ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Coumn: ಮೃದು ಲ್ಯಾಂಡಿಂಗ್‌ ಎಂಬ ಭ್ರಮೆ

ಪೈಲಟ್‌ಗಳ ಗುರಿ ಪ್ರಯಾಣಿಕರನ್ನು ಮೆಚ್ಚಿಸುವುದು ಅಲ್ಲ. ಗುರಿ ಎಂದರೆ, ವಿಮಾನವನ್ನು ರನ್ ವೇಯ ನಿರ್ದಿಷ್ಟ ಭಾಗದಲ್ಲಿ ಹಾಗೂ ನಿಯಂತ್ರಿತ ವೇಗ ಮತ್ತು ಕೋನದಲ್ಲಿ ನೆಲಕ್ಕೆ ಇಳಿಸುವುದು. ಕೆಲವು ಸಂದರ್ಭಗಳಲ್ಲಿ ನಿಖರವಾದ, ದೃಢವಾದ ಲ್ಯಾಂಡಿಂಗ್ (firm landing) ಮೃದು ಲ್ಯಾಂಡಿಂಗ್‌ಗಿಂತಲೂ ಹೆಚ್ಚು ಸುರಕ್ಷಿತ.

ಸಂಪಾದಕರ ಸದ್ಯಶೋಧನೆ

ಒಮ್ಮೊಮ್ಮೆ ನೀವು ವಿಮಾನದಲ್ಲಿ ಪ್ರಯಾಣಿಸುವಾಗ, ಎಲ್ಲವೂ ಚೆನ್ನಾಗಿದೆ ಎಂದೆನಿಸುತ್ತದೆ- ವಿಮಾನ ಅಲುಗಾಟ ಇಲ್ಲ, ಆಕಾಶ ನೀಲವಾಗಿ ಶುಭ್ರ, ಗಾಳಿ ಕಡಿಮೆ- ಆದರೆ ನೆಲಕ್ಕೆ ಇಳಿಯುವಾಗ ವಿಮಾನವು ಹಠಾತ್ ಬಂದು ಬಡಿದಂತೆ ‘ಧಪ್’ ಎಂದು ನೆಲಕ್ಕೆ ತಾಕುತ್ತದೆ. ಅದು ಪೈಲಟ್ ಅಜಾಗರೂಕತೆಯಿಂದ ಹಾಗೆ ಲ್ಯಾಂಡ್ ಮಾಡಿದ್ದರಿಂದಲ್ಲ. ವಾಸ್ತವದಲ್ಲಿ ಪೈಲಟ್ ಸರಿಯಾಗಿಯೇ ಲ್ಯಾಂಡ್ ಮಾಡಿದ್ದಾನೆ.

ಮೃದುವಾದ ಅಥವಾ ಲಘು ಲ್ಯಾಂಡಿಂಗ್ ( smooth landing) ಎಂಬುದು ಒಂದು ಭ್ರಮೆ. ಪ್ರಯಾ ಣಿಕರು ಸಾಮಾನ್ಯವಾಗಿ ಮೃದು ವಾದ ಲ್ಯಾಂಡಿಂಗ್ ಪೈಲಟ್‌ನ ನೈಪುಣ್ಯ ಎಂದು ಭಾವಿಸುತ್ತಾರೆ. ಆದರೆ ವಿಮಾನ ಯಾನದಲ್ಲಿ ಭದ್ರತೆ ಮುಖ್ಯ, ಮೃದುತ್ವವಲ್ಲ.

ಪೈಲಟ್‌ಗಳ ಗುರಿ ಪ್ರಯಾಣಿಕರನ್ನು ಮೆಚ್ಚಿಸುವುದು ಅಲ್ಲ. ಗುರಿ ಎಂದರೆ, ವಿಮಾನವನ್ನು ರನ್ ವೇಯ ನಿರ್ದಿಷ್ಟ ಭಾಗದಲ್ಲಿ ಹಾಗೂ ನಿಯಂತ್ರಿತ ವೇಗ ಮತ್ತು ಕೋನದಲ್ಲಿ ನೆಲಕ್ಕೆ ಇಳಿಸುವುದು. ಕೆಲವು ಸಂದರ್ಭಗಳಲ್ಲಿ ನಿಖರವಾದ, ದೃಢವಾದ ಲ್ಯಾಂಡಿಂಗ್ (firm landing) ಮೃದು ಲ್ಯಾಂಡಿಂಗ್‌ಗಿಂತಲೂ ಹೆಚ್ಚು ಸುರಕ್ಷಿತ.

ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಆಸನಗಳ ವ್ಯವಸ್ಥೆ

ಇಂದಿನ ಆಧುನಿಕ ವಿಮಾನಗಳು ಆಟೋ-ಥ್ರಸ್ಟ್ ಮತ್ತು ಫ್ಲೈಟ್ ಕಂಪ್ಯೂಟರ್‌ಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತವೆ. ಈ ವ್ಯವಸ್ಥೆ ಮೃದುತ್ವಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡುತ್ತವೆ. ಬೋಯಿಂಗ್ 777 ಅಥವಾ ಏರ್‌ಬಸ್ ಎ-350 ಹೋಲುವ ದೊಡ್ಡ ವಿಮಾನಗಳು ಸಾವಿರಾರು ಕಿಲೋ ತೂಕ ಹೊತ್ತಿರುತ್ತವೆ.

ಮೃದು ಲ್ಯಾಂಡಿಂಗ್ ಮಾಡಲು ಹೆಚ್ಚು ‘ಫ್ಲೈಟ್’ (ಅಂದರೆ ನೆಲದ ಮೇಲೆ ತಾಗದೆ ಹಾರುತ್ತಲೇ ಹೋಗುವುದು) ಮಾಡಿದರೆ ರನ್‌ವೇ ಮಧ್ಯಕ್ಕಿಂತ ಮುಂದೆ ಇಳಿಯಬಹುದು, ಇದು ಚಿಕ್ಕ ರನ್‌ವೇ ಗಳಲ್ಲಿ ಅಪಾಯಕಾರಿಯಾಗಿದೆ. ಪೈಲಟ್‌ಗಳು ತರಬೇತಿಯಲ್ಲಿ ಸರಿಯಾದ ವೇಗ, ಸರಿಯಾದ ಸ್ಥಳ, ಗರಿಷ್ಠ ನಿಯಂತ್ರಣ- ಇವುಗಳನ್ನು ಕಟ್ಟುಕಟ್ಟಾಗಿ ಪಾಲಿಸುತ್ತಾರೆ.

ಮೃದು ಲ್ಯಾಂಡಿಂಗ್ ಆದರೆ ಹೆಚ್ಚು ರನ್‌ವೇ ಬಳಸಿದರೆ ಅಥವಾ ಬ್ರೇಕ್ ಹಿಡಿಯಲು ತೊಂದರೆ ಆದರೆ, ಅದು ಸಮರ್ಪಕ ಲ್ಯಾಂಡಿಂಗ್ ಅಲ್ಲ. ಪೈಲಟ್‌ಗಳಿಗೆ ಮೊದಲ ಆದ್ಯತೆ ಎಂದರೆ ವಿಮಾನ ವನ್ನು ಸೂಕ್ತ ಸಮಯಕ್ಕೆ, ಸರಿಯಾದ ಜಾಗದಲ್ಲಿ, ಸುರಕ್ಷಿತವಾಗಿ ನಿಲ್ಲಿಸುವುದು. ವಿಮಾನ ಭೂಮಿಗೆ ಸಮೀಪ ಆಗಮಿಸುತ್ತಿದ್ದಂತೆ ಪರಿಸ್ಥಿತಿ ಬೇರೆ ಆಗುತ್ತಾ ಹೋಗುತ್ತದೆ. ಅತಿ ತೀವ್ರವಾದ, ಹಠಾತ್ ಗಾಳಿಯ ಹೊಡೆತಗಳು ಬೀಸಬಹುದು. ಗಾಳಿಯ ದಿಕ್ಕು ಹಠಾತ್ ಬದಲಾಗಬಹುದು.

ರನ್‌ವೇ ಮೇಲಿನ ತೇವ ಜಾಸ್ತಿಯಾಗಿ ಚಕ್ರ ಜಾರಿ ಹೋಗುವ ಅಪಾಯ ಉಂಟಾಗಬಹುದು. ಇಂಥ ಸಂದರ್ಭಗಳಲ್ಲಿ ಪೈಲಟ್ ದೃಢವಾಗಿ ಚಕ್ರಗಳನ್ನು ನೆಲಕ್ಕೆ ತಾಗಿಸುತ್ತಾರೆ. ಇದರಿಂದ ಚಕ್ರಗಳು ರನ್‌ ವೇ ಮೇಲೆ ದೃಢವಾಗಿ ಚಲಿಸುತ್ತವೆ ಮತ್ತು ಆಗ ಆಂಟಿ-ಸ್ಕಿಡ್ ಬ್ರೇಕ್‌ಗಳು ಸರಿಯಾಗಿ ಕೆಲಸ ಮಾಡು ತ್ತವೆ.

ಸಣ್ಣ ವಿಮಾನಗಳಿಗೆ ಹೋಲಿಸಿದರೆ ದೊಡ್ಡ ಜೆಟ್‌ಗಳ (ಬೋಯಿಂಗ್ 777, ಏರ್‌ಬಸ್ ಎ-350) ಭಾರ ಮತ್ತು ಇನರ್ಷಿಯಾ ಬಹಳ ಜಾಸ್ತಿ. ಇವುಗಳ ಲ್ಯಾಂಡಿಂಗ್ ಗೇರ್ ಅನ್ನು ಬಹಳ ಬಲವಾದ ಹೊಡೆತ ಸಹಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ‘ಫ್ಲೋಟರ್’ ಆಗಿ ಮೃದುವಾಗಿ ಇಳಿಸಿದರೆ, ದೊಡ್ಡ ವಿಮಾನವು ಸುಲಭವಾಗಿ ರನ್‌ವೇ ಮೀರಿ ಹೋಗುವ ಅಪಾಯ ಉಂಟು. ಆದ್ದರಿಂದ ಪೈಲಟ್‌ಗಳು ನಿಯಂತ್ರಿತವಾಗಿ ಆದರೆ ದೃಢವಾಗಿ ನೆಲಕ್ಕೆ ತಾಗಿಸುತ್ತಾರೆ.

ಮೃದು ಲ್ಯಾಂಡಿಂಗ್ ಎಂದರೆ ಯಾವಾಗಲೂ ಉತ್ತಮ ಲ್ಯಾಂಡಿಂಗ್ ಅಲ್ಲ. ಪೈಲಟ್‌ಗಳಿಗೆ ಪ್ರಯಾಣಿಕರ ಅನುಭವಕ್ಕಿಂತ ಸುರಕ್ಷತೆ ಮುಖ್ಯ. ಕೆಲವೊಮ್ಮೆ ನಿಮ್ಮ ಆಸನದಲ್ಲಿ ಅನಿಸಿದ ಧಪ್ ಎಂಬ ಹೊಡೆತ, ವಾಸ್ತವದಲ್ಲಿ ವಿಮಾನವನ್ನು ನಿಖರವಾಗಿ, ಸುರಕ್ಷಿತವಾಗಿ, ಸಮಯಕ್ಕೆ ನಿಲ್ಲಿಸಲು ತೆಗೆದುಕೊಂಡ ವೈಜ್ಞಾನಿಕ ನಿರ್ಧಾರ ಆಗಿರಬಹುದು

ವಿಶ್ವೇಶ್ವರ ಭಟ್‌

View all posts by this author