ಪ್ರಸ್ತುತ
ಶರದ್ ದೇಶಪಾಂಡೆ
ಜಗತ್ತಿನಲ್ಲಿ ಒಳ್ಳೆಯದು ಎಲ್ಲೇ ಇದ್ದರೂ ಸ್ವೀಕರಿಸು ಎಂದು ಉಪನಿಷತ್ತಿನ ವಾಕ್ಯ ಹೇಳು ತ್ತದೆ. ಎಂತಹ ಸುಂದರ ಮಾತದು. ಜಗತ್ತಿನಲ್ಲಿ ಶ್ರೇಷ್ಠವಾಗಿರುವ ಒಳ್ಳೆಯದನ್ನು ಸ್ವೀಕರಿ ಸುವುದರಲ್ಲಿ, ಕಲಿಯುವುದರಲ್ಲಿ ತಪ್ಪೇನು? ಹೀಗಿರುವಾಗ ಹಿಂದಿಯ ಕಲಿಕೆಯ ಬಗ್ಗೆ ಏಕೆ ಇಷ್ಟೊಂದು ವಿರೋಧ? ಭಾಷೆ ಎಂಬುದು ಒಂದು ಪ್ರದೇಶದ ಸಾಂಸ್ಕೃತಿಕ ರಾಯಭಾರಿ, ಭಾಷೆ ಆ ನೆಲದ ಅಸ್ಮಿತೆ, ನೆಲದ ಇತಿಹಾಸ, ಕಲೆ, ಸಾಹಿತ್ಯ ಪ್ರಗತಿ ಅಭಿವೃದ್ಧಿ ಎಲ್ಲದರ ಮೇಲೆಯೂ ಆ ನೆಲದ ಭಾಷೆ ಬೀರುವ ಪ್ರಭಾವ ಅಪಾರ.
ಇದೆಲ್ಲದರ ಜತೆಗೆ ಭಾಷೆಯ ಮುಖ್ಯ ಹಾಗೂ ಪ್ರಾಥಮಿಕ ಕೆಲಸವೆಂದರೆ ವ್ಯವಹಾರ, ಸಂವಹನ, ಸಂಪರ್ಕ. ಸರಾಗವಾಗಿ ಮತ್ತೊಬ್ಬರೊಂದಿಗೆ ವ್ಯವಹರಿಸಲು, ನಮ್ಮ ಕೆಲಸ ಗಳನ್ನು ಮಾಡಿಕೊಳ್ಳಲು ಮತ್ತು ಮಾಡಿಸಿಕೊಳ್ಳಲು ಸಂವಹನ ಸಂಪರ್ಕ ಸಾಧಿಸಲು ಈ ಭಾಷೆ ಎಂಬ ಮಾಧ್ಯಮ ಬೇಕೇ ಬೇಕು.
ನಾಗರಿಕತೆಗಳ ಆರಂಭದಲ್ಲಿ ಇದೇ ಪ್ರಾಥಮಿಕ ಉದ್ದೇಶದಿಂದಲೇ ಭಾಷೆಗಳು ಹುಟ್ಟಿ ಕೊಂಡವು. ಕಾಲ ಮುಂದುವರಿದಂತೆ ತಂತ್ರಜ್ಞಾನ ಬೆಳೆದಂತೆ ಜಗತ್ತು ಸಣ್ಣದಾಗುತ್ತಾ ಹೋಗುತ್ತಿದೆ. ವಸುದೈವ ಕುಟುಂಬಕಂ ಎಂಬ ಮಾತಿನಂತೆ ಇದೀಗ ಜಗತ್ತೇ ಒಂದು ಮನೆ ಯಂತಾಗಿದೆ.
ಇದನ್ನೂ ಓದಿ: Mohan Vishwa Column: ಕಾಂಗ್ರೆಸ್ಸಿನ ಮುಸ್ಲಿಂ ವೋಟ್ ಬ್ಯಾಂಕ್ ಆಟಕ್ಕೆ ತೆರೆ !
ಇಂದಿನ ನಮ್ಮ ವ್ಯವಹಾರಗಳು ನಿತ್ಯ ಜೀವನದ ಸಂಪರ್ಕ ಸಂವಹನಗಳು ಕೇವಲ ನಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೆ ಜಗತ್ತಿನ ಹಲವು ಪ್ರದೇಶಗಳಿಗೆ ವ್ಯಾಪಿಸಿದೆ. ಹೀಗೆ ನಮ್ಮ ಸಂಬಂಧಗಳ, ವ್ಯವಹಾರಗಳ ವ್ಯಾಪ್ತಿ ಬೆಳೆಯುತ್ತಾ ಹೋದಂತೆ ನಮ್ಮ ಪ್ರಾದೇಶಿಕ ಭಾಷೆಗಳ ಜೊತೆಗೆ ಜಗತ್ತಿನ ಜನರ ಜೊತೆ ಸಂವಹಿಸುವ ಒಂದು ಜಾಗತಿಕ ಭಾಷೆಯ ಅವಶ್ಯ ಕತೆ ಅನಿವಾರ್ಯ ಉಂಟಾಗಿ ಅಂತಹ ಒಂದು ಅಂತಾರಾಷ್ಟ್ರೀಯ ಭಾಷೆ ಕಲಿಯುವ ಅನಿವಾರ್ಯ ಒದಗಿ ಬಂದು ಆಂಗ್ಲ ಜಗತ್ತಿನ ಭಾಷೆಯಾಗಿ ಬೆಳೆದು ನಿಂತದ್ದು ಇತಿಹಾಸ.
ಇವತ್ತು ಆಂಗ್ಲ ಪ್ರಥಮ ಭಾಷೆಯಾಗಿ ಕಲಿಯುತ್ತಿರುವ ನಮ್ಮ ದೇಶದ ಬಹುಪಾಲು ಮಕ್ಕಳ ಪಠ್ಯಕ್ರಮ ತೆರೆದು ನೋಡಿದರೆ ಇನ್ನು ಮೂರನೇ, ನಾಲ್ಕನೇ ತರಗತಿಗಳಂತಹ ಚಿಕ್ಕ ಚಿಕ್ಕ ಮಕ್ಕಳ ಪ್ರಥಮ ಭಾಷೆ ಆಂಗ್ಲ ಪಠ್ಯಕ್ರಮ ಸ್ವತ: ಮಕ್ಕಳೇ ಕವಿಯಾಗಿ ಕಾವ್ಯರಚನೆ ಕಥೆ, ಕಾದಂಬರಿಗಳನ್ನು ಸೃಷ್ಟಿ ಮಾಡಬೇಕೆಂದು ಅಪೇಕ್ಷಿಸುವ ಮಟ್ಟಕ್ಕಿದೆ.
ಮತ್ತೆ ಇದು ಮಕ್ಕಳ ಮೇಲೆ ನಮ್ಮದಲ್ಲದ ಭಾಷೆಯ ಹೇರಿಕೆ ಒತ್ತಡ ಎಂದು ಎಂದಿಗೂ ಪೋಷಕರಿಗೆ ಅನಿಸುವುದಿಲ್ಲ, ಪೋಷಕರಿಗೆ, ಸರಕಾರಕ್ಕೆ, ಶಿಕ್ಷಕರಿಗೆ ಅಪ್ಪಿತಪ್ಪಿಯು ಈ ವಿದೇಶಿ ಭಾಷೆ ಹೇರಿಕೆ ಅನಿಸುವುದಿಲ್ಲ, ಏಕೆಂದರೆ ಆಂಗ್ಲ ಭಾಷೆ ಇಂದು ಅನಿವಾರ್ಯ.
ಆದರೆ ಇದೇ ವಿಜ್ಞಾನ, ಗಣಿತ, ರಿಜನಿಂಗ್ ಮೆಂಟಲ್ ಅಬಿಲಿಟಿ, ಅಬಾಕಸ್, ಅದು ಇದು ಎನ್ನುವ ಇಷ್ಟೆ ಕಠಿಣ ಪಠ್ಯಕ್ರಮದ ನಡುವೆ ನಮ್ಮದೇ ದೇಶದ ಭಾಷೆಯಾದ ಹಿಂದಿಯನ್ನು ಮಾತ್ರ ಮಕ್ಕಳ ಮೇಲೆ ಬಹಳ ದೊಡ್ಡದಾದ ಹೇರಿಕೆ ಎಂದು ಸರಕಾರಕ್ಕೆ ಈಗ ಮನವರಿಕೆ ಯಾಗಿದೆ.
ಪಾಸಾದ್ರೂ ಅಷ್ಟೇ, ಫೇಲಾದರೂ ಅಷ್ಟೇ ಎಂದು ಹಿಂದಿ ಅಥವಾ ಯಾವುದೇ ತೃತೀಯ ಭಾಷೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಮಾಡಿ ಸಮುದ್ರದಿಂದ ಒಂದು ಹನಿ ನೀರನ್ನು ಆಚೆ ತೆಗೆದು ಸಮುದ್ರಕ್ಕೆ ನೀರಿನ ಭಾರ ಕಡಿಮೆ ಮಾಡಿದಂತಿದೆ ಈ ಹೊಸ ನೀತಿ. ಇದೇ ಹಿಂದಿಯ ಬದಲಾಗಿ ಸ್ಪಾನಿಷ್, ಜರ್ಮನಿ ಫ್ರೆಂಚ್, ಇಟಾಲಿಯನ್, ಮೊದಲಾದ ಯಾವುದೇ ವಿದೇಶಿ ಭಾಷೆಯನ್ನು ತೃತೀಯ ಭಾಷೆಯಾಗಿ ಅಥವಾ ನಾಲ್ಕನೇ ಭಾಷೆಯಾಗಿ ಸೇರಿಸಿದರೆ ತುಂಬಾ ಒಳ್ಳೆದಾಗಿತ್ತು.
ಮುಂದೆ ನಮ್ಮ ಮಕ್ಕಳು ಕೆಲಸಕ್ಕಾಗಿ ವಿದೇಶಕ್ಕೆ ಹೋದರೆ ಏನು ತೊಂದರೆ ಇಲ್ಲ ಎಂದು ಟ್ಯೂಷನ್ ಕ್ಲಾಸಿಗೆ ಸೇರಿಸಿಯಾದರೂ ಶತ ಪ್ರಯತ್ನ ಮಾಡಿಯಾದರೂ ಭಾಷೆಗಳನ್ನು ಮಕ್ಕಳ ಮೇಲೆ ಹೇರುತ್ತಾರೆ. ನಮ್ಮ ದೇಶದ ಉತ್ತರದ ಬಹುತೇಕ ರಾಜ್ಯಗಳ ಭಾಷೆ ಹಿಂದಿ ಮಾತ್ರ ಕಲಿಯುವ ಅವಶ್ಯಕತೆ.
ನಮಗ್ಯಾಕೆ ಹಿಂದಿ? ಕಲಿತು ನಾವೇನು ಮಾಡಬೇಕು? ನಾವೇನು ಈ ದೇಶದಲ್ಲಿ ಇರುವವರಾ ? ಬೇಕಿದ್ದರೆ ಕನ್ನಡವನ್ನೂ ತೆಗೆದರೂ ಸರಿ ಎನ್ನುವ ಮನಸ್ಥಿತಿಯ ಜನ ಕೂಡ ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ. ಹಾಗೊದ್ದರೂ ಹಿಂದಿಯ ಬಗ್ಗೆ ಮಾತ್ರ ಏಕೆ ಈ ಅಸಡ್ಡೆಯ ಮನಸ್ಥಿತಿ?