Vishweshwar Bhat Column: ನನ್ನ ಜೀವನದ ದೊಡ್ಡ ರೋಲ್ ಮಾಡೆಲ್ ಅಂದ್ರೆ ಜಿರಳೆ !
ಜಗತ್ತಿನಲ್ಲಿ ಎಲ್ಲ ಪ್ರಾಣಿಗಳನ್ನೂ ಇಷ್ಟಪಡುವವರಿದ್ದಾರೆ. ಚೇಳು, ಮೊಸಳೆ, ಹಾವು, ಹಲ್ಲಿಗಳನ್ನು ಇಷ್ಟಪಡುವವರಿದ್ದಾರೆ. ಈ ಪ್ರಾಣಿಗಳಿಗೆ ಫ್ಯಾನ್ ಕ್ಲಬ್‌ಗಳೆಲ್ಲ ಇವೆ. ಆದರೆ ಈ ವಿಷಯದಲ್ಲಿ ಜಿರಳೆ ನತದೃಷ್ಟ. ಕಂಡವರೆಲ್ಲ ಅದನ್ನು ಸಾಯಿಸದೇ ಬಿಡುವುದಿಲ್ಲ. Some people are just like cockroaches. We do not actually hate them, but we just can't love them ಎಂದು ಹೇಳುವು ದನ್ನು ಕೇಳಿರಬಹುದು.


ನೂರೆಂಟು ವಿಶ್ವ
vbhat@me.com
ಸಾಮಾನ್ಯವಾಗಿ ನಾನು ವಿದೇಶ ಪ್ರಯಾಣ ಮಾಡುವಾಗ, ವಿಮಾನದಲ್ಲಿ ಓದಲೆಂದು ಕೆಲವು ಲೇಖ ಕರ ಕೃತಿಗಳನ್ನು ಎತ್ತಿಕೊಂಡಿರುತ್ತೇನೆ. ಅಂಥ ಲೇಖಕರಲ್ಲಿ ಚೇತನ್ ಭಗತ್ ಕೂಡ ಒಬ್ಬ. ವಿಮಾನ ಪ್ರಯಾಣದಲ್ಲಿ light reading ಕೃತಿಗಳಿದ್ದರೆ ಖುಷಿ. ಇತ್ತೀಚೆಗೆ ಬೆಂಗಳೂರಿನಿಂದ ಜೋರ್ಡಾನಿಗೆ ಪ್ರಯಾಣ ಮಾಡುವಾಗ, ಆತ ಬರೆದ ‘ಜೀವನಕ್ಕೆ ಹನ್ನೊಂದು ಸೂತ್ರಗಳು’ ( 11 Rules For Life : Secrets To Level Up) ಎಂಬ ಪುಸ್ತಕವನ್ನು ಓದುತ್ತಿದ್ದೆ. ಅದರಲ್ಲಿನ ಒಂದು ಅಧ್ಯಾಯ ಹೆಚ್ಚು ಇಷ್ಟ ವಾಯಿತು. ಅದು ಜಿರಲೆಗಳ ಕುರಿತಾದದ್ದು. ಸಾಮಾನ್ಯವಾಗಿ, ಎಲ್ಲರಿಂದಲೂ ತಿರಸ್ಕಾರಕ್ಕೆ ಪಾತ್ರ ವಾಗಿರುವ ಒಂದು ಪ್ರಾಣಿಯಿದ್ದರೆ ಅದು ಜಿರಳೆ!
ಅದು ಮನಸ್ಸಿನಲ್ಲಿ ಹಾದು ಹೋದರೂ, ಎಲ್ಲರ ಮನಸ್ಸಿನಲ್ಲೂ ತಕ್ಷಣ ಮೂಡುವ ಪ್ರತಿಕ್ರಿಯೆ-ವ್ಯಾಕ್. ಅದನ್ನು ಕಂಡರೆ ಸಾಕು, ಎಲ್ಲರೂ ಸಾಯಿಸುವವರೇ. ಒಂದು ವೇಳೆ ಅದನ್ನು ನೋಡಿ, ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಅದನ್ನು ಅಲ್ಲೇ ಸಾಯಿಸಿದಾಗಲೇ ಸಮಾಧಾನ. ಇಲ್ಲಿ ತನಕ ಜಿರಲೆಗಳನ್ನು ಇಷ್ಟಪಟ್ಟ ಒಬ್ಬೇ ಒಬ್ಬ ವ್ಯಕ್ತಿಯನ್ನು ನಾನಂತೂ ನೋಡಿಲ್ಲ.
ಜಗತ್ತಿನಲ್ಲಿ ಎಲ್ಲ ಪ್ರಾಣಿಗಳನ್ನೂ ಇಷ್ಟಪಡುವವರಿದ್ದಾರೆ. ಚೇಳು, ಮೊಸಳೆ, ಹಾವು, ಹಲ್ಲಿಗಳನ್ನು ಇಷ್ಟಪಡುವವರಿದ್ದಾರೆ. ಈ ಪ್ರಾಣಿಗಳಿಗೆ ಫ್ಯಾನ್ ಕ್ಲಬ್‌ಗಳೆಲ್ಲ ಇವೆ. ಆದರೆ ಈ ವಿಷಯದಲ್ಲಿ ಜಿರಳೆ ನತದೃಷ್ಟ. ಕಂಡವರೆಲ್ಲ ಅದನ್ನು ಸಾಯಿಸದೇ ಬಿಡುವುದಿಲ್ಲ. Some people are just like cockroaches. We do not actually hate them, but we just can't love them ಎಂದು ಹೇಳುವು ದನ್ನು ಕೇಳಿರಬಹುದು.

ಆದರೆ ಚೇತನ್ ಭಗತ್‌ಗೆ ಜಿರಳೆಯೇ ಜೀವನ ಆದರ್ಶವಂತೆ, Role Model ಅಂತೆ. ಹುಲಿ, ಸಿಂಹ, ಚಿರತೆ, ಆನೆ, ನವಿಲು, ಕೋಗಿಲೆ, ಗಿಳಿ...ಗಳನ್ನು ರೋಲ್ ಮಾಡೆಲ್ ಆಗಿಟ್ಟುಕೊಂಡರೆ ಪರವಾಗಿಲ್ಲ. ದರೆ ಯಾರಾದರೂ ಜಿರಳೆಗೆ ಅಂಥ ಪಟ್ಟ ಕೊಡ್ತಾರಾ? ಹಾಗಂತ ಅನಿಸುವುದು ಸಹಜ.
ಈ ಭೂಮಿ ಮೇಲೆ ಎಲ್ಲ ಪರಿಸರ, ಸ್ಥಳ, ವಾತಾವರಣ, ಪರಿಸ್ಥಿತಿ, ಕಾಲ, ಋತು, ಒತ್ತಡ, ಸನ್ನಿವೇಶ... ಹೀಗೆ ಎಲ್ಲವುಗಳಿಗೂ ಹೊಂದಿಕೊಳ್ಳುವ, ಒಗ್ಗಿಕೊಳ್ಳುವ (adaptive), ಎಲ್ಲರೊಳಗೆ ಒಂದಾಗುವ, ಎಲ್ಲೆಡೆ ಮೀಸೆ ತೂರಿಸುವ, ಎಲ್ಲಿ ಬೇಕಾದರೂ ಮನೆ ಮಾಡುವ, ಬದುಕನ್ನು ಕಟ್ಟಿಕೊಳ್ಳುವ, ಏಕ ಮಾತ್ರ ಜೀವಿಯಿದ್ದರೆ ಅದು ಜಿರಳೆ. ಖ್ಯಾತ ಜೀವವಿಕಾಸ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಹೇಳಿದ ಒಂದು ಪ್ರಸಿದ್ಧ ಮಾತಿದೆ-‘ಪ್ರಕೃತಿಯಲ್ಲಿ ಅತ್ಯಂತ ಬುದ್ಧಿವಂತ ಅಥವಾ ಅತ್ಯಂತ ಬಲಿಷ್ಠ ಜೀವಿ ಮಾತ್ರ ಬದುಕುಳಿಯುತ್ತದೆ ಎಂದು ಭಾವಿಸಿದ್ದರೆ ಅದು ತಪ್ಪು.
ಎಲ್ಲ ಪರಿಸರಕ್ಕೂ ಯಾವ ಪ್ರಾಣಿ ಒಗ್ಗಿಕೊಳ್ಳುವುದೋ, ಅದೇ ಅತ್ಯಂತ ಬಲಿಷ್ಠವಾದುದು, ಬುದ್ಧಿ ವಂತವಾದುದು.’ ಈ ಮಾತು ನೂರಕ್ಕೆ ನೂರು ಅನ್ವಯವಾಗುವುದು ಜಿರಳೆಗೆ ಮಾತ್ರ. ಡಾರ್ವಿನ್ ವ್ಯಕ್ತಿತ್ವ ವಿಕಸನ ಗುರು ಅಲ್ಲ, ಆತ ಲೈಫ್ ಕೋಚ್ ಅಲ್ಲ, ಬಿಜಿನೆಸ್ ಲೀಡರ್ ಕೂಡ ಅಲ್ಲ. ಅಷ್ಟಕ್ಕೂ ಆತ ಜೀವನವಿಡೀ ಪ್ರಕೃತಿ ಮತ್ತು ವನ್ಯಜೀವಿಗಳನ್ನು ನೋಡುತ್ತಾ, ಅನಾಮಿಕ ದ್ವೀಪ ದಲ್ಲಿ ಬದುಕು ಸವೆಸಿದ ಒಬ್ಬ ಜೀವವಿಜ್ಞಾನಿ. ಡಾರ್ವಿನ್ ತನ್ನ ಜೀವಮಾನದ ಅಧ್ಯಯನದಿಂದ ಕಂಡುಕೊಂಡ ಒಂದು ಸಂಗತಿಯೆಂದರೆ, ನೀನು ಬುದ್ಧಿವಂತನೋ, ದಡ್ಡನೋ, ಬಲಿಷ್ಠನೋ, ದುರ್ಬಲನೋ, ಶ್ರೀಮಂತನೋ, ಬಡವನೋ ಎಂಬುದನ್ನೆಲ್ಲ ಈ ಪ್ರಕೃತಿ ಲೆಕ್ಕಕ್ಕೆ ತೆಗೆದುಕೊಳ್ಳುವು ದಿಲ್ಲ.
ಇದನ್ನೂ ಓದಿ: Vishweshwar Bhat Column: ಜಪಾನಿನ ಯಶಸ್ಸಿಗೆ ನೈತಿಕ ಬೋಧೆಯೇ ಮುಖ್ಯ ಕಾರಣ
ನೀನು ಎಲ್ಲ ಪರಿಸರಕ್ಕೆ ಹೊಂದಿಕೊಳ್ಳುತ್ತೀಯ, ಇಲ್ಲವಾ ಎಂಬುದಷ್ಟೇ ಮುಖ್ಯ. ನೀನು ಬದಲಾ ವಣೆಗೆ ಒಗ್ಗಿಕೊಳ್ಳದಿದ್ದರೆ ಸರ್ವನಾಶವಾಗುತ್ತೀಯ. ಹೊಂದಿಕೊಳ್ಳುವುದರಲ್ಲಿಯೇ ನಿನ್ನ ಅಸ್ತಿತ್ವ ವಿದೆ. ಉದಾಹರಣೆಗೆ, ಲಕ್ಷಾಂತರ ವರ್ಷಗಳ ಹಿಂದೆ, ಡೈನೋಸಾರಸ್‌ಗಳಿದ್ದವು. ಅವು ಭೂಮಿಯ ಮೇಲಿನ ದೈತ್ಯ ಪ್ರಾಣಿಗಳಾಗಿದ್ದವು. ಅವು ಹತ್ತು ಆನೆಗಳಿಗಿಂತ ದೊಡ್ಡದಾಗಿದ್ದವು. ಗಾತ್ರದಲ್ಲಿ ಅವು ಗಳಿಗೆ ಹೋಲಿಕೆಯೇ ಇರಲಿಲ್ಲ. ಅವುಗಳ ಜತೆ ಪೈಪೋಟಿಗಿಳಿದು ಜಯಿಸುವುದು ಸಾಧ್ಯವೇ ಇರ ಲಿಲ್ಲ. ಅವು ಒಂದು ಕಾಲಕ್ಕೆ ಜಗತ್ತನ್ನೇ ಆಳಿದವು.
ನಂತರ ಹಿಮಗಳು ಕರಗಲಾರಂಭಿಸಿದವು. ಅಲ್ಲಲ್ಲಿ ಭೂಮೇಲ್ಮೈ ಪಲ್ಲಟವಾಯಿತು. ಭೂಮಿಯ ಮೇಲೆ ಸಾಕಷ್ಟು ರಾಚನಿಕ ವ್ಯತ್ಯಾಸ (Tectonic movement)ಗಳ ಚಲನೆಗಳಾದವು. ಒಂದೇ ಸಲ ಸಾಕಷ್ಟು ನೈಸರ್ಗಿಕ ಬದಲಾವಣೆಗಳಾದವು. ಆ ಹೊಸ ಬದಲಾವಣೆಗಳಿಗೆ ಡೈನೋ ಸಾರಸ್‌ಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಕಾಲಕ್ರಮೇಣ ಅವು ಭೂಮಿಯ ಮೇಲಿಂದ ಅಳಿಸಿ ಹೋದವು. ಈಗ ನಾವು ಮ್ಯೂಸಿಯಂಗಳಲ್ಲಿ ಅವುಗಳ ನಕಲಿ ಪ್ರತಿಕೃತಿಗಳನ್ನು ನೋಡ ಬಹುದಷ್ಟೆ.
ಲಕ್ಷಾಂತರ ವರ್ಷಗಳಿಂದ ಜಿರಳೆಗಳೂ ಇವೆ. ಅವು ಆಗಲೂ ಇದ್ದವು. ಈಗಲೂ ಇವೆ. ಅವು ಕೇವಲ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿಲ್ಲ, ಅವುಗಳ ಸಂಖ್ಯೆ ವಿಪರೀತ ಜಾಸ್ತಿಯಾಗುತ್ತಿವೆ. ಅವು ಇಲ್ಲದ ಜಾಗಗಳೇ ಇಲ್ಲ-ಮನೆ, ಅಡುಗೆಮನೆ, ಬಾತ್ ರೂಮ್, ಬೆಡ್ ರೂಮ್, ಪೂಜಾ ರೂಮ್, ಲೈಬ್ರರಿ, ರೆಸ್ಟೋರೆಂಟ್, ಆಫೀಸು, ಕಾರು, ಬಸ್ಸು, ವಿಮಾನ ನಿಲ್ದಾಣ, ಹಡಗು, ವಿಮಾನ, ಉಪಗ್ರಹ... ಅಷ್ಟೇ ಅಲ್ಲ, ಮರುಭೂಮಿ, ಶೀತಪ್ರದೇಶ, ಮಲೆನಾಡು, ಗುಡ್ಡ-ಬೆಟ್ಟ, ಕರಾವಳಿ, ಅಂಟಾರ್ಟಿಕಾ, ಹಿಮಾಲಯ.. ಹೀಗೆ ಯಾವುದೇ ಪ್ರದೇಶವಿರಬಹುದು, ಅಲ್ಲೆಲ್ಲ ಜಿರಳೆಗಳನ್ನು ಕಾಣಬಹುದು.
ದೇವರ ನಂತರ ಜಿರಲೆಗಳೇ ಸವಾಂತರ್ಯಾಮಿ. ದೇವರ ಅಸ್ತಿತ್ವವನ್ನು ನಂಬದವರಿದ್ದಾರೆ, ಅವರು ಜಿರಲೆಗಳ ಅಸ್ತಿತ್ವವನ್ನು ನಂಬುತ್ತಾರೆ. ಇದಕ್ಕೆ ಕಾರಣ, ಜಿರಳೆಗಳ adaptive nature. ಪ್ರಕೃತಿಯಲ್ಲಿ ಯಾವ ಬದಲಾವಣೆಗಳಾದರೂ, ಅವು ಸಹ ತಮ್ಮನ್ನು ಅದಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತವೆ. ಪಶ್ಚಿಮ ಘಟ್ಟದ ಮಳೆಕಾಡಿನಲ್ಲಿರುವ ಮನೆಯೊಂದರಲ್ಲಿರುವ ಜಿರಳೆಗಳನ್ನು ಬಾಕ್ಸ್ ನಲ್ಲಿ ತುಂಬಿ ಕೊಂಡು, ದಿಲ್ಲಿಯಲ್ಲಿ ಬಿಟ್ಟರೆ, ಆ ಕ್ಷಣದಿಂದಲೇ ಅಲ್ಲಿ ಆರಾಮವಾಗಿರುತ್ತವೆ.
ಅಲ್ಲಿಯೇ ಸಂಸಾರ ಹೂಡುತ್ತವೆ. ಅದೇ ಜಿರಳೆಗಳನ್ನು ನಾಳೆ ಸೌದಿ ಅರೇಬಿಯಾದ ಮರುಭೂಮಿ ಯಲ್ಲಿ ಬಿಟ್ಟರೂ, ನೋ ಪ್ರಾಬ್ಲಮ್. ನಾಡಿದ್ದು ಹಡಗಿನಲ್ಲಿ ತೆಗೆದುಕೊಂಡು ಹೋಗಿ ಉತ್ತರ ಧ್ರುವಕ್ಕೆ ಸನಿಹದ ಐಸ್ ಲ್ಯಾಂಡಿನಲ್ಲಿ ಬಿಟ್ಟರೂ ಚಿಂತೆ ಇಲ್ಲ. ಅವು ತಕ್ಷಣ ಅಲ್ಲೇ ಬೀಡುಬಿಡುತ್ತವೆ.
ಮನುಷ್ಯರಿಗೆ ಇಷ್ಟು ಸುಲಭವಾಗಿ ಅಡ್ಜಸ್ಟ್ ಆಗಲು ಸಾಧ್ಯವಿಲ್ಲ. ಆದರೆ ಜಿರಳೆಗಳು ಅದಕ್ಕಿಂತ ವೇಗವಾಗಿ ಅಡ್ಜಸ್ಟ್ ಆಗುತ್ತವೆ. ವೆಜ್ ಆಹಾರ ಮಾತ್ರ ಸೇವಿಸುವವರು ನಾನ್ ವೆಜ್ ಕೊಟ್ಟರೆ ಮುಟ್ಟು ವುದಿಲ್ಲ. ಉಪವಾಸವಿದ್ದಾರು, ಆದರೆ ಅಪ್ಪಿತಪ್ಪಿಯೂ ನಾನ್ ವೆಜ್ ಮುಟ್ಟುವುದಿಲ್ಲ. ಜೋಳದ ರೊಟ್ಟಿ, ಖಡಕ್ ರೊಟ್ಟಿ, ಚಟ್ನಿಪುಡಿ, ಪುಂಡಿಪಲ್ಯ ಸೇವಿಸುವವರಿಗೆ ಪಿಜ್ಜಾ ಕೊಟ್ಟರೆ ’ವಲ್ಲೆ’ ಅಂತಾರೆ. ಕೆಲವರಿಗೆ ಕೊನೆಯಲ್ಲಿ ಮೊಸರನ್ನ ಸೇವಿಸದಿದ್ದರೆ, ಊಟ ಮಾಡಿದಂತೆ ಆಗುವುದಿಲ್ಲ.
ಕೆಲವರಿಗೆ ಉಪ್ಪಿನಕಾಯಿ ಬೇಕೇ ಬೇಕು. ಇನ್ನು ಕೆಲವರಿಗೆ ಪದಾರ್ಥಗಳಿಗೆ ಬೆಳ್ಳುಳ್ಳಿ, ಈರುಳ್ಳಿ ಹಾಕಲೇಕೂಡದು. ಕೆಲವರಿಗೆ ವಾರದಲ್ಲಿ ಮೂರು ದಿನ, ಎರಡು ಹೊತ್ತು ಕೋಳಿ, ಕುರಿ ಭೋಜನ ಇರಲೇಬೇಕು. ಇನ್ನು ಕೆಲವರಿಗೆ ಬೆಳಗಿನ ಉಪಾಹಾರಕ್ಕೂ ನಾನ್ ವೆಜ್ ಬೇಕು. ಬೆಳಗ್ಗೆ ಹಾಸಿಗೆಯಲ್ಲಿ ಕಾಫಿ ಕುಡಿಯದಿದ್ದರೆ ಕೆಲವರಿಗೆ ದಿನವಿಡೀ ಮೂಡ್ ಔಟ್. ಇನ್ನು ಕೆಲವರು ಔಟ್ ಆಗುವುದೇ ಗುಂಡು ಹಾಕಿ. ಆದರೆ ಜಿರಳೆ ಇವ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದ್ದರೆ ಓಕೆ, ಇಲ್ಲದಿದ್ದ ರೂ ಓಕೆ. ಚಿಂತೆ ಯಾಕೆ ಎಂಬ ಮನೋಭಾವ.
ಯಾವುದೇ ಪ್ರಾಣಿ ಚೆನ್ನಾಗಿ ಇದೆಯೋ, ಇಲ್ಲವೋ, ಸುಖವಾಗಿ ಜೀವಿಸುತ್ತಿದೆಯೋ, ಇಲ್ಲವೋ ಎಂಬುದನ್ನು ನಿರ್ಧರಿಸುವ ಒಂದು ಅಂಶವೆಂದರೆ ಸಂತಾನೋತ್ಪತ್ತಿ ಸಾಮರ್ಥ್ಯ. ಈ ವಿಷಯದಲ್ಲಿ ಜಿರಳೆಗಳನ್ನು ಮೀರಿಸುವವರೇ ಇಲ್ಲ. ಅವು ಮೊಟ್ಟೆ ಇಡದ ಜಾಗಗಳಿಲ್ಲ. ಸೋಫಾ ಕುಶನ್, ಕಪಾಟು, ಪುಸ್ತಕ, ಅಡುಗೆಮನೆ, ಬಚ್ಚಲುಮನೆ, ಸಂದುಗೊಂದು, ಕಾರು, ಹಾಸಿಗೆ... ಹೀಗೆ ಎಲ್ಲೆಡೆ ಮೊಟ್ಟೆಗಳನ್ನಿಡುತ್ತವೆ. ಮಳೆಗಾಲ, ಚಳಿಗಾಲ, ವಸಂತಕಾಲ, ಬೇಸಿಗೆಕಾಲ... ಹೀಗೆ ಎಲ್ಲ ಕಾಲ ಗಳಲ್ಲೂ ಸಂತಾನಕ್ರಿಯೆ ಸರಾಗ. ಬಿಸಿಲಿರಲಿ, ಮಳೆಯಿರಲಿ, ಜಿರಳೆಗಳಿಗೆ ಮಾತ್ರ ಅದು ಕೋಗಿಲೆಗೆ ವಸಂತಕಾಲದಂತೆ. ನೀವು ಜಗತ್ತಿನ ಯಾವುದೇ ಖಂಡಕ್ಕೆ, ದೇಶಕ್ಕೆ ಹೋಗಿ, ಅಲ್ಲಿ ಜಿರಳೆಗಳು ಇಲ್ಲದಿದ್ದರೆ ಕೇಳಿ.
ನಾನು ಸುಮ್ಮನೆ ನನ್ನ ಸಂಗಾತಿ ಗೂಗಲ್‌ಳನ್ನು ಕೇಳಿದೆ-’ಭೂಮಿ ಮೇಲೆ ಜಿರಳೆಗಳು ಇಲ್ಲದ ದೇಶ ಅಥವಾ ಪ್ರದೇಶಗಳಿವೆಯಾ ಎಂದು. ಅದು ಹೀಗೆ ಹೇಳಿತು- There is no country or region where cockroaches are completely absent.)ಕೆಲ ವರ್ಷಗಳ ಹಿಂದೆ, ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು, ‘ಜರ್ಮನಿಯಲ್ಲಿ ನಾನು ಹದಿನೈದು ವರ್ಷಗಳಿಂದ ವಾಸಿಸುತ್ತಿದ್ದೇನೆ. ಒಂದೇ ಒಂದು ಜಿರಳೆಯನ್ನು ನೋಡಿಲ್ಲ’ ಎಂದು ಪೋಸ್ಟ್ ಹಾಕಿದ್ದರು. ಆ ಪೋಸ್ಟಿಗೆ ಸಾವಿರಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದರು. ಅವರೆಲ್ಲ ತಮ್ಮ ಮನೆಯಲ್ಲಿ ಕಂಡ ಜಿರಳೆಗಳ ಫೋಟೋ ಹಾಕಿದ್ದರು. ಅವರೆಲ್ಲರೂ ಜರ್ಮನಿಯವರೇ ಆಗಿದ್ದರು!
ಜಿರಳೆ ನಾಶಕ ತಯಾರಿಸುವ ಬಹುರಾಷ್ಟ್ರೀಯ ಕಂಪನಿ ಗಳಿವೆ. ಬೇಗಾನ್, ಹಿಟ್, ಲಕ್ಷ್ಮಣರೇಖೆ ಹೀಗೆ ಅನೇಕ ಕಂಪನಿಗಳಿಗೆ ಜಿರಳೆಗಳನ್ನು ಕೊಲ್ಲುವುದೇ ಬಿಜಿನೆಸ್. ಅವುಗಳನ್ನು ಕೊಂದು ಆ ಕಂಪನಿ ಗಳು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆ ಕಂಪನಿಗಳ ಆಫೀಸುಗಳು, ಶಾಖಾ ಆಫೀಸುಗಳು, ಫ್ಯಾಕ್ಟರಿ ಗಳು, ಮಾರಾಟ ಕೇಂದ್ರಗಳು ಜಗತ್ತಿನ ಎಲ್ಲ ದೇಶಗಳಲ್ಲೂ ಇವೆ. ಈ ಕಂಪನಿಗಳು ವಿಶ್ವದೆಲ್ಲೆಡೆ ಲಕ್ಷಾಂತರ ಕೋಟಿ ರುಪಾಯಿ ವಹಿವಾಟು ಮಾಡುತ್ತವೆ.
ಅವುಗಳ ಉದ್ದೇಶ-ಜಿರಳೆಗಳನ್ನು ಕೊಂದು ತಾವು ಬದುಕುವುದು. ಈ ಕಂಪನಿಗಳ ಲಕ್ಷಾಂತರ ಉದ್ಯೋಗಿಗಳು ನಿತ್ಯವೂ ಆಫೀಸಿಗೆ ಏಕೆ ಹೋಗುತ್ತಾರೆ ಎಂಬ ಪ್ರಶ್ನೆಯನ್ನು ನಿಮ್ಮ ಮನಸ್ಸಿನಲ್ಲಿ ಕೇಳಿಕೊಳ್ಳಿ. ಉತ್ತರ ಸರಳ- ಜಿರಳೆಗಳನ್ನು ಸಾಯಿಸುವುದು. ಸರಿ, ಹಾಗಾದರೆ ಅವರೆಲ್ಲ ತಮ್ಮ ಉದ್ದೇಶ ಅಥವಾ ಹೋರಾಟದಲ್ಲಿ ಯಶಸ್ವಿ ಆಗಿದ್ದಾರಾ? ಉಹುಂ.. ಇಲ್ಲವೇ ಇಲ್ಲ. ಲಕ್ಷಾಂತರ ಕೋಟಿ ರುಪಾಯಿ ಬಂಡವಾಳ, ಸಂಪನ್ಮೂಲ ಹೂಡಿಕೆ, ಲಕ್ಷಾಂತರ ಉದ್ಯೋಗಿಗಳ ನಿತ್ಯ ಪರಿಶ್ರಮ, ಸಾವಿರಾರು ಕೋಟಿ ರುಪಾಯಿ ಜಾಹೀರಾತು, ಅಷ್ಟೇ ಪ್ರಮಾಣದ ಸಂಪನ್ಮೂಲ ಸುರಿದು ಸಂಶೋ ಧನೆ... ಇಷ್ಟೆಲ್ಲ ಮಾಡಿದರೂ ಜಿರಳೆಗಳನ್ನು ಸರ್ವನಾಶ ಮಾಡಲು ಸಾಧ್ಯವಾಗಿದೆಯಾ? ನಮ್ಮ ನಮ್ಮ ಮನೆಗಳಿಂದ ಜಿರಳೆಗಳನ್ನು ಮೂಲೋತ್ಪಾಟನೆ ಮಾಡಲು ಸಾಧ್ಯ ಆಗಿದೆಯಾ? ಉಹುಂ.. ಇಲ್ಲವೇ ಇಲ್ಲ.
ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅಂತ ಪ್ರತ್ಯಕ್ಷವಾಗುತ್ತವೆ. ಜಿರಳೆಗಳನ್ನು ಸಾಯಿಸು ತ್ತೇವೆ ಎಂದು ಲಕ್ಷಾಂತರ ಮಂದಿ ಜೀವಿಸುತ್ತಿದ್ದಾರೆ. ಅಂಥವರಿಗೆಲ್ಲ ಜಿರಳೆ ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ತಮಾಷೆ ಅಂದ್ರೆ, ಜಿರಳೆಗಳಿಲ್ಲದಿದ್ದರೆ ಆ ಕಂಪನಿಗಳಿಗೆ ಅಸ್ತಿತ್ವವೇ ಇಲ್ಲ.
ಪ್ರತಿ ವರ್ಷ ಎಲ್ಲ ದೇಶಗಳ ಸರಕಾರಗಳು ಆನೆ, ಹುಲಿ, ಆನೆ, ಚಿರತೆ, ಆಮೆ, ಡಾಲಿನ್ ಮುಂತಾದ ಪ್ರಾಣಿಗಳ ಸಂರಕ್ಷಣೆಗೆ ಲಕ್ಷಾಂತರ ಕೋಟಿ ರುಪಾಯಿ ಖರ್ಚು ಮಾಡುತ್ತವೆ. ನಮ್ಮ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹುಲಿ ಸಂರಕ್ಷಣೆಗೆ ಕಳೆದ ಅರ್ಧ ಶತಮಾನದಿಂದ ಸುರಿಯುತ್ತಿರುವ ಹಣಕ್ಕೆ ಲೆಕ್ಕವೇ ಇಲ್ಲ. ಅವುಗಳಿಗಾಗಿ ವನ್ಯಧಾಮಗಳು, ಕಾಯ್ದಿಟ್ಟ ಅರಣ್ಯಗಳು ಬೇರೆ.
ಅವುಗಳಿಗೆ ರಾಷ್ಟ್ರೀಯ ಪ್ರಾಣಿ ಎಂಬ ಪಟ್ಟ ಬೇರೆ. ಒಂದು ಹುಲಿ ಸತ್ತರೆ ಅದು ರಾಷ್ಟ್ರೀಯ ಸುದ್ದಿ. ತನಿಖೆಗೆ ಆದೇಶ, ಮಂತ್ರಿಗೆ ಬಿಸಿ, ಅಧಿಕಾರಿ ಮನೆಗೆ. ಹುಲಿ ಸಂರಕ್ಷಣೆಗೆ ನೂರಾರು ಫ್ಯಾನ್ ಕ್ಲಬ್ ಗಳು, ಸಂಘಗಳು, ಸಾವಿರಾರು ವ್ಯಾಘ್ರ ಸೇನಾನಿಗಳು, ಅಭಿಮಾನಿಗಳು. ಕ್ಯಾಮೆರಾ ಇದ್ದವರೆಲ್ಲ ವನ್ಯಜೀವಿ ಛಾಯಾಗ್ರಾಹಕರೇ. ಆದರೂ ಹುಲಿಗಳ ಸಂತತಿ ಭಾರಿ ಎನಿಸುವಷ್ಟು ಹೆಚ್ಚಾಗಿಲ್ಲ. ಅಳಿವಿನ ಅಂಚಿನಲ್ಲಿರುವ ಪ್ರಾಣಿ ಎಂದೂ ಸಂಬೋಧಿಸುವುದುಂಟು. ಆದರೆ ಯಾವ ಸರಕಾರವೂ ಜಿರಳೆ ಗಳನ್ನು ಸಂರಕ್ಷಿಸುವುದಿಲ್ಲ. ಸಂರಕ್ಷಿಸುವ ಮಾತಿರಲಿ, ಯಾವ ಸರಕಾರವೂ ಜಿರಳೆಗಳನ್ನು ಸಾಯಿಸುವುದನ್ನು ತಡೆಯುತ್ತಿಲ್ಲ.
ಜಿರಳೆಗಳನ್ನು ಸಾಯಿಸಬಾರದು ಎಂದು ಇಲ್ಲಿ ತನಕ ಯಾವ ಪ್ರಾಣಿದಯಾ ಸಂಘವೂ ಹೇಳಿಲ್ಲ. ಜಿರಳೆಗಾಗಿ ಒಂದೇ ಒಂದು ಕ್ಲಬ್ ಹುಟ್ಟಿಕೊಂಡಿಲ್ಲ. ಎಲ್ಲರೂ ಜಿರಲೆಗಳನ್ನು ಕಂಡಲ್ಲಿ ತುಳಿದು, ಬಡಿದು, ಹೊಡೆದು ಅಪ್ಪಚ್ಚಿ ಮಾಡಿ ಸಾಯಿಸುವವರೇ. ಆದರೂ ಪಾಪ ಬಡ ಜಿರಳೆ ಭೂಮಿ ಮೇಲೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ ಮತ್ತು ವರ್ಷದಿಂದ ವರ್ಷಕ್ಕೆ ತನ್ನ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಸದ್ಯ ಸಂತಾನೋತ್ಪತ್ತಿಯಲ್ಲಿ ಮುಸಲ್ಮಾನರಿಗೆ ಪ್ರಬಲ ಪೈಪೋಟಿ ನೀಡುತ್ತಾ ಮೇಲುಗೈ ಸಾಧಿಸುತ್ತಿರುವ ಪ್ರಾಣಿಯೆಂದರೆ ಜಿರಳೆಯೊಂದೇ!
ಗುಬ್ಬಚ್ಚಿಗಳು ನಮ್ಮ ಕಣ್ಮುಂದೆಯೇ ಮಾಯವಾದವು, ಕಾಗೆಗಳು ಅಪರೂಪವಾಗುತ್ತಿವೆ, ಕೋತಿಗಳ
ಸಂಖ್ಯೆ ಕಡಿಮೆಯಾಗುತ್ತಿವೆ, ಒಂಟೆಗಳು ಮರುಭೂಮಿಯಲ್ಲದೇ ಮತ್ತೆಲ್ಲೂ ಬದುಕುವುದಿಲ್ಲ, ಮೀನು, ನೀರಾನೆಗಳಿಗೆ ನೀರು ಬೇಕು. ಹಾರ್ನ್‌ಬಿಲ್ ಪಕ್ಷಿಗಳಿಗೆ ವರ್ಷವಿಡೀ ಹಣ್ಣುಗಳಿರುವ ಕಾಡುಗಳು ಬೇಕು, ಖಡ್ಗಮೃಗಗಳು ಕರಾವಳಿಯಲ್ಲಿ ಬದುಕುವುದಿಲ್ಲ. ಆಮೆಗಳು ತೆರೆದ ಜಾಗದಲ್ಲಿ ಮೊಟ್ಟೆಯಿಡುವುದಿಲ್ಲ.
ಬಯಲುಸೀಮೆಯಲ್ಲಿ ಆನೆಗಳು ಉಳಿಯುವುದಿಲ್ಲ, ಚಿರತೆಗಳು ಸೊಪ್ಪು-ಸದೆ ತಿಂದು ಜೀವಿಸಲಾ ರವು... ಹೀಗೆ ಒಂದೊಂದು ಪ್ರಾಣಿಗಳಿಗೆ ಹತ್ತಾರು ನೆಪಗಳು. ಇವೆಲ್ಲವುಗಳಿಗೂ ಬಾಣಂತಿ ಸೇವೆ ಬೇಕು. ಆದರೆ ಆ ಬಡ ಜಿರಳೆಗಳನ್ನು ಹೇಳುವವರು-ಕೇಳುವವರು ಯಾರೂ ಇಲ್ಲ. ಎಲ್ಲರೂ ಕ್ಯಾಕರಿಸಿ ಉಗಿಯುವವರೇ. ಎಲ್ಲರೂ ಕಂಡಲ್ಲಿ ಕೊಲ್ಲುವವರೇ. ಆದರೂ ಅವು ಸೋತಿಲ್ಲ, ಸತ್ತಿಲ್ಲ.
ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿವೆ. ವಿಷ ತಿಂದು ಬದುಕುವ ಕಲೆಯನ್ನು ಕರಗತ ಮಾಡಿ ಕೊಳ್ಳುತ್ತಿವೆ. ವಿಷವುಂಡು ಶರೀರವನ್ನು ಊನ ಮಾಡಿಕೊಳ್ಳದೇ, ಸದೃಢವಾಗಿ ಬದುಕುತ್ತಿವೆ. ಮೀಸೆ ನುಸುಳುವಷ್ಟು ಜಾಗ ಸಿಕ್ಕರೆ ದೇಹ ತೂರಿಸಿಕೊಂಡು ಅಲ್ಲೇ ಸಂಸಾರ ಹೂಡುವ ಜಾಣ್ಮೆಯನ್ನು ರೂಢಿಸಿಕೊಂಡಿವೆ.
ಜಿರಳೆಗಳ ಜೀವನ ಮತ್ತು ಜೀವನಧರ್ಮದಲ್ಲಿ ಎದ್ದು ಕಾಣುವ ಪ್ರಧಾನ ಅಂಶವೆಂದರೆ ಎಂಥಾ ಬದಲಾವಣೆ, ಮನಸ್ಥಿತಿಗಾದರೂ ಥಟ್ಟನೆ ಹೊಂದಿಕೊಳ್ಳುವುದು. ಈ ಸಿದ್ಧಾಂತವನ್ನು ನಾವೂ ಅಳವಡಿಸಿಕೊಂಡಿದ್ದೇ ಆದರೆ, ಎಲ್ಲಿ ಬೇಕಾದರೂ ಬದುಕಬಹುದು. ನಾಳೆ ನಮ್ಮ ಬದುಕು, ಹುದ್ದೆ, ಸ್ಥಾನಮಾನ, ವೃತ್ತಿ, ಮನೆ, ಪರಿಸರ.. ಹೀಗೆ ಏನು ಬೇಕಾದರೂ ಬದಲಾಗಬಹುದು. ಆದರೆ ಜಿರಳೆಚಿತ್ತ ಬೆಳೆಸಿಕೊಂಡರೆ, ‘ಬದಲಾವಣೆಯೇ ಬದುಕು’ ಅಂತ ಭಾವಿಸಿದರೆ, ಎಲ್ಲವೂ ಸರಳ, ನಿರುಮ್ಮಳ!
ಈ ವಿಷಯದಲ್ಲಿ ನಾನು ಚೇತನ್ ಭಗತ್ ಪರ