Vishweshwar Bhat Column: ಭೂಕಂಪ ಮತ್ತು ಅನಿಲ ಸೋರಿಕೆ
ಜಪಾನಿನಲ್ಲಿನ ಗ್ಯಾಸ್ ಕಂಪನಿಗಳು ‘ಅಟೋಮೇಟೆಡ್ ಗ್ಯಾಸ್ ಕಟ್-ಆಫ್ ಸಿಸ್ಟಮ್ʼ ಅನ್ನು ಕಟ್ಟು ನಿಟ್ಟಾಗಿ ಅನುಸರಿಸುತ್ತಿವೆ. ಈ ವ್ಯವಸ್ಥೆ ಭೂಕಂಪದ ತೀವ್ರತೆಯನ್ನು ಅಳೆಯು ತ್ತದೆ ಮತ್ತು ಗಂಭೀರ ಕಂಪನಗಳು ಸಂಭವಿಸಿದಾಗ ತಕ್ಷಣವೇ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸುತ್ತದೆ
Source : Vishwavani Daily News Paper
ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಜಪಾನಿನಲ್ಲಿ ಭೂಕಂಪ ಸಾಮಾನ್ಯ. ಇಡೀ ದೇಶದಲ್ಲಿ ದಿನದಲ್ಲಿ ಮೂರ್ನಾಲ್ಕು ಸಲವಾದರೂ ಸಣ್ಣ-ಪುಟ್ಟ ಭೂಕಂಪದ ಅನುಭವವಾಗುವುದುಂಟು. ‘ದಿನಾ ಸಾಯುವವರಿಗೆ ಅಳುವವರು ಯಾರು’ ಎಂಬಂತೆ, ಜಪಾನಿನಲ್ಲಿ ಸಂಭವಿಸುವ ಸಣ್ಣ-ಪುಟ್ಟ ಭೂಕಂಪ ಸುದ್ದಿಯಾಗುವುದಿಲ್ಲ. ಅದರ ಬಗ್ಗೆ ಯಾರೂ ಹೆಚ್ಚು ತಲೆಯನ್ನೂ ಕೆಡಿಸಿಕೊಳ್ಳುವುದಿಲ್ಲ.
ಭೂಕಂಪದೊಂದಿಗೆ ಅವರ ಜನಜೀವನ ಬೆರೆತು ಹೋಗಿದೆ. ದೊಡ್ಡ ಪ್ರಮಾಣದ ಭೂಕಂಪವಾಗಿ ನೂರಾರು ಜನ ಸತ್ತು, ಆಸ್ತಿ-ಪಾಸ್ತಿಗೆ ಅಪಾರ ನಷ್ಟವಾದರೆ ಮಾತ್ರ ಅದು ಹೊರಜಗತ್ತಿಗೆ ಗೊತ್ತಾಗು ತ್ತದೆ. ಇಲ್ಲದಿದ್ದರೆ ಅದೊಂದು ಸಾಮಾನ್ಯ ಘಟನೆ. ಜಪಾನಿಗೆ ಹೊರಟವರಿಗೆ, ‘ಅಲ್ಲಿ ದಿನವೂ ಭೂ ಕಂಪ ಸಂಭವಿಸುವುದಂತೆ, ಯಾವುದಕ್ಕೂ ಜಾಗರೂಕರಾಗಿರಿ’ ಎಂದು ಹೇಳುವುದನ್ನು ಕೇಳಿರ ಬಹುದು.
ಆದರೆ ಹೊರಜಗತ್ತಿನಲ್ಲಿರುವವರಿಗೆ ಮಾತ್ರ ಈ ಸಂಗತಿ ಸೋಜಿಗವೇ. ಪ್ರತಿದಿನ ಭೂಕಂಪವಾಗು ತ್ತಿದ್ದರೂ ಜಪಾನಿಯರು ಹೇಗೆ ಜೀವನ ಸಾಗಿಸುತ್ತಿರಬಹುದು ಎಂದು ಅಚ್ಚರಿಪಡುವುದುಂಟು. ಆ ದೇಶ ಭೂಕಂಪಗಳಿಂದ ಉಂಟಾಗುವ ಹಾನಿ ಮತ್ತು ಅಪಾಯಗಳನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿರುವುದು ಮಾತ್ರ ಅನುಕರಣೀಯ.
ಈ ಕ್ರಮಗಳಲ್ಲಿ ಭೂಕಂಪ ಸಂಭವಿಸಿದಾಗ ಹಠಾತ್ತನೆ ಗ್ಯಾಸ್ ಸರಬರಾಜು ಸ್ಥಗಿತಗೊಳಿಸುವ ವ್ಯವಸ್ಥೆಯೂ ಒಂದು. ಜಪಾನಿನಲ್ಲಿನ ಗ್ಯಾಸ್ ಕಂಪನಿಗಳು ‘ಅಟೋಮೇಟೆಡ್ ಗ್ಯಾಸ್ ಕಟ್-ಆಫ್ ಸಿಸ್ಟಮ್ʼ ಅನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿವೆ. ಈ ವ್ಯವಸ್ಥೆ ಭೂಕಂಪದ ತೀವ್ರತೆಯನ್ನು ಅಳೆಯು ತ್ತದೆ ಮತ್ತು ಗಂಭೀರ ಕಂಪನಗಳು ಸಂಭವಿಸಿದಾಗ ತಕ್ಷಣವೇ ಅನಿಲ ಪೂರೈಕೆಯನ್ನು ಸ್ಥಗಿತ ಗೊಳಿಸುತ್ತದೆ.
ಭೂಕಂಪ ಸಂಭವಿಸಿದಾಗ ಗ್ಯಾಸ್ ಪೈಪುಗಳು ಹಾನಿಗೊಳಗಾದರೆ, ಅನಿಲ ಸೋರಿಕೆ ಸಂಭವಿಸುವ ಸಾಧ್ಯತೆ ಹೆಚ್ಚು. ಅನಿಲ ಸೋರಿಕೆಯಾಗಿ ಸ್ಪೋಟ ಸಂಭವಿಸಬಹುದು. ಇದರಿಂದ ಜೀವಹಾನಿ ಮತ್ತು ಆಸ್ತಿಹಾನಿಯಾಗಬಹುದು. ಭೂಕಂಪದ ತೀವ್ರತೆಯನ್ನು ಅಳೆಯುವ ಸಾಧನಗಳಾದ ಸೀಸ್ಮೋ ಮೀಟರ್‌ಗಳು (ಖಛಿಜಿoಞಟಞಛಿಠಿಛ್ಟಿo) ‘ಅಟೋಮೇಟೆಡ್ ಗ್ಯಾಸ್ ಕಟ್-ಆಫ್ ಸಿಸ್ಟಮ್’ ಗೆ ಸಂಪರ್ಕ ಹೊಂದಿದ್ದು, ಭೂಕಂಪದ ತೀವ್ರತೆ ಭದ್ರತಾ ಮಿತಿಯನ್ನು ಮೀರಿದಾಗ ಅನಿಲ ಪೂರೈಕೆ ಯನ್ನು ತಕ್ಷಣವೇ ಸ್ಥಗಿತಗೊಳಿಸುತ್ತದೆ.
ಗ್ಯಾಸ್ ಪೈಪಿಂಗ್‌ಗಳು ಮ್ಯಾನುಯಲ್ ಶಟಾಫ್ ವಾಲ್ವ್‌ಗಳ ಜತೆಗೆ ಸ್ವಯಂಚಾಲಿತ ಕಟ್-ಆಫ್ ತಂತ್ರಜ್ಞಾನವನ್ನು ಸಹ ಹೊಂದಿವೆ. ಮನೆಯ ಅಥವಾ ಕಟ್ಟಡದ ಮಾಲೀಕರು ತೀವ್ರ ಕಂಪನದ ವೇಳೆ ತಾವೇ ಖುದ್ದಾಗಿ ಕೈ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಬಹುದು. ಜಪಾನಿನಲ್ಲಿ ಗ್ಯಾಸ್ ಪೈಪ್ ಗಳನ್ನು ಸುಧಾರಿತ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಇವು ಬೇರೆ ದೇಶಗಳಲ್ಲಿ ಇರುವು ದಕ್ಕಿಂತ ಭಿನ್ನ.
ಅವು ಭೂಕಂಪದ ಹೊಡೆತವನ್ನು ತಡೆಯುವಷ್ಟು ಬಲವಾಗಿರುತ್ತವೆ. ಆದರೂ ಭಾರಿ ಭೂಕಂಪ ಸಂಭವಿಸಿದಾಗ ಈ ಪೈಪ್ ಗಳಲ್ಲೂ ಅಪಾಯ ಉಂಟಾಗಬಹುದಾದ್ದರಿಂದ ಮುನ್ನೆಚ್ಚರಿಕೆ ಕ್ರಮ ಗಳನ್ನು ತೆಗೆದುಕೊಳ್ಳುತ್ತಾರೆ. ಪ್ರತಿ ಮನೆ ಮತ್ತು ಕಟ್ಟಡದಲ್ಲಿ ಬಳಕೆಯಾಗುವ ಗ್ಯಾಸ್ ಮೀಟರ್ ಗಳು ಸಿಸ್ಮಿಕ್ (ಭೂಕಂಪ) ಸೆನ್ಸರ್‌ಗಳನ್ನು ಹೊಂದಿರುತ್ತವೆ. ಈ ಮೀಟರ್‌ಗಳು ಭೂಕಂಪನವನ್ನು ಅತ್ಯಂತ ನಿಖರವಾಗಿ ಗುರುತಿಸುತ್ತವೆ ಮತ್ತು ತೀವ್ರತೆಯ ಆಧಾರದ ಮೇಲೆ ಗ್ಯಾಸ್ ಪೂರೈಕೆಯನ್ನು ನಿಲ್ಲಿಸುತ್ತವೆ.
ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಿದ ನಂತರ, ಅನಿಲ ಸೋರಿಕೆ ಅಥವಾ ಬೆಂಕಿ ಅಪಾಯವನ್ನು ತಡೆಯಲು ಪೈಲಟ್ ಲ್ಯಾಪ್‌ಗಳು ಸ್ವಯಂಚಾಲಿತವಾಗಿ ನಂದುತ್ತವೆ. ಭೂಕಂಪದ ನಂತರ, ಗ್ಯಾಸ್ ಮೀಟರನ್ನು ಮರುಚಾಲನೆ ಮಾಡಲು ನಿರ್ದಿಷ್ಟ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಇದು ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಜಪಾನಿನ ಅನಿಲ ಪೂರೈಕೆ ಕಂಪನಿಗಳು ತಮ್ಮ ಪೈಪ್‌ಲೈನ್ ಗಳನ್ನು ಮತ್ತು ಶಟಾ- ವಾಲ್ವ್‌ಗಳನ್ನು ನಿರಂತರವಾಗಿ ನವೀಕರಿಸುತ್ತವೆ. ನೆಲದ ಮೇಲಿನ ಪೈಪು ಗಳಿಗೆ ಹಾನಿ ಕಡಿಮೆ ಮಾಡಲು ಅವುಗಳನ್ನು ಭೂಕಂಪ ನಿರೋಧಕ ವಸ್ತುಗಳಿಂದ ನಿರ್ಮಿಸಿರು ತ್ತಾರೆ. ಜನರು ಅನಿಲ ಸೋರಿಕೆ ಕುರಿತು ಟೋಲ್‌ಫ್ರೀ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ಇದನ್ನೂ ಓದಿ: Vishweshwar Bhat Column: ಸೀತಾಪತಿ ಮನೋಭಾವದವರು