Hari Paraak Column: ಇರುವೆಗೆ ಸಿಕ್ಕದ ಸಕ್ಕರೆ- ಸೀಮೆಗಿಲ್ಲದ್ದು
ನನ್ನ ಟ್ಯಾಲೆಂಟ್‌ಗೆ ಬೆಲೆ ಇಲ್ಲ ಅಂತ ಬೇಜಾರು. ಇಂಥವರಿಗೆ ನೆನಪಿದ್ದರೆ ಕೆ.ಮಾದೇಶ್ ಎಂಬ ನಿರ್ದೇಶಕರು ಕನ್ನಡ ಚಿತ್ರರಂಗ ದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಅವೆಲ್ಲವೂ ರಿಮೇಕ್ ಚಿತ್ರಗಳೇ. ಅವೆಲ್ಲವೂ ಸಾಕಷ್ಟು ಹಣ ಮಾಡಿದರೂ, ಅವರು ಎಂದೂ ಗ್ರೇಟ್ ನಿರ್ದೇಶಕ ಎನಿಸಿಕೊಳ್ಳಲಿಲ್ಲ ಮತ್ತು ಇವತ್ತು ಮಾದೇಶ್ ಅವರನ್ನು ಚಿತ್ರರಂಗ ಹೆಚ್ಚು ಕಮ್ಮಿ ಮರೆತೇ ಬಿಟ್ಟಿದೆ.


ಇಂದಿನ ರಿಮೇಕ್ ಚಿತ್ರಗಳ ಕೆಲವು ನಿರ್ದೇಶಕರು ಪಾಪ, ತಮಗೆ ಬೆಲೆ ಸಿಗುತ್ತಿಲ್ಲ ಅಂತ ಸಾಕಷ್ಟು ಬಾರಿ ಅಳಲು ತೋಡಿ ಕೊಳ್ಳುತ್ತಾರೆ. ನಾನು ೪ ಚಿತ್ರಗಳನ್ನು ಕೊಟ್ಟಿದ್ದರೂ ಜನ ನನ್ನನ್ನು ಗುರುತಿಸುವುದೇ ಇಲ್ಲ. ಒಂದು ಸಿನಿಮಾ ಮಾಡಿದವರಿಗೆ ಬೆಲೆ ಕೊಡುವ ಜನ ನನಗೆ ಯಾಕೆ ಅದೇ ಬೆಲೆ ಕೊಡಲ್ಲ. ಜತೆಗೆ ನನ್ನನ್ನು ರಿಮೇಕ್ ಚಿತ್ರಗಳ ನಿರ್ದೇಶಕ ಎಂದೇ ಹೇಳುತ್ತಾರೆ. ಅದು ಬದಲಾಗಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ.
ರಿಮೇಕ್ ನಿರ್ದೇಶಕ ಎಂಬ ಪಟ್ಟದ ಬಗ್ಗೆ ಮಾತನಾಡುವುದಾದರೆ ಅದು ಸಹಜ. ಅವರು ಮಾಡಿರುವ ಎಲ್ಲಾ ಚಿತ್ರಗಳೂ ಬಹುತೇಕ ರಿಮೇಕ್ ಆಗಿರುತ್ತವೆ. ಹಾಗಾಗಿ ಒಬ್ಬ ರಿಮೇಕ್ ನಿರ್ದೇಶಕನಿಗೆ ಸಿಗುವಷ್ಟು ಮರ್ಯಾದೆ ಮಾತ್ರ ಅವರಿಗೆ ಸಿಗು ತ್ತಿದೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಇದರ ಬಗ್ಗೆ ಅವರಿಗೆ ಅಸಮಾಧಾನ. ನನ್ನ ಟ್ಯಾಲೆಂಟ್‌ಗೆ ಬೆಲೆ ಇಲ್ಲ ಅಂತ ಬೇಜಾರು. ಇಂಥವರಿಗೆ ನೆನಪಿದ್ದರೆ ಕೆ.ಮಾದೇಶ್ ಎಂಬ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಅವೆಲ್ಲವೂ ರಿಮೇಕ್ ಚಿತ್ರಗಳೇ. ಅವೆಲ್ಲವೂ ಸಾಕಷ್ಟು ಹಣ ಮಾಡಿದರೂ, ಅವರು ಎಂದೂ ಗ್ರೇಟ್ ನಿರ್ದೇಶಕ ಎನಿಸಿಕೊಳ್ಳಲಿಲ್ಲ ಮತ್ತು ಇವತ್ತು ಮಾದೇಶ್ ಅವರನ್ನು ಚಿತ್ರರಂಗ ಹೆಚ್ಚು ಕಮ್ಮಿ ಮರೆತೇಬಿಟ್ಟಿದೆ.
ಇದನ್ನೂ ಓದಿ: Harish Kera Column: ಬೆಳಕಿನ ಲೋಕ, ಕತ್ತಲಿಗೆ ಶೋಕ
ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರು ಅಂದಾಕ್ಷಣ ಕೆ.ಮಾದೇಶ್ ಖಂಡಿತಾ ಬಹುತೇಕರಿಗೆ ನೆನಪಾಗುವುದಿಲ್ಲ. ಅಷ್ಟೇ ಯಾಕೆ ಕನ್ನಡದ ಹಿರಿಯ ನಿರ್ದೇಶಕರಾಗಿದ್ದ ಡಿ.ರಾಜೇಂದ್ರಬಾಬು ಅವರು ಎಷ್ಟೋ ಸೂಪರ್‌ಹಿಟ್ ಚಿತ್ರಗಳನ್ನು ಕೊಟ್ಟವರು. ಸ್ವಂತ ಕಥೆಗಳನ್ನು ಮಾಡಿಯೂ ಸಕ್ಸಸ್ ನೋಡಿದವರು. ಆದರೆ ಅವರು ಹೆಚ್ಚು ರಿಮೇಕ್ ಚಿತ್ರಗಳನ್ನು ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರಿಗೆ ಸಲ್ಲಬೇಕಾದ ಬೆಲೆ ಎಂದೂ ಸಿಗಲಿಲ್ಲ. ಸೂಪರ್‌ಹಿಟ್ ಚಿತ್ರಗಳನ್ನು ಕೊಟ್ಟ ಬಾಬು ಅವರಿಗೇ ಸಿಗಬೇಕಾದ ಬೆಲೆ ಸಿಗಲಿಲ್ಲ. ಅವರೇ ಕೆಲವೊಮ್ಮೆ, “ಜನ ನನ್ನನ್ನು ಸಿಂಗ್ ಬಾಬು ಜತೆ ಕನ್ ಫ್ಯೂಸ್ ಮಾಡಿಕೊಳ್ಳುತ್ತಾರೆ, ನನಗೊಂದು ಐಡೆಂಟಿಟಿನೇ ಇಲ್ಲ" ಎಂದು ಬೇಸರಿಸಿಕೊಂಡಿದ್ದರು. ಇದರ ಮುಂದೆ ಇಂದಿನ ನಿರ್ದೇಶಕರ ಕೊರಗು ಏನೂ ಅಲ್ಲ. ಈ ಹೊಸ ನಿರ್ದೇಶಕರು ಸಾಧಿಸಬೇಕಾಗಿದ್ದು ಇನ್ನೂ ಬಹಳ ಇದೆ. ಅದನ್ನು ತಮ್ಮ ಸ್ವಂತ ಕಥೆಗಳ ಮೂಲಕ ಸಾಧಿಸಿ ಆಮೇಲೆ ಕ್ರೆಡಿಟ್ ಕೊಡ್ತಿಲ್ಲ ಅಂತ ಮಾತಾಡಿದರೆ ಅದಕ್ಕೆ ಬೆಲೆ ಇರುತ್ತೆ.
ಲೂಸ್ ಟಾಕ್- ಸ್ಯಾಂಡಲ್‌ವುಡ್ ಡೈರೆಕ್ಟರ್
ಏನ್ ಸರ್, ಹೆಂಗ್ ನಡೀತಿದೆ ನಿಮ್ಮ ಸಿನಿಮಾ ಶೂಟಿಂಗ್?
- ಅಯ್ಯೋ ಚಿತ್ರೀಕರಣ ಬರದಿಂದ ಸಾಗುತ್ತಿದೆ ಕಣ್ರೀ.
ರೀ ಅದು ಬರದಿಂದ ಅಲ್ಲ, ಭರದಿಂದ
- ರೀ ಸ್ವಾಮಿ, ನಮ್ ಪ್ರೊಡ್ಯೂಸರ್ ಹತ್ರ ದುಡ್ಡಿಲ್ಲ, ಹಣದ ಕೊರತೆ ಇದೆ. ಅದಕ್ಕೇ ಬರದಿಂದ ಸಾಗುತ್ತಿದೆ ಅಂತ
ಹೇಳಿದ್ದು.
ಓ ಹಂಗೆ, ಆದ್ರೆ ಮೊನ್ನೆ ಶೂಟಿಂಗಿಗೆ ಅಂತ ರಾಜಸ್ಥಾನಕ್ಕೆ ಹೋಗಿದ್ದಾಗ, ನಮ್ ಪ್ರೊಡ್ಯೂಸರ್ ದುಡ್ಡನ್ನ ನೀರಿನ್ ಥರ ಖರ್ಚು
ಮಾಡಿದ್ರು ಅಂತಿದ್ರಿ?
- ಹೌದು ರೀ, ರಾಜಸ್ಥಾನದಲ್ಲಿ ನೀರಿನ್ ಥರ ಖರ್ಚ್ ಮಾಡಿದ್ರು ಅಂದ್ರೆ ತುಂಬಾ ಕಡಿಮೆ ದುಡ್ಡು ಖರ್ಚು ಮಾಡಿದ್ರು ಅಂತ ಅಲ್ವಾ!
ಓಹೋ, ಯಾಕೋ ಡೈರೆಕ್ಟರ್ ಸಾಹೇಬ್ರು ಬರೀ ಇನ್‌ಡೈರೆಕ್ಟ್ ಆಗಿ ಮಾತಾಡ್ತಾ ಇದ್ದೀರ?
- ಏನ್ ಮಾಡೋದು.. ನಮ್ಮ ‘ನಿರ್ಮಾ’ಪಕರು ‘ಏರಿಯಲ್’ ಶಾಟ್ ತೆಗೆಯೋಕೂ ದುಡ್ಡು ಬಿಚ್ಚಲ್ಲ.. ಕಲೆ ಒಳ್ಳೆಯದೇ ನಿಜ, ಆದ್ರೆ ಸಿನಿಮಾ ಕಲೆಗೆ ಬೆಲೆ ಕಟ್ಟಲಿಲ್ಲ ಅಂದ್ರೆ ಹೆಂಗೆ?
ಆದ್ರೂ ೧೫ ದಿನ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ್ದೀರ ಅಲ್ವಾ?
- ಹೌದೌದು. ಅದೇ ದೊಡ್ಡ ಸಾಧನೆ. ಸಿನಿಮಾಗಳು ಬಿಡುಗಡೆ ಆದಮೇಲೆ ಯಶಸ್ವಿ ೧೦ನೇ ದಿನ, ೧೫ ದಿನ ಅಂತ ಹಾಕ್ಕೊತಾರಲ್ಲ, ಹಂಗೇ ನಾವು ಅಮೋಘ ೧೫ ದಿನಗಳ ಶೂಟಿಂಗ್ ಮುಕ್ತಾಯ ಅಂತ ಪೋಸ್ಟರ್ ಹಾಕಿಸ್ಬೇಕು ಅಂದ್ಕೊಂಡಿದ್ದೀವಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಈ ಸುರಪಾನ ಬಂದಿದ್ದೇ ಸುರರಿಂದ, ಅಂದ್ರೆ ದೇವತೆಗಳಿಂದ ಅಲ್ವಾ. ಅವರೇ ನಮಗೆ ಇದನ್ನೆ ಕಲಿಸಿದ್ದು. ಅದಕ್ಕೇ ಹೆಂಡನ ಪರಮಾತ್ಮ ಅಂತಾರೋ ಏನೋ ಗೊತ್ತಿಲ್ಲ. ಸರಿ, ಹಿಂಗೇ ಒಂದ್ಸಲ ದೇವಲೋಕದಿಂದ ನಾರದ ಭೂಮಿಗ್ ಬಂದಿದ್ದ. ಅವ್ನು ಅಲ್ಲಿ ಇಲ್ಲಿ ಬತ್ತಿ ಇಡೋ ಕೆಲ್ಸ ಮಾಡಿ ಸುಸ್ತಾಗಿ ಒಂದ್ ಬಾರಿಗೆ ಹೋಗಿ ಎಣ್ಣೆ ಹೊಡಿಯೋಕ್ ಕೂತ್ಕೊಂಡ. ಅಲ್ಲಿ ಖೇಮು ವೆಯ್ಟರ್ ಕೆಲ್ಸ ಮಾಡ್ತಾ ಇದ್ದ. ನಾರದ ಬಂದ ಕೂಡಲೇ ಖೇಮು ಹೋಗಿ, “ಸರ್, ಏನ್ ಕೊಡ್ಲಿ?" ಅಂದ. ಅದಕ್ಕೆ ನಾರದ “ಒಂದ್ ಕ್ವಾರ್ಟರ್ ರಮ್ ಕೊಡಪ್ಪಾ" ಅಂದ. ಸರಿ ಖೇಮು ಹೋಗಿ ತಂದುಕೊಟ್ಟ. ನಾರದ ಒಂದ್ ಫುಲ್ ಕ್ವಾರ್ಟರ್ ಕುಡಿದ. ಅವನಿಗೆ ಅದು ಏನೂ ಏರಲಿಲ್ಲ. ಸರಿ ಅಂತ ಖೇಮುನ ಕರೆದು ಇನ್ನೊಂದ್ ಕ್ವಾರ್ಟರ್ ತರಿಸಿದ, ಕುಡಿದ. ಅದೂ ಏರಲಿಲ್ಲ. ಇನ್ನೊಂದಾಯ್ತು. ಫುಲ್ ಬಾಟ್ಲ್ ಆಯ್ತು. ನಾರದ ಸುಮ್ನೆ ಆರ್ಡರ್ ಮಾಡ್ತಾನೇ ಇದ್ದ. ಖೇಮು ತಂದ್ ಕೊಡ್ತಾ ಇದ್ದ. ಇವ್ನು ಕುಡಿತಾ ಇದ್ದ.
ಸರಿ, ಎರಡ್ ಪುಲ್ ಬಾಟ್ಲ್ ಆಯ್ತು. ವೆಯ್ಟರ್ ಖೇಮು ನೋಡ್ತಾನೇ ಇದ್ದ. ಇವ್ನು ಮತ್ತೆ ಇನ್ನೊಂದ್ ಕ್ವಾರ್ಟರ್ ಆರ್ಡರ್ ಮಾಡೋಕೆ ಖೇಮುನ ಕರೆದ. ಖೇಮುಗೆ ಇವನು ಕುಡಿತಾ ಇರೋ ಪರಿ ನೋಡಿ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು. ಇನ್ನೊಂದ್ ಕ್ವಾರ್ಟರ್ ತಂದು ಕೊಟ್ಟು, “ಸರ್, ನಂಗೆ ಒಂದ್ ಡೌಟು, ನೀವು ಇಷ್ಟೊಂದ್ ಕುಡಿದ್ರೂ ನಿಮಗೆ ಒಂಚೂರೂ ಏರಿಲ್ಲವಲ್ಲ ಹೆಂಗೆ?" ಅಂದ. ಅದಕ್ಕೆ ನಾರದ, “ಇ ಕಣಮ್ಮಾ, ಹೆಂಡ ಕುಡಿದ್ರೆ ಚಿತ್ತಾಗೋದು, ಕಿಕ್ ಹೊಡೆಯೋದು, ಏರೋದು, ಇದೆಲ್ಲ ಏನಿದ್ರೂ ಬರೀ ನಿಮ್ಮಂಥ ಮನುಷ್ಯರಿಗೆ, ನಾನು ನಾರದ, ದೇವಲೋಕದಿಂದ ಬಂದಿದೀನಿ" ಅಂದ. ಆವಾಗ ವೆಯ್ಟರ್ ಖೇಮು ಅಂದ- “ಹಾ, ಬಡ್ಡಿ ಮಗಂಗೆ ಇವಾಗ್ ಏರ್ತು ನೋಡು".
ಲೈನ್ ಮ್ಯಾನ್
ಒಂದು ಇ-ಮೇಲ್‌ಗೆ ತಕ್ಕ ಉತ್ತರ ಕೊಡೋದು ಅಂದ್ರೆ ಏನು?
- YOU MAILED IT, I NAILED IT
ತುಂಬಾ ಸುಲಭದ ಕೆಲಸ ಅಂದ್ರೆ ಯಾವ್ದು?
- MOMO ಬಗ್ಗೆ MeMe ಮಾಡೋದು
ಪಬ್ಲಿಕ್ ಟಿವಿ ರಂಗನಾಥ್ ಅವರಿಗೂ ನರೇಂದ್ರ ಮೋದಿಗೂ ಇರೋ ವ್ಯತ್ಯಾಸ
- ಏನಾದ್ರೂ ಒಳ್ಳೇದಾದ್ರೆ ರಂಗನಾಥ್ ಅವರು ‘ಆಲ್‌ರೈಟ್ ಮುಂದಕ್ಕೋಗಣ’ ಅಂತಾರೆ
- ಕೆಟ್ಟದ್ದಕ್ಕೆಲ್ಲ ಹಿಂದಿನ ಸರಕಾರವೇ ಹೊಣೆ ಅನ್ನೋ ಮೋದಿ, ‘ಹಿಂದಕ್ಕೋಗಣ’ ಅಂತಾರೆ.
ಎಲ್ಲರ ಬಗ್ಗೆನೂ ಸಂದೇಹ ಪಡುವವನು
- ‘ಅನುಮಾನ್’ ಭಕ್ತ
ಮನೇಲಿ ಟಿವಿ ಇದ್ರೆ ಬಿಪಿಎಲ್ ಕಾರ್ಡು ರದ್ದು
- ಖೇಮು: ನಮ್ಮನೇಲಿ ಬಿಪಿಎಲ್ ಟಿವಿ ಇಲ್ಲ, ತೊಂದ್ರೆ ಇಲ್ಲ ಬಿಡಿ.
ಇರುವೆಗೆ ಸಿಗದ ಸಕ್ಕರೆ
- ‘ಸೀಮೆ’ಗಿಲ್ಲದ ಸಕ್ಕರೆ
ವಾಣಿ ಅನ್ನೋ ಹುಡುಗಿ ಸತ್ತ ಮೇಲೆ ಏನಾಗ್ತಾಳೆ
- ಅಶರೀರ ವಾಣಿ
ಆಟೋಗ್ರಾಫ್ ಹಾಕಿಸಿಕೊಳ್ಳುವ ಹುಚ್ಚು ಅತಿರೇಕಕ್ಕೆ ಹೋದರೆ ಬರುವ ಕಾಯಿಲೆ
- ‘ಸೈನ್’ ಫ್ಲೂ
ಒಂದು ಒಳ್ಳೆಯ ಉದ್ದೇಶಕ್ಕೆ ಸಹಿ ಸಂಗ್ರಹಿಸುವ ಅಭಿಯಾನ ಯಶಸ್ವಿಯಾದರೆ
- ಇಂಡಿಯಾ ಈಸ್ ‘ಸೈನಿಂಗ್’
ಆ ಅಭಿಯಾನಕ್ಕ ಬ್ರ್ಯಾಂಡ್ ಅಂಬಾಸಿಡರ್
- ‘ಸೈನಾ’ ನೆಹ್ವಾಲ್