ಸಂಜೀವ ಅ.ಮುಷ್ಟಗಿ ಯಮಕನಮರಡಿ
ಟಿಕೆಟ್ ಯಂತ್ರದಲ್ಲಿ ಬಸ್‌ಗಳ ಸ್ಟೇಜ್, ಗ್ರಾಮದ ಹೆಸರು ಅಳವಡಿಸಲು ಮನವಿ
ಪೂಜೆ ಸಲ್ಲಿಸಿ ಹರ್ಷ ಪಟ್ಟವರು ಬಸ್ ನಿಲುಗಡೆಗೆ ಹರಸಾಹಸ
ಕಳೆದ ಡಿಸ್ಸೆಂಬರ-2025 ತಿಂಗಳಾಂತ್ಯದಲ್ಲಿ ಚಿಕ್ಕೋಡಿ, ಸಂಕೇಶ್ವರ ಹಾಗೂ ನಿಪ್ಪಾಣಿ ಘಟಕದ ಬಸ್ಸುಗಳು ಚಿಕಾಲಗುಡ್ಡ ಹಾಗೂ ಉಳ್ಳಾಗಡ್ಡಿ-ಖಾನಾಪೂರ ಗ್ರಾಮಗಳಿಗೆ ನಿಲ್ಲುಗಡೆ ಮಾಡುವಂತೆ ಚಿಕ್ಕೋಡಿಯ ಸಾರಿಗೆ ಅಧಿಕಾರಿಗಳು ಆದೇಶ ಹೊರಡಿಸಿ ತಿಂಗಳು ಕಳೆದರೂ ಇಂದಿಗೂ ಅಗತ್ಯ ವಿರುವ ಸಾರಿಗೆ ಬಸ್ಸುಗಳು ನಿಲ್ಲುಗಡೆಯಾಗುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಲೋಕೋ ಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಸೂಚನೆ ಮೆರೆಗೆ ಈ ನಿಲ್ಲುಗಡೆಗೆ ಆದೇಶವಿದ್ದರೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇಂದಿಗೂ ಇತ್ತ ಗಮನ ಹರಿಸುತ್ತಿಲ್ಲ ಬಸ್ ನಿಲ್ಲುಗಡೆಗಾಗಿ ವಲಯದ ಮುಖಂಡರು, ಗ್ರಾಮಸ್ತರು ಬಸ್ಸುಗಳಿಗೆ ಪೂಜೆ ಸಲ್ಲಿಸಿ ಪ್ರಾರಂಭೋತ್ಸವ ಮಾಡಿದ್ದು ಈ ಬಸ್ಸುಗಳ ನಿಲ್ಲುಗಡೆಗಾಗಿ ಇಂದು ಹರಸಾಹಸ ಪಡುತ್ತಿರುವುದು ದುರಾದೃಷ್ಟ.
ಅಗತ್ಯತೆ ಉತ್ತಮ ಆದಾಯ: ಉಳ್ಳಾಗಡ್ಡಿ-ಖಾನಾಪೂರ ಹಾಗೂ ಚಿಕಾಲಗುಡ್ಡ ಗ್ರಾಮಗಳು ಕರ್ನಾಟಕದ ಬೆಳಗಾವಿ ಹುಬ್ಬಳ್ಳಿ, ಹಾಗೂ ಮಹಾರಾಷ್ಟ್ರದ ಕೊಲ್ಹಾಪೂರ ಹಾಗೂ ಇತರೆ ನಗರ ಪ್ರದೇಶಗಳಿಗೆ ಮಹಾರಾಷ್ಟದ ಗಡಿ ತಾಲೂಕುಗಳಾದ ಗಡಹಿಂಗ್ಲಜ ಹಾಗೂ ಆಜರಾ ಮತ್ತು ಕರ್ನಾ ಟಕದ ಸುಮಾರು 10ಕ್ಕೂ ಹೆಚ್ಚು ಗಡಿ ಗ್ರಾಮಗಳು ಸಂಪರ್ಕದಲ್ಲಿರುವುದರಿಂದ ಈ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎರಡು ರಾಜ್ಯಗಳ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಬಸ್ಸ್ ನಿಲ್ಲುಗಡೆ ಅಗತ್ಯತೆ ಇದೆ ಇದರಿಂದ ಸಾರಿಗೆ ಸಂಸ್ಥೆಗೆ ಆದಾಯವೂ ಇದೆ,
ಈ ನಿಲ್ಲುಗಡೆಗಾಗಿ ಕರ್ನಾಟಕ ಹಾಗೂ ಮಹಾರಾಷ್ಟ ರಾಜ್ಯಗಳ ಗಡಿ ಗ್ರಾಮಗಳ ಪಂಚಾಯಗಳಲ್ಲಿ ಠರಾವು ಪಾಸುಮಾಡಿದ ನಕಲುಗಳು, ಶಾಲಾ-ಕಾಲೇಜುಗಳ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.
ಸ್ಟೆಜ್ʼನ ಹೆಸರುಗಳಿಲ್ಲಾ:- ಸಾರಿಗೆ ಸಂಸ್ಥೆಯ ಅಧಿಕಾರಿಗಳು ಟಿಕೇಟ್ ಯಂತ್ರದಲ್ಲಿ ಅಗತ್ಯವಿರುವ ಗ್ರಾಮಗಳ ಸ್ಟೇಜ್ ಹಾಗೂ ಗ್ರಾಮದ ಹೆಸರು ಅಳವಡಿಸಿಲ್ಲಾ ಎಂಬುದು ಸಾರಿಗೆ ಸಂಸ್ಥೆಯ ಬಸ್ಸು ಗಳು ನಿಲ್ಲದಿರಲು ಪ್ರಮುಖ ಕಾರಣ ಆದೇಶವಾಗಿ ತಿಂಗಳಾದರೂ ಕೂಡಾ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ನಿಡುತ್ತಿಲ್ಲಾ ಎಂಬುದು ನಿರ್ವಾಹಕರನ್ನು ವಿಚಾರಿಸಿದಾಗ ತಿಳಿದು ಬಂದಿದೆ.
ಇದನ್ನೂ ಓದಿ: KSRTC Bus: ಪ್ರಯಾಣಿಕರಿಗೆ ಸಿಹಿಸುದ್ದಿ; ಕ್ರಿಸ್‌ಮಸ್ ಹಿನ್ನೆಲೆ ಕೆಎಸ್‌ಆರ್‌ಟಿಸಿಯಿಂದ 1,000 ಹೆಚ್ಚುವರಿ ಬಸ್ ವ್ಯವಸ್ಥೆ
ಗ್ರಾಮಸ್ಥರಿಂದ ಮನವಿ ಸಲ್ಲಿಕೆ: ಚಿಕಾಲಗುಡ್ಡ ಗ್ರಾಮದ ಬಳಿ ಸಂಕೇಶ್ವರ ಚಿಕ್ಕೋಡಿ, ಹಾಗೂ ನಿಪ್ಪಾಣಿ ಬಸ್ಸುಗಳನ್ನು ನಿಲ್ಲಿಸುವಂತೆ ಚಾಲಕರಿಗೆ ಮನವಿಯನ್ನು ಕಳೆದೆರಡು ದಿನಗಳಿಂದ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು ಚಾಲಕರು ಹಾಗೂ ನಿರ್ವಾಹಕರು ನಾವು ಟಿಕೇಟ್ ನೀಡಲು ಆಸ್ಪದವಿಲ್ಲದೆ ಹ್ಯಾಗೆ ನಿಲ್ಲಿಸೊದು ಎಂದು ಪ್ರಶ್ನಿಸುತ್ತಿದ್ದಾರೆ,
ಈ ಮೂರು ಘಟಕವನ್ನು ಹೊರತುಪಡಿಸಿ ಬೆಳಗಾವಿ ಘಟಕದ ಕೆಲ ಸಾರಿಗೆ ಬಸ್ಸುಗಳ ಟಿಕೇಟ್ ಯಂತ್ರದಲ್ಲಿ ಉಳ್ಳಾಗಡ್ಡಿ-ಖಾನಾಪೂರ ಸ್ಟೆಜ್ ಹಾಗೂ ಹೆಸರು ಮೊದಲೇ ಇದ್ದರೂ ಈ ಬಸ್ಸುಗಳು ಇಂದಿಗೂ ಈ ಸ್ಥಳದಲ್ಲಿ ನಿಲ್ಲುತ್ತಿಲ್ಲ ಎಂಬುದು ಸಾರಿಗೆ ಇಲಾಖೆಯ ದುರ್ಲಕ್ಷಕ್ಕೆ ಕೈಗನ್ನಡಿಯಾಗಿದೆ,
ಕಳೆದೆರಡು ದಿನಗಳಿಂದ ಸಂಕೇಶ್ವರ ಘಟಕದ ಸಿಬ್ಬಂದಿಯನ್ನು ಚಿಕಲಗುಡ್ಡದ ಬಳಿ ಸಾರಿಗೆ ಅಧಿಕಾರಿಗಳು ನಿಲ್ಲಿಸಿದ್ದು ಈ ನಿಲ್ಲುಗಡೆಗೆ ಸಮಸ್ಯೆ ಏನು ಎಂಬುದು ಅಧಿಕಾರಿಗಳಿಗೆ ಗೊತ್ತಾಗಿದೆ. ಈ ಸ್ಥಳಗಳಲ್ಲಿ ಸಾರಿಗೆ ಬಸ್ಸುಗಳು ನಿಲ್ಲುಗಡೆಯಾಗುವುದರಿಂದ ಸಾರಿಗೆ ಸಂಸ್ಥೆಗೆ ಲಭ್ಯವಿದ್ದು ಈ ಸ್ಥಳಗಳಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸಾರ್ವಜನಿಕರಿಗೆ ಅಗತ್ಯವಿರುವ ಬಸ್ಸ್ ನಿಲ್ಲುಗಡೆಗೆ ಸಹಕರಿಸುವರೇ ಕಾದು ನೋಡಬೇಕಷ್ಟೆ..
ಗ್ರಾಮಗಳ ಹೆಸರು ಅಳವಡಿಕೆ
ಈ ಸ್ಥಳಗಳಲ್ಲಿ ಬಸ್ ನಿಲ್ಲುಗಡೆಗೆ ಟಿಕೇಟ್ ಯಂತ್ರದಲ್ಲಿ ಸ್ಟೇಜ್ ಹಾಗೂ ಗ್ರಾಮಗಳ ಹೆಸರುಗಳನ್ನು ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ ಈ ವಾರ ಸಮಸ್ಯೆ ಪರಿಹಾರವಾಗಲಿದೆ ಎಂದು ಚಿಕ್ಕೋಡಿ ಸಾರಿಗೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸಮಸ್ಯೆ ಶೀಘ್ರ ಪರಿಹಾರ
ಸಂಕೇಶ್ವರ ನಿಪ್ಪಾಣಿ, ಚಿಕ್ಕೋಡಿ ಘಟಕ ವ್ಯವಸ್ಥಾಪಕರಿಗೂ ಬಸ್ಸ್ ನಿಲ್ಲುಗಡೆಯ ಬಗ್ಗೆ ತಿಳಿಸಿದ್ದು ಈ ವಾರದಲ್ಲೆ ಸಮಸ್ಯೆ ಪರಿಹಾರವಾಗಲಿದೆ ಎಂದು ಕಾಗವಾಡೆ ಘಟಕ ವ್ಯವಸ್ಥಾಪಕರು ಸಂಕೇಶ್ವರ ತಿಳಿಸಿದ್ದಾರೆ.