Vishweshwar Bhat Column: ಒಂದು ನಾಯಿಯ ಕಥೆಯಿದು !

ಪ್ಲಾರೆಗೆ ಬಂದವರು ಬೋರ್ಗೋ ಸ್ಯಾನ್ ಲೊರೆಂಝೋಕ್ಕೆ ಒಂದು ನಾಯಿಯ ಸ್ಮಾರಕ ನೋಡಲು ಆಗಮಿಸುತ್ತಾರೆ ಅಂದರೆ ಆಶ್ಚರ್ಯವಾಗಬಹುದು. ಆ ಊರಿನಲ್ಲಿ ಫಿಡೊ ಎಂಬ ಇಟಾಲಿಯನ್ ನಾಯಿಯ ಸ್ಮಾರಕವಿದೆ. ಆ ನಾಯಿ 17 ವರ್ಷಗಳ ಕಾಲ ಬದುಕಿತ್ತು. ಫಿಡೊ ತನ್ನ ಯಜಮಾನನಿಗೆ ಅಚಲ ನಿಷ್ಠೆಯನ್ನು ಪ್ರದರ್ಶಿಸಿದ್ದರ ದ್ಯೋತಕವಾಗಿ ಆ ಸ್ಮಾರಕವನ್ನು ಸ್ಥಾಪಿಸಲಾಗಿದೆ

fido Borgo_san_lorenzo,_monumento_al_cane_
Profile Ashok Nayak Jan 27, 2025 6:52 AM

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಇಟಲಿಯ ಪ್ಲಾರೆ ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿ ಬೋರ್ಗೋ ಸ್ಯಾನ್ ಲೊರೆಂಝೋ ಎಂಬ ಸಣ್ಣ ಊರಿದೆ. ಆ ಊರಿನ ಜನಸಂಖ್ಯೆ 15000 ಇದ್ದಿರಬಹುದು. ಈ ಊರು ತನ್ನ ಭೌಗೋಳಿಕ ಸೌಂದರ್ಯದಿಂದ ಪ್ರಸಿದ್ಧವಾಗಿದೆ.

ಪ್ಲಾರೆಗೆ ಬಂದವರು ಬೋರ್ಗೋ ಸ್ಯಾನ್ ಲೊರೆಂಝೋಕ್ಕೆ ಒಂದು ನಾಯಿಯ ಸ್ಮಾರಕ ನೋಡಲು ಆಗಮಿಸುತ್ತಾರೆ ಅಂದರೆ ಆಶ್ಚರ್ಯವಾಗಬಹುದು. ಆ ಊರಿನಲ್ಲಿ ಫಿಡೊ ಎಂಬ ಇಟಾಲಿಯನ್ ನಾಯಿಯ ಸ್ಮಾರಕವಿದೆ. ಆ ನಾಯಿ 17 ವರ್ಷಗಳ ಕಾಲ ಬದುಕಿತ್ತು. ಫಿಡೊ ತನ್ನ ಯಜಮಾನನಿಗೆ ಅಚಲ ನಿಷ್ಠೆಯನ್ನು ಪ್ರದರ್ಶಿಸಿದ್ದರ ದ್ಯೋತಕವಾಗಿ ಆ ಸ್ಮಾರಕವನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: Vishweshwar Bhat Column: ಭೂಕಂಪದೊಂದಿಗಿನ ಬದುಕು

ಆ ನಾಯಿಯ ಕುರಿತು ಅನೇಕ ಇಟಾಲಿಯನ್ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳು ಹಾಗೂ ಪತ್ರಿಕೆಗಳಲ್ಲಿ ಸಾವಿರಾರು ಲೇಖನಗಳು ಪ್ರಕಟವಾಗಿರಬಹುದು. 1941ರಲ್ಲಿ ಫಿಡೊ, ಬೊರ್ಗೊ ಸ್ಯಾನ್ ಲೊರೆಂಝೋ ಪುರಸಭೆಯ ಸಣ್ಣ ಪಟ್ಟಣದಲ್ಲಿ ಒಂದು ಬೀದಿ ನಾಯಿಯಾಗಿತ್ತು. ಅದೇ ವರ್ಷ ಒಂದು ರಾತ್ರಿ, ಕಾರ್ಲೋ ಸೊರಿಯಾನಿ ಎಂಬ ಇಟ್ಟಿಗೆಗೂಡು ಕೆಲಸಗಾರ, ಬಸ್ ನಿಲ್ದಾಣದಿಂದ ಮನೆಗೆ ಹೋಗುತ್ತಿದ್ದಾಗ, ರಸ್ತೆ ಬದಿಯ ಕಂದಕದಲ್ಲಿ ಗಾಯಗೊಂಡು ಬಿದ್ದಿದ್ದ ನಾಯಿಯನ್ನು ನೋಡಿದ.

ನಾಯಿ ಯಾರದ್ದು ಎಂದು ತಿಳಿಯದೆ, ಸೊರಿಯಾನಿ ಮನೆಗೆ ಕರೆದೊಯ್ದು ಶುಶ್ರೂಷೆ ಮಾಡಿ ಪ್ರೀತಿ‌ ಯಿಂದ ಸಾಕಿದ. ಸೊರಿಯಾನಿ ಮತ್ತು ಅವನ ಪತ್ನಿ ನಾಯಿಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿ ಸಿದರು. ಅದಕ್ಕೆ ಫಿಡೋ (ಲ್ಯಾಟಿನ್ ಭಾಷೆಯಲ್ಲಿ ಫಿಡೊ ಅಂದ್ರೆ ನಿಷ್ಠಾವಂತ ಎಂದರ್ಥ) ಎಂದು ನಾಮಕರಣ ಮಾಡಿದರು. ಫಿಡೋ ಚೇತರಿಸಿಕೊಂಡ ನಂತರ, ಸೊರಿಯಾನಿ ಪ್ರತಿದಿನ ಕೆಲಸಕ್ಕೆ ಹೋಗುವಾಗ ಆತನನ್ನು ಹಿಂಬಾಲಿಸಲಾರಂಭಿಸಿತು.

ಸಂಜೆ ಬಸ್ಸಿನಿಂದಿಳಿದು ಹಿಂದಿರುಗಿದಾಗ, ಫಿಡೋ ಸೊರಿಯಾನಿಯನ್ನು ಸ್ವಾಗತಿಸಿ ಮನೆಗೆ ಹಿಂಬಾ ಲಿಸುತ್ತಿತ್ತು. ಇದು 2 ವರ್ಷಗಳವರೆಗೆ ನಡೆಯಿತು. 1943ರಲ್ಲಿ ಬೋರ್ಗೋ ಸ್ಯಾನ್ ಲೊರೆಂ ಝೋ ಎರಡನೇ ಮಹಾಯುದ್ಧದ ಸಮಯದಲ್ಲಿ ಮಿತ್ರರಾಷ್ಟ್ರಗಳ ಬಾಂಬ್ ದಾಳಿಗೆ ತುತ್ತಾಯಿತು. ಆ ಸಮಯದಲ್ಲಿ ಸೊರಿಯಾನಿ ಸತ್ತುಹೋದ. ಅದೇ ದಿನ ಸಂಜೆ, ಫಿಡೋ ಬಸ್ ನಿಲ್ದಾಣದಲ್ಲಿ ಎಂದಿ ನಂತೆ ಕಾಣಿಸಿಕೊಂಡಿತು. ಆದರೆ ಸೊರಿಯಾನಿ ಇಳಿಯುವುದನ್ನು ನೋಡಲಿಲ್ಲ.

ಫಿಡೋ ನಂತರ ಮನೆಗೆ ಹಿಂದಿರುಗಿತು, ಆದರೆ 14 ವರ್ಷಗಳ ಕಾಲ (5000ಕ್ಕಿಂತ ಹೆಚ್ಚು ಬಾರಿ), ಸಾಯುವ ದಿನದವರೆಗೆ, ಪ್ರತಿದಿನ ಸ್ಟಾಪ್‌ಗೆ ಹೋಗುತ್ತಿತ್ತು. ತನ್ನ ಯಜಮಾನ ಬರಬಹುದು ಎಂದು ನಿತ್ಯವೂ ಕನವರಿಸುತ್ತಿತ್ತು. ಫಿಡೋ ಸ್ವಾಮಿನಿಷ್ಠೆಯ ಪರಾಕಾಷ್ಠೆಯ ಕಥೆ ಕೇವಲ ಆ ಊರಿಗೆ ಮಾತ್ರವಲ್ಲ, ಇಟಲಿಯ ಆಚೆಗೂ ಹರಡಿತು.

ಸಾಯಂಕಾಲವಾಗುತ್ತಿದ್ದಂತೆ ಯಜಮಾನನ ದಾರಿ ನೋಡಲು ಬಸ್ ನಿಲ್ದಾಣಕ್ಕೆ ಬರುವುದನ್ನು ನೋಡಲು ಸಾವಿರಾರು ಜನ ಸೇರುತ್ತಿದ್ದರು. ಅದರ ಜೀವಿತಾವಧಿಯಲ್ಲಿ ಮಾಧ್ಯಮದ ಆಸಕ್ತಿಯೂ ಬೆಳೆಯಿತು. ಇಟಾಲಿಯನ್ ನಿಯತಕಾಲಿಕೆಗಳು ಫಿಡೊ ಕಥೆಯನ್ನು ಪ್ರಕಟಿಸಿದವು. ಇದು ಹಲ ವಾರು ನ್ಯೂಸ್ ರೀಲ್‌ಗಳಲ್ಲಿ ಕಾಣಿಸಿಕೊಂಡಿತು. 1958ರಲ್ಲಿ ಫಿಡೊ ತೀರಿಕೊಂಡಾಗ, ಲೊರೆಂಝೋ ಊರಿನ ಜನ ಕಂಬನಿ ಮಿಡಿದರು.

ಸ್ವತಃ ಆ ಊರಿನ ಮೇಯರ್ ಶೋಕಸಭೆಯನ್ನು ಏರ್ಪಡಿಸಿದ. ಫಿಡೊ ನಿಧನ ವಾರ್ತೆ ಇಟಲಿಯ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು. ‘ಟೈಮ್’ ಮ್ಯಾಗಜಿನ್ ಕೂಡ ಲೇಖನ ಪ್ರಕಟಿ ಸಿತು. ಫಿಡೊ ಸಾಯುವುದಕ್ಕಿಂತ ಒಂದು ವರ್ಷ ಮುಂಚೆಯೇ, ಆ ಊರಿನ ಜನ ಅದರ ನೆನಪಿ‌ ಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿದ್ದರು. ಫಿಡೊ ತಾನು ಬದುಕಿರುವಾಗಲೇ, ತನ್ನ ಸ್ಮಾರಕವನ್ನು ನೋಡಲಿ ಎಂಬುದು ಅವರ ಆಶಯವಾಗಿತ್ತು. ಕವಿ ಡಾಂಟೆ ವೃತ್ತದ ಸನಿಹ ಊರಿನ ಕೇಂದ್ರ ಭಾಗದಲ್ಲಿ ಫಿಡೊಗೆ ಸ್ಮಾರಕವನ್ನು ನಿರ್ಮಿಸಲಾಯಿತು.

ನಾಯಿಯ ಪ್ರತಿಮೆಯ ಕೆಳಗೆ To Fido, example of loyalty ಎಂದು ಬರೆಯಲಾಗಿದೆ. ಸೊರಿಯಾನಿ ಪತ್ನಿ ಮತ್ತು ಫಿಡೊ ಸಮ್ಮುಖದಲ್ಲಿಯೇ ಆ ಪ್ರತಿಮೆಯನ್ನು ಮೇಯರ್ ಉದ್ಘಾಟಿಸಿ ದ್ದು ವಿಶೇಷ. ಫಿಡೊ ಇದನ್ನೆ ಕಣ್ತುಂಬಿಕೊಳ್ಳಲಿ ಎಂದು ಊರಿನವರೆಲ್ಲ ಬಯಸಿದ್ದರು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?