ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vinayaka V Bhat Column: ಪಾಕಿಸ್ತಾನವನ್ನು ಸೋಲಿಸಿದಾಗ ಸಿಗುವ ಖುಷಿಯೇ ಬೇರೆ !

ನಾವು ಗೆದ್ದಿದ್ದ 2024ರ ಪಂದ್ಯಾವಳಿಗೆ ಹೋಲಿಸಿದರೆ ಈ ಬಾರಿಯ ಟಿ-20 ವಿಶ್ವಕಪ್ ಪಂದ್ಯಾ ವಳಿ ಬಹು ಆಯಾಮಗಳಲ್ಲಿ ವಿಶೇಷವಾಗಿದೆ, ಭಾರತ ತಂಡದ ನೇತೃತ್ವದಲ್ಲಿ ಬದಲಾವಣೆ ಯಾಗಿದೆ. ರೋಹಿತ್ ಶರ್ಮ ಬದಲಿಗೆ ಸೂರ್ಯಕುಮಾರ್ ನಾಯಕತ್ವ ವಹಿಸಿದ್ದಾರೆ, ರೋಹಿತ್, ಕೋಹ್ಲಿ, ರವೀಂದ್ರ ಜಡೇಜರಂಥ ಅನುಭವಿ ಆಟಗಾರರು ಈ ಬಾರಿ ತಂಡದಲ್ಲಿಲ್ಲ, ಆ ಜಾಗದಲ್ಲಿ ಹೊಸ ಆಟಗಾರರ ಸೇರ್ಪಡೆಯಾಗಿದೆ.

ವಿದ್ಯಮಾನ

ಅದ್ಯಾಕೋ ಗೊತ್ತಿಲ್ಲ, ಪಾಕಿಸ್ತಾನದ ಸೋಲು ನಮಗೆ ಯಾವಾಗಲೂ ಮುದ ನೀಡುತ್ತದೆ. ನಮ್ಮ ಆಟಗಾರರ ಶತಕ ನೀಡುವುದಕ್ಕಿಂತ ಹೆಚ್ಚು ಖುಷಿಯು, ಪಾಕಿಗಳ ವಿಕೆಟ್ ಬೀಳುವಾಗ ಸಿಗುತ್ತದೆ. ವಿಶ್ವಕಪ್ ಆಗಲಿ, ಇನ್ನಾವುದೇ ಪಂದ್ಯಾವಳಿ ಯಾಗಲಿ, ‘ಕಪ್’ ಗೆಲ್ಲುವುದು ನಮಗೆ ಪಾಕ್‌ನ ಮೇಲೆ ಗೆಲುವು ಸಾಧಿಸುವುದಕ್ಕಿಂತ ದೊಡ್ಡದೇನಲ್ಲ. ಯಾವುದೇ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿಬಿಟ್ಟರೆ ಭಾರತ ಖುಷ್.

ಎರಡು ವರ್ಷಕ್ಕೊಮ್ಮೆ ಜರುಗುವ ಐಸಿಸಿ ಪುರುಷರ ಟಿ-20 ವಿಶ್ವಕಪ್ ಟೂರ್ನಿಯ ಹತ್ತನೇ ಆವೃತ್ತಿಯು ಭಾರತ ಮತ್ತು ಶ್ರೀಲಂಕಾ ಸಹ-ಆತಿಥ್ಯದಲ್ಲಿ ಪ್ರಾರಂಭವಾಗಿದೆ. ಹಾಲಿ ಚಾಂಪಿ ಯನ್ ಭಾರತ, 2024ರ ಟೂರ್ನಿಯಲ್ಲಿ ಗೆದ್ದ ಕಿರೀಟವನ್ನು ಉಳಿಸಿಕೊಳ್ಳಲು ಸರ್ವಸನ್ನದ್ಧ ವಾಗಿದೆ.

ನಾವು ಗೆದ್ದಿದ್ದ 2024ರ ಪಂದ್ಯಾವಳಿಗೆ ಹೋಲಿಸಿದರೆ ಈ ಬಾರಿಯ ಟಿ-20 ವಿಶ್ವಕಪ್ ಪಂದ್ಯಾವಳಿ ಬಹು ಆಯಾಮಗಳಲ್ಲಿ ವಿಶೇಷವಾಗಿದೆ, ಭಾರತ ತಂಡದ ನೇತೃತ್ವದಲ್ಲಿ ಬದಲಾವಣೆಯಾಗಿದೆ. ರೋಹಿತ್ ಶರ್ಮ ಬದಲಿಗೆ ಸೂರ್ಯಕುಮಾರ್ ನಾಯಕತ್ವ ವಹಿಸಿದ್ದಾರೆ, ರೋಹಿತ್, ಕೋಹ್ಲಿ, ರವೀಂದ್ರ ಜಡೇಜರಂಥ ಅನುಭವಿ ಆಟಗಾರರು ಈ ಬಾರಿ ತಂಡದಲ್ಲಿಲ್ಲ, ಆ ಜಾಗದಲ್ಲಿ ಹೊಸ ಆಟಗಾರರ ಸೇರ್ಪಡೆಯಾಗಿದೆ.

ಇನ್ನೂ ಒಂದು ವಿಶೇಷವೇನೆಂದರೆ, ಭಾಗವಹಿಸಿದ ಎಲ್ಲ ತಂಡಗಳನ್ನೂ ಲೆಕ್ಕ ಹಾಕಿದರೆ ಭಾರತ ತಂಡವನ್ನು ಹೊರತುಪಡಿಸಿಯೂ ಸುಮಾರು ನಲವತ್ತಕ್ಕೂ ಹೆಚ್ಚು ಭಾರತೀಯ ಮೂಲದ ಆಟಗಾರರು ಬೇರೆ ಬೇರೆ ದೇಶಗಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಮೊದಲ ಬಾರಿಗೆ ಬಾಂಗ್ಲಾದೇಶ ರಾಜಕೀಯ ಕಾರಣಗಳಿಗಾಗಿ ಪಂದ್ಯಾವಳಿಯಿಂದ ಹೊರ ಗುಳಿಯುವ ತೀರ್ಮಾನಮಾಡಿದೆ. ತಾನೂ ಭಾರತದ ವಿರುದ್ಧದ ಪಂದ್ಯವನ್ನು ತಿರಸ್ಕರಿಸು ತ್ತೇನೆ ಎನ್ನುತ್ತಿದ್ದ ಪಾಕಿಸ್ತಾನ, ಶ್ರೀಲಂಕಾದ ಪ್ರೇಮದಾಸ ಮೈದಾನದಲ್ಲಿ ಆಡಿ ಸೋತು ಸುಣ್ಣವಾಯ್ತು. ಸುಮಾರು 20 ತಂಡಗಳು ಪಂದ್ಯಾವಳಿಯಲ್ಲಿ ಈ ಬಾರಿ ಪಾಲ್ಗೊಳ್ಳುತ್ತಿದ್ದು, ಇಟಲಿ ತಂಡ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿದೆ.

ಕೆಲವು ಸಣ್ಣ ಸಣ್ಣ ದೇಶಗಳ ತಂಡಗಳು ಅಭೂತಪೂರ್ವವಾಗಿ ಆಡಿ ಅನಿರೀಕ್ಷಿತ/ಅಚ್ಚರಿ ಯ ಫಲಿತಾಂಶಗಳನ್ನು ನೀಡಿವೆ. ಸೋಲಿಲ್ಲದ ಸರದಾರರಾಗಿ ಭಾರತ, ದಕ್ಷಿಣಾ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಗಳು ಸೂಪರ್ 8ರ ಘಟ್ಟವನ್ನು ತಲುಪಿದರೆ, ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್ ತಂಡಗಳೂ ನಿರೀಕ್ಷೆಯಂತೆ ಸೂಪರ್ 8ರ ಘಟ್ಟವನ್ನು ತಲುಪಿವೆ. ‌

ಅದ್ಭುತ ಪ್ರದರ್ಶನ ನೀಡುವುದರ ಮೂಲಕ ಜಿಂಬಾಬ್ವೆ ತಂಡವು ಬಲಿಷ್ಠ ಆಷ್ಟ್ರೇಲಿಯಾ ತಂಡದ ಸೊಕ್ಕು ಮುರಿದು ತಾನು ಅಜೇಯವಾಗಿ ಸೂಪರ್ 8ರ ಘಟ್ಟವನ್ನು ತಲುಪಿ ಅಚ್ಚರಿ ಮೂಡಿಸಿದೆ. ಅಫ್ಘಾನಿಸ್ತಾನ ತಂಡವು ಸ್ವಲ್ಪದರಲ್ಲಿ ಸೂಪರ್ 8ರ ಸ್ಥಾನ ಕಳೆದು ಕೊಂಡಿದೆ.

ಇದನ್ನೂ ಓದಿ: Vinayaka V Bhat Column: ಭಾಷಣವನ್ನೂ ಗಾಯನದಂತೆ ಇಂಪಾಗಿಸಬಹುದು

ಎರಡು ಸೂಪರ್ ಓವರುಗಳನ್ನು ಕಂಡ ಅದ್ಭುತ ಪಂದ್ಯದಲ್ಲಿ ಅಂತಿಮವಾಗಿ ಅದು ದಕ್ಷಿಣ ಆಫ್ರಿಕಾಕ್ಕೆ ಶರಣಾಯಿತು. ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್, ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಮುಂಬರುವ ಐಪಿಎಲ್ 2026ರ ಆಟಗಾರರ ಒಪ್ಪಂದದಿಂದ ಬಿಡುಗಡೆ ಮಾಡಿತು; ಇದರ ನಂತರ ಉದ್ಭವಿಸಿದ ಭಾರತದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆ, ಭದ್ರತೆ ಮತ್ತು ಸ್ಥಳದ ವ್ಯವಸ್ಥೆಗಳ ವಿವಾದದ ನಡುವೆ ಬಾಂಗ್ಲಾದೇಶ 2026ರ ಟಿ-20 ವಿಶ್ವಕಪ್‌ನಿಂದ ಹಿಂದೆ ಸರಿದಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು, ತನ್ನ ಆಟಗಾರರಿಗೆ ಭಾರತದಲ್ಲಿ ಭದ್ರತಾ ಬೆದರಿಕೆ ಇರುವುದರಿಂದ ತನ್ನ ವಿಶ್ವಕಪ್ ಪಂದ್ಯಗಳನ್ನು ಭಾರತದ ಬದಲು ಶ್ರೀಲಂಕಾ ಅಥವಾ ಇನ್ನಾವುದಾದರೂ ತಟಸ್ಥ ಮೈದಾನದಲ್ಲಿ ಆಡಲು ಅನುಮತಿ ನೀಡುವಂತೆ ಅಂತಾ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನ್ನು ಕೇಳಿತ್ತು.

ಪಂದ್ಯಗಳನ್ನು ಸ್ಥಳಾಂತರಿಸಲು ಐಸಿಸಿ ನಿರಾಕರಿಸಿತು, ತನ್ನ ತಂಡವು ಭಾರತಕ್ಕೆ ಪ್ರಯಾ ಣಿಸುವುದಕ್ಕೆ ಅನುಮತಿ ನೀಡಲು ಬಾಂಗ್ಲಾ ಸರಕಾರವು ನಿರಾಕರಿಸಿತು. ಹಾಗಾಗಿ ಬಾಂಗ್ಲಾ ದೇಶದ ಬದಲಿಗೆ ಸ್ಕಾಟ್ಲೆಂಡ್‌ಗೆ ವಿಶ್ವಕಪ್ ಆಡುವ ಅವಕಾಶ ದೊರೆಯಿತು.

ಬಾಂಗ್ಲಾದೇಶವೇನೋ ಈ ಪಂದ್ಯಾವಳಿಯಿಂದ ದೂರವುಳಿಯಿತು, ಜತೆಗೆ ಪಾಕಿಸ್ತಾನ ವನ್ನೂ ಸೇರಿಸಿಕೊಂಡಿತ್ತು. ಮೊದಲು ತಾನೂ ಬಾಂಗ್ಲಾ ದೇಶದ ಜತೆಗೆ ನಿಲ್ಲುತ್ತೇನೆ ಎನ್ನುತ್ತಿದ್ದ ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಕೈಕೊಟ್ಟು ಐಸಿಸಿಸಿಯ ಕೈಕಾಲು ಕಟ್ಟಿ ಭಾರತ ದಲ್ಲಾಗಬೇಕಿದ್ದ ಪಂದ್ಯವನ್ನು ಶ್ರೀಲಂಕಾಗೆ ಸ್ಥಳಾಂತರಗೊಳಿಸಿಕೊಂಡಿತು.

ಈಗ ಬಾಂಗ್ಲಾದೇಶದ ತಂಡ ಮನೆಯಲ್ಲಿ ಆರಾಮವಾಗಿ ಟಿ.ವಿ.ಯಲ್ಲಿ ಮ್ಯಾಚ್ ನೋಡ್ತಾ ಕೂತಿರಬೇಕು ಪಾಪ. ಪಾಕಿಸ್ತಾನವನ್ನು ನಂಬಿದವರಿಗೆ ಏನಾಗಬೇಕಾಗಿತ್ತೋ ಅದು ಬಾಂಗ್ಲಾ ಕ್ಕಾಯಿತು ಅಷ್ಟೇ. ಅದ್ಯಾಕೋ ಗೊತ್ತಿಲ್ಲ, ಪಾಕಿಸ್ತಾನದ ಸೋಲು ನಮಗೆ ಯಾವಾಗಲೂ ಮುದ ನೀಡುತ್ತದೆ.

Screenshot_4 ಋ

ನಮ್ಮ ಆಟಗಾರರ ಶತಕವು ನೀಡುವುದಕ್ಕಿಂತ ಹೆಚ್ಚು ಖುಷಿಯು, ಪಾಕಿಸ್ತಾನಿಗಳ ವಿಕೆಟ್ ತಪತಪನೆ ಬೀಳುವಾಗ ಸಿಗುತ್ತದೆ. ವಿಶ್ವ ಕಪ್ ಆಗಲಿ ಅಥವಾ ಇನ್ನಾವುದೇ ಪಂದ್ಯಾವಳಿ ಯಾಗಲಿ, ‘ಕಪ್’ ಗೆಲ್ಲುವುದು ನಮಗೆ ಪಾಕಿಸ್ತಾನದ ಮೇಲೆ ಗೆಲುವು ಸಾಧಿಸುವುದಕ್ಕಿಂತ ದೊಡ್ಡದೇನಲ್ಲ.

ಯಾವುದೇ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿಬಿಟ್ಟರೆ ಭಾರತ ಖುಷ್. ಏಕದಿನ ವಿಶ್ವಕಪ್‌ನಲ್ಲಿ ನಾವು ವಿಜಯ ಸಾಧಿಸಿದ್ದು ಎರಡೇ ಬಾರಿ. ಆದರೆ ಪಾಕಿಸ್ತಾನದ ಮೇಲೆ ಮಾತ್ರ ಪ್ರತಿ ವಿಶ್ವಕಪ್ ಪಂದ್ಯಾವಳಿಯಲ್ಲೂ ಗೆದ್ದಿದ್ದೇವೆ. ನಮಗೆ ಅಷ್ಟೇ ಸಮಧಾನ. ಅದೇ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಸೋತು ಆಮೇಲೆ ಪಂದ್ಯಾವಳಿಯಲ್ಲಿ ವಿಜೇತರಾದರೂ ನಮ್ಮಲ್ಲುಳಿಯುವುದು ಪಾಕಿಸ್ಥಾನದ ವಿರುದ್ಧದ ಸೋಲಿನ ನೋವೇ ವಿನಾ ಪಂದ್ಯಾವಳಿ ಗೆದ್ದ ಖುಷಿಯಲ್ಲ.

ಇದು ಪಾಕಿಸ್ತಾನದ ವಿರುದ್ಧದ ನಮ್ಮ ಸಂವೇದನೆಯಾಗಿದೆ. ಮೊನ್ನೆ ನಡೆದ ಹಣಾಹಣಿ ಯಲ್ಲಿ ಪಾಕಿಸ್ತಾನ ಸೋಲುವುದರಲ್ಲಿ ಯಾರಿಗಾದರೂ ಸಂಶಯವಿತ್ತಾ? ಖಂಡಿತ ಇರಲಿಕ್ಕಿಲ್ಲ. ಹೇಗೆ ಮತ್ತು ಎಷ್ಟು ಅಂತರದಿಂದ ಸೋಲುತ್ತಾರೆ ಎನ್ನುವುದಷ್ಟೇ ತಿಳಿಯು ವುದು ಬಾಕಿ ಇತ್ತು. ಇದು ಗೊತ್ತಿದ್ದರೂ ಪಾಕಿಸ್ತಾನದವರಿಗಿಂತ ಭಾರತದ ಕ್ರಿಕೆಟ್ ಪ್ರೇಮಿಗಳಿಗೇ ಆತಂಕ ಹೆಚ್ಚು. ಕಾರಣ, ಏನಾದರೂ ಎಡವಟ್ಟಾಗಿ ನಾವು ಸೋತುಬಿಟ್ಟರೆ ಎನ್ನುವ ಸಣ್ಣ ಆತಂಕ!

ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳಿಗೆ ಹಾಗಲ್ಲ, ಅವರಿಗೆ ಕಳೆದುಕೊಳ್ಳಲು ಏನೂ ಇಲ್ಲ, ಏನಾದರೂ ಯಡವಟ್ಟಾಗಿ ಭಾರತ ಸೋತರೆ ನಾವು ಗೆಲ್ಲಬಹುದು ಎನ್ನುವ ಆಸೆ ಮಾತ್ರ ಸದಾ ಅವರಿಗೆ ಇರುತ್ತದೆ. ಇಲ್ಲಿಯವರೆಗೆ ಆಡಿದ ಒಟ್ಟೂ ಹದಿನೇಳು ಟಿ-20 ಪಂದ್ಯಗಳಲ್ಲಿ ಹದಿನಾಲ್ಕರಲ್ಲಿ ಭಾರತವೇ ಗೆದ್ದಿದೆ ಅಂದಮೇಲೆ, ಈ ಎರಡು ತಂಡಗಳ ನಡುವೆ ನಡೆಯುವ ಪಂದ್ಯವನ್ನು ‘ಹಣಾಹಣಿಯ’ ಪಂದ್ಯ ಅಂತ ಕರೆಯುವುದು ಸರಿಯಲ್ಲ ಎಂದು ಭಾರತ ತಂಡದ ನಾಯಕನ ಸೂರ್ಯಕುಮಾರ್ ಅಭಿಪ್ರಾಯಪಡುತ್ತಾರೆ.

ಒಂದೊಮ್ಮೆ, ಎರಡೂ ತಂಡಗಳು ಆರೇಳು ಬಾರಿ ಗೆದ್ದಿದ್ದರೆ ಈ ತಂಡಗಳ ನಡುವಿನ ಮುಖಾಮುಖಿಯನ್ನು ‘ಟಕ್ಕರ್ ಕಾ ಮುಕಾಬ್ಲಾ’ ಎನ್ನಬಹುದಿತ್ತು, ಆದರೆ ಅಂಕಿ-ಅಂಶಗಳು ಪಾಕಿಸ್ತಾನ ತಂಡದ ಪರವಾಗಿಲ್ಲ, ಹಾಗಾಗಿ ‘ಟಕ್ಕರ್ ಕಾ ಮುಕಾಬ್ಲಾ’ ಎನ್ನುವುದನ್ನು ಒಪ್ಪಲಾಗದು ಎನ್ನುತ್ತಾರೆ ಸೂರ್ಯ.

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯದೂ ಇದೇ ಅಭಿಪ್ರಾಯ. ‘ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವಾದರೆ ಅದು ನಮಗೆ ಸಮಬಲದ ಪಂದ್ಯವೇ ವಿನಾ ಪಾಕಿಸ್ತಾನದ ವಿರುದ್ಧದ ಪಂದ್ಯವಲ್ಲ; ಸದ್ಯದ ಪಾಕಿಸ್ತಾನ ತಂಡ ನಮ್ಮ ತಂಡವನ್ನು ಹಣಿಯುವ ಸ್ಥಿತಿಯಲ್ಲಿಲ್ಲ’ ಎನ್ನುವುದು ಅವರ ಅಭಿಪ್ರಾಯ.

ತಂಡದ ಸತತ ಉತ್ತಮ ಪ್ರದರ್ಶನದ ದೃಷ್ಟಿಯಿಂದ ಅಥವಾ ಆಡಳಿತಾತ್ಮಕವಾಗಿ ವಿಶ್ವ ಕ್ರಿಕೆಟನ್ನು ಹೆಚ್ಚೂಕಡಿಮೆ ಭಾರತವೇ ಆಳುತ್ತಿರುವುದರಿಂದ, ಭಾರತವು ವರ್ಷದಿಂದ ವರ್ಷಕ್ಕೆ ತನ್ನ ಪ್ರಾಬಲ್ಯವನ್ನು ಬೆಳೆಸಿಕೊಂಡೇ ಬಂದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿಶ್ವದ ಅತ್ಯಂತ ಶ್ರೀಮಂತ ಮಂಡಳಿಯಾಗಿದೆ.

ಐಸಿಸಿಯ ಆಡಳಿತದ ಚುಕ್ಕಾಣಿಯೂ ಈಗ ಭಾರತೀಯರ ಕೈಯ ಇದೆ. ಹಾಗಾಗಿ ವಿಶ್ವ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಭಾರತದ ಮಾತೇ ನಡೆಯೋದು ಎನ್ನುವ ಸತ್ಯ ಎಲ್ಲರಿಗೂ ಮನವರಿಕೆಯಾಗಿದೆ. ಭಾರತದಲ್ಲಿ ‘ಟೆಸ್ಟ್’ ಪಂದ್ಯಗಳನ್ನು ಆಡುವ ತಂಡ, ಏಕದಿನ ಆಡುವ ತಂಡ ಹಾಗೂ ಟಿ-20 ತಂಡಗಳು ಪ್ರತ್ಯೇಕವಾಗಿವೆ.

ನಮ್ಮಲ್ಲಿ ಬೇರೆ ಬೇರೆ ಮಾದರಿಯ ಪಂದ್ಯಗಳನ್ನಾಡಲು ಪ್ರತ್ಯೇಕ ತಜ್ಞ ಆಟಗಾರರಿದ್ದಾರೆ. ಇನ್ನು, ಮತ್ತೆ ಮೂರು ರಾಷ್ಟ್ರೀಯ ತಂಡವನ್ನು ರಚಿಸಬಹುದಾದಷ್ಟು ಸಮರ್ಥ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇದರರ್ಥ ಭಾರತದಲ್ಲಿ ಅಷ್ಟು ಸಾಮರ್ಥ್ಯ ಹಾಗೂ ರಾಷ್ಟ್ರೀಯ ತಂಡವನ್ನು ಸೇರಲು ಸ್ಪರ್ಧೆಯಿದೆ.

ನಮ್ಮಲ್ಲಿ ಆಟಗಾರರ ‘ಪೈಪ್ ಲೈನ್’ ಇದೆ ಅಂತ ಅರ್ಥವಾಗುತ್ತದೆ. ಪಾಕಿಸ್ತಾನದಂಥ ದೇಶದಲ್ಲಿ ಎಲ್ಲ ಮಾದರಿಯ ಪಂದ್ಯಕ್ಕೂ ಹೆಚ್ಚೂಕಡಿಮೆ ಅದೇ ಆಟಗಾರರು ಆಡಬೇಕಾಗುತ್ತದೆ. ಹಾಗೆ ನೋಡಿದರೆ, ಅಲ್ಲಿ ಈಗ ಹೊಸ ಆಟಗಾರರು ಬರುತ್ತಿರುವುದೂ ಕಡಿಮೆಯೇ ಆಗಿದೆ.

‘ಇರ್ಫಾನ್ ಪಠಾಣ್ ತರಹದ ಸ್ವಿಂಗ್ ಬೌಲರ್ಸ್ ನಮ್ಮ ದೇಶದ ಗಲ್ಲಿಗಲ್ಲಿಗಳಲ್ಲಿದ್ದಾರೆ’ ಎಂದು ಜಾವೇದ್ ಮಿಯಾಂದಾದ್ ಒಮ್ಮೆ ಹೇಳಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ. ಆದರೆ ಕಳೆದ 20 ವರ್ಷಗಳಲ್ಲಿ ವಿಶ್ವದರ್ಜೆಯ ಯಾವ ‘ಬೌಲರ್’ ಅಥವಾ ‘ಬ್ಯಾಟ್ಸ್‌ಮನ್’ ಪಾಕಿಸ್ತಾನದಿಂದ ಬಂದ ಹಾಗೆ ಕಾಣುತ್ತಿಲ್ಲ. ಆರ್ಥಿಕವಾಗಿ ದಿವಾಳಿಯಾಗಿ ಮೂಲಭೂತ ಸೌಲಭ್ಯ ಒದಗಿಸುವುದೇ ಸವಾಲಿನ ವಿಷಯವಾದಾಗ, ಕ್ರೀಡೆಯ ಅಭಿವೃದ್ಧಿಗೆ ಯಾವ ದೇಶ ತಾನೆ ತಲೆಕೆಡಿಸಿಕೊಳ್ಳುತ್ತೆ ಹೇಳಿ? ವಿಶ್ವಕಪ್ ಸೇರಿ ಭಾರತ ತಂಡ ಇಲ್ಲಿಯವರೆಗೆ 17 ಪಂದ್ಯಾ ವಳಿಗಳಲ್ಲಿ ಜಯಶಾಲಿಯಾಗಿದ್ದರೆ, ಪಾಕಿಸ್ತಾನ ಗೆದ್ದಿರುವುದು ಕೇವಲ ಆರು ಪ್ರಶಸ್ತಿಗಳನ್ನು ಮಾತ್ರ. ಟಿ-20 ಪಂದ್ಯದಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಭಾರತವನ್ನು ಸೋಲಿಸಿದ್ದು ಯಾವಾಗ ಎಂದು ನೋಡುವುದಾದರೆ, ದುಬೈನಲ್ಲಿ ನಡೆದ 2022ರ ಏಷ್ಯಾ ಕಪ್‌ನ ಸೂಪರ್ ನಾಲ್ಕರ ಹಂತದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಕೊನೆಯ ಟಿ-20 ಗೆಲುವು ಸಾಧಿಸಿದೆ.

ಹಾಗಾಗಿ, ಯಾವುದೇ ಕೋನದಿಂದ ನೋಡಿದರೂ ಭಾರಕ್ಕೆ ಪಾಕಿಸ್ತಾನವು ಸರಿಸಾಟಿಯಾಗ ಲಾರದು; ಅದು ಕ್ರಿಕೆಟ್ ಸೇರಿದಂತೆ ಕ್ರೀಡಾ ಕ್ಷೇತ್ರವಾಗಿರಬಹುದು, ಬಹುಸಂಸ್ಕೃತಿಯ ಪ್ರಜಾಪ್ರಭುತ್ವವಿರಬಹುದು, ಧರ್ಮನಿರಪೇಕ್ಷತೆಯಿರಬಹುದು, ಆರ್ಥಿಕ ಸ್ಥಿತಿಗತಿಯಿರ ಬಹುದು, ವೈಶ್ವಿಕ ಮಾನ್ಯತೆಯಿರಬಹುದು, ಶಿಕ್ಷಣ ಮಟ್ಟವಿರಬಹುದು, ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಯಿರಬಹುದು.

ಇನ್ನು ರಕ್ಷಣಾ ವ್ಯವಸ್ಥೆಯ ಬಗ್ಗೆಯಂತೂ ಕೇಳುವುದೇ ಬೇಡ. ಹಾಗಂತ ಪಾಕಿಸ್ತಾನ ವಿರುದ್ಧ ದ ಪಂದ್ಯಗಳಲ್ಲಿ ಮೊದಲೆ ಭಾರತ ಸೋತಿದ್ದೇ ಹೆಚ್ಚು; ಏಕದಿನ ಪಂದ್ಯಗಳಲ್ಲಿ ಇಲ್ಲಿಯ ವರೆಗೆ 78 ಪಂದ್ಯಗಳನ್ನು ಪಾಕಿಸ್ತಾನ ಗೆದ್ದಿದ್ದರೆ, ಭಾರತ ಗೆದ್ದಿರುವುದು 58 ಪಂದ್ಯಗಳನ್ನು ಮಾತ್ರ. ‌

ಟೆಸ್ಟ್ ಪಂದ್ಯಗಳಲ್ಲೂ ದಾಖಲೆಗಳು ಪಾಕಿಸ್ತಾನದ ಪರವಾಗಿಯೇ ಇವೆ. ಅದರಲ್ಲೂ, ಸಚಿನ್, ಸೌರವ್ ಅವರ ತಲೆಮಾರು ಬರುವವರೆಗೆ ವಿಶ್ವಕಪ್ ಪಂದ್ಯಗಳನ್ನು ಹೊರತು ಪಡಿಸಿ ಉಳಿದ ಬಹುತೇಕ ಏಕದಿನ ಪಂದ್ಯಗಳಲ್ಲಿ ಭಾರತ ಗೆದ್ದರೆ ಅದು ಅದ್ಭುತಗಳಂದಾ ಗಿತ್ತು. ಈಗ ವೀಕ್ಷಕ ವಿವರಣೆ ಹೇಳುವ ಮಹನೀಯರೆ ಆಟವಾಡುತ್ತಿದ್ದ ಕಾಲವಾಗಿತ್ತು ಅದು.

ಇಮ್ರಾನ್ ಖಾನ್, ವಾಸಿಮ್ ಅಕ್ರಮ, ವಕಾರ್ ಯೂನುಸ್ ಮುಂತಾದ ವೇಗಿಗಳು ಭಾರತದ ದಾಂಡಿಗರ ನಿದ್ದೆಗೆಡಿಸಿ ಬಿಡುತ್ತಿದ್ದರು. ಅವರ ಬ್ಯಾಟ್ಸಮನ್‌ಗಳು ಕೂಡಾ ನಮಗಿಂತ ಗಟ್ಟಿಗರಾಗಿರುತ್ತಿದ್ದರು. ಈಗ ಪಾಕಿಸ್ತಾನ ತಂಡದ ಆಟಗಾರರು, ಅಲ್ಲಿನ ಕ್ರಿಕೆಟ್ ಪ್ರೇಮಿಗಳು ಯಾವ ಅವಮಾನದ ಪರಿಸ್ಥಿತಿಯಲ್ಲಿರುತ್ತಾರೋ, ಆಗ ಬಹಳಕಾಲ ಅದೇ ಪರಿಸ್ಥಿತಿ ಭಾರತದ ಕ್ರಿಕೆಟ್ ಪ್ರೇಮಿಗಳದ್ದಾಗಿರುತ್ತಿತ್ತು.

ಭಾರತದ ವಿಕೆಟ್ ಪತನವಾದಾಗ ಅಥವಾ ಪಂದ್ಯ ಗೆದ್ದಾಗ ಪಾಕಿಸ್ತಾನದ ಆಟಗಾರರು ಮೈದಾನದಲ್ಲಿ ನಡೆಸುವ ಸಂಭ್ರಮಾಚರಣೆಗಳು ನಮ್ಮನ್ನು ಅತಿಯಾಗಿ ರೇಗಿಸುವಂತಿರು ತ್ತಿತ್ತು. ಸತತ ಸೋಲುಗಳ ಗಾಯದ ಮೇಲೆ ಉಪ್ಪು ಸವರಿದಂತೆ, ಪಾಕಿಸ್ತಾನ ತಂಡವು ಭಾರತದ ಮೇಲೆ ಗೆದ್ದಾಗಲೆಲ್ಲ ‘ಹಮಾರಾ ಪಾಕಿಸ್ತಾನ್ ಜೀತ್ ಗಯಾ’ ಎಂದು ಇಲ್ಲಿನ ಪಾಕಿಸ್ತಾನ ಪರ ಮನಸ್ಥಿತಿಯ ಜನ ಪಟಾಕಿ ಹೊಡೆದು ಬೀದಿಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸುವುದಿತ್ತಲ್ಲ, ಅದನ್ನು ಸಹಿಸುವುದಂತೂ ಬಹಳ ಕಷ್ಟವಾಗುತ್ತಿತ್ತು.

ಅಂಥ ದೇಶದ್ರೋಹಿಗಳನ್ನು ದಮನಿಸುವ ದಮ್ಮು, ತಾಕತ್ತೂ ಅಂದಿನ ಸರಕಾರಕ್ಕೆ ಇರುತ್ತಿರಲಿಲ್ಲ ಬಿಡಿ. ಕಳೆದ 15 ವರ್ಷಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋತಿರು ವುದೂ ಕಡಿಮೆಯೇ. ಪಾಕಿಸ್ತಾನದ ತುತ್ತೂರಿಯನ್ನು ಭಾರತದಲ್ಲಿ ಊದುವವರೂ ಈಗ ಬಹುತೇಕ ಬಿಲ ಸೇರಿಕೊಂಡುಬಿಟ್ಟಿದ್ದಾರೆ.

ಕಾಲಚಕ್ರ ತಿರುಗಿ, ಈಗ ಪಾಕಿಸ್ತಾನದಲ್ಲಿ ಬಲೂಚಿಸ್ತಾನದ ಜನರು ಭಾರತದ ಗೆಲುವನ್ನು ನಲಿದು ಕುಣಿದು ಸಂಭ್ರಮಿಸುತ್ತಾರೆ. ಒಂದು ಪಂದ್ಯದಲ್ಲಂತೂ ಕೊನೆಯ ಬಾಲಿಗೆ 6 ರನ್ ಬೇಕಾದಾಗ ಚೇತನ್ ಶರ್ಮಾ ಅವರಿಗೆ ಸಿಕ್ಸರ್ ಬಾರಿಸಿ ಮಿಯಾಂದಾದ್ ಭಾರತದ ಪರವಾಗಿದ್ದ ಪಂದ್ಯವನ್ನು ಪಾಕಿಸ್ತಾನದ ಕಡೆಗೆ ತಿರುಗಿಸಿಬಿಟ್ಟಿದ್ದರು.

ಆ ಪಂದ್ಯವನ್ನಂತೂ ನಮ್ಮ ತಲೆಮಾರಿನ ಯಾವುದೇ ಕ್ರಿಕೆಟ್ ಪ್ರೇಮಿಯು ಮರೆಯಲು ಸಾಧ್ಯವೇ ಇಲ್ಲ. ಶಾರ್ಜಾದಲ್ಲಿ ಶುಕ್ರವಾರ ನಡೆಯುತ್ತಿದ್ದ ಪಂದ್ಯಗಳಲ್ಲಿ ಅಂಪೈರ್ʼಗಳ ಕೆಟ್ಟ ನಿರ್ಣಯಗಳಿಂದಾಗಿ ನಾವು ಪಾಕಿಸ್ತಾನದ ವಿರುದ್ಧ ಸೋತಿದ್ದೆಷ್ಟು ಬಾರಿ!

ಒಂದು ಬಾರಿಯಂತೂ ಅಕೀಬ್ ಜಾವೇದ್ ಎನ್ನುವ ಪಾಕಿಸ್ತಾನದ ಮಾಮೂಲಿ ಬೌಲರ್ ಹ್ಯಾಟ್ರಿಕ್ ತೆಗೆದುಕೊಂಡಿದ್ದರು. ರವಿಶಾಸ್ತ್ರಿ, ಅಜರುದ್ದೀನ್ ಹಾಗೂ ಸಚಿನ್ ತೆಂಡೂಲ್ಕರ್ ಮೂವರು ಅಗ್ರಕ್ರಮಾಂಕದ ಆಟಗಾರರು ಅವರ ಎಲ್‌ಬಿ ಬಲೆಗೆ ಬಿದ್ದಿದ್ದರು. ಅದನ್ನೆಲ್ಲ ಮರೆಯಲಿಕ್ಕೇ ಸಾಧ್ಯವಿಲ್ಲ.

ಭಾರತೀಯ ಕ್ರಿಕೆಟ್ ಪ್ರೇಮಿಗಳ ಈ ಎಲ್ಲ ಹಳೆಯ ನೋವುಗಳಿಗೆ ಇತ್ತೀಚೆಗೆ ಸ್ವಲ್ಪ ಸಮಾಧಾನ ಸಿಗುತ್ತಿದೆ, ಹಳೆಯ ಗಾಯಗಳು ಈಗ ತಾನೆ ಮಾಯಲು ಶುರುವಾಗಿವೆ. ಇದೇ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ಯನ್ನು ತಳ್ಳಿಹಾಕುವಂತಿಲ್ಲ. ಭಾರತ ತಂಡವೇ ಗೆಲ್ಲುವುದಾದರೆ ಎಷ್ಟು ಸಾರಿ ಮುಖಾಮುಖಿಯಾದರೂ ನಮಗೆ ತೊಂದರೆಯೇನು? ಎನ್ನಬಹುದು; ಆದರೆ ಕುರ್ಚಿಯ ತುದಿಯಲ್ಲಿ ಕುಳಿತು ಮ್ಯಾಚ್ ನೋಡುವ ಒತ್ತಡ ಮಾತ್ರ ನಮಗೆ ಇದ್ದೇ ಇದೆ.

ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನಂತೂ ಒಮ್ಮೆ ದೊಡ್ಡ ಅಂತರದಿಂದ ಸೋಲಿಸಿ ಯಾಗಿದೆ. ಮತ್ತೆ ಸಿಕ್ಕರೆ ಸದೆಬಡಿಯುವುದೂ ಗ್ಯಾರಂಟಿಯಿದೆ. ವಾಸ್ತವಿಕವಾಗಿ ನಿಜವಾದ ಹೋರಾಟ ಇನ್ನು ಮೇಲೆ ಶುರುವಾಗಲಿಕ್ಕಿದೆ. ಭಾನುವಾರದಿಂದ ಪಂದ್ಯಾವಳಿಗೆ ರಂಗೇರಲಿದೆ. ‌

ನಾವು ವೆಸ್ಟ್ ಇಂಡೀಸ್, ಜಿಂಬಾಬ್ವೆ ಹಾಗೂ ಬಲಿಷ್ಠ ದಕ್ಷಿಣ ಆಫ್ರಿಕಾದ ಜತೆಗೆ ಆಡಬೇಕಿದೆ. ಈಗಾಗಲೇ ಎರಡು ಬಾರಿ ಟಿ-20 ವಿಶ್ವಕಪ್ ಕಿರೀಟ ಹೊತ್ತ ಭಾರತ ತಂಡವು, ಮೂರನೆ ಯದರ ಮೇಲೆ ಕಣ್ಣಿಟ್ಟಂತೆ ಕಾಣುತ್ತಿದೆ. ಸದ್ಯ ಎಲ್ಲ ವಿಭಾಗಗಳಲ್ಲಿ ಅಗತ್ಯ ಶಕ್ತಿ ಸಾಮರ್ಥ್ಯ ವೂ ನಮ್ಮ ತಂಡಕ್ಕಿದೆ.

140 ಕೋಟಿ ಜನರ ನಿರೀಕ್ಷೆ, ಆಶಯವಂತೂ ಇದ್ದೇ ಇರುತ್ತೆ. ನಮ್ಮ ನೀಲಿಧಾರಿ ಹುಡುಗರಿಗೆ ‘ಆಲ್ ದ ವೆರಿ ಬೆಸ್ಟ್’ ಹೇಳುವ ಸಮಯವಿದು. ಈ ಬಾರೀನೂ ಕಪ್ ನಮ್ದೇ... ಆಗಲಿ!!

ವಿನಾಯಕ ವೆಂ ಭಟ್ಟ

View all posts by this author