Hari Paraak Column: ಮೇಕೆಗಳು ಮಾತಾಡೋ ಭಾಷೆ: ʼಆಡುʼ ಭಾಷೆ
‘ಗಜಪಡೆ’ ಅಂತ ತಮ್ಮನ್ನು ತಾವು ಕರೆದುಕೊಳ್ಳುವ, ಇತರರಿಂದ ಸೆಲೆಬ್ರಿಟೀಸ್ ಅಂತ ಕರೆಸಿ ಕೊಳ್ಳುವ ದರ್ಶನ್ ಅಭಿಮಾನಿಗಳ ಮೊನ್ನೆ ಇಬ್ಬಂದಿತನ ಆಗಿತ್ತು. ಅದಕ್ಕೆ ಕಾರಣ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ರೀ-ರಿಲೀಸ್ ಆಗಿದ್ದ ‘ಅಪ್ಪು’ ಚಿತ್ರ. ಸಹಜ ವಾಗಿ ಅಪ್ಪು ಅವರ 50ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಅನ್ನೋ ಸಕಾ ರಣಕ್ಕೆ ಪುನೀತ್ ಅಭಿಮಾನಿಗಳು ಅಪ್ಪು ಸಿನಿಮಾವನ್ನು ಬಿಡುಗಡೆ ಮಾಡಿಸಿ ನೋಡಿ ಸಂಭ್ರಮ ಪಡುತ್ತಿದ್ದರು

ಅಂಕಣಕಾರ ಹರಿ ಪರಾಕ್

ತುಂಟರಗಾಳಿ
ಈ ದರ್ಶನ್ ಅಭಿಮಾನಿಗಳು ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ಕಲಹಕ್ಕೆ ಕೊನೆ ಇಲ್ಲ ಅಂತ ಕಾಣುತ್ತೆ. ಸೋಷಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ಪಡೆ ಗಳ ಹೊಡೆದಾಟ ನೋಡಿ ಸಾಕಾಗಿರುವವರಿಗೆ ನಿನ್ನೆ ಮತ್ತೊಂದು ಹೊಸ ವಿಷಯ ಸಿಕ್ಕಿತ್ತು. ‘ಗಜಪಡೆ’ ಅಂತ ತಮ್ಮನ್ನು ತಾವು ಕರೆದುಕೊಳ್ಳುವ, ಇತರರಿಂದ ಸೆಲೆಬ್ರಿಟೀಸ್ ಅಂತ ಕರೆಸಿಕೊಳ್ಳುವ ದರ್ಶನ್ ಅಭಿಮಾನಿಗಳ ಮೊನ್ನೆ ಇಬ್ಬಂದಿತನ ಆಗಿತ್ತು. ಅದಕ್ಕೆ ಕಾರಣ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ರೀ-ರಿಲೀಸ್ ಆಗಿದ್ದ ‘ಅಪ್ಪು’ ಚಿತ್ರ. ಸಹಜವಾಗಿ ಅಪ್ಪು ಅವರ 50ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಅನ್ನೋ ಸಕಾರಣಕ್ಕೆ ಪುನೀತ್ ಅಭಿಮಾನಿಗಳು ಅಪ್ಪು ಸಿನಿಮಾವನ್ನು ಬಿಡುಗಡೆ ಮಾಡಿಸಿ ನೋಡಿ ಸಂಭ್ರಮ ಪಡುತ್ತಿದ್ದರು.
ಆದರೆ ‘ಗೋಕುಲಾಷ್ಟಮಿಗೂ ಇಮಾಮ್ ಸಾಬ್ರಿಗೂ ಏನ್ ಸಂಬಂಧ?’ ಅಂತ ಕೇಳಲು ಅನುಕೂಲ ಆಗುವಂತೆ ದರ್ಶನ್ ಕಡೆಯಿಂದ ಅಥವಾ ದರ್ಶನ್ ಪಡೆಯಿಂದ ಪ್ರಸನ್ನ ಅನ್ನೋ ಥಿಯೇಟರ್‌ನಲ್ಲಿ ‘ಕರಿಯ’ ಚಿತ್ರವನ್ನು ರೀ-ರಿಲೀಸ್ ಮಾಡಿದ್ದು ಕಿರಿಕಿರಿಗೆ ಕಾರಣ ಆಗಿತ್ತು.
ಇದನ್ನೂ ಓದಿ: Hari Paraak Column: ಇರುವೆಗೆ ಸಿಕ್ಕದ ಸಕ್ಕರೆ- ಸೀಮೆಗಿಲ್ಲದ್ದು
‘ಇತ್ತ ನಮ್ಮ ಹೀರೋ ಹುಟ್ಟುಹಬ್ಬದ ದಿನ ಅವರ ಹೀರೋ ಸಿನಿಮಾ ರೀ-ರಿಲೀಸ್ ಮಾಡೋ ಅಗತ್ಯ ಏನಿತ್ತು?’ ಅಂತ ಅಪ್ಪು - ಕೆಂಡಾಮಂಡಲ ಆದ್ರೆ, ‘ಯಾರಿಗೂ ಗೊತ್ತಾಗ ದಂತೆ ಬಿಡುಗಡೆ ಮಾಡಿದ್ದರಿಂದ ಚಿತ್ರಮಂದಿರದಲ್ಲಿ ಕರಿಯ ಸಿನಿಮಾ ನೋಡಲು ಹತ್ತು ಜನನೂ ಇಲ್ಲ’ ಅನ್ನೋದು ದರ್ಶನ್ ಅಭಿಮಾನಿಗಳ ಬೇಸರ ಆಗಿತ್ತು.
ಹಾಗಾಗಿ ಕರಿಯನನ್ನು ನೋಡಲು ಜನರೇ ಬಾರದ ಕಾರಣ, ಅದನ್ನು ಬೇರೆ ಥರ ಬಿಂಬಿ ಸೋಣ ಅನ್ನೋ ನಿಟ್ಟಿನಲ್ಲಿ ಕೆಲವು ದರ್ಶನ್ ಅಭಿಮಾನಿಗಳು, ಈ ಸಮಯದಲ್ಲಿ ಕರಿಯ ರೀ-ರಿಲೀಸ್ ಬೇಡವಾಗಿತ್ತು ಅಂತ ತಮ್ಮ ಸಾಚಾತನವನ್ನು ಮೆರೆದಿದ್ದು ಮಾತ್ರ ವಿಶೇಷ.
ಲೂಸ್ ಟಾಕ್-ಸಿದ್ದರಾಮಯ್ಯ
ಏನ್ ಮುಖ್ಯಮಂತ್ರಿಗಳೇ, ಈ ಸಲ ಬಜೆಟ್‌ನಲ್ಲಿ ಯಾವುದರ ರೇಟ್ ಅನ್ನೂ ಜಾಸ್ತಿ ಮಾಡ್ಲಿಲ್ಲವಲ್ಲ, ಏನ್ ಸಮಾಚಾರ?
- ಏನ್ ಮಾಡೋದಪ್ಪ, ಎಲ್ಲದರ ರೇಟ್ ಜಾಸ್ತಿ ಮಾಡಿನೂ ಅಧಿಕಾರ ಉಳಿಸ್ಕೊಳ್ಳೋಕೆ ನಾನು ಮೋದಿ ಅಲ್ಲವಲ್ಲ..
ಸರಿ, ಅದೇನು, ಅಲ್ಪಸಂಖ್ಯಾತರು ಅಂತ ಇರೋ ಬರೋರಿಗೆಲ್ಲ ಫಂಡ್ ರಿಲೀಸ್ ಮಾಡಿಬಿಟ್ಟಿದ್ದೀರ, ಏನ್ ಸಮಾಚಾರ?
- ಇಂದ್ರೆ ರಾಜಕಾರಣ ನಡೀಬೇಕಲ್ಲ, ಅದಕ್ಕೆ ದಾನಗಳಲ್ಲಿ ಶ್ರೇಷ್ಠದಾನ ‘ಅನುದಾನ’ ಅಂತ ಡಿಸೈಡ್ ಮಾಡಿಬಿಟ್ಟಿದ್ದೀನಿ.
ಅಂದಂಗೆ ನಿಮ್ಮ ಸರಕಾರ ಬೀಳ್ಸೋಕೆ ತುಂಬಾ ಜನ ಪಿತೂರಿ ಮಾಡ್ತಾ ಇದ್ದಾರಂತೆ?
- ಏನ್ ಮಾಡೋದು ಕರ್ನಾಟಕದ ಮುಖ್ಯಮಂತ್ರಿಗಳ ಹಣೆಬರಹನೇ ಇಷ್ಟು, ಅವರಿಗೆ ಆಡಳಿತ ನಡೆಸೋಕಿಂತ ಅಧಿಕಾರ ಉಳಿಸಿಕೊಳ್ಳೋದೇ ದೊಡ್ಡ ಕೆಲಸ.
ನಿಮ್ಮವರೇ ನಿಮ್ಮನ್ನ ಕೆಳಗಿಳಿಸಬೇಕು ಅಂತ ನೋಡ್ತಾ ಇದ್ದಾರಂತೆ?
-ಹೌದು, ಏನ್ ಮಾಡೋಕಾಗುತ್ತೆ. ಶತ್ರುಗಳು ವಿರೋಧ್ ಪಕ್ಷಕ್ಕಿಂತ ನಮ್ ಪಕ್ಷದ ಇರೋದ್ ಜಾಸ್ತಿ. ಪಾರ್ಟಿ ಒಳಗೇ ಪಾರ್ಟಿಷನ್ ಜಾಸ್ತಿ.
ಈ ರಾಜಕೀಯ ಹೋಗ್ಲಿ ಬಿಡಿ, ಐಪಿಎಲ್ ಬರ್ತಾ ಇದೆ. ಈ ಸಲನಾದ್ರೂ ಆರ್ ಸಿಬಿ ಕಪ್ ಗೆಲ್ಲುತ್ತಾ?
- ಖಂಡಿತಾ ಗೆಲ್ಲಲೇಬೇಕು. ಇ ಅಂದ್ರೆ ಟೂರ್ನಮೆಂಟ್ ಅರ್ಧ ಮುಗಿದ ಮೇಲೆ ಬೇರೆ ಟೀಮಲ್ಲಿ ಯಾರ‍್ಯಾರು ಚೆನ್ನಾಗಿ ಆಡ್ತಾ ಇದ್ದಾರೋ ಅವರನ್ನೆ ‘ಆಪರೇಷನ್ ಕಮಲ’ ಮಾಡಿಸಿ ಆರ್‌ಸಿಬಿಗೆ ಸೇರಿಸಿಕೊಟ್ಟು ಹೆಲ್ಪ್ ಮಾಡಿ ಅಂತ ಅಮಿತ್ ಶಾಗೆ ಕೇಳಿದ್ದೀನಿ
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು-ಖೇಮುಶ್ರೀ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ಡ ಜಗಳ ಆಗಿತ್ತು. ಖೇಮು ಕೂಡಾ ಅವತ್ತು ತುಂಬಾ ಸಿಟ್ಟಲ್ಲಿದ್ದ. ಹಂಗಾಗಿ ಖೇಮುಶ್ರೀಯನ್ನು ಬಾಯಿಗೆ ಬಂದಂತೆ ಬಯ್ದ. ಖೇಮುಶ್ರೀ ಏನೂ ಕಡಿಮೆ ಇರಲಿಲ್ಲ. ಗಂಡನ ಮೇಲೆ ತಿರುಗಿ ಬಿದ್ದು ಅವನನ್ನು ಎಲ್ಲ ರೀತಿಯಲ್ಲೂ ಹೀಯಾಳಿಸಿದ್ದಳು. ಅದಕ್ಕೆ ಖೇಮುಗೆ ಸಿಕ್ಕಾಪಟ್ಟೆ ಬೇಜಾರಾಗಿ ಎದ್ದು ಗಾಡಿ ತಗೊಂಡು ಹೊರಗೆ ಹೋದ.
ಹೋದ್ರೆ ಹೋಗ್ಲಿ ಅಂತ ಖೇಮುಶ್ರೀ ಸುಮ್ಮನಾದಳು. ಆದರೆ, ಎಷ್ಟೊತ್ತಾದರೂ ಖೇಮು ವಾಪಸ್ ಬರಲಿಲ್ಲ. ಊಟದ ಟೈಮಿಗೆ ಬರ್ತಾನೆ ಅಂತ ಕಾದು ಕೂತಿದ್ದ ಖೇಮುಶ್ರೀಗೆ ಕೊಂಚ ಗಾಬರಿ ಆಯ್ತು. ಹಂಗಾಗಿ ಗಂಡನಿಗೆ ಕಾಲ್ ಮಾಡಿದಳು. ಮೊದಲೆರಡು ಸಲ, ಖೇಮು ಕಾಲ್ ರಿಸೀವ್ ಮಾಡಲಿಲ್ಲ. ಆಮೇಲೆ ಮೂರ್ನಾಲ್ಕು ಸಲ ಆದ್ಮೇಲೆ ಖೇಮು ಕಾಲ್ ತೆಗೆದು “ಏನು?" ಅಂದ. ಸದ್ಯ ಅಂತ ಸಮಾಧಾನಪಟ್ಟುಕೊಂಡ ಖೇಮುಶ್ರೀ “ಎಲ್ಲಿದ್ದೀರಾ?" ಅಂತ ಕೇಳಿದಳು.
ಅದಕ್ಕೆ ಖೇಮು ಸ್ವಲ್ಪ ಎಮೋಷನಲ್ ಆಗಿ ಮಾತನಾಡತೊಡಗಿದ- “ನಿಂಗೆ ನೆನಪಿದೆಯಾ, ೫ ವರುಷದ ಹಿಂದೆ ಸಿಟಿ ಸೆಂಟರ್ ಅಲ್ಲಿರೋ ಜ್ಯೂವೆಲ್ಲರ್ಸ್ ಒಂದಕ್ಕೆ ಹೋಗಿದ್ವಿ, ಅಲ್ಲಿ ನಿಂಗೊಂದು ಡೈಮಂಡ್ ನೆಕ್ಲೇಸ್ ತುಂಬಾ ಇಷ್ಟ ಆಗಿತ್ತು". ಖೇಮುಶ್ರೀ ಎಕ್ಸೈಟ್ ಆಗಿ “ಹೌದು, ಹೌದು" ಅಂದ್ಳು. ಖೇಮು ಮುಂದುವರಿಸಿದ “ಆದ್ರೆ ಅವತ್ತು ನನ್ನತ್ರ ದುಡ್ಡಿರಲಿಲ್ಲ. ಮುಂದೊಂದಿನ ಏನೇ ಆಗ್ಲಿ ಆ ನೆಕ್ಲೇಸ್‌ನ ನಾನು ನಿಂಗೆ ಕೊಡಿಸೇ ಕೊಡಿಸ್ತೀನಿ ಅಂತ ಹೇಳಿದ್ದೆ". ಖೇಮುಶ್ರೀ ಇನ್ನೂ ಎಕ್ಸೈಟ್ ಆಗಿ “ಹೌದು, ನಿಜ, ತುಂಬಾ ಚೆನ್ನಾಗಿ ನೆನಪಿದೆ" ಅಂದ್ಳು. ಅದಕ್ಕೆ ಖೇಮು “ಆ ಜ್ಯೂವೆಲ್ಲರಿ ಮುಂದಿರೋ ಬಾರಲ್ಲಿ ಕುಂತು ಕುಡಿತಾ ಇದ್ದೀನಿ. ಏನ್ ಕಾಲ್ ಮಾಡಿದ್ದು?" ಅಂತ ರೇಗಿದ.
ಲೈನ್ ಮ್ಯಾನ್
ಎಲ್ಲಾ ಹಬ್ಬಗಳು: ಕಾಮನ್ ಮ್ಯಾನ್ ಹಬ್ಬಗಳು
- ಹೋಳಿ: ಕಾಮನ ಮ್ಯಾನ್ ಹಬ್ಬ
ರಸ್ಕಿಟ್ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ
- ನಂಗೆ ‘ರಕ್ಷಿತ್’ ಇಷ್ಟ ಇಲ್ಲ, ‘ರಸ್ಕಿಟ್’ ಮಾತ್ರ ಇಷ್ಟ.
ಒಬ್ಬರ ಮೇಲೆ ಒಬ್ರು ದೂರುಗಳನ್ನು ಹೇಳದ ಯಾವುದೇ ಸಂಬಂಧವನ್ನ ಏನಂತಾರೆ?
- ‘ದೂರದ’ ಸಂಬಂಧ
ಸಮಯ ನಮ್ ಕೈಲಿ ಇರಲ್ಲ.
- ನಮ್ ಕೈಲಿ ಇರೋದು ಬರೀ ವಾಚು ಅಷ್ಟೇ.
ಸಂಭಾಷಣಾ ಪ್ರಧಾನ ಚಿತ್ರ ಚೆನ್ನಾಗಿದ್ರೆ ಅದರ ವಿಮರ್ಶೆ
- ಕಣ್ಮುಚ್ಚಿಕೊಂಡು ನೋಡಬಹುದು
ಹೊಸ ರಸ್ತೆ ಒಂದೇ ದಿನಕ್ಕೆ ಕಿತ್ತು ಬಂದಿರೋದಕ್ಕೆ ಏನ್ ಹೇಳ್ತೀರಾ?
-ಸೂಲಿಬೆಲೆ: ಕರುಳು ಕಿತ್ತುಬರುತ್ತೆ ಕಣ್ರೀ. ಸರಕಾರಕ್ಕೆ ಹೇಳಿ ರಸ್ತೆ ಜತೆಗೆ ಅದನ್ನೂ ರಿಪೇರಿ ಮಾಡ್ಸಣ ಬಿಡಿ.
ಕಾಶ್ಮೀರಿ ಪಂಡಿತರ ಸಂಕಷ್ಟಗಳಿಗೆ ಕಾರಣ ಯಾರು?
- ಬಿಜೆಪಿ‘ ‘ಪಂಡಿತ್’ ಜವಾಹರಲಾಲ್ ನೆಹರು
More than PEN today journalists require BALLS to ask questions
-ಅಂದ್ರೆ ‘ಬಾಲ್ ಪೆನ್’ ಬೇಕು ಅಂತನಾ?
ಮೇಕೆಗಳು ಮಾತಾಡೋ ಭಾಷೆ
-‘ಆಡು’ ಭಾಷೆ
ಸ್ಕೂಲ್ ಟೀಚರ್‌ನ ಮದುವೆ ಆಗುವುದರ ಅಪಾಯ
-ಸ್ಕೂಲಿಗೆ ಹೋಗೋ ಹುಡುಗೀನ ಮದುವೆ ಆಗಿದ್ದಾನೆ ಅಂತ ಯಾರಾದ್ರೂ ಕೇಸ್ ಹಾಕಬಹುದು.