ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮನಸೆಳೆದ ಬರಹಗಳು

‘ಬಲಿಷ್ಠನೇ ಬಾಳಲು ಯೋಗ್ಯ’ ಎಂಬ ಮಾತನ್ನು ಮುಂದು ಮಾಡಿ ಕೆಲವರು ಈ ಧೋರಣೆಯನ್ನು ಸಮರ್ಥಿಸಿಕೊಳ್ಳಬಹುದು; ಆದರೆ ಇಂದು ನಾವು ಅತ್ಯಂತ ಸುಶಿಕ್ಷಿತ ಸಮಾಜದಲ್ಲಿ ಬದುಕುತ್ತಿದ್ದೇವೆ, ಇಲ್ಲಿ ಈ ಹೊಡಿ-ಬಡಿ-ಕಡಿ ಧೋರಣೆ ಯೋಗ್ಯವೇ? ಜಗತ್ತಿನ ಇಷ್ಟೆ ಅನಿಷ್ಟ ಸಂಗತಿಗಳ, ಏಳು-ಬೀಳುಗಳ ಮಧ್ಯೆ ನಮ್ಮ ಭಾರತ ಮಾತ್ರ ಪ್ರಗತಿಯತ್ತ ಸಾಗುತ್ತಿದೆ, ಸುರಕ್ಷಿತವಾಗಿ ತನ್ನ ಗಡಿ ಕಾಪಾಡಿಕೊಂಡು ಆತ್ಮ ವಿಶ್ವಾಸದಿಂದ ಬೀಗುತ್ತಿದೆ.

ಪ್ರತಿಸ್ಪಂದನ

ಲಕ್ಷ್ಮೀಕಾಂತ ಪಾಟೀಲ, ಮೈಸೂರು

ವಿನಾಯಕ ವೆಂ.ಭಟ್ಟ ಅವರು ‘ವಿದ್ಯಮಾನ’ ಅಂಕಣದಲ್ಲಿ (ಜ.18) ‘ಭಾರತರತ್ನ’ ಎಂ.ಎಸ್.ಸುಬ್ಬು ಲಕ್ಷ್ಮಿಯವರ ಸರಳತೆಯ ಕುರಿತು ಬರೆದ ಬರಹವು ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಇಂದಿ ಗೂ ಆಸ್ತಿಕರ ಮನೆಗಳಲ್ಲಿ ದಿನವು ಶುರುವಾಗುವುದೇ ‘ಕೌಸಲ್ಯ ಸುಪ್ರಜ ರಾಮಾ..’ ಎಂಬ ವೆಂಕಟೇಶ್ವರ ಸುಪ್ರಭಾತದಿಂದ. ಇದನ್ನು ಭಕ್ತಿಪೂರ್ವಕವಾಗಿ ಹಾಡಿ ಅಜರಾಮರಗೊಳಿಸಿದ ‘ಎಂಎಸ್’ ಅವರು ನಿಜಕ್ಕೂ ಪೂಜ್ಯರು. ಅಂತೆಯೇ ನಾವು ಶ್ರೋತೃಗಳು ಧನ್ಯರು.

‘ಎಂಎಸ್’ ಕುಟುಂಬದವರು ಆರ್ಥಿಕ ಸಂಕಷ್ಟ ಸ್ಥಿತಿಯಲ್ಲಿದ್ದಾಗಲೂ ಸುಬ್ಬುಲಕ್ಷ್ಮಿಯವರು ಸ್ವಾಭಿಮಾನವನ್ನು ಬಿಟ್ಟುಕೊಡದೆ, ಅನ್ನಮಾಚಾರ್ಯರ ಕೀರ್ತನೆಗಳನ್ನು ಹಾಡಲು ನೀಡಿದ ಅವಕಾಶವನ್ನು ಒಪ್ಪಿ, ಸಂಭಾವನೆಯ ಮಾತು ಬಂದಾಗ ನಿರಾಕರಿಸಿದ್ದು ಅವರ ನಿಸ್ವಾರ್ಥತೆಯ ಪರಾಕಾಷ್ಠೆ. ಇಂದಿನ ದಿನಗಳಲ್ಲಿ ‘ಮೊದಲು ದುಡ್ಡಿನ ಮಾತು, ನಂತರ ಕೆಲಸದ ಮಾತು’ ಅನ್ನೋ ಕೆಲವರು ಇರುವಾಗ, ‘ಎಂಎಸ್’ ಅವರು ಈ ವಿಚಾರದಲ್ಲಿ ಅಕ್ಷರಶಃ ವಿಭಿನ್ನವಾಗಿ ಕಾಣುತ್ತಾರೆ.

ಅವರು ತಮ್ಮ ಗಾನವಿದ್ವತ್ತನ್ನು ದೇವರ ಶ್ರೀಚರಣಗಳಿಗೆ ಸಂಪೂರ್ಣ ನಿಃಶುಲ್ಕವಾಗಿ ಸಮರ್ಪಣೆ ಮಾಡುವ ಮನೋಭಾವವನ್ನು ಹೊಂದಿದ್ದರು ಎಂದು ತಿಳಿದು ನಾನು ನತಮಸ್ತಕನಾದೆ.

ಭೌತಿಕವಾಗಿ ಇಂದು ನಮ್ಮ ಜತೆಗಿಲ್ಲದಿದ್ದರೂ, ತಾವು ಹಾಡಿದ ಗಣನೀಯ ಸಂಖ್ಯೆಯ ಕೀರ್ತನೆ, ಶ್ಲೋಕ, ಭಕ್ತಿಗೀತೆ, ಸುಪ್ರಭಾತಗಳ ಮೂಲಕ ಶ್ರೋತೃಗಳ ಮನದಲ್ಲಿ ಅಮರರಾಗಿರುವ ಎಂ.ಎಸ್. ಸುಬ್ಬುಲಕ್ಷ್ಮಿಯವರು ನಿಜಕ್ಕೂ ಪೂಜ್ಯರು, ಪ್ರಾತಃಸ್ಮರಣೀಯರು. ಈ ಅಪರೂಪದ ಲೇಖನದ ಮೂಲಕ ಈ ಕಲಾವಿದೆಯ ವಿಶೇಷ ಗುಣದ ಪರಿಚಯ ಮಾಡಿಕೊಟ್ಟ ಅಂಕಣಕಾರರಿಗೆ ಧನ್ಯ ವಾದಗಳು.

ಇದನ್ನೂ ಓದಿ: MS Subbulakshmi: ಸಂಗೀತ ಕ್ಷೇತ್ರದ ಸಾಧಕಿ ಎಂಎಸ್ ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಈ ಖ್ಯಾತ ನಟಿ?

ಇನ್ನು, ಜ.17ರ ಸಂಚಿಕೆಯಲ್ಲಿನ ಗಣೇಶ್‌ಭಟ್ ವಾರಾಣಸಿ ಅವರ ಲೇಖನವೂ ಚೆನ್ನಾಗಿ ಮೂಡಿ ಬಂದಿದೆ. ಇಂದು ಇಡೀ ಜಗತ್ತು ಅನಿಶ್ಚಿತತೆ, ಅಸ್ಥಿರತೆ, ಆತಂಕಗಳ ಮಧ್ಯೆ ನಲುಗಿ ಹೋಗಿದೆ. ಅತಿ ಯಾದ ಅಧಿಕಾರ ಮತ್ತು ದುಡ್ಡಿನ ದಾಹವೇ ಇದಕ್ಕೆ ಮೂಲಕಾರಣ. ತುಂಬಿದ ತನ್ನ ತಟ್ಟೆಯ ಕಡೆಗೆ ಗಮನ ಹರಿಸುವ ಬದಲು ಸದಾ ಇನ್ನೊಬ್ಬರ ತಟ್ಟೆಯ ಮೇಲೆ ಕಣ್ಣು ಹಾಯಿಸುವ ಹಾಗೂ ಅದನ್ನೂ ಕಬಳಿಸುವ ದುರಾಸೆ ಇದು.

ಇಂದಿನ ವಿಶ್ವದ ಪ್ರಭಾವಿ ಮತ್ತು ಶ್ರೀಮಂತ ರಾಷ್ಟ್ರಗಳು ತಮ್ಮ ನೆರೆಹೊರೆ ದೇಶಗಳ ಮೇಲೆ ಅತಿ ಯಾದ ಪ್ರಭಾವ ಬೀರಿ ಅವುಗಳ ಸಂಪತ್ತು ದೋಚುವ ಇರಾದೆ ಹೊಂದಿ, ಅಲ್ಲಿನ ಸರಕಾರದ ವಿರುದ್ಧವೇ ಸಮರ ಹೂಡಿ ಜಗತ್ತಿನ ನೆಮ್ಮದಿ ಹಾಳು ಮಾಡಿವೆ.

‘ಬಲಿಷ್ಠನೇ ಬಾಳಲು ಯೋಗ್ಯ’ ಎಂಬ ಮಾತನ್ನು ಮುಂದು ಮಾಡಿ ಕೆಲವರು ಈ ಧೋರಣೆಯನ್ನು ಸಮರ್ಥಿಸಿಕೊಳ್ಳಬಹುದು; ಆದರೆ ಇಂದು ನಾವು ಅತ್ಯಂತ ಸುಶಿಕ್ಷಿತ ಸಮಾಜದಲ್ಲಿ ಬದುಕುತ್ತಿದ್ದೇವೆ, ಇಲ್ಲಿ ಈ ಹೊಡಿ-ಬಡಿ-ಕಡಿ ಧೋರಣೆ ಯೋಗ್ಯವೇ? ಜಗತ್ತಿನ ಇಷ್ಟೆ ಅನಿಷ್ಟ ಸಂಗತಿಗಳ, ಏಳು-ಬೀಳುಗಳ ಮಧ್ಯೆ ನಮ್ಮ ಭಾರತ ಮಾತ್ರ ಪ್ರಗತಿಯತ್ತ ಸಾಗುತ್ತಿದೆ, ಸುರಕ್ಷಿತವಾಗಿ ತನ್ನ ಗಡಿ ಕಾಪಾಡಿ ಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿದೆ.

ಸದೃಢ, ಸಶಕ್ತ, ಸಮರ್ಥ, ದೇಶಭಕ್ತ ಹಾಗೂ ದಕ್ಷ ವ್ಯಕ್ತಿಯ ನಾಯಕತ್ವದಲ್ಲಿ ಏನೇ ಸಾಧ್ಯ ಎಂಬು ದನ್ನು ಭಾರತ ನಿರೂಪಿಸಿದೆ. ಅತ್ಯಂತ ಜ್ವಲಂತ ಹಾಗೂ ವಾಸ್ತವ ಸಂಗತಿಯ ಬಗ್ಗೆ ಅಂಕಿ-ಅಂಶಗಳ ಸಹಿತ ಮಾಹಿತಿ ಒದಗಿಸಿದ ಲೇಖಕರಿಗೆ ಮತ್ತು ಪ್ರಕಟಿಸಿದ ಪತ್ರಿಕೆಗೆ ಧನ್ಯವಾದಗಳು.

(ಲೇಖಕರು ಕರ್ನಾಟಕ ಬ್ಯಾಂಕ್‌ನ ನಿವೃತ್ತ ಅಧಿಕಾರಿ)