ಒಂದೊಳ್ಳೆ ಮಾತು
ಒಮ್ಮೆ ಒಬ್ಬ ಮಗಳು ತನ್ನ ತಂದೆಯ ಬಳಿ ಬಂದು, “ಕಾಲೇಜಿನಲ್ಲಿ ಸಹಪಾಠಿಗಳು ನನ್ನನ್ನು ಬಹಳ ಕೀಳಾಗಿ ನೋಡುತ್ತಿzರೆ. ಕಾರಣವೇ ಇಲ್ಲದೆ ನನ್ನನ್ನು ಹಂಗಿಸುತ್ತಾರೆ, ಯಾರೂ ನನ್ನ ಸ್ನೇಹಿತರಾಗುತ್ತಿಲ್ಲ. ಜೀವನ ತುಂಬ ಕಷ್ಟವಾಗಿದೆ, ಯಾವ ದಾರಿಯೂ ಕಾಣುತ್ತಿಲ್ಲ.
ಒಂದು ಸಮಸ್ಯೆ ಮುಗಿದಂತೆಯೇ ಮತ್ತೊಂದು ಎದುರಾಗುತ್ತಿದೆ. ಹೋರಾಟ, ಒತ್ತಡ, ಬೇಸರ ಇವೆಲ್ಲವುಗಳಿಂದ ಕಾಲೇಜು ಬಿಟ್ಟುಬಿಡಬೇಕು ಎಂದುಕೊಂಡಿದ್ದೇನೆ. ಇನ್ನು ಮುಂದೆ ನಾನು ಕಾಲೇಜಿಗೆ ಹೋಗುವುದಿಲ್ಲ" ಎಂದಳು. ಆ ತಂದೆಯು ಹೋಟೆಲ್‌ನಲ್ಲಿ ಅಡುಗೆ ಮಾಡುವವ. ಆಕೆ ಹೇಳಿದುದನ್ನು ಶಾಂತವಾಗಿ ಕೇಳಿ, ಅವಳನ್ನು ಅಡುಗೆಮನೆಗೆ ಕರೆ ದೊಯ್ದ. ಮೂರು ಪಾತ್ರೆಗಳನ್ನು ನೀರಿನಿಂದ ತುಂಬಿ ಸ್ಟವ್‌ನ ಮೇಲೆ ಇರಿಸಿದ.
ನೀರು ಕುದಿಯಲಾರಂಭಿಸಿದಾಗ, ಮೊದಲ ಪಾತ್ರೆಗೆ ಆಲೂಗಡ್ಡೆ, ಎರಡನೇ ಪಾತ್ರೆಗೆ ಮೊಟ್ಟೆ, ಮೂರನೇ ಪಾತ್ರೆಗೆ ಕಾಫಿಬೀಜ ಹಾಕಿದ. ಏನೂ ಹೇಳದೇ, ಆ ಪಾತ್ರೆಗಳನ್ನು ಇಪ್ಪತ್ತು ನಿಮಿಷ ಕುದಿಯಲು ಬಿಟ್ಟ. ಮಗಳು ಕುಳಿತು ತಂದೆ ಮಾಡುತ್ತಿದ್ದ ಎಲ್ಲವನ್ನೂ ನೋಡುತ್ತಾ ಕಾಯುತ್ತಿದ್ದಳು. ಅಪ್ಪ ಏನು ಮಾಡುತ್ತಿದ್ದಾರೆ? ಎಂದು ಅರ್ಥವಾಗದೆ ಕಿರಿಕಿರಿಗೊಂಡು ಸಿಟ್ಟಾಗುತ್ತಿದ್ದಳು.
ಇದನ್ನೂ ಓದಿ: Roopa Gururaj Column: ಮನುಷ್ಯನ ಅತಿಯಾಸೆಗೆ ಬಲಿಯಾಗುವ ಜೀವಿಗಳು
ಇಪ್ಪತ್ತು ನಿಮಿಷಗಳ ನಂತರ ಆ ತಂದೆ ಒಲೆಯನ್ನು ಆರಿಸಿದ. ಮೊದಲ ಪಾತ್ರೆಯಿಂದ ಆಲೂಗಡ್ಡೆಯನ್ನು ತೆಗೆದು ಒಂದು ಪಾತ್ರೆಗೆ ಹಾಕಿದ. ಎರಡನೇ ಪಾತ್ರೆಯಿಂದ ಮೊಟ್ಟೆ ಗಳನ್ನು ತೆಗೆದು ಬೇರೆ ಪಾತ್ರೆಗೆ ಹಾಕಿದ. ಮೂರನೇ ಪಾತ್ರೆಯಿಂದ ಕಾಫಿ ಕಷಾಯವನ್ನು ಒಂದು ಕಪ್‌ಗೆ ಸುರಿದ. ನಂತರ, ನಿಧಾನವಾಗಿ ಮುಗುಳ್ನಗುತ್ತಾ ಆ ತಂದೆ ಕೇಳಿದ: “ಮಗಳೇ, ಏನು ಕಾಣುತ್ತಿದೆ ನಿನಗೆ ಹೇಳು ನೋಡೋಣ?" ಅವಳು ನಿರುತ್ಸಾಹದಿಂದ ಉತ್ತರಿಸಿದಳು: “ಆಲೂಗಡ್ಡೆ, ಮೊಟ್ಟೆ ಮತ್ತು ಕಾಫಿ". “ಸ್ವಲ್ಪ ಗಮನಿಸಿ ನೋಡು" ಎಂದ ತಂದೆ.
ಆಕೆ ಆಲೂಗಡ್ಡೆಯನ್ನು ಮುಟ್ಟಿದಳು, ಅದು ಮೃದುವಾಗಿದೆ ಎಂದು ಅವಳಿಗೆ ಅರಿವಾ ಯಿತು. ನಂತರ ಅವನು ಒಂದು ಮೊಟ್ಟೆ ಒಡೆದು ನೋಡಲು ಹೇಳಿದ. ಅವಳು ಸಿಪ್ಪೆ ತೆಗೆದಾಗ ಮೊಟ್ಟೆ ಗಟ್ಟಿಯಾಗಿತ್ತು. ಕೊನೆಯಲ್ಲಿ, ಕಾಫಿ ಕಷಾಯವನ್ನು ಒಂದು ಲೋಟಕ್ಕೆ ಹಾಕಿ ಸವಿದಳು. ಅದರ ಘಮ ಅವಳ ಮುಖದಲ್ಲಿ ಅಹ್ಲಾದ ತಂದಿತು. “ಇದರ ಅರ್ಥ ಏನು?" ಎಂದು ಮಗಳು ಕೇಳಿದಳು.
ತಂದೆ ಮೃದುವಾಗಿ ನಮ್ಮ ವಿಳಾಸ ಹೇಳಿದ: “ಮಗು, ಆಲೂಗಡ್ಡೆ, ಮೊಟ್ಟೆ ಮತ್ತು ಕಾಫಿ- ಇವೆಲ್ಲವೂ ಒಂದೇ ರೀತಿಯ ಕಷ್ಟವನ್ನು ಎದುರಿಸಿದವು. ಅದುವೇ ಕುದಿಯುತ್ತಿರುವ ನೀರು. ಆದರೆ ಪ್ರತಿಯೊಂದೂ ಅದಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸಿದವು. ಆಲೂಗಡ್ಡೆ ಬಲವಾಗಿತ್ತು, ಕಠಿಣವಾಗಿತ್ತು. ಆದರೆ ಕುದಿಯುವ ನೀರಿನಲ್ಲಿ ಅದು ಮೃದುವಾಗಿ, ದುರ್ಬಲವಾಯಿತು.
ಮೊಟ್ಟೆ ನಾಜೂಕಾಗಿತ್ತು. ಹೊರಗಿನ ಸಿಪ್ಪೆ ಬಲಹೀನವಾಗಿತ್ತು, ಒಳಗೆ ನೀರಿನಂತೆ ಮೃದು ವಾಗಿತ್ತು. ಆದರೆ ಬಿಸಿನೀರು ಅದರ ಒಳಗಿದ್ದುದ್ದನ್ನೇ ಗಟ್ಟಿಗೊಳಿಸಿತು. ಆದರೆ ಕಾಫಿ ಬೀಜ ಗಳು ವಿಭಿನ್ನ. ಅವು ನೀರಿನ ಬದಲಾಗಿ ನೀರನ್ನೇ ಬದಲಾಯಿಸಿದವು. ಅದೇ ನೀರು ಕಾಫಿಯಾದರೂ, ಹೊಸ, ಸುಗಂಧಭರಿತ ಪಾನೀಯವಾಯಿತು".
ಆಮೇಲೆ ತಂದೆ ನಿಧಾನವಾಗಿ ಕೇಳಿದ- “ಈಗ ಹೇಳು, ಕಷ್ಟಗಳು ಬಂದಾಗ ನೀನೇನಾಗು ತ್ತೀಯ? ಆಲೂಗಡ್ಡೆಯಂತೆ ಮೆತ್ತಗಾಗಿ ಕಾಲೇಜು ಬಿಡುತ್ತೀಯ? ಮೊಟ್ಟೆಯಂತೆ ಒಳಗಿಂದಲೇ ಗಟ್ಟಿಯಾಗಿ ಎದುರಿಸುತ್ತಿಯಾ? ಅಥವಾ ಇನ್ನೂ ಉತ್ತಮ ಕಾಫಿ ಬೀಜವಾಗಿ ನಿನ್ನ ಕಾಲೇಜಿನ ಪರಿಸರವನ್ನೂ ಅಲ್ಲಿನ ಜನರನ್ನು ನಿಧಾನವಾಗಿ ನಿನ್ನ ರೀತಿಯಲ್ಲಿ ಬದಲಾಯಿಸಿ, ನಿನ್ನದಾಗಿಸಿಕೊಳ್ಳುತ್ತೀಯ?".
ತಂದೆಯ ಮಾತು ಕೇಳಿದಾಗ ಮಗಳಿಗೆ ಪರಿಸ್ಥಿತಿಯ ಸಂಪೂರ್ಣ ಅರಿವಾಯಿತು. ಮುಖ ದಲ್ಲಿ ಗೆಲುವು ತಂದುಕೊಂಡು, “ನಾಳೆಯಿಂದ ನೀನೇ ನೋಡು" ಎಂದಳು ನಗುತ್ತಾ.
ಜೀವನ ದಲ್ಲಿ ಹಲವಾರು ಘಟನೆಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ಬೇಕೋ ಬೇಡವೋ ಅದರ ಪ್ರಭಾವ ನಮ್ಮ ಮೇಲೆ ಆಗುತ್ತಲೂ ಇರುತ್ತದೆ. ಆದರೆ ನಿಜವಾಗಿ ಮುಖ್ಯವಾದದ್ದು ನಮ್ಮೊಳಗೆ ಆಗ ಏನಾಗುತ್ತದೆ ಎಂಬುದು. ಕಷ್ಟ ಬಂದಾಗ ನಾವು ಕಂಗೆಡುತ್ತಿವಾ? ಗಟ್ಟಿಯಾಗುತ್ತಿವಾ? ಎಂಬುದು. ಕೆಲವೊಮ್ಮೆ ಅದಕ್ಕಿಂತ ಭಿನ್ನವಾಗಿ ಆ ಪರಿಸ್ಥಿತಿಯನ್ನು ನಿಧಾನವಾಗಿ ಬದಲಾಯಿಸಿ ನಮ್ಮ ಅನುಕೂಲಕ್ಕೆ ಒಗ್ಗಿಸಿಕೊಳ್ಳುತ್ತಿವಾ? ಎಂಬುದು. ಆಯ್ಕೆ ನಮ್ಮದು. ಬದುಕು ಬದಲಾಗುವು ದಿಲ್ಲ. ಬದಲಾಗಬೇಕಿರುವುದು ನಾವು ಬದುಕನ್ನು ನೋಡುವ ರೀತಿ...