ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇರಳದಲ್ಲಿ ಕಮ್ಯುನಿಸ್ಟ್‌ ಸೋಲು ಯಾಕೆ?

1957ರಲ್ಲಿ ಈಎಂಎಸ್ ನಂಬೂದಿರಿಪಾಡ್ ನೇತೃತ್ವದಲ್ಲಿ ಕೇರಳದಲ್ಲಿ ವಿಶ್ವದ ಮೊದಲ ಪ್ರಜಾ ಪ್ರಭುತ್ವದ ಮೂಲಕ ಆಯ್ಕೆಯಾದ ಕಮ್ಯುನಿಸ್ಟ್‌ ಸರ್ಕಾರ ಅಧಿಕಾರಕ್ಕೆ ಬಂದದ್ದು ಇತಿಹಾಸದ ಮಹತ್ವದ ಘಟನೆ. ಭೂ ಸುಧಾರಣೆ, ಶಿಕ್ಷಣ ವಿಸ್ತರಣೆ ಮತ್ತು ಸಾಮಾಜಿಕ ಸಮಾನತೆ ಎಂಬ ಉದ್ದೇಶ‌ ಗಳೊಂದಿಗೆ ಕಮ್ಯುನಿಸ್ಟ್ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿತು. ‌

ಪ್ರಸ್ತುತ

ರಾ.ರಾಮಾರಾಧ್ಯ, ಮೈಸೂರು

ಭಾರತದಲ್ಲಿ ಕಮ್ಯುನಿಸ್ಟ್ ಚಳವಳಿಯ ಬಗ್ಗೆ ಮಾತನಾಡುವಾಗ ಕೇರಳ ರಾಜ್ಯವನ್ನು ವಿಶೇಷವಾಗಿ ಉ‌ಲ್ಲೇಖಿಸಲೇಬೇಕು. ದೇಶದಲ್ಲಿ ಕಮ್ಯುನಿಸ್ಟ್ ತತ್ವಗಳಿಗೆ ದೀರ್ಘಕಾಲದ ರಾಜಕೀಯ ನೆಲೆ ಸಿಕ್ಕಿರುವ ರಾಜ್ಯಗಳಲ್ಲಿ ಕೇರಳ ಪ್ರಮುಖವಾಗಿದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಅಭಿವೃದ್ಧಿ ಮತ್ತು ರಾಜಕೀಯ ಜಾಗೃತಿಯಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರಗಳು ತಮ್ಮದೇ ಆದ ಮಾದರಿಯನ್ನು ನಿರ್ಮಿಸಿವೆ. ‌

ಅದೇ ಸಮಯದಲ್ಲಿ ಹಲವು ವಿವಾದಗಳು, ರಾಜಕೀಯ ಹಿಂಸಾಚಾರ ಮತ್ತು ತತ್ವಾಧಾರಿತ ಸಂಘರ್ಷಗಳಿಂದ ಕೇರಳದ ಎಡಪಂಥೀಯ ರಾಜಕೀಯ ಟೀಕೆಯನ್ನೂ ಎದುರಿಸಿದೆ.

1957ರಲ್ಲಿ ಈಎಂಎಸ್ ನಂಬೂದಿರಿಪಾಡ್ ನೇತೃತ್ವದಲ್ಲಿ ಕೇರಳದಲ್ಲಿ ವಿಶ್ವದ ಮೊದಲ ಪ್ರಜಾ ಪ್ರಭುತ್ವದ ಮೂಲಕ ಆಯ್ಕೆಯಾದ ಕಮ್ಯುನಿಸ್ಟ್‌ ಸರ್ಕಾರ ಅಧಿಕಾರಕ್ಕೆ ಬಂದದ್ದು ಇತಿಹಾಸದ ಮಹತ್ವದ ಘಟನೆ. ಭೂ ಸುಧಾರಣೆ, ಶಿಕ್ಷಣ ವಿಸ್ತರಣೆ ಮತ್ತು ಸಾಮಾಜಿಕ ಸಮಾನತೆ ಎಂಬ ಉದ್ದೇಶ ಗಳೊಂದಿಗೆ ಕಮ್ಯುನಿಸ್ಟ್ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿತು. ‌

ಇದನ್ನೂ ಓದಿ: Dr Raveesh N S Column: ಬದಲಾಗಬೇಕಾಗಿರುವುದು ನೀಟ್‌ ಅಲ್ಲ, ನಿಯತ್ತು

ಕೇರಳದಲ್ಲಿ ಭೂ ಸುಧಾರಣೆ ಕಾಯ್ದೆಗಳು ರೈತರ ಜೀವನದಲ್ಲಿ ದೊಡ್ಡ ಬದಲಾವಣೆ ತಂದವು. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಿದ ಪರಿಣಾಮ ಕೇರಳ ಇಂದು ದೇಶದ ಅತಿ ಹೆಚ್ಚು ಸಾಕ್ಷರ ರಾಜ್ಯವಾಗಿ ಗುರುತಿಸಿಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿಯೂ ಕೇರಳದ ಸಾಧನೆ ಗಮನಾರ್ಹ.

ಆದರೆ ಕೇರಳದ ಕಮ್ಯುನಿಸ್ಟ್ ಆಡಳಿತ ಟೀಕೆಗಳಿಂದ ಮುಕ್ತವಾಗಿಲ್ಲ. ಹಲವು ವರ್ಷಗಳಿಂದ ರಾಜ್ಯ ದಲ್ಲಿ ರಾಜಕೀಯ ಹಿಂಸಾಚಾರದ ಆರೋಪಗಳು ಕೇಳಿ‌ ಬರುತ್ತಿವೆ. ವಿಶೇಷವಾಗಿ ಉತ್ತರ ಕೇರಳದ ಕೆಲವು ಭಾಗಗಳಲ್ಲಿ ಎಡಪಂಥೀಯ ಕಾರ್ಯಕರ್ತರು ಮತ್ತು ವಿರೋಧಿ ಸಂಘಟನೆಗಳ ನಡುವೆ ಘರ್ಷಣೆಗಳು ನಡೆದಿರುವುದು ಸುದ್ದಿಯಾಗುತ್ತಲೇ ಬಂದಿದೆ.

ರಾಜಕೀಯ ಭಿನ್ನಾಭಿಪ್ರಾಯಗಳು ಕೆಲವೊಮ್ಮೆ ಹಿಂಸಾತ್ಮಕ ಸ್ವರೂಪ ಪಡೆದಿರುವುದು ರಾಜ್ಯದ ರಾಜಕೀಯ ವಾತಾವರಣದ ಮೇಲೆ ಪರಿಣಾಮ ಬೀರಿದೆ. ಇದೇ ರೀತಿ ಧಾರ್ಮಿಕ ಸಮುದಾಯಗಳ ಜೊತೆಗಿನ ರಾಜಕೀಯ ಸಮೀಕರಣ, ಚಿನ್ನದ ಕಳ್ಳಸಾಗಣೆ ಪ್ರಕರಣಗಳು, ಆಡಳಿತದ ಭ್ರಷ್ಟಾಚಾರ ಆರೋಪಗಳು ಮತ್ತು ಯುವಕರ ನಿರುದ್ಯೋಗ ಸಮಸ್ಯೆ ಕೂಡ ಕಮ್ಯುನಿಸ್ಟ್ ಸರ್ಕಾರಕ್ಕೆ ಸವಾಲಾ ಗಿದೆ. ‌

ಕೇರಳದ ಅನೇಕ ಯುವಕರು ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುತ್ತಿರುವುದು ರಾಜ್ಯದ ಆರ್ಥಿಕ ಸ್ಥಿತಿಯ ಮತ್ತೊಂದು ಮುಖವಾಗಿದೆ. ಆದರೂ ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಕೇರಳ ದೇಶಕ್ಕೆ ಮಾದರಿಯಾಗಿಯೇ ಉಳಿದಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ರಾಜಕೀಯದ ಬದಲಾವಣೆಗಳು ಕೇರಳದಲ್ಲಿಯೂ ಪ್ರಭಾವ ಬೀರುತ್ತಿವೆ.

ರಾಷ್ಟ್ರವಾದ, ಧಾರ್ಮಿಕ ರಾಜಕೀಯ ಮತ್ತು ಹೊಸ ತಲೆಮಾರಿನ ಆಶಯಗಳ ನಡುವೆ ಕಮ್ಯುನಿಸ್ಟ್‌ ಪಕ್ಷಗಳು ಪ್ರಭಾವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಯುವಜನರನ್ನು ಸೆಳೆಯುವುದು ಮತ್ತು ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು ಎಡಪಕ್ಷಗಳಿಗೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿರುತ್ತದೆ.

ಭಾರತದಲ್ಲಿ ಕಮ್ಯುನಿಸ್ಟ್ ರಾಜಕೀಯ ಸಂಪೂರ್ಣವಾಗಿ ಕುಸಿದಿಲ್ಲ ಎಂಬುದಕ್ಕೆ ಕೇರಳವೇ ಪ್ರಮುಖ ಉದಾಹರಣೆ. ಆದರೆ ಬದಲಾಗುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗೆ ಹೊಂದಿ‌ ಕೊಳ್ಳುವ ಸಾಮರ್ಥ್ಯವೇ ಕೇರಳದ ಕಮ್ಯುನಿಸ್ಟ್ ರಾಜಕೀಯದ ಭವಿಷ್ಯವನ್ನು ನಿರ್ಧರಿಸಲಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಎ‌ಲ್‌ʼಡಿಎಫ್ ಸರ್ಕಾರ ಸೋತು ಯುಡಿಎಫ್ ಆಡಳಿತ ಜಾರಿಗೆ ಬಂದಿತು ಹೀಗಾಯಿತೆಂದು ಕಮ್ಯುನಿ ಮಂದಿ ಸುಮ್ಮನೆ ಕೂರು ವವರಲ್ಲ. ಅಂಡರ್‌ಗ್ರೌಂಡ್ ಕಮ್ಯುನಿ ಚಟುವಟಿಕೆಗಳು ತಣ್ಣಗೆ ನಡೆಯುತ್ತಲೇ ಇರುತ್ತವೆ. ಎದುರಾಳಿ ಸರ್ಕಾರ ಸ್ವಲ್ಪ ಯಾಮಾರಿದರೂ ಫಲಿತಾಂಶ ತಿರುಗು ಮುರುಗಾಗುತ್ತದೆ.