ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ವಿದ್ಯಾವಂತರೇಕೆ ಕೇಡಿನ ಹಾದಿ ತುಳಿದಿದ್ದಾರೆ ?

ಬಹಳ ಹಿಂದೆಯೇ ಗಮನಿಸಿದ ಸಂಗತಿ ಇದು. ಭಯೋತ್ಪಾದಕ ಸಂಘಟನೆ ಐಸಿಸ್ ಚುರುಕಾಗಿದ್ದ ಕಾಲದಲ್ಲಿ ಬಹಳಷ್ಟು ಯುವಕ/ತಿಯರು ಅದನ್ನು ಸೇರಿಕೊಂಡಿದ್ದರು. ಈಗಲೂ ಆ ರೂಢಿ ಮುಂದುವರಿದಿದೆ ಎಂಬುದರಲ್ಲಿ ಸಂಶಯವಿಲ್ಲ. ಮತ್ತು ಅವರೆಲ್ಲ ವೈದ್ಯರೋ ಇಂಜಿನಿಯರ್‌ ಗಳೋ ಐಟಿ ಉದ್ಯೋಗಿಗಳೋ ಆಗಿದ್ದರು. ಅಂದರೆ ವಿದ್ಯಾ ವಂತರು.

ಕಾಡುದಾರಿ

ದಿಲ್ಲಿಯಲ್ಲಿ ನಡೆದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಸದ್ಯದ ಮಟ್ಟಿಗೆ ಒಂಬತ್ತು. ಗಾಯಗೊಂಡವರ ಸಂಖ್ಯೆ ನೂರ ನಲುವತ್ತೈದು ಕೋಟಿ. ಇದರ ಹಿಂದಿರುವುದು ಇಸ್ಲಾ ಮಿಕ್ ಮೂಲಭೂತವಾದಿಗಳು ಎಂಬುದರಲ್ಲಿ ಈಗ ಸಂಶಯಕ್ಕೆ ಎಡೆಯಿಲ್ಲ. ಗಮನಿಸ ಬೇಕಾದ ಸಂಗತಿಯೆಂದರೆ ರೂವಾರಿಗಳೆಲ್ಲರೂ ಜೀವ ಉಳಿಸಬೇಕಾದ ವೈದ್ಯ ಸೇವೆಯಲ್ಲಿರು ವವರು.

ಕಾರನ್ನು ಸ್ಫೋಟಿಸಿದ ಡಾ.ಉಮರ್ ಉನ್ ನಬಿ ಕಾಶ್ಮೀರದ ಅನಂತನಾಗ್‌ನ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸುವಾಗ ಒಬ್ಬ ರೋಗಿಯ ಸಾವಿಗೆ ಕಾರಣ ನಾದ. ತನಿಖೆಗೆ ಹಿರಿಯ ವೈದ್ಯಾಧಿಕಾರಿಗಳ ಸಮಿತಿ ರಚಿಸಲಾಯಿತು. ತನಿಖೆಗೆ ಎಷ್ಟು ಸಲ ಕರೆದರೂ ಬರಲಿಲ್ಲ. ವಜಾ ಮಾಡಲಾಯಿತು. ಅಲ್ಲಿಂದ ಫರೀದಾ ಬಾದ್‌ನ ಅಲ್‌-ಫಲಾಹ್ ಮೆಡಿಕಲ್ ಸ್ಕೂಲ್‌ಗೆ ಬಂದ. ಇವನ ಜೊತೆ ಸೇರಿಕೊಂಡ ಇನ್ನಿಬ್ಬರು ವೈದ್ಯರು ಡಾ.ಮುಜಮ್ಮಿಲ್ ಶಕೀಲ್ ಮತ್ತು ಡಾ.ಆದಿಲ್ ರತೇರ್. ಮೂವರೂ ಮನೆಯಲ್ಲಿ 2900 ಕಿಲೋ ಸ್ಫೋಟಕ ಇಟ್ಟುಕೊಂಡಿದ್ದರು. ಇವರಿಗೆ ಬೆಂಬಲವಾಗಿ ನಿಂತು ಕೊಂಡು ಸಂಘಟನೆಗೆ ಇನ್ನಷ್ಟು ಹುಡುಗಿಯರನ್ನು ಸೆಳೆಯುತ್ತಿದ್ದವಳು ಡಾ.ಶಾಹೀನ್ ಸಯೀದ್.

ಬಹಳ ಹಿಂದೆಯೇ ಗಮನಿಸಿದ ಸಂಗತಿ ಇದು. ಭಯೋತ್ಪಾದಕ ಸಂಘಟನೆ ಐಸಿಸ್ ಚುರುಕಾಗಿದ್ದ ಕಾಲದಲ್ಲಿ ಬಹಳಷ್ಟು ಯುವಕ/ತಿಯರು ಅದನ್ನು ಸೇರಿಕೊಂಡಿದ್ದರು. ಈಗಲೂ ಆ ರೂಢಿ ಮುಂದುವರಿದಿದೆ ಎಂಬುದರಲ್ಲಿ ಸಂಶಯವಿಲ್ಲ. ಮತ್ತು ಅವರೆಲ್ಲ ವೈದ್ಯರೋ ಇಂಜಿನಿಯರ್‌ಗಳೋ ಐಟಿ ಉದ್ಯೋಗಿಗಳೋ ಆಗಿದ್ದರು. ಅಂದರೆ ವಿದ್ಯಾ ವಂತರು.

ಇದನ್ನೂ ಓದಿ: Harish Kera Column: ಆಡು ಕನ್ನಡ ಸಾಲದು, ಬರಹ ಕನ್ನಡವೂ ಬೆಳೆಯಲಿ

ಇದಕ್ಕಾಗಿ ದುಬಾರಿ ಶಿಕ್ಷಣ ಕೊಡಿಸಿದ ಅವರ ಮನೆಯವರು ಇವರಷ್ಟು ಓದಿಕೊಂಡಿಲ್ಲದಿರ ಬಹುದು. ಆದರೆ ಮಕ್ಕಳು ಓದಿ ಉದ್ಧಾರವಾಗಲಿ, ಸಮಾಜಕ್ಕೂ ಕೊಡುಗೆಯಾಗಲಿ ಎಂಬ ಉದ್ದೇಶವಿಟ್ಟುಕೊಂಡಿರಬಹುದು. ಆದರೆ ಇವರ ವಕ್ರ ಬೆಳವಣಿಗೆ ಅವರ ಗಮನಕ್ಕೆ ಬಂದಿರ ಲಿಕ್ಕಿಲ್ಲ. ಹಿರಿಯರ ತಲೆಯನ್ನು ಪ್ರವೇಶಿಸದ ಮೂಲಭೂತವಾದ, ಉಗ್ರವಾದದ ವಿಷ ಕಿರಿಯರನ್ನು ಬಹು ಬೇಗ ಆಕ್ರಮಿಸಿದೆ.

ಬಹುಶಃ ಹೊಸ ತಲೆಮಾರು ಬಳಸುವ ಆಧುನಿಕ ಮಾಧ್ಯಮಗಳೇ ಈ ವಿಷ ಹೆಚ್ಚಿನ ಪ್ರಮಾಣದಲ್ಲಿ ಹರಡಲೂ ನೆರವಾಗಿದೆ. ಯಾಕಿಷ್ಟು ಪ್ರಮಾಣದಲ್ಲಿ ಈ ವಿದ್ಯಾವಂತ ಅನಿಸಿಕೊಂಡ ಜನ ಭಯೋತ್ಪಾದನೆಯ್ತ ಅಕರ್ಷಿತರಾಗುತ್ತಿದ್ದಾರೆ? ಕೆನಡಿಯನ್ ನೆಟ್‌ ವರ್ಕ್ ಫಾರ್ ರಿಸರ್ಚ್ ಆನ್ ಟೆರರಿಸಂನ ಸಹ ನಿರ್ದೇಶಕ ಲಾರ್ನೆ ಡಾಸನ್ ಎಂಬವರು ಕೆಲವು ಅಂಶಗಳನ್ನು ವಿವರಿಸುತ್ತಾರೆ.

ಅದರಲ್ಲಿ ಖಲೀಫತ್ ಬಣ್ಣಿಸುವ ‘ಶುದ್ಧ’ ‘ಪವಿತ್ರ’ ಜೀವನದ ಭರವಸೆ ಒಂದು. ಶುದ್ಧ ಹಾಗೂ ಸಂಪೂರ್ಣ ಇಸ್ಲಾಂನಿಂದಲೇ ಜಗತ್ತನ್ನು ತುಂಬುವ ಪರಿಕಲ್ಪನೆ ಇಂಥ ಅವಿದ್ಯಾ ವಂತರಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯ ಆಗುವಂತೆ ಬೆಳೆಸಲಾಗುತ್ತಿದೆ.

Screenshot_8 R

ಶಿಕ್ಷಣ ಮತ್ತು ವಿಜ್ಞಾನಗಳು ಈ ತಿರುಚಿದ ಆದರ್ಶದ ವಿರುದ್ಧ ಯಾವುದೇ ಕೆಲಸ ಮಾಡುವು ದಿಲ್ಲ. ‘ವಿಲಾಸೀ, ನೀತಿಗೆಟ್ಟ ಪಾಶ್ಚಿಮಾತ್ಯ ಜೀವನ’ ಇವರನ್ನು ಕ್ರುದ್ಧರನ್ನಾಗಿಸಿದೆ ಅಥವಾ ಹಾಗೆ ಚಿಂತಿಸುವಂತೆ ಅವರನ್ನು ಬೋಧನೆಗಳ ಮೂಲಕ ಬೆಳೆಸಲಾಗುತ್ತಿದೆ. ಒಂದು ಕಡೆ ಡಾಕ್ಟರಿಕೆ-ಇಂಜಿನಿಯರಿಂಗ್ ಕಲಿಯುತ್ತಲೇ ಇವರು ತದ್ವಿರುದ್ಧವಾದ ಮತಾಂಧತೆಯನ್ನೂ ಪೋಷಿಸಿಕೊಂಡು ಬರುವ ಜಾಲಗಳ ಭಾಗವಾಗಿರುತ್ತಾರೆ.

ಮೊದಮೊದಲಿಗೆ ಇವರನ್ನು ಸಮಾಜಸೇವೆ, ಆಧ್ಯಾತ್ಮಿಕತೆ, ಧಾರ್ಮಿಕತೆ ಮುಂತಾದ ಅಷ್ಟೇನೂ ಅಪಾಯಕಾರಿ ಅನಿಸದ ಬೋಧನೆಗಳ ಮೂಲಕ ಸಂಘಟನೆಗೆ ಸೆಳೆಯ ಲಾಗುತ್ತದೆ. ಐಸಿಸ್‌ಗೆ ಆರಂಭದಲ್ಲಿ ಹಲವು ಶಿಕ್ಷಿತರು ಸೇರಿಕೊಂಡಿದ್ದು ಹೀಗೆ. ಕೆಲವು ಗೆಳೆಯರ ಮೂಲಕ ಈ ಸಂಘಟನೆಗಳಿಗೆ ಪ್ರವೇಶ ಸುಲಭ. ಇವೂ ಅನ್‌ಲೈನ್‌ನ ಆಗುತ್ತವೆ. ನಂತರ ಸಾವಿರಾರು ಮೈಲುಗಳ ದೂರದಲ್ಲಿ ಕುಳಿತ ‘ಕ್ರಾಂತಿಕಾರಿ’ಗಳು ಇವರನ್ನು ಇನ್ನಷ್ಟು ಉಗ್ರತೆಯೆಡೆಗೆ ಪ್ರಚೋದಿಸುತ್ತಾರೆ.

ಶಾಂತಿಯುತ ಜಗತ್ತು ಸ್ಥಾಪನೆಗೆ ಹಿಂಸೆ ಅನಿವಾರ್ಯ ಎನ್ನುತ್ತಾರೆ. ಹಿಂದೂ ಧರ್ಮದ ಮೂರ್ತಿಪೂಜೆ, ಕ್ರೈಸ್ತರ ದೇವಪುತ್ರನ ಪರಿಕಲ್ಪನೆಗಳು ನಮ್ಮ ನಿರಾಕಾರ ಏಕದೇವ ಪರಿಕಲ್ಪನೆಯನ್ನು ಹೇಗೆ ಅಶಾಂತಗೊಳಿಸುತ್ತಿದೆ, ಭಗ್ನಗೊಳಿಸುತ್ತಿದೆ ಎಂದು ಬಣ್ಣಿಸುತ್ತಾರೆ. ಇದೆಲ್ಲ ದೊಡ್ಡದೊಂದು ಅಂತಾರಾಷ್ಟ್ರೀಯ ಜಾಲವಾಗಿ ವಿಸ್ತರಿಸುತ್ತದೆ. ಸಹಬಾಳ್ವೆಯಲ್ಲಿ ಬಂದ ಹಳೆಯ ತಲೆಮಾರು ಇದರ ಭಾಗವಾಗುವುದು ಕಡಿಮೆ, ಹೊಸಬರೇ ಹೀಗೆ ತಲೆ ತಿರುಕರಾಗುವುದು ಹೆಚ್ಚು.

ಇಂಥದನ್ನು ಮೊದಲೇ ಗುರುತಿಸುವುದು ಹೇಗೆ? ಇದೇ ಕಷ್ಟ. ಇದು ಇಬ್ಬಾಯಿಯ ಕತ್ತಿ. ಇಂಗ್ಲೆಂಡ್, ಅಮೆರಿಕಗಳಲ್ಲಿ ಇಂಥ ಪ್ರಯತ್ನಗಳು ಆಗಿವೆ, ಇದಕ್ಕಾಗಿ ಕಾನೂನಾತ್ಮಕ ಘಟಕಗಳೂ ಇವೆ. ಆದರೆ ಇದು ಬ್ಯಾಕ್ ಫೈರ್ ಆಗುತ್ತದೆ.

‘ಮುಸ್ಲಿಮರನ್ನು ವಿಲನೈಸ್ ಮಾಡಲಾಗುತ್ತಿದೆ, ಖಳರಂತೆ ಚಿತ್ರಿಸಲಾಗುತ್ತಿದೆ’ ಎಂಬ ಬೊಬ್ಬೆ ಪಕ್ಕನೆ ಏಳುತ್ತದೆ. ಡಾಸನ್ ಹೇಳುವ ಪ್ರಕಾರ, ಒಬ್ಬ ವ್ಯಕ್ತಿಯ ಗಡ್ಡ ಹೆಚ್ಚೆಚ್ಚು ಉದ್ದವಾಗು ವುದು, ಇದ್ದಕ್ಕಿದ್ದಂತೆ ಮತೀಯ ಅಸಹನೆಯ ಮಾತುಗಳನ್ನು ಆಡುವುದು, ದಿರಿಸಿನ ರೀತಿ ಬದಲಾಗುವುದು- ಇವೆಲ್ಲ ಕೆಂಪು ಚಿಹ್ನೆಗಳು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸುವ ವ್ಯಕ್ತಿಯ ಮೇಲೆ ನಿಗಾ ಇಡಬೇಕು ಎಂದು ವೈದ್ಯರು ಹೇಳುತ್ತಾರೆ.

ಹಾಗೆ ಸದಾ ಹೇಳುವ ವ್ಯಕ್ತಿ ಒಂದಲ್ಲ ಒಂದು ಸಲ ಆತ್ಮಹತ್ಯೆಗೆ ಯತ್ನಿಸುವುದು ಖಚಿತ. ಹಾಗೇ ಇದೂ. ಒಂದು ಅಧ್ಯಯನದ ಪ್ರಕಾರ, ಏಕಾಂಗಿಯಾಗಿ ಭಯೋತ್ಪಾದನೆ ಕೃತ್ಯ ಎಸಗಿದ ವ್ಯಕ್ತಿಗಳಲ್ಲಿ 58% ಜನ ತಮ್ಮ ಯೋಜನೆ ಬಗ್ಗೆ ಮೊದಲೇ ಯಾರಿಗಾದರೂ ಸೂಚನೆ ಕೊಟ್ಟಿರುತ್ತಾರೆ. ಇದನ್ನು ಗುರುತಿಸುವುದನ್ನು ಸಮಾಜ ಕಲಿಯಬೇಕು.

ಇಂಥ ಕೃತ್ಯಗಳನ್ನು ಖಂಡಿಸುವ ಲಿಬರಲ್‌ಗಳಲ್ಲಿ ಸಾಮಾನ್ಯವಾಗಿರುವ ಮಾತುಗಳೆಂದರೆ, ಮುಸ್ಲಿಮರ ಮೇಲಿನ ದೌರ್ಜನ್ಯ, ಬಡತನ, ನಿರುದ್ಯೋಗ, ನಿರಕ್ಷರತೆ ಅವರನ್ನು ಉಗ್ರ ಕೃತ್ಯಗಳತ್ತ ನೂಕುತ್ತದೆ. ಈ ಮಾತುಗಳಲ್ಲಿ ಸ್ವಲ್ಪಾಂಶ ನಿಜವೂ ಇರಬಹುದು. ಆದರೆ ಡಾಕ್ಟರ್‌ಗಳೋ, ಇಂಜಿನಿಯರ್‌ಗಳೋ ಇಂಥ ಕೃತ್ಯ ಎಸಗಿದಾಗ ಈ ವಾದಗಳೆಲ್ಲ ಬಿದ್ದು ಹೋಗುತ್ತವೆ.

ಇನ್ನೂ ಅದೇ ಮಾತುಗಳನ್ನು ಆಡುವವರನ್ನು ನಾವು ಸಹಾನುಭೂತಿಯಿಂದ ನೋಡ ಬೇಕಷ್ಟೆ. ನಮಗೀಗ ಇರುವ ಸವಾಲು, ಇವರು ಈ ಕೃತ್ಯ ಎಸಗದಂತೆ ನೋಡಿ ಕೊಳ್ಳುವುದರ ಜೊತೆಗೆ, ನಮ್ಮ ಸುತ್ತಮುತ್ತಲೂ ಇಂಥ ಮನೋಭಾವ ಬೆಳೆಸುತ್ತಿರುವ ಪಂಥ- ಕಲ್ಟ್‌ಗಳು ಇರಬಹುದಾ ಎಂಬುದನ್ನು ಗುರುತಿಸುವುದು.

ಜೊತೆಗೆ, ತಾನು ಇಂಥ ಕಲ್ಟ್ ನೊಳಗೆ ಸೇರಿಕೊಳ್ಳುತ್ತಿದ್ದೇನಾ ಎಂಬುದನ್ನು ಗಮನಿಸುವುದು. ಸಮಾಜ ವಿಜ್ಞಾನಿಗಳು, ಅಪಾಯಕಾರಿ ಕಲ್ಟ್‌ಗಳನ್ನು ಗುರುತಿಸುವ ಹಲವು ಸೂತ್ರಗಳನ್ನು ರೂಪಿಸಿ ನಮಗೆ ಕೊಟ್ಟಿದ್ದಾರೆ. ಕಲ್ಟ್‌ಗಳೆಂದರೆ ಸಮಾಜದಿಂದ ಪ್ರತ್ಯೇಕವಾಗಿರುವ ಕೆಲವು ಸಂಘಟನೆಗಳು. ಇವು ತಮ್ಮದೇ ಆದ ಅವೈಜ್ಞಾನಿಕ, ಅವೈಚಾರಿಕ, ಸಮಾಜದ ಒಟ್ಟು ಬಾಳುವೆಗೆ ಧಕ್ಕೆ ತರಬಲ್ಲ ಚಿಂತನೆಯನ್ನು ಹೊಂದಿರುತ್ತವೆ.

ತಮ್ಮದೇ ಆದ ಶಿಷ್ಯ ಪರಂಪರೆಯನ್ನು ಹೊಂದಿರುತ್ತವೆ. ಈ ಶಿಷ್ಯರು ಇದಕ್ಕಾಗಿ ಜೀವ ಕೊಡುವ ಹಂತಕ್ಕೂ ಹೋಗುತ್ತಾರೆ. ಜೋನ್ಸ್‌ಟೌನ್, ಚಾರ್ಲ್ಸ್ ಮ್ಯಾನ್ಸನ್, ಹೆವನ್ಸ್ ಗೇಟ್ ಮುಂತಾದವೆಲ್ಲ ಇಂಥ ಕಲ್ಟ್‌ಗಳು. ಇಂಟರ್‌ನೆಟ್‌ನಲ್ಲಿ ಇವರ ಭೀಕರ ವಿವರಗಳು ಸಿಕ್ಕುತ್ತವೆ. ಇಂಥ ನಿಗೂಢ ಕಲ್ಟ್ ಗಳು ಭೂಗತವಾಗಿ ಇನ್ನೂ ಸಾಕಷ್ಟಿವೆ ಎಂಬ ಗುಮಾನಿ ಇದೆ. ಸದ್ಯ ಇಂಥ ಕಲ್ಟ್‌ಗಳನ್ನು, ಅದರ ಸದಸ್ಯರನ್ನು ಗುರುತಿಸುವುದು ಹೇಗೆ ಕಲಿಯುವುದು ನಮಗೇ ಒಳ್ಳೆಯದು.

ಯಾವುದೇ ಹೊಣೆಗಾರಿಕೆಯಿಲ್ಲದೆ, ಕೆಲವೇ ಕೆಲವರಲ್ಲಿ ಸೇರಿಕೊಂಡ ಸರ್ವಾಧಿಕಾರ ಇದರ ಮೊದಲ ಗುಣ. ಇವರು ಪ್ರಶ್ನಾತೀತರು. ಇವರು ಹೇಳಿದ ಮಾತು ಆದರ್ಶ, ಆದೇಶ. ಇಲ್ಲಿ ಯಾವುದೇ ಪ್ರಶ್ನೆಗಳಿಗೆ, ಟೀಕೆಗೆ ಅವಕಾಶವಿರುವುದಿಲ್ಲ. ಪಂಥದ ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತದೆ ಹೇಗೆ ವೆಚ್ಚವಾಗುತ್ತದೆ ಎಂಬುದರ ಅಕೌಂಟ್ ಇರುವುದಿಲ್ಲ.

ಹೊರಗಿನ ಸಮಾಜದ ಬಗ್ಗೆ, ಸಮಾಜದಲ್ಲಿರುವ ಕೆಲವರ ಬಗ್ಗೆ ವಿನಾ ಕಾರಣ ಭಯ. ಯಾರೋ ತಮ್ಮ ವಿರುದ್ಧ ಸಂಚು ಹೂಡುತ್ತಾರೆ, ಮುಗಿಸಿಬಿಡುತ್ತಾರೆ ಅಥವಾ ತುಳಿದು ಹಾಕುತ್ತಾರೆ ಎಂಬ ಆತಂಕ. ಅವರು ತಮ್ಮನ್ನು ಮುಟ್ಟುವ ಮೊದಲು ತಾವು ಅವರನ್ನು ಹಣಿಯಬೇಕು ಎಂಬ ರೊಚ್ಚು ಇರುತ್ತದೆ.

ಈ ಸಂಘಟನೆ ಸೇರಿ ಕಾಯಾ ವಾಚಾ ಮನಸಾ ಅದಕ್ಕೆ ಅರ್ಪಿಸಿಕೊಂಡವರು ಅದನ್ನು ಬಿಟ್ಟು ಹೊರಬರುವುದು ಕಡಿಮೆ. ಹಾಗೆ ಹೊರಬಂದವರನ್ನು ವಿಲನೀಕರಿಸಲಾಗುತ್ತದೆ. ಸಂಘಟನೆಯೊಳಗೆ ಸದಸ್ಯರ ಮೇಲಿನ ದೌರ್ಜನ್ಯ ನಿರಂತರ. ಇದು ದೌರ್ಜನ್ಯ ಎಂದೂ ಗುರುತಿಸಲಾಗದಂತೆ ಅದು ನಡೆಯುತ್ತದೆ. ಸಂಘಟನೆಯ ಅಧಿಕಾರಯುತರ ಅಂಥ ಕೃತ್ಯಗಳನ್ನು ಹೊರ ಬರದಂತೆ ಕಾಪಿಡಲಾಗುತ್ತದೆ. ಶಿಷ್ಯರಿಗೆ, ಭಿನೀವಿನ್ನೂ ಸಾಕಷ್ಟು ಸಾಧನೆ ಮಾಡಿಲ್ಲಭಿ ಎಂಬಂತೆ ಬಿಂಬಿಸಲಾಗುತ್ತದೆ.

ಸಾಧನೆಗಾಗಿ, ಆತ್ಮಾರ್ಪಣೆಗಾಗಿ ಅವರನ್ನು ಪ್ರಚೋದಿಸಲಾಗುತ್ತದೆ. ಸಾಮಾನ್ಯವಾಗಿ ಇಂಥ ಗುಂಪುಗಳಿಗೆ ಸೇರಿದವರು ಸಮಾಜದ ಇತರರ ಮುಂದೆ ಒಂಟಿಯಾಗುತ್ತಾರೆ. ಅಂತರ್ಮುಖಿ ಗಳೆಂದು ನಾವು ಭಾವಿಸಬಹುದು. ತಾವು ಒಂದು ಅಪಾಯಕಾರಿ ಕಲ್ಟನ್ನು ಸೇರಿದ್ದೇವೆ, ಮಾನಸಿಕವಾಗಿ ಕಟ್ಟಿಹಾಕಲ್ಪಟ್ಟಿದ್ದೇವೆ ಎಂಬುದು ಕೂಡ ಇದರ ಸದಸ್ಯರ ಅರಿವಿಗೆ ಬಂದಿರುವುದಿಲ್ಲ.

ವಾಸ್ತವವಾಗಿ ಈ ಸದಸ್ಯರಲ್ಲಿಯೇ ಯಾವತ್ತೂ ಬಗೆಹರಿಯದ ಯಾವುದೋ ಅಭದ್ರತೆ, ಕೀಳರಿಮೆಗಳೆಲ್ಲ ಇರುತ್ತವೆ. ಕಾಲಾಂತರದಲ್ಲಿ ಇವರು ಎಲ್ಲದಕ್ಕೂ ಆ ಕಲ್ಟ್‌ನೊಳಗಿನ ಇತರರ ಮೇಲೆ ಅವಲಂಬಿತರಾಗುತ್ತಾರೆ. ಕಲ್ಟ್‌ನಿಂದ ಹೊರಗಿನ ವ್ಯಕ್ತಿಗಳೋ, ಕುಟುಂಬ ದವರೋ, ನಿಮ್ಮನ್ನು ಬ್ರೇನ್‌ವಾಶ್ ಮಾಡಿದ್ದಾರೆ ಎಂದು ಈ ಕಲ್ಟ್ ನಂಬಿಸಿರುತ್ತದೆ.

ನಿಜವಾಗಿ ಬ್ರೇನ್‌ವಾಶ್ ಮಾಡುವವರು ಅವರೇ ಆಗಿರುತ್ತಾರೆ. ಇಂಥ ಕಲ್ಟ್ ಗಳನ್ನು ಬಿಡಬೇಕೆಂದರೂ ಬಿಡುವುದು ಸುಲಭವಲ್ಲ. ಈ ಸಂಘಟನೆಗಳ ಒಳಗೆ ಮುಕ್ತ ಮನಸ್ಸು ಇಟ್ಟುಕೊಂಡ ಇತರರು ಪ್ರವೇಶಿಸುವುದು, ಅದನ್ನು ಅಧ್ಯಯನ ಮಾಡುವುದು ಕಡುಕಷ್ಟ. ಕಲ್ಟ್‌ಗಳಿಗೂ ಇಸ್ಲಾಮಿಕ್ ಮೂಲಭೂತವಾದಕ್ಕೂ ತುಂಬಾ ಸಾಮೀಪ್ಯ ಇದೆ.

ಸಾಕಷ್ಟು ವ್ಯತ್ಯಾಸಗಳೂ ಇವೆ. ಕಲ್ಟ್‌ಗಳಿಗಿಂತ ಈ ಕ್ಯಾಲಿಫೇಟ್ ಎಂಬುದು ಹೆಚ್ಚು ವ್ಯಾಪಕ ಮತ್ತು ಅಪಾಯಕಾರಿ. ಅದು ತನ್ನ ಬೇರುಗಳನ್ನು ಪ್ರಕಾಂಡವಾಗಿ ಎಲ್ಲಿಗೋ ಚಾಚಿದೆ. ಅದರ ಸೌಮ್ಯ, ಅತಿಸೌಮ್ಯ, ಕಠೋರ, ಅತಿ ಕಠೋರ- ಹೀಗೆ ನಾನಾ ಆವೃತ್ತಿಗಳಿವೆ. ಎಲ್ಲವೂ ಸೌಮ್ಯವಾಗಿ ಶುರುವಾಗುತ್ತವೆ. ಇದಕ್ಕೆ ಉದಾಹರಣೆಗಳನ್ನು ನಮ್ಮ ನಡುವಿನಿಂದಲೇ ಹೆಕ್ಕಬಹುದು. ಅದಿರಲಿ.

ಕೆಲವೊಮ್ಮೆ ಕಲ್ಟ್‌ನ ಸರ್ವಾಧಿಕಾರಿಗಳು ಹಿಂಸೆಯ ಮಾತನ್ನು ನೇರವಾಗಿ ಆಡದಿರ ಬಹುದು; ಆದರೆ ಅವರ ಧ್ವನಿ, ಇಂಗಿತಗಳು ಹಿಂಸೆಯನ್ನು ಪ್ರಚೋದಿಸುತ್ತವೆ. ಅಂಥ ಪಂಥಗಳಿಗೆ ಮನಸ್ಸು ತೆತ್ತವರು ಸಂಘಟನೆಯ ಒಳಗಿದ್ದವರ ಗಮನಕ್ಕೂ ಬಾರದೇ ಲೋನ್ ವೂಲ್ ದಾಳಿಗಳನ್ನೂ ನಡೆಸುವುದುಂಟು. ಇವರೇನು ಮಾಡುತ್ತಾರೆಂದು ಮೊದಲೇ ಗುರುತಿಸುವುದು ಕಷ್ಟ. ಕೆಲವೊಮ್ಮೆ ನಾವೂ ಸಹ, ಎಷ್ಟೇ ವೈಚಾರಿಕವಾಗಿ ಚಿಂತಿಸು ತ್ತೇವೆಂದು ಭಾವಿಸಿದರೂ, ನಮಗೇ ಆರಿವಿಲ್ಲದೆ, ಯಾವುದೋ ಕಲ್ಟ್‌ನ ಬೋಧನೆಗಳಿಗೆ ಮಾರು ಹೋಗಿ ಒಳಗೊಳಗೇ ಅದರ ಆರಾಧಕರಾಗಿರುವ ಸಾಧ್ಯತೆಯೂ ಇರುತ್ತದೆ!

ಹರೀಶ್‌ ಕೇರ

View all posts by this author