ಮಾಡುತ್ತಾರೆ. ವಿಮಾನ ತುರ್ತು ಭೂಸ್ಪರ್ಶವಾಗುತ್ತದೆ. ಪ್ರಾಣಾಪಾಯ ಲೆಕ್ಕಿಸದೆ ಮಾಡಿದ ಸ್ಮಿತ್‌ನ ಸಾಹಸದಿಂದ ದೊಡ್ಡ ಅಪಘಾತವೊಂದು ತಪ್ಪಿಹೋಯಿತು. ಆದರೆ ಈ ವಿಮಾನ ದುರಂತ ಸಂಭವಿಸಿ ಇದ್ದವರೆಲ್ಲರೂ ಸತ್ತು ಹೋಗಿದ್ದರೆ ಸ್ಮಿತ್ ಮೇಲೆ ಆರೋಪ ಬಾರದೇ ಇರುತ್ತಿತ್ತಾ? ಭಾರತದ ಪೈಲಟ್ ಅಂತಲೇ ದೊಡ್ಡ ಸುದ್ದಿ ಮಾಡುತ್ತಿದ್ದವು ಕೆಲ ಮಾಧ್ಯಮಗಳು. ಇಂದು ಯಾವ ಸ್ಮಿತ್‌ನನ್ನು ಇಡೀ ವಿಶ್ವ ಹೀರೋ ಅಂತ ಹೇಳುತ್ತಿದೆಯೋ, ಅದೇ ಸ್ಮಿತ್ ವಿಲನ್ ಆಗುವ ಸಾಧ್ಯತೆಯೂ ಇತ್ತು. ‌

ಸ್ಮಿತ್ ವಿಮಾನವನ್ನು ಕಾಪಾಡಿ ಅಪವಾದ ಮುಕ್ತನಾದ. ಯುಎಇ ಸರಕಾರ ಇದೊಂದು ಉಗ್ರ ಕೃತ್ಯ ಅನ್ನೋದನ್ನು ಒಪ್ಪಿಕೊಳ್ಳುವ ಮೂಲಕ ಇಡೀ ಜಗತ್ತಿನ ಮುಸಲ್ಮಾನ ದೇಶಗಳ ಕಪಾಳಕ್ಕೆ ಬಾರಿಸಿದೆ. ಸಿಕ್ಯುಲರ್‌ಗಳಿಗೂ ಸಂದೇಶ ರವಾನಿಸಿದೆ. ಯುಎಇ ಒಂದುವೇಳೆ ಉಗ್ರನನ್ನು ಬಚಾವ್ ಮಾಡಲು ಹೋಗಿದ್ದರೆ, ಹತ್ತಾರು ಉಗ್ರರು ಹುಟ್ಟಿಕೊಳ್ಳಲು ತಾನೇ ಕಾರಣವಾಗುತ್ತಿತ್ತು. ಅಷ್ಟೇ ಅಲ್ಲ.

ಭಯೋತ್ಪಾದನೆಯ ಹೊಸ ಫಾರ್ಮುಲಾವೊಂದು ಸೃಷ್ಟಿಯಾಗುತ್ತಿತ್ತು. ನಿಜ, ಇಲ್ಲಿಯತನಕ ಯಾವ ಉಗ್ರವಾದಿಗಳೂ ಕಾಕ್‌ಪಿಟ್ ಹೊಕ್ಕು ಭಯೋತ್ಪಾದನೆ ಮಾಡಿರಲಿಲ್ಲ. ಕಂದಹಾರ್ ಪ್ರಕರಣದಂತೆ ಹೈಜಾಕ್ ಮಾಡಲಾಗುತ್ತಿತ್ತು. ಆದರೆ ಈಗ ಉಗ್ರವಾದ ನೇರ ವಿಮಾನದ ಕಾಕ್‌ಪಿಟ್ ಹೊಕ್ಕಿದೆ. ತನ್ನ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ದ ಪೈಲಟ್ ಉಗ್ರಗಾಮಿ ಅನ್ನುವುದನ್ನು ಊಹಿಸೋಕೂ ಅಸಾಧ್ಯ.

ಇಡೀ ಅರಬ್ ಜಗತ್ತು ಬಹಳ ಸೀರಿಯಸ್ ಆಗಿ ಇದನ್ನು ಪರಿಗಣಿಸಿದೆ. ಅರಬ್ ದೇಶದ ಏವಿಯೇಷನ್ ಕಂಪನಿಗಳು ಬಹುಕೋಟಿಯ ಆದಾಯ ಪಡೆಯುತ್ತಿರೋದು ವಿಮಾನ ಕಂಪನಿಗಳಿಂದಲೇ. ವಿಮಾನ ಕಂಪನಿಗಳಿಗೆ ಕಳಂಕ ಬಂದರೆ ಮರುದಿನದಿಂದಲೇ ವ್ಯಾಪಾರ ನಿಂತು ಹೋಗುತ್ತದೆ.

ಏಕೆಂದರೆ ವಿಮಾನಗಳು ಕೇವಲ ಮುಸ್ಲಿಮರು ಓಡಾಡುವ ಖಾಸಗಿ ವಾಹನ ಅಲ್ಲ. ಸರ್ವಧರ್ಮ ದವರೂ ಅದರಲ್ಲಿ ಓಡಾಡುತ್ತಾರೆ. ನಮ್ಮ ಸಿಕ್ಯುಲರ್‌ಗಳು ಮತ್ತು ಎಡಮಾಧ್ಯಮಗಳು ಸ್ಮಿತ್ ಮಚ್ಚಾರ್‌ನನ್ನು ಹೊಗಳದಿರಲು ಕಾರಣ, ಆತ ಹಿಂದೂ ಆಗಿರುವುದು, ಹನುಮಾನ್ ಚಾಲೀಸ ಪಠಿಸಿರುವುದು, ಮೋದಿಯೊಂದಿಗೆ ಮಾತನಾಡಿರುವುದು. ಅದೇ ರೀತಿ, ಒಮಾನಿ ಪೈಲಟ್ ಹೆಸರನ್ನು ಬರೆಯದೇ ಆತನ ರಕ್ಷಣೆಗೆ ಕೈ ಜೋಡಿಸಿರೋದಕ್ಕೆ ಕಾರಣ ಆ ಧರ್ಮೀಯರನ್ನು ಓಲೈಸುವ ಕೆಟ್ಟ ಚಟ. ಆದರೆ ಈ ಚಟ ಅವರ ಜೀವಗಳಿಗೆ ಮುಳುವಾಗಬಹುದು ಎಂದು ಗೊತ್ತಿಲ್ಲ. ಅಲ್ಲಿಯವರೆಗೆ ಓಲೈಕೆ ಮುಂದುವರಿಯಲಿ.

ನವೀನ್‌ ಸಾಗರ್‌

View all posts by this author