ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ವಿನಾಯಕ ವೆಂ ಭಟ್ಟ

columnist

[email protected]

ವಿನಾಯಕ ವೆಂ ಭಟ್ಟರು ಮೂಲತಹ ಉತ್ತರ ಕನ್ನಡದ ಶಿರಸಿಯ ಸಮೀಪದ ಅಂಬ್ಲಿಹೊಂಡ ಎಂಬ ಹಳ್ಳಿಯವರು, ಧಾರವಾಡದಲ್ಲಿ ವಾಣಿಜ್ಯ ಪದವಿಪಡೆದ ಇವರು, ಭಾರತೀಯ ವಿದ್ಯಾಭವನದಿಂದ ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸದ್ಯ, ಕಲ್ಯಾಣಿ ಸಮೂಹದ ಅಟೋಮೋಟಿವ ಅಕ್ಸಲ್ ಸಂಸ್ಥೆಯ ಮಾನವ ನಂಪನ್ಮೂಲ ವಿಭಾಗದ 'ಕಂಟ್ರಿ ಹೆಡ್' ಆಗಿ ಮೈಸೂರಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯಾಸಕ್ತರಾಗಿರುವ ಇವರು, ಈಗಾಗಲೇ ಕನ್ನಡದಲ್ಲಿ ೩ ಪುಸ್ತಕಗಳನ್ನು ಸಂಕಲಿಸಿರುತ್ತಾರೆ ಮತ್ತು ಅನೇಕ ಕವನಗಳನ್ನು ರಚಿಸಿರು ತ್ತಾರೆ. ಧಾರವಾಡ ಆಕಾಶವಾಣಿಯಿಂದ ಇವರ ಅನೇಕ ಕವನ ವಾಚನಗಳು ಪ್ರಸಾರವಾಗಿರುತ್ತವೆ. ಕಾಲೇಜು ದಿನಗಳಲ್ಲಿ ರಾಷ್ಟ್ರಮಟ್ಟದ ಭಾಷಣಕಾರರೂ ಆಗಿದ್ದ ಇವರು. ತಮ್ಮ ಕಾಲೇಜುದಿನಗಳಿಂದ ವಿಶಾಲ ಕರ್ಣಾಟಕ. ನವನಾಡು, ಸಂಯುಕ್ತ ಕರ್ನಾಟಕ ಮುಂತಾದ ಕನ್ನಡದ ಪತ್ರಿಕೆಗಳ ಮತ್ತು ಪತ್ರಕರ್ತರುಗಳ ಜೊತೆಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಪ್ರಚಲಿತ ರಾಜಕೀಯ, ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಮ್ಮದೇ ಆದ ಪ್ರಖರ ವಿಶ್ಲೇಷಣೆಯನ್ನು ಹೊಂದಿರುವ ಇವರು, ಪ್ರಾಚೀನ ಸಂಸ್ಕೃತ ಸಾಹಿತ್ಯದ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.

Articles
Vinayaka M Bhat Column: ಮನೆಯ ಹಿರಿಯರ ವೃದ್ಧಾಪ್ಯವನ್ನು ಸಹನೀಯವಾಗಿಸೋಣ

ಮನೆಯ ಹಿರಿಯರ ವೃದ್ಧಾಪ್ಯವನ್ನು ಸಹನೀಯವಾಗಿಸೋಣ

ಮಕ್ಕಳು ವೃದ್ಧಾಪ್ಯದಲ್ಲಿ ತಮ್ಮ ಹೆತ್ತವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಅವರ ಆದ್ಯ ಕರ್ತವ್ಯ, ಪ್ರಕೃತಿಯ ನಿಯಮ ಹಾಗೂ ಮಾನವೀಯತೆಯ ಲಕ್ಷಣ. ಆದರೆ ಇಂದಿನ ಆಧುನಿಕ ಯುಗದಲ್ಲಿ ವೃದ್ಧರ ಸ್ಥಾನಮಾನ ಕುಸಿ ಯುತ್ತಾ ಸಾಗಿದೆ. ಭಾರತದಲ್ಲಿ ಇಂದು ವೃದ್ಧಾಶ್ರಮಗಳ ಸಂಖ್ಯೆ ದಿನನಿತ್ಯ ಹೆಚ್ಚುತ್ತಿರು ವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ, ಎರಡನೇ ಹಾಗೂ ಮೂರನೇ ದರ್ಜೆಯ ಪಟ್ಟಣಗಳಲ್ಲೂ ವೃದ್ಧಾಶ್ರಮಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ.

Vinayaka M Bhat Column: ಸಂಭಾಷಣೆಯ ಮೌಲ್ಯ ವೃದ್ಧಿಸುವ ನ್ಯಾಯದ ನುಡಿಗಟ್ಟುಗಳು

ಸಂಭಾಷಣೆಯ ಮೌಲ್ಯ ವೃದ್ಧಿಸುವ ನ್ಯಾಯದ ನುಡಿಗಟ್ಟುಗಳು

ಅಂತೂ ಕೊನೆಗೆ ಬಂದವರು ಯಾರಿಗೆ ಸಂಬಂಧಪಟ್ಟವರು ಎನ್ನವುದು ಇಬ್ಬರಿಗೂ ತಿಳಿಯದೇ, ಅವರನ್ನೇ ಕೇಳಿಯೇ ಬಿಡೋಣ ಅಂತ, ಹೊರಡಲನುವಾದ ಅತಿಥಿಯನ್ನು, ನೀವು ಯಾವಕಡೆಯ ಸಂಬಂಧ? ಅಂತ ಗಂಡ ಕೇಳಿದ. ನೋಡಿ, ನನ್ನ ಚಕ್ಕಡಿಯ ಚಕ್ರ ಬದರಿ ಮರದಿಂದ ಮಾಡಿದ್ದು, ನಿಮ್ಮ ಮನೆಯ ಮುಂದಿರುವುದು ಬದರೀ ಮರವಲ್ಲವೇ? ಹಾಗಾಗಿ ನಮ್ಮದು ಬದರಿಯ ಸಂಬಂಧವಾಯಿತಲ್ಲ! ಎಂದನಂತೆ ‘ಅಸ್ಮಾಕಂ ಬದರೀ ಚಕ್ರಂ ಯುಷ್ಮಾಕಂ ಬದರೀ ತರುಃ ಬಾದರಾಯಣ ಸಂಬಂಧಾತ್ ಯೂಯಂ ಯೂಯಂ ವಯಂ ವಯಂ’ ಎಂದನಂತೆ.

Vinayaka M Bhat Column: ತನುಮನಗಳಿಂದ ದೇವರನ್ನು ಸೇವಿಸಿದರೆ ಸಾಲದೇ ?

ತನುಮನಗಳಿಂದ ದೇವರನ್ನು ಸೇವಿಸಿದರೆ ಸಾಲದೇ ?

ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿಯ ದೇಣಿಗೆ ಎಣಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳೇ ಸಿಸಿಟಿವಿ ಕಣ್ತಪ್ಪಿಸಿ ಕೋಟಿ ಕೋಟಿ ಹಣವನ್ನು ಕದ್ದು, ದುಬಾರಿ ಕಾರು, ಮೊಬೈಲ್ ಹಾಗೂ ಮೋಜು-ಮಸ್ತಿಗೆ ಬಳಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದೇಶ-ವಿದೇಶ ಗಳಿಂದ ಲಕ್ಷಾಂತರ ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ರಾಮಲನಿಗೆ ಅಪಾರ ಪ್ರಮಾಣದ ಕಾಣಿಕೆ, ನಗದು ಹಾಗೂ ಚಿನ್ನಾಭರಣಗಳನ್ನು ಅರ್ಪಿಸುತ್ತಿರುವುದು ನಮಗೆ ತಿಳಿದೇ ಇದೆ.

Vinayaka M Bhat Column: ಗ್ರಂಥಾಲಯಗಳಿಂದ ದೂರವುಳಿದ ಆಧುನಿಕ ಸಮಾಜ

ಗ್ರಂಥಾಲಯಗಳಿಂದ ದೂರವುಳಿದ ಆಧುನಿಕ ಸಮಾಜ

ಸಾನ್ಯವಾಗಿ ವಾಚನಾಲಯಗಳು ಪುಸ್ತಕ ಪ್ರೇಮಿಗಳಿಂದ ಸದಾ ತುಂಬಿದ್ದರೂ, ಅಲ್ಲಿ ಯಾರೂ ಇಲ್ಲವೇನೋ ಎನ್ನುವಷ್ಟು ಮೌನವಿರುತ್ತಿತ್ತು. ಗ್ರಂಥಾಲಯವು, ಬರೀ ಪುಸ್ತಕ ಹಾಗೂ ಪುಸ್ತಕ ಪ್ರೇಮಿಗಳ ಮಿಲನದ ಸ್ಥಾನ ಮಾತ್ರವಲ್ಲ, ಅದು ಬರೀ ಓದಲಿಕ್ಕಿರುವ ಜಾಗವಂತೂ ಅಲ್ಲವೇ ಅಲ್ಲ, ಅನೇಕ ಯಶಸ್ವೀ ಪ್ರೇಮ ಕಥೆಗಳು ಹುಟ್ಟಿದ್ದೇ ವಿಶ್ವವಿದ್ಯಾಲಯಗಳ ಗ್ರಂಥಾಲ ಯಗಳಲ್ಲಿ ಎಂದರೆ ತಪ್ಪಾಗಲಾರದು.

Vinayak M Bhat Column: ಮರೆತು ಹೋದ ಮಲೆನಾಡಿನ ಗತಕಾಲದ ವರ್ಷ ವೈಭವ

ಮರೆತು ಹೋದ ಮಲೆನಾಡಿನ ಗತಕಾಲದ ವರ್ಷ ವೈಭವ

ಮಲೆನಾಡಿನ ಮಳೆಗಾಲವೆಂದರೆ ಅದು ಎಡಬಿಡದ ಕುಂಭ ದ್ರೋಣ ವರ್ಷಧಾರೆ, ಸೂರ್ಯನಿಗೂ ಮಲೆ ನಾಡಿಗೂ ಮೂರು ತಿಂಗಳು ಸಂಬಂಧವೇ ಇರುತ್ತಿರಲಿಲ್ಲ. ಒಂದು ಸಣ್ಣ ಮಳೆ, ಇನ್ನೊಂದು ದೊಡ್ಡ ಮಳೆ, ಅಷ್ಟೇ ಬಿಟ್ಟರೆ ಮಳೆಯಂತೂ ನಿರಂತರವಾಗಿ ಇರುತ್ತಿತ್ತು. ಮಲೆನಾಡಿನಲ್ಲಿ ಮಳೆಗಾಲ ಎಂದರೆ ಪ್ರಕೃತಿಯ ಒಂದು ಅದ್ಭುತವಾದ ಸೌಂದರ್ಯಪೂರ್ಣ ಹಬ್ಬ. ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿ ನಲ್ಲಿ ಬರುವ ಈ ಪ್ರದೇಶವು ತನ್ನ ದಟ್ಟವಾದ ಹಸಿರು, ಧುಮ್ಮಿಕ್ಕುವ ಜಲಪಾತಗಳು ಮತ್ತು ಮಳೆಗಾಲದ ವಿಶೇಷ ಜೀವನಶೈಲಿಗೆ ಹೆಸರುವಾಸಿಯಾಗಿದೆ

Vinayaka M Bhat Column: ಒಂದು ಕಾಲದಲ್ಲಿ ಹೋಮ್‌ ಮಿನಿಸ್ಟ್ರೇ ಸ್ಟ್ರಾಂಗು ಗುರು !

ಒಂದು ಕಾಲದಲ್ಲಿ ಹೋಮ್‌ ಮಿನಿಸ್ಟ್ರೇ ಸ್ಟ್ರಾಂಗು ಗುರು !

ಲಾಲ್ ಬಹದ್ದೂರ್ ಶಾಸ್ತ್ರೀ, ಪಿ.ವಿ. ನರಸಿಂಹರಾವ್ ಮುಂತಾದವರು ಪ್ರಧಾನಿಯಾಗುವುದಕ್ಕೂ ಮುಂಚೆ ಕ್ರಮವಾಗಿ ನೆಹರು ಹಾಗೂ ರಾಜೀವ್ ಗಾಂಧಿಯವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸುತ್ತಿದ್ದರು. ಇಂದಿರಾ ಸಚಿವ ಸಂಪುಟದಲ್ಲಿ ಗೃಹಮಂತ್ರಿಯಾಗಿದ್ದ ಆರ್.ವೆಂಕಟರಾಮನ್ ಮತ್ತು ಜ್ಞಾನಿ ಜೈಲ್ ಸಿಂಗ್ ಅವರಂತೂ ಮುಂದೆ ರಾಷ್ಟ್ರಪತಿಯಾಗಿದ್ದರು.

Vinayaka M Bhat Column: ಪ್ರಾರ್ಥನೆಗೊಲಿದ ಆಸನ, ಅಂತೂ ಶುರುವಾದ ಶಿವ ಶಾಸನ

ಪ್ರಾರ್ಥನೆಗೊಲಿದ ಆಸನ, ಅಂತೂ ಶುರುವಾದ ಶಿವ ಶಾಸನ

ಹೈಕಮಾಂಡ್ ನಲ್ಲಿ ಶಿವಕುಮಾರ್ ಅವರಿಗಿರುವ ಖದರು ಅದು. ಜೈಲಿನಿಂದ ಬಿಡುಗಡೆಯಾಗಿ ಇನ್ನೂ ಎಂಟೊಂಬತ್ತು ತಿಂಗಳುಗಳು ಕಳೆದಿರಲಿಲ್ಲ, ಗಂಭೀರವಾದ ಆರೋಪವನ್ನೆದುರಿಸುತ್ತಿರುವ, ಜೈಲು ವಾಸ ಮಾಡಿಬಂದ ಶಿವಕುಮಾರ್ ಅವರನ್ನು ಎಲ್ಲರಿಗೂ ಅಚ್ಚರಿಯಾಗುವಂತೆ ರಾಜ್ಯಾಧ್ಯಕ್ಷರ ಹುದ್ದೆಗೆ ಸೋನಿಯಾ ಗಾಂಧಿ ನೇಮಕ ಮಾಡಿದ್ದರು.

Vinayaka M Bhat Column: ವೇತನ ಪರಿಷ್ಕರಣೆ, ಶಿವರಾತ್ರಿಯ ಮನೆಗೆ ಏಕಾದಶಿ ಬಂದಂತೆ !

ವೇತನ ಪರಿಷ್ಕರಣೆ, ಶಿವರಾತ್ರಿಯ ಮನೆಗೆ ಏಕಾದಶಿ ಬಂದಂತೆ !

ಬೆಂಗಳೂರಿನಂತಹ ನಗರದಲ್ಲಿ ಕನಿಷ್ಠವೇತನ ಶೇ.60ಕ್ಕಿಂತಲೂ ಹೆಚ್ಚಿಗೆ ಏರಿಕೆಯಾಗಿದೆ ಮತ್ತು ಈ ಏರಿಕೆ ರಾಜ್ಯದ ಕೈಗಾರಿಕಾ ಬೆಳವಣಿಗೆಯ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ, ಇದರ ಕುರಿತು ಕರ್ನಾಟಕದ ಜನರಿಗೆ ಖಬರೇ ಇಲ್ಲ. ಮುಖ್ಯಮಂತ್ರಿ ಸ್ಥಾನ ದಿಂದ ಸಿದ್ದರಾಮಯ್ಯ ಕೆಳಗಿಳಿದರು ಎಂದು ಒಂದು ವಲಯ ಬೇಸರ ದಲ್ಲಿದ್ದರೆ, ಇನ್ನೊಂದು ವಲಯ ಡಿ.ಕೆ. ಶಿವಕುಮಾರ್‌ರವರು ಅಂತೂ ಮುಖ್ಯಮಂತ್ರಿಯಾದರು ಎಂದು ಸಂಭ್ರಮಿಸುವುದರಲ್ಲಿ ಬ್ಯೂಸಿ ಯಾಗಿದ್ದಾರೆ.

Vinayaka M Bhat Column: ಬಿರು ಬೇಸಿಗೆಯನ್ನೂ ಸಹನೀಯವಾಗಿಸುವ ಅಮರಫಲ

ಬಿರು ಬೇಸಿಗೆಯನ್ನೂ ಸಹನೀಯವಾಗಿಸುವ ಅಮರಫಲ

ಸೂರ್ಯನ ಆಘಾತಕ್ಕೆ ನೂರಾರು ಜನ ಪ್ರತಿ ವರ್ಷ ಬಲಿಯಾಗುತ್ತಾರೆ. ಹೀಗೆ ‘ಸನ್ ಸ್ಟ್ರೋಕ್’ ಆದವರಿಗೆ ಅತ್ಯಂತ ಹಾಗೂ ಏಕೈಕ ಪರಿಣಾಮಕಾರಿ ಚಿಕಿತ್ಸೆ / ಔಷಧಿ ಅಂದರೆ ಅದು ಗಳಿತ ಮಾವಿನ ಹಣ್ಣಿನ ಲೇಪನವಂತೆ. ‘ಸನ್ ಸ್ಟ್ರೋಕ್’ ಆದವರಿಗೆ ಎಷ್ಟು ಸಾಧ್ಯವೋ ಅಷ್ಟು ಗಳಿತ ಮಾವಿನಹಣ್ಣನ್ನು ಆದಷ್ಟು ಬೇಗನೇ ಮೈತುಂಬಾ ಲೇಪಿಸಬೇಕಂತೆ, ಹಾಗೆ ಲೇಪಿಸಿದರೆ ಅವರ ಜೀವವನ್ನು ಬಚಾವ್ ಮಾಡಬಹುದು ಎನ್ನುತ್ತಾರೆ ಅಲ್ಲಿಯ ಜನ.

Vinayaka M Bhat Column: ಅನುಭವಾಮೃತ: ವೇದಾಂತ ಸಾಹಿತ್ಯ ಸರದ ಶಿಖಾಮಣಿ

ಅನುಭವಾಮೃತ: ವೇದಾಂತ ಸಾಹಿತ್ಯ ಸರದ ಶಿಖಾಮಣಿ

19ನೇ ಮತ್ತು 20ನೇ ಶತಮಾನದ ಪಠ್ಯಗ್ರಂಥಗಳಲ್ಲಿ ಅನುಭವಾಮೃತದ ಪದ್ಯಗಳು ಇರುತ್ತಿದ್ದವು. ಹಾಗಾಗಿ ವಿದ್ಯಾರ್ಥಿಗಳಿಗೆ ಅನೇಕ ಪದ್ಯಗಳು ಕಂಠಪಾಠವಾಗಿರುತ್ತಿತ್ತು. ಕನ್ನಡದ ಮೊದಲ ಪಠ್ಯವೆನ್ನಿಸಿದ ‘ಪ್ರಾಕಾವ್ಯಮಾಲಿಕೆ’ಯಲ್ಲಿ ಅನುಭವಾಮೃತದ ಹತ್ತಾರು ಪದ್ಯಗಳು ಪ್ರಕಟ ವಾಗಿತ್ತಂತೆ. ಈಚಿನ ಪಠ್ಯಗಳಲ್ಲಿ ಕನ್ನಡದ ಎಷ್ಟೋ ಶ್ರೇಷ್ಠ ಕವಿಗಳ ಪದ್ಯಗಳು ಬಿಟ್ಟು ಹೋದ ಹಾಗೆ ಅನುಭವಾಮೃತದ ಪದ್ಯಗಳೂ ಬಿಟ್ಟು ಹೋಗಿವೆ.

Vinayaka V Bhat Column: ಇಂದಿನ ಪತ್ರಕರ್ತರಿಗೆ ನಾರದರು ಆದರ್ಶವಾಗಬೇಕು !

ಇಂದಿನ ಪತ್ರಕರ್ತರಿಗೆ ನಾರದರು ಆದರ್ಶವಾಗಬೇಕು !

ಹೀಗೆ ವೃತ್ತಪತ್ರಿಕೆ, ವೃತ್ತಾಂತಪತ್ರಿಕೆ, ವಾರ್ತಾಪತ್ರಿಕೆ, ವರ್ತಮಾನಪತ್ರಿಕೆ, ಸಮಾಚಾರ ಪತ್ರಿಕೆ, ದಿನಪತ್ರಿಕೆ ಅಥವಾ ಇಂಗ್ಲಿಷಿನಲ್ಲಿ ಒಂದೇ ಪದದಲ್ಲಿ ಹೇಳಬೇಕೆಂದರೆ ‘ನ್ಯೂಸ್ ಪೇಪರ್’ನ ಅದ್ಭುತ ಇತಿಹಾಸ ಕೆದಕುವಾಗ ನನಗೆ ಸಿಕ್ಕಿದ್ದು 1968ರಲ್ಲಿ ಪ್ರಕಟವಾದ, ಸ್ವತಃ ಪತ್ರಕರ್ತರಾಗಿದ್ದ ನಮ್ಮ ಡಿವಿಜಿಯವರು ರಚಿಸಿದ ‘ವೃತ್ತಪತ್ರಿಕೆ’ ಎನ್ನುವ ಕಿರುಹೊತ್ತಗೆ.

Vinayaka M Bhat Column: ಸನ್ಯಾಸಿಯಷ್ಟೇ ಆತನ ಜನ್ಮದಾತರ ತ್ಯಾಗವೂ ದೊಡ್ಡದು

ಸನ್ಯಾಸಿಯಷ್ಟೇ ಆತನ ಜನ್ಮದಾತರ ತ್ಯಾಗವೂ ದೊಡ್ಡದು

ವಾಸ್ತವವಾಗಿ, ಈ ಕೆಲಸವನ್ನು ನಾವು ಸಮಾಜ ಬಾಂಧವರು ಮಾಡಬೇಕಾಗಿತ್ತು, ಬದಲಿಗೆ ಸ್ವಾಮೀಜಿಯವರು ಮಾಡುವ ಮೂಲಕ ನಮಗೆ ಮುಜುಗುರವಾಗುವಂತಾಯ್ತು, ಆಗಿದ್ದು ಆಗಿ ಹೋಯ್ತು. ಆದರೆ ಇನ್ನು ಮುಂದೆ ಇದು ನಮ್ಮ ಕೆಲಸವಾಗಲಿದೆ ಎನ್ನುವ ಮಾತನ್ನು ಲಿಂಬಾವಳಿಯವರು ಆಡಿದರು.

Vinayak V Bhat Column: ರಾಷ್ಟ್ರಋಣ ಸಂದಾಯದ ಪ್ರಜ್ಞೆ: ಭಾರತದ ಇಂದಿನ ಅಗತ್ಯ

ರಾಷ್ಟ್ರಋಣ ಸಂದಾಯದ ಪ್ರಜ್ಞೆ: ಭಾರತದ ಇಂದಿನ ಅಗತ್ಯ

ಇಲ್ಲಿ ಪುರಂದರ ದಾಸರು ‘ಋಣ’ ಎನ್ನುವುದನ್ನು ಆರ್ಥಿಕ ಸಾಲಕ್ಕೆ ಹೋಲಿಸಿ ಬರೆದ ಸಾಲುಗಳಂತೆ ಕಂಡರೂ, ಸೂಕ್ಷ್ಮವಾಗಿ ನೋಡಿದಾಗ ಇನ್ನೂ ಗಹನವಾದ ಅರ್ಥಕಲ್ಪನೆ ಅವರ ಮನಸ್ಸಿನಲ್ಲಿತ್ತು ಎನ್ನುವುದು ತಿಳಿಯುತ್ತೆ. ಸಾಮಾನ್ಯವಾಗಿ ಮಾತನಾಡುವಾಗ, ‘ನಾನು ನಿನಗೆ ಋಣಿ, ಅಥವಾ ಚಿರರುಣಿ, ನಿನ್ನ ಋಣದಲ್ಲಿ ಬೀಳುವುದು ನನಗಿಷ್ಟವಿಲ್ಲ, ಏನು ಮಾಡಿದರೂ ತಾಯಿಯ ಋಣ ವನ್ನು ತೀರಿಸ ಲಾಗದು’ ಮುಂತಾಗಿ ಋಣದ ಕುರಿತು ಮಾತನಾಡುತ್ತೇವೆ.

Vinayaka M Bhat Column: ಒಳ್ಳೆಯ ಮಾತನಾಡಲೂ ಸತತ ಅಭ್ಯಾಸದ ಬಲ ಬೇಕು !

ಒಳ್ಳೆಯ ಮಾತನಾಡಲೂ ಸತತ ಅಭ್ಯಾಸದ ಬಲ ಬೇಕು !

ಮನೆಯಲ್ಲಾಗಲೀ, ಸ್ನೇಹಿತರಲ್ಲಾಗಲೀ, ಹೆಂಡತಿಯ ಜತೆಗಾಗಲೀ ಅಥವಾ ಮಕ್ಕಳ ಜತೆಗಾಗಲೀ ಮಾತನಾಡುವಾಗ ನಾವು ಒಂದು ಮೇಲ್ಮೆಯನ್ನು ಕಾಯ್ದುಕೊಂಡರೆ, ಸಾರ್ವಜನಿಕ ವೇದಿಕೆ ಗಳಲ್ಲಿ ಮಾತನಾಡುವಾಗಲೂ ಅದೇ ಸುಸಂಸ್ಕೃತ ಮಾತುಗಳು ಬರುತ್ತೆ. ಅದಿಲ್ಲದಿದ್ದರೆ, ಅಸಂಬದ್ಧ ಮಾತನಾಡುವ ಇಂದಿನ ರಾಜಕಾರಣಿಗಳ, ಸಮಾಜದಲ್ಲಿ ತೋರಿಕೆಗೆ ದೊಡ್ಡವ ರೆನಿಸಿಕೊಂಡೂ ಸಣ್ಣವರಾಗುವವರ ಹಾಗಾಗುತ್ತದೆ.

Vinayak M Bhat Column: ಹೆಸರು ಮಾತ್ರ ದೊಡ್ಡದು, ಆದರೆ ಮೊಸರು ತೆಳ್ಳಗೇ !

ಹೆಸರು ಮಾತ್ರ ದೊಡ್ಡದು, ಆದರೆ ಮೊಸರು ತೆಳ್ಳಗೇ !

ಲೈಂಗಿಕ ಶೋಷಣೆ ಮತ್ತು ಬಲವಂತದ ಮತಾಂತರದ ಈ ಕೆಟ್ಟ ಕಥೆಯು 2022ರ ಪ್ರಾರಂಭ ವಾದದ್ದಾಗಿದ್ದು, ಈಗಲೂ ಕೆಲವು ಬಲಿಪಶುಗಳು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮದುವೆಯ ಸುಳ್ಳು ಭರವಸೆಯ ಮೇಲೆ ಸಹೋದ್ಯೋಗಿಯೊಬ್ಬ ತನ್ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ ಮಹಿಳೆಯೊಬ್ಬರು ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂತು.

Vinayak M Bhat Column: ಒಂದು ದೇಶ, ಒಂದೇ ಭಾಷೆ ಎನ್ನುವುದು ಸರಿಯಲ್ಲ

Vinayak V Bhat Column: ಒಂದು ದೇಶ, ಒಂದೇ ಭಾಷೆ ಎನ್ನುವುದು ಸರಿಯಲ್ಲ

ಇಂಗ್ಲೀಷು ಎಷ್ಟು ಬೇಕು, ನಮ್ಮ ಭಾಷೆಯ ಬೆಳವಣಿಗೆಯಲ್ಲಿ ಇಂಗ್ಲೀಷ್ ಹೇಗೆ ಸಹಾಯಕ ವಾಗಬಹುದು ಎಂದು ಡಿವಿಜಿ ಅತ್ಯಂತ ಜಾಣ್ಮೆಯಿಂದ ತೋರಿಸುತ್ತಾರೆ. ಕಳೆದವಾರ ತ್ರಿಭಾಷಾ ಸೂತ್ರದ ಕುರಿತು ಕುವೆಂಪು ಅವರ ‘ತ್ರಿಶೂಲ’ ಎನ್ನುವ ಅಷ್ಟೊಂದು ಸಮಂಜಸವಲ್ಲದ ಹಾಗೂ ತೀಕ್ಷ್ಣ ಟಿಪ್ಪಣಿಯ ಬಗ್ಗೆ ಬರೆದಿದ್ದೆ.

Vinayak M Bhat Column: ತ್ರಿಭಾಷಾ ಸೂತ್ರವಲ್ಲ, ಬೇಕಾದ್ದು ಬಹುಭಾಷೆಗಳಲ್ಲಿ ದ್ವಿಭಾಷೆ

ತ್ರಿಭಾಷಾ ಸೂತ್ರವಲ್ಲ, ಬೇಕಾದ್ದು ಬಹುಭಾಷೆಗಳಲ್ಲಿ ದ್ವಿಭಾಷೆ

ರಾಜಕೀಯ ಏನೇ ಇರಲಿ, ಒಂದು ಕಾಲದಲ್ಲಿ ಕನ್ನಡ ಕಾವಲು ಸಮಿತಿಯ ಜವಾಬ್ದಾರಿ ಹೊತ್ತಿದ್ದ ರಾಜ್ಯದ ಮುಖ್ಯಮಂತ್ರಿಗಳ ಮುಂದೆ, ಅದರಲ್ಲೂ ಕರ್ನಾಟಕದ ನಡುಮನೆ ಯಂತಿರುವ ದಾವಣಗೆರೆಯಲ್ಲಿ ನಿಂತು ಕನ್ನಡ ಮಾತನಾಡದೇ, ತುಷ್ಟೀಕರಣಕ್ಕೆ ಹಿಂದಿಯನ್ನು ಮೇಡಮ್ ಭಾಷಣಕ್ಕೆ ಆಯ್ಕೆ ಮಾಡಿಕೊಂಡಿರುವುದನ್ನು ಯಾರೂ ಪ್ರಶ್ನೆ ಮಾಡುವ ಧೈರ್ಯ ತಾಕತ್ತು ತೋರಿಸದೇ, ಕೇಂದ್ರ ಸರಕಾರದಿಂದ ಹಿಂದಿ ಹೇರಿಕೆಯಾಗುತ್ತಿದೆ, ನಾವು ಇದನ್ನು ಸಹಿಸುವುದಿಲ್ಲ ಎಂದು ಬೊಬ್ಬೆ ಹಾಕುವುದಲ್ಲಿ ಯಾವ ಪುರುಷಾರ್ಥವಿದೆಯೋ ಕಾಣೆ

Vinayak V Bhat Column: ಸುಸಂಸ್ಕೃತ ರಾಮಚಂದ್ರನೇ ನಿಜವಾದ ಜಂಟ್ಲ್‌ʼಮನ್‌

ಸುಸಂಸ್ಕೃತ ರಾಮಚಂದ್ರನೇ ನಿಜವಾದ ಜಂಟ್ಲ್‌ʼಮನ್‌

ಶ್ರೀರಾಮ ನವಮಿಯ ಸುಸಂದರ್ಭದಲ್ಲಿ ಅನುಸರಣೀಯವಾಗಿರುವ ಶ್ರೀರಾಮ ಗುಣಗಳನ್ನು ಪರಿಭಾವಿಸಬೇಕು ಎನ್ನುವುದು ನನ್ನ ಸಂಕಲ್ಪವಾಗಿತ್ತು. ಇಡಿಯಾಗಿ ರಾಮಾಯಣವನ್ನು ಓದಲಾಗದ, ಓದಿದರೂ ಪೂರ್ತಿ ಅರ್ಥಮಾಡಿಕೊಳ್ಳಲಾಗದ, ಅಲ್ಲಿ ಇಲ್ಲಿ ಕೇಳಿ-ನೋಡಿ ಶ್ರೀರಾಮನ ಕುರಿತಾಗಿ ಅಭಿಮಾನ ಬೆಳೆಸಿಕೊಂಡಿರುವ ನಮ್ಮಂಥವರಿಗೆ ಘನೀಭೂತವಾದ ಶ್ರೀರಾಮಗುಣ ಘೃತವನ್ನು ಬಡಿಸು ವವರಾರು? ಅವನನ್ನು ಮಾತ್ರ ನಮಗೆ ಪರಿಚಯಿಸುವವರಾರು ಎನ್ನುವ ವಿಚಾರ ಬಂದಾಗ, ನನಗೆ ನೆನಪಾಗಿದ್ದು, ದಿವಂಗತ ಡಾ.ಕೆ.ಎಸ್.ನಾರಾಯಣಾಚಾರ್ಯರ ‘ರಾಮಾಯಣ ಸಾಹಸ್ರೀ’ ಗ್ರಂಥಮಾಲಿಕೆ.

Vinayak V Bhat Column: ಸೋಲು-ಗೆಲುವು ತಾತ್ಕಾಲಿಕ, ಔದಾರ್ಯ-ಸೌಶೀಲ್ಯ ಶಾಶ್ವತ

ಸೋಲು-ಗೆಲುವು ತಾತ್ಕಾಲಿಕ, ಔದಾರ್ಯ-ಸೌಶೀಲ್ಯ ಶಾಶ್ವತ

ಚೆಂಡನ್ನು ಎತ್ತಿಕೊಂಡು ಮಿರಾಜ್‌ಗೆ ಹಸ್ತಾಂತರಿಸಲು ಆಘಾ ತಮ್ಮ ಕ್ರೀಸ್‌ನಿಂದ ಹೊರ ನಡೆದರು. ಆದರೆ ಅಷ್ಟರಲ್ಲಿ ಮಿರಾಜ್ ವಿಕೆಟ್‌ಗಳನ್ನು ಹೊಡೆದುರುಳಿಸಲು ಅವಕಾಶವನ್ನು ಬಳಸಿಕೊಂಡು ಅವರನ್ನು ಔಟ್ ಮಾಡಿದರು. ಮೈದಾನದಿಂದ ಹೊರಡುವ ಮೊದಲು ತಮ್ಮ ಹೆಲ್ಮೆಟ್ ಮತ್ತು ಕೈಗವಸುಗಳನ್ನು ಎಸೆದರು. ರನ್ ಔಟ್ ಸಮರ್ಥನೀಯ ಎಂದು ಎಂಸಿಸಿ ಸ್ಪಷ್ಟ ಪಡಿಸಿದೆ.

Vinayaka V Bhat Column: ಶಾಂತಿಯಂತೆ ಸಂಗ್ರಾಮಕ್ಕೂ ಜಗತ್ತಿಗೆ ಭಾರತವೇ ಆದರ್ಶ

ಶಾಂತಿಯಂತೆ ಸಂಗ್ರಾಮಕ್ಕೂ ಜಗತ್ತಿಗೆ ಭಾರತವೇ ಆದರ್ಶ

ಸಾಮ, ದಾನ, ಭೇದ ಎನ್ನುವ ಮೂರು ಉಪಾಯಗಳು ಫಲ ನೀಡದಿದ್ದಾಗ ಮಾತ್ರ ಭಾರತದಲ್ಲಿ ದಂಡವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಭಾರತೀಯರು ಶಾಂತಿಪ್ರಿಯರು, ಎರಡು ಮಾತಿಲ್ಲ; ಆದರೆ ಯುದ್ಧವನ್ನು, ಯುದ್ಧದ ನೀತಿಯನ್ನು ಜಗತ್ತಿಗೆ ಕಲಿಸಿದವರು ಭಾರತೀಯರೇ ಆಗಿದ್ದಾರೆ ಎಂದರೆ ತಪ್ಪಾಗಲಾರದು.

Vinayaka V Bhat Column: ಇದು, ಮಾವು ಮಿಡಿವ ಆ ಮಿಡಿಗೆ ಜನ ತುಡಿಯುವ ಕಾಲ

ಇದು, ಮಾವು ಮಿಡಿವ ಆ ಮಿಡಿಗೆ ಜನ ತುಡಿಯುವ ಕಾಲ

ಬಿಸಿ ಅನ್ನಕ್ಕೆ ಮಿಡಿ ಉಪ್ಪಿನಕಾಯಿ ಹಾಗೂ ಕೊಬ್ಬರಿ ಎಣ್ಣೆಯಷ್ಟು ರುಚಿ ಬೇರಾವು ದರಿಂದಲೂ ಬರಲಿಕ್ಕಿಲ್ಲ, ಉಂಡವನೇ ಬಲ್ಲ ಅದರ ರುಚಿಯನ್ನು. ಊಟದ ಜತೆಯಲ್ಲಿ ಬಳಕೆಯಾಗುವುದನ್ನು ಬಿಟ್ಟೂ ಉಪ್ಪಿನಕಾಯಿಯ ಉಪಯೋಗ ಬಹಳವಿದೆ. ಅದನ್ನು ಹೇಳ ಹೊರಟರೆ ಅದೇ ಒಂದು ಲೇಖನವಾದೀತು. ಕಡ್ಲೆಪುರಿಗೆ ಕಲಸಿ ತಿನ್ನುವವರಿದ್ದಾರೆ, ಇನ್ನು ಎಣ್ಣೆ ಸೇವಕರಿಗೂ ಉಪ್ಪಿನಕಾಯಿ ಜತೆಗಿದ್ದರೆ ಸಂತೋಷವೋ ಸಂತೋಷ.

Vinayaka V Bhat Column: ಭಾರತೀಯರಲ್ಲಿ ಮರೆಯಾಗುತ್ತಿರುವ ಅಭಿವಾದನ ಸಂಸ್ಕೃತಿ

ಭಾರತೀಯರಲ್ಲಿ ಮರೆಯಾಗುತ್ತಿರುವ ಅಭಿವಾದನ ಸಂಸ್ಕೃತಿ

ನಾವು ಯಾರನ್ನಾದರೂ ಭೇಟಿಯಾದಾಗ, ಗೌರವ ಸೂಚಿಸಲು ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಎಂದು ಹೇಳುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ಆದರೆ, ಬಹುತೇಕ ಅದು ಪ್ರಾಮಾಣಿಕ ನಮಸ್ಕಾರವಾಗಿರುವುದಿಲ್ಲ, ಹೇಳಬೇಕು ಅಂತ ಹೇಳುವುದಾಗಿದೆ, ‘ನಮಸ್ಕಾ ರ ಸರ್, ಹೇಗಿದೀರ?’ ಅಂತ ಕೇಳುವಾಗ, ನಮಸ್ಕಾರ ಎನ್ನುವುದು ಮಾತನ್ನು ಪ್ರಾರಂಭಿಸಲು ಬಳಸುವ ಒಂದು ಪದವಷ್ಟೇ ಆಗಿರುತ್ತದೆಯೇ ವಿನಾ ಅದರ ಹಿಂದೆ ನಮಸ್ಕಾರದ ಭಾವವೇ ಇರುವುದಿಲ್ಲ

Vinayaka V Bhat Column: ಪಾಕಿಸ್ತಾನವನ್ನು ಸೋಲಿಸಿದಾಗ ಸಿಗುವ ಖುಷಿಯೇ ಬೇರೆ !

ಪಾಕಿಸ್ತಾನವನ್ನು ಸೋಲಿಸಿದಾಗ ಸಿಗುವ ಖುಷಿಯೇ ಬೇರೆ !

ನಾವು ಗೆದ್ದಿದ್ದ 2024ರ ಪಂದ್ಯಾವಳಿಗೆ ಹೋಲಿಸಿದರೆ ಈ ಬಾರಿಯ ಟಿ-20 ವಿಶ್ವಕಪ್ ಪಂದ್ಯಾ ವಳಿ ಬಹು ಆಯಾಮಗಳಲ್ಲಿ ವಿಶೇಷವಾಗಿದೆ, ಭಾರತ ತಂಡದ ನೇತೃತ್ವದಲ್ಲಿ ಬದಲಾವಣೆ ಯಾಗಿದೆ. ರೋಹಿತ್ ಶರ್ಮ ಬದಲಿಗೆ ಸೂರ್ಯಕುಮಾರ್ ನಾಯಕತ್ವ ವಹಿಸಿದ್ದಾರೆ, ರೋಹಿತ್, ಕೋಹ್ಲಿ, ರವೀಂದ್ರ ಜಡೇಜರಂಥ ಅನುಭವಿ ಆಟಗಾರರು ಈ ಬಾರಿ ತಂಡದಲ್ಲಿಲ್ಲ, ಆ ಜಾಗದಲ್ಲಿ ಹೊಸ ಆಟಗಾರರ ಸೇರ್ಪಡೆಯಾಗಿದೆ.

Vinayaka V Bhat Column: ಭಾಷಣವನ್ನೂ ಗಾಯನದಂತೆ ಇಂಪಾಗಿಸಬಹುದು

ಭಾಷಣವನ್ನೂ ಗಾಯನದಂತೆ ಇಂಪಾಗಿಸಬಹುದು

ಅಂದಿನ ಸಭೆಯ ಪ್ರಸ್ತುತತೆಯನ್ನು ಗಮನದಲ್ಲಿಟ್ಟು, ತನ್ನನ್ನು ಯಾತಕ್ಕೆ ಕರೆಸಿದ್ದಾರೆ ಎನ್ನುವು ದನ್ನು ಮರೆಯದೇ ಹಾಗೂ ಸಮಯ ಸಂದರ್ಭಗಳನ್ನು ಪರಾಂಬರಿಸಿ, ಇನ್ನೂ ಸ್ವಲ್ಪ ಹೊತ್ತು ಇವರು ಮಾತನಾಡಬಹುದಿತ್ತು ಎನ್ನುವ ಭಾವ ಪ್ರೇಕ್ಷಕರಲ್ಲಿರುವಾಗಲೇ ಚಿಕ್ಕದಾಗಿ ಚೊಕ್ಕದಾಗಿ ಮಾತನಾಡಿ ಮುಗಿಸುವವನೇ ನಿಜವಾದ ಭಾಷಣಕಾರ ಎನ್ನಬಹುದು.

Loading...