ಮಾಸ್ಕೋ ಡೈರಿ
ಪ್ರಕಾಶ್ ಹೆಗಡೆ
ರಷ್ಯಾ ನನ್ನ ದಿನಚರಿಯಲ್ಲಿ ತೆರೆಯದ ಅಧ್ಯಾಯವಾಗಿಯೇಳಿದಿತ್ತು. ಬಹುಶಃ ‘ಐರನ್ ಕರ್ಟನ್’ ದೇಶ ಎಂಬ ಹಳೆಯ ಕಳಂಕ, ಅದರೊಂದಿಗೆ ಬೆಸೆದುಕೊಂಡಿದ್ದ ಕಠಿಣ ಕಮ್ಯುನಿಸ್ಟ್ ರಾಷ್ಟ್ರದ ಚಿತ್ರಣವೂ ಕಾರಣವಿರಬಹುದು. ಆದರೆ ಅನಿರೀಕ್ಷಿತವಾಗಿ ನನ್ನ ಅಲ್ಮಾ ಮೇಟರ್ ಆದ ಕರ್ನಾಟಕ ಮೌಂಟನಿಯ ರಿಂಗ್ ಅಸೋಸಿಯೇಷನ್ ಘೋಷಿಸಿದ ಮೌಂಟ್ ಎಲ್ಬ್ರಸ್ ಸಾಹಸ, ರಷ್ಯಾ ಪ್ರವಾಸಕ್ಕೆ ಪ್ರಚೋದನೆ ಯಾಯಿತು.
ಕ್ಲಿಷೆಗಳಿಂದ ಕೂಡಿದ ಸಿದ್ಧಮಾದರಿಯ ಕಥನಗಳನ್ನು ಮೀರಿ ನೋಡುವಂತೆ ಆಹ್ವಾನಿಸಿದ ರಷ್ಯಾ, ಕುತೂಹಲಕಾರಿ ಒಳನೋಟಗಳನ್ನು ನನಗೆ ತೆರೆದಿಟ್ಟಿದ್ದಷ್ಟೆ ಅಲ್ಲದೆ, ತಪ್ಪು ಕಲ್ಪನೆಗಳು ಮತ್ತು ಅಪೂರ್ಣ ಮಾಹಿತಿಯ ಕಲೆಗಳನ್ನು ನಿವಾರಿಸಲು ಸಹಾಯ ಮಾಡಿತು. ಇದು ರಷ್ಯಾ ಪ್ರವಾಸ ಕಥನವಲ್ಲ. ಅನಾವರಣಗೊಳ್ಳದ ರಷ್ಯಾದ ಯಶೋಗಾಥೆ. ಸೋವಿಯತ್ ಒಕ್ಕೂಟವು ದ್ವಿತೀಯ ವಿಶ್ವಯುದ್ಧದ ಅವಧಿಯಲ್ಲಿ ಅಮೆರಿಕ, ಬ್ರಿಟನ್ ಮಿತ್ರರಾಷ್ಟ್ರಗಳೊಂದಿಗೆ ಕೈಜೋಡಿಸಿ ನಾಜಿ ಜರ್ಮನಿಯ ವಿರುದ್ಧ ಹೋರಾಡಿದ ಪ್ರಮುಖ ಶಕ್ತಿಯಾಗಿತ್ತು. ಆದರೆ ಯುದ್ಧ ಮುಗಿದ ಕೆಲವೇ ವರ್ಷಗಳಲ್ಲಿ, ಇದೇ ಮಿತ್ರಪಕ್ಷಗಳು ಶೀತಲ ಸಮರದ ಎರಡು ವಿರೋಧಿ ಶಿಬಿರಗಳಾಗಿ ವಿಭಜನೆ ಯಾದವು.
ಜಾಗತಿಕ ಪ್ರಾಬಲ್ಯಕ್ಕಾಗಿ ನಡೆದ ಸ್ಪರ್ಧೆ, ಸಿದ್ಧಾಂತಗಳ ನಡುವಿನ ಸಂಘರ್ಷ ಮತ್ತು ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಬಣದೊಂದಿಗೆ ಸೋವಿಯತ್ ಒಕ್ಕೂಟದ ಹೆಚ್ಚುತ್ತಿರುವ ಪೈಪೋಟಿ, ರಷ್ಯಾವನ್ನು ಕ್ರಮೇಣ ಪಾಶ್ಚಿಮಾತ್ಯ ಜಗತ್ತಿನಿಂದ ಪ್ರತ್ಯೇಕಿಸುವ ಪ್ರಮುಖ ಕಾರಣಗಳಾದವು. ಇದೇ ವೇಳೆಯಲ್ಲಿ ನ್ಯಾಟೋಗೆ ಪ್ರತಿಯಾಗಿ ರೂಪುಗೊಂಡ ವಾರ್ಸಾ ಒಪ್ಪಂದ ಅಮೇರಿಕದ ಸಾರ್ವ ಭೌಮತ್ವಕ್ಕೆ ಸವಾಲೆಸೆದು, ಜಗತ್ತಿನ ದೇಶಗಳನ್ನು ಎರಡು ಪ್ರಬಲ ಪಂಗಡಗಳಲ್ಲಿ ಒಗ್ಗೂಡಿಸಿ, ಶಾಶ್ವತ ವಿರೋಧಿ ಬಣಗಳಾದವು.
ಇದನ್ನೂ ಓದಿ: Prakash Hegde Column: ಯಾರು ಹಿತವರು ನಿನಗೆ: ದೇಶವೋ, ರೈತನೋ, ಗ್ರಾಹಕನೋ?
1991ರಲ್ಲಿ, ವಾರ್ಸಾ ಒಪ್ಪಂದ ಹಾಗೂ ಸೋವಿಯತ್ ಒಕ್ಕೂಟದ ಪತನದ ನಂತರವೂ ಈ ದೂರಾವಸ್ಥೆ ಸಂಪೂರ್ಣವಾಗಿ ಕೊನೆಗೊಳ್ಳಲಿಲ್ಲ. ನ್ಯಾಟೋ ವಿಸ್ತರಣೆ, ರಷ್ಯಾದ ನೆರೆಹೊರೆಯ ರಾಷ್ಟ್ರಗಳಲ್ಲಿನ ಭೌಗೋಳಿಕ- ರಾಜಕೀಯ ಬದಲಾವಣೆಗಳು ಮತ್ತು ಉಕ್ರೇನ್ ಸಂಘರ್ಷದಂತಹ ಬೆಳವಣಿಗೆಗಳು ರಷ್ಯಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದವು.
ಪರಿಣಾಮವಾಗಿ, ವಿವಿಧ ಅವಧಿಗಳಲ್ಲಿ ವಿಧಿಸಲಾದ ಆರ್ಥಿಕ ನಿರ್ಬಂಧಗಳು, ವ್ಯಾಪಾರ ನಿರ್ಬಂಧಗಳು, ತಂತ್ರಜ್ಞಾನ ರಫ್ತು ನಿಯಂತ್ರಣಗಳು ಮತ್ತು ಹಣಕಾಸು ನಿರ್ಬಂಧಗಳು ರಷ್ಯಾವನ್ನು ಜಾಗತಿಕ ಬೆಳವಣಿಗೆಯಿಂದ ವಂಚಿತಗೊಳಿಸಿದವು. ನೋವಿನ ವಾಸ್ತವವೆಂದರೆ, ವಿಶ್ವಮಟ್ಟದ ಕ್ರೀಡಾಪಟುಗಳು, ವಿಜ್ಞಾನಿಗಳು, ಮತ್ತಿತರೆ ವೃತ್ತಿಪರರು ತಮ್ಮ ದೇಶದ ಪರವಾಗಿ ಭಾಗವಹಿಸುವ ಅವಕಾಶದಿಂದ ವಂಚಿತರಾಗುವುದು, ಅಥವಾ ತಟಸ್ಥ ಧ್ವಜದಡಿ ಭಾಗವಹಿಸುವ ಅನಿವಾರ್ಯತೆ.
ಭಾರತ ಮತ್ತು ರಷ್ಯಾ ಎರಡೂ ಲಿಖಿತ ಸಂವಿಧಾನವನ್ನು ಹೊಂದಿರುವ ರಾಷ್ಟ್ರಗಳಾದರೂ, ಅವುಗಳ ಕಾನೂನು ವ್ಯವಸ್ಥೆಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಭಾರತದ ಕಾನೂನು ವ್ಯವಸ್ಥೆ ಯು ಬ್ರಿಟಿಷ್ ಪರಂಪರೆಯ ಕಾಮನ್ ಲಾ (ಸಾಮಾನ್ಯ ಕಾನೂನು) ಪ್ರಭಾವ ಹೊಂದಿದ್ದರೆ, ರಷ್ಯಾದ ಕಾನೂನು ವ್ಯವಸ್ಥೆಯು ಮುಖ್ಯವಾಗಿ ಸಿವಿಲ್ ಲಾ (ನಾಗರಿಕ ಕಾನೂನು) ಮಾದರಿಯನ್ನು ಆಧರಿಸಿದೆ.
ರಷ್ಯಾದಲ್ಲಿ, ಸರ್ಕಾರದ ವಿರುದ್ಧ ಆಧಾರರಹಿತ ಅಥವಾ ಕ್ಷುಲ್ಲಕ ದಾವೆಗಳನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಕಾನೂನು ವ್ಯವಸ್ಥೆ ರೂಪುಗೊಂಡಿಲ್ಲ. ಹೀಗಾಗಿ, ರಷ್ಯಾದ ನ್ಯಾಯಾಂಗ ವ್ಯವಸ್ಥೆಯು ಸರ್ಕಾರದ ಕ್ರಮಗಳನ್ನು ಪ್ರಶ್ನಿಸುವಾಗ ಕ್ಷುಲ್ಲಕ ದೂರುಗಳಿಗಿಂತ ಸತ್ವಯುತ ಮತ್ತು ಕಾನೂನು ಬದ್ಧ ಆಧಾರ ಹೊಂದಿರುವ ಸವಾಲುಗಳಿಗೆ ಹೆಚ್ಚಿನ ಒತ್ತು ನೀಡುವಂತೆ ರೂಪುಗೊಂಡಿದೆ.
ಪರಿಣಾಮವಾಗಿ ಸರ್ಕಾರ ಮತ್ತು ಸಮಾಜವು ಹೆಚ್ಚಿನ ಸಮನ್ವಯದೊಂದಿಗೆ ಸಾಗುವ ವ್ಯವಸ್ಥೆ ಯಂತೆ ರಷ್ಯಾ ಕಾಣಿಸಿಕೊಳ್ಳುತ್ತದೆ. ಜನರ ವಾಸ್ತವಿಕ ಮತ್ತು ವ್ಯಾವಹಾರಿಕ ಮನೋಭಾವವನ್ನು ವಿಶೇಷವಾಗಿ ಮೆಚ್ಚಲೇಬೇಕು. ಉಕ್ರೇನ್ ಯುದ್ಧದ ಬಗ್ಗೆ ಅಲ್ಲಿನ ಸ್ಥಳೀಯರನ್ನು ಪ್ರಶ್ನಿಸಿದಾಗ, ಪ್ರತಿಕ್ರಿಯೆ ಅತ್ಯಂತ ವಾಸ್ತವಾಧಾರಿತವಾಗಿತ್ತು. ಬಹುತೇಕರಿಂದ ಕೇಳಿಬಂದದ್ದೇನೆಂದರೆ- ದೇಶಕ್ಕೆ ಯಾವುದು ಒಳಿತು ಎಂಬುದು ದೇಶದ ನಾಯಕರ ವಿವೇಚನೆಗೆ ಬಿಟ್ಟಿದ್ದು. ನಾನದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ.
ಇನ್ನೂ ಕೆಣಕುವಂತೆ, ಯುದ್ಧದ ಪರಿಣಾಮಗಳನ್ನು, ವಿಶೇಷವಾಗಿ ಏರುತ್ತಿರುವ ಬೆಲೆಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದಂತಹ ನೇರ ಪರಿಣಾಮಗಳೊಂದಿಗೆ ಪ್ರಶ್ನೆಯನ್ನು ಜೋಡಿಸಿದಾಗಲೂ, ಅದೇ ಉತ್ತರವಿತ್ತು. ಅವರಬ್ಬರು, ಬೆಲೆ ಏರಿದರೆ, ಹೆಚ್ಚುತ್ತಿರುವ ಖರ್ಚಿಗೆ ಸರಿಹೊಂದುವಂತೆ ನಾನು ಇನ್ನಷ್ಟು ದುಡಿಯಬೇಕು, ಹೆಚ್ಚು ಸಂಪಾದಿಸಬೇಕು, ಇಲ್ಲವೇ ನನ್ನ ಉಳಿತಾಯವನ್ನು ಬಳಸಿ ಕೊಳ್ಳಬೇಕು, ಎಂದು ಹೇಳಿದ ರೀತಿ, ಜೀವನದಲ್ಲಿ ಎದುರಾಗುವ ಮತ್ತೊಂದು ಸಾಮಾನ್ಯ ಸವಾಲನ್ನು ಎದುರಿಸುವಂತೆ ಸಹಜವಾಗಿತ್ತು.
ತಮ್ಮ ನಿಯಂತ್ರಣಕ್ಕೆ ಮೀರಿದ ಪರಿಸ್ಥಿತಿಗಳ ಬಗ್ಗೆ ಕೊರಗುವುದಕ್ಕಿಂತ, ತಮ್ಮ ಕೆಲಸ, ಆದಾಯ ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯದ ಮೂಲಕ ತಮ್ಮ ನಿಯಂತ್ರಣದಲ್ಲಿರುವ ಸಂಗತಿಗಳತ್ತ ಗಮನ ಹರಿಸುವ ಮನೋಭಾವ ನನಲ್ಲಿ ರಷ್ಯನ್ನರ ಬಗೆಗಿನ ಗೌರವ ಇನ್ನಷ್ಟು ಉನ್ನತ ಮಟ್ಟಕ್ಕೇರಿಸಿತು.
ರಷ್ಯಾವನ್ನು, ಭಾರತದಂತೆ ‘ಅಭಿವೃದ್ಧಿಶೀಲ ದೇಶ’ ಎಂದು ವರ್ಗೀಕರಿಸುವುದರಿಂದ ಆಶ್ಚರ್ಯ ವಾಗುವುದಂತೂ ಸಹಜ. ಏಕೆಂದರೆ, ನನ್ನ ಕಣ್ಣಿಗೆ ಇಲ್ಲಿ ಕಾಣಿಸುವ ಮೂಲಸೌಕರ್ಯ, ಡಿಜಿಟಲ್ ಸೇವೆಗಳು, ಮತ್ತು ನಗರ ಜೀವನಶೈಲಿ ಯುರೋಪ್ ಅಥವಾ ಅಮೆರಿಕದ ಅಭಿವೃದ್ಧಿ ಹೊಂದಿದ ನಗರಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆಯಾಗಿಲ್ಲವೆಂದೆನಿಸುತ್ತಿತ್ತು. ಆದರೆ ಐಎಂಎಫ್ ಪ್ರಕಾರ ಅಭಿವೃದ್ಧಿಶೀಲ ಎಂದು ಪರಿಗಣಿಸಲು ಆದಾಯ, ಉತ್ಪಾದಕತೆ, ಆರ್ಥಿಕ ವೈವಿಧ್ಯತೆ, ಸಂಸ್ಥೆಗಳ ಬಲ, ಹಣಕಾಸು ವ್ಯವಸ್ಥೆ ಮತ್ತು ಜಾಗತಿಕ ಆರ್ಥಿಕ ಏಕೀಕರಣ ಸೇರಿದಂತೆ ಹಲವು ಸೂಚಕಗಳ ಸಮಗ್ರ ಮೌಲ್ಯಮಾಪನದ ತುಲನದ ಅಳತೆಗೋಲುಗಳಿಂದ ರಷ್ಯಾ ಇನ್ನೂ ಅಭಿವೃದ್ಧಿ ಹೊಂದಿದ ದೇಶವಾಗಿಲ್ಲ. ನನ್ನಂತಹ ಸಾಮಾನ್ಯರಿಗೆ ಅರ್ಥವಾಗದ ವಿಷಯ.
ರಷ್ಯಾದಲ್ಲಿ ಮಾಸಿಕ ವೇತನವು ಉದ್ಯೋಗದ ಸ್ವರೂಪ ಮತ್ತು ಸ್ಥಳವನ್ನು ಅವಲಂಬಿಸಿರುತ್ತದೆ. ಸರ್ಕಾರವು ಕನಿಷ್ಠ ವೇತನವನ್ನು ನಿಗದಿಪಡಿಸುತ್ತದೆ. ಸರಾಸರಿ ಮಾಸಿಕ ಮೂಲ ವೇತನ ತಿಂಗಳಿಗೆ ಸುಮಾರು ಒಂದು ಲಕ್ಷ ರೂಬಲ್‌ಗಳಷ್ಟಿದೆ (ರೂ. 1.25 ಲಕ್ಷ). ರಷ್ಯಾದ ಆರ್ಥಿಕ ಮತ್ತು ಕಾರ್ಪೊ ರೇಟ್ ಕೇಂದ್ರವಾಗಿರುವ ಮಾಸ್ಕೋದಲ್ಲಿ, ವಿಶೇಷವಾಗಿ ಹಣಕಾಸು, ತಂತ್ರಜ್ಞಾನ, ನಿರ್ವಹಣೆ ಮತ್ತು ಪರಿಣತಿ ಅಗತ್ಯವಿರುವ ವೃತ್ತಿಗಳಲ್ಲಿ ದೇಶದ ಇತರ ಭಾಗಗಳಿಗಿಂತ ಹೆಚ್ಚಿನ ವೇತನ ದೊರೆಯುತ್ತದೆ.
ನಮ್ಮ ಗೈಡ್ ಹೇಳುವ ಪ್ರಕಾರ, ಮಾಸ್ಕೋದಲ್ಲಿ ದಿನಕ್ಕೆ ಎಂಟು ಗಂಟೆ ಕೆಲಸ ಮಾಡುವ ಒಬ್ಬ ಮನೆಕೆಲಸದ ಸಹಾಯಕಿಗೆ ತಿಂಗಳಿಗೆ ಸರಾಸರಿ 1.10 ಲಕ್ಷ ರೂಬಲ್‌ಗಳಷ್ಟು ವೇತನ ನೀಡಬೇಕಾಗು ತ್ತದೆ. ಬಹುತೇಕ ಪಶ್ಚಿಮ ಯುರೋಪಿನ ಭಾಷೆಗಳು ಇಂಗ್ಲಿಷ್‌ನಲ್ಲಿ ಬಳಸುವ ಪರಿಚಿತ ಅ, ಆ, ಇ ಅಕ್ಷರಮಾಲೆ ಯಾದ ಲ್ಯಾಟಿನ್ ಲಿಪಿಯನ್ನು ಬಳಸಿದರೆ, ರಷ್ಯನ್ ಭಾಷೆಯು ತನ್ನದೇ ಆದ ವಿಶಿಷ್ಟ ಸಿರಿಲಿಕ್ ಲಿಪಿಯನ್ನು ಉಳಿಸಿಕೊಂಡಿದೆ.
ಇದರಿಂದ ರಷ್ಯನ್ ಭಾಷೆಗೆ ತಕ್ಷಣವೇ ಗುರುತಿಸಬಹುದಾದ, ಅದರ ಯುರೋಪಿಯನ್ ನೆರೆಹೊರೆಯ ಭಾಷೆಗಳಿಂದ ದೃಶ್ಯಾತ್ಮಕವಾಗಿಯೂ ವಿಭಿನ್ನವಾದ ಸ್ವರೂಪ ದೊರೆತಿದೆ. ರಷ್ಯನ್ ಭಾಷೆಯನ್ನು ಮಾತನಾಡುವುದನ್ನು ಕಲಿಯುವುದೇ ಕಷ್ಟಕರವಾಗಿರುವಾಗ, ಅದರ ಲಿಖಿತ ರೂಪವನ್ನು ಕಲಿಯಲು ಬೇಕಾದ ಅಕ್ಷರಮಾಲೆಯ ಪರಿಚಯ ಮತ್ತೊಂದು ಹೆಚ್ಚುವರಿ ಸವಾಲಾಗಿ ಪರಿಣಮಿಸುತ್ತದೆ. ಆದ್ದರಿಂದಲೇ ರಷ್ಯನ್ ಭಾಷೆಯನ್ನು ಕಲಿಯುವ ಇತರೇ ದೇಶದವರ ಸಂಖ್ಯೆ ವಿರಳ. ರಷ್ಯಾದಲ್ಲಿ ವಿಶ್ವಪ್ರಸಿದ್ಧ ಬಹುರಾಷ್ಟ್ರೀಯ ಬ್ರ್ಯಾಂಡ್‌ಗಳ ಗೈರುಹಾಜರಿಯೇ ವಿಶೇಷವಾಗಿ ಗಮನ ಸೆಳೆಯುತ್ತದೆ.
ಉಕ್ರೇನ್ ಸಂಘರ್ಷದ ಬಳಿಕ ವಿಧಿಸಲಾದ ನಿರ್ಬಂಧಗಳಿಂದ ಕಳೆದ ನಾಲ್ಕೈ ದು ವರ್ಷಗಳಲ್ಲಿ, ನಮಗೆ ಚಿರಪರಿಚಿತವಿರುವ ಬ್ರ್ಯಾಂಡ್ ಗಳು ರಷ್ಯಾದಿಂದ ಮಾಯವಾಗಿವೆ. ವಿಶ್ವದ ಬಹುತೇಕ ಭಾಗಗಳು ಗೂಗಲ್, ಉಬರ್, ಅಮೆಜಾನ್ ಸೇರಿದಂತೆ ಜಾಗತಿಕ ತಂತ್ರಜ್ಞಾನ ವೇದಿಕೆಗಳ ಮೇಲೆ ಅವಲಂಬಿತವಾಗಿದ್ದರೆ, ರಷ್ಯಾ ತನ್ನದೇ ಆದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಮೂಲಕ ಡಿಜಿಟಲ್ ಸ್ವಾಯತ್ತತೆಯತ್ತ ಗಮನ ಹರಿಸಿದೆ. ಯಾಂಡೆಕ್ಸ್ ಸಾಮಾನ್ಯವಾಗಿ ರಷ್ಯಾದ ಗೂಗಲ್ ಮತ್ತು ಊಬರ್‌ಗೆ ಪರ್ಯಾಯ ಎನ್ನಲಾಗುತ್ತದೆ.
ಯಾಂಡೆಕ್ಸ್ ಸರ್ಚ್ ಎಂಜಿನ್‌ನೊಂದಿಗೆ ನಕ್ಷೆ, ನ್ಯಾವಿಗೇಶನ್, ಟ್ಯಾಕ್ಸಿ, ಆಹಾರ ವಿತರಣೆ, ಇ-ಕಾಮರ್ಸ್, ಕ್ಲೌಡ್ ಸೇವೆಗಳು, ಸಂಗೀತ, ವೀಡಿಯೊ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ಸೇವೆಗಳನ್ನು ಒಳಗೊಂಡಿರುವ ಸಂಪೂರ್ಣ ಡಿಜಿಟಲ್ ಜಗತ್ತಾಗಿ ವಿಸ್ತರಿಸಿದೆ. ಭಾರತವೂ ಕೆಲವು ವರ್ಷಗಳ ಹಿಂದೆ ಗೂಗಲ್ ಮ್ಯಾಪ್ಸ್‌ಗೆ ಸ್ವದೇಶಿ ಪರ್ಯಾಯವನ್ನು ರೂಪಿಸುವ ಪ್ರಯತ್ನ ನಡೆಸಿತ್ತು.
ಮ್ಯಾಪ್‌ಮೈಇಂಡಿಯಾ ಹಾಗೂ ಭುವನ್ ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಿದ್ದವು. ಆದರೆ ಇವ್ಯಾವವೂ ಪರ್ಯಾಯವಾದ ವೇದಿಕೆಯಾಗಿ ರೂಪುಗೊಳ್ಳಲು ಸಫಲವಾಗಿಲ್ಲ. ಇಲ್ಲಿನ ಸಾಮಾಜಿಕ ವೇದಿಕೆ ಫೇಸ್‌ಬುಕ್‌ಗೆ ಬದಲಾಗಿ ವಿಕಾಂಟಾಕ್ಟೆ. ಇನ್ನು ರುಟ್ಯೂಬ್ ಮತ್ತು ವಿಕೆ ವಿಡಿಯೊಗಳು ಯೂಟ್ಯೂಬ್‌ಗೆ ಪರ್ಯಾಯ ಗಳಾಗಿ ಪ್ರಚಲಿತದಲ್ಲಿವೆ. ನಿರ್ಬಂಧಗಳ ನಡುವೆಯೂ ವಾಟ್ಸಆಪ್ ವ್ಯಾಪಕವಾಗಿ ಬಳಸ ಲಾಗುತ್ತಿರುವ ಮೆಸೇಜಿಂಗ್ ಅಪ್ಲಿಕೇಶನ್. ಕಳೆದ ವರ್ಷದಿಂದ ವಾಟ್ಸಆಪ್ ಮತ್ತು ಟೆಲಿಗ್ರಾಂನ ಕೆಲವು ಧ್ವನಿ ಕರೆ ಸೌಲಭ್ಯಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ.
ಹಾಗೆಯೇ ಮ್ಯಾಕ್‌ಡೊನಾಲ್ಡ್ಸ್‌ನ್ನು ಸ್ಥಳೀಯ ಉದ್ಯಮಿ ಖರೀದಿಸಿದ ಬಳಿಕ, ಆ ರೆಸ್ಟೋರೆಂಟ್‌ಗಳು ‘ಫ್ಕುಸ್ನಾ-ಇ-ಟೋಚ್ಕಾ’ ಎಂದು ಮುಂದುವರಿದಿದೆ. ಹಾಗೆಯೇ, ಸ್ಟಾರ್‌ಬಕ್ಸ್ ‘ಸ್ಟಾರ್ಸ್ ಕಾಫಿ’ಯಾಗಿ ಮರುಪ್ರಾರಂಭ ವಾಯಿತು. ಹಿಂದೆ ಕೆಎಫ್ʼಸಿ ಆಗಿದ್ದ ರೆಸ್ಟೋರೆಂಟ್‌ಗಳು ‘ರೋಸ್ಟಿಕ್ಸ್’ ಎಂಬ ಹೆಸರನ್ನು ಪಡೆದು ಕೊಂಡವು. ನಾವು ತಂಗಿದ್ದ ಹಾಲಿಡೇ ಇನ್, ‘ಮೊಸ್ಕೋವ್ಸ್ಕ- ಯೆ-ವೊರೋಟಾ ಹೋಟೆಲ್’ ಆಗಿ ಬದಲಾಯಿತು.
ಇಂತಹ ರಾಷ್ಟ್ರಾಭಿಮಾನಿ ಬೆಳವಣಿಗೆಗಳು ರಷ್ಯನ್ನರ ರಾಷ್ಟ್ರೀಯ ಸ್ವಾಭಿಮಾನ ಮತ್ತು ಆತ್ಮ ಗೌರವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ. ಒಮ್ಮೆ ನಮಗೆ ಪರಿಚಿತವಾಗಿದ್ದ ಅನೇಕ ಪಾಶ್ಚಾತ್ಯ ಬ್ರ್ಯಾಂಡ್‌ಗಳ ಸ್ಥಾನ ವನ್ನು ರಷ್ಯಾದ ಮಾಲೀಕತ್ವದ ಬ್ರ್ಯಾಂಡ್‌ಗಳು ಪಡೆದುಕೊಂಡಿರುವುದು ಗಮನಾರ್ಹ.
ವ್ಯವಹಾರಗಳು, ಉದ್ಯೋಗಗಳು, ಪೂರೈಕೆ ಸರಪಳಿಗಳು ಮತ್ತು ಗ್ರಾಹಕರ ಅಭ್ಯಾಸಗಳು ಮುಂದು ವರಿಯುವಂತೆ ನೋಡಿಕೊಳ್ಳುವುದರ ಜೊತೆಗೆ, ಮಾಲೀಕತ್ವ ಮತ್ತು ಬ್ರ್ಯಾಂಡ್‌ಗಳನ್ನು ರಷ್ಯಾದ ಕೈಗಳಿಗೆ ವರ್ಗಾಯಿಸುವ ಸಕಾರಾತ್ಮಕ ಪ್ರಯತ್ನ ಮೆಚ್ಚುವಂತದ್ದು. ರಷ್ಯಾದಲ್ಲಿ ನಿರುದ್ಯೋಗ ಪ್ರಮಾಣ ಸುಮಾರು 2%.
ಇದು ಯುರೋಪಿಯನ್ ಒಕ್ಕೂಟದ ಸುಮಾರು 6%ಗಿಂತ ಕಡಿಮೆಯಿದೆ. ರಷ್ಯಾದಲ್ಲಿ ನಿರಾಶ್ರಿತರು ಅಥವಾ ಮನೆಯಿಲ್ಲದವರು ಬಹುತೇಕ ಇಲ್ಲ ಎಂದು ನಮ್ಮ ಗೈಡ್ ಹೆಮ್ಮೆಯಿಂದ ಹೇಳಿದಾಗ, ಅವರ ಮಾತಿನಲ್ಲಿ ಆ ಆತ್ಮವಿಶ್ವಾಸ ಸ್ಪಷ್ಟವಾಗಿ ಗೋಚರಿಸಿತು. ಪೂರಕವೆಂಬಂತೆ ನನ್ನ ಪ್ರವಾಸದ ಎರಡು ವಾರಗಳಲ್ಲಿ ನಾನೆಲ್ಲಿಯೂ ಭಿಕ್ಷುಕರನ್ನು ಅಥವಾ ನಿರಾಶ್ರಿ ತರನ್ನು ನೋಡಲಿಲ್ಲ.
ಇದು ದೇಶದ ಸಾಮಾಜಿಕ ವ್ಯವಸ್ಥೆ ಹಾಗೂ ತನ್ನ ನಾಗರಿಕರಿಗೆ ವಸತಿ ಮತ್ತು ಮೂಲಭೂತ ನೆರವು ಒದಗಿಸುವ ಸಾಮರ್ಥ್ಯದ ಪ್ರತಿಬಿಂಬವೆನ್ನಬಹುದು. ಇತ್ತೀಚಿನ ದಶಕಗಳಲ್ಲಿ ರಷ್ಯಾ ತನ್ನ ಹಳೆಯ ಕೇಂದ್ರೀಕೃತ ಸಮಾಜವಾದಿ ಆರ್ಥಿಕ ವ್ಯವಸ್ಥೆಯಿಂದ ಕ್ರಮೇಣ ಮಾರುಕಟ್ಟೆ ಆಧಾರಿತ ಆರ್ಥಿಕತೆ ಯತ್ತ ಸಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಖಾಸಗಿ ಉದ್ಯಮ, ಮುಕ್ತ ವ್ಯಾಪಾರ, ವಿದೇಶಿ ಹೂಡಿಕೆ ಮತ್ತು ಸ್ಪರ್ಧೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಗೆ ಹತ್ತಿರವಾಗುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ.
ನನ್ನ ಅನಿಸಿಕೆಯಂತೆ ರಷ್ಯಾದ ಆರ್ಥಿಕ ಪರಿವರ್ತನೆ ಮತ್ತು ಜಗತ್ತಿನೊಂದಿಗೆ ಹೊಂದಿಕೊಳ್ಳಲು ನಡೆಸಿದ ದೀರ್ಘ ಪ್ರಯತ್ನವನ್ನು ಸಹಾನುಭೂತಿ ಮತ್ತು ಐತಿಹಾಸಿಕ ಸಂದರ್ಭದೊಂದಿಗೆ ನೋಡುವುದು ಹೆಚ್ಚು ಸಮತೋಲನದ ದೃಷ್ಟಿಕೋನವೆನಿಸುತ್ತದೆ. ಒಂದು ಕಾಲದಲ್ಲಿ ಜಗತ್ತಿನಿಂದ ಬಹುತೇಕ ಪ್ರತ್ಯೇಕವಾಗಿದ್ದ ವ್ಯವಸ್ಥೆಯಿಂದ ಜಾಗತಿಕ ಆರ್ಥಿಕತೆಯೊಂದಿಗೆ ಬೆರೆತು ಆಧುನಿಕ ರಾಷ್ಟ್ರವಾಗಿ ರೂಪಾಂತ ರಗೊಳ್ಳುವುದು ಮಹತ್ವದ ಐತಿಹಾಸಿಕ ಪಯಣವೇ ಹೌದು.