ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಜಂಬೂ ದ್ವೀಪದ ರಹಸ್ಯ: ಖಗೋಳ ವಿಜ್ಞಾನ, ಕಾಲಚಕ್ರದ ಅರಿವು

ಪುರಾಣಗಳಲ್ಲಿ ಜಂಬೂದ್ವೀಪವನ್ನು ಕೇವಲ ಭೌಗೋಳಿಕ ಭೂಮಿಯಾಗಿ ಮಾತ್ರ ವಲ್ಲದೆ, ಇಡೀ ಖಗೋಳ ವ್ಯವಸ್ಥೆ (Cosmology) ಮತ್ತು ಸೂಕ್ಷ ಜಗತ್ತಿನ ಸಂಕೇತವಾಗಿ ವಿವರಿಸಲಾಗಿದೆ. ಸಪ್ತ ದ್ವೀಪಗಳು ಮತ್ತು ಸಪ್ತ ಸಮುದ್ರಗಳ ವಿವರಣೆಯು ಭೂಮಿಯ ವಿವಿಧ ಸ್ತರಗಳನ್ನು ಹಾಗೂ ಸೌರಮಂಡಲದ ವಿನ್ಯಾಸ ವನ್ನು ಪ್ರತಿಬಿಂಬಿಸುತ್ತದೆ.

ಒಂದೊಳ್ಳೆ ಮಾತು

ಪುರಾಣಗಳಲ್ಲಿ ಜಂಬೂದ್ವೀಪವನ್ನು ಕೇವಲ ಭೌಗೋಳಿಕ ಭೂಮಿಯಾಗಿ ಮಾತ್ರ ವಲ್ಲದೆ, ಇಡೀ ಖಗೋಳ ವ್ಯವಸ್ಥೆ (Cosmology) ಮತ್ತು ಸೂಕ್ಷ ಜಗತ್ತಿನ ಸಂಕೇತವಾಗಿ ವಿವರಿಸಲಾಗಿದೆ. ಸಪ್ತ ದ್ವೀಪಗಳು ಮತ್ತು ಸಪ್ತ ಸಮುದ್ರಗಳ ವಿವರಣೆಯು ಭೂಮಿಯ ವಿವಿಧ ಸ್ತರಗಳನ್ನು ಹಾಗೂ ಸೌರಮಂಡಲದ ವಿನ್ಯಾಸ ವನ್ನು ಪ್ರತಿಬಿಂಬಿಸುತ್ತದೆ. ಮೇರು ಪರ್ವತವನ್ನು ಬ್ರಹ್ಮಾಂಡದ ಉತ್ತರ ಧ್ರುವ ( North Pole ) ಅಥವಾ ‘ಆಕ್ಸಿಸ್ ಮುಂಡಿ’ ( Axis Mundi - ಪ್ರಪಂಚದ ಕೇಂದ್ರ ಅಕ್ಷ) ಎಂದು ಕಲ್ಪಿಸಲಾಗಿದೆ. ಆಧುನಿಕ ವಿeನವು ಭೂಮಿ ಮತ್ತು ಬ್ರಹ್ಮಾಂಡದ ಶಕ್ತಿ ಕೇಂದ್ರಗಳನ್ನು ಹೇಗೆ ಅಭ್ಯಾಸ ಮಾಡುತ್ತಿದೆಯೋ, ಅದನ್ನೇ ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ಸಂಕೇತಗಳ ಮೂಲಕ ನಮಗೆ ತಲುಪಿಸಿzರೆ. ಸನಾತನ ಧರ್ಮದ ಕಾಲ ಗಣನೆ ( Cosmic Time ) ಜಂಬೂದ್ವೀಪದಲ್ಲಿ ಪ್ರಕೃತಿ ಮತ್ತು ಕಾಲದ ಚಲನೆ ಅತ್ಯಂತ ವ್ಯವಸ್ಥಿತವಾಗಿದೆ. ಸನಾತನ ಪರಂಪರೆಯಲ್ಲಿ ಕಾಲವನ್ನು ಅತ್ಯಂತ ವಿಶಾಲವಾದ ಪ್ರಮಾಣದಲ್ಲಿ ಅಳೆಯಲಾಗುತ್ತದೆ: ಚತುರ್ಯುಗ- 43 ಲಕ್ಷದ 20 ಸಾವಿರ ಮಾನವ ವರ್ಷಗಳು (ಕೃತ, ತ್ರೇತಾ, ದ್ವಾಪರ, ಕಲಿ). ಮನ್ವಂತರ- ಇಂತಹ 71 ಚತುರ್ಯುಗಗಳು ಸೇರಿದರೆ ಒಂದು ‘ಮನ್ವಂತರ’. ಕಲ್ಪ- 14 ಮನ್ವಂತರ ಗಳು ಸೇರಿದರೆ ಬ್ರಹ್ಮನಿಗೆ ಒಂದು ಹಗಲು (43.2 ಕೋಟಿ ವರ್ಷಗಳು).

ಪ್ರಸ್ತುತ ನಾವು ಶ್ವೇತವರಾಹ ಕಲ್ಪದ, ವೈವಸ್ವತ ಮನ್ವಂತರದ, ‘28ನೇ ಕಲಿಯುಗ’ದಲ್ಲಿ ಜೀವಿಸು ತ್ತಿದ್ದೇವೆ. ಪ್ರತಿಯೊಂದು ಪೂಜೆಯ ವೇಳೆಯೂ ಈ ಸಮಯವನ್ನು ನೆನಪಿಸಿಕೊಳ್ಳುವುದು ಸನಾತನ ಸಂಸ್ಕೃತಿಯ ಕಾಲಪ್ರಜ್ಞೆಗೆ ನಿದರ್ಶನವಾಗಿದೆ.

ಇದನ್ನೂ ಓದಿ: Roopa Gururaj Column: ಜಂಬೂದ್ವೀಪ ಮತ್ತು ಭರತವರ್ಷ: ಆಧ್ಯಾತ್ಮಿಕ ಮಹತ್ವ ಹಾಗೂ ಸಂಕಲ್ಪದ ರಹಸ್ಯ

ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧ: ವಿಷ್ಣು ಪುರಾಣದಲ್ಲಿರುವ ಜಂಬೂ ದ್ವೀಪದ ಕಥನದಲ್ಲಿ ಪ್ರಕೃತಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಈ ಭೂಖಂಡಕ್ಕೆ ‘ಜಂಬೂ’ (ನೇರಳೆ) ಎಂಬ ವೃಕ್ಷದ ಹೆಸರಿಟ್ಟಿರುವುದು, ನದಿ ಗಳನ್ನು ದೇವಿಯರೆಂದು ಪೂಜಿಸುವುದು, ಮತ್ತು ಪರ್ವತ ಗಳನ್ನು ಪವಿತ್ರವೆಂದು ಭಾವಿಸುವುದು- ಇವೆಲ್ಲವೂ ಪ್ರಕೃತಿಯನ್ನು ರಕ್ಷಿಸುವ ಸಂದೇಶವನ್ನು ನೀಡುತ್ತವೆ. ಮನುಷ್ಯ ಪ್ರಕೃತಿಯ ಒಡೆಯ ನಲ್ಲ, ಬದಲಿಗೆ ಪ್ರಕೃತಿಯ ಒಂದು ಸಣ್ಣ ಭಾಗ ಮಾತ್ರ ಎಂಬುದನ್ನು ಜಂಬೂದ್ವೀಪದ ವಿಸ್ತಾರವು ನಮಗೆ ನೆನಪಿಸುತ್ತದೆ.

ಪರಿಸರ ಸಮತೋಲನ ವನ್ನು ಕಾಯ್ದುಕೊಳ್ಳುವುದು ಸನಾತನ ಧರ್ಮದ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಪ್ರಾಚೀನ ಕಾಲದಲ್ಲಿದ್ದ ‘ವಸುಧೈವ ಕುಟುಂಬಕಂ’(ಇಡೀ ವಿಶ್ವವೇ ಒಂದು ಕುಟುಂಬ) ಎಂಬ ವಿಶಾಲ ಮನೋಭಾವಕ್ಕೆ ಜಂಬೂದ್ವೀಪದ ಕಲ್ಪನೆಯೇ ಆಧಾರ. ಜಗತ್ತಿನ ಸಮಸ್ತ ಜೀವರಾಶಿ ಗಳು ಒಂದೇ ಬ್ರಹ್ಮಾಂಡದ ಭಾಗ ಎಂಬ ಭಾವನೆ ಇದರಿಂದ ಮೂಡುತ್ತದೆ.

ಭೌತಿಕ ಸುಖಗಳಿಗಿಂತ ಆಧ್ಯಾತ್ಮಿಕ ಶಾಂತಿ ಮತ್ತು ಮೋಕ್ಷವೇ ಅಂತಿಮ ಗುರಿ ಎನ್ನುವ ಅರಿವನ್ನು ಇದು ಮೂಡಿಸುತ್ತಾ ಹೋಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ ಎನ್ನುವ ಕಟು ಸತ್ಯವನ್ನು ನಮಗೆ ಸಾರುತ್ತವೆ. ಇಂತಹ ಮಹತ್ತರ ಸಂದೇಶವನ್ನು ಸಾವಿರಾರು ವರ್ಷಗಳ ಮೊದಲೇ ನಮಗೆ ನಮ್ಮ ಸನಾತನ ಧರ್ಮ ವಿಸ್ತಾರವಾಗಿ ಮನಮುಟ್ಟುವಂತೆ ವಿವರಿಸಿದೆ. ನಮ್ಮ ಪುರಾಣಗಳೆಂದರೆ ಕಟ್ಟು ಕಥೆಗಳಲ್ಲ.

ಆ ಕೃತಿಗಳಲ್ಲಿ ಭೌಗೋಳಿಕ ಜ್ಞಾನ, ಖಗೋಳ ಜ್ಞಾನ, ಕಾಲಗಣನೆ, ಬ್ರಹ್ಮಾಂಡದ ಬಗೆಗಿನ ಅನೇಕ ಕುತೂಹಲ ಗಳಿಗೆ ಸಮರ್ಪಕವಾದ ಉತ್ತರ ಎಲ್ಲವೂ ದೊರೆಯುತ್ತದೆ. ಆದ್ದರಿಂದಲೇ ನಮ್ಮ ಹಿರಿಯರು ಪಂಚಾಂಗದ ಮೂಲಕ ಕರಾರುವ ಕ್ಕಾಗಿ ಮಿಥಿಗಳನ್ನು, ವಾರಗಳನ್ನು,ನಕ್ಷತ್ರಗಳನ್ನು ಲೆಕ್ಕ ಹಾಕಿ, ಅನೇಕ ವಿಷಯಗಳನ್ನು ಬರೆಯುತ್ತಾರೆ. ಅಷ್ಟೇ ಅಲ್ಲ ಸೂರ್ಯ ಗ್ರಹಣ, ಚಂದ್ರ ಗ್ರಹಣ ಇಂತಹ ಸೂಕ್ಷ್ಮ ಖಗೋಳ ಘಟನೆಗಳನ್ನು ಕೂಡ ಒಂದಿಷ್ಟು ತಪ್ಪಿಲ್ಲದಂತೆ ಲೆಕ್ಕ ಹಾಕಲು ನಮ್ಮ ಹಿರಿಯರಿಂದ ಸಾಧ್ಯವಾಗಿದೆ. ಇವೆಲ್ಲವೂ ಜ್ಞಾನದ ದೊಡ್ಡ ಭಂಡಾರ.

ನಮ್ಮ ಪುರಾಣಗಳಲ್ಲಿ ವಿವರಿಸಲಾದ ಜಂಬೂ ದ್ವೀಪವು ಕೇವಲ ಗತಕಾಲದ ಕಥೆಯಲ್ಲ; ಅದು ನಮ್ಮ ವೈದಿಕ ಜ್ಞಾನ, ಸಂಸ್ಕೃತಿ ಮತ್ತು ಬ್ರಹ್ಮಾಂಡದ ವಿಜ್ಞಾನದ ಮಹಾಸಾಗರ. ಈ ಮಹಾನ್ ಪರಂಪರೆಯನ್ನು ಅರ್ಥೈಸಿಕೊಂಡು, ಅದರ ಆಧ್ಯಾತ್ಮಿಕ ಮೌಲ್ಯಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿ ಕೊಳ್ಳುವುದೇ ನಾವು ನಮ್ಮ ಪೂರ್ವಜರಿಗೆ ಮತ್ತು ಈ ಪವಿತ್ರ ಭಾರತ ಭೂಮಿಗೆ ಸಲ್ಲಿಸುವ ನಿಜವಾದ ಗೌರವ. ಓಂ ಶಾಂತಿಃ ಶಾಂತಿಃ ಶಾಂತಿಃ.

ರೂಪಾ ಗುರುರಾಜ್

View all posts by this author