ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಪ್ರತಿಫಲಾಪೇಕ್ಷೆಯಿಲ್ಲದ ದಾನವೇ ಶ್ರೇಷ್ಠ

ಒಮ್ಮೆ ಮಹಾರಾಜ ವಿಕ್ರಮಾದಿತ್ಯನು ತನ್ನ ಸಾಮ್ರಾಜ್ಯದಲ್ಲಿ ಜನರ ಸುಖ-ದುಃಖಗಳನ್ನು ಸ್ವತಃ ಅರಿಯಲು ವೇಷ ಮರೆಸಿಕೊಂಡು ದೇಶ ಸಂಚಾರಕ್ಕೆ ಹೊರಟಿದ್ದನು. ದಾರಿಯಲ್ಲಿ ಅವನಿಗೆ ಒಬ್ಬ ಬಡ ಆದರೆ ವಿದ್ವಾಂಸನಾದ ಬ್ರಾಹ್ಮಣನು ಎದುರಾದನು. ಆ ಬ್ರಾಹ್ಮಣನು ತಾನು ಬಹುಕಾಲದಿಂದ ತಪಸ್ಸು ಮಾಡಿ, ದೇವಿಯ ಅನುಗ್ರಹದಿಂದ ಪಡೆದ ಒಂದು ದಿವ್ಯವಾದ ‘ಅಮೃತ ಫಲ’ವನ್ನು ಹಿಡಿದುಕೊಂಡು ಹೋಗುತ್ತಿದ್ದನು.

ಒಂದೊಳ್ಳೆ ಮಾತು

ಸುಮಾರು ಕ್ರಿ.ಶ. 11ನೇ ಶತಮಾನದಲ್ಲಿ ರಚನೆಯಾದ ಸಂಸ್ಕೃತದ ಸುಪ್ರಸಿದ್ಧ ಕಥಾ ಕೋಶ ಸಿಂಹಾಸನ ‘ದ್ವಾತ್ರಿಂಶಿಕಾ’. ಈ ಕೃತಿಯಲ್ಲಿ ಉಜ್ಜಯಿನಿಯ ಮಹಾರಾಜ ವಿಕ್ರಮಾದಿತ್ಯನ ಉದಾರತೆ, ಪರಾಕ್ರಮ ಮತ್ತು ನ್ಯಾಯನಿಷ್ಠೆಯನ್ನು ವರ್ಣಿಸುತ್ತದೆ. ಧಾರಾನಗರದ ಪ್ರಸಿದ್ಧ ಕವಿ-ರಾಜ ಭೋಜನಿಗೆ ಭೂಮಿಯ ಆಳದಲ್ಲಿ ಹುದುಗಿಹೋಗಿದ್ದ ವಿಕ್ರಮಾದಿತ್ಯನ ದಿವ್ಯ ಸಿಂಹಾಸನ ದೊರೆಯುತ್ತದೆ.

ಭೋಜರಾಜನು ಶುಭಮುಹೂರ್ತದಲ್ಲಿ ಆ ಸಿಂಹಾಸನವನ್ನು ಏರಲು ಮೊದಲ ಮೆಟ್ಟಿಲಿನ ಮೇಲೆ ಕಾಲಿಟ್ಟಾಗ, ಸಿಂಹಾಸನವನ್ನು ಅಲಂಕರಿಸಿದ್ದ 32 ಸಾಲಭಂಜಿಕೆಗಳಲ್ಲಿ ಮೊದಲನೆಯದಾದ ‘ರತ್ನಮಂಜರಿ’ ಎಂಬ ಗೊಂಬೆಯು ಜೀವ ತಳೆದು ನಗುತ್ತಾ, ರಾಜನ್, ವಿಕ್ರಮಾದಿತ್ಯನಂತಹ ಮಹಾ ತ್ಯಾಗ, ಧೈರ್ಯ ಮತ್ತು ನಿಸ್ವಾರ್ಥ ಉದಾರತೆ ನಿನ್ನಲ್ಲಿದ್ದರೆ ಮಾತ್ರ ಈ ಸಿಂಹಾಸ ನವನ್ನೇರು ಎಂದು ಹೇಳಿ ಮೊದಲ ಕಥೆಯನ್ನು ವಿವರಿಸುತ್ತದೆ.

ಒಮ್ಮೆ ಮಹಾರಾಜ ವಿಕ್ರಮಾದಿತ್ಯನು ತನ್ನ ಸಾಮ್ರಾಜ್ಯದಲ್ಲಿ ಜನರ ಸುಖ-ದುಃಖಗಳನ್ನು ಸ್ವತಃ ಅರಿಯಲು ವೇಷ ಮರೆಸಿಕೊಂಡು ದೇಶ ಸಂಚಾರಕ್ಕೆ ಹೊರಟಿದ್ದನು. ದಾರಿಯಲ್ಲಿ ಅವನಿಗೆ ಒಬ್ಬ ಬಡ ಆದರೆ ವಿದ್ವಾಂಸನಾದ ಬ್ರಾಹ್ಮಣನು ಎದುರಾದನು. ಆ ಬ್ರಾಹ್ಮಣನು ತಾನು ಬಹುಕಾಲದಿಂದ ತಪಸ್ಸು ಮಾಡಿ, ದೇವಿಯ ಅನುಗ್ರಹದಿಂದ ಪಡೆದ ಒಂದು ದಿವ್ಯವಾದ ‘ಅಮೃತ ಫಲ’ವನ್ನು ಹಿಡಿದುಕೊಂಡು ಹೋಗು ತ್ತಿದ್ದನು. ಆ ಹಣ್ಣನ್ನು ತಿಂದವರಿಗೆ ಮುಪ್ಪು, ರೋಗ ಮತ್ತು ಮರಣಗಳಿಲ್ಲದೆ ದೀರ್ಘಾಯುಷ್ಯ ಲಭಿಸುವುದಿತ್ತು.

ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಬ್ರಾಹ್ಮಣನ ಶ್ರೀಮಂತನಾಗುವ ಹಗಲುಗನಸು

ಬ್ರಾಹ್ಮಣನು ವಿಕ್ರಮಾದಿತ್ಯನನ್ನು (ಮಾರು ವೇಷದಲ್ಲಿದ್ದ ರಾಜನನ್ನು) ನೋಡಿ, ತನ್ನ ಮನಸ್ಸಿನ ತಳಮಳವನ್ನು ಹಂಚಿಕೊಂಡನು: ಅಯ್ಯಾ, ನಾನೊಬ್ಬ ಬಡವ. ನಾನು ಈ ದಿವ್ಯ ಹಣ್ಣನ್ನು ತಿಂದು ಅಮರನಾದರೆ, ಜೀವನ ಪರ್ಯಂತ ಈ ಬಡತನದ ನರಳಬೇಕಾಗು ತ್ತದೆ. ಆದರೆ, ನಮ್ಮ ಮಹಾರಾಜ ವಿಕ್ರಮಾದಿತ್ಯನು ಧರ್ಮನಿಷ್ಠನೂ, ಪ್ರಜಾವತ್ಸಲನೂ ಆಗಿದ್ದಾನೆ. ಅವನು ಚಿರಾಯುವಾಗಿ ಬದುಕಿದರೆ ಇಡೀ ರಾಜ್ಯದ ಪ್ರಜೆಗಳಿಗೆ ಸದಾ ಒಳಿತಾಗುತ್ತದೆ. ಆದ್ದರಿಂದ ಈ ಅಮೂಲ್ಯ ಹಣ್ಣನ್ನು ನಾನು ರಾಜನಿಗೆ ಅರ್ಪಿಸಲು ಹೊರಟಿದ್ದೇನೆ ಎಂದನು.

ತನ್ನ ಪ್ರಜೆಯ ನಿಸ್ವಾರ್ಥ ಪ್ರೀತಿಗೆ ವಿಕ್ರಮಾದಿತ್ಯನು ಮನಸ್ಸಿನ ಭಾವುಕನಾದನು. ಅವನು ಬ್ರಾಹ್ಮಣನಿಗೆ ತಾನೇ ರಾಜನೆಂದು ಪರಿಚಯಿಸಿ ಕೊಂಡು, ಆ ದಿವ್ಯ ಹಣ್ಣನ್ನು ಅತ್ಯಂತ ಗೌರವ ದಿಂದ ಸ್ವೀಕರಿಸಿದನು ಮತ್ತು ಬ್ರಾಹ್ಮಣನ ಬಡತನ ನೀಗುವಷ್ಟು ಅಪಾರ ಧನ-ಕನಕಗಳನ್ನು ನೀಡಿ ಸತ್ಕರಿಸಿದನು. ಅರಮನೆಗೆ ಮರಳಿದ ವಿಕ್ರಮಾದಿತ್ಯನು ಆ ಅಮೃತಫಲವನ್ನು ನೋಡಿ, ನನ್ನ ಪ್ರಜೆಗಳ ಸೇವೆಯೇ ನನ್ನ ಬದುಕಿನ ಪರಮ ಗುರಿ.

ನಾನು ಅಮರನಾಗಿ ಬದುಕುವುದಕ್ಕಿಂತ, ನಾನು ಅತೀವವಾಗಿ ಪ್ರೀತಿಸುವ ನನ್ನ ರಾಣಿಯು ಚಿರಂಜೀವಿ ಯಾಗಿ ಸುಖವಾಗಿರಲಿ ಎಂದು ಭಾವಿಸಿ ಆ ಹಣ್ಣನ್ನು ತನ್ನ ಪಟ್ಟದ ರಾಣಿಗೆ ನೀಡಿದನು. ಆದರೆ, ವಿಧಿಯ ಆಟ ಬೇರೆಯೇ ಇತ್ತು! ಆ ರಾಣಿಗೆ ಅರಮನೆಯ ಅಶ್ವಶಾಲೆಯ ಪಾಲಕನ ಮೇಲೆ ರಹಸ್ಯ ಪ್ರೇಮವಿತ್ತು. ಅವಳು ಆ ಹಣ್ಣನ್ನು ತಾನು ತಿನ್ನದೆ, ತನ್ನ ಪ್ರಿಯಕರನಾದ ಅಶ್ವಪಾಲಕನಿಗೆ ನೀಡಿದಳು. ಆ ಅಶ್ವಪಾಲಕನು ತನ್ನ ಪ್ರೇಯಸಿಯಾದ ಒಬ್ಬ ವೇಶ್ಯೆಗೆ ಆ ಹಣ್ಣನ್ನು ಕೊಟ್ಟನು. ಆ ವೇಶ್ಯೆಯು ಆ ದಿವ್ಯ ಹಣ್ಣಿನ ಮಹಿಮೆಯನ್ನು ಅರಿತು, ನನ್ನಂತಹ ಸಾಮಾನ್ಯಳು ಇದನ್ನು ತಿಂದು ಬದುಕುವುದರಿಂದ ಲೋಕಕ್ಕೆ ಏನು ಪ್ರಯೋಜನ? ನಮ್ಮ ಧರ್ಮಿಷ್ಠ ರಾಜ ವಿಕ್ರಮಾದಿತ್ಯನು ಇದನ್ನು ತಿಂದರೆ ನಾಡಿಗೆ ಕಲ್ಯಾಣವಾಗುತ್ತದೆ ಎಂದು ಯೋಚಿಸಿ, ಮರುದಿನವೇ ರಾಜನ ಆಸ್ಥಾನಕ್ಕೆ ಬಂದು ಆ ಹಣ್ಣನ್ನು ವಿಕ್ರಮಾದಿತ್ಯನಿಗೇ ಅರ್ಪಿಸಿದಳು!

ತಾನು ರಾಣಿಗೆ ನೀಡಿದ್ದ ಅದೇ ದಿವ್ಯ ಹಣ್ಣು ಸುತ್ತಿಬಳಸಿ ಮತ್ತೆ ತನ್ನ ಕೈಗೇ ಬಂದು ಸೇರಿದ್ದನ್ನು ಕಂಡ ವಿಕ್ರಮಾದಿತ್ಯನಿಗೆ ಇಡೀ ಸತ್ಯ ಅರಿವಾ ಯಿತು. ರಾಣಿಯ ವಿಶ್ವಾಸದ್ರೋಹವನ್ನು ಕಂಡು ಅವನಿಗೆ ಕ್ಷಣಕಾಲ ತೀವ್ರ ವೈರಾಗ್ಯ ಮೂಡಿತು. ಆದರೂ, ಅವನು ಕೋಪಗೊಳ್ಳಲಿಲ್ಲ, ಯಾರನ್ನೂ ಶಿಕ್ಷಿಸಲಿಲ್ಲ. ಸಂಸಾರದ ಮೋಹ ಮತ್ತು ಸ್ವಾರ್ಥದ ಅಸ್ಥಿರತೆಯನ್ನು ಅರಿತ ವಿಕ್ರಮಾದಿತ್ಯನು, ಆ ಹಣ್ಣನ್ನು ತಾನೂ ತಿನ್ನದೆ, ತನ್ನ ಪ್ರಜೆಗಳ ಕಲ್ಯಾಣಕ್ಕಾಗಿ ನಿರಂತರವಾಗಿ ತಪಸ್ಸು ಮಾಡುತ್ತಿದ್ದ ಮಹಾ ತಪಸ್ವಿಯೊಬ್ಬರಿಗೆ ದಾನ ಮಾಡಿ, ತಾನು ನಿಷ್ಕಾಮ ಕರ್ಮಯೋಗಿಯಾಗಿ ರಾಜ್ಯಭಾರ ಮುಂದುವರಿಸಿದನು.

ಜೀವನದಲ್ಲಿ ಯೋಗಾನು ಯೋಗದಿಂದ ನಮಗೆ ಅಪಾರವಾದ ಸಂಪತ್ತು ಅದೃಷ್ಟ ಒಲಿದಾಗ ಅದನ್ನು ನಾವಷ್ಟೇ ಅನುಭವಿ ಸದೆ, ಅಗತ್ಯವಿರುವ ವರಿಗೆ ಮಾಡುವ ಸಹಾಯ ನಿಜಕ್ಕೂ ಪುಣ್ಯದ ಕೆಲಸ. ಎಷ್ಟೋ ಬಾರಿ ಅನೇಕರು ಮನೆಯಲ್ಲಿ ಇಬ್ಬರಿದ್ದರೆ 10 ಜನಕ್ಕೆ ಆಗುವಷ್ಟು ಆಹಾರವನ್ನು ವ್ಯರ್ಥ ಮಾಡುತ್ತಿರುತ್ತಾರೆ. ಒಬ್ಬರ ಬದುಕಿಗೆ ಏಳು ಜನ್ಮಕ್ಕಾಗುವಷ್ಟು ಸಂಪತ್ತನ್ನು ಕೂಡಿಟ್ಟಿರುತ್ತಾರೆ. ಆದರೆ ನಮ್ಮ ಜೀವನದ ನಿಜ ಅರ್ಥವನ್ನು ಕಂಡುಕೊಂಡಾಗ ಅನಗತ್ಯವಾಗಿ ವಸ್ತುಗಳನ್ನು ಪೋಲು ಮಾಡದೆ, ಬಡವರಿಗೆ ಅಗತ್ಯವಿರುವವ ರಿಗೆ ಅದನ್ನು ತಲುಪಿಸುವ ಮೂಲಕ ಜನ್ಮವನ್ನು ಸಾರ್ಥಕಗೊಳಿಸಬಹುದು. ಇಂತಹ ಉನ್ನತ ವಿಚಾರಗಳು ನಮ್ಮಲ್ಲಿ ಹುಟ್ಟಲಿ.

ರೂಪಾ ಗುರುರಾಜ್

View all posts by this author