ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಾಗರ ಪಂಚಮಿ 2025: ಈಶಾ ಸದ್ಗುರು ಸನ್ನಿಧಿಯ ನಾಗ ಮಂಟಪದಲ್ಲಿ ಪವಿತ್ರ ಅರ್ಪಣೆಗಳು ಮತ್ತು ಆಚರಣೆಗಳು

ನಾಗ ಪಂಚಮಿಯ ಶುಭ ಸಂದರ್ಭದಲ್ಲಿ, ಸದ್ಗುರು ಸನ್ನಿಧಿಯ ಸುತ್ತಲಿನ ಹಳ್ಳಿಗಳ ನೂರಾರು ಜನರು ಸದ್ಗುರುಗಳಿಂದ ಪ್ರತಿಷ್ಠಿತಗೊಂಡ ನಾಗ ಹಾಗೂ ಯೋಗೇಶ್ವರ ಲಿಂಗಕ್ಕೆ ಹಾಲನ್ನು ಸಮರ್ಪಿಸಿ ಅಭಿಷೇಕ ಮಾಡಿದರು. ತುಂಬಿದ ಹಾಲಿನ ಬಿಂದಿಗೆಗಳನ್ನು, ಮಕ್ಕಳಿಂದ ದೊಡ್ಡವ ರವರೆಗೆ ತಮ್ಮ ಹಳ್ಳಿಗಳಿಂದ ಶೋಭಾಯಾತ್ರೆಯ ಮೂಲಕ  ತಂದು, ಅದನ್ನು ನಾಗ ಹಾಗೂ ಯೋಗೇಶ್ವರ ಲಿಂಗದ ಸನ್ನಿಧಿಯಲ್ಲಿ ಸಮರ್ಪಿಸಿದರು.

ನಾಗ ಮಂಟಪದಲ್ಲಿ ಪವಿತ್ರ ಅರ್ಪಣೆಗಳು ಮತ್ತು ಆಚರಣೆಗಳು

ಚಿಕ್ಕಬಳ್ಳಾಪುರ ಈಶಾ ಕೇಂದ್ರದಲ್ಲಿ ನಾಗಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

Ashok Nayak Ashok Nayak Jul 30, 2025 12:20 AM

ಚಿಕ್ಕಬಳ್ಳಾಪುರ : ಈ ವರ್ಷ, ನಾಗರ ಪಂಚಮಿಯನ್ನು ಜುಲೈ ೨೯ರಂದು ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ ಶಕ್ತಿಯುತವಾಗಿ ಪ್ರಾಣಪ್ರತಿಷ್ಠೆ ಮಾಡಲಾದ ನಾಗ ಮಂಟಪದಲ್ಲಿ ನಾಗಾಚರಣೆಗಳು ಮತ್ತು ಅರ್ಪಣೆಗಳೊಂದಿಗೆ ಆಚರಿಸಲಾಯಿತು.

ಸದ್ಗುರುಗಳು ಮೂರು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಈಶಾ ಕೇಂದ್ರದದಲ್ಲಿ ಸದ್ಗುರುಗಳು ನಾಗ ನನ್ನು ಪ್ರಾಣ ಪ್ರತಿಷ್ಠೆ ಮಾಡಿದರು, ಇದು ೮೦೦ ವರ್ಷಗಳಲ್ಲಿ ಮೊದಲ ಬಾರಿಗೆ ಆದಂತಹ ಪ್ರಾಣ ಪ್ರತಿಷ್ಠೆಯಾಗಿದೆ.

ನಾಗ ಪಂಚಮಿಯ ಶುಭ ಸಂದರ್ಭದಲ್ಲಿ, ಸದ್ಗುರು ಸನ್ನಿಧಿಯ ಸುತ್ತಲಿನ ಹಳ್ಳಿಗಳ ನೂರಾರು ಜನರು ಸದ್ಗುರುಗಳಿಂದ ಪ್ರತಿಷ್ಠಿತಗೊಂಡ ನಾಗ ಹಾಗೂ ಯೋಗೇಶ್ವರ ಲಿಂಗಕ್ಕೆ ಹಾಲನ್ನು ಸಮರ್ಪಿಸಿ ಅಭಿಷೇಕ ಮಾಡಿದರು. ತುಂಬಿದ ಹಾಲಿನ ಬಿಂದಿಗೆಗಳನ್ನು, ಮಕ್ಕಳಿಂದ ದೊಡ್ಡವ ರವರೆಗೆ ತಮ್ಮ ಹಳ್ಳಿಗಳಿಂದ ಶೋಭಾಯಾತ್ರೆಯ ಮೂಲಕ  ತಂದು, ಅದನ್ನು ನಾಗ ಹಾಗೂ ಯೋಗೇಶ್ವರ ಲಿಂಗದ ಸನ್ನಿಧಿಯಲ್ಲಿ ಸಮರ್ಪಿಸಿದರು.  

ಈ ಸಂಪ್ರದಾಯ ಕಳೆದ ಎರಡು ವರ್ಷಗಳಿಂದ ಆಚರಣೆಯಲ್ಲಿದೆ. ಇದು ಒಂದು ವಿಶಿಷ್ಟವಾದ ಮತ್ತು ಪುರಾತನ ಸಂಪ್ರದಾಯವಾಗಿದೆ.ಈ ಕಾರ್ಯದಿಂದ ಅನೇಕ ಪ್ರಯೋಜನಗಳು ದೊರೆಯು ತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: Chikkaballapur News: ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಯಶಸ್ಸು: ಪೆರೆಸಂದ್ರ ಎಂ.ವೆಂಕಟೇಶ್

ನಾಗರ ಪಂಚಮಿಯ ಪವಿತ್ರ ಅರ್ಪಣೆಗಳು ಮತ್ತು ಆಚರಣೆಗಳು

ಭಕ್ತರಿಗೆ ನಾಗ ಮಂಟಪದಲ್ಲಿ “ಅನನ್ಯ ಬೆಣ್ಣೆ ಸೇವೆ,” “ಅನನ್ಯ ಸರ್ಪ ಸೇವೆ” ಮತ್ತು “ಮಹಾ ಆರತಿ” ಸೇರಿದಂತೆ ಶಕ್ತಿಯುತ ಆಚಾರಣೆಗಳನ್ನು ವೀಕ್ಷಿಸುವ ಅವಕಾಶ ಸಿಗುತ್ತದೆ. ಭಕ್ತರು ನಾಗ ದೋಷ ನಿವಾರಣ ಪ್ರಕ್ರಿಯೆಯಂತಹ ಪವಿತ್ರ ಅರ್ಪಣೆಗಳಲ್ಲಿ ಭಾಗವಹಿಸಬಹುದು - ಇದು ನಾಗ ದೋಷವನ್ನು ನಿವಾರಿಸಲು ಸಹಾಯ ಮಾಡುವ ಒಂದು ಗಹನವಾದ ಪ್ರಕ್ರಿಯೆ. ಈ ಅರ್ಪಣೆಯ ಭಾಗವಾಗಿ, ಭಾಗವಹಿಸುವವರಿಗೆ ಪ್ರಾಣಪ್ರತಿಷ್ಠೆ ಮಾಡಲಾದ ನಾಗ ಸೂತ್ರವನ್ನು ನೀಡಲಾಗುತ್ತದೆ, ಇದನ್ನು ಧರಿಸಿದಾಗ ನಾಗನ ಶಕ್ತಿ ಮತ್ತು ಅನುಗ್ರಹದೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದರ ಜೊತೆಗೆ, ಭಕ್ತರು ಯೋಗೇಶ್ವರ ಲಿಂಗಕ್ಕೆ ಕ್ಷೀರ ಸೇವೆಯನ್ನು(ಹಾಲಿನ ಅರ್ಪಣೆ) ಸಲ್ಲಿಸಬಹುದು, ಇದು ಗ್ರಹಣಶೀಲತೆ ಮತ್ತು ಭಕ್ತಿಯನ್ನು ಹೆಚ್ಚಿಸುತ್ತದೆ.

ನಾಗರ ಪಂಚಮಿ ಸಂಜೆ
ಜುಲೈ ೨೯ರ ಸಂಜೆ ೬.೧೫ರಿಂದ ಆರಂಭವಾಗುವ ಸಂಜೆಯ ಸಂಭ್ರಮಾಚರಣೆಗಳು ಸಮೃದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ:
• ಸದ್ಗುರು ಗುರುಕುಲಮ್ ಸಂಸ್ಕೃತಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ.
• ಈಶಾದ ಸ್ವಂತ ಸಂಗೀತ ತಂಡವಾದ “ಸೌಂಡ್ಸ್ ಆಫ್ ಈಶ”ದಿಂದ ಆಹ್ಲಾದಕರ  ಸಂಗೀತ.
• ಆದಿಯೋಗಿ ದಿವ್ಯ ದರ್ಶನ - ತಲ್ಲೀನಗೊಳಿಸುವ ರೂಪದಲ್ಲಿ ಆದಿಯೋಗಿಯ ಮೂಲ ಮತ್ತು ಯೋಗ ವಿಜ್ಞಾನದ ಅಪೂರ್ವ ದೃಶ್ಯ ನಿರೂಪಣೆಯ ಪ್ರಸ್ತುತಿ.
• ಆಹಾರ ಮಳಿಗೆಗಳು, ಆಟಗಳು, ಕರಕುಶಲ ವಸ್ತುಗಳು ಮತ್ತು ಸ್ಥಳೀಯ ಕಲಾವಿದರ ಪ್ರದರ್ಶನಗಳೊಂದಿಗೆ ಕೂಡಿದ ನಾಲ್ಕು ದಿನಗಳ ಗ್ರಾಮ ಜಾತ್ರೆ ನಡೆಯಿತು.