ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Keshava Prasad B Column: ಲಕ್ಷಾಂತರ ಯುವಜನರು ಸರಕಾರಿ ನೌಕರಿಗೆ ಯತ್ನಿಸುವುದೇಕೆ ?

ಒಂದು ವೇಳೆ ಮೂರು ಡಿಪಾರ್ಟ್ಮೆಂಟಲ್ ಪರೀಕ್ಷೆಗಳನ್ನು 10 ವರ್ಷದೊಳಗೆ ಪೂರ್ಣ ಗೊಳಿಸಿದರೆ ಗ್ರೂಪ್-ಬಿ ಆಫೀಸರ್ ಕೂಡ ಆಗುವ ಸಾಧ್ಯತೆ ಇರುತ್ತದೆ" ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದರು. ಇದು ಕೇವಲ ಕರ್ನಾಟಕದ ಕಥೆಯಲ್ಲ. ಹಲವಾರು ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ.

ಮನಿ ಮೈಂಡೆಡ್

ದುಡಿಯಬಹುದಾಗಿದ್ದ ಅಮೂಲ್ಯ ವರ್ಷಗಳನ್ನು ಯುವಜನರು ಪರೀಕ್ಷೆಗಳ ತಯಾರಿಗೆ ವ್ಯಯಿಸುತ್ತಾರೆ. ಆಗ ಅವರ ಖರ್ಚುಗಳನ್ನು ಒಂದೋ ಪೋಷಕರು ವಹಿಸಬೇಕು, ಇಲ್ಲವೇ ಅವರವರೇ ಪಾರ್ಟ್ ಟೈಮ್ ಉದ್ಯೋಗ ಮಾಡುತ್ತಾ ನಿರ್ವಹಿಸಬೇಕು. ಇಷ್ಟಾಗಿಯೂ ಸರಕಾರಿ ಕೆಲಸ ಮರೀಚಿಕೆಯಾದರೆ, ಆಗ ಊರಿಗೆ ಮರಳುವುದು ಅವರಿಗೆ ಕಷ್ಟವಾಗ ಬಹುದು.

ಭಾರತದಲ್ಲಿ ಪ್ರತಿ ವರ್ಷ ಸರಕಾರಿ ಹುದ್ದೆಗಳಿಗೆ ನಾನಾ ಪರೀಕ್ಷೆಗಳು ನಡೆಯುತ್ತವೆ. ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಶನ್ (ಯುಪಿಎಸ್‌ಸಿ), ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ), ಸ್ಟೇಟ್ ಲೆವೆಲ್ ಪಬ್ಲಿಕ್ ಸರ್ವೀಸ್ ಕಮಿಷನ್ಸ್ (ಪಿಎಸ್‌ಸಿ) ಪರೀಕ್ಷೆಗಳು ಸಾಮಾನ್ಯ. ಆದರೆ ಸರಕಾರಿ ಹುದ್ದೆಗಳಲ್ಲಿ ಇರುವವರೆಷ್ಟು ಮಂದಿ? ಎಷ್ಟು ಜನರಿಗೆ ಸಿಕ್ಕಿಲ್ಲ? ಕಾರ್ಮಿಕ ಇಲಾಖೆಯ ಪ್ರಕಾರ, ಭಾರತದಲ್ಲಿ 2023-24ರ ವೇಳೆಗೆ 64 ಕೋಟಿ 33 ಲಕ್ಷ ಉದ್ಯೋಗಿಗಳಿದ್ದಾರೆ.

ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಿ ಉದ್ಯೋಗಿಗಳ ಸಂಖ್ಯೆ ಅಂದಾಜು 1.4 ಕೋಟಿ. ಆದ್ದರಿಂದ ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ವಲಯ, ವ್ಯಾಪಾರ, ವೃತ್ತಿ, ಕೃಷಿ - ವ್ಯವಸಾಯಗಳ ಪಾತ್ರವನ್ನು ಗಮನಿಸಬಹುದು. ಆದರೂ ಲಕ್ಷಾಂತರ ಯುವಜನರು ಸರಕಾರಿ ನೌಕರಿಗೆ ಶತಾಯಗತಾಯ ಯತ್ನಿಸುವುದೇಕೆ?! ಕರ್ನಾಟಕದಲ್ಲಿ 2014ರ ಫೆಬ್ರವರಿ ಯಲ್ಲಿ ಅಂಚೆ ಇಲಾಖೆಯ 248 ಪೋಸ್ಟ್‌ಮನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಬರೋಬ್ಬರಿ 1 ಲಕ್ಷದ 30 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು! ಅಂದರೆ ಪ್ರತಿ 1 ಹುದ್ದೆಗೆ 525 ಜನರ ಪೈಪೋಟಿ. ಬೆಂಗಳೂರಿನಿಂದ 40000, ಮೈಸೂರು ಮತ್ತು ಧಾರವಾಡದಿಂದ ತಲಾ 12000 ಮಂದಿ ಅರ್ಜಿ ಹಾಕಿದ್ದರು. ಅಂಚೆಯಣ್ಣನ ಕೆಲಸ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಅಂಚೆ ಪತ್ರಗಳ ಬಟವಾಡೆ. ಮಾಸಿಕ 17-20 ಸಾವಿರ ರುಪಾಯಿಗಳ ವೇತನ. 10ನೇ ತರಗತಿ ಶಿಕ್ಷಣ ಸಾಕು.

ಇದನ್ನೂ ಓದಿ: Keshava Prasad B Column: 'ಎಐ' ಅಳಿಸಿ ಹಾಕಲಿರುವ ಐಟಿ ಜಾಬ್ಸ್‌ ಯಾವುದು ?

ಪೋಮನ್‌ಗೆ ಎರಡು ವರ್ಷಕ್ಕೊಮ್ಮೆ ಹೊಸ ಸೈಕಲ್, ಪ್ರತಿ ವರ್ಷ ಹೊಸ ಸಮವಸ್ತ್ರ ಮತ್ತು ಪಾದರಕ್ಷೆ, ಹಬ್ಬಗಳ ಆಚರಣೆ ಅಥವಾ ಮೋಟಾರು ವಾಹನ ಖರೀದಿಗೆ ಬಡ್ಡಿ ರಹಿತ ಸಾಲ ನೀಡುವ ಆಫರ್ ಇತ್ತು. ಹಾಗಾದರೆ ಪೋಮನ್ ಹುದ್ದೆಗೆ ಯಾಕೆ ಈ ಪರಿಯಲ್ಲಿ ಬೇಡಿಕೆ? “ಒತ್ತಡವಿಲ್ಲದ ಕೆಲಸ, ಹೆಚ್ಚಿನ ವಿದ್ಯಾಭ್ಯಾಸವೂ ಬೇಡ.

ಒಂದು ವೇಳೆ ಮೂರು ಡಿಪಾರ್ಟ್ಮೆಂಟಲ್ ಪರೀಕ್ಷೆಗಳನ್ನು 10 ವರ್ಷದೊಳಗೆ ಪೂರ್ಣ ಗೊಳಿಸಿದರೆ ಗ್ರೂಪ್-ಬಿ ಆಫೀಸರ್ ಕೂಡ ಆಗುವ ಸಾಧ್ಯತೆ ಇರುತ್ತದೆ" ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದರು. ಇದು ಕೇವಲ ಕರ್ನಾಟಕದ ಕಥೆಯಲ್ಲ. ಹಲವಾರು ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ.

ಹರಿಯಾಣ ಕೌಶಲ್ ರೋಜ್‌ಗಾರ್ ನಿಗಮದಲ್ಲಿ 2024 ರಲ್ಲಿ ಕಸ ಗುಡಿಸುವುದು, ನೆಲ ಒರೆಸುವುದು, ತ್ಯಾಜ್ಯ ನಿರ್ವಹಣೆ ಮಾಡುವವರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸ ಲಾಯಿತು. ಅವುಗಳಿಗೆ ಬರೋಬ್ಬರಿ 3 ಲಕ್ಷ 95 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಕೆಲಸಗಳಿಗೆ ಹೆಚ್ಚಿನ ವಿದ್ಯಾರ್ಹತೆಯೇನೂ ಬೇಡ. ಆದರೆ 46000 ಮಂದಿ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಿದ್ದರು.

1 ಲಕ್ಷದ 17 ಸಾವಿರ ಮಂದಿ 12ನೇ ತರಗತಿಯವರೆಗೆ ಓದಿದ್ದರು. ತಿಂಗಳಿಗೆ ಸುಮಾರು 15000 ರುಪಾಯಿ ಸಂಬಳದ ಆಫರ್ ಇತ್ತು. ಜತೆಗೆ ಇದೂ ಗುತ್ತಿಗೆ ಆಧರಿತ ಕೆಲಸ. ಕಾಯಂ ಸರಕಾರಿ ಹುದ್ದೆಯೂ ಆಗಿರಲಿಲ್ಲ. ಏಕೆ ಹೀಗೆ ಮಾಡಿದ್ರಿ? ಎಂಬ ಪ್ರಶ್ನೆಗೆ ಅರ್ಜಿದಾರರು ನಾನಾ ಉತ್ತರಗಳನ್ನು ಹೇಳಿದ್ದರು.

R

ತೀವ್ರವಾದ ನಿರುದ್ಯೋಗ, ಇತರ ಅವಕಾಶಗಳ ಕೊರತೆ, ಸರಕಾರಿ ಹುದ್ದೆಯ ಆಸೆಗಳನ್ನು ಮುಂದಿಟ್ಟಿದ್ದರು. ರಾಜಸ್ಥಾನದಲ್ಲಿ 53,749 ಜವಾನರ ಹುದ್ದೆಗೆ 24 ಲಕ್ಷದ 6 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. 10ನೇ ತರಗತಿ ಸಾಕಿದ್ದರೂ, ಪಿಎಚ್‌ಡಿ, ಎಂಬಿಎ, ಕಾನೂನು ಪದವೀ ಧರರು ಇದ್ದರು!

ಭಾರಿ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾದ್ದರಿಂದ ವೆಬ್‌ಸೈಟ್ ಕ್ರಾ ಶ್ ಆಗಿತ್ತು. ರೈಲ್ವೆ ಇಲಾಖೆಯಲ್ಲೂ ಅಷ್ಟೇ. ಕೆಲವು ಸಾವಿರ ಹುದ್ದೆಗಳಿಗೆ ಕೋಟ್ಯಂತರ ಅರ್ಜಿಗಳು ಸಲ್ಲಿಕೆ ಯಾಗುತ್ತವೆ. 2025-2026ರಲ್ಲಿ ಆರ್ʼಆರ್‌ಬಿ ಎನ್‌ಟಿಪಿಸಿ ನೇಮಕಾತಿಯಲ್ಲಿ 8868 ಹುದ್ದೆ ಗಳಿಗೆ 1 ಕೋಟಿ 20 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು.

ಆರ್‌ಆರ್‌ಬಿ ಗ್ರೂಪ್-ಡಿ ಹುದ್ದೆಗಳಿಗೆ 1 ಕೋಟಿ 21 ಲಕ್ಷದ 68 ಸಾವಿರ ಮಂದಿ ಅಪ್ಲಿಕೇಶನ್ ಹಾಕಿದ್ದರು. 2018ರಲ್ಲಿ 1 ಲಕ್ಷ ರೈಲ್ವೆ ಉದ್ಯೋಗಗಳಿಗೆ 2.5 ಕೋಟಿ ಮಂದಿ ಅರ್ಜಿ ಹಾಕಿದ್ದರು. ಈ ಪಟ್ಟಿಗೆ ಮತ್ತಷ್ಟು ಸೇರಿಸಬಹುದು, ಇರಲಿ.

ಉದ್ಯೋಗದಲ್ಲಿ ಸ್ಥಿರತೆ ಮತ್ತು ಭದ್ರತೆಯ ದೃಷ್ಟಿಯಿಂದ ಸರಕಾರಿ ಕೆಲಸಕ್ಕೆ ಸರಿಸಾಟಿ ಬೇರಾವುದೂ ಇಲ್ಲ. ನಿರ್ದಿಷ್ಟ ಅವಧಿಯ ಕೆಲಸ, ಪ್ರತಿಷ್ಠೆ, ವರ್ಕ್-ಲೈಫ್‌ ಬ್ಯಾಲೆನ್ಸ್ ಇರುತ್ತದೆ ಎಂಬುದೂ ಸರಕಾರಿ ಹುದ್ದೆ ಪಡೆಯಲು ಮುಖ್ಯ ಕಾರಣವಾಗಿದೆ. ಖಾಸಗಿ ವಲಯದಲ್ಲಿ ನಿಸ್ಸಂದೇಹವಾಗಿ ಇಂಥ ಜಾಬ್ ಸೆಕ್ಯುರಿಟಿ ಇರುವುದಿಲ್ಲ.

ಪೋಷಕರೂ ಸರಕಾರಿ ಹುದ್ದೆzಯಲ್ಲಿರುವ ಅಳಿಯ ಬೇಕೆನ್ನುತ್ತಾರೆ. ವೈವಾಹಿಕ ವಿಚಾರ ದಲ್ಲಿ ಸರಕಾರಿ ಉದ್ಯೋಗಿಗೆ ಅಡ್ವಾಂಟೇಜ್ ಜಾಸ್ತಿ. ಹಳೆಯ ಪಿಂಚಣಿ ಯೋಜನೆ ಇದ್ದಾಗ ಸರಕಾರಿ ನೌಕರಿ ಇನ್ನಷ್ಟು ಆಕರ್ಷಕವಾಗಿತ್ತು. ನಿವೃತ್ತರಾದ ಮೇಲೆ ಕೂಡ ಸಮೃದ್ಧ ಮತ್ತು ಖಾತರಿಯ ಪಿಂಚಣಿ ಸಿಗುತ್ತಿತ್ತು. ಈಗ ಬಹುತೇಕ ಕಡೆ ಹಳೆಯ ಪಿಂಚಣಿ ಸ್ಕೀಮ್ ಇಲ್ಲದಿದ್ದರೂ, ಸರಕಾರಿ ಹುದ್ದೆಯ ಆಕರ್ಷಣೆ ಕಡಿಮೆಯಾಗಿಲ್ಲ.

ಹಣದುಬ್ಬರ ಏರಿದಾಗಲೆಲ್ಲ ಟಿಎಫ್‌ʼಡಿಎ ಕೂಡ ಹೆಚ್ಚುತ್ತಿರುತ್ತದೆ. ಬ್ಯಾಂಕ್‌ಗಳೂ ಸಾಲ ವಿತರಣೆಯ ವೇಳೆ, ಸರಕಾರಿ ಉದ್ಯೋಗಿಗಳಿಗೆ ಮೊದಲ ಮಣೆ ಹಾಕುತ್ತವೆ. ಎನ್‌ಪಿಎಸ್ ಯೋಜನೆಯ ಪಿಂಚಣಿ ಇದ್ದೇ ಇರುತ್ತದೆ. ಜತೆಗೆ ಇತರ ಬೆನಿಫಿಟ್‌ಗಳ ಗೊಂಚಲೇ ಸಿಗುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಸಕ್ಸಸ್ ರೇಟ್ 1 ಪರ್ಸೆಂಟಿಗಿಂತಲೂ ಕಡಿಮೆ ಇದ್ದರೂ, ಲಕ್ಷಾಂತರ ಮಂದಿ ಸರಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ವರ್ಷಗಟ್ಟಲೆ ತಯಾರಿ ಮಾಡುತ್ತಾರೆ.

ಇದು ಹಣಕಾಸು ವೆಚ್ಚ, ಶ್ರಮ, ಸವಾಲುಗಳ ಸರಮಾಲೆಯನ್ನೇ ತಂದಿಡುತ್ತದೆ. ಇನ್ನು ಯಾವೆಲ್ಲ ಇಲಾಖೆಗಳಲ್ಲಿ ಲಂಚಾವತಾರ ಇರುತ್ತದೆ ಎಂಬುದನ್ನು ವಿವರಿಸಬೇಕಿಲ್ಲ. ಇಂದು ಕಟುವಾಸ್ತವ ಇದೆ. ಮೊದಲನೆಯದಾಗಿ ರಾಜಕಾರಣಿಗಳೇನೋ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಗಳನ್ನು ನೀಡಬಹುದು. ಆದರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ, ಸರಕಾರಿ ಉದ್ಯೋಗಗಳಿಗೆ ಮಿತಿ ಇದ್ದೇ ಇರುತ್ತದೆ.

ಇದು ಅತೀವ ವೆಚ್ಚದಾಯಕವಾದ್ದರಿಂದ ಆರ್ಥಿಕ ಇಲಾಖೆಯ ಅನುಮೋದನೆ ಸುಲಭ ವಾಗಿ ಸಿಗುವುದಿಲ್ಲ. ಯುಪಿಎಸ್‌ಸಿ ಮತ್ತು ಎಸ್‌ಎಸ್‌ಸಿ ವ್ಯವಸ್ಥೆಯಲ್ಲಿ ಸಕ್ಸೆಸ್ ರೇಟ್ 1 ಪರ್ಸೆಂಟ್‌ಗಿಂತಲೂ ಕಡಿಮೆ. ಅನೇಕ ಮಂದಿ 3.7 ವರ್ಷಗಳ ಕಾಲ ಮರಳಿ ಯತ್ನವನ್ನು ಮಾಡುತ್ತಿರುತ್ತಾರೆ. ಇದರಿಂದ ಅನುಭವಿ ಅರ್ಜಿದಾರರ ಬ್ಯಾಕ್‌ಲಾಗ್ ಸೃಷ್ಟಿಯಾಗುತ್ತದೆ. ಆಗ ಹೊಸಬರಿಗೆ ಮತ್ತಷ್ಟು ಕಷ್ಟವಾಗುತ್ತದೆ. ಎರಡನೆಯದಾಗಿ ಯುವಜನರು ದುಡಿಯ ಬಹುದಾಗಿದ್ದ ಅಮೂಲ್ಯ 7-8 ವರ್ಷಗಳನ್ನು ಪರೀಕ್ಷೆಗಳಿಗೆ ತಯಾರಿಗೆ ವ್ಯಯಿಸುತ್ತಾರೆ. ಆಗ ಅವರ ಖರ್ಚುಗಳನ್ನು ಒಂದೋ ಪೋಷಕರು ವಹಿಸಬೇಕು, ಇಲ್ಲವೇ ಅವರವರೇ ಪಾರ್ಟ್ ಟೈಮ್ ಜಾಬ್‌ಗಳನ್ನು ಮಾಡುತ್ತಾ ನಿರ್ವಹಿಸಬೇಕು.

ಇಷ್ಟೆಲ್ಲ ಕಸರತ್ತುಗಳ ನಡುವೆಯೂ ದುರದೃಷ್ಟವಶಾತ್ ಸರಕಾರಿ ಕೆಲಸ ಮರೀಚಿಕೆ ಯಾದರೆ, ಆಗ ಊರಿಗೆ ಮರಳುವುದು, ನೆಂಟರಿಗೆ ಮುಖ ತೋರಿಸುವುದೂ ಕಷ್ಟವಾಗು ವಷ್ಟು ಕೀಳರಿಮೆ, ಖಿನ್ನತೆ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಸಮಾಜ ಎಲ್ಲಿ ತನ್ನನ್ನು ಒಬ್ಬ ವಿಫಲ ವ್ಯಕ್ತಿ ಎಂಬಂತೆ ಅವಮಾನಿಸುತ್ತದೆಯೋ ಎಂಬ ಸಾಮಾಜಿಕ ಒತ್ತಡವೂ ಎದುರಾಗಬಹುದು.

ನೇಮಕಾತಿ ಪ್ರಕ್ರಿಯೆಗಳೂ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳಬಹುದು. ಪ್ರಿಲಿಮ್ಸ್-ಮೇ ಪರೀಕ್ಷೆಗಳು, ಸಂದರ್ಶನ, ದಾಖಲೆಗಳ ಪರಿಶೀಲನೆಗಳ ಬಳಿಕ ಫಲಿತಾಂಶ ಸಿಗುತ್ತದೆ. ಕೆಲವೊಮ್ಮೆ ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿಯಲ್ಲಿ ಭ್ರಷ್ಟಾಚಾರ ಕೂಡ ನಡೆಯ ಬಹುದು. ಸರಕಾರಗಳೂ ಕಾಯಂ ಉದ್ಯೋಗಗಳನ್ನು ಕಡಿಮೆ ಮಾಡುತ್ತಾ, ಗುತ್ತಿಗೆ ಆಧಾರಿತ ನೇಮಕವನ್ನು ಹೆಚ್ಚಿಸಿವೆ. ಉದ್ಯೋಗಗಳ ಕೊರತೆಯಿಂದಾಗಿ ಉನ್ನತ ಶಿಕ್ಷಣ ಪಡೆದವರೂ ಕ್ಲರಿಕಲ್ ಜಾಬ್ ಮಾಡಬೇಕಾಗಿ ಬರಬಹುದು.

ಈ ಎಲ್ಲ ಕಾರಣಗಳಿಂದಾಗಿ ಸರಕಾರಿ ನೌಕರಿ ಎಂದರೆ ಸ್ವರ್ಗಸದೃಶ ಎಂಬ ವೈಭವೀಕರಣ ವನ್ನು ಪೋಷಕರು ಮತ್ತು ಸಮಾಜ ಕೈಬಿಡುವುದು ಸೂಕ್ತ. ಒಂದು ವೇಳೆ ಸರಕಾರಗಳು ಭಾರಿ ಸಂಖ್ಯೆಯಲ್ಲಿ ಹುದ್ದೆಗಳನ್ನು ಸೃಷ್ಟಿಸಿ, ನೇಮಕ ಮಾಡಿದರೆ ಏನಾಗುತ್ತದೆ? ವೆನಿಜು ವೆಲಾದಲ್ಲಿ ಹಿಂದೊಮ್ಮೆ ಅಲ್ಲಿನ ಅಧ್ಯಕ್ಷ ಹ್ಯೂಗೊ ಚಾವೆಸ್ ಭಾರಿ ಸಂಖ್ಯೆಯಲ್ಲಿ ಸರಕಾರಿ ಹುದ್ದೆಗಳನ್ನು ಸೃಷ್ಟಿಸಿದ್ದರು. ಈಗ ಅಮೆರಿಕದ ಜೈಲುಪಾಲಾಗಿರುವ ನಿಕೋಲಸ್ ಮಡುರೊ ಕೂಡ ಅದನ್ನು ಮುಂದುವರಿಸಿದ್ದರು.

ಇದರಿಂದ ವೆನಿಜುವೆಲಾದ ಆರ್ಥಿಕತೆ ದಿವಾಳಿಯಾಗಿತ್ತು. ಹಾಗಾದರೆ ಸರಕಾರಿ ಉದ್ಯೋಗ ಗಳು ಯಥಾರ್ಥವಾಗಿ ಯಾವಾಗ ಹೆಚ್ಚುತ್ತವೆ? ಈಗಿನ ಮುಕ್ತ ಮಾರುಕಟ್ಟೆ ಆಧರಿತ ಆರ್ಥಿಕತೆಯ ಸಂದರ್ಭದಲ್ಲಿ, ದೇಶದ ಇಕಾನಮಿ ಅಭಿವೃದ್ಧಿಯಾದಾಗ ಸರಕಾರಿ ಹುದ್ದೆ ಗಳೂ ಹೆಚ್ಚುತ್ತವೆ. ಆದರೆ ಇದಕ್ಕೆ ಸಾರ್ವಜನಿಕ ವೆಚ್ಚದ ಜತೆಗೆ ಖಾಸಗಿ ಬಂಡವಾಳ ಹೂಡಿಕೆಯೂ ಹೆಚ್ಚಬೇಕು.

ಸರಕಾರವು ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿಗೆ ಅಗತ್ಯವಿರುವ ನೀತಿಗಳನ್ನು ಜಾರಿ ಗೊಳಿಸಬೇಕು. ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಆದ್ದರಿಂದಲೇ ಇನ್ಫೋಸಿಸ್ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ, ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಮೊದಲಾದ ಗಣ್ಯರು, “ಪ್ರತಿಯೊಬ್ಬರಿಗೂ ಉದ್ಯೋಗ ಸೃಷ್ಟಿಸು ವುದು ಸರಕಾರದ ಕೆಲಸವಲ್ಲ, ಉದ್ಯಮಿಗಳು ಉದ್ಯೋಗಗಳನ್ನು ಸೃಷ್ಟಿಸುವಂತೆ ವ್ಯವಸ್ಥೆ ಯನ್ನು, ಅನುಕೂಲಗಳನ್ನು ಕಲ್ಪಿಸಿಕೊಡುವುದು ಸರಕಾರದ ಕೆಲಸ" ಎನ್ನುತ್ತಾರೆ.

ಆದ್ದರಿಂದ ಸೆಲೆಕ್ಟಿವ್ ಆಗಿ ಸರಕಾರದ ನೇಮಕಾತಿಗಳನ್ನು ಪ್ರಶ್ನಿಸುವುದು ನ್ಯಾಯ ಸಮ್ಮತ ವಾದರೂ, ವಿಶಾಲಾರ್ಥದಲ್ಲಿ ಇದಕ್ಕೊಂದು ಭಿನ್ನ ಆಯಾಮ ಇರುವುದನ್ನು ಮನನ ಮಾಡಿಕೊಳ್ಳಬೇಕು. ಹಾಗಾದರೆ ಸರಕಾರಗಳ ಪಾತ್ರವೇನು? ನೀತಿಗಳಲ್ಲಿ ಸುಧಾರಣೆಯ ಮೂಲಕ ಖಾಸಗಿ ವಲಯದ ಉದ್ದಿಮೆ, ಸ್ಟಾರ್ಟಪ್, ರಫ್ತು, ವಿದೇಶಿ ನೇರಹೂಡಿಕೆಗೆ ಉತ್ತೇಜಿಸುವುದು, ಮೂಲಸೌಕರ್ಯ ಕಲ್ಪಿಸುವುದು.

ಉದ್ಯೋಗ ಸೃಷ್ಟಿಯಲ್ಲಿ ಸರಕಾರಿ-ಖಾಸಗಿ ವಲಯದ ಬ್ಯಾಲೆ ಮುಂತಾದವು ಅಗತ್ಯ. ನೀವು ಎಂಪ್ಲಾಯೀಸ್ ಪ್ರಾವಿಡೆಂಡ್ ಫಂಡ್ ಆರ್ಗನೈಸೇಷನ್‌ನ ಮಾಸಿಕ ಪೇರೋಲ್ ಅಂಕಿ-ಅಂಶಗಳನ್ನು ಗಮನಿಸಿದರೆ, ಖಾಸಗಿ ವಲಯದ ಔಪಚಾರಿಕ ಉದ್ಯೋಗಗಳು ಹೆಚ್ಚುತ್ತಿರುವು ದನ್ನು ಗಮನಿಸಬಹುದು.

ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್, ಹರಿಯಾಣ, ದಿಲ್ಲಿ, ಉತ್ತರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ‘ಇಪಿಎಫ್ಒ’ದ ಪೇರೋಲ್ ಡೇಟಾ ಹೆಚ್ಚಳಕ್ಕೆ ಗಣನೀಯ ಕೊಡುಗೆ ಸಲ್ಲಿಸಿವೆ. ‌

20 ಅಥವಾ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿರುವ ಖಾಸಗಿ ಸಂಸ್ಥೆಗಳು ಇಪಿಎಫ್ಒ‌ ದಲ್ಲಿ ನೋಂದಣಿಯಾಗಬೇಕು. ಹೀಗಾಗಿ ಖಾಸಗಿ ಉದ್ಯೋಗಾವಕಾಶಗಳು ಹೆಚ್ಚುತ್ತಿರುವು ದನ್ನು ಇಪಿಎಫ್ಒ ಡೇಟಾಗಳು ಬಿಂಬಿಸಿವೆ. ‌

ಸ್ವಾತಂತ್ರ್ಯಪೂರ್ವದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕೃಷಿ ಪ್ರಮುಖವಾಗಿತ್ತು. ಸ್ವಾತಂತ್ರ್ಯಾ ನಂತರ ಉತ್ಪಾದನಾ ಕ್ಷೇತ್ರ ಚೇತರಿಸಿಕೊಂಡಿತು. 1991ರ ಆರ್ಥಿಕ ಸುಧಾರಣೆ ಬಳಿಕ ಐಟಿ-ಹಣಕಾಸು ಮತ್ತು ಹೆಲ್ತ್‌ಕೇರ್ ವಲಯಗಳಲ್ಲೂ ಕೆಲಸಗಳು ಹೆಚ್ಚಿದವು. 21ನೇ ಶತಮಾನ ದಲ್ಲಿ ಟೆಕ್ ಕ್ರಾಂತಿಯಿಂದ ಭಾರತವು ‘ಗ್ಲೋಬಲ್ ಐಟಿ ಹಬ್’ ಆಗಿದೆ. ಈಗ ಡಿಜಿಟಲೀಕರಣ ದಿಂದ ನ್ಯೂ-ಏಜ್ ಸ್ಕಿಲ್‌ಗಳು ಉದ್ಯೋಗ ಸೃಷ್ಟಿಸುತ್ತಿವೆ!

ಕೇಶವ ಪ್ರಸಾದ್​ ಬಿ

View all posts by this author