ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಏನಿದು ಮಾಂಟ್ರಿಯಲ್‌ ಒಪ್ಪಂದ ?

ಮಾಂಟ್ರಿಯಲ್ ಒಪ್ಪಂದದ ಅಡಿಯಲ್ಲಿ ಪರಿಹಾರದ ಮೊತ್ತವನ್ನು ಅಳೆಯಲು ಯಾವುದೇ ನಿರ್ದಿಷ್ಟ ದೇಶದ ರುಪಾಯಿ ಅಥವಾ ಡಾಲರ್ ಬದಲಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಕೃತಕ ಕರೆನ್ಸಿ ಮಾನದಂಡವಾದ ‘ಸ್ಪೆಷಲ್ ಡ್ರಾಯಿಂಗ್ ರೈಟ್ಸ್’ ಅನ್ನು ಅನ್ವಯಿಸ ಲಾಗುತ್ತದೆ. ವಿಶ್ವಾದ್ಯಂತ ಹಣದುಬ್ಬರದ ಏರಿಳಿತಗಳನ್ನು ಸಮತೋಲನದಲ್ಲಿಡಲು ಐಸಿಎಒ ಈ ಮಿತಿಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸುತ್ತದೆ. ‌

ಸಂಪಾದಕರ ಸದ್ಯಶೋಧನೆ

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ರಂಗದಲ್ಲಿ ಪ್ರಯಾಣಿಕರ ಹಕ್ಕುಗಳು, ಸುರಕ್ಷತೆ ಮತ್ತು ನಷ್ಟ ಪರಿಹಾರದ ವ್ಯವಸ್ಥೆಯನ್ನು ಆಧುನೀಕರಿಸಲು ರೂಪಿಸಲಾದ ಅತ್ಯುನ್ನತ ಜಾಗತಿಕ ಒಪ್ಪಂದವೇ ಮಾಂಟ್ರಿಯಲ್ ಕನ್ವೆನ್ಷನ್ 1999. 1929ರ ಹಳೆಯ ವಾರ್ಸಾ ಒಪ್ಪಂದವು ವಿಮಾನ ಯಾನ ಸಂಸ್ಥೆಗಳಿಗೆ ಅತಿಯಾದ ರಕ್ಷಣೆ ನೀಡಿ, ಪ್ರಯಾಣಿಕರಿಗೆ ಕನಿಷ್ಠ ಪರಿಹಾರದ ಮಿತಿಗಳನ್ನು ವಿಧಿಸಿತ್ತು.

ಬದಲಾದ ತಂತ್ರಜ್ಞಾನ ಮತ್ತು ಬೆಳೆದ ವಾಯುಯಾನ ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ, ವಿಶ್ವಸಂಸ್ಥೆಯ ನಾಗರಿಕ ವಿಮಾನಯಾನ ಸಂಸ್ಥೆಯಾದ ಐಸಿಎಒ ನೇತೃತ್ವದಲ್ಲಿ ಕೆನಡದ ಮಾಂಟ್ರಿಯಲ್ ನಗರ ದಲ್ಲಿ ಈ ಹೊಸ ಒಡಂಬಡಿಕೆಯನ್ನು ಸಿದ್ಧಪಡಿಸಲಾಯಿತು. ಇದು ಅಂತಾರಾಷ್ಟ್ರೀಯ ಪ್ರಯಾ ಣಿಕರಿಗೆ ಏಕರೂಪದ ರಕ್ಷಣೆ ಹಾಗೂ ನ್ಯಾಯಯುತ ಹೊಣೆಗಾರಿಕಾ ಚೌಕಟ್ಟನ್ನು ಖಾತರಿಪಡಿಸಿದೆ.

ಮಾಂಟ್ರಿಯಲ್ ಒಪ್ಪಂದದ ಅಡಿಯಲ್ಲಿ ಪರಿಹಾರದ ಮೊತ್ತವನ್ನು ಅಳೆಯಲು ಯಾವುದೇ ನಿರ್ದಿಷ್ಟ ದೇಶದ ರುಪಾಯಿ ಅಥವಾ ಡಾಲರ್ ಬದಲಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಕೃತಕ ಕರೆನ್ಸಿ ಮಾನದಂಡವಾದ ‘ಸ್ಪೆಷಲ್ ಡ್ರಾಯಿಂಗ್ ರೈಟ್ಸ್’ ಅನ್ನು ಅನ್ವಯಿಸ ಲಾಗುತ್ತದೆ. ವಿಶ್ವಾದ್ಯಂತ ಹಣದುಬ್ಬರದ ಏರಿಳಿತಗಳನ್ನು ಸಮತೋಲನದಲ್ಲಿಡಲು ಐಸಿಎಒ ಈ ಮಿತಿಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸುತ್ತದೆ. ‌

ಇದನ್ನೂ ಓದಿ: V‌ishweshwar Bhat Column: ವಿಮಾನಯಾನ ರಾಜಧಾನಿ ಮಾಂಟ್ರಿಯಲ್

ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ, ಪ್ರತಿಯೊಂದು ವಿಭಾಗಕ್ಕೂ ಸ್ಪಷ್ಟ ಮಿತಿಗಳನ್ನು ನಿಗದಿಪಡಿಸಲಾಗಿದೆ. ಯಾವುದೇ ಅಂತಾರಾಷ್ಟ್ರೀಯ ವಿಮಾನಯಾನದಲ್ಲಿ ಪ್ರಯಾಣಿಕರಿಗೆ ದೈಹಿಕ ಗಾಯ, ಸಾವು, ಲಗೇಜು ನಾಶ ಅಥವಾ ಅತಿಯಾದ ವಿಳಂಬದಿಂದ ಆರ್ಥಿಕ ಹಾನಿ ಸಂಭವಿಸಿದಾಗ ಈ ಮಾನದಂಡದ ಆಧಾರದ ಮೇಲೆಯೇ ಪರಿಹಾರವನ್ನು ಲೆಕ್ಕ ಹಾಕಲಾಗುತ್ತದೆ. ‌

ಪ್ರಯಾಣಿಕರ ಸಾವು ಅಥವಾ ದೈಹಿಕ ಗಾಯಕ್ಕೆ ಸಂಬಂಧಿಸಿದಂತೆ ಮಾಂಟ್ರಿಯಲ್ ಒಪ್ಪಂದವು ಕ್ರಾಂತಿಕಾರಿ ‘ದ್ವಿಹಂತದ ಹೊಣೆಗಾರಿಕೆ’ ತತ್ವವನ್ನು ಜಾರಿಗೆ ತಂದಿದೆ. ಮೊದಲ ಹಂತದಲ್ಲಿ, ಸುಮಾರು 1.4 ಕೋಟಿಯಿಂದ 1.5 ಕೋಟಿವರೆಗಿನ ನಷ್ಟಕ್ಕೆ ವಿಮಾನ ಸಂಸ್ಥೆಯು ಕಡ್ಡಾಯ ಹೊಣೆಗಾರಿಕೆಯನ್ನು ಹೊರಲೇಬೇಕು. ಈ ಹಂತದಲ್ಲಿ ವಿಮಾನ ಸಂಸ್ಥೆಯ ಯಾವುದೇ ತಪ್ಪು ಅಥವಾ ನಿರ್ಲಕ್ಷ್ಯವನ್ನು ಸಾಬೀತುಪಡಿಸುವ ಅಗತ್ಯ ಪ್ರಯಾಣಿಕರಿಗೆ ಅಥವಾ ಅವರ ಕುಟುಂಬಕ್ಕೆ ಇರುವುದಿಲ್ಲ. ಅಪಘಾತವು ವಿಮಾನಯಾನದ ಕಾರ್ಯಾಚರಣೆಯ ವೇಳೆಯಲ್ಲಿ ಅಥವಾ ಬೋರ್ಡಿಂಗ್ ಮತ್ತು ಇಳಿಯುವ ಪ್ರಕ್ರಿಯೆಯಲ್ಲಿ ನಡೆದಿದೆ ಎಂದು ದೃಢಪಟ್ಟರೆ ಸಾಕು, ವಿಮಾನ ಸಂಸ್ಥೆಯು ಈ ಮೊತ್ತವನ್ನು ನೀಡಲು ಕಾನೂನುಬದ್ಧವಾಗಿ ಬದ್ಧವಾಗಿರುತ್ತದೆ.

ಎರಡನೇ ಹಂತದಲ್ಲಿ, ಪ್ರಯಾಣಿಕರ ಸಾವು ಅಥವಾ ಗಾಯದ ನಷ್ಟವು 128,821 ಎಸ್‌ಡಿಆರ್ ಮಿತಿಯನ್ನು ಮೀರಿದರೆ, ಪರಿಹಾರ ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಆದರೆ ಇಲ್ಲಿ ಮಹತ್ವದ ಬದಲಾವಣೆಯೆಂದರೆ ‘ರುಜುವಾತಿನ ಹೊಣೆಗಾರಿಕೆ’ ವಿಮಾನಯಾನ ಸಂಸ್ಥೆಯ ಮೇಲಿರುತ್ತದೆ. ದುರಂತವು ತನ್ನ ಅಥವಾ ತನ್ನ ಸಿಬ್ಬಂದಿಯ ಯಾವುದೇ ನಿರ್ಲಕ್ಷ ದಿಂದ ಸಂಭವಿಸಿಲ್ಲ ಎಂದು ವಿಮಾನಯಾನ ಸಂಸ್ಥೆಯೇ ಸಾಬೀತುಪಡಿಸಬೇಕು ಅಥವಾ ಅಪಘಾತವು ಸಂಪೂರ್ಣವಾಗಿ ಮೂರನೇ ವ್ಯಕ್ತಿಯ ಅನಿರೀಕ್ಷಿತ ದುಷ್ಕೃತ್ಯದಿಂದಾಗಿದೆ ಎಂದು ಸಾಬೀತುಪಡಿಸದ ಹೊರತು, ಪ್ರಯಾಣಿಕರಿಗೆ ಉಂಟಾದ ಒಟ್ಟಾರೆ ನಷ್ಟಕ್ಕೆ ಅನುಗುಣವಾಗಿ ಕೋಟ್ಯಂತರ ರುಪಾಯಿ ಗಳ ಸಂಪೂರ್ಣ ಪರಿಹಾರವನ್ನು ಪಾವತಿಸಬೇಕಾಗುತ್ತದೆ.

ದೈಹಿಕ ಹಾನಿಯ ಜತೆಗೆ, ಅಪಘಾತದ ಸಂತ್ರಸ್ತರಿಗೆ ಅಥವಾ ಮೃತರ ಕುಟುಂಬಕ್ಕೆ ತಕ್ಷಣದ ಆರ್ಥಿಕ ಅಗತ್ಯಗಳಿಗಾಗಿ ಮುಂಗಡ ಪರಿಹಾರ ಪಾವತಿ ಮಾಡುವುದನ್ನು ಮಾಂಟ್ರಿಯಲ್ ಒಪ್ಪಂದವು ಕಡ್ಡಾಯ ಗೊಳಿಸಿದೆ. ವಿಮಾನ ದುರಂತ ಸಂಭವಿಸಿದಾಗ ತುರ್ತು ವೈದ್ಯಕೀಯ ವೆಚ್ಚಗಳು, ಅಂತ್ಯಕ್ರಿಯೆ ಅಥವಾ ಕುಟುಂಬದ ದೈನಂದಿನ ನಿರ್ವಹಣೆಗೆ ಹಣದ ಕೊರತೆಯಾಗಬಾರದು ಎಂಬ ಮಾನವೀಯ ಉದ್ದೇಶ ಇದರ ಹಿಂದಿದೆ. ಈ ಮುಂಗಡ ಪಾವತಿಯು ವಿಮಾನ ಸಂಸ್ಥೆಯು ತನ್ನ ತಪ್ಪನ್ನು ಒಪ್ಪಿಕೊಂಡಂತೆ ಆಗುವುದಿಲ್ಲ. ಆದರೆ ಅಂತಿಮ ಪರಿಹಾರದ ಮೊತ್ತ ನಿರ್ಧಾರವಾಗು ವಾಗ ಇದನ್ನು ಹೊಂದಾಣಿಕೆ ಮಾಡಲಾಗುತ್ತದೆ.

ಇದು ಸಂಕಷ್ಟದ ಸಮಯದಲ್ಲಿ ನೊಂದ ಕುಟುಂಬಗಳಿಗೆ ತಕ್ಷಣದ ಕಾನೂನುಬದ್ಧ ರಕ್ಷಣೆಯನ್ನು ನೀಡುತ್ತದೆ. ವಿಮಾನ ಪ್ರಯಾಣಿಕರು ಎದುರಿಸುವ ಅತ್ಯಂತ ಸಾಮಾನ್ಯ ಸಮಸ್ಯೆಯಾದ ಲಗೇಜು (Baggage) ಕಳೆದುಹೋಗುವುದು, ಹಾನಿಯಾಗುವುದು ಅಥವಾ ವಿಳಂಬವಾಗುವುದಕ್ಕೂ ಈ ಒಪ್ಪಂದದಲ್ಲಿ ಸ್ಪಷ್ಟ ರಕ್ಷಣೆ ಇದೆ.

ವಿಶ್ವೇಶ್ವರ ಭಟ್‌

View all posts by this author