Vishweshwar Bhat Column: ಭೂಕಂಪದೊಂದಿಗಿನ ಬದುಕು
ಪ್ರತಿ ದಿನ ಆ ದೇಶದಲ್ಲಿ ಕನಿಷ್ಠ ಐದಾರು ಕಡೆಗಳಲ್ಲಿ ಲಘು ಭೂಕಂಪವಾಗುತ್ತದೆ ಮತ್ತು ಇನ್ನು ಕೆಲವು ಸಲ ಮಧ್ಯಮ ಪ್ರಮಾಣದ ಭೂಕಂಪವಾಗುತ್ತದೆ, ಅಂದರೆ ಭೂಕಂಪದ ಭೀತಿ ಸದಾ ಅವರನ್ನು ಕಾಡು ತ್ತಲೇ ಇರುತ್ತದೆ. ಇಂಥ ಆತಂಕದ ಮತ್ತು ಅನಿಶ್ಚಿತ ಸನ್ನಿವೇಶದಲ್ಲಿ ಅವರು ನೆಮ್ಮದಿಯ ಬದುಕನ್ನು ಸಾಗಿಸುವುದಾದರೂ ಹೇಗೆ? ಈ ಪ್ರಶ್ನೆ ನನ್ನದೊಂದೇ ಅಲ್ಲ, ಅದು ಎಲ್ಲರಿಗೂ ಕಾಡುವಂಥದ್ದು

ಜಪಾನಿಯರು ನಿತ್ಯವೂ ಸಂಭವಿಸುವ ಭೂಕಂಪದ ನಡುವೆಯೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆೆ

ಜಪಾನಿಗೆ ಹೋಗುವುದಕ್ಕಿಂತ ಮುಂಚೆ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಬಲವಾಗಿ ಕಾಡುತ್ತಿತ್ತು. ಆ ದೇಶವು ಪ್ಯಾಸಿಫಿಕ್ ರಿಂಗ್ ಆಫ್ ಫಾರ್ ಪ್ರದೇಶದ ಭಾಗವಾಗಿದ್ದು, ಈ ಪ್ರದೇಶದಲ್ಲಿ ಭೂಕಂಪನ ಗಳು ಸಾಮಾನ್ಯವಾಗಿರುವುದರಿಂದ ಹಾಗೂ ಭೂಕಂಪನದ ಭೀತಿಯು ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ, ಅದರ ಜತೆ ಹೇಗೆ ಜೀವನ ಸಾಗಿಸಬಹುದು ಎಂಬ ಪ್ರಶ್ನೆ ಇಣುಕುತ್ತಲೇ ಇತ್ತು.
ಪ್ರತಿ ದಿನ ಆ ದೇಶದಲ್ಲಿ ಕನಿಷ್ಠ ಐದಾರು ಕಡೆಗಳಲ್ಲಿ ಲಘು ಭೂಕಂಪವಾಗುತ್ತದೆ ಮತ್ತು ಇನ್ನು ಕೆಲವು ಸಲ ಮಧ್ಯಮ ಪ್ರಮಾಣದ ಭೂಕಂಪವಾಗುತ್ತದೆ, ಅಂದರೆ ಭೂಕಂಪದ ಭೀತಿ ಸದಾ ಅವ ರನ್ನು ಕಾಡುತ್ತಲೇ ಇರುತ್ತದೆ. ಇಂಥ ಆತಂಕದ ಮತ್ತು ಅನಿಶ್ಚಿತ ಸನ್ನಿವೇಶದಲ್ಲಿ ಅವರು ನೆಮ್ಮದಿ ಯ ಬದುಕನ್ನು ಸಾಗಿಸುವುದಾದರೂ ಹೇಗೆ? ಈ ಪ್ರಶ್ನೆ ನನ್ನದೊಂದೇ ಅಲ್ಲ, ಅದು ಎಲ್ಲರಿಗೂ ಕಾಡುವಂಥದ್ದು.
ಇದನ್ನೂ ಓದಿ: Vishweshwar Bhat Column: ಪ್ರವಾಸಿ ತಾಣಗಳಾದ ಮ್ಯಾನ್ ಹೋಲ್ !
ಆದರೆ ಜಪಾನಿಯರು ನಿತ್ಯವೂ ಸಂಭವಿಸುವ ಭೂಕಂಪದ ನಡುವೆಯೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆೆ. ಅಂದರೆ ಅಕ್ಷರಶಃ ಭೂಕಂಪದೊಂದಿಗೆ ಸಖ್ಯ ಬೆಳೆಸಿ ಯೇ ಜೀವನ ಸಾಗಿಸುತ್ತಿದ್ದಾರೆ. ಸಮಸ್ಯೆಯೊಂದಿಗೆ ಜೀವನ ಸಾಗಿಸುವುದು ಅನಿವಾರ್ಯ ವಾದಾಗ, ಅದರೊಂದಿಗೆ ಸಖ್ಯ ಬೆಳೆಸುವುದು ಅನಿವಾರ್ಯ.
ಕಟ್ಟಡವನ್ನು ಕಟ್ಟುವಾಗ ಭೂಕಂಪದ ತೀವ್ರ ಹೊಡೆತಗಳನ್ನು ತಡೆದುಕೊಳ್ಳುವ ವಿಧಾನವನ್ನು ಅಳವಡಿಸಿಕೊಂಡಿರುವುದರಿಂದ, ಟೋಕಿಯೋ ನಗರದಲ್ಲಿ ಭೂಕಂಪ ಸಂಭವಿಸಿದಾಗ ಬಹು ಮಹಡಿ ಕಟ್ಟಡಗಳು, ಗಾಳಿಗೆ ಹುಯ್ದಾಡುವ ಮರಗಳಂತೆ ಅತ್ತಿತ್ತ ತೇಲಾಡಿ ಸಹಜ ಸ್ಥಿತಿಗೆ ಬರುತ್ತವೆ.
ಭೂಕಂಪದ ತೀವ್ರತೆ ಅಳೆಯುವ ರಿಕ್ಟರ್ ಮಾಪಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ಭೂಮಿ ಅದುರಿ ದಾಗಲೂ, ಅದನ್ನು ತಡೆದುಕೊಳ್ಳುವ ವಿಧಾನದಿಂದಾಗಿ ಹೆಚ್ಚಿನ ಅವಘಡಗಳೇನೂ ಆಗುವುದಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಆ ದೇಶ ತನ್ನ ಜನರನ್ನು ಸದಾ ಮಾನಸಿಕವಾಗಿ ಭೂಕಂಪ ವನ್ನು ಧೈರ್ಯದಿಂದ ಎದುರಿಸಲು ಸನ್ನದ್ಧಗೊಳಿಸಿರುವುದು ವಿಶೇಷ. ದಿನದ ಯಾವ ಕ್ಷಣದ ಲ್ಲಾದರೂ ಭೂಕಂಪ ಸಂಭವಿಸಬಹುದು, ಹಾಗೆ ಸಂಭವಿಸಿದಾಗ ಯಾವ ರೀತಿಯಲ್ಲಿ ಸಜ್ಜಾಗಿರಬೇಕು ಎಂಬು ದು ಜಪಾನಿಯರಿಗೆ ಚೆನ್ನಾಗಿ ರಕ್ತಗತವಾಗಿದೆ.
ಅಲ್ಲಿನ ಜನ ಸದಾ ತುರ್ತುಸ್ಥಿತಿಗೆ ತಯಾರಾಗುವ ಮನಸ್ಥಿತಿಯನ್ನು ರೂಢಿಸಿಕೊಂಡಿದ್ದಾರೆ. ಭೂ ಕಂಪನದ ಸಮಯದಲ್ಲಿ ತಕ್ಷಣ ಏನು ಮಾಡಬೇಕೆಂಬುದು ಅವರಿಗೆ ಗೊತ್ತಿದೆ. ಇದನ್ನು ಶಾಲೆ ಗಳಲ್ಲಿಯೇ ಅವರಿಗೆ ಕಲಿಸಿರುತ್ತಾರೆ. ಕಚೇರಿ ಮತ್ತು ಮನೆಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಿರುತ್ತಾರೆ.
ಭೂಕಂಪದ ಬಗ್ಗೆ ಎಚ್ಚರಿಕೆಯ ಆಪ್‌ಗಳ ಮೂಲಕ ಮೊದಲ ತುರ್ತು ಎಚ್ಚರಿಕೆ ಸಿಗುತ್ತಿದ್ದಂತೆ ಯಾರೂ ಕಳವಳಕ್ಕೊಳಗಾಗುವುದಿಲ್ಲ. ಸಾಮಾನ್ಯವಾಗಿ ಅವರು ‘ಡಕ್, ಕವರ್ ಮತ್ತು ಹೋಲ್ಡ್’ ತಂತ್ರವನ್ನು ಅನುಸರಿಸುತ್ತಾರೆ. ಈ ತಂತ್ರವನ್ನು ಮಕ್ಕಳು, ಹಿರಿಯರು ಮತ್ತು ಎಲ್ಲ ವಯಸ್ಸಿನ ವರಿಗೂ ಕಲಿಸಿರುತ್ತಾರೆ. ಡಕ್ ಅಂದ್ರೆ ತಕ್ಷಣ ನೆಲದ ಮೇಲೆ ಕುಳಿತುಕೊಳ್ಳುವುದು, ಕವರ್ ಅಂದ್ರೆ ಟೇಬಲ್ ಅಥವಾ ಗಟ್ಟಿಯಾದ ವಸ್ತುಗಳ ಕೆಳಗೆ ಸೇರಿಕೊಳ್ಳುವುದು ಮತ್ತು ಹೋಲ್ಡ್ ಅಂದ್ರೆ ಟೇಬಲ್ ಅಥವಾ ಚೇರ್‌ಗಳನ್ನು ಬಲವಾಗಿ ಹಿಡಿದುಕೊಳ್ಳುವುದು.
ಆಗಾಗ ಸುರಕ್ಷತಾ ನಿರ್ಗಮನ ಅಭ್ಯಾಸ ( Evacuation Drill) ಗಳನ್ನೂ ಮಾಡುವ ಮೂಲಕ ಜನ ರನ್ನು ಅಣಿಗೊಳಿಸುತ್ತಾರೆ. ಭೂಕಂಪ ಸಂಭವಿಸಿದಾಗ ಸುರಕ್ಷತಾ ಸ್ಥಳಗಳಿಗೆ ತೆರಳುವುದು ಸಹ
ಅಭ್ಯಾಸದ ಭಾಗವಾಗಿದೆ. ಭೂಕಂಪದ ಅಪಾಯದಿಂದ ಪಾರಾಗಲು ತುರ್ತು ಕಿಟ್‌ಗಳು ಬಹಳ ಮುಖ್ಯ. ಈ ಕಿಟ್‌ಗಳನ್ನು ಬಳಸುವ ಕುರಿತು ಜನರಿಗೆ ತಿಳಿಸಲಾಗುತ್ತದೆ. ಟಾರ್ಚ್‌ಲೈಟ್, ಪಾನೀಯ, ಪ್ರಥಮ ಚಿಕಿತ್ಸೆ ಸಾಮಾನು, ನಗದು ಮತ್ತು ಹೊಗೆಯನ್ನು ತಡೆಯುವ ಮಾಗಳು ಆ ಕಿಟ್ ನಲ್ಲಿರು ತ್ತವೆ.
ಮಕ್ಕಳಿಗೆ ಭೂಕಂಪದ ಸಮಯದಲ್ಲಿ ಶಾಲೆಯಲ್ಲಿ ಎಲ್ಲಿ ಅಡಗಿಕೊಳ್ಳಬೇಕು ಎಂಬುದನ್ನು ಕಲಿಸ ಲಾಗುತ್ತದೆ. ಶಾಲಾ ಸಿಬ್ಬಂದಿಗೆ ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ವಿಧಾನವನ್ನು ಕಲಿಸಲಾಗುತ್ತದೆ. ಹಾಗೆ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ತುರ್ತು ನಿರ್ಗಮನ ಮಾರ್ಗಗಳ ಬಗ್ಗೆ ತಿಳಿಸಲು ಅಭ್ಯಾಸ (ಡ್ರಿಲ)ಗಳನ್ನು ನಡೆಸಲಾಗುತ್ತದೆ. ಕಂಪನಿಯ ಭದ್ರತಾ ಅಧಿಕಾರಿಗಳು ತುರ್ತು ಪರಿಸ್ಥಿತಿಯಲ್ಲಿ ಬಲವಾದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಮೇಲೆ ಒತ್ತು ನೀಡುತ್ತಾರೆ.
ಮನೆಯ ಸದಸ್ಯರು ತಕ್ಷಣ ಯಾವ ಕ್ರಮಕೈಗೊಳ್ಳಬೇಕು, ಸುರಕ್ಷತಾ ಸ್ಥಳಗಳಿಗೆ ಹೇಗೆ ಹೋಗಬೇಕು, ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಕಾಲಕಾಲಕ್ಕೆ ಜಾಗೃತಿ ಮೂಡಿಸ ಲಾಗುತ್ತದೆ. ಪ್ರತಿ ವರ್ಷದ ಸೆಪ್ಟೆಂಬರ್ 1ರಂದು ದುರಂತ ತಡೆ ದಿನ (Disaster Prevention Day ) ವನ್ನಾಗಿ ಆಚರಿಸಲಾಗುತ್ತದೆ.
ಇದು 1923ರ ಗ್ರೇಟ್ ಕ್ಯಾಂಟೋ ಭೂಕಂಪವನ್ನು ನೆನಪಿಸಲು ಆರಂಭಿಸಲಾದ ಅಭ್ಯಾಸವಾಗಿದೆ. ಭೂಕಂಪ ಸಂಭವಿಸಿದಾಗ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹೇಗೆ ವರ್ತಿಸಬೇಕು, ಯಾವ ಕ್ರಮ ಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.