Vishweshwar Bhat Column: ವಿಚಿತ್ರ ಕಾನೂನುಗಳು

ಜಪಾನಿನಲ್ಲಿ ‘ಪಕ್ಷಿಗಳು ಮತ್ತು ಕಾಡುಪ್ರಾಣಿಗಳ ರಕ್ಷಣೆಗಾಗಿ ಕಾನೂನು’ ಎಂಬ ಕಾನೂನು ಇದೆ. ಇದ ರನ್ವಯ ಮನುಷ್ಯರು ಪಾರಿವಾಳಗಳನ್ನು ಕೊಲ್ಲುವಂತಿಲ್ಲ ಅಥವಾ ನಿರ್ನಾಮ ಮಾಡು ವಂತಿಲ್ಲ. ಈ ಕಾನೂನು ಕಾಡುಸಸ್ತನಿಗಳು ಮತ್ತು ಪಕ್ಷಿಗಳ ರಕ್ಷಣೆ ಮತ್ತು ಸಾಕಣೆಯನ್ನು ನಿಯಂತ್ರಿ ಸುತ್ತದೆ, ಜತೆಗೆ ಪರಿಸರದ ರಕ್ಷಣೆ, ಜನಸಂಖ್ಯಾ ನಿಯಂತ್ರಣ ಮತ್ತು ಬೇಟೆಗೆ ಸಂಬಂಧಿಸಿದ ವ್ಯವಸ್ಥೆಯನ್ನು ನಿಯಂತ್ರಿ ಸುತ್ತದೆ

wildlife-sanctuary

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಪ್ರತಿಯೊಂದು ದೇಶವೂ ವಿದೇಶಿಯರಿಗೆ ಅಚ್ಚರಿ ಮೂಡಿಸುವ ಹಲವಾರು ವಿಚಿತ್ರ ಕಾನೂನು ಗಳನ್ನು ಹೊಂದಿರುತ್ತವೆ. ಜಪಾನ್ ಸಹ ಇಂಥ ಕಾನೂನುಗಳಿಗೆ ಹೊರತಾಗಿಲ್ಲ. ವಿದೇಶಿಯರು ಕೂಡ ಆಶ್ಚರ್ಯಪಡಬಹುದಾದ ಕೆಲವು ವಿಚಿತ್ರ ಕಾನೂನುಗಳು ಜಪಾನಿನಲ್ಲಿವೆ.

ಜಪಾನಿನಲ್ಲಿ ‘ಪಕ್ಷಿಗಳು ಮತ್ತು ಕಾಡುಪ್ರಾಣಿಗಳ ರಕ್ಷಣೆಗಾಗಿ ಕಾನೂನು’ ಎಂಬ ಕಾನೂನು ಇದೆ. ಇದರನ್ವಯ ಮನುಷ್ಯರು ಪಾರಿವಾಳಗಳನ್ನು ಕೊಲ್ಲುವಂತಿಲ್ಲ ಅಥವಾ ನಿರ್ನಾಮ ಮಾಡು ವಂತಿಲ್ಲ. ಈ ಕಾನೂನು ಕಾಡುಸಸ್ತನಿಗಳು ಮತ್ತು ಪಕ್ಷಿಗಳ ರಕ್ಷಣೆ ಮತ್ತು ಸಾಕಣೆಯನ್ನು ನಿಯಂತ್ರಿ ಸುತ್ತದೆ, ಜತೆಗೆ ಪರಿಸರದ ರಕ್ಷಣೆ, ಜನಸಂಖ್ಯಾ ನಿಯಂತ್ರಣ ಮತ್ತು ಬೇಟೆಗೆ ಸಂಬಂಧಿಸಿದ ವ್ಯವಸ್ಥೆ ಯನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: Vishweshwar Bhat Column: ಅಮೆರಿಕ ಅಧ್ಯಕ್ಷರ ಹಾಸ್ಯ ದಿನದ ಬಗ್ಗೆ ನಿಮಗೆ ಗೊತ್ತಿದೆಯೇ ?

ಈ ಕಾನೂನಿನ ಪ್ರಕಾರ, ಜನರು ಪಕ್ಷಿಗಳು ಮತ್ತು ಪ್ರಾಣಿಗಳನ್ನು ಕೊಲ್ಲುವಂತಿಲ್ಲ ಅಥವಾ ಗಾಯ ಗೊಳಿಸುವಂತಿಲ್ಲ. ಇದು ಪಾರಿವಾಳಗಳಿಗೂ ಅನ್ವಯಿಸುತ್ತದೆ. ಏಕೆಂದರೆ ಅಲ್ಲಿ ಅವನ್ನು ಕಾಡು ಪಕ್ಷಿಗಳೆಂದು ಪರಿಗಣಿಸಲಾಗಿದೆ. ಪಾರಿವಾಳಗಳು ಮನೆ ಬಾಲ್ಕನಿ ಅಥವಾ ತೋಟಕ್ಕೆ ಬಂದರೂ, ಅವು ಗೂಡು ಕಟ್ಟಿದರೂ ಅಥವಾ ಜೋರಾಗಿ ಕೂಗಿದರೂ ಸಹ ನೀವು ಅವುಗಳಿಗೆ ತೊಂದರೆ ಕೊಡಬಾರದು.

ಪಾರಿವಾಳಗಳನ್ನು ಗಾಯಗೊಳಿಸುವುದನ್ನು ಸಹ ಅಲ್ಲಿ ನಿಷೇಧಿಸಲಾಗಿದೆ. ಅವನ್ನು ಓಡಿಸುವ ಕ್ರಿಯೆಯೂ ಸಹ ದಂಡ ತೆರುವುದಕ್ಕೆ ಕಾರಣವಾಗಬಹುದು. ಆ ದೇಶದಲ್ಲಿ ಇನ್ನೊಂದು ವಿಚಿತ್ರ ಕಾನೂನಿದೆ. ಅದರ ಪ್ರಕಾರ, ಸಾರ್ವಜನಿಕವಾಗಿ ಬೇರೆ ದೇಶದ ಧ್ವಜವನ್ನು ಸುಡುವುದು, ಕಾಲಲ್ಲಿ ತುಳಿಯುವುದು ಅಥವಾ ಹಾನಿ ಮಾಡುವುದು ಕಾನೂನುಬಾಹಿರ.

ಆದರೆ ಒಂದು ವೇಳೆ ಜಪಾನಿನ ಧ್ವಜಕ್ಕೆ ಹಾನಿ ಮಾಡುವುದು ತಪ್ಪಲ್ಲ. ವಿದೇಶಿ ರಾಷ್ಟ್ರದ ಧ್ವಜ ಅಥವಾ ಇತರ ರಾಷ್ಟ್ರೀಯ ಲಾಂಛನವನ್ನು ಹಾನಿಗೊಳಿಸುವುದು, ತೆಗೆದುಹಾಕುವುದು ಅಥವಾ ವಿರೂಪಗೊಳಿಸುವುದು ಅಪರಾಧ. ಅದು ಆ ರಾಷ್ಟ್ರಕ್ಕೆ ಅವಮಾನ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ ಎರಡು ಲಕ್ಷ ಯೆನ್ ವರೆಗೆ ದಂಡ ತೆರಬೇಕಾಗುತ್ತದೆ.

ಈ ಅಪರಾಧವು ಕಸ್ಟೋಡಿಯಲ್ ಅಪರಾಧವಾಗಿದ್ದು, ವಿದೇಶಿ ಸರಕಾರದ ಕೋರಿಕೆ ಮೇರೆಗೆ ವಿಚಾರಣೆಗೆ ಒಳಪಡಿಸಬಹುದು. ಆದರೂ, ಜಪಾನಿನ ಧ್ವಜಕ್ಕೆ ಹಾನಿ ಮಾಡುವುದು ಕಾನೂನಿಗೆ ವಿರುದ್ಧವಲ್ಲ. ಜಪಾನಿನ ಧ್ವಜಕ್ಕೆ ಹಾನಿ ಮಾಡದಂತೆ ನಿಷೇಧಿಸಿದರೆ, ಕೆಲವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಸರಕಾರದ ಬಗ್ಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದರಿಂದ ವಂಚಿತರಾಗುತ್ತಾರೆ ಎಂದು ಗಲಾಟೆ ಮಾಡುತ್ತಾರೆ.

ಪ್ರತಿಭಟನೆ ಸಂದರ್ಭದಲ್ಲಿ ಜಪಾನಿನ ಧ್ವಜವನ್ನು ಸುಡುವುದುಂಟು. ಆದರೆ ಹಾಗೆ ಮಾಡುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಹಾಗೆಯೇ ಇನ್ನೊಂದು ಕಾನೂನಿದೆ. ಜಪಾನಿನಲ್ಲಿ ಹಣಕ್ಕಾಗಿ ಭಿಕ್ಷೆ ಬೇಡುವುದು ಕಾನೂನುಬಾಹಿರ. ಒಬ್ಬ ವ್ಯಕ್ತಿಯು ಇಂಟರ್ನೆಟ್‌ನಲ್ಲಿ ಹಣ ಅಥವಾ ಸರಕುಗಳಿಗಾಗಿ ಭಿಕ್ಷೆ ಬೇಡಿದರೆ, ಅಪರಾಧ ಕೃತ್ಯ ಕಾನೂನಿನ ಅಡಿಯಲ್ಲಿ ’ಭಿಕ್ಷುಕ’ ಎಂದು ಪರಿಗಣಿತನಾಗಿ ಶಿಕ್ಷೆ ಗೊಳಗಾಗಬಹುದು.

ದುಷ್ಕೃತ್ಯ ಕಾನೂನಿನ ಪ್ರಕಾರ, ’ಭಿಕ್ಷಾಟನೆ’ ಎಂದರೆ ಅನಿರ್ದಿಷ್ಟ ವ್ಯಕ್ತಿಯ ಸಹಾನುಭೂತಿಗೆ ಮನವಿ ಮಾಡುವ ಮೂಲಕ, ಉಚಿತ ಅಥವಾ ಬಹುತೇಕ ಉಚಿತ ಪರಿಗಣನೆಯನ್ನು ನೀಡುವ ಮೂಲಕ, ಒಬ್ಬರ ಸ್ವಂತ ಅಥವಾ ಒಬ್ಬರ ಅವಲಂಬಿತ ಕುಟುಂಬ ಸದಸ್ಯರ ಜೀವನೋಪಾಯಕ್ಕೆ ಅಗತ್ಯವಾದ ಹಣ ಅಥವಾ ವಸ್ತುಗಳನ್ನು ಪದೇ ಪದೆ ಮತ್ತು ನಿರಂತರವಾಗಿ ಕೇಳುವ ಕ್ರಿಯೆ ಯಾಗಿದೆ.

2015 ರಲ್ಲಿ, ಕಗಾವಾ ಪ್ರಾಂತ್ಯದಲ್ಲಿ ಇಂಟರ್ನೆಟ್ ನಲ್ಲಿ ’ಭಿಕ್ಷಾಟನೆ ವಿತರಣೆ’ಯಲ್ಲಿ ತೊಡಗಿದ್ದ ನಿರುದ್ಯೋಗಿ ವ್ಯಕ್ತಿಯೊಬ್ಬನ ಮೇಲೆ ಕಾನೂನು ಕ್ರಮ ಜರುಗಿಸಲಾಯಿತು. ‘ಕಳೆದ ಇಪ್ಪತ್ತು ವರ್ಷ ಗಳಿಂದ ಜಪಾನಿನಲ್ಲಿದ್ದರೂ ನನಗೆ ಒಬ್ಬನೇ ಒಬ್ಬ ಭಿಕ್ಷುಕ ಕಣ್ಣಿಗೆ ಬಿದ್ದಿಲ್ಲ’ ಎಂದು ನನ್ನ ಸ್ನೇಹಿ ತರೂ ಸಹ ಹೇಳಿದ್ದು ನೆನಪಾಗುತ್ತದೆ. ಜಪಾನಿನಲ್ಲಿ ಸಾರ್ವಜನಿಕವಾಗಿ ತೊಡೆ, ಪೃಷ್ಠವನ್ನು ಪ್ರದ ರ್ಶಿಸುವುದು ಅಪರಾಧ. ಯಾರಾದರೂ ತಮ್ಮ ದೇಹದ ಭಾಗಗಳನ್ನು ಅಸಹ್ಯಕರ ರೀತಿಯಲ್ಲಿ ಪ್ರದರ್ಶಿಸುವಂತಿಲ್ಲ.

ಒಬ್ಬ ವ್ಯಕ್ತಿಯು ತನ್ನ ಪೃಷ್ಠ ಅಥವಾ ತೊಡೆಗಳನ್ನು ಸುತ್ತಮುತ್ತಲಿನವರಿಗೆ ಅಸಹ್ಯಕರ ರೀತಿಯಲ್ಲಿ ಪ್ರದರ್ಶಿಸಿದರೆ, ಅವರ ಮೇಲೆ ಕಾನೂನಿನ ಉಲ್ಲಂಘನೆಯ ಆರೋಪ ಹೊರಿಸಬಹುದು. ಆದರೂ ದುರುದ್ದೇಶದ ಮಟ್ಟ ಮತ್ತು ಸಂದರ್ಭಗಳನ್ನು ಅವಲಂಬಿಸಿ ತೀರ್ಪು ಬದಲಾಗುತ್ತದೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?