Physical abuse: ಮಹಿಳೆ ಮೇಲೆ ಅತ್ಯಾಚಾರ ಆರೋಪ; ಡಿಜೆ ಹಳ್ಳಿ ಇನ್ಸ್‌ಪೆಕ್ಟರ್ ಸುನೀಲ್ ಅಮಾನತು
Bengaluru News: ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ಇನ್ಸ್‌ಪೆಕ್ಟರ್ ಸುನೀಲ್ ವಿರುದ್ಧ ಕೆಲವು ದಿನಗಳ ಹಿಂದೆ ಮುಸ್ಲಿಂ ಮಹಿಳೆಯೊಬ್ಬರು ಡಿಜಿ ಕಚೇರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುನೀಲ್ ಅವರನ್ನು ಅಮಾನತು ಮಾಡಲಾಗಿದೆ.
-
Prabhakara R
Oct 27, 2025 2:00 PM
ಬೆಂಗಳೂರು: ಅತ್ಯಾಚಾರ ಆರೋಪ (Physical abuse) ಕೇಳಿಬಂದ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುನೀಲ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಆದೇಶ ಹೊರಡಿಸಿದ್ದಾರೆ. ಇನ್ಸ್‌ಪೆಕ್ಟರ್ ಹಾಗೂ ಎಎಸ್‌ಐ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಹೇಳಿಕೆ ಮಾಹಿತಿ ನೀಡಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ಇನ್ಸ್‌ಪೆಕ್ಟರ್ ಸುನೀಲ್ ವಿರುದ್ಧ ಕೆಲವು ದಿನಗಳ ಹಿಂದೆ ಮುಸ್ಲಿಂ ಮಹಿಳೆಯೊಬ್ಬರು ಡಿಜಿ ಕಚೇರಿಗೆ ದೂರು ನೀಡಿದ್ದರು. ಕಳೆದ ಒಂದು ವರ್ಷದಿಂದ ಮನೆ ಹಾಗೂ ಹೋಟೆಲ್‌ಗೆ ಕರೆಸಿಕೊಂಡು ಇನ್ಸ್‌ಪೆಕ್ಟರ್ ಸುನೀಲ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಬ್ಯೂಟಿ ಪಾರ್ಲರ್ ತೆರೆಸಿಕೊಡುವುದಾಗಿ, ಬ್ಯುಸಿನೆಸ್ ಮಾಡಲು ಹಣ ಕೊಡುತ್ತೇನೆ ಎಂದು ಹೇಳಿ ಹಲವಾರು ಬಾರಿ ಅತ್ಯಾಚಾರ ಎಸೆಗಿದ್ದಾರೆ. ಖಾಸಗಿ ಫೋಟೊ ಮತ್ತು ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ ರು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ಇನ್ಸ್‌ಪೆಕ್ಟರ್ ಸುನೀಲ್ ಹಾಗೂ ಎಎಸ್‌ಐನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಪತಿಯ ಚಿತ್ರಹಿಂಸೆಗೆ ಬೇಸತ್ತು 3ನೇ ಮಹಡಿಯಿಂದ ಜಿಗಿದ ಮಹಿಳೆ
ಬೆಂಗಳೂರು: ಪತಿಯ (Husband) ಕಿರುಕುಳಕ್ಕೆ (Harassment) ಬೇಸತ್ತು ಮಹಿಳೆಯೊಬ್ಬಳು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ (Self harming) ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಪತಿಯ ಹಿಂಸೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಆಕೆಯ ಬೆನ್ನುಮೂಳೆ ಹಾಗೂ ಎರಡು ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿವೆ.
ಮಹಿಳೆ ಸದ್ಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಪ್ರಿಯಾ ಹಾಗೂ ನಿಕ್ಸನ್ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ 7 ವರ್ಷ ಆದರೂ ಮಕ್ಕಳಾಗಿಲ್ಲ ಎಂದು ಪ್ರತಿ ನಿತ್ಯ ಪತ್ನಿಗೆ ನಿಕ್ಸನ್ ಕಿರುಕುಳ ನೀಡುತಿದ್ದ. ಹೀಗಾಗಿ ಸೂಕ್ತ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ದಂಪತಿಗೆ ಹೆಣ್ಣು ಮಗು ಅಗಿತ್ತು.
ಇದನ್ನೂ ಓದಿ: Shoot out: ನೆಲಮಂಗಲದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ
ಮಗುವಾದ ಬಳಿಕ ಸಹ ಪ್ರತಿ ದಿನ ಕುಡಿದು ಬಂದು ಎಲ್ಲಿಯಾದರೂ ಹೋಗಿ ಸಾಯಿ ಎಂದು ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದಕ್ಕೆ ಬೇಸತ್ತು ತಾನು ವಾಸವಿದ್ದ ಮನೆಯ ಮೂರನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪತಿಯ ವಿರುದ್ಧ ಬಾಣವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿಯನ್ನು ಕೊಂದು ಹಾಸಿಗೆ ಕೆಳಗೆ ಹೂತಿಟ್ಟ ಪತಿ
ಪತ್ನಿಯನ್ನು ಕೊಂದು ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಹರಿಯಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹರಿಕಿಶನ್ ಎಂಬಾತ ಪತ್ನಿ ಪುಲಾ ದೇವಿಯನ್ನು ಕೊಂದು ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟಿದ್ದ. ಸುಮಾರು 12 ದಿನಗಳ ಕಾಲ ಅದೇ ಹಾಸಿಗೆಯ ಮೇಲೆ ಮಲಗಿದ್ದನು. ಪುಲಾ ದೇವಿ ಸಹೋದರ ನಾಪತ್ತೆ ದೂರುದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಅನೈತಿಕ ಸಂಬಂಧದ ಆರೋಪದಲ್ಲಿ ಹರಿ ಕಿಶನ್ ತನ್ನ ಪತ್ನಿಯನ್ನು ಕೊಂದು ಹಾಕಿದ್ದಾನೆ. ಹರಿಯಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಹರಿಕಿಶನ್ ಮನೆಗೆ ಮರಳಿದ ಬಳಿಕ ಅಕ್ಟೋಬರ್ 6 ರಿಂದ ಆತನ ಪತ್ನಿ ನಾಪತ್ತೆಯಾಗಿದ್ದಳು. ಈ ಕುರಿತು ಅಕ್ಟೋಬರ್ 13ರಂದು ಆಕೆಯ ಸಹೋದರ ನಾಪತ್ತೆ ದೂರು ದಾಖಲಿಸಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಹರಿಕಿಶನ್ ನನ್ನು ಬಂಧಿಸಲಾಗಿದೆ.