ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ವಿಕ್ರಮ ಬೇತಾಳ 8: ಮದನಸೇನೆಯ ಪ್ರಾಮಾಣಿಕತೆಗೆ ಕರಗಿದ ಕಳ್ಳನ ಕೆಟ್ಟತನ

ಪತಿಯ ಉದಾತ್ತತೆ ಮತ್ತು ನಿನ್ನ ಸತ್ಯನಿಷ್ಠೆಯ ಮುಂದೆ ನನ್ನ ಕಾಮ ತೀರ ನಿಕೃಷ್ಟವಾದುದು. ನೀನು ನನ್ನ ಸಹೋದರಿಯಂತೆ ಪವಿತ್ರಳು, ನಿನ್ನ ಪತಿಯ ಬಳಿಗೇ ಮರಳು ಎಂದು ಆಕೆಯನ್ನು ಗೌರವದಿಂದ ಬೀಳ್ಕೊಡುತ್ತಾನೆ. ಹಿಂತಿರುಗಿ ಬರುವಾಗ ಕಳ್ಳನಿಗೆ ಆಭರಣಗಳನ್ನು ಕೊಡಲು ಹೋದರೆ, ಕಳ್ಳನೂ ಆಕೆಯ ಪಾವಿತ್ರ್ಯಕ್ಕೆ ತಲೆಬಾಗಿ, ತಾಯೇ, ನಿನ್ನಿಂದ ನಾನು ಏನನ್ನೂ ಪಡೆಯಲಾರೆ ಎಂದು ಆಕೆಯನ್ನು ಸುರಕ್ಷಿತವಾಗಿ ಪತಿಯ ಮನೆಗೆ ತಲುಪಿಸುತ್ತಾನೆ.

ಒಂದೊಳ್ಳೆ ಮಾತು

ವೀರಪುರ ನಗರದ ಶ್ರೇಷ್ಠಿಯ ಮಗಳಾದ ಮದನಸೇನೆಗೆ ಸಮುದ್ರದತ್ತನೆಂಬ ಯುವಕನೊಂದಿಗೆ ವಿವಾಹ ನಿಶ್ಚಯವಾಗಿರುತ್ತದೆ. ಮದುವೆಗೆ ಕೆಲವೇ ದಿನಗಳ ಮುನ್ನ, ಧರ್ಮದತ್ತನೆಂಬ ಮತ್ತೊಬ್ಬ ಯುವಕ ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಪ್ರೇಮಯಾಚನೆ ಮಾಡುತ್ತಾನೆ. ಆಗ ಆಕೆ, ನನ್ನ ಮದುವೆ ಇನ್ನೊಬ್ಬರೊಂದಿಗೆ ನಿಶ್ಚಯವಾಗಿದೆ, ನಾನು ಪರಸ್ತ್ರೀ ಎಂದು ನಿರಾಕರಿಸುತ್ತಾಳೆ. ಆದರೆ ಆತ ಬಿಡದೆ ಪ್ರಾಣಬಿಡುವುದಾಗಿ ಬೆದರಿಸಿದಾಗ, ಆಕೆ ವಿಧಿಯಿಲ್ಲದೆ, ನನ್ನ ಮದುವೆಯಾದ ಮೊದಲ ರಾತ್ರಿಯೇ, ಪತಿಯ ಅನುಮತಿ ಪಡೆದು ಮೊದಲು ನಿನ್ನ ಬಳಿಗೇ ಬರುತ್ತೇನೆ ಎಂದು ಮಾತು ಕೊಡುತ್ತಾಳೆ.

ವಿವಾಹ ನಡೆದು ಮೊದಲ ರಾತ್ರಿಯ ಕೋಣೆಗೆ ಬಂದಾಗ ಮದನಸೇನೆ ಕಣ್ಣೀರಿಡುತ್ತಾ ಕುಳಿತಿರು ತ್ತಾಳೆ. ಪತಿ ಸಮುದ್ರದತ್ತ ಪ್ರೀತಿಯಿಂದ ಕಾರಣ ಕೇಳಿದಾಗ, ಆಕೆ ಮುಚ್ಚುಮರೆಯಿಲ್ಲದೆ ಧರ್ಮದತ್ತನಿಗೆ ಕೊಟ್ಟ ಮಾತಿನ ವೃತ್ತಾಂತವನ್ನು ತೆರೆದಿಡುತ್ತಾಳೆ. ಇದನ್ನು ಕೇಳಿದ ಪತಿಗೆ ಆಕೆಯ ಪ್ರಾಮಾಣಿಕತೆಯ ಮೇಲೆ ಅಪಾರ ಗೌರವ ಮೂಡುತ್ತದೆ. ಕೊಟ್ಟ ವಚನಕ್ಕೆ ಭಂಗ ತರಬೇಡ; ನೀವೂ ಬರೆಯಬಹುದು ಸತ್ಯಕ್ಕಿಂತ ದೊಡ್ಡ ಧರ್ಮವಿಲ್ಲ. ನೀನು ನಿನ್ನ ಮಾತನ್ನು ಉಳಿಸಿಕೊಂಡು ಬಾ ಎಂದು ಆಕೆಯನ್ನು ಪ್ರೇಮಿಯ ಬಳಿಗೆ ಕಳುಹಿಸಿಕೊಡುತ್ತಾನೆ.

ಇದನ್ನೂ ಓದಿ: Roopa Gururaj Column:ವಿಕ್ರಮ ಬೇತಾಳ ಕತೆ 7: ಹರಿದತ್ತನ ಕೆಟ್ಟ ಸಹವಾಸ ಮತ್ತು ಪಶ್ಚಾತ್ತಾಪ

ಕತ್ತಲೆಯ ರಾತ್ರಿಯಲ್ಲಿ ಆಭರಣಗಳಿಂದ ಶೃಂಗಾರಗೊಂಡು ಪ್ರೇಮಿಯ ಮನೆಗೆ ಹೊರಟ ಆಕೆಯನ್ನು ದಾರಿಯಲ್ಲಿ ಅಡ್ಡಗಟ್ಟುತ್ತಾನೆ. ಆಕೆಯ ಕಳ್ಳನೊಬ್ಬ ಆಭರಣಗಳನ್ನು ದೋಚಲು ಮುಂದಾದಾಗ, ಆಕೆ ಕೈಮುಗಿದು, ನಾನು ನನ್ನ ವಚನಪಾಲನೆಗೆ ಹೋಗುತ್ತಿದ್ದೇನೆ. ನನ್ನ ನಮ್ಮ ವಿಳಾಸ ರಾಜಾ, ಪತಿ, ಪ್ರೇಮಿ, ಕಳ್ಳ- ಈ ಮೂವರಲ್ಲಿ ಅತ್ಯಂತ ಉದಾತ್ತ, ತ್ಯಾಗಿ ಯಾರು? ಕೆಲಸ ಮುಗಿಸಿ ಮರಳಿ ಬರುವಾಗ ನಾನೇ ನನ್ನ ಸರ್ವಾಭರಣಗಳನ್ನು ನಿನಗೆ ಒಪ್ಪಿಸುತ್ತೇನೆ, ನನ್ನ ಮಾತನ್ನು ನಂಬು ಎಂದು ಬೇಡಿಕೊಳ್ಳುತ್ತಾಳೆ. ಆಕೆಯ ಅಂಜಿಕೆಯಿಲ್ಲದ ಮುಗ್ಧ ಸತ್ಯಕ್ಕೆ ಮಾರುಹೋದ ಕಳ್ಳ, ಸರಿ, ಹೋಗಿ ಬಾ ಎಂದು ಬಿಟ್ಟುಬಿಡುತ್ತಾನೆ. ಪ್ರೇಮಿ ಧರ್ಮದತ್ತನ ಬಳಿಗೆ ಹೋದಾಗ, ಆತ ಆಶ್ಚರ್ಯಚಕಿತನಾಗುತ್ತಾನೆ. ಪತಿಯೇ ಅನುಮತಿ ನೀಡಿ ಕಳುಹಿಸಿದ ಸಂಗತಿಯನ್ನು ಮದನಸೇನೆ ತಿಳಿಸಿದಾಗ, ಪ್ರೇಮಿಗೆ ತನ್ನಲ್ಲಿದ್ದ ಕಾಮದ ಕಿಚ್ಚು ನಾಚಿಕೆಯಿಂದ ಬೂದಿಯಾಗುತ್ತದೆ.

ಪತಿಯ ಉದಾತ್ತತೆ ಮತ್ತು ನಿನ್ನ ಸತ್ಯನಿಷ್ಠೆಯ ಮುಂದೆ ನನ್ನ ಕಾಮ ತೀರ ನಿಕೃಷ್ಟವಾದುದು. ನೀನು ನನ್ನ ಸಹೋದರಿಯಂತೆ ಪವಿತ್ರಳು, ನಿನ್ನ ಪತಿಯ ಬಳಿಗೇ ಮರಳು ಎಂದು ಆಕೆಯನ್ನು ಗೌರವದಿಂದ ಬೀಳ್ಕೊಡುತ್ತಾನೆ. ಹಿಂತಿರುಗಿ ಬರುವಾಗ ಕಳ್ಳನಿಗೆ ಆಭರಣಗಳನ್ನು ಕೊಡಲು ಹೋದರೆ, ಕಳ್ಳನೂ ಆಕೆಯ ಪಾವಿತ್ರ್ಯಕ್ಕೆ ತಲೆಬಾಗಿ, ತಾಯೇ, ನಿನ್ನಿಂದ ನಾನು ಏನನ್ನೂ ಪಡೆಯಲಾರೆ ಎಂದು ಆಕೆಯನ್ನು ಸುರಕ್ಷಿತವಾಗಿ ಪತಿಯ ಮನೆಗೆ ತಲುಪಿಸುತ್ತಾನೆ.

ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಕಠಿಣ ಪ್ರಶ್ನೆಯೊಡ್ಡುತ್ತಾನೆ: ಹೇ ವಿಕ್ರಮಾದಿತ್ಯನು, ಕಳ್ಳನೇ ಎಲ್ಲಕ್ಕಿಂತ ಶ್ರೇಷ್ಠ ತ್ಯಾಗಿ! ಪತಿಯು ಸತ್ಯ ಮತ್ತು ಧರ್ಮಕ್ಕೆ ಹೆದರಿ ಅನುಮತಿ ನೀಡಿದ; ಪ್ರೇಮಿಯು ಲೋಕಾಪವಾದ ಮತ್ತು ನೈತಿಕತೆಯ ನಾಚಿಕೆಗೆ ಹೆದರಿ ಆಕೆಯನ್ನು ಬಿಟ್ಟ. ಆದರೆ ಕಳ್ಳನಿಗೆ ಯಾವ ಧರ್ಮ, ಲೋಕಾಪವಾದ ಅಥವಾ ನೈತಿಕ ಕಟ್ಟುಪಾಡುಗಳೂ ಇರಲಿಲ್ಲ. ಆತ ಬದುಕಿದ್ದೇ ಕಳ್ಳತನ ಮತ್ತು ಹಿಂಸೆಯಿಂದ. ಆದರೂ ಆಕೆಯ ನಿಷ್ಠೆಯನ್ನು ಕಂಡು ತನ್ನ ವೃತ್ತಿಧರ್ಮ ಹಾಗೂ ಸಿಕ್ಕ ಚಿನ್ನಾಭರಣಗಳೆರಡನ್ನೂ ತೊರೆದ ಆ ಕಳ್ಳನ ಮನಃಪರಿವರ್ತನೆ ಮತ್ತು ತ್ಯಾಗವೇ ಎಲ್ಲಕ್ಕಿಂತ ಹಿರಿದಾದುದು ಎಂದ.

ಬದುಕಿನಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಗೆ ಎಂತಹ ಕಠಿಣ ಮನಸ್ಸನ್ನೂ ಪರಿವರ್ತಿಸುವ ಅಸಾಧಾರಣ ಶಕ್ತಿಯಿರುತ್ತದೆ. ನಿಯಮಗಳು ಅಥವಾ ಕಾನೂನಿನ ಭಯದಿಂದ ಮಾಡುವ ಒಳ್ಳೆಯತನಕ್ಕಿಂತ, ಒಳಗಿನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಅಧರ್ಮದ ಹಾದಿಯಲ್ಲಿದ್ದವರು ಸನ್ಮಾರ್ಗಕ್ಕೆ ತಿರುಗುವುದು ಅತ್ಯಂತ ಉನ್ನತವಾದದ್ದು. ಸಾಂದರ್ಭಿಕವಾಗಿ ಕೆಟ್ಟ ಪರಿಸ್ಥಿತಿಯಲ್ಲಿದ್ದ ವ್ಯಕ್ತಿಯಲ್ಲೂ ಒಂದು ಸುಪ್ತ ಒಳ್ಳೆಯತನ ವಿರುತ್ತದೆ. ನಾವು ನಂಬಿಕೆ ಮತ್ತು ಸತ್ಯದ ದಾರಿಯಲ್ಲಿ ಅಚಲವಾಗಿ ನಿಂತರೆ, ಎದುರಿಗಿರುವ ಕೆಡುಕೂ ತಲೆಬಾಗಿ ಬದಲಾಗುತ್ತದೆ. ನಾವು ಎಂದಿಗೂ ಪ್ರಾಮಾಣಿಕ ಪ್ರಯತ್ನ ಕೈಬಿಡಬಾರದು. ಪ್ರಪಂಚ ತುಂಬಾ ಎಲ್ಲರೂ ಕೆಟ್ಟತನಕ್ಕೆ ಇಳಿದಿದ್ದಾರೆ ಎಂದು ನಾವು ಕೂಡ ಕೆಟ್ಟತನ ಮಾಡಿದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ. ಕೆಸರಿನಲ್ಲಿ ಅರಳುವ ಕಮಲದಂತೆ ಒಳ್ಳೆಯದನ್ನು ಬಯಸುವ ಬೆಳೆಸುವ ಆತ್ಮಸ್ಥೈರ್ಯವನ್ನು ನಾವು ಕಾಯ್ದುಕೊಳ್ಳಬೇಕು.

ರೂಪಾ ಗುರುರಾಜ್

View all posts by this author